Tag: vidha parishad

  • ಪರಿಷತ್‍ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿ ಸಿಕ್ಕಿ ಬಿದ್ದ ಕಾಂಗ್ರೆಸ್‌ ಎಂಎಲ್‍ಸಿ ರಾಥೋಡ್

    ಪರಿಷತ್‍ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿ ಸಿಕ್ಕಿ ಬಿದ್ದ ಕಾಂಗ್ರೆಸ್‌ ಎಂಎಲ್‍ಸಿ ರಾಥೋಡ್

    ಬೆಂಗಳೂರು: ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್  ಮೇಲೆ  ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ.

    ಪ್ರಶ್ನೋತ್ತರ ಅವಧಿ ವೇಳೆ ಮೊಬೈಲಿನಲ್ಲಿ ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋಗಳು ಇರುವುದು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ವಿಚಾರದ ಬಗ್ಗೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರಾಥೋಡ್, ನಾನು ಉದ್ದೇಶ ಪೂರ್ವಕವಾಗಿ ಏನನ್ನು ನೋಡಿಲ್ಲ. ನನ್ನ ಮೊಬೈಲ್ ನಲ್ಲಿ ಅಂತಹ ಯಾವುದೇ ವಿಡಿಯೋ ಫೋಟೋ ಇರಲಿಲ್ಲ. ಗ್ರೂಪ್ ನಲ್ಲಿ ಯಾರಾದರು ಏನಾದರು ಕಳುಹಿಸಿರಬಹುದು. ನಾನು ಡೌನ್‍ಲೋಡ್ ಮಾಡಿಲ್ಲ ಮೆಮೊರಿ ಫುಲ್ ಆಗಿದ್ದನ್ನು ಡಿಲೀಟ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

    ಇಂದು ಸದನದಲ್ಲಿ ನನ್ನ ಪ್ರಶ್ನೆ ಇತ್ತು. ಅದರ ಬಗ್ಗೆ ಮಾಹಿತಿ ಹುಡುಕುತ್ತಿದ್ದೆ. ಅದನ್ನು ಬಿಟ್ಟು ನಾನು ಬೇರೆ ಯಾವುದೇ ಚಿತ್ರ ಅಥವಾ ವಿಡಿಯೋ ವೀಕ್ಷಿಸಿಲ್ಲ. ನನಗೆ ಗೊತ್ತಿಲ್ಲದೆ ಅಂದಹದ್ದು ಏನಾದರೂ ಕಂಡಿದ್ದರೆ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಾಥೋಡ್ ಹೇಳಿದ್ದಾರೆ.

    ರಾಥೋಡ್ ಅವರು ಮೊಬೈಲಿನ ಗ್ಯಾಲರಿ ಹೋಗಿದ್ದಾರೆ. ಈ ವೇಳೆ ಸ್ಕ್ರಾಲ್ ಮಾಡುವಾಗ ಅಶ್ಲೀಲ ವಿಡಿಯೋಗಳು ಕಾಣಿಸಿದೆ. ವಿಡಿಯೋಗಳು ಎಲ್ಲವೂ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.