Tag: Video Song

  • ರಾಜ್ ಬಿ ಶೆಟ್ಟಿ ಹೊಸ ಸಾಹಸ – ಸು ಫ್ರಮ್ ಸೋ ಸಾಂಗ್ ರಿಲೀಸ್

    ರಾಜ್ ಬಿ ಶೆಟ್ಟಿ ಹೊಸ ಸಾಹಸ – ಸು ಫ್ರಮ್ ಸೋ ಸಾಂಗ್ ರಿಲೀಸ್

    ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ (Lighter Buddha Films) ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡ `ಸು ಫ್ರಮ್ ಸೋ’ (Su From So) ಕನ್ನಡ ಸಿನಿಮಾದ ಡ್ಯಾಂಕ್ಸ್ ಅಂಥಮ್ ವಿಡಿಯೋ ಸಾಂಗ್ ಬಿಡುಗಡೆ ಆಗಿ ಜನರ ಮನ ಸೆಳೆಯುತ್ತಿದೆ. ಮುಂದೆ ಎಲ್ಲಾ ಪಾರ್ಟಿ ಹಾಗೂ ಇತರೆ ಕಾರ್ಯಕ್ರಮದಲ್ಲಿ ಈ ಹಾಡು ಕೇಳಿಸೋದು ಕನ್ಫರ್ಮ್ ಅನ್ನಿಸುತ್ತಿದೆ.

     

    ಈ ಹಾಡಿಗೆ ಸಾಹಿತ್ಯ ರಾಜ್ ಬಿ ಶೆಟ್ಟಿ (Raj B Shetty) ಅವರದ್ದು ಅನುರಾಗ್ ಕುಲಕರ್ಣಿ (Anurag Kulkarni) ಅವರು ಸೊಗಸಾಗಿ ಹಾಡಿದ್ದಾರೆ ಹಾಗೂ ಸುಮೇಧ್ ಕೆ ಅವರು ಉತ್ತಮ ಸಂಗೀತ ನೀಡಿದ್ದಾರೆ. ಇದರ ನೃತ್ಯ ಸಂಯ್ಯೋಜನೆಯನ್ನು ವಿನಾಯಕ ಆಚಾರ್ಯ ಮಾಡಿದ್ದಾರೆ. ಈ ಹಾಡಿನಲ್ಲಿ ಜೆಪಿ ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು (Thuminad), ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಹಾಗೂ ಇತರರು ಹೆಜ್ಜೆ ಹಾಕಿದ್ದಾರೆ.

    ಸು ಫ್ರಮ್ ಸೋ ಸಿನಿಮಾವನ್ನು ಜೆಪಿ ತುಮಿನಾಡು ನಟಿಸಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಎಸ್ ಚಂದ್ರಸೆಕರನ್ ಕಾರ್ಯ ನಿರ್ವಹಿಸಿದ್ದಾರೆ. ಈ ಸಿನಿಮಾವನ್ನು ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ, ರಾಜ್ ಬಿ ಶೆಟ್ಟಿ ಮೂವರು ಸೇರಿ ಅದ್ದೂರಿ ಯಾಗಿ ನಿರ್ಮಿಸಿದ್ದಾರೆ. ಸಂದೀಪ್ ತುಳಸಿದಾಸ್ ಅವರ ಹಿನ್ನೆಲೆ ಸಂಗೀತ ಇರುವ ಈ ಚಿತ್ರಕ್ಕಿದೆ ಅರ್ಜುನ್ ರಾಜ್ ಸಾಹಸ ಸಂಯೋಜನೆ ಮಾಡಿದ್ದಾರೆ.

    ಮಂಗಳೂರು ಸುತ್ತಮುತ್ತಲಿನ ಊರಾದ ವೇಣೂರು, ಕಕ್ಯಪದವು ಹಾಗು ಇತರ ಕಡೆ ಸಿನಿಮಾ 50 ದಿನಗಳ ಕಾಲ ಚಿತ್ರಕರಣಗೊಂಡು ಇದೀಗ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ.

  • ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

    ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

    ನ್ನೇರಿ..ನೀನಾಸಂ ಮಂಜು ನಿರ್ದೇಶನದ ಬಹಳ ನಿರೀಕ್ಷೆ ಮೂಡಿಸಿರುವ ಚಿತ್ರ. ನೆಲೆಗಾಗಿ ನಿರ್ವಸತಿಗರ ಪಡಿಪಾಟಲು, ನಗರದಲ್ಲಿ ಬದುಕನ್ನರಸುತ್ತಿರುವ ಹೆಣ್ಣು ಜೀವಗಳ ಕಷ್ಟ ಕೋಟಲೆಗಳು ಇದನ್ನೆಲ್ಲ ಒಟ್ಟುಗೂಡಿಸಿ ಕಮರ್ಶಿಯಲ್ ಎಳೆಯಲ್ಲಿ ಅಷ್ಟೇ ಮನಸ್ಸಿಗೂ ನಾಟುವಂತೆ ಹೆಣೆದ ಕಥೆ ಕನ್ನೇರಿ. ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಪವರ್ ಫುಲ್ ಸಂದೇಶವನ್ನಿಟ್ಟುಕೊಂಡು ನಿರ್ಮಾಣವಾಗಿರುವ ಈ ಚಿತ್ರ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೂ ಕಾಲಿಡಲಿದೆ. ಸದ್ಯ ಬಿಡುಗಡೆಯಾಗುತ್ತಿರುವ ಚಿತ್ರದ ಒಂದೊಂದೇ ಸ್ಯಾಂಪಲ್ ಗಳು ಚಿತ್ರ ಪ್ರೇಮಿಗಳ ಚಿತ್ತವನ್ನು ಸೆಳೆಯುತ್ತಿದ್ದು ಇದೀಗ ಮತ್ತೊಂದು ಬಹು ನಿರೀಕ್ಷಿತ ಹಾಡೊಂದನ್ನು ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ ಕನ್ನೇರಿ ಚಿತ್ರತಂಡ.


    ಈಗಾಗಲೇ ಬಿಡುಗಡೆಯಾಗಿರುವ ‘ಬೆಟ್ಟ ಕಣಿವೆಗಳ ಹೊಟ್ಟೇಲಿ ಗೂಡು ಕಟ್ಟಿ, ‘ನೆಲೆ ಇರದ ಕಾಲು ಹುಡುಕುತಿದೆ ಬಾಳು’ ಎರಡು ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ, ಕೇಳುಗರ ಮನದಲ್ಲಿ ಅಚ್ಚುತ್ತಿವೆ. ಈಗ ಚಿತ್ರತಂಡ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡಿನ ವೀಡಿಯೋ ಬಿಡುಗಡೆ ಮಾಡಿದೆ. ಹೆಣ್ಣು ಮಗಳೊಬ್ಬಳು ತಾನು ಹುಟ್ಟಿ ಬೆಳೆದ ಮನೆ, ಊರನ್ನು ಬಿಟ್ಟು ಬೇರೆಡೆಗೆ ದುಡಿಯಲು ಹೊರಟಾಗ ಅನುಭವಿಸುವ ನೋವು, ಮರುಕವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದ್ದು, ಎಂತವರಿಗಾದರೂ ಹಾಡು ನೋಡುತ್ತಿದ್ರೆ ಕರುಳು ಹಿಂಡಿ ಬರುತ್ತದೆ. ಅಂದ್ಹಾಗೆ ಈ ಹಾಡಿಗೆ ಕೊಟಿಗಾನಹಳ್ಳಿ ರಾಮಯ್ಯ ಸಾಹಿತ್ಯ ಬರೆದಿದ್ದು, ಕೀರ್ತನ್ ಹೊಳ್ಳ, ಇಂದು ನಾಗರಾಜ್ ಭಾವ ತುಂಬಿ ಹಾಡಿದ್ದಾರೆ. ಸದ್ಯ ಬಿಡುಗಡೆಯಾದ ಈ ಹಾಡು ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.


    ಕನ್ನೇರಿ ನೈಜಘಟನೆಯನ್ನು ಆಧಾರಿಸಿದ ಚಿತ್ರ, ಹಾಗೆಯೇ ಇದೊಂದು ಮಹಿಳಾ ಪ್ರಧಾನ ಚಿತ್ರ ಕೂಡ. ಈ ಚಿತ್ರಕ್ಕೆ ನಿರ್ದೇಶಕ ನೀನಾಸಂ ಮಂಜು ಸ್ಪೂರ್ತಿಯಾಗಿ ಪಡೆದಿದ್ದು ಕೊಡಗಿನ ದಿಡ್ಡಳ್ಳಿ ಹೋರಾಟ ಹಾಗೂ ಲೇಖಕ ಕ್ಷೀರಸಾಗರ ಅವರ ಜೇನು ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು. ಇವುಗಳನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ಕೊಟಿಗಾನಹಳ್ಳಿ ರಾಮಯ್ಯ ಸಿನಿಮ್ಯಾಟಿಕ್ ಆಗಿ ಕಥೆ ಹೆಣೆಯುವ ಜವಾಬ್ದಾರಿಯನ್ನು ನಿಭಾಯಿಸಿದ್ದು, ಚಿತ್ರಕಥೆ ಹಾಗೂ ನಿರ್ದೇಶನದ ನೊಗವನ್ನು ನೀನಾಸಂ ಮಂಜು ಹೊತ್ತುಕೊಂಡಿದ್ದಾರೆ.

    ಹಲವಾರು ಅಂತರಾಷ್ಟ್ರೀಯ ವೇದಿಕೆಗಳಿಗೆ ಆಯ್ಕೆಯಾಗಿ ಗಮನ ಸೆಳೆದಿರುವ ಕನ್ನೇರಿ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಸ್ಟ್ರಾಂಗ್ ಕಂಟೆಂಟ್ ಹೊತ್ತು ಬರುತ್ತಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಸುಜಿತ್ ಎಸ್ ನಾಯಕ್ ಸಂಕಲನವಿದೆ. ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಒಳಗೊಂಡ ಕಲಾವಿದರ ತಾರಾಗಣವಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ ಪಿ ಹೆಬ್ಬಾರ್ ಮತ್ತು ಚಂದ್ರಶೇಖತ್ ಬಂಡವಾಳ ಹೂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  • ಮೋಡಿ ಮಾಡಿತು ‘ಖಾಕಿ’ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋ!

    ಮೋಡಿ ಮಾಡಿತು ‘ಖಾಕಿ’ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋ!

    ತರುಣ್ ಶಿವಪ್ಪ ನಿರ್ಮಾಣ ಮಾಡಿರುವ ಖಾಕಿ ಚಿತ್ರ ಹಂತ ಹಂತವಾಗಿ ತನ್ನ ಕ್ರಿಯೇಟಿವಿಟಿಯಿಂದಲೇ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾ ಬರುತ್ತಿದೆ. ಈಗಾಗಲೇ ಟೀಸರ್ ಮೂಲಕ ಸಖತ್ ಆಗಿಯೇ ಸೌಂಡು ಮಾಡುತ್ತಿರೋ ಖಾಕಿ ಇದೀಗ ಪ್ರತೀ ಪಡ್ಡೆ ಹುಡುಗರ ಆತ್ಮ ನಿವೇದನೆಯಂಥಾ ಮಜವಾದ ಹಾಡೊಂದರ ಮೂಲಕ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಈ ಮೂಲಕವೇ ಯೋಗರಾಜ ಭಟ್ ಮತ್ತೆ ತಮ್ಮ ಲವಲವಿಕೆಯ ಶೈಲಿಯ ಹಾಡಿನ ಮೋಡಿ ಹಾಕಿದ್ದಾರೆ. ಈ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋವನ್ನು ಇದೀಗ ಚಿತ್ರತಂಡ ಬಿಡುಗಡೆಗೊಳಿಸಿದೆ.

    ಇದೀಗ ‘ಪ್ರತ್ರಿಯೊಬ್ಬ ಹುಡುಗನ ಹಿಂದೆ ಹುಡುಗಿ ಇರ್ತಾಳಂತೆ, ಅವರಿಂದ ಹುಡುಗರ ಜೀವ್ನ ಚೆನ್ನಾಗಿರ್ತಾದಂತೆ’ ಎಂಬ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಒಂದೇ ಸಲಕ್ಕೆ ಇಷ್ಟವಾಗಿ ಬಿಡುವಂಥಾ ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಯುವ ಸಮುದಾಯದ ತವಕ ತಲ್ಲಣಗಳನ್ನು ತೆಳು ಉಡಾಫೆಯ ಧಾಟಿಯಲ್ಲಿ ಅಕ್ಷರವಾಗಿಸೋದು ಯೋಗರಾಜ್ ಭಟ್ ಅವರಿಗೆ ಒಲಿದಿರುವ ಕಲೆ. ಈ ಹಾಡಿನ ಮೂಲಕ ಅದು ಮತ್ತೊಮ್ಮೆ ಮಿರುಗಿದೆ. ನವೀನ್ ಸಜ್ಜು ಹಾಡಿರುವ ಈ ಹಾಡು ರಿತ್ವಿಕ್ ಮುರಳೀಧರ್ ಅವರ ಸಂಗೀತ ಸಂಯೋಜನೆಯಲ್ಲಿ ಚೆಂದಗೆ ಮೂಡಿ ಬಂದಿದೆ.

    ಎಲ್ಲರಿಗೂ ಇಷ್ಟವಾಗುವಂಥಾ ಈ ಹಾಡು ರೂಪುಗೊಂಡಿರೋ ರೀತಿಯನ್ನು ಜಾಹೀರು ಮಾಡುವಂಥಾ ಈ ಮೇಕಿಂಗ್ ಕಂ ಲಿರಿಕಲ್ ವೀಡಿಯೋಗೆ ಪ್ರೇಕ್ಷಕರ ಕಡೆಯಿಂದಲೂ ವ್ಯಾಪಕ ಪಾಸಿಟಿವ್ ಪ್ರತಿಕ್ರಿಯೆಗಳೇ ಕೇಳಿ ಬರುತ್ತಿವೆ. ಈ ವೀಡಿಯೋದಲ್ಲಿ ಸದರಿ ಹಾಡಿಗೆ ಅದು ಹೇಗೆ ದೃಷ್ಯ ರೂಪ ಕೊಡಲಾಗಿದೆ ಎಂಬ ಮಜವಾದ ಝಲಕ್‍ಗಳಿದ್ದಾವೆ. ಈ ಮೂಲಕವೇ ಚಿರಂಜೀವಿ ಸರ್ಜಾ ಮತ್ತು ತಾನ್ಯಾ ಹೋಪ್ ರೊಮ್ಯಾಂಟಿಕ್ ಕಾಗಿ ಕಾಣಿಸಿಕೊಂಡಿರೋ ರೀತಿಯ ತುಣುಕುಗಳೂ ಕಾಣಿಸಿಕೊಂಡಿವೆ. ಇದೆಲ್ಲವೂ ಖಾಕಿಯತ್ತ ಹೊತ್ತಿಕೊಂಡಿರೋ ಕುತೂಹಲ ಮತ್ತಷ್ಟು ಕಾವಿಗೊಡ್ಡಿಕೊಳ್ಳುವಂತೆ ಮಾಡುವಂತಿದೆ.

    ಇದು ತರುಣ್ ಟಾಕೀಸ್ ಮೂಲಕ ತರುಣ್ ಶಿವಪ್ಪ ನಿರ್ಮಾಣ ಮಾಡಿರುವ ಚಿತ್ರ. ಖಾಕಿ ಅಂದಾಕ್ಷಣ ಇದು ಪೊಲೀಸ್ ಕಥೆ ಇರಬಹುದಾ ಎಂಬ ಕುತೂಹಲ ಹುಟ್ಟಿಕೊಂಡಿತ್ತು. ಅದೀಗ ನಾನಾ ದಿಕ್ಕುಗಳಲ್ಲಿ ಚದುರಿಕೊಂಡಿದೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಈ ವರೆಗೆ ನಟಿಸಿರದಂಥಾ ಹೈ ವೋಲ್ಟೋಜ್ ಆಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಮಾಹಿತಿ ಈ ಹಿಂದೆಯೇ ಜಾಹೀರಾಗಿತ್ತು. ನವೀನ್ ರೆಡ್ಡಿ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಚಿರು ಮತ್ತು ತಾನ್ಯಾ ಜೋಡಿ ಅದೆಷ್ಟು ರೊಮ್ಯಾಂಟಿಕ್ ಮೂಡಲ್ಲಿ ಮುದ್ದು ಮುದ್ದಾಗಿ ನಟಿಸಿದ್ದಾರೆಂಬುದನ್ನು ಈ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋ ಅನಾವರಣಗೊಳಿಸಿದೆ. ಹೀಗೆ ಪ್ರತೀ ಹೆಜ್ಜೆಯಲ್ಲಿಯೂ ಗಮನ ಸೆಳೆಯುತ್ತಾ ಸಾಗುತ್ತಿರೋ ಈ ಚಿತ್ರವೀಗ ಬಿಡುಗಡೆಯತ್ತ ಮುಖ ಮಾಡಿದೆ.

  • ಅಮೆರಿಕ ಪಾಲಾದ ಅಧ್ಯಕ್ಷನ ಡ್ಯುಯೆಟ್ ಸಾಂಗ್!

    ಅಮೆರಿಕ ಪಾಲಾದ ಅಧ್ಯಕ್ಷನ ಡ್ಯುಯೆಟ್ ಸಾಂಗ್!

    ಬೆಂಗಳೂರು: ಶರಣ್ ಮತ್ತು ರಾಗಿಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅಧ್ಯಕ್ಷ ಇನ್ ಅಮೆರಿಕಾ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇದೆ. ಚಿತ್ರೀಕರಣವನ್ನೆಲ್ಲ ಸುಸೂತ್ರವಾಗಿ ಮುಗಿಸಿಕೊಂಡು ಬಿಡುಗಡೆಯ ಹಂತದಲ್ಲಿರುವ ಈ ಸಿನಿಮಾದ ಹಾಡೊಂದು ಇದೀಗ ಬಿಡುಗಡೆಯಾಗಿದೆ. ಕಾಶಿನಾಥ್ ನಿರ್ದೇಶನದ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು ಚಿತ್ರದ ಅಮ್ಮಾ ನಾ ಸೇಲಾದೆ, ಅಮೆರಿಕಾ ಪಾಲಾದೆ ಎಂಬ ಹಾಡಿನ ಸಾಲುಗಳನ್ನೇ ಇಟ್ಟುಕೊಂಡು ಹೊಸ ಬಗೆಯಲ್ಲಿ ಸದರಿ ಹಾಡನ್ನು ರೂಪಿಸಲಾಗಿದೆ.

    ಕವಿರತ್ನ ಡಾ.ವಿ. ನಾಗೇಂದ್ರ ಪ್ರಸಾದ್ ಈ ಹಾಡನ್ನು ರಚಿಸಿದ್ದಾರೆ. ಅಮ್ಮಾ ನಾ ಸೇಲಾದೆ ಅಮೆರಿಕಾ ಪಾಲಾದೆ ಎಂಬ ಸಾಲುಗಳನ್ನಿಟ್ಟುಕೊಂಡು ಹೊಸ ಬಗೆಯಲ್ಲಿ ಈ ಹಾಡಿನ ಸಾಹಿತ್ಯವನ್ನು ರಚಿಸಲಾಗಿದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಈ ಹಾಡು ಟಿಪ್ಪು ಧ್ವನಿಯಲ್ಲಿ ಮೂಡಿ ಬಂದಿದೆ. ಈ ವೀಡಿಯೋ ಸಾಂಗಲ್ಲಿ ಶರಣ್ ಮತ್ತು ರಾಗಿಣಿ ಜೋಡಿ ಮಸ್ತ್ ಆಗಿ ಕಾಣಿಸಿಕೊಂಡಿದೆ.

    ಅಧ್ಯಕ್ಷ ಇನ್ ಅಮೆರಿಕಾ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಯೋಗಾನಂದ್ ಮುದ್ದಾನ್ ನಿರ್ದೇಶನ ಮಾಡಿರೋ ಈ ಚಿತ್ರವನ್ನು ವಿಶ್ವಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಶರಣ್ ಚಿತ್ರಗಳೆಂದ ಮೇಲೆ ಭರ್ಜರಿ ಮನೋರಂಜನೆ ಗ್ಯಾರೆಂಟಿ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಆದರೆ ನಿರ್ದೇಶಕರು ಈ ಚಿತ್ರವನ್ನು ಶರಣ್ ಅವರ ಈವರೆಗಿನ ಚಿತ್ರಗಳಿಗಿಂತಲೂ ಭಿನ್ನವಾಗಿ ರೂಪಿಸಿದ್ದಾರಂತೆ. ಈಗ ಹೊರ ಬಂದಿರೋ ಹಾಡಿನ ಮೂಲಕ ಅಧ್ಯಕ್ಷ ಇನ್ ಅಮೆರಿಕಾ ಚಿತ್ರ ಬಿಡುಗಡೆಯ ಹಂತದಲ್ಲಿ ಮತ್ತೆ ಸದ್ದು ಮಾಡಲಾರಂಭಿಸಿದೆ.

  • ಒಂದೇ ದಿನದಲ್ಲಿ 85 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾದ ಪದ್ಮಾವತಿಯ `ಘೂಮರ್’ ಸಾಂಗ್

    ಒಂದೇ ದಿನದಲ್ಲಿ 85 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾದ ಪದ್ಮಾವತಿಯ `ಘೂಮರ್’ ಸಾಂಗ್

    ಮುಂಬೈ: ಟ್ರೇಲರ್ ಮೂಲಕವೇ ಭಾರತೀಯ ಸಿನಿರಂಗದಲ್ಲಿ ಧೂಳೆಬ್ಬೆಸಿರೋ ಕನ್ನಡತಿ ದೀಪಿಕಾ ಪಡುಕೋಣೆ ನಟನೆಯ `ಪದ್ಮಾವತಿ’ ಚಿತ್ರದ ಮೊದಲ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಬಿಡುಗಡೆಗೊಂಡ ಒಂದೇ ದಿನದಲ್ಲಿ 85 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡು, ನಂಬರ್ 01 ಟ್ರೆಂಡಿಂಗ್ ನಲ್ಲಿದೆ.

    ಘೂಮರ್ ಹಾಡಿನಲ್ಲಿ ದೀಪಿಕಾ ರಾಣಿ ಪದ್ಮಿನಿಯಾಗಿ ಮಿಂಚಿದರೆ, ಶಾಹಿದ ಕಪೂರ್ ರಜಪೂತ ರಾಜನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಘೂಮರ್ ಡಾನ್ಸ್ ನಲ್ಲಿ ಬನ್ಸಾಲಿ ತಮ್ಮ ಕೈಚಳಕವನ್ನು ತೋರಿಸಿದ್ದು, ಹಾಡು ಅಪ್ಪಟ ರಾಜಸ್ಥಾನಿ ಶೈಲಿಯಲ್ಲಿ ಮೂಡಿಬಂದಿದೆ. ದೀಪಿಕಾ ಕೆಂಪು ಬಣ್ಣದ ಲೆಹಂಗಾದಲ್ಲಿ ಡಾನ್ಸ್ ಮಾಡುವುದನ್ನು ನೋಡುವುದೇ ಒಂದು ಖುಷಿ.

    ಈ ಹಿಂದೆ ರಾಮ್ ಲೀಲಾ ಸಿನಿಮಾದಲ್ಲೂ ದೀಪಿಕಾ `ನಗಾಡ ಸಂಗ್ ಡೋಲ್ ಬಾಜೆ’ ಹಾಡಿನಲ್ಲಿ ಕೆಂಪು ಲಹೆಂಗಾ ಹಾಕಿ ಕುಣಿದಿದ್ದರು. ಅಂದಿನ ಹಾಡಿಗೂ ಈ ಘೂಮರ್ ಹಾಡಿಗೂ ತುಂಬಾ ವ್ಯತ್ಯಾಸಗಳನ್ನು ನೋಡಬಹುದಾಗಿದೆ. ರಾಜಸ್ಥಾನಿಯ ಸರಳ ಡ್ಯಾನ್ಸ್ ಮೂವ್‍ಮೆಂಟ್ ಗಳಲ್ಲಿ ದೀಪಿಕಾ ಘೂಮರ್ ನೃತ್ಯಕ್ಕೆ ಗೆ ಜೀವ ತುಂಬಿದ್ದಾರೆ. ಹಾಡಿನಲ್ಲಿ ದೀಪಿಕಾ ಭಾರೀ ತೂಕದ ಆಭರಣಗಳನ್ನು ಧರಿಸಿ 66 ಬಾರಿ ಸುತ್ತಗಳನ್ನು ಹಾಕಿದ್ದಾರೆ.

    ಹಾಡಿನ ಸಾಹಿತ್ಯ ಎ.ಎಂ.ತುರಾಜ್ ಲೇಖನಿಯಲ್ಲಿ ಮೂಡಿಬಂದಿದ್ದು, ಶ್ರೇಯಾ ಘೋಷಾಲ್ ಮತ್ತು ಸ್ವರೂಪ್ ಖಾನ್ ಸಂಗಡಿಗರು ಹಿನ್ನಲೆ ಧ್ವನಿಯಾಗಿದ್ದಾರೆ. ಕೃತಿ ಮಹೇಶ್ ಮಿದ್ಯಾ, ಘೂಮರ್ ನೃತ್ಯದ ಕಲಾವಿದೆ ಜ್ಯೋತಿ ಡಿ. ತೊಮ್ಮರ್ ಅವರಿಂದ ದೀಪಿಕಾ ಈ ರಾಜಸ್ಥಾನಿ ಜನಪದ ಶೈಲಿಯ ನೃತ್ಯವನ್ನು ಕಲಿತಿದ್ದಾರೆ.

    ಇದನ್ನೂ ಓದಿ: ಪದ್ಮಾವತಿ ರಂಗೋಲಿ ವಿವಾದ- 48 ಗಂಟೆ ಸಮಯದಲ್ಲಿ ಬಿಡಿಸಿದ್ದ ರಂಗೋಲಿಯನ್ನು ಅಳಿಸಿದ್ದ ಆರೋಪಿಗಳ ಅರೆಸ್ಟ್

    ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ಮಾಹಾರಾವಲ್ ರತನ್ ಸಿಂಗ್ ನಾಗಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇದೇ ಡಿಸೆಂಬರ್ 1ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: `ಪದ್ಮಾವತಿ’ ಲೆಹೆಂಗಾದ ತೂಕ ಕೇಳಿದರೆ ಶಾಕ್ ಆಗ್ತೀರಿ!