Tag: vidhan parishad

  • ಪರಿಷತ್‌ಗೆ ರಮೇಶ್‌ ಬಾಬು ನಾಮನಿರ್ದೇಶನ ಮಾಡಬೇಡಿ – ರಾಜ್ಯಪಾಲರಿಗೆ ದೂರು

    ಪರಿಷತ್‌ಗೆ ರಮೇಶ್‌ ಬಾಬು ನಾಮನಿರ್ದೇಶನ ಮಾಡಬೇಡಿ – ರಾಜ್ಯಪಾಲರಿಗೆ ದೂರು

    ಬೆಂಗಳೂರು: ರಮೇಶ್ ಬಾಬು (Ramesh Babu) ಅವರನ್ನು ವಿಧಾನಪರಿಷತ್ ಸದಸ್ಯ ಸ್ಥಾನ ನಾಮನಿರ್ದೇಶನ ಮಾಡದಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಮತ್ತು ಜಾರಿ ನಿರ್ದೇಶನಾಲಯಕ್ಕೆ (ED) ದೂರು ನೀಡಲಾಗಿದೆ.

    ಸಾಮಾಜಿಕ ಹೋರಾಟಗಾರ ತೇಜಸ್ ಗೌಡ (Tejas Gowda) ಅವರು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ಸದಸ್ಯ ಸ್ಥಾನ ನೀಡಬಾರದು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಸಮುದಾಯದ ದಯಾನಂದ್‌ ಮೇಲೆ ಏಕೆ ಸಿಎಂಗೆ ಕೋಪ – ಪ್ರತಾಪ್‌ ಸಿಂಹ ಪ್ರಶ್ನೆ

    ದೂರಿನಲ್ಲಿ ಏನಿದೆ?
    ಭಾರತದ ಸಂವಿಧಾನದ ವಿಧಿ 171(5) ರ ಅಡಿಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಾಗ ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರಿ ಚಳುವಳಿ ಅಥವಾ ಸಾಮಾಜಿಕ ಸೇವೆಯಲ್ಲಿ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರುವ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಾಗುತ್ತದೆ.

    ರಮೇಶ್ ಬಾಬು ಇದಕ್ಕೆ ಹೊರತಾಗಿ ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಯಾಗಿದ್ದಾರೆ. ಉತ್ತರಹಳ್ಳಿಯ ಉತ್ತರಿ ಎಂಬ ಗ್ರಾಮದಲ್ಲಿ ಭೂಕಬಳಿಕೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.‌ ಹೀಗಿರುವ ವ್ಯಕ್ತಿಗೆ ಸದಸ್ಯ ಸ್ಥಾನ ಕೊಟ್ಟರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರ ದುರುಪಯೋಗವಾಗುವ ಸಾಧ್ಯತೆಯಿದೆ.  ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಸೊನ್ನೆ ಅಂಕ: ಸಿದ್ದರಾಮಯ್ಯ

    ಯಾವುದೇ ಕಾರಣಕ್ಕೂ ಈ ನಾಮನಿರ್ದೇಶನ ಮಾನ್ಯ ಮಾಡದಂತೆ 100ಕ್ಕೂ ಹೆಚ್ಚು ಪುಟಗಳ ದಾಖಲೆಗಳೊಂದಿಗೆ ತೇಜಸ್ ಗೌಡ ರಾಜ್ಯಪಾಲರು ಹಾಗು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.

  • ಪರಿಷತ್‌ಗೆ ಶಿಫಾರಸ್ಸಾಗಿದ್ದ 4 ಹೆಸರುಗಳಿಗೆ ಕೊನೆ ಕ್ಷಣದಲ್ಲಿ ಹೈಕಮಾಂಡ್‌ ಬ್ರೇಕ್‌!

    ಪರಿಷತ್‌ಗೆ ಶಿಫಾರಸ್ಸಾಗಿದ್ದ 4 ಹೆಸರುಗಳಿಗೆ ಕೊನೆ ಕ್ಷಣದಲ್ಲಿ ಹೈಕಮಾಂಡ್‌ ಬ್ರೇಕ್‌!

    ಬೆಂಗಳೂರು: ವಿಧಾನ ಪರಿಷತ್‌ಗೆ (Vidhan Parishad) ಶಿಫಾರಸ್ಸಾಗಿದ್ದ 4 ಹೆಸರುಗಳಿಗೆ ಕಾಂಗ್ರೆಸ್‌ ಹೈಕಮಾಂಡ್‌ (High Command) ಕೊನೆ ಕ್ಷಣದಲ್ಲಿ ತಾತ್ಕಾಲಿಕ ತಡೆಯನ್ನು ವಿಧಿಸಿದೆ.

    ರಾಜ್ಯ ವಿಧಾನ ಪರಿಷತ್‌ನ ನಾಲ್ಕು ಖಾಲಿ ಸ್ಥಾನಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (KPCC) ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್‌ ಬಾಬು, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು, ದಲಿತ ಮುಖಂಡ ಡಿ.ಜಿ. ಸಾಗರ್‌ ಹಾಗೂ ರಾಜ್ಯ ಸರಕಾರದ ಅನಿವಾಸಿ ಭಾರತೀಯ ಕೋಶದ (NRI) ಉಪಾಧ್ಯಕ್ಷೆ ಆರತಿ ಕೃಷ್ಣ ಅವರನ್ನು ನಾಮನಿರ್ದೇಶನ ಮಾಡಲು ಹೈಕಮಾಂಡ್‌ ಶಿಫಾರಸು ಮಾಡಿತ್ತು.

    ಹೈಕಮಾಂಡ್ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರಿಗೆ ಕಳುಹಿಸಲು ನಾಲ್ವರ ಹೆಸರಿದ್ದ ಶಿಫಾರಸ್ಸು ಪತ್ರಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಹಿ ಹಾಕಿದ್ದರು.

    ಈಗ ಹೈಕಮಾಂಡ್‌ ದಿಢೀರ್‌ ಮಧ್ಯಪ್ರವೇಶಿಸಿ ರಾಜ್ಯಪಾಲರಿಗೆ ಕಳುಹಿಸದಂತೆ ಸಿಎಂ ಸಿದ್ದರಾಮಯ್ಯನವರಿಗೆ ಸೂಚಿಸಿದೆ. ರಾಜ್ಯದ ಕಾಂಗ್ರೆಸ್ ನಾಯಕರ ತೀವ್ರ ಒತ್ತಡದ ಹಿನ್ನಲೆಯಲ್ಲಿ ಕಡೆಗಳಿಗೆಯಲ್ಲಿ ಎಐಸಿಸಿಯೇ ತಡೆ ಹಿಡಿಯುವಂತೆ ಸೂಚಿಸಿದೆ.

    ನಾನಾ ಕ್ಷೇತ್ರಗಳ ಸಾಧಕರ ಕೋಟಾದಲ್ಲಿ ನಾಮನಿರ್ದೇಶನಕ್ಕೆ ಹಲವು ಮಂದಿ ಆಕಾಂಕ್ಷಿಗಳಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಮೂಲಕ ಸಂಭಾವ್ಯರ ಪಟ್ಟಿ ಪಡೆದುಕೊಂಡಿದ್ದ ಎಐಸಿಸಿ ವರಿಷ್ಠ ನಾಯಕರು ಈ ನಾಲ್ವರನ್ನು ಅಂತಿಮಗೊಳಿಸಿತ್ತು. ಈ ನಾಲ್ವರಲ್ಲಿ ರಮೇಶ್‌ ಬಾಬು ಈ ಹಿಂದೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು.

    ಪರಿಷತ್‌ ನಾಮನಿರ್ದೇಶನಕ್ಕೆ ಅವಕಾಶ ಪಡೆದವರಲ್ಲಿ ರಮೇಶ್‌ ಬಾಬು ಮತ್ತು ದಿನೇಶ್‌ ಅಮೀನ್‌ಮಟ್ಟು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೆ ಡಿ.ಜಿ. ಸಾಗರ್‌ ಪರಿಶಿಷ್ಟ ಜಾತಿಗೆ ಸೇರಿದ್ದರೆ, ಆರತಿ ಕೃಷ್ಣ ಒಕ್ಕಲಿಗ ಸಮಾಜದವರಾಗಿದ್ದಾರೆ.

  • 3 ವರ್ಷದ ಹಿಂದೆ ನಡೆದ ಪರಿಷತ್ ಚುನಾವಣೆ | ಕೈ ಅಭ್ಯರ್ಥಿಗೆ 6 ಮತಗಳ ಸೋಲು – ಮರು ಮತ ಎಣಿಕೆಗೆ ಹೈಕೋರ್ಟ್ ಸೂಚನೆ

    3 ವರ್ಷದ ಹಿಂದೆ ನಡೆದ ಪರಿಷತ್ ಚುನಾವಣೆ | ಕೈ ಅಭ್ಯರ್ಥಿಗೆ 6 ಮತಗಳ ಸೋಲು – ಮರು ಮತ ಎಣಿಕೆಗೆ ಹೈಕೋರ್ಟ್ ಸೂಚನೆ

    ಚಿಕ್ಕಮಗಳೂರು: ಮೂರು ವರ್ಷಗಳ ಹಿಂದೆ ವಿಧಾನ ಪರಿಷತ್ ಚುನಾವಣೆಯಲ್ಲಿ (Vidhana Parishad Election) ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡರನ್ನು (Gayathri Shanthegowda) 6 ಮತಗಳಿಂದ ಸೋಲಿಸಿ ಉಪ ಸಭಾಪತಿ ಸ್ಥಾನ ಅಲಂಕರಿಸಿದ್ದ ಎಂ.ಕೆ.ಪ್ರಾಣೇಶ್‍ಗೆ (MK Pranesh) ಸಂಕಷ್ಟ ಎದುರಾಗಿದ್ದು ಹೈಕೋರ್ಟ್ (High Court) ಮರು ಮತ ಎಣಿಕೆಗೆ ಆದೇಶ ನೀಡಿದೆ.

    ಮೂರು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಎಂ.ಕೆ.ಪ್ರಾಣೇಶ್, ಕಾಂಗ್ರೆಸ್ಸಿನಿಂದ ಗಾಯತ್ರಿ ಶಾಂತೇಗೌಡ ಸ್ಪರ್ಧಿಸಿದ್ದರು. ಆದರೆ ತೀವ್ರ ಹಣಾಹಣಿಯಲ್ಲಿ ಪ್ರಾಣೇಶ್ ಕಾಂಗ್ರೆಸ್ಸಿನ ಗಾಯತ್ರಿ ಶಾಂತೇಗೌಡರನ್ನ 6 ಮತಗಳಿಂದ ಸೋಲಿಸಿದ್ದರು.

    ಈ ಚುನಾವಣೆಯಲ್ಲಿ ಮತದಾನ ಮಾಡಿದ್ದ 12 ನಾಮ ನಿರ್ದೇಶಿತ ಸದಸ್ಯರ ಮತವನ್ನು ಅಸಿಂಧು ಮಾಡಬೇಕೆಂದು ಗಾಯತ್ರಿ ಶಾಂತೇಗೌಡ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಸೋಲು-ಗೆಲುವು ಕೋರ್ಟ್ ಮೇಟ್ಟಿಲೇರಿ ಸುಪ್ರೀಂ ಕೋರ್ಟ್ ಕದ ಕೂಡ ಬಡಿದಿತ್ತು. ಸುಪ್ರೀಂ ಕೋರ್ಟ್ (Supreme Court) ಕೂಡ ಸೋಲು-ಗೆಲುವನ್ನು ಹೈಕೋರ್ಟಿನಲ್ಲಿ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿತ್ತು.  ಇದನ್ನೂ ಓದಿ: Kumbh Mela Stampede | ಇಂದು ಸಂಜೆ ದೆಹಲಿಯಿಂದ ಬೆಳಗಾವಿಗೆ ಬರಲಿದೆ ನಾಲ್ವರ ಶವ

    ಸುಪ್ರೀಂ ಸೂಚನೆಯ ನಂತರ ಸುದೀರ್ಘ ವಿಚಾರಣೆಯ ಬಳಿಕ ಹೈಕೋರ್ಟ್ 12 ಜನ ಸರ್ಕಾರದ ನಾಮ ನಿರ್ದೇಶಿತ ಸದಸ್ಯರ ಮತವನ್ನ ಬಿಟ್ಟು ಮರು ಮತ ಏಣಿಕೆ ಮಾಡಿ ಮಾರ್ಚ್ 7ರ ಒಳಗೆ ಹೈಕೋರ್ಟಿಗೆ ವರದಿ ನೀಡುವಂತೆ ಆದೇಶಿಸಿದೆ. ಮರು ಮತ ಎಣಿಕೆ ನಡೆದರೆ ಗಾಯತ್ರಿ ಶಾಂತೇಗೌಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

    ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಹೋಗಲಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

     

  • ಹೆಬ್ಬಾಳ್ಕರ್‌ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ರಾ?

    ಹೆಬ್ಬಾಳ್ಕರ್‌ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ರಾ?

    ಬೆಳಗಾವಿ: ತನ್ನ ವಿರುದ್ಧ ಸಿಟಿ ರವಿ (CT Ravi) ಅಸಂವಿಧಾನಿಕ ಪದವನ್ನು ಬಳಸಿ ನಿಂದಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಗಂಭೀರ ಆರೋಪ ಮಾಡಿದ್ದಾರೆ.

    ರಾಜ್ಯಸಭೆಯಲ್ಲಿ ಅಮಿತ್‌ ಶಾ (Amit Shah) ಹೇಳಿಕೆ ಖಂಡಿಸಿ ಪರಿಷತ್‌ನಲ್ಲಿ (Vidhan Parishad) ಇಂದು ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಾತಿನ ಚಕಮಕಿ ನಡೆಯವಾಗ ನನ್ನ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದವನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಭಾಪತಿ ಕಲಾಪ ಮುಂದೂಡಿದ ವೇಳೆ  ಅ ಪದ ಬಳಕೆ ಮಾಡಿದ್ದಾರೆ. ಹತ್ತು ಬಾರಿ ಸಿಟಿ ರವಿ ಆ ಪದವನ್ನು ಬಳಕೆ ಮಾಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ದೂರಿದರು. ಹೆಬ್ಬಾಳ್ಕರ್ ಮಾತಿಗೆ ಕಾಂಗ್ರೆಸ್ ಸದಸ್ಯರು ಧ್ವನಿ ಗೂಡಿಸಿದರು. ನಂತರ ಸ್ಪೀಕರ್‌ ಹೊರಟ್ಟಿ ಕಚೇರಿಗೆ ತೆರಳಿದ ಲಕ್ಷ್ಮಿ ಹೆಬ್ಬಾಳ್ಕರ್‌ ಸಿಟಿ ರವಿ ಸದಸ್ಯತ್ವ ರದ್ದು ಮಾಡುವಂತೆ ದೂರು ನೀಡಿದರು. ದೂರು ಸ್ವೀಕರಿಸಿದ ಸ್ಪೀಕರ್‌ ವಿಡಿಯೋ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಸಿಟಿ ರವಿ, ನಾನೆಲ್ಲೂ ಅಶ್ಲೀಲ ಪದವನ್ನು ಬಳಸಿಲ್ಲ. ವಿಡಿಯೋ ಪರಿಶೀಲನೆ ಬಳಿಕ ಪ್ರತಿಕ್ರಿಯೆ ಕೊಡುತ್ತೇನೆ. ಅಂಬೇಡ್ಕರ್‌ಗೆ ಕಾಂಗ್ರೆಸ್ ಹೇಗೆ ಅನ್ಯಾಯ ಮಾಡಿತು ಎಂದು ಹೇಳಿದ್ದೆ. ನಾನು ಯಾರಿಗೂ ಯಾವ ಪದವನ್ನೂ ಬಳಸಿಲ್ಲ ಎಂದು ತಿಳಿಸಿದರು.

     

  • ಪರಿಷತ್‌ ವಿರೋಧ ಪಕ್ಷದ ನಾಯಕನಾಗಿ ಛಲವಾದಿ‌ ನಾರಾಯಣಸ್ವಾಮಿ ಆಯ್ಕೆ

    ಪರಿಷತ್‌ ವಿರೋಧ ಪಕ್ಷದ ನಾಯಕನಾಗಿ ಛಲವಾದಿ‌ ನಾರಾಯಣಸ್ವಾಮಿ ಆಯ್ಕೆ

    ಬೆಂಗಳೂರು: ವಿಧಾನ ಪರಿಷತ್ತಿನ (Vidhan Parishad) ವಿರೋಧ ಪಕ್ಷದ ನಾಯಕರಾಗಿ ಛಲವಾದಿ‌ ನಾರಾಯಣಸ್ವಾಮಿ (Chalavadi Narayanaswamy) ಆಯ್ಕೆ ಆಗಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರು ಛಲವಾದಿ‌ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದ್ದಾರೆ.

     

    ಪೋಸ್ಟ್‌ನಲ್ಲಿ ಏನಿದೆ?
    ಪರಿಶಿಷ್ಟ ಸಮುದಾಯಗಳ ಹಾಗೂ ಸಾಂವಿಧಾನಿಕ ಹಕ್ಕುಗಳ ಪರ ನಿರಂತರ ದನಿಯಾಗಿ ನಿಂತು ಹೋರಾಟ ನಡೆಸಿಕೊಂಡು ಬಂದ ಹಿನ್ನಲೆಯ ಛಲವಾದಿ ನಾರಾಯಣ ಸ್ವಾಮಿಯವರ ನಾಯಕತ್ವ ಹಾಗೂ ಪಕ್ಷ ಬದ್ಧತೆಯನ್ನು ಗುರುತಿಸಿ ವಿಧಾನ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದ ಬಿಜೆಪಿ ವರಿಷ್ಟರು ಇದೀಗ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ ‘ಸಾಮಾಜಿಕ ನ್ಯಾಯ’ ನಮ್ಮ ಪಕ್ಷದ ಆದ್ಯತೆ ಎಂಬ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿ – ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚನೆ

    ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಬಳಕೆಯಾಗಬೇಕಿದ್ದ ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರೂ. ಗುಳುಂ, ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಾಗಿದ್ದ ಸಾವಿರಾರು ಕೋಟಿ ರೂಪಾಯಿಗಳು ಇತರ ಯೋಜನೆಗಳಿಗಾಗಿ ನಿಯಮ ಉಲ್ಲಂಘಿಸಿ ಬಳಕೆ, ಭ್ರಷ್ಟಾಚಾರಗಳ ಸರಣೀ ಸರಮಾಲೆ, ಸ್ವಜನ ಪಕ್ಷಪಾತ ಹಾಗೂ ಮುಡಾ ಹಗರಣಗಳ ವ್ಯೂಹದಲ್ಲಿ ಸಿಲುಕಿ ಅಭಿವೃದ್ಧಿ ಶೂನ್ಯ ಆಡಳಿತದಿಂದ ಜನಾಕ್ರೋಶ ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತಲು ನಾರಾಯಣ ಸ್ವಾಮಿಯವರನ್ನು ಆಯ್ಕೆ ಮಾಡಿರುವುದು ಸಮಯೋಚಿತ ನಿರ್ಧಾರವಾಗಿದೆ.

    ಮಾನ್ಯ ಛಲವಾದಿ ನಾರಾಯಣ ಸ್ವಾಮಿಯವರನ್ನು ಆತ್ಮೀಯವಾಗಿ ಅಭಿನಂಧಿಸಿ ಅವರನ್ನು ಆಯ್ಕೆಮಾಡಿದ ಪಕ್ಷದ ವರಿಷ್ಠ ಮಂಡಳಿಗೆ ಕೃತಜ್ಞತೆ ಸಲ್ಲಿಸುವೆ.

  • ವಿಧಾನ ಪರಿಷತ್‌ ಚುನಾವಣೆ – ಸಿ.ಟಿ.ರವಿ ಸೇರಿ ಮೂವರಿಗೆ ಬಿಜೆಪಿ ಟಿಕೆಟ್‌

    ವಿಧಾನ ಪರಿಷತ್‌ ಚುನಾವಣೆ – ಸಿ.ಟಿ.ರವಿ ಸೇರಿ ಮೂವರಿಗೆ ಬಿಜೆಪಿ ಟಿಕೆಟ್‌

    – ಸುಮಲತಾ ಸೇರಿ ಹಲವು ಪ್ರಮುಖರಿಗೆ ಕೈ ತಪ್ಪಿದ ಟಿಕೆಟ್‌

    ಬೆಂಗಳೂರು: ಕರ್ನಾಟಕ ವಿಧಾನ ಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ (Vidhan Parishad Elections) ಹಿನ್ನೆಲೆಯಲ್ಲಿ ಬಿಜೆಪಿ ಸಿ.ಟಿ ರವಿ ಸೇರಿ ಮೂವರು ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ.

    ಪರಿಷತ್‌ ಸ್ಥಾನಕ್ಕೆ ಮಾಜಿ ಸಚಿವ ಸಿ.ಟಿ ರವಿ (CT Ravi), ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಹಾಗೂ ಮಾಜಿ ಶಾಸಕ ಎಂ.ಜಿ ಮುಳೆ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಸೋಮವಾರ (ಜೂ. 3) ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾದ ಹಿನ್ನೆಲೆಯಲ್ಲಿ ಇಂದು ಅಭ್ಯರ್ಥಿಗಳ (BJP Candidates) ಪಟ್ಟಿ ಬಿಡುಗಡೆ ಮಾಡಿದೆ.

    ಹೈಕಮಾಂಡ್‌ ಕೋಟಾದಿಂದ ಸಿ.ಟಿ ರವಿ, ರಾಜ್ಯ ಬಿಜೆಪಿ ಕೋಟಾದಿಂದ ಎನ್. ರವಿಕುಮಾರ್ ಹಾಗೂ ಆರ್‌ಎಸ್‌ಎಸ್‌ ಕೋಟಾದ ಅಡಿಯಲ್ಲಿ ಮಾರುತಿರಾವ್ ಗೋವಿಂದರಾವ್ ಮುಳೆ (ಎಂ.ಜಿ ಮುಳೆ) ಅವರಿಗೆ ಟಿಕೆಟ್‌ ನೀಡಲಾಗಿದೆ. ಇದನ್ನೂ ಓದಿ: ವಿಧಾನಸಭೆ: ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ – 60ರ ಪೈಕಿ 47 ಸ್ಥಾನಗಳಲ್ಲಿ ಮುನ್ನಡೆ

    ಮಾಜಿ ಶಾಸಕರೂ ಆಗಿರುವ ಎಂ.ಜಿ ಮುಳೆ ಮರಾಠ ಸಮುದಾಯದ ಪ್ರಭಾವಿ ನಾಯಕರೂ ಆಗಿದ್ದಾರೆ. ಈ ಮೊದಲು ಜೆಡಿಎಸ್‌ನಲ್ಲಿ ಶಾಸಕರಾಗಿದ್ದ ಮುಳೆ ಕಳೆದ ಬಸವಕಲ್ಯಾಣ ಉಪಚುನಾವಣೆ ವೇಳೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ ಬೆನ್ನಲ್ಲೇ ಸಾದಲಮ್ಮ ದೇವಿಯ ಮೊರೆ ಹೋದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ

    ಸುಮಲತಾಗೆ ಟಿಕೆಟ್‌ ಮಿಸ್‌:
    ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಗೊಂಡ ಸಂಸದೆ ಸುಮಲತಾ ಅವರಿಗೆ ಪರಿಷತ್‌ನಲ್ಲಿ ಟಿಕೆಟ್‌ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿತ್ತು. ಆದ್ರೆ ಕೊನೇ ಕ್ಷಣದಲ್ಲಿ ಟಿಕೆಟ್‌ ಕೈತಪ್ಪಿದೆ. ಇದರೊಂದಿಗೆ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಎನ್.ಮಹೇಶ್ ಅವರಿಗೂ ಟಿಕೆಟ್‌ ಕೈತಪ್ಪಿದೆ.

  • ಪಕ್ಷದ ಹಿರಿಯರ ಸಲಹೆ ಕೇಳ್ಬೇಕು: ಸಿಎಂ, ಡಿಸಿಎಂ ವಿರುದ್ಧ ಪರಂ ಅಸಮಾಧಾನ

    ಪಕ್ಷದ ಹಿರಿಯರ ಸಲಹೆ ಕೇಳ್ಬೇಕು: ಸಿಎಂ, ಡಿಸಿಎಂ ವಿರುದ್ಧ ಪರಂ ಅಸಮಾಧಾನ

    ಬೆಂಗಳೂರು: ವಿಧಾನ ಪರಿಷತ್ (Vidhan Parishad) ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸಿಎಂ , ಡಿಸಿಎಂ ವಿರುದ್ಧ ಜಿ.ಪರಮೇಶ್ವರ್ (G Parameshwar) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಬ್ಬರೇ ತೀರ್ಮಾನ ಮಾಡಿದರೆ ಸರಿಯಾಗುವುದಿಲ್ಲ. ಪಕ್ಷದ ಹಿರಿಯ ನಾಯಕರ ಸಲಹೆ, ಅಭಿಪ್ರಾಯಗಳನ್ನೂ ಕೇಳಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರು ಹಿರಿಯರು, ಅನುಭವಿ ನಾಯಕರು ಇದ್ದಾರೆ ಅವರ ಜೊತೆ ಚರ್ಚೆ ಒಳ್ಳೆಯದು. ಪಕ್ಷದಲ್ಲಿ ಅನೇಕ ವರ್ಷ ದುಡಿದ ನಾಯಕರ ಸಲಹೆ ಪಡೆಯಬೇಕು. ಜಾತಿವಾರು, ಪ್ರಾದೇಶಿಕವಾರು, ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡಬೇಕು ಎಂದು ಹೇಳಿದರು.

    ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಅದು ಪಕ್ಷದ ತೀರ್ಮಾನವಾಗಿದ್ದು ಹೈಕಮಾಂಡ್ ಎಲ್ಲವನ್ನು ನೋಡಿಕೊಳ್ಳುತ್ತದೆ. ಅದನ್ನು ಶಿವಕುಮಾರ್ (DK Shivakumar) ಮಾಡುವುದಿಲ್ಲ. ಅವರೇ ಇರಲಿ ಅಂದ್ರೆ ಅವರೇ ಇರುತ್ತಾರೆ. ಬೇರೆಯವರು ಬರಲಿ ಅಂದರೆ ಬೇರೆಯವರು ಬರುತ್ತಾರೆ ಎಂದು ಮಾರ್ಮಿಕವಾಗಿ ಟಾಂಗ್ ಕೊಟ್ಟರು.  ಇದನ್ನೂ ಓದಿ: ದೆಹಲಿಯಿಂದ ವಾರಣಾಸಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ 

    ಸಚಿವರಿಗೆ ಕೆಪಿಸಿಸಿ ಅಧ್ಯಕ್ಷರ ಸೂಚನೆ ವಿಚಾರವಾಗಿ ಮಾತನಾಡಿದ ಪರಂ, ನಾನು ಎಂಟು ವರ್ಷ ಅದೇ ಕೆಲಸ ಮಾಡಿದ್ದೇನೆ‌. ಇದು ಹೊಸದೇನಲ್ಲ. ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಪ್ರತಿಯೊಬ್ಬ ಸಚಿವರು ಭೇಟಿ ಕೊಡುತ್ತಿದ್ದರು. ಇದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವು ಹೌದು. ಅದಕ್ಕೆ ಅಧ್ಯಕ್ಷರು ಗಮನಿಸಿ ಸೂಚನೆ ಕೊಟ್ಟಿರಬಹುದು ಎಂದರು.

     

  • ಪರಿಷತ್‌ನಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಗದ್ದಲ – ಕಾಂಗ್ರೆಸ್‌ ಸರ್ಕಾರ ವಜಾಕ್ಕೆ ಬಿಜೆಪಿ ಒತ್ತಾಯ

    ಪರಿಷತ್‌ನಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಗದ್ದಲ – ಕಾಂಗ್ರೆಸ್‌ ಸರ್ಕಾರ ವಜಾಕ್ಕೆ ಬಿಜೆಪಿ ಒತ್ತಾಯ

    ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆ ಕೂಗಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರ ವಿರುದ್ಧ ವಿಪಕ್ಷಗಳು ಕಿಡಿಕಾರಿ ಸದನದಲ್ಲಿ ಗದ್ದಲ ಸೃಷ್ಟಿಸಿವೆ.

    ಮೊದಲು ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ‘ಪಾಕಿಸ್ತಾನ ಜಿಂದಾಬಾದ್’‌ ಘೋಷಣೆ ವಿಷಯ ಪ್ರಸ್ತಾಪಿಸಿದರು. ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಪೂಜಾರಿ, ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕೋಟಾ ಮಾತಿಗೆ ಕಾಂಗ್ರೆಸ್‌ ನಾಯಕರು ವಿರೋಧ ವ್ಯಕ್ತಪಡಿಸಿದರು. ಈ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಮತ್ತೆ ತಿರುಗೇಟು ಕೊಟ್ಟ ಕೋಟಾ, ಇವತ್ತು ಪಾಕಿಸ್ತಾನ ಪರ ಘೋಷಣೆ ಕೂಗ್ತಾರೆ. ನಾಳೆ ವಿಧಾನಸೌಧಕ್ಕೆ ಬಾಂಬ್‌ ಹಾಕ್ತಾರೆ. ಅದನ್ನೂ ಸಮರ್ಥಿಸಿಕೊಳ್ಳುತ್ತೀರಾ ಎಂದು ‘ಕೈ’ ನಾಯಕರ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ರೆ ಕಾನೂನು ಕ್ರಮ: ಜಿ.ಪರಮೇಶ್ವರ್‌

    ಹೆಚ್‌.ಕೆ.ಪಾಟೀಲ್‌ ಮಾತನಾಡಿ, ನಾನು ಎರಡು-ಮೂರು ಚಾನಲ್‌ ವರದಿ ನೋಡಿದ್ದೇನೆ. ವೀಡಿಯೋ ಪರಿಶೀಲನೆ ಮಾಡಿದ್ದೇನೆ. ನಾನು ಕೇಳಿದ ವೀಡಿಯೋದಲ್ಲಿ ಪಾಕಿಸ್ತಾನ ಘೋಷಣೆ ಕೂಗಿಲ್ಲ ಎಂದು ಸಮರ್ಥಿಸಿಕೊಂಡರು. ಈ ವೇಳೆ ಬಿಜೆಪಿ ಕೇಶವ್‌ ಪ್ರಸಾದ್‌ ಮಧ್ಯೆ ಪ್ರವೇಶಿಸಿ, ಸಚಿವರಿಗೆ ಕಿವುಡು ಇರಬೇಕು ಎಂದು ಟೀಕಿಸಿದರು. ಇದರಿಂದ ಬಿಜೆಪಿ-ಕಾಂಗ್ರೆಸ್‌ ಸದಸ್ಯರ ನಡುವೆ ಗಲಾಟೆ ನಡೆಯಿತು.

    ಮತ್ತೆ ಹೆಚ್‌.ಕೆ.ಪಾಟೀಲ್‌ ಮಾತನಾಡಿ, ನನಗೆ ಆ ರೀತಿ ಏನು ಕೇಳಿಲ್ಲ. ಈಗಾಗಲೇ ಬಿಜೆಪಿ ದೂರು ಕೊಟ್ಟಿದೆ. ಕಾನೂನು ಪ್ರಕಾರ ತನಿಖೆ ಮಾಡ್ತೀವಿ ಎಂದರು. ಸಚಿವರ ಮಾತಿಗೆ ಪೂಜಾರಿ ಕಿಡಿಕಾರಿದರು. ನಾಚಿಕೆ ಆಗಬೇಕು ಸರ್ಕಾರಕ್ಕೆ. ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂದರೆ ನಾಚಿಕೆ ಆಗಬೇಕು. ಸಚಿವರ ಉತ್ತರಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಆರೋಪ; ಎಫ್‌ಎಸ್‌ಎಲ್‌ಗೆ ವೀಡಿಯೋ ಕಳುಹಿಸಲು ಪೊಲೀಸರ ತಯಾರಿ

    ಈ ವೇಳೆ ಮಾತನಾಡಿದ ಬಿ.ಕೆ.ಹರಿಪ್ರಸಾದ್‌, ಬಿರಿಯಾನಿ ತಿನ್ನೋಕೆ ಹೋಗಿದ್ದು ಯಾರು? ಮೊಮ್ಮಗಳ ಮದುವೆ ಅಂತ ಹೋಗಿದ್ದು ಯಾರು ಅಂತ ಪರೋಕ್ಷವಾಗಿ ಮೋದಿ ವಿಷಯ ಪ್ರಸ್ತಾಪಿಸಿದರು. ಇದರಿಂದ ಸದನದಲ್ಲಿ ಮತ್ತೆ ಗದ್ದಲ ಶುರುವಾಯಿತು. ಸರ್ಕಾರಕ್ಕೆ ಗೌರವ ಇಲ್ಲವಾ? ನಾಚಿಕೆ ಇಲ್ಲವಾ ಎಂದು ಬಿಜೆಪಿ ಸದಸ್ಯರು ಕಿಡಿಕಾರಿದರು. ಪೂಜಾರಿ ಮಾತನಾಡಿ, ಸರ್ಕಾರಕ್ಕೆ ನಾಚಿಕೆ ಆಗೋದಿಲ್ವಾ? ಸಿಎಂ ಬಂದು ಇಲ್ಲಿ ಉತ್ತರ ಕೊಡಬೇಕು? ಇಡೀ ರಾಜ್ಯಕ್ಕೆ ಕೇಳಿದ ಘೋಷಣೆ ಸರ್ಕಾರಕ್ಕೆ ಕೇಳಿಲ್ವಾ? ಕಾಂಗ್ರೆಸ್‌ ಧೋರಣೆ ಪಾಕಿಸ್ತಾನ ಪರವೋ, ಯಾರ ಪರ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್‌ ಹಾಗೂ ವಿಪಕ್ಷಗಳ ಗದ್ದಲದಿಂದಾಗಿ ಪರಿಷತ್‌ ಕಲಾಪವನ್ನು ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗ ‘ದೇಶದ್ರೋಹಿ ಕಾಂಗ್ರೆಸ್’‌ ಎಂದು ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿ ಅಸಮಾಧಾನ ಹೊರಹಾಕಿದರು. ಭಾರತ್‌ ಮಾತಾ ಕೀ ಜೈ ಘೋಷಣೆ ಜೊತೆಗೆ, ಕಾಂಗ್ರೆಸ್‌ ಸರ್ಕಾರ ವಜಾ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆಯಿಂದ ಬಾಲಕಿ ಸಾವು- ಪೋಷಕರ ಆರೋಪ

  • ‌ವಿಧಾನಸೌಧದಲ್ಲಿ ನಮ್ಗೆ ಕಾರ್‌ ಪಾರ್ಕಿಂಗ್‌ ಮಾಡೋಕೆ ಸ್ಥಳ ಸಿಕ್ತಿಲ್ಲ – ಪರಿಷತ್ ನಲ್ಲಿ ಶಾಸಕರ ಅಳಲು

    ‌ವಿಧಾನಸೌಧದಲ್ಲಿ ನಮ್ಗೆ ಕಾರ್‌ ಪಾರ್ಕಿಂಗ್‌ ಮಾಡೋಕೆ ಸ್ಥಳ ಸಿಕ್ತಿಲ್ಲ – ಪರಿಷತ್ ನಲ್ಲಿ ಶಾಸಕರ ಅಳಲು

    – ದಲ್ಲಾಳಿಗಳಿಂದ ರಾಜಕಾರಣಿಗಳ ಪಾಸ್ ದುರ್ಬಳಕೆ- ಹೆಚ್‌.ಕೆ ಪಾಟೀಲ್‌ ಆರೋಪ
    – ಮಾಫಿಯಾ ದಂಧೆ ಮಾಡೋಕೆ ದಲ್ಲಾಳಿಗಳು ಬರ್ತಿದ್ದಾರಾ – ಮುನಿರಾಜು ಗೌಡ ಪ್ರಶ್ನೆ

    ಬೆಂಗಳೂರು: ವಿಧಾನ ಪರಿಷತ್ (Vidhan Parishad) ಸದಸ್ಯರಿಗೆ ವಿಧಾನಸೌಧದಲ್ಲಿ ವಾಹನಗಳ ಪಾರ್ಕಿಂಗ್‌ಗೆ (Vidhana Soudha Parking) ಸಮಸ್ಯೆ ಆಗುತ್ತಿರುವ ಬಗ್ಗೆ ಕಲಾಪದಲ್ಲಿ ಚರ್ಚಿಸಲಾಯಿತು. ಪ್ರಶ್ನೋತ್ತರ, ಶೂನ್ಯವೇಳೆ ಅವಧಿ ಮುಗಿದ ಕೂಡಲೇ ಬಿಜೆಪಿಯ ಡಿ.ಎಸ್ ಅರುಣ್ ವಿಷಯ ಪ್ರಸ್ತಾಪ ಮಾಡಿದರು.

    ನಮಗೆ ವಿಧಾನಸೌಧ (Vidhana Soudha) ಮತ್ತು ಶಾಸಕರ ಭವನದಲ್ಲಿ ಪಾರ್ಕಿಂಗ್‌ಗೆ ಸಮಸ್ಯೆ ಇದೆ. ಕಾರ್ ಪಾರ್ಕಿಂಗ್ ಮಾಡಲು ಆಗ್ತಿಲ್ಲ. ವಿಧಾನಸೌಧದಲ್ಲಿ ಯಾರ್ಯಾರೋ ಎಲ್ಲೆಲ್ಲೋ ಕಾರು ನಿಲ್ಲಿಸುತ್ತಾರೆ. ಇದರಿಂದ‌ ನಮಗೆ ಸಮಸ್ಯೆ ಆಗ್ತಿದೆ. ಪಾಸ್ ಇಲ್ಲದೇ ಇರೋರ ಕಾರ್ ಕೂಡಾ ಪಾರ್ಕಿಂಗ್ ಆಗ್ತಿದೆ. ಇದರಿಂದ ಶಾಸಕರಾದ ನಮಗೆ ಸಮಸ್ಯೆ ಆಗ್ತಿದೆ ಅಂತಾ ಸಭಾಪತಿಗಳ ಗಮನಕ್ಕೆ ತಂದರು.

    ಕೂಡಲೇ ಸಭಾ ನಾಯಕರು ಇದನ್ನ ಸರಿ ಮಾಡುವಂತೆ ಸಭಾಪತಿ ಹೊರಟ್ಟಿ ಸೂಚಿಸಿದರು. ಇದಕ್ಕೆ ಉತ್ತರಿಸಿದ ಸಭಾ ನಾಯಕರ, ಬೋಸರಾಜು, ಸರಿಪಡಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಸಾಧ್ಯವಿಲ್ಲ – ದಿನೇಶ್ ಗುಂಡೂರಾವ್

    ಬಳಿಕ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್ (HK Patil), ಪಾರ್ಕಿಂಗ್ ಸಮಸ್ಯೆ ಇರೋದು ನಿಜ. ಇಲ್ಲಿರೋ ಹೊಟೇಲ್ ನಲ್ಲಿ ಹೋಗಿ ಬರೋದಕ್ಕೂ ಸಮಸ್ಯೆ ಆಗಿದೆ. ಹೀಗಾಗಿ ಸಭಾಪತಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಮಾಡಿ ಈ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು ಎಂದರು.

    ಈ ವೇಳೆ ಜೆಡಿಎಸ್‌ನ ಶರವಣ, ‌ಕಾರ್ ಪಾರ್ಕಿಂಗ್ ಗೆ QR ಕೋಡ್ ಜಾರಿ ಮಾಡಿ ಅಂತಾ ಒತ್ತಾಯಿಸಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ‌ ಸಚಿವ ಹೆಚ್.ಕೆ ಪಾಟೀಲ್, ವಿಧಾನಸೌಧದಲ್ಲಿ ರಾಜಕಾರಣಿಗಳ ಪಾಸ್ ಅನ್ನ ಬಳಕೆ ಮಾಡೋ ದಲ್ಲಾಳಿಗಳು ಇದ್ದಾರೆ. ಇದಕ್ಕೆ ಕಡಿವಾಣ ಹಾಕೋ ಕೆಲಸ ಮಾಡಬೇಕು. ಇದಕ್ಕೆ ಕ್ರಮ‌ ತೆಗೆದುಕೊಳ್ಳೋಣ ಎಂದರು.

    ನಂತರ ಬಿಜೆಪಿ ಸದಸ್ಯ ತುಳಿಸಿ ಮುನಿರಾಜು ಗೌಡ, ದಲ್ಲಾಳಿಗಳು ಅಂದ್ರೆ ಯಾಕೆ ಬರ್ತಿದ್ದಾರೆ. ವರ್ಗಾವಣೆ ದಂಧೆ ಮಾಡೋಕೋ, ಭೂ ಮಾಫಿಯಾ ದಂಧೆ ಮಾಡೋಕೆ ಬರ್ತಿದ್ದಾರೆ ಅಂತಾ ಹೇಳಿ. ಯಾರು ದಲ್ಲಾಳಿಗಳು ಹೇಳಬೇಕು ಎಂದು ಒತ್ತಾಯಿಸಿದ್ರು. ಇದನ್ನೂ ಓದಿ: ಎಲ್ಲಾ ಜೈನ ಮುನಿಗಳಿಗೂ ರಕ್ಷಣೆ ಕೊಡಬೇಕು: ಸುನಿಲ್ ಕುಮಾರ್ ಒತ್ತಾಯ

    ಇದಕ್ಕೆ ‌ಆಕ್ರೋಶಗೊಂಡ ಹೆಚ್‌.ಕೆ ಪಾಟೀಲ್, ‌ಪಟ್ಟಿ ಕೊಡಿ ಅಂದ್ರೆ ಕೊಡ್ತೀನಿ. ಹೆಸರು ಹೇಳು ಅಂದರು ಹೇಳುತ್ತೇನೆ. ಎಲ್ಲಾ ಕೆಲಸದಲ್ಲೂ ದಳ್ಳಾಳಿಗಳು ಇರ್ತಾರೆ. ಇದನ್ನ ಸರಿ ಮಾಡೋದಕ್ಕೆ ನಾವು ಕ್ರಮ ತೆಗೆದುಕೊಳ್ಳೋಣ. ಕೊನೆದಾಗಿ ಸಭೆ ‌ಮಾಡಿ ಸಮಸ್ಯೆ ಪರಿಹಾರ ಮಾಡೋಣ ಅಂತ ಸಭಾಪತಿಗಳು ತಿಳಿಸಿ ಚರ್ಚೆಗೆ ಅಂತ್ಯ ಹಾಡಿದ್ರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಗ್ಯಾರಂಟಿ ಗಲಾಟೆಗೆ ವಿಧಾನ ಪರಿಷತ್ ಕಲಾಪ ಬಲಿ

    ಬಿಜೆಪಿ ಗ್ಯಾರಂಟಿ ಗಲಾಟೆಗೆ ವಿಧಾನ ಪರಿಷತ್ ಕಲಾಪ ಬಲಿ

    ಬೆಂಗಳೂರು: ವಿಧಾನ ಪರಿಷತ್ (Vidhan Parishad) ಕಲಾಪದ ಎರಡನೇ ದಿನ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಡುವೆ ನಡೆದ ಕದನಕ್ಕೆ ಪರಿಷತ್ ಸಾಕ್ಷಿ ಆಯಿತು. ಗದ್ದಲ, ಗಲಾಟೆ, ಪ್ರತಿಭಟನೆ ನಡುವೆ 3 ಬಾರಿ ಕಲಾಪ ಮುಂದೂಡಿಕೆ ಆಗಿದ್ದು, ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವಿನ ವಾಗ್ವಾದಕ್ಕೆ ಇಡೀ ಸದನ ಬಲಿಯಾಗಿದೆ.

    ಮಂಗಳವಾರ ಕಲಾಪ ಪ್ರಾರಂಭವಾದ ಕೂಡಲೇ ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡದ ಕುರಿತು ಚರ್ಚೆಗೆ ಅವಕಾಶ ಕೊಡಬೇಕು ಎಂದು ಬಿಜೆಪಿ ಸದಸ್ಯರು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೊಡುವಂತೆ ಬಿಗಿಪಟ್ಟು ಹಿಡಿದರು. ಇದಕ್ಕೆ ಸಭಾಪತಿ ಸ್ಥಾನದಲ್ಲಿದ್ದ ಉಪ ಸಭಾಪತಿ (Deputy Chairman) ಪ್ರಾಣೇಶ್ ಅವರು ಒಪ್ಪಿಗೆ ನೀಡಲಿಲ್ಲ. ಪ್ರಶ್ನೋತ್ತರ ಅವಧಿ ಮತ್ತು ಶೂನ್ಯ ವೇಳೆ ಆದ ಬಳಿಕ ಅವಕಾಶ ಕೊಡುವುದಾಗಿ ತಿಳಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಒಪ್ಪಲಿಲ್ಲ. ಈಗಲೇ ಅವಕಾಶ ಕೊಡುವಂತೆ ಒತ್ತಾಯ ಮಾಡಿದರು. ಈ ವೇಳೆ ಸಚಿವ ಕೃಷ್ಣಭೈರೇಗೌಡ ರೂಲ್ ಬುಕ್ ತೆಗೆದುಕೊಂಡು ನಿಯಮ ಓದಿ ನಿಯಮದ ಪ್ರಕಾರ ಸದನ ನಡೆಸುವಂತೆ ಉಪ ಸಭಾಪತಿಗಳಿಗೆ ಮನವಿ ಮಾಡಿದರು. ಇದನ್ನೂ ಓದಿ: ಹೆಚ್‍ಡಿಕೆ ಪಾಪ ಬೇಸರದಲ್ಲಿ ಇದ್ದಾರೆ: ಡಿಕೆಶಿ ವ್ಯಂಗ್ಯ

    ಇದಕ್ಕೆ ಒಪ್ಪದ ಬಿಜೆಪಿ ಸದನದ ಬಾವಿಗಳಿದು ಪ್ರತಿಭಟನೆ (Protest) ನಡೆಸಿತು. ಕಾಂಗ್ರೆಸ್‌ನಿಂದ ಮೋಸ ಎಂದು ಘೋಷಣೆ ಕೂಗಿದರು. ದೋಖಾ ದೋಖಾ ಕಾಂಗ್ರೆಸ್ ದೋಖಾ ಎಂದು ಘೋಷಣೆ ಕೂಗಿ ಗದ್ದಲ ಮಾಡಿದರು. ಇದಕ್ಕೆ ಆಡಳಿತ ಪಕ್ಷದ ನಾಯಕರು, ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಇರುವವರು ಪ್ರತಿಭಟನೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಗದ್ದಲ ಗಲಾಟೆ ಹಿನ್ನೆಲೆಯಲ್ಲಿ ಉಪ ಸಭಾಪತಿಗಳು ಸದನವನ್ನು 30 ನಿಮಿಷ ಮುಂದೂಡಿದರು. ಇದನ್ನೂ ಓದಿ: ದಾಖಲೆ ಕೊಡ್ತೀನಿ ತನಿಖೆ ಮಾಡೋ ಧಮ್ ನಿಮಗೆ ಇದ್ಯಾ: ಹೆಚ್‍ಡಿಕೆ ಪ್ರಶ್ನೆ

    ಬಳಿಕ ಸದನ ಪ್ರಾರಂಭವಾದ ನಂತರವೂ ಬಿಜೆಪಿಯ ಪ್ರತಿಭಟನೆ ಮುಂದುವರೆಯಿತು. ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರು ಬಿಜೆಪಿ ಪ್ರತಿಭಟನೆ ವಿರುದ್ಧ ಘೋಷಣೆ ಕೂಗಿದರು. ಗದ್ದಲ ಗಲಾಟೆ ಹಿನ್ನಲೆಯಲ್ಲಿ ಕಲಾಪವನ್ನು ಮತ್ತೆ 1 ಗಂಟೆಗಳ ಮುಂದೂಡಲಾಯಿತು. ಮತ್ತೆ ಸದನ ಪ್ರಾರಂಭವಾದಾಗ ಬಿಜೆಪಿ ಪ್ರತಿಭಟನೆ ಹೆಚ್ಚಾಯಿತು. ಚರ್ಚೆಗೆ ಅವಕಾಶ ಕೊಡಬೇಕು ಎಂದು ಬಿಜೆಪಿಗರು ಪ್ರತಿಭಟನೆ ಮುಂದುವರಿಸಿದರು. ಇದಕ್ಕೆ ಉಪ ಸಭಾಪತಿ ಮತ್ತು ಸರ್ಕಾರ ಒಪ್ಪಲಿಲ್ಲ. ಹೀಗಾಗಿ ಬಿಜೆಪಿ ಪ್ರತಿಭಟನೆ ಮುಂದುವರಿಸಿತು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಗದ್ದಲ ಗಲಾಟೆ ಹಿನ್ನೆಲೆಯಲ್ಲಿ ಮತ್ತೆ ಸದನವನ್ನು ಉಪ ಸಭಾಪತಿ ಪ್ರಾಣೇಶ್ ಮುಂದೂಡಿದರು. ಇದನ್ನೂ ಓದಿ: 5 ಭಾಗ್ಯಗಳನ್ನು ಘೋಷಣೆ ಮಾಡಿ ಕಾಂಗ್ರೆಸ್ ಸುಳ್ಳು ಹೇಳಿದೆ: ಕಟೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]