Tag: Vidhan Sabha election

  • ಶ್ರೀನಿವಾಸ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್

    ಶ್ರೀನಿವಾಸ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್

    ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಒಂದು ರುಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ ಎಂದು ಬಿಜೆಪಿ ಸಂಘಟನಾ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.

    ವಿಧಾನ ಪರಿಷತ್ ಚುನಾವಣೆ ನಡೆದು ಫಲಿತಾಂಶ ಬಂದಿದೆ. ಬುದ್ಧಿವಂತರ ಚುನಾವಣೆ ಮಾದರಿ ಎಂದೆಲ್ಲಾ ಇವರಿಗೆ ಬಿಂಬಿತವಾದ ಪರಿಷತ್ ಚುನಾವಣೆಗೆ ಕೋಟಿ ಕೋಟಿ ರೂಪಾಯಿ ಹಣದ ಹೊಳೆ ಹರಿದ ಬಗ್ಗೆ ಜಿಲ್ಲಾ ಮಟ್ಟದ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡ ಸಂತೋಷ್ ಅವರು ಖೇದ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು, ಮತಗಳು, ಮತ ಹಾಕಿದ ಪ್ರತಿನಿಧಿಗಳು ಖರೀದಿಯಾಗಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಠ್ಯಪುಸ್ತಕ ವಿತರಿಸದಿರುವುದು ಶಿಕ್ಷಣ ಸಚಿವರ ಅಸಮರ್ಥತೆಯ ಸಂಕೇತ: ಎಎಪಿ

    ದ.ಕ-ಉಡುಪಿ ಶೇ.99 ನಾವು ಮಾರಾಟಕ್ಕಿಲ್ಲ ಅಂತ ತೋರಿಸಿಕೊಟ್ಟಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಇದು ಸಾಬೀತಾಗಬೇಕು. ನಾವು ಮಾರಾಟಕ್ಕಿಲ್ಲ, ದಾಕ್ಷಿಣ್ಯಕ್ಕೆ ಒಳಗಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಸಾರ್ವಜನಿಕ ವ್ಯವಸ್ಥೆಯಲ್ಲಿ ಇರುವವರಿಗೆ ಈ ಬದ್ಧತೆ ಬೇಕು ಎಂದು ಕರೆ ನೀಡಿದರು.

    ಕೆಲ ಜಿಲ್ಲೆಗಳಲ್ಲಿ ಕೋಟ್ಯಂತರ ರೂಪಾಯಿ ಪರಿಷತ್ತಿನ ಚುನಾವಣೆಗೆ ಖರ್ಚಾಗಿದೆ. ಆಮಿಷಗಳಿಗೆ ಮಣಿದು ಜನಪ್ರತಿನಿಧಿಗಳು ಮತ ಚಲಾವಣೆ ಮಾಡಿರುವುದು ಜಗಜ್ಜಾಹೀರಾಗಿದೆ. ದ.ಕ ಉಡುಪಿ ಬಿಜೆಪಿ ಅಭ್ಯರ್ಥಿ ಒಂದು ರೂಪಾಯಿ ಖರ್ಚು ಮಾಡದೆ ಗೆದ್ದಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೆಸರು ಉಲ್ಲೇಖ ಮಾಡದೇ ವಿಷಯ ಪ್ರಸ್ತಾಪ ಮಾಡಿದರು. ಇದನ್ನೂ ಓದಿ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ

    ವಿಧಾನ ಪರಿಷತ್ ರದ್ದು ಗೊಳಿಸುವ ಸಮಯ ಬಂದಿದೆಯಲ್ಲವೇ? ಅಂತ ಪಕ್ಷದ ಹಿರಿಯ ಮತ್ತು ಸಂವೇದನೆ ಇರುವ ಕಾರ್ಯಕರ್ತರೊಬ್ಬರು ನನ್ನನ್ನು ಪ್ರಶ್ನಿಸಿದರು. ದ.ಕನ್ನಡದ ಉಡುಪಿ ಜಿಲ್ಲೆಯಲ್ಲಿ ಈ ಪ್ರಶ್ನೆ ಉದ್ಭವಿಸುವುದಿಲ್ಲ. ಯಾರೂ ವೋಟ್ ಮಾರಾಟ ಮಾಡಬಾರದು ಅದೊಂದು ನಡವಳಿಕೆ. ನಾನು ಮಾರಾಟಕ್ಕಿಲ್ಲ ಎನ್ನುವುದು ರಾಜಕಾರಣಿಯೊಬ್ಬನಿಗೆ ಇರಬೇಕಾದ ಅತಿ ದೊಡ್ಡ ಗುಣ ಎಂದು ಹೇಳಿದರು.

  • ರಮೇಶ್ ಜಾರಕಿಹೊಳಿಗೆ ಬಂಡುಕೋರ ಎಂದ ಲಕ್ಷ್ಮಿ ಹೆಬ್ಬಾಳ್ಕರ್

    ರಮೇಶ್ ಜಾರಕಿಹೊಳಿಗೆ ಬಂಡುಕೋರ ಎಂದ ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ರಮೇಶ್ ಜಾರಕಿಹೊಳಿಯವರು ಮುಂಚೆ ನಮ್ಮ ಪಕ್ಷದಲ್ಲಿ ಇದ್ದರು. ಇಲ್ಲಿ ಬಂಡುಕೋರರಾಗಿ ಅವರಿಗೆ ಸಮಾಧಾನ ಸಿಗಲಿಲ್ಲ. ಈಗ ಅವರು ಬಿಜೆಪಿ ಪಕ್ಷಕ್ಕೆ ಹೋಗಿದ್ದು, ಅಲ್ಲಿಯೂ ಬಂಡುಕೋರ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬಿಜೆಪಿ ಪಕ್ಷ ನೋಡಿಕೊಳ್ಳುತ್ತದೆ. ನಾನು ಉತ್ತರ ಕೊಡುವುದಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.

    ರಾಯಬಾಗ ತಾಲೂಕಿನ ಹಂದಿಗುಂದದಲ್ಲಿ ಬೆಳಗಾವಿ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಮಾತನಾಡಿದರು. ಇದನ್ನೂ ಓದಿ: ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಡಬೇಕು – ರಮೇಶ್‍ಗೆ ಹೆಬ್ಬಾಳ್ಕರ್ ಟಾಂಗ್

    ಈ ಬಾರಿಯ ಚುನಾವಣೆಯಲ್ಲಿ ಮೂರು ಮಂದಿಯೂ ನಾವು ಗೆಲ್ಲಬೇಕು, ನಾವು ಗೆಲ್ಲಬೇಕು ಎಂದು ಓಡಾಡುತ್ತಿದ್ದೇವೆ. ಒಬ್ಬರು ಬಿಜೆಪಿಯಿಂದ ಓಡಾಡುತ್ತಿದ್ದಾರೆ. ಕಾಂಗ್ರೆಸ್ ನಿಂದ ನಾವು ಓಡಾಡುತ್ತಿದ್ದೇವೆ. ಪಕ್ಷೇತರವಾಗಿ ಒಬ್ಬರು ಓಡಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಥೂ ಥೂ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಮಯವಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಬಿಜೆಪಿಯಲ್ಲಿ ಬಾಯಿ ತೆಗೆದರೆ ರಾಮ ರಾಮ ಅಂತ ಹೇಳುತ್ತಾರೆ. ಒಬ್ಬ ಮಹಿಳಾ ಶಾಸಕಿ ಬಗ್ಗೆ ಹೀನವಾಗಿ ಮಾತನಾಡಿದ್ದಾರೆ. ಒಬ್ಬಳು ಶಾಸಕಿಗೆ ಕಿಮ್ಮತ್ತು ನೀಡದವರು ಮಹಿಳೆಗೆ ಗೌರವ ಕೊಡುತ್ತಾರಾ? ಇದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಮಹಿಳಾ ಮತದಾರರಿಗೆ ಬಿಟ್ಟ ವಿಚಾರ ಎಂದು ಹೇಳಿದರು. ಇದನ್ನೂ ಓದಿ: ಕೊಲ್ಹಾಪುರ ಮಹಾಲಕ್ಷ್ಮಿ ಪಾದ ಮುಟ್ಟಿ ಹೇಳ್ತೀನಿ ನಾನು ಟಿಕೆಟ್ ಬೇಡಿಲ್ಲ : ರಮೇಶ್ ಜಾರಕಿಹೊಳಿ

    ನನಗೆ ನನ್ನ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕೆನ್ನುವುದು ಒಂದೇ ಗುರಿ. ಅರ್ಜುನನ ಗುರಿ ಎಲ್ಲಿತ್ತು ಎಂದರೆ ಪಾರಿವಾಳ ಕಣ್ಣಿಗೆ ಇತ್ತು ಅನ್ನುವ ಹಾಗೆ. ನನಗೆ ಅದರ ಬಗ್ಗೆ ಕಾಮೆಂಟ್ ಮಾಡುವಷ್ಟು ಟೈಮ್ ಇಲ್ಲ, ತಲೆಯೂ ಓಡುವುದಿಲ್ಲ ಎಂದು ಉತ್ತರಿಸಿದರು.

  • ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ

    ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ

    ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯು ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆ ಕಣವಾಗಿ ಪರಿಣಾಮಿಸಿದೆ.

    ಬೆಳಗಾವಿಯ ವಿಧಾನ ಪರಿಷತ್ ಚುನಾವಣೆಯು ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ನಡುವೆ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆಯಾಗಿದೆ. ಲಖನ್ ಜಾರಕಿಹೊಳಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿನ್ನೆಲೆ ಜಿಲ್ಲಾ ರಾಜಕಾರಣದಲ್ಲಿ ಸಂಚಲನೆ ಮೂಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮಹಾಂತೇಶ್ ಕವಟಗಿಮಠ, ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನರಾಜ ಹಟ್ಟಿಹೊಳಿ ಸ್ಪರ್ಧಿಗಳಾಗಿ ನಿಂತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರನ್ನು ಗೆಲ್ಲಿಸಿ ತರುವ ಜವಾಬ್ದಾರಿ ರಮೇಶ್ ಜಾರಕಿಹೊಳಿ ಅವರ ಹೆಗಲ ಮೇಲೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲ್ಲಿಸಿ ತರುವ ಜವಾಬ್ದಾರಿ ಸತೀಶ್ ಅವರದ್ದಾಗಿದೆ. ಈ ಹಿನ್ನೆಲೆ ಇವರಿಬ್ಬರು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ತುಂಬಾ ಸುತ್ತಾಡುತ್ತಿದ್ದಾರೆ.

    ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಬೆಳಗಾವಿ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸುವ ಹೊಣೆ ಕೇವಲ ರಮೇಶ್ ಜಾರಕಿಹೊಳಿ ಹೆಗಲಿಗೆ ಬಿಟ್ರಾ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲಿಯೂ ಓಡಾಡುತ್ತಿದೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಸೋತ್ರೆ ಅದಕ್ಕೆ ರಮೇಶ್ ಜಾರಕಿಹೊಳಿ ಒಬ್ಬರೇ ಕಾರಣ ಎಂದು ಬಿಂಬಿಸಲು ವ್ಯವಸ್ಥಿತ ಸಂಚು ನಡೀತಿದ್ಯಾ ಎಂದು ಕೆಲವರು ಆರೋಪವನ್ನು ಮಾಡುತ್ತಿದ್ದಾರೆ. ಈ ರೀತಿ ಹಲವು ಚರ್ಚೆಗಳು ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್

    ಬಹುತೇಕ ಬಿಜೆಪಿ ನಾಯಕರು ಪರಿಷತ್ ಚುನಾವಣೆಯಿಂದ ದೂರ ಉಳಿದುಕೊಂಡಿದ್ದು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಜನಸ್ವರಾಜ್ ಸಮಾವೇಶ ಬಳಿಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸಚಿವೆ ಶಶಿಕಲಾ ಜೊಲ್ಲೆ ಅವರು ಒಂದೆರಡು ದಿನ ಪ್ರಚಾರ ನಡೆಸಿ ಬೆಂಗಳೂರಿಗೆ ತೆರಳಿದರು. ಇನ್ನೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಚುನಾವಣಾ ಅಖಾಡದಿಂದ ದೂರ ಉಳಿದ್ರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.

    ಸಚಿವ ಉಮೇಶ್ ಕತ್ತಿ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದು, ಈಗ ಅವರು ಸಹ ಕಾಣಿಸುತ್ತಿಲ್ಲ. ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಹ ಚುನಾವಣಾ ಉಸಾಬರಿಯಿಂದ ದೂರ ಉಳಿದ್ರಾ ಎಂಬ ಅನುಮಾನವಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇಬ್ಬರು ಬಿಜೆಪಿ ಸಂಸದರು, ಓರ್ವ ರಾಜ್ಯಸಭಾ ಸದಸ್ಯ ಇದ್ದರೂ ಬಿಜೆಪಿ ಪಾಳಯದಲ್ಲಿ ಆತಂಕ ಉಂಟಾಗಿದೆ. ಇದನ್ನೂ ಓದಿ:  ಇಂದು 400 ಗಡಿದಾಟಿದ ಕೊರೊನಾ – 6 ಸಾವು

    ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ, ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಾಹುಕಾರ್ ಪಣ ತೊಟ್ಟಿದ್ರೆ, ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸತೀಶ್ ಜಾರಕಿಹೊಳಿ ಕಸರತ್ತು ಮಾಡುತ್ತಿದ್ದಾರೆ. ಜಾರಕಿಹೊಳಿ ಸಹೋದರರ ಮಧ್ಯೆ ಗೆಲ್ಲೋರು ಯಾರು? ಸೋಲೋರು ಯಾರು? ಅನ್ನೋದೇ ಸಸ್ಪೆನ್ಸ್.

  • ವಿಧಾನ ಪರಿಷತ್ ಚುನಾವಣೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಕ್ಕಟ್ಟು – ಕಾಂಗ್ರೆಸ್‍ನಿಂದ ಟಿಕೆಟ್ ಘೋಷಣೆ ವಿಳಂಬ

    ವಿಧಾನ ಪರಿಷತ್ ಚುನಾವಣೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಕ್ಕಟ್ಟು – ಕಾಂಗ್ರೆಸ್‍ನಿಂದ ಟಿಕೆಟ್ ಘೋಷಣೆ ವಿಳಂಬ

    ನವದೆಹಲಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಇಕ್ಕಟ್ಟಿನಲ್ಲಿ ಸಿಲುಕಿದೆ. ಕೆಲವು ಜಿಲ್ಲೆಗಳಲ್ಲಿನ ಗೊಂದಲದ ಹಿನ್ನಲೆ ಅಭ್ಯರ್ಥಿ ಘೋಷಣೆ ವಿಳಂಬವಾಗುತ್ತಿದೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಳೆದ ಶುಕ್ರವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಮತ್ತು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭೇಟಿಯಾಗಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಿದ್ದರು. ಇದನ್ನೂ ಓದಿ: ಬೊಮ್ಮಾಯಿ ನಿಮ್ಮ ಹನಿಮೂನ್ ಕಾಲ ಮುಗಿದಿದೆ: ಸಿದ್ದರಾಮಯ್ಯ

     

    ಕೋಲಾರ, ಬಳ್ಳಾರಿ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲವಾದ ಹಿನ್ನಲೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುತ್ತಿಲ್ಲ. ಒಂದೇ ಹಂತದಲ್ಲಿ ಪಟ್ಟಿ ಬಿಡುಗಡೆ ಲೆಕ್ಕಚಾರದಲ್ಲಿರುವ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡದೇ ತಡೆ ಹಿಡಿದಿದೆ. ಈ ಸಂಬಂಧ ಭಾನುವಾರ ರಾತ್ರಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ರಣದೀಪ್ ಸುರ್ಜೆವಾಲ ಭೇಟಿಯಾಗಿ ಚರ್ಚಿಸಿದ್ದಾರೆ. ಇದನ್ನೂ ಓದಿ: ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ

    ನಾಳೆ ನಾಮಪತ್ರಕ್ಕೆ ಕೊನೆಯ ದಿನಾಂಕವಾಗಿರುವ ಹಿನ್ನೆಲೆ ಇಂದು ಸಂಜೆಯ ವೇಳೆಗೆ ಪಟ್ಟಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಮೂಲಗಳ ಪ್ರಕಾರ ಬೆಂಗಳೂರು ಗ್ರಾಮಾಂತರದಿಂದ ಎಸ್.ರವಿ, ಶಿವಮೊಗ್ಗದಿಂದ ಪ್ರಸನ್ನ ಕುಮಾರ್, ಚಿಕ್ಕಮಗಳೂರುನಿಂದ ಗಾಯಿತ್ರಿ ಶಾಂತೇಗೌಡ, ತುಮಕೂರುನಿಂದ ರಾಜೇಂದ್ರ, ಚಿತ್ರದುರ್ಗ ದಾವಣಗೆರೆಯಿಂದ ಸೋಮಶೇಖರ್, ಮಂಡ್ಯದಿಂದ ದಿನೇಶ್ ಗೂಳಿ ಗೌಡ, ಕೊಡಗುನಿಂದ ಮಂಥರ್ ಗೌಡ, ಹಾಸನದಿಂದ ಶಂಕರ್, ಕೊಪ್ಪಳ – ರಾಯಚೂರಿನಿಂದ ಶರಣೇಗೌಡ ಬಯ್ಯಾಪುರ, ಧಾರವಾಡದಿಂದ (ದ್ವಿ ಸದಸ್ಯ ಸ್ಥಾನ) ಸಲೀಂ ಅಹಮ್ಮದ್, ಬೆಳಗಾವಿಯಿಂದ (ದ್ವಿ ಸದಸ್ಯ ಸ್ಥಾನ)ಚನ್ನರಾಜು, ಗದಗನಿಂದ ಆರ್.ಎಸ್ ಪಾಟೀಲ್, ಉತ್ತರ ಕನ್ನಡದಿಂದ ಭೀಮಣ್ಣ ನಾಯಕ ಹೆಸರು ಬಹುತೇಕ ಖಚಿತವಾಗಿದೆ.

  • ಮೈಸೂರು, ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ: ವಾಟಾಳ್ ನಾಗರಾಜ್

    ಮೈಸೂರು, ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ: ವಾಟಾಳ್ ನಾಗರಾಜ್

    ಚಾಮರಾಜನಗರ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.

    ಚಾಮರಾಜನಗರದಲ್ಲಿ ಮಾತನಾಡಿದ ಅವರು, ನನಗೆ ಈ ಬಾರಿ ಕಾಂಗ್ರೆಸ್ ಬೆಂಬಲ ನೀಡಬೇಕು, ಲೋಕಸಭೆ ಹಾಗೂ ರಾಜ್ಯಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದೇನೆ. ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನನ್ನು ಕಾಂಗ್ರೆಸ್ ಬೆಂಬಲಿಸಬೇಕು. ಈ ಬಗ್ಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104ರ ವೃದ್ಧೆಯ ಸ್ಫೂರ್ತಿದಾಯಕ ಕಥೆ

    ವಿಧಾನ ಪರಿಷತ್‍ನಲ್ಲಿ ಪ್ರಜಾ ಪ್ರಭುತ್ವ ಉಳಿಯಬೇಕಿದೆ. ವಿಧಾನ ಪರಿಷತ್‍ಗೆ ಉತ್ತಮವಾಗಿ ಮಾತನಾಡುವವರು ಆಯ್ಕೆಯಾಗಬೇಕಾಗಿದೆ. ರಾಜ್ಯದ ಜ್ವಲಂತ ಸಮಸ್ಯೆಗಳಗಳ ಬಗ್ಗೆ ಚರ್ಚೆಯಾಗಬೇಕಿದೆ. ಹೀಗಾಗಿ ಕಾಂಗ್ರೆಸ್ ತಮಗೆ ಸಂಪೂರ್ಣ ಬೆಂಬಲ ಕೊಡಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ