Tag: vidhana parishad

  • ನಕಲಿ ಅಭ್ಯರ್ಥಿಗಳ ಪತ್ತೆಗೆ ಹೊಸ ಪ್ರಯತ್ನ, ಪ್ರಯೋಗಾರ್ಥ ಯಶಸ್ಸು – ಕೆಇಎ

    ನಕಲಿ ಅಭ್ಯರ್ಥಿಗಳ ಪತ್ತೆಗೆ ಹೊಸ ಪ್ರಯತ್ನ, ಪ್ರಯೋಗಾರ್ಥ ಯಶಸ್ಸು – ಕೆಇಎ

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಎಂಜಿನಿಯರಿಂಗ್ (Engineering) ತಂಡವು ಸ್ವತಃ ಸಿದ್ಧಪಡಿಸಿದ ಎಐ ತಾಂತ್ರಿಕತೆಯ ಮೊಬೈಲ್ ಆಧರಿತ ಅಭ್ಯರ್ಥಿ ದೃಢೀಕರಣ (ಮೊಬೈಲ್-ಬೇಸ್ಡ್ ಕ್ಯಾಂಡಿಡೇಟ್ ಅಥೆಂಟಿಕೇಷನ್) ವ್ಯವಸ್ಥೆಯನ್ನು ಶನಿವಾರ ನಡೆದ ನೇಮಕಾತಿ ಪರೀಕ್ಷೆಯಲ್ಲಿ ಮೊತ್ತಮೊದಲ ಬಾರಿಗೆ ಯಶಸ್ವಿಯಾಗಿ ಬಳಸಲಾಗಿದೆ. ಇದು, ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ಸಂಪೂರ್ಣವಾಗಿ ತೊಡೆದು ಹಾಕಲಿದೆ.

    ವಿಧಾನ ಪರಿಷತ್‌ನಲ್ಲಿ (Vidhana Parishad) ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹಾಗೂ ಇನ್ನಿತರ ಹುದ್ದೆಗಳಿಗೆ ನಾಲ್ಕು ದಿನಗಳ ಪರೀಕ್ಷೆಯು ಶನಿವಾರ ಆರಂಭವಾಗಿದ್ದು, ಇದರಲ್ಲಿ ಕೆಇಎ ಎಂಜಿನಿಯರಿಂಗ್ ತಂಡದವರು ಅಭಿವೃದ್ಧಿಪಡಿಸಿರುವ ಈ ತಾಂತ್ರಿಕತೆಯನ್ನು ಪ್ರಯೋಗಾರ್ಥವಾಗಿ ಬಳಸಲಾಯಿತು. ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವಾಗ ಮೊಬೈಲ್ ಆಪ್ ಬಳಸಿ ಅವರ ಮುಖದ ಚಿತ್ರವನ್ನು ಸೆರೆ ಹಿಡಿಯಲಾಗುತ್ತದೆ. ಇದು, ತಕ್ಷಣವೇ ಕೆಇಎ ಸರ್ವರ್‌ಗೆ ಆನ್‌ಲೈನ್ ಮೂಲಕ ಸಂಪರ್ಕಗೊಂಡು ಅಭ್ಯರ್ಥಿಗಳು ಅರ್ಜಿ ಹಾಕುವ ಸಂದರ್ಭದಲ್ಲಿ ಹಾಕಿದ್ದ ಭಾವಚಿತ್ರದೊಂದಿಗೆ ತಾಳೆ ನೋಡಿ, ಅಭ್ಯರ್ಥಿಯ ನೈಜತೆಯನ್ನು ತತ್ ಕ್ಷಣವೇ ದೃಢಪಡಿಸುತ್ತದೆ. ಇದರಿಂದ, ನಕಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿ ಪ್ರವೇಶಿಸದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

    ಶನಿವಾರ ಬೆಳಿಗ್ಗೆ 74 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 267 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಈ ತಾಂತ್ರಿಕ ವ್ಯವಸ್ಥೆಯ ಮೊದಲ ದಿನದ ಪ್ರಯೋಗ ಯಶಸ್ವಿಯಾಗಿದ್ದು, ಇನ್ನು ಮುಂದೆ ಇತರ ಪರೀಕ್ಷೆಗಳಿಗೂ ಇದರ ಬಳಕೆಯನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

    ವೆಬ್‌ಸೈಟ್‌ನಲ್ಲಿ ಓಎಂಆರ್ ಶೀಟ್
    ಇಂದು ನಡೆದ ವಿಧಾನ ಪರಿಷತ್ತಿನ ನೇಮಕಾತಿ ಪರೀಕ್ಷೆ ಮುಗಿದ ತಕ್ಷಣವೇ ಅಭ್ಯರ್ಥಿಗಳ ಓಎಂಆರ್ ಶೀಟ್‌ಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಕೆಲಸವನ್ನೂ ಇದೇ ಮೊದಲು ಮಾಡಲಾಯಿತು. ಇದು ಪಾರದರ್ಶಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದ್ದು, ಯಾರು ಬೇಕಾದರೂ ಓಎಂಆರ್ ಶೀಟ್ ಗಳನ್ನು ನೋಡಬಹುದು. ಇದರಿಂದ ಅಕ್ರಮ/ಅನುಮಾನಗಳಿಗೆ ಅವಕಾಶವೇ ಇಲ್ಲದಂತಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

  • ಜವರಾಯಿಗೌಡಗೆ ಜೆಡಿಎಸ್‌ ಎಂಎಲ್‌ಸಿ ಟಿಕೆಟ್‌

    ಜವರಾಯಿಗೌಡಗೆ ಜೆಡಿಎಸ್‌ ಎಂಎಲ್‌ಸಿ ಟಿಕೆಟ್‌

    ಬೆಂಗಳೂರು: ವಿಧಾನಸಭೆಯಿಂದ (Vidhan Sabha) ವಿಧಾನ ಪರಿಷತ್ (Vidhana Parishad) ಸ್ಥಾನಕ್ಕೆ ನಡೆಯುವ ಚುನಾವಣೆಗೆ ಜೆಡಿಎಸ್ (JDS) ಅಭ್ಯರ್ಥಿಯಾಗಿ 4 ಬಾರಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತಿದ್ದ ಜವರಾಯಿಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ.

    ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಜವರಾಯಿಗೌಡ (Javarayi Gowda) ಹೆಸರು ಘೋಷಣೆ ಮಾಡಲಾಯಿತು. ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಜವರಾಯಿಗೌಡ ನಾಮಪತ್ರ ಸಲ್ಲಿಕೆ ಮಾಡಿದರು.  ಇದನ್ನೂ ಓದಿ: 64.2 ಕೋಟಿ ಜನರಿಂದ ಮತದಾನ – ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ವಿಶ್ವದಾಖಲೆ

     

    ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಕುಮಾರಸ್ವಾಮಿ, 4 ಬಾರಿ ಕಡಿಮೆ ಅಂತರದಿಂದ ಜವರಾಯಿಗೌಡ ಸೋತಿದ್ದರು. ಪಕ್ಷದ ಕಾರ್ಯಕರ್ತರ ಭಾವನೆಗೆ ಬೆಲೆ ಕೊಟ್ಟು ಅವರಿಗೆ ಟಿಕೆಟ್ ನೀಡಿದ್ದೇವೆ. ಫಾರೂಕ್ ಮತ್ತು ಕುಪ್ಪೇಂದ್ರ ರೆಡ್ಡಿ ಅವರ ಹೆಸರು ಚರ್ಚೆ ಆಯಿತು. ಅಂತಿಮವಾಗಿ ಜವರಾಯಿಗೌಡಗೆ ಟಿಕೆಟ್‌ ನೀಡಲು ಇಬ್ಬರು ನಾಯಕರು ಒಪ್ಪಿಕೊಂಡರು ಎಂದು ಕುಮಾರಸ್ವಾಮಿ ತಿಳಿಸಿದರು. ಇದನ್ನೂ ಓದಿ: ಎನ್‌ಡಿಎ ಸರ್ಕಾರ ರಚನೆಯಾದ 15 ದಿನಗಳಲ್ಲಿ ಮೋದಿ ಜೊತೆ ಉದ್ಧವ್‌ ಠಾಕ್ರೆ ಕಾಣಿಸಿಕೊಳ್ಳಲಿದ್ದಾರೆ: ಶಾಸಕ ರವಿ ರಾಣಾ

    ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅಭ್ಯರ್ಥಿ ಜವರಾಯಿಗೌಡ ಕಣ್ಣೀರು ಹಾಕುತ್ತಲೇ ಪ್ರತಿಕ್ರಿಯೆ ನೀಡಿದರು. 4 ಬಾರಿ ನಾನು ಚುನಾವಣೆ ಸೋತಿದ್ದೆ. ನನ್ನನ್ನ ಕೈ ಬಿಡಬಾರದು ಅಂತ ಕುಮಾರಸ್ವಾಮಿ, ದೇವೇಗೌಡರು ನನ್ನನ್ನ ವಿಧಾನ ಪರಿಷತ್ ಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ನಾನು ಯಾವತ್ತು ದೇವೇಗೌಡರ ಕುಟುಂಬಕ್ಕೆ ಚಿರೃಣಿ ಆಗಿರುತ್ತೇನೆ. ನನ್ನನ್ನ ಆಯ್ಕೆ ಮಾಡಿದ ಕುಮಾರಸ್ವಾಮಿ, ದೇವೇಗೌಡ, ಪಕ್ಷ 19 ಶಾಸಕರಿಗೂ ನಾನು ಧನ್ಯವಾದ ಹೇಳುತ್ತೇನೆ. ಪಕ್ಷಕ್ಕಾಗಿ, ಪಕ್ಷದ ಸಂಘಟನೆಗಾಗಿ ಕೆಲಸ ಮಾಡುತ್ತೇನೆ ಅಂತ ಕಣ್ಣೀರು ಹಾಕುತ್ತಾ ದೇವೇಗೌಡರ ಕುಟುಂಬಕ್ಕೆ ಧನ್ಯವಾದ ಹೇಳಿದರು.

     

  • ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಕಸರತ್ತು- ಭಿನ್ನಾಭಿಪ್ರಾಯದ ನಡುವೆ ಮೂವರ ಹೆಸರು ಫೈನಲ್!

    ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಕಸರತ್ತು- ಭಿನ್ನಾಭಿಪ್ರಾಯದ ನಡುವೆ ಮೂವರ ಹೆಸರು ಫೈನಲ್!

    ಬೆಂಗಳೂರು: ವಿಧಾನ ಪರಿಷತ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿದೆ. ಸಿಎಂ-ಡಿಸಿಎಂ ಹಾಗೂ ಹೈಕಮಾಂಡ್ ನಾಯಕರ ನಡುವೆ ಒಮ್ಮತ ಮೂಡಿಲ್ಲ. ಭಿನ್ನಾಭಿಪ್ರಾಯಗಳ ನಡುವೆಯೂ ಮೂವರ ಹೆಸರು ಅಂತಿಮವಾಗಿದೆ. ಉಳಿದ ನಾಲ್ಕು ಹೆಸರು ಅಂತಿಮಪಡಿಸಲು ಸಿಎಂ-ಡಿಸಿಎಂ ನಡುವೆಯೂ ಪೈಪೋಟಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಸಿಎಂ-ಡಿಸಿಎಂ ಒಪ್ಪಿದ ಹೆಸರಿಗೆ ವೇಣುಗೋಪಾಲ್ (KC Venugopal) ಹಾಗೂ ಸುರ್ಜೆವಾಲಾ ಅವರಿಂದಲೂ ವಿರೋಧ ವ್ಯಕ್ತವಾಗಿದೆ. ವೇಣುಗೋಪಾಲ್, ಸುರ್ಜೆವಾಲ ಮಾಡಿದ ಕಾರ್ಯಕರ್ತರ ಪಟ್ಟಿಗೆ ಮಲ್ಲಿಕಾರ್ಜುನ ಖರ್ಗೆ ಬ್ರೇಕ್ ಹಾಕಿದ್ದಾರೆ. 7 ಸ್ಥಾನದ ಪರಿಷತ್ ಟಿಕೆಟ್ ಆಯ್ಕೆ ಎಐಸಿಸಿ ಮಟ್ಟದಲ್ಲಿಯೇ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಗೊಂದಲದ ನಡುವೆ 7 ಸ್ಥಾನದ ಪೈಕಿ ಮೂವರ ಹೆಸರು ಅಂತಿಮಪಡಿಸಲಾಗಿದೆ ಎನ್ನಲಾಗುತ್ತಿದೆ.

    ಇಸ್ಮಾಯಿಲ್ ತಮಟಗಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ ಕುಮಾರ್ ಹಾಗೂ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೆಸರು ಬಹುತೇಕ ಅಂತಿಮ ಎನ್ನಲಾಗಿದೆ. ಒಕ್ಕಲಿಗ ಕೋಟಾದಲ್ಲಿ ಎರಡು ಸ್ಥಾನ ಕೊಡಲು ಹೈಕಮಾಂಡ್ ಒಲವು ತೋರಿದ್ದರು. ಡಿಸಿಎಂ ಡಿಕೆಶಿ ವಿನಯ್ ಕಾರ್ತಿಕ್ ಪರ, ಸಿಎಂ ಸಿದ್ದರಾಮಯ್ಯ ಅವರು ಗೋವಿಂದರಾಜು ಪರ ಒಲವು ತೋರಿದ್ದಾರೆ ಎನ್ನಲಾಗಿದೆ. ಗೋವಿಂದರಾಜು ಅಥವಾ ವಿನಯ್ ಕಾರ್ತಿಕ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ, ಇನ್ನೊಂದು ಸ್ಥಾನ ಕಾರ್ಯಕರ್ತರಿಗೆ ಕೊಡಬೇಕು ಎಂದು ವೇಣುಗೋಪಾಲ್ ಹಾಗೂ ಸುರ್ಜೆವಾಲಾ ಪಟ್ಟು ಹಿಡಿದಿದ್ದಾರೆ. ಆದರೆ ಸಿಎಂ ಹಾಗೂ ಡಿಸಿಎಂ ತಮ್ಮ ಬೆಂಬಲಿಗರ ಪರ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಡಾ. ಯತೀಂದ್ರಗೆ ಎಂಎಲ್‍ಸಿ ಟಿಕೆಟ್ ಫಿಕ್ಸ್

    ಇನ್ನೊಂದು ಕಡೆ ಸಚಿವ ಬೋಸರಾಜು ಮುಂದುವರಿಕೆ ಬಗ್ಗೆಯೂ ಕೈ ನಾಯಕರಲ್ಲಿ ಒಮ್ಮತ ಮೂಡಿಲ್ಲ. ಸುರ್ಜೆವಾಲ ಹಾಗೂ ವೇಣುಗೋಪಾಲ್ 10 ಕಾರ್ಯಕರ್ತರ ಪಟ್ಟಿ ಮಾಡಿಕೊಂಡು ಅದರಲ್ಲಿ 4 ಸ್ಥಾನದ ಆಯ್ಕೆ ಬಗ್ಗೆ ರಾಜ್ಯ ನಾಯಕರ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ. ಆದರೆ ಈ ಪಟ್ಟಿಗೆ ಸಿಎಂ ಹಾಗೂ ಡಿಸಿಎಂ ಒಪ್ಪುತ್ತಿಲ್ಲ ಎನ್ನಲಾಗಿದೆ. ಲೋಕಸಭೆಯಲ್ಲಿ 6 ಮಹಿಳೆಯರಿಗೆ ಅವಕಾಶ ಕೊಟ್ಟಿರುವುದರಿಂದ ಪರಿಷತ್ ನಲ್ಲಿ ಮಹಿಳೆಯರಿಗೆ ಅವಕಾಶ ಬೇಡ ಎಂಬುದು ಎಐಸಿಸಿ ನಾಯಕರ ನಿಲುವು ಎನ್ನಲಾಗಿದೆ.

    ಎಐಸಿಸಿ ನಾಯಕರ ಈ ನಿಲುವು ಖಂಡಿಸಿ ಕೆಲವು ಮಹಿಳಾ ನಾಯಕಿಯರು ಪ್ರಿಯಾಂಕ ಗಾಂಧಿ ಹಾಗೂ ಸೋನಿಯ ಗಾಂಧಿ ಭೇಟಿಗೆ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. 7 ಸ್ಥಾನಕ್ಕೆ 3 ಹೆಸರು ಬಹುತೇಕ ಅಂತಿಮವಾಗಿದ್ದು ಉಳಿದ 4 ಸ್ಥಾನದ ಆಯ್ಕೆಗೆ ಎಐಸಿಸಿ ಹಾಗೂ ರಾಜ್ಯ ನಾಯಕರ ನಡುವೆಯೇ ಒಮ್ಮತ ಮೂಡುತ್ತಿಲ್ಲ ಎನ್ನಲಾಗಿದೆ.

  • ‘ಪರಿಷತ್’ನಲ್ಲಿ ಕನಸಿನ ರಾಣಿ ಮಾಲಾಶ್ರೀ ಕುರಿತು ಹಾಸ್ಯ ಚರ್ಚೆ

    ‘ಪರಿಷತ್’ನಲ್ಲಿ ಕನಸಿನ ರಾಣಿ ಮಾಲಾಶ್ರೀ ಕುರಿತು ಹಾಸ್ಯ ಚರ್ಚೆ

    ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡ ಹೆಸರಾಂತ ನಟಿ, ಕನಸಿನ ರಾಣಿ ಮಾಲಾಶ್ರೀ ಕುರಿತಾಗಿ ಬಿಸಿಬಿಸಿ ಚರ್ಚೆಯಾಗಿದೆ. ವಿಧಾನ ಪರಿಷತ್ (Vidhana Parishad) ನಲ್ಲಿ ಈ ಚರ್ಚೆ ನಡೆದಿದ್ದು, ಉಮಾಶ್ರೀ (Umashree) ಸೇರಿದಂತೆ ಹಲವರು ಇದರಲ್ಲಿ ಭಾಗಿಯಾಗಿದ್ದರು. ಅಷ್ಟಕ್ಕೂ ಮಾಲಾಶ್ರೀಯನ್ನು ನೆನಪಿಸಿಕೊಂಡಿದ್ದು ಬಿಜೆಪಿಯ ಸದಸ್ಯ ವಿಶ್ವನಾಥ್ (Vishwanath) ಎನ್ನುವುದು ವಿಶೇಷ.

    ವಿಧೇಯಕದ ಮೇಲಿನ ಚರ್ಚೆ ವೇಳೆ ಉಮಾಶ್ರೀ ಹೆಸರಿನ ಬದಲಾಗಿ, ಬಾಯ್ತಪ್ಪಿ ಮಾಲಾಶ್ರೀ (Malashree) ಅವರ ಹೆಸರು ಹೇಳಿದರು ವಿಶ್ವನಾಥ್. ಮಾಲಾಶ್ರೀ ಹೆಸರು ಕೇಳಿ ಸಭಾಪತಿಗಳಿಗೆ ಒಂದು ರೀತಿಯಲ್ಲಿ ಅಚ್ಚರಿ ಆಯಿತು. ಹಾಗಾಗಿ ಮಾಲಾಶ್ರೀ ಅವರನ್ನು ಈಗೇಕೆ ನೆನಪಿಸಿಕೊಂಡಿರಿ ಎಂದು ತಮಾಷೆಯಾಗಿಯೇ ವಿಶ್ವನಾಥ್ ಅವರನ್ನು ಕೇಳಿದರು.  ಈ ವೇಳೆ ಮಧ್ಯ ಪ್ರವೇಶ ಮಾಡಿದ ತೇಜಸ್ವಿನಿ ಗೌಡ, ಭಾರತದಲ್ಲಿ ಹೇಮಾಮಾಲಿನಿ ಹೇಗೆ ಕನಸಿನ ಕನ್ಯೆ ಎಂದು ಹೆಸರು ಪಡೆದಿದ್ರೊ, ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ನಟನೆಯಿಂದ ಹೆಸರು ಮಾಡಿದ್ರು ಎಂದರು. ಮಾತು ಮುಂದುವರೆಸಿದ ತೇಜಸ್ವಿನಿಗೌಡ  ನಾಯಕಿಯಾಗಲು ಸೌಂದರ್ಯದ ಮಾನದಂಡ ಬದಲು ನಟನೆಯ ಮಾನದಂಡ ಆಗಿದ್ದರೆ, ಉಮಾಶ್ರೀಯವರು ನಾಯಕಿಯಾಗಿ ಹಲವು ಚಿತ್ರದಲ್ಲಿ ನಟಿಸಬಹುದಿತ್ತು ಎಂದರು.

    ಈ ವೇಳೆ ಎದ್ದು ನಿಂತ ಉಮಾಶ್ರೀ, ನನ್ನ ನಟನೆಯ ಬಗ್ಗೆ ಮಾತನಾಡಿದ್ದಕ್ಕೆ ಧನ್ಯವಾದ. ನಾನು ರಂಗಭೂಮಿಯಿಂದ ಬಂದವಳು. ರಂಗಭೂಮಿಯಲ್ಲಿ ನಾಯಕಿ ಪಾತ್ರ ಮಾಡಿದ್ದೇನೆ. ಆದರೆ ಸಿನಿಮಾದಲ್ಲಿ ಹಲವು ವಿಭಾಗ ಇದೆ. ನಾಯಕಿ, ಸಹ ನಟಿ, ಹಾಸ್ಯ ನಟಿ, ಪೋಷಕ ನಟಿ ಅಂತ. ನನಗೆ ನಾಯಕಿ ಆಗಿಲ್ಲ ಅನ್ನೋ ನೋವು ಇತ್ತು. ಆದರೆ ಗಿರೀಶ್ ಕಾಸರವಳ್ಳಿಯವರು ನನಗೆ ಗುಲಾಬಿ ಟಾಕೀಸ್ ಚಿತ್ರದಲ್ಲಿ ನಾಯಕಿ ನಟಿಯ ಅವಕಾಶ ನೀಡಿದ್ರು. ಗುಲಾಬಿ ಟಾಕೀಸ್ ಚಿತ್ರದಿಂದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ನಾಯಕಿ ಪ್ರಶಸ್ತಿ ಬಂತು. ನನಗೆ ಬೆಂಬಲ ನೀಡಿದ ಕರ್ನಾಟಕ ಜನತೆ, ಕರ್ನಾಟಕ ಚಿತ್ರ ರಂಗಕ್ಕೆ ಧನ್ಯವಾದ ಎಂದು ಹೇಳಿದರು ಉಮಾಶ್ರೀ.

    ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಚಿವ ಎಚ್ ಕೆ ಪಾಟೀಲ್, ನಟಿ ಉಮಾಶ್ರೀಯವರ ಒಡಲಾಳ ನಾಟಕ ನೋಡಿದ್ರೆ ಎಂತಹ ಅದ್ಬುತ ಕಲಾವಿದೆ ಎಂದು ಗೊತ್ತಾಗಲಿದೆ. ನಮ್ಮ ಭಾಗದಲ್ಲಿ ಉಮಾಶ್ರೀ ಈ ಪಾತ್ರದ ಮೂಲಕ ನಾಯಕರಾಗಿಯೇ ಇದ್ದರು. ನಮ್ಮ ನಾಯಕಿ ಸೋನಿಯಾಗಾಂಧಿಯವರಿಗೆ ಒಡಲಾಳ ನಾಟಕವನ್ನ ತೋರಿಸಿದ್ವಿ. ಆ ನಂತರ ಉಮಾಶ್ರಿಯವರನ್ನ ಭೇಟಿ ಮಾಡಿಸಿದಾಗ ಆ ನಾಟಕದಲ್ಲಿ ಪಾತ್ರ ಮಾಡಿರುವವರು ಇವರೇನಾ ಎಂದು ಮೂರು ಬಾರಿ ಕೇಳಿದ್ರು ಎಂದರು.

    ಹೀಗೆ ಮಾಲಾಶ್ರೀ ಬಿಟ್ಟು ಉಮಾಶ್ರೀ ನಟನೆಯ ಬಗ್ಗೆ ಪರಿಷತ್ ನಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಲಾಯಿತು. ಮತ್ತೆ ಹಾಸ್ಯ ಮಾಡಿದ ಸಭಾಪತಿ, ಈಗ ಯಾಕೆ ಮಾಲಾಶ್ರೀ ನೆನಪು ‌ಎಂದು ಮತ್ತೆ ಕೇಳಿದರು. ಕಲಾಸಕ್ತಿ ಹುಣಸೆಕಾಯಿ ಇದ್ದ ಹಾಗೆ ಎಂದು ಹಾಸ್ಯ ಮಾಡಿದರು ವಿಶ್ವನಾಥ್. ಹೀಗೆ ಹಾಸ್ಯ ರೂಪದಲ್ಲಿ ವಿಧೇಯಕದ ವೇಳೆ ಚರ್ಚೆಯಾಗಿ ಮಾಲಾಶ್ರೀ ಮತ್ತು  ಉಮಾಶ್ರೀ ಹೆಸರು ಪ್ರಸ್ತಾಪವಾಯಿತು.

  • ವಕ್ಫ್ ಆಸ್ತಿ ವರದಿ, 40% ಸರ್ಕಾರ ಹಗರಣ ಗಲಾಟೆ ನಡುವೆ ಮಳೆಗಾಲದ ಅಧಿವೇಶನ ಬಲಿ

    ವಕ್ಫ್ ಆಸ್ತಿ ವರದಿ, 40% ಸರ್ಕಾರ ಹಗರಣ ಗಲಾಟೆ ನಡುವೆ ಮಳೆಗಾಲದ ಅಧಿವೇಶನ ಬಲಿ

    ಬೆಂಗಳೂರು: ವಿಧಾನ ಪರಿಷತ್ (Vidhana Parishad) ಕಲಾಪದ (Session) ಕೊನೆ ದಿನವೂ ಗದ್ದಲ ಗಲಾಟೆಗೆ ಕಾರಣವಾಯ್ತು. 40% ಸರ್ಕಾರ, ವಕ್ಫ್ ಆಸ್ತಿ (Wakf Property) , BMS ಟ್ರಸ್ಟ್‌ ಹಗರಣದ ಗಲಾಟೆ ಸದನದಲ್ಲಿ ಸದ್ದು ಮಾಡಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಸಭಾಪತಿಗಳು ಮುಂದೂಡಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ನಿನ್ನೆ ಗದ್ದಲದ ನಡುವೆ ಮಾಣಿಪ್ಪಾಡಿ ವರದಿ ಮಂಡಿಸಿದ್ದಾರೆ. ನಮಗೆ ಅದರ ಪ್ರತಿ ಕೊಡಿ ಎಂದು ಮಾಣಿಪ್ಪಾಡಿ ವರದಿ ಕುರಿತು ನಿಯಮ 59ರ ಅಡಿ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಚರ್ಚೆಗೆ ಅವಕಾಶ ಕಲ್ಪಿಸಲು ಆಗ್ರಹಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.

    ಈ ವೇಳೆ ಮಾತನಾಡಿದ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ, ಕಾಂಗ್ರೆಸ್ ನಿಲುವಳಿ ಸೂಚನೆ ಪರಿಶೀಲಿಸಿದ್ದೇನೆ. ಮಾಣಪ್ಪಾಡಿ ವರದಿ ಸ್ಥಾಯಿ ಸಮಿತಿ ನೀಡಿದ ವರದಿಯಲ್ಲ. ಅಲ್ಪಸಂಖ್ಯಾತ ಆಯೋಗದ‌ ಕಾಯ್ದೆಯಂತೆ ಮಂಡಿಸಿದ್ದಾರೆ. ಇದು ಇತ್ತೀಚೆಗೆ ನಡೆದ ಘಟನೆಯಲ್ಲ. ಹಾಗಾಗಿ ನಿಯಮ‌ 59ರ ನಿಲುವಳಿ ಸೂಚನೆ ತಿರಸ್ಕಾರ ಮಾಡುತ್ತೇನೆ ಎಂದು ರೂಲಿಂಗ್ ನೀಡಿದರು. ವರದಿಯನ್ನು ಸದಸ್ಯರಿಗೆ ನೀಡುವಂತೆ ಸೂಚಿಸಿದರು. ಸಭಾಪತಿಗಳ ನಿರ್ಧಾರಕ್ಕೆ ಕಾಂಗ್ರೆಸ್ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು.

    ಈ ವೇಳೆ ಬಿಎಂಎಸ್ ಟ್ರಸ್ಟ್ ಅನ್ನು ಖಾಸಗಿಗೆ ಕೊಡಲಾಗಿದೆ ಎನ್ನುವ ವಿಷಯದ ಮೇಲೆ ಚರ್ಚೆಗೆ ಜೆಡಿಎಸ್ (JDS) ಆಗ್ರಹಿಸಿತು. ನಿಯಮ 72ರ ಅಡಿ ಚರ್ಚೆಗೆ ಅವಕಾಶ ಕೋರಿ ಜೆಡಿಎಸ್ ನಾಯಕ ಭೋಜೇಗೌಡ ಮನವಿ ಮಾಡಿದರು. ಆದರೆ ಇದಕ್ಕೆ ಅವಕಾಶ ನೀಡದ ಕಾರಣ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಗದ್ದಲದ ನಡುವೆ ಶಾಸನ ರಚನೆ ಕಲಾಪ ಆರಂಭಿಸಲಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತಮ್ಮ ಬೇಡಿಕೆಗಳ ಚರ್ಚೆಗೆ ಅವಕಾಶ ನೀಡದೆ ಶಾಸನ ರಚನೆ ಕಲಾಪ ಕೈಗೆತ್ತಿಕೊಂಡಿದ್ದನ್ನು ವಿರೋಧಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಭಿತ್ತಿಪತ್ರ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಕಾಂಗ್ರೆಸ್ (Congress) ಜೆಡಿಎಸ್ ಸದಸ್ಯರ ಧರಣಿ ನಡುವೆ ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ, ಕರ್ನಾಟಕ ಸ್ಟಾಂಪು ಮೂರನೇ ತಿದ್ದುಪಡಿ ವಿಧೇಯಕ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕಗಳನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ಅಂಗೀಕರಿಸಲಾಯಿತು.

    ವಿಧೇಯಕಗಳು ಅಂಗೀಕಾರದ ವೇಳೆ ಸಭಾಪತಿ ಪೀಠದ ಮುಂದೆ ಕಾಂಗ್ರೆಸ್ ಸದಸ್ಯರು ಜಮಾವಣೆಗೊಂಡು ಹಗರಣಗಳ ಆರೋಪದ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ (BJP) ಸದಸ್ಯರೂ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಈ ವೇಳೆ ಪ್ರತಿಭಟನಾನಿರತ ಸದಸ್ಯರು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಘೋಷಣೆ ಪೈಪೋಟಿ ನಡೆಯಿತು. ಸದನದಲ್ಲಿ ಗದ್ದಲ ಹೆಚ್ಚಾದ ನಡುವೆಯೇ ಸಭಾಪತಿಗಳು 10 ದಿನಗಳ ಕಲಾಪದ ಸಾರಾಂಶವನ್ನು ಸದನದಲ್ಲಿ ಮಂಡಿಸಿದರು. ನಂತರ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಇದನ್ನೂ ಓದಿ: ಬಿಜೆಪಿಯವರು ನೆಪ ಹೇಳೋ ಬದಲು PFIಯನ್ನು ನಿಷೇಧಿಸಲಿ: ದಿನೇಶ್ ಗುಂಡೂರಾವ್

    ನಂತರ ಕಲಾಪವನ್ನು ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅನಿರ್ಧಿಷ್ಟಾವದಿಗೆ ಮುಂದೂಡಿಕೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯಗೊಂಡಿತು. ಕಲಾಪ ಮುಗಿದ ನಂತರವೂ ಸದನದಲ್ಲಿ ಭಾರತ್ ಮಾತಾಕಿ ಜೈ, ಒಂದೇ ಮಾತರಂ ಘೊಷಣೆಗಳು ಮೊಳಗಿದವು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪೈಪೋಟಿಯಲ್ಲಿ ಘೋಷಣೆ ಮೊಳಗಿಸಿದರು. ಇದನ್ನೂ ಓದಿ: BJPಗೆ ದೇಶದ ಅಭಿವೃದ್ಧಿಗಿಂತ ಬೇರೆ ಪಕ್ಷ ಮುಗಿಸೋದೇ ಮುಖ್ಯ – ರಾಹುಲ್ ಪರ ಖರ್ಗೆ ಬ್ಯಾಟಿಂಗ್

    Live Tv
    [brid partner=56869869 player=32851 video=960834 autoplay=true]

  • ಭ್ರಷ್ಟಾಚಾರ ಮುಗಿಸಲು ನಾವು ಬಂದಿದ್ದೇವೆ – ಬಿಜೆಪಿ, ಕಾಂಗ್ರೆಸ್ ನಡುವೆ ವಾಕ್ಸಮರ

    ಭ್ರಷ್ಟಾಚಾರ ಮುಗಿಸಲು ನಾವು ಬಂದಿದ್ದೇವೆ – ಬಿಜೆಪಿ, ಕಾಂಗ್ರೆಸ್ ನಡುವೆ ವಾಕ್ಸಮರ

    ಬೆಂಗಳೂರು: ವಿಧಾನ ಪರಿಷತ್‌ನಲ್ಲಿ (Vidhana Parishad) ಉತ್ತರ ನೀಡಲು ಕಾಲಾವಕಾಶ ಕೋರಿದ ಘಟನೆ ಸದನದಲ್ಲಿ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ನಡುವೆ ಮಾತಿನ ಚಕಮಕಿ, ಗದ್ದಲ ಗಲಾಟೆ ಸೃಷ್ಟಿಗೆ ಕಾರಣವಾಯಿತು. ಆರೋಪ ಪ್ರತ್ಯಾರೋಪಗಳಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿ ಕಲಾಪವನ್ನು 5 ನಿಮಿಷ ಮುಂದೂಡಿದ ಘಟನೆ ನಡೆಯಿತು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ, ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಅಶೋಕ್ ಸಮಯಾವಕಾಶ ಕೋರಿದರು. ಬಹಳ ವಿಷಯ ಕೇಳಿದ್ದಾರೆ ಅದಕ್ಕಾಗಿ ಸಮಯ ಬೇಕು ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಲೀಂ ಅಹಮದ್ ಉತ್ತರವಿಲ್ಲದಿದ್ದರೆ ಪಟ್ಟಿಯಲ್ಲಿ ಯಾಕೆ ಹಾಕಬೇಕಿತ್ತು? ಉತ್ತರ ಕೊಡಿಸಿ ಎಂದು ಪಟ್ಟು ಹಿಡಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಸರ್ಕಾರದ ಬಳಿ ಉತ್ತರವಿಲ್ಲ ಎಂದರೆ ಹೇಗೆ? ಉತ್ತರ ಕೊಡಿಸಬೇಕು ಎಂದು ಆಗ್ರಹಿಸಿದರು.

    ಆದರೆ ಸಭಾಪತಿಗಳು ಸಮಯಾವಕಾಶಕ್ಕೆ ಒಪ್ಪಿ ಮುಂದಿನ ಪ್ರಶ್ನೆ ಕೈಗೆತ್ತಿಕೊಳ್ಳಲು ಮುಂದಾಗಿದ್ದಕ್ಕೆ ಸಿಟ್ಟಾದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಕಂದಾಯ ಸಚಿವ ಅಶೋಕ್, ಇದು ಬೇಜವಾಬ್ದಾರಿತನದ ಪರಮಾವಧಿ ಎಂದರು. ಇದಕ್ಕೆ ದನಿಗೂಡಿಸಿದ ಸಚಿವ ಸುಧಾಕರ್, ಹಿಂದೆ ಇವರೆಲ್ಲಾ ಏನು ಮಾಡಿದ್ದರು ಎಂದು ಕಡತ ತರಿಸಿ ನೋಡಿ ಎಂದರು. ಇದಕ್ಕೆ ಟಾಂಗ್ ನೀಡಿದ ಹರಿಪ್ರಸಾದ್, ಸಚಿವರದ್ದು ಬೇಜವಾಬ್ದಾರಿ ಹೇಳಿಕೆ. ಇದು ಸಚಿವರ ಪಲಾಯನವಾದ. ಅವರಿಗೆ ಉತ್ತರ ಕೊಡಲು ಸಾಧ್ಯವಾಗದೆ ಹೀಗೆ ಮಾಡುತ್ತಿದ್ದಾರೆ ಎಂದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿಗಳು ಸಚಿವರು ಉತ್ತರ ಕೊಡಬೇಕು, ಇದು ಪ್ರತಿಪಕ್ಷದ ಹಕ್ಕು. ಆದರೆ ಕಾಲಾವಕಾಶ ಬೇಕಾದಾಗ ಕೊಡಬೇಕಾಗಲಿದೆ ಎಂದರು. ಸಭಾಪತಿ ಹೇಳಿಕೆ ಸಮರ್ಥಿಸಿಕೊಂಡ ಅಶೋಕ್, 6 ವಿಷಯ ಕೇಳಿದ್ದಾರೆ. ಭೂ ಮಂಜೂರಾತಿ ಯಾರಿಗೆ ಎಂದು ಕೇಳಿಲ್ಲ. ಯಾವ ದಿನಾಂಕ ಎಂದಿಲ್ಲ. ಪೂರ್ತಿ ಕೊಡಬೇಕು. ಭೂ ಪರಿವರ್ತನೆ ರಾಜ್ಯದ ಪೂರ್ತಿ ಕೇಳಿದ್ದಾರೆ. ಆದಾಯ, ಜನನ, ಮರಣ, ಪಿಂಚಣಿ ಇಡೀ ರಾಜ್ಯದ್ದು ಕೇಳಿದ್ದಾರೆ ಇದು ಕೊಡಲು ಸಾಧ್ಯವಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಬ್‌ ಅರ್ಬನ್ ರೈಲ್ವೇ ಯೋಜನೆಗೆ ದಿ.ಅನಂತ್ ಕುಮಾರ್ ಹೆಸರು: ಸೋಮಣ್ಣ

     

    ಇದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಲಂಚದ ಪ್ರಕರಣ ಅವರಿಗೆ ಹೇಳಲಾಗುತ್ತಿಲ್ಲ. ಬಹಳ ಲಂಚ ಪಡೆದಿದ್ದಾರೆ. ಅದಕ್ಕೆ ಸಮಯ ಬೇಕು ಎನ್ನುತ್ತಿದ್ದಾರೆ ಎಂದರು. ಇದಕ್ಕೆ ಟಾಂಗ್ ನೀಡಿದ ಸಚಿವ ಅಶೋಕ್, ಲಂಚದ ವಿಚಾರ ಕೇಳಿದರೆ ಅದಕ್ಕೆ ಉತ್ತರ ಕೊಡಲು ಸಿದ್ದ ಎಂದರು.

    ಈ ವೇಳೆ ಬಿಜೆಪಿ ಸದಸ್ಯರಿಂದ ರಾಜೀವ್ ಗಾಂಧಿ ಹೇಳಿಕೆ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಕೆ ಹರಿಪ್ರಸಾದ್, 100 ರೂ. ಬಿಡುಗಡೆ ಆದರೆ ಕಡೆಯ ಹಳ್ಳಿಗೆ ತಲುಪುವ ವೇಳೆ 15 ರೂ. ಆಗಿರಲಿದೆ. ಶಾಸಕರ ನಿಧಿ 15 ಲಕ್ಷ ಎಂದರೆ, 12 ಲಕ್ಷ ಮಾತ್ರ ಸಿಗೋದು. ಉಳಿದ 3 ಲಕ್ಷ ತೆರಿಗೆ ಇತ್ಯಾದಿಗೆ ಹೋಗಲಿದೆ. ಈ ಅರ್ಥದಲ್ಲಿ ರಾಜೀವ್ ಗಾಂಧಿ ಅಂದು ಹೇಳಿದ್ದರು ಎಂದು ರಾಜೀವ್ ಗಾಂಧಿ ಹೇಳಿಕೆ ಸಮರ್ಥಿಸಿಕೊಂಡರು. ದೇವಸ್ಥಾನದ ಹಣ ಹೊಡೆದವರು ಯಾರು ಎಂದು ಗೊತ್ತಿದೆ ಎಂದು ಬಿಜೆಪಿ ಸದಸ್ಯರಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆ – ಒಪ್ಪಿಕೊಂಡ ಸರ್ಕಾರ

    ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಸೋಮಣ್ಣ, ಹತ್ತಾರು ಪ್ರಶ್ನೆ ಕೇಳುವ ವೇಳೆ ಒಂದೋ ಎರಡೋ ಪ್ರಶ್ನೆಗೆ ಉತ್ತರ ಬಂದಿಲ್ಲ ಎಂದರೆ ಸಹಕಾರ ಅಗತ್ಯ. ನಿಮ್ಮ ಕಾಲ ಈ ಕಾಲ ಎಲ್ಲಾ ವೇಳೆಯಲ್ಲೂ ಇದು ನಡೆದುಕೊಂಡು ಬಂದಿದೆ. ಪ್ರತಿಷ್ಠೆಯಾಗಿ ಪರಿಗಣಿಸದೆ ಸಹಕರಿಸಿ ಎಂದರು. ಇದಕ್ಕೆ ಪ್ರತಿಯಾಗಿ ಹರಿಪ್ರಸಾದ್, ನೀವು ಒಳ್ಳೆಯ ಸಂಪ್ರದಾಯ ಹಾಕಿಕೊಟ್ಟಿದ್ದರೆ ನಾವು ಅದನ್ನು ಪಾಲಿಸುತ್ತಿದ್ದೆವು. ಈ ಪ್ರಶ್ನೆಯಲ್ಲಿ ಲಂಚದ ವಿಷಯ ಇದೆ ಅದನ್ನು ವಿಷಯಾಂತರ ಮಾಡಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಅಶ್ವಥ್‌ನಾರಾಯಣ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆ ನಿಮಗಿಲ್ಲ. ಭ್ರಷ್ಟಾಚಾರ ಮುಗಿಸಲು ನಾವು ಬಂದಿದ್ದೇವೆ ಎಂದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದರಿಂದ ಸಭಾಪತಿಗಳು ಸದನವನ್ನು 5 ನಿಮಿಷ ಮುಂದೂಡಿಕೆ ಮಾಡಿದರು. ಕಲಾಪ ಮುಂದೂಡಿಕೆಯಾದರೂ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಮುಂದುವರೆದಿತ್ತು.

    ಬಳಿಕ ಮತ್ತೆ ಸದನ ಪ್ರಾರಂಭ ಆಗಿ ಸದನ ಮುಕ್ತಾಯ ಆಗೋ ಒಳಗೆ ಉತ್ತರ ಕೊಡೋದಾಗಿ ಸಚಿವರು ತಿಳಿಸಿದರು. ಇದಕ್ಕೆ ಒಪ್ಪಿದ ಕಾಂಗ್ರೆಸ್ ಧರಣಿ ವಾಪಸ್ ಪಡೆಯಿತು.

    Live Tv
    [brid partner=56869869 player=32851 video=960834 autoplay=true]

  • ವಿಧಾನಪರಿಷತ್ ಚುನಾವಣೆ- ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆ

    ವಿಧಾನಪರಿಷತ್ ಚುನಾವಣೆ- ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆ

    ಬೆಂಗಳೂರು: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದು, ಮಾಜಿ ಸಚಿವ ಬಾಬುರಾವ್ ಚಿಂಚನಸೂರುಗೆ ಟಿಕೆಟ್ ನೀಡಿದೆ.

    ವಿಧಾನ ಪರಿಷತ್‌ ಸದಸ್ಯರಾಗಿದ್ದ ಸಿ.ಎಂ ಇಬ್ರಾಹಿಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಇದೀಗ ಈ ಸ್ಥಾನಕ್ಕೆ ಬಿಜೆಪಿಯಿಂದ ಟಿಕೆಟ್ ಫೈನಲ್ ಮಾಡಿದೆ. ಕೋಲಿ ಸಮುದಾಯದ ಬಾಬೂರಾವ್ ಚಿಂಚನಸೂರ್‌ಗೆ ಟಿಕೆಟ್ ನೀಡಿದೆ.

    CM IBRAHIM

    ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಅವರು ಮಾರ್ಚ್ 31ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿ.ಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿರುವಂತ ಸ್ಥಾನಕ್ಕೆ ಚುನಾವಣೆಗೆ ದಿನಾಂಕ ನಿಗದಿ ಪಡಿಸಲಾಗಿದೆ ಎಂದು ಜುಲೈ 25ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಆ.1ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇದನ್ನೂ ಓದಿ: ಹಿಂದೂಗಳ ನರಮೇಧಕ್ಕೆ ಕಾರಣವೇ ಸಿದ್ದರಾಮಯ್ಯ – ಬಿಜೆಪಿ ಕಾರ್ಯಕರ್ತ ಚಂದ್ರಹಾಸ್

    ನಾಮಪತ್ರಗಳ ಪರಿಶೀಲನೆ ದಿನ ಆ. 2ರಂದು ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನ ಆ. 4 ಆಗಿದೆ. ಆ. 11ರಂದು ಮತದಾನ ನಡೆಯಲಿದೆ. ಅದೇ ದಿನ ಸಂಜೆ ಸಂಜೆ 5 ಗಂಟೆಗೆ ಮತಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಇದನ್ನೂ ಓದಿ: ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸದಿದ್ದರೆ ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತದೆ – CJI

    Live Tv
    [brid partner=56869869 player=32851 video=960834 autoplay=true]

  • ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ಪರಿಷತ್ ಸ್ಥಾನಕ್ಕೆ ಆ.11ರಂದು ಎಲೆಕ್ಷನ್

    ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ಪರಿಷತ್ ಸ್ಥಾನಕ್ಕೆ ಆ.11ರಂದು ಎಲೆಕ್ಷನ್

    ನವದೆಹಲಿ: ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್‍ನ ಒಂದು ಸ್ಥಾನಕ್ಕೆ ಆಗಸ್ಟ್ 11ರಂದು ಉಪಚುನಾವಣೆ ನಡೆಯಲಿದೆ.

    ಈ ಬಗ್ಗೆ ಕೇಂದ್ರ ಚುನಾವಣೆ ಆಯೋಗ ದಿನಾಂಕ ಘೋಷಣೆ ಘೋಷಣೆ ಮಾಡಿದೆ. ಆಗಸ್ಟ್ 11ರಂದು ಮತದಾನ, ಅದೇ ದಿನ ಸಂಜೆ ಮತಗಳ ಎಣಿಕೆ ಕಾರ್ಯ ಕೂಡ ನಡೆಯಲಿದೆ. ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ- ಸಾಲ ಮರುಪಾವತಿ ಮಾಡಲ್ಲ ಎಂದ ರೈತರು

    CM IBRAHIM

    ನಾಮಪತ್ರ ಸಲ್ಲಿಸಲು ಆಗಸ್ಟ್ 1 ಕೊನೆಯ ದಿನವಾಗಿದೆ. ಆಗಸ್ಟ್ 2ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಆ 4 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ.

    ಕಾಂಗ್ರೆಸ್‍ನಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಸಿಎಂ ಇಬ್ರಾಹಿಂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲಿಲ್ಲ ಎಂದು ತನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಬಳಿಕ ಜೆಡಿಎಸ್ ಸೇರಿದರು.

    Live Tv
    [brid partner=56869869 player=32851 video=960834 autoplay=true]

  • ಸತತ 8ನೇ ಬಾರಿಗೆ ಪರಿಷತ್‍ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದ ಹೊರಟ್ಟಿ

    ಸತತ 8ನೇ ಬಾರಿಗೆ ಪರಿಷತ್‍ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದ ಹೊರಟ್ಟಿ

    ಬೆಂಗಳೂರು: ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು ಸಾಧಿಸಿದ್ದಾರೆ.

    ಸತತ 8 ನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ವಿಧಾನ ಪರಿಷತ್ ಚುನಾವಣೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ 4 ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 11,000ನಲ್ಲಿ 7070 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಇದನ್ನೂ ಓದಿ: 2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು- 3 ಪಕ್ಷಗಳ ಭವಿಷ್ಯ ನಿರ್ಧಾರ

    ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಬಸವರಾಜ ಹೊರಟ್ಟಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್​​ನ ಬಸವರಾಜ ಗುರಿಕಾರ ಹಾಗೂ ಜೆಡಿಎಸ್‌ನ ಶ್ರೀಶೈಲ ಗಿಡದಿನ್ನಿ ಮುಖಭಂಗ ಅನುಭವಿಸಿದ್ದಾರೆ. ಆದರೆ, ಹೆಚ್ಚಿನ ತಿರಸ್ಕಾರಗೊಂಡ ಮತಗಳಿಂದ ಹೊರಟ್ಟಿಯವರ ಲೀಡ್ ಪ್ರಮಾಣ ಕುಸಿತ ಕಂಡಿದೆ. ತಿರಸ್ಕಾರಗೊಂಡ ಬಹುತೇಕ ಮತಗಳು ಹೊರಟ್ಟಿಗೆ ಚಲಾವಣೆಗೊಂಡಿದ್ದವು ಎಂದು ತಿಳಿದುಬಂದಿದೆ.

    ಹೊರಟ್ಟಿ ವಿಜಯದ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಬೆಳಗಾವಿಯ ಮತ ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ನಡೆದಿದೆ. ಬಸವರಾಜ ಹೊರಟ್ಟಿ ಅವರ ಭಾವಚಿತ್ರ ಹಿಡಿದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣ ಒಬ್ಬ ಕಚಡ, ಮಾರ್ಕ್ಸ್‌ಕಾರ್ಡ್‌ ಮಾರ್ಕೊಂಡು ಬದುಕಿದವನು: ಡಿ.ಕೆ.ಸುರೇಶ್ ವಾಗ್ದಾಳಿ

  • ವಿಧಾನ ಪರಿಷತ್, ರಾಜ್ಯಸಭೆ ಚುನಾವಣೆ ಕೋರ್ ಕಮಿಟಿಯಲ್ಲಿ ಚರ್ಚೆ: ಬೊಮ್ಮಾಯಿ

    ವಿಧಾನ ಪರಿಷತ್, ರಾಜ್ಯಸಭೆ ಚುನಾವಣೆ ಕೋರ್ ಕಮಿಟಿಯಲ್ಲಿ ಚರ್ಚೆ: ಬೊಮ್ಮಾಯಿ

    ಬೆಂಗಳೂರು: ವಿಧಾನ ಪರಿಷತ್ ಮತ್ತು ರಾಜ್ಯ ಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮತ್ತು ಸಿದ್ಧತೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೇ 14 ರಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅದೇ ಸಭೆಯಲ್ಲಿ ವಿಧಾನ ಪರಿಷತ್ ಹಾಗೂ ರಾಜ್ಯ ಸಭೆಗೆ ನಡೆಯಲಿರುವ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

    ನಿನ್ನೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಬೇರೆ ವಿಚಾರ ಚರ್ಚೆ ಆಗಿದೆ. ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸುತ್ತೇವೆ ಅಂತ ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ಪಾಕಿಸ್ತಾನದತ್ತ ಬೆರಳು ತೋರಿಸದೆ ಕಾಶ್ಮೀರಿ ಪಂಡಿತರಿಗೆ ಕೇಂದ್ರ ಸಹಾಯ ಮಾಡಿ: ರಾವತ್

    ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ:
    ಇದೇ ವೇಳೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಬಗ್ಗೆ ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಒಬಿಸಿ ಮೀಸಲಾತಿ ಮಾಡಲೇಬೇಕಿದೆ. ಹೀಗಾಗಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸೋದಾಗಿ ತಿಳಿಸಿದರು.

    ಸುಪ್ರೀಂಕೋರ್ಟ್ ಗೆ ಎರಡು ವಿಚಾರವಾಗಿ ಮನವಿ ಮಾಡಲಾಗುತ್ತದೆ. ಈಗಾಗಲೇ ರಚಿಸಲಾಗಿರುವ ಸಮಿತಿ ತನ್ನ ವರದಿ ಸಲ್ಲಿಸಲು ಸಮಯಾವಕಾಶ ನೀಡುವಂತೆ ಅಥವಾ ಹಳೆಯ ಮೀಸಲಾತಿ ಪ್ರಕಾರ ಚುನಾವಣೆ ಮಾಡಲು ಅವಕಾಶ ನೀಡುವಂತೆ ಕೋರಲಾಗುತ್ತದೆ. ಇದಕ್ಕೆ ಬಹುತೇಕ ಅವಕಾಶ ಸಿಗುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.