Tag: Video Statement

  • ಮುಸ್ಲಿಂ ಸಮುದಾಯಕ್ಕೆ ಜಿಹಾದಿ ನಾಯಕರು ಮಾದರಿಯಾಗಲಿ: ಅಲ್‌ಖೈದಾ

    ಮುಸ್ಲಿಂ ಸಮುದಾಯಕ್ಕೆ ಜಿಹಾದಿ ನಾಯಕರು ಮಾದರಿಯಾಗಲಿ: ಅಲ್‌ಖೈದಾ

    ಢಾಕಾ: ವಿಶ್ವದಾದ್ಯಂತ ಇರುವ ಮುಸ್ಲಿಂ ಸಮುದಾಯಕ್ಕೆ ಪ್ರಮುಖ ಜಿಹಾದಿ ನಾಯಕರು ಮಾದರಿಯಾಗಬೇಕು ಎಂದು ಅಲ್ ಖೈದಾ ನಾಯಕ ಅಯ್ಮನ್ ಅಲ್ ಜವಾಹಿರಿ ಕೇಳಿಕೊಂಡಿದ್ದಾನೆ.

    ಅಲ್‌ಖೈದಾ ಸಂಘಟನೆಯ ಮಾಧ್ಯಮ ವಿಭಾಗದ ಆಸ್ ಸಾಹಬ್ ಮೂಲಕ ಬಿಡುಗಡೆ ಮಾಡಿದ ವೀಡಿಯೋ ಸಂದೇಶದಲ್ಲಿ ಈ ರೀತಿ ಹೇಳಲಾಗಿದೆ. ಸದ್ಯ ಈ ವೀಡಿಯೋ ಮುಸ್ಲಿಮರ ಮೂಲಭೂತವಾದವನ್ನು ಪ್ರಚೋದಿಸುವುದು ಮಾತ್ರವಲ್ಲದೆ ಭಯೋತ್ಪಾದನೆಯ ಬೆದರಿಕೆ ಮಟ್ಟವನ್ನೂ ಹೆಚ್ಚಿಸಿದೆ. ಇದನ್ನೂ ಓದಿ: ಮಂಕಿಪಾಕ್ಸ್ ಹೆಸರು ಬದಲಾವಣೆಗೆ WHO ನಿರ್ಧಾರ

    ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ಅಲ್‌ಖೈದಾ ಸರಣಿ ವೀಡಿಯೋಗಳು ಅರಬ್ ನಾಯಕರನ್ನು ಟೀಕಿಸುವ ಹಾಗೂ ಅಲ್‌ಖೈದಾ ಸಿದ್ಧಾಂತಗಳನ್ನು ಮುಸ್ಲಿಮರಿಗೆ ಶಿಕ್ಷಣ ರೂಪದಲ್ಲಿ ನೀಡುವುದರ ಮೇಲೆ ಕೇಂದ್ರೀಕರಿಸಿದ್ದವು. ಇದೀಗ ಅಂತಹದ್ದೇ ಭಯೋತ್ಪಾದನಾ ಸಂದೇಶವೊಂದನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಉತ್ತರಪ್ರದೇಶ ಮಾದರಿಯಲ್ಲೇ ಕಾಫಿನಾಡಿನಲ್ಲೂ ಬುಲ್ಡೋಜರ್ ಪ್ರಯೋಗ

    ಈಗಾಗಲೇ ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ನೀಡಿದ ಹೇಳಿಕೆಯಿಂದಾಗಿ ಅಲ್‌ಖೈದಾ ಸಂಘಟನೆಗಳು ಭಾರತ ಮತ್ತು ಬಾಂಗ್ಲಾದೇಶದ ವಿರುದ್ಧ ಜಿಹಾದ್‌ಗೆ ಕರೆ ನೀಡಿದ್ದು, ಭಾರತದ ಪ್ರಮುಖ ನಗರಗಳಲ್ಲಿ ಬಾಂಬ್ ದಾಳಿ ನಡೆಸುವುದಾಗಿಯೂ ಬೆದರಿಕೆ ಹಾಕಿವೆ. ಇದನ್ನು ಇದೀಗ ಮತ್ತೊಮ್ಮೆ ಪುನರುಚ್ಚರಿಸಿದ್ದಾನೆ.

    Live Tv