Tag: Video shooting

  • ಫ್ರೆಂಡ್ಸ್ ನಡುವಿನ ಘಟನೆಯನ್ನ ಎಲ್ಲಿಗೋ ತೆಗೆದುಕೊಂಡು ಹೋಗ್ಬೇಡಿ: ಉಡುಪಿ ಕೇಸ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ

    ಫ್ರೆಂಡ್ಸ್ ನಡುವಿನ ಘಟನೆಯನ್ನ ಎಲ್ಲಿಗೋ ತೆಗೆದುಕೊಂಡು ಹೋಗ್ಬೇಡಿ: ಉಡುಪಿ ಕೇಸ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ

    ಬೆಂಗಳೂರು: ಕಾಲೇಜುಗಳಲ್ಲಿ ಸ್ನೇಹಿತರ ನಡುವೆ ಕೆಲ ಘಟನೆಗಳು ನಡೆಯುತ್ತದೆ. ಅದನ್ನು ಎಲ್ಲಿಗೋ ತೆಗೆದುಕೊಂಡು ಹೋಗೋದಲ್ಲ. ಅದನ್ನು ಕಾಲೇಜು ಪ್ರಾಂಶುಪಾಲರಿಗೆ ಬಿಡಬೇಕು. ಅದನ್ನು ಮೀರಿದ ಘಟನೆ ಏನಾದ್ರೂ ಆದರೆ ನಾವು ಮುಂದೆ ಹೋಗಬೇಕು ಎಂದು ಗೃಹಸಚಿವ ಜಿ. ಪರಮೇಶ್ವರ್ (G Parameshwara) ಹೇಳಿಕೆ ನೀಡಿದ್ದಾರೆ.

    ಉಡುಪಿ (Udupi) ಖಾಸಗಿ ಕಾಲೇಜಿನಲ್ಲಿ (College) ಮಹಿಳೆಯರ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ (Video Shooting) ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಘಟನೆ ನಡೆದ ಕಾಲೇಜಿನ ಆಡಳಿತ ವೀಡಿಯೋ ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ಕೈಗೊಂಡಿದೆ. ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಯುನಿವರ್ಸಿಟಿ ಕಮಿಷನ್ ಆ್ಯಂಟಿ ರ‍್ಯಾಗಿಂಗ್ ಕಮಿಟಿ ಮಾಡಿದೆ. ನಾವು ಅಲ್ಲಿ ಹ್ಯಾಂಡಲ್ ಮಾಡಬಹುದು. ಯಾವಾಗ ಇದನ್ನು ಹೆಚ್ಚಿನ ರೀತಿಯಲ್ಲಿ ಬಿಂಬಿಸಲು ಹೊರಟ್ರು. ಪೊಲೀಸರು ಸತ್ಯಾಸತ್ಯತೆ ನೋಡೋದಾಗಿ ಹೇಳಿದ್ದಾರೆ. ನಾನು ಕೂಡಾ ಸತ್ಯಾಸತ್ಯತೆ ತಿಳಿಯಲು ಸೂಚಿಸಿದ್ದೇನೆ ಎಂದು ತಿಳಿಸಿದರು.

    ನಾನು ಇದನ್ನು ಸಣ್ಣ ಘಟನೆ ಎಂದು ಹೇಳಿರುವ ಅರ್ಥ ಕಾಲೇಜಿನ ವಿಚಾರ ಎಂಬುದು. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಅಗತ್ಯವಿಲ್ಲ. ಇದು ಸಾಮಾನ್ಯವಾಗಿ ನಡೆದ ಘಟನೆ. ಯಾವುದೇ ಸಂಘ ಸಂಸ್ಥೆಗಳಾಗಬಹುದು. ವೈಯಕ್ತಿಕವಾಗಿ ಶಾಸಕರು, ಸಂಸದರು ಪತ್ರ ಕೊಟ್ಟಾಗ ಬಹಳಷ್ಟು ಅಮಾಯಕರಿದ್ದಾರೆ ಅವರ ಬಿಡುಗಡೆ ಆಗಬೇಕು ಎಂಬ ಮನವಿ ಬಂತು. ಅದನ್ನು ಏಕಾಏಕಿ ತೆಗೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಕ್ಯಾಬಿನೆಟ್ ಸಬ್ ಕಮಿಟಿ ಮಾಡಲಾಗುತ್ತೆ. ಆ ಫೈಲ್ ಸರಿ ಇದೆ ಅಂದ್ರೆ ಸಬ್ ಕಮಿಟಿ ಮಾಡಿ ಕಲೆಕ್ಟ್ ಮಾಡಲಾಗುತ್ತೆ. ಫೈಲ್ ತಗೋಬೋದು, ಬಿಡಬಹುದು ಎಂಬುದು ಅಲ್ಲಿ ನಿರ್ಧಾರ ಆಗುತ್ತೆ. ನಂತರ ಕ್ಯಾಬಿನೆಟ್ ತೆಗೆದುಕೊಂಡು ಹೋಗಿ ಸರಿ ಇದೆ, ಇಲ್ಲ ಎಂದು ನಿರ್ಧರಿಸಲಾಗುತ್ತದೆ. ನಾವು ಹಿಂದೆ ಕೂಡ ಕೆಲ ಕೇಸ್ ವಾಪಸ್ ಪಡೆದಿದ್ದೇವೆ. ಬೊಮ್ಮಾಯಿ, ಆರಗ ಜ್ಞಾನೇಂದ್ರ ಕೂಡಾ ಗೃಹಸಚಿವರು ಆಗಿದ್ದವರು. ಅವರಿಗೆ ಪ್ರಕ್ರಿಯೆ ಗೊತ್ತಿಲ್ವಾ? ರಾಜಕಾರಣ ಮಾಡಲು ಹೀಗೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ವೀಡಿಯೋ ಶೂಟಿಂಗ್ ಯಾವ ರೀತಿ ಪ್ರ್ಯಾಂಕ್: ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ ಪ್ರಶ್ನೆ

    ಕಾಂಗ್ರೆಸ್ ಸರ್ಕಾರ ಆರೋಪಿಗಳ ರಕ್ಷಣೆಗೆ ನಿಂತಿದೆ ಎಂಬ ಬೊಮ್ಮಾಯಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ರಾಜ್ಯದ ಜನ ಪ್ರಜ್ಞಾವಂತರು. ನಮಗೆ ಕಾಂಗ್ರೆಸ್ ಸರ್ಕಾರ ಬೇಕು ಅಂತ ತಂದಿದ್ದಾರೆ. ಇವರಿಗೆ ಬೇಕಾದಂತೆ ವ್ಯಾಖ್ಯಾನ ಮಾಡಿದ್ರೆ ಸರಿಯಲ್ಲ. ಮಣಿಪುರ ಘಟನೆಗೂ ಉಡುಪಿಗೆ ಹೋಲಿಕೆ ವಿಚಾರವನ್ನು ನಾವು ಏನು ಅಂತ ಹೇಳಬೇಕು ಗೊತ್ತಿಲ್ಲ. ಅದಕ್ಕಾಗಿ ಕಮಿಷನ್ ಇದೆ. ಎರಡೂ ಘಟನೆ ಒಂದಕ್ಕೆ ತಳಕು ಹಾಕಲಾಗಲ್ಲ. ವರದಿ ಬರಲಿ ನಂತರ ನೋಡೋಣ. ತನಿಖೆ ನಡೆಯುತ್ತಿದೆ, ನೋಡೋಣ ಎಂದು ಪರಮೇಶ್ವರ್ ಹೇಳಿಕೆ ನೀಡಿದರು. ಇದನ್ನೂ ಓದಿ: ಉಡುಪಿ ಹೆಸರಿನಲ್ಲಿ ಹರಿದಾಡುತ್ತಿರುವ ಎಲ್ಲಾ ವಿಡಿಯೋಗಳು ಸುಳ್ಳು: ಖುಷ್ಬು ಸುಂದರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕದ್ದು ಮುಚ್ಚಿ ಪ್ರೇಮಿಗಳ ವಿಡಿಯೋ ಸೆರೆ ಹಿಡಿಯುತ್ತಿದ್ದ ಭೂಪನಿಗೆ ಬಿದ್ವು ಗೂಸಾ

    ಕದ್ದು ಮುಚ್ಚಿ ಪ್ರೇಮಿಗಳ ವಿಡಿಯೋ ಸೆರೆ ಹಿಡಿಯುತ್ತಿದ್ದ ಭೂಪನಿಗೆ ಬಿದ್ವು ಗೂಸಾ

    – ಕಬ್ಬನ್ ಪಾರ್ಕಿಗೆ ಬರುವ ಪ್ರೇಮಿಗಳೇ ಹುಷಾರ್!

    ಬೆಂಗಳೂರು: ನಗರದ ಕಬ್ಬನ್ ಪಾರ್ಕಿಗೆ ಬರುವ ಪ್ರೇಮಿಗಳೇ ಹುಷಾರ್! ಕಬ್ಬನ್ ಪಾರ್ಕ್ ನಲ್ಲಿ ಪ್ರೇಮಿಗಳಿಗೆ ಯಾವುದೇ ಸೇಫ್ಟಿ ಇಲ್ಲ. ನಿಮ್ಮ ಏಕಾಂತದ ವಿಡಿಯೋವನ್ನು ನಿಮಗೆ ಗೊತ್ತಿಲ್ಲದಂತೆ ರೆಕಾರ್ಡ್ ಮಾಡುತ್ತಿದ್ದಾರೆ ಎಚ್ಚರ.

    ಪ್ರೇಮಿಗಳಿಬ್ಬರು ಕಬ್ಬನ್ ಪಾರ್ಕ್ ನಲ್ಲಿ ಕಾಲ ಕಳೆಯುತ್ತಿದ್ದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ವ್ಯಕ್ತಿಯೊಬ್ಬ ಇಂದು ಗೂಸಾ ತಿಂದಿದ್ದಾನೆ. ಸುಧೀರ್ ಪ್ರೇಮಿಗಳ ವಿಡಿಯೋ ಮಾಡಿ ಥಳಿತಕ್ಕೆ ಒಳಗಾದ ಆರೋಪಿ.

    ಸುಧೀರ್ ಇಂದು ಮಧ್ಯಾಹ್ನ ಕಬ್ಬನ್ ಪಾರ್ಕ್ ನಲ್ಲಿ ಕದ್ದು ಮುಚ್ಚಿ ಪ್ರೇಮಿಗಳ ಏಕಾಂತದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಪ್ರೇಮಿಗಳು ಮೊಬೈಲ್ ತೋರಿಸಿ ಎಂದು ಕೇಳಿದ್ದಾರೆ. ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿರುವ ವಿಡಿಯೋವನ್ನು ತೋರಿಸಲು ಸುಧೀರ್ ನಿರಾಕರಿಸಿದ್ದಕ್ಕೆ ಆತನ ಮೇಲೆ ಪ್ರೇಮಿಗಳಿಬ್ಬರು ಕಲ್ಲಿಂದ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾರೆ. ಪರಿಣಾಮ ವಿಡಿಯೋ ಮಾಡುತ್ತಿದ್ದ ಕಿರಾತಕನ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕಬ್ಬನ್ ಪಾರ್ಕ್ ಪೊಲೀಸರು, ಸುಧೀರ್ ನನ್ನ ಬೌರಿಂಗ್ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆಗೆ ಕೊಡಿಸಿದ್ದಾರೆ.

    ಪಾರ್ಕ್ ಗಳಲ್ಲಿ ಕಾಲ ಕಳೆಯುವುಕ್ಕೆ ಬರುವ ಪ್ರೇಮಿಗಳ ವಿಡಿಯೋವನ್ನು ಮಾಡಿ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಘಟನೆಗಳು ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಪ್ರೇಮಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳು ನಡೆದಿದ್ದವು. ಇದೆಲ್ಲಾ ಕಬ್ಬನ್ ಪಾರ್ಕ್ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಮೌನವನ್ನು ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.