Tag: videoCall

  • ಹೆಂಡ್ತಿ ಕೊಂದು ವಿಡಿಯೋ ಕಾಲ್ ಮಾಡಿ ಶವ ತೋರಿಸಿದ..!

    ಹೆಂಡ್ತಿ ಕೊಂದು ವಿಡಿಯೋ ಕಾಲ್ ಮಾಡಿ ಶವ ತೋರಿಸಿದ..!

    ವಿಜಯಪುರ: ಪತ್ನಿಯನ್ನು ಕೊಲೆಗೈದು ಬಳಿಕ ವಿಡಿಯೋ ಕಾಲ್ ಮೂಲಕ ಆಕೆಯ ಶವವನ್ನು ಮನೆಯವರಿಗೆ ತೋರಿಸಿದ ಆಘಾತಕಾರಿ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ.

    ವಿಜಯಪುರ ನಗರದ ಕಾಸಗೇರಿ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಸೋನಾಬಾಯಿ ಮಲ್ಲಿಕಾರ್ಜುನ್ ಪವಾರ (28) ಪತಿಯಿಂದಲೇ ಕೊಲೆಗೀಡಾದ ಮಹಿಳೆ. ಆರೋಪಿ ಪತಿಯನ್ನು ಮಲ್ಲಿಕಾರ್ಜುನ್ ಎಂದು ಗುರುತಿಸಲಾಗಿದೆ.

    ಸುತ್ತಿಗೆಯಿಂದ ಪತ್ನಿ ತಲೆಗೆ ಹೊಡೆದು ಮಲ್ಲಿಕಾರ್ಜುನ್ ಕೊಲೆ ಮಾಡಿದ್ದಾನೆ. ಅಲ್ಲದೆ ನಂತರ ಆಕೆಯ ಮನೆಗೆ ವಿಡಿಯೋ ಕಾಲ್ ಮಾಡಿ ಸೋನಾಬಾಯಿ ಶವವನ್ನು ತೋರಿಸುವ ಮೂಲಕ ವಿಕೃತಿ ಮೆರೆದಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

    ಪತ್ನಿ ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv