Tag: vidhana sabha session

  • ರಾಜ್ಯದಲ್ಲಿ ತುಘಲಕ್ ಆಡಳಿತ ಇಲ್ಲ, ಸಿದ್ದರಾಮಯ್ಯ ಸರ್ಕಾರವೇ ಇರೋದು: ಬಿಜೆಪಿಗೆ ಸಿಎಂ ತಿರುಗೇಟು

    ರಾಜ್ಯದಲ್ಲಿ ತುಘಲಕ್ ಆಡಳಿತ ಇಲ್ಲ, ಸಿದ್ದರಾಮಯ್ಯ ಸರ್ಕಾರವೇ ಇರೋದು: ಬಿಜೆಪಿಗೆ ಸಿಎಂ ತಿರುಗೇಟು

    ಬೆಂಗಳೂರು: ರಾಜ್ಯದಲ್ಲಿ ಮೊಹಮ್ಮದ್ ಬಿನ್ ತುಘಲಕ್ ಆಡಳಿತ ಇಲ್ಲ, ಸಿದ್ದರಾಮಯ್ಯ (Siddaramaiah) ಸರ್ಕಾರವೇ ಇದೆ ಎಂದು ಬಿಜೆಪಿಗೆ (BJP) ಸಿಎಂ ತಿರುಗೇಟು ನೀಡಿದ್ದಾರೆ.

    ವಿಧಾನಸಭೆಯಲ್ಲಿ (Vidhanasabha Session) ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ (Private Sector Quota Bill) ವಿಚಾರದಲ್ಲಿ ಸಿಎಂ ಪೋಸ್ಟ್ ಪದೇ ಪದೇ ಬದಲಾಗಿದೆ. ಮೂರು ಬಾರಿ ನಿಲುವು ಬದಲಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಈ ಬೆಳವಣಿಗೆ ಒಳ್ಳೆಯದಲ್ಲ. ಇದೊಂದು ರೀತಿ ತುಘಲಕ್ ದರ್ಬಾರ್ ಆಗಿದೆ. ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮದ್ಯದ ಅಂಗಡಿಗೆ ಪರವಾನಗಿ ನೀಡಲು ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದಾರೆ – ಕಾಂಗ್ರೆಸ್‌ ಸದಸ್ಯ ಬಾಂಬ್‌!

    ಈ ವೇಳೆ ಉತ್ತರಿಸಿದ ಸಿಎಂ, ಯಾವ ಮೊಹಮ್ಮದ್ ಬಿನ್ ತುಘಲಕ್ ಆಡಳಿತ ಇಲ್ಲ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಿಲ್ ಬಗ್ಗೆ ಕ್ಯಾಬಿನೆಟ್‍ನಲ್ಲಿ ಪೂರ್ಣ ಪ್ರಮಾಣದಲ್ಲಿ ಚರ್ಚೆ ಆಗಿಲ್ಲ. ಆದರೆ ಅದಕ್ಕೂ ಮುನ್ನ ಮಾಧ್ಯಮಗಳಲ್ಲಿ ಬಂದಿದೆ. ಹಾಗಾಗಿ ಮುಂದಿನ ಕ್ಯಾಬಿನೆಟ್‍ನಲ್ಲಿ ಸಮಗ್ರವಾಗಿ ಚರ್ಚೆ ಮಾಡಿ ಬಿಲ್ ತರುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಅಫ್ಜಲ್‌ ಖಾನ್‌ ಕೊಲ್ಲಲು ಛತ್ರಪತಿ ಶಿವಾಜಿ ಬಳಿಸಿದ್ದ ‘ವಾಘ್‌ ನಖ್‌’ ಅಸ್ತ್ರ ಜು.19ಕ್ಕೆ ಲಂಡನ್‌ನಿಂದ ಭಾರತಕ್ಕೆ

  • ವಿಧಾನಸಭೆಯಲ್ಲಿ `ಸುಪಾರಿ’ ಗಲಾಟೆ: ಬಿಜೆಪಿ ಶಾಸಕರ ಮಾತಿಗೆ ಕಾಂಗ್ರೆಸ್ ಕೆಂಡಾಮಂಡಲ!

    ವಿಧಾನಸಭೆಯಲ್ಲಿ `ಸುಪಾರಿ’ ಗಲಾಟೆ: ಬಿಜೆಪಿ ಶಾಸಕರ ಮಾತಿಗೆ ಕಾಂಗ್ರೆಸ್ ಕೆಂಡಾಮಂಡಲ!

    ಬೆಂಗಳೂರು: ವಿಧಾನಸಭೆಯಲ್ಲಿ (Vidhana Sabha Session) ಸುಪಾರಿ ಗಲಾಟೆ ಜೋರಾಗಿಯೇ ನಡೆಯಿತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ (Valmiki Scam) ಬಗ್ಗೆ ಚರ್ಚೆ ವೇಳೆ ಶಿವಮೊಗ್ಗ ಬಿಜೆಪಿ (BJP) ಶಾಸಕ ಚೆನ್ನಬಸಪ್ಪ (S N Channabasappa) ಮಾಡಿದ ಆರೋಪ ಗದ್ದಲಕ್ಕೆ ಕಾರವಾಣವಾಯಿತು.

    ವಾಲ್ಮೀಕಿ ನಿಯಮದ ಹಗರಣಕ್ಕೆ ಯಾರು ಬಲಿಯಾಗಿದ್ದಾರೆ? ಅವರ ಬಗ್ಗೆ ಯಾರೂ ಮಾತಾಡ್ತಿಲ್ಲ. ಶಿವಮೊಗ್ಗದ ಮತದಾರ ಆತ. ಆತನ ಕೊಲೆ ಮಾಡಿದ್ದು ಸರ್ಕಾರದ ವ್ಯವಸ್ಥೆ. ಹಿಂದೆ ರೌಡಿಗಳಿಗೆ ಸುಪಾರಿ ಕೊಡುತ್ತಿದ್ದರು. ಈಗ ಸರ್ಕಾರವೇ ಸುಪಾರಿ ಕೊಟ್ಟು ಕೊಲೆಗೆ ಕಾರಣವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು. ಈ ಹೇಳಿಕೆಗೆ ಕಾಂಗ್ರೆಸ್ (Congress) ಸದಸ್ಯರು, ಸರ್ಕಾರ ಸುಪಾರಿ ಕೊಟ್ಟಿಲ್ಲ. ಅವರ ಹೇಳಿಕೆಯನ್ನು ಕಡತದಿಂದ ತೆಗೆಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: 7 ದಿನಗಳ ಕಾಲ ಜಿ.ಟಿ ಮಾಲ್ ಮುಚ್ಚಿಸುತ್ತೇವೆ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಘೋಷಣೆ

    `ಸುಪಾರಿ’ ಎಂದರೆ ಏನು ಎಂದು ಹೇಳಬೇಕು. ನಾನು ಸದನದ ಸದಸ್ಯನಾಗಿ ಕೇಳುತ್ತಿದ್ದೇನೆ. ಈ ಬಗ್ಗೆ ವಿವರಣೆ ನೀಡಬೇಕು ಎಂದು ಸಚಿವ ಬೈರತಿ ಸುರೇಶ್ ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ ಖರ್ಗೆ, ಈ ಹಿಂದೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಆಗಿತ್ತು. ಹಾಗಾದರೆ ಹಿಂದಿನ ಸರ್ಕಾರ ಸುಪಾರಿ ಕೊಟ್ಟಿತ್ತಾ? ಎಂದು ಪ್ರಶ್ನಿಸಿದರು.

    ಇದೇ ವೇಳೆ ಸಚಿವ ಹೆಚ್.ಕೆ ಪಾಟೀಲ್ ಮಧ್ಯಪ್ರವೇಶ ಮಾಡಿ, ಸುಪಾರಿ ಅಂದ್ರೆ ಕೊಲೆ ಮಾಡಿಸಲು ಕೊಡುವಂತಹ ಕಾಂಟ್ರ್ಯಾಕ್ಟ್. ಈ ಪದ ಬಳಸೋದು ಗೌರವವೂ ಅಲ್ಲ, ಕಡತದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿದರು. ಬಳಿಕ ಸರ್ಕಾರ `ಸುಪಾರಿ’ ನೀಡಿದೆ ಎಂಬ ಪದ ತೆಗೆಯುವಂತೆ ಸ್ಪೀಕರ್ ಪೀಠದಲ್ಲಿದ್ದ ಡೆಪ್ಯೂಟಿ ಸ್ಪೀಕರ್ ರೂಲಿಂಗ್ ನೀಡಿ ಗದ್ದಲ ತಣ್ಣಗಾಗಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲೇ ಇಂದಿರಾ ಕ್ಯಾಂಟೀನ್ ಬಂದ್ – ಬೆಂಗಳೂರಲ್ಲಿ 15ಕ್ಕೂ ಹೆಚ್ಚು ಕ್ಯಾಂಟೀನ್‌ಗಳಿಗೆ ಬೀಗ

  • ಖಾಸಗಿ ದೇವಸ್ಥಾನಗಳನ್ನು ಸ್ವಾಧೀನ ಮಾಡಿಕೊಳ್ಳೋ ಪ್ರಶ್ನೆಯೇ ಇಲ್ಲ: ಕೋಟಾ

    ಖಾಸಗಿ ದೇವಸ್ಥಾನಗಳನ್ನು ಸ್ವಾಧೀನ ಮಾಡಿಕೊಳ್ಳೋ ಪ್ರಶ್ನೆಯೇ ಇಲ್ಲ: ಕೋಟಾ

    ಬೆಂಗಳೂರು: ಖಾಸಗಿ ದೇವಸ್ಥಾನಗಳನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ವಿಧಾನಸಭಾ ಕಲಾಪದ ವೇಳೆ ಸಚಿವರು, ಮಾಧ್ಯಮಗಳಲ್ಲಿ ಬಂದ ಸುದ್ದಿ ನೋಡಿದ್ದೇನೆ. ಧಾರ್ಮಿಕ ದತ್ತಿ ಇಲಾಖೆಯಿಂದ ಹೊರಗಿರುವ ಖಾಸಗಿ ಸುತ್ತೋಲೆಯಿಂದ ಖಾಸಗಿ ದೇವಸ್ಥಾನದವರು ಆತಂಕ ಪಡುವ ಅಗತ್ಯ ಇಲ್ಲ. ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದರು.

    ದೇವಸ್ಥಾನಗಳನ್ನ ನೋಂದಣಿ ಮಾಡಿಕೊಳ್ಳಬೇಕು ಅಂತ 2015ರಲ್ಲಿ ಧಾರ್ಮಿಕ ದತ್ತಿ ಕಾಯಿದೆ ತಿದ್ದುಪಡಿ ತರಲಾಗಿದೆ. ಇದರ ಅರ್ಥ ಸರ್ಕಾರ ಖಾಸಗಿ ದೇವಸ್ಥಾನಗಳ ಮೇಲೆ ಹಕ್ಕು ಚಲಾಯಿಸುವುದು, ನಿಗಾ ಇಡೋದು, ಸ್ವಾಯತ್ತ ತೆಗೆದುಕೊಳ್ಳುವುದಲ್ಲ ಎಂದು ಸ್ಪಷ್ಟಪಡಿಸಿದರು.

    ನೋಂದಣಿ ಪ್ರಕ್ರಿಯೆಯ ನೆನಪಿನ ಸುತ್ತೋಲೆ ಕೊಟ್ಟಿದ್ದೇವೆ. ಖಾಸಗಿ ದೇವಸ್ಥಾನ ಸ್ವಾಯತ್ತ ಪಡೆಯುವ ಯಾವುದೇ ಪ್ರಸಂಗ ಇಲ್ಲ. ಖಾಸಗಿ ದೇವಸ್ಥಾನ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಆತಂಕ ಬೇಡ. 2011ರಲ್ಲಿ ಕಾಯಿದೆ ತಂದಿರುವುದು 2015 ರಲ್ಲಿ ಜಾರಿ ಮಾಡಿದ್ದಾರೆ. 2016, 17, 18, 19, 20ರಲ್ಲಿ ನೆನಪಿನ ಸುತ್ತೋಲೆ ಕೊಡುತ್ತಾ ಬಂದಿದ್ದೇವೆ. ಮೊನ್ನೆ ಸಹ ಅಂತಹದೇ ಸುತ್ತೋಲೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

    ನನ್ನ ಗಮನಕ್ಕೆ ಬಾರದೇ ಇದು ರೆಗ್ಯುಲರ್ ಪ್ರೋಸಸ್ ರೀತಿ ಸುತ್ತೋಲೆ ಹೋಗಿರುತ್ತೆ. ಆದರೆ ಖಾಸಗಿ ದೇವಸ್ಥಾನಗಳ ಸ್ವಾಧೀನ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ವಾಪಸ್ ತೆಗೆದುಕೊಳ್ಳಬೇಕು ಅಂತ ಯಾರಾದರೂ ಹೇಳಿದ್ರೆ ಪರಿಶೀಲನೆ ಮಾಡ್ತೀವಿ. ಖಾಸಗಿ ದೇವಸ್ಥಾನಗಳು ಖಾಸಗಿಯಾಗಿಯೇ ಮುಂದುವರಿಯುತ್ತೆ ಎಂದು ಮಾಹಿತಿ ನೀಡಿದರು.