Tag: video call

  • ವಾಟ್ಸಪ್ ಹ್ಯಾಕ್ ಮಾಡಿ ನನ್ನ ಸ್ನೇಹಿತೆಯರಿಗೆ ಅಶ್ಲೀಲ ಕರೆ ಮಾಡುತ್ತಿದ್ದಾರೆ: ನಟಿ ತೇಜಸ್ವಿ

    ವಾಟ್ಸಪ್ ಹ್ಯಾಕ್ ಮಾಡಿ ನನ್ನ ಸ್ನೇಹಿತೆಯರಿಗೆ ಅಶ್ಲೀಲ ಕರೆ ಮಾಡುತ್ತಿದ್ದಾರೆ: ನಟಿ ತೇಜಸ್ವಿ

    ಮುಂಬೈ: ನನ್ನ ವಾಟ್ಸಪ್ ನಂಬರನ್ನು ಯಾರೋ ಹ್ಯಾಕ್ ಮಾಡಿ ನನ್ನ ಸ್ನೇಹಿತೆಯರಿಗೆ ಅಶ್ಲೀಲ ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಮುಂಬೈನ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ.

    ನನ್ನ ವಾಟ್ಸಪ್ ಹ್ಯಾಕ್ ಮಾಡಿರುವ ಆತ ನನ್ನ ಸಂಪರ್ಕದಲ್ಲಿರುವ ಎಲ್ಲರಿಗೂ ಮೆಸೇಜ್ ಮಾಡುತ್ತಿದ್ದಾನೆ. ಮೊದಲಿಗೆ ನಯವಾಗಿ ಮೆಸೇಜ್ ಮಾಡುವ ಆತ ನಂತರ ಅಶ್ಲೀಲ ಲಿಂಕ್ ಕಳುಹಿಸುತ್ತಾನೆ. ಬಳಿಕ ಈ ಲಿಂಕ್‌ನಿಂದ ಬರುವ ಕೋಡ್ ಕಳುಹಿಸಿ ಎಂದು ಕೇಳುತ್ತಾನೆ. ಕೋಡ್ ಕಳುಹಿಸಿದ ನಂತರ ವಿಡಿಯೋ ಕಾಲ್ ಬರುತ್ತದೆ. ಕರೆ ಸ್ವೀಕರಿಸಿದ ನಂತರ ಓರ್ವ ನಗ್ನವಾಗಿ ಅಸಹ್ಯಕರ ಕೃತ್ಯ ಮಾಡುತ್ತಾನೆ ಎಂದು ನಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ನಟಿ ತೇಜಸ್ವಿ, ಭಾನುವಾರ ನಾನು ನನ್ನ ಧಾರವಾಹಿಯ ವಿಶೇಷ ಸಂಚಿಕೆಯನ್ನು ಚಿತ್ರೀಕರಣ ಮಾಡುತ್ತಿದ್ದೆ. ಈ ವೇಳೆ ನನ್ನ ಮೊಬೈಲ್‌ಗೆ ಒಂದು ವಿಡಿಯೋ ಕರೆ ಬಂತು ನಾನು ಅದನ್ನು ಸ್ವೀಕರಿಸಿದಾಗ ಅದರಲ್ಲಿ ಒಬ್ಬ ನಗ್ನ ಮನುಷ್ಯ ನಿಂತುಕೊಂಡು ಅಸಹ್ಯವಾಗಿ ಏನೋ ಮಾಡುತ್ತಿದ್ದ. ಇದನ್ನು ನೋಡಿದ ನಾನು ಭಯಪಟ್ಟು ಕರೆಯನ್ನು ಕಟ್ ಮಾಡಿದೆ ಎಂದು ವಿವರಿಸಿದ್ದಾರೆ.

    ನನಗೆ ಮಾಡಿದ ರೀತಿಯಲ್ಲೇ ನನ್ನ ನಂಬರ್‌ನಿಂದ ನನ್ನ ಸಹೋದ್ಯೋಗಿಗಳಿಗೆ ಮತ್ತು ಸ್ನೇಹಿತರಿಗೆ ಸೇರಿದಂತೆ ಹಲವರಿಗೆ ಈ ರೀತಿ ಅಶ್ಲೀಲ ವಿಡಿಯೋ ಕರೆಗಳನ್ನು ಮಾಡಲಾಗಿದೆ. ನಟಿಯರಾದ ಕರಿಷ್ಮಾ ತನ್ನಾ, ತಾನ್ಯಾ ಶರ್ಮಾ ಇನ್ನೂ ಅನೇಕರಿಗೆ ಈ ರೀತಿ ಕರೆ ಹೋಗಿದೆ. ಅವರು ನನಗೆ ಕರೆ ಮಾಡಿ ಈ ವಿಚಾರ ತಿಳಿಸಿದರು. ನಾನು ಒಬ್ಬಳು ಹುಡುಗಿಯಾಗಿ, ನಟಿಯಾಗಿ ಈ ವಿಚಾರದಲ್ಲಿ ತುಂಬಾ ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ತೇಜಸ್ವಿ ಅಸಮಾಧಾನ ಹೊರಹಾಕಿದ್ದಾರೆ.

    ನಾನು ಈ ವಿಚಾರದ ಬಗ್ಗೆ ನನ್ನ ನಿವಾಸದ ಹತ್ತಿರದಲ್ಲಿರುವ ಗೋರೆಗಾಂವ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಅವರು ನನ್ನನ್ನು ಠಾಣೆಗೆ ಬರಲು ಹೇಳಿದ್ದರು. ಆದರೆ ನಾನು ಸತತವಾಗಿ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಕಾರಣ ಹೋಗಲು ಸಾಧ್ಯವಾಗಿರಲಿಲ್ಲ. ನಾನು ಶೀಘ್ರದಲ್ಲೇ ಪೊಲೀಸ್ ಠಾಣೆಗೆ ಹೋಗಿ ಬೇಕಾದ ಮಾಹಿತಿ ನೀಡಿ ಬರುತ್ತೇನೆ ಎಂದು ತೇಜಸ್ವಿ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.

  • ವಿವಾಹಿತ ಪ್ರೇಮಿಗಾಗಿ ತಂಗಿ ಸ್ನಾನ ಮಾಡುವುದನ್ನು ವಿಡಿಯೋ ಕಾಲ್ ಮಾಡಿ ತೋರಿಸಿದ್ಳು

    ವಿವಾಹಿತ ಪ್ರೇಮಿಗಾಗಿ ತಂಗಿ ಸ್ನಾನ ಮಾಡುವುದನ್ನು ವಿಡಿಯೋ ಕಾಲ್ ಮಾಡಿ ತೋರಿಸಿದ್ಳು

    ಮುಂಬೈ: ಯುವತಿಯೊಬ್ಬಳು ತನ್ನ ವಿವಾಹಿತ ಪ್ರಿಯಕರನಿಗಾಗಿ ತಂಗಿ ಸ್ನಾನ ಮಾಡುವುದನ್ನು ವಿಡಿಯೋ ಕಾಲ್ ಮಾಡಿ ತೋರಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    25 ವರ್ಷದ ಯುವತಿ ಆರೋಪಿ ದಿನೇಶ್ ಮೌರ್ಯನ ಜೊತೆ ನಾಲ್ಕು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದಳು. ದಿನೇಶ್‍ಗೆ ಈಗಾಗಲೇ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ದಿನೇಶ್ ಹಾಗೂ ಯುವತಿ ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದರು.

    ದಿನೇಶ್, ಯುವತಿ ಬಳಿ ಆಕೆಯ ತಂಗಿಯ ನಗ್ನ ಫೋಟೋವನ್ನು ಕೇಳಿದ್ದಾನೆ. ಆಗ ಯುವತಿ ತನ್ನ ತಂಗಿ ಶವರ್ ನಲ್ಲಿ ಸ್ನಾನ ಮಾಡುವಾಗ ಕದ್ದು ಮುಚ್ಚಿ ವಿಡಿಯೋ ಕಾಲ್ ಮಾಡಿ ತನ್ನ ಪ್ರಿಯಕರನಿಗೆ ತೋರಿಸಿದ್ದಾಳೆ. ವಿಡಿಯೋ ಕಾಲ್ ಮಾಡಿದ ಸಂದರ್ಭದಲ್ಲಿ ದಿನೇಶ್ ತನ್ನ ಮೊಬೈಲಿನಲ್ಲಿ ಸ್ಕ್ರೀನ್ ಶಾಟ್ ತೆಗೆದು ಸೇವ್ ಮಾಡಿಕೊಂಡಿದ್ದನು.

    ಬುಧವಾರ ಮೊಬೈಲಿನಲ್ಲಿ ಸೇವ್ ಆಗಿದ್ದ ಫೋಟೋಗಳನ್ನು ದಿನೇಶ್ ಪತ್ನಿ ನೋಡಿದ್ದಾಳೆ. ಫೋಟೋ ನೋಡಿದ ಬಳಿಕ ಪತ್ನಿ, ಯುವತಿಯ ಪೋಷಕರಿಗೆ ತಿಳಿಸಿದ್ದಾಳೆ. ಫೋಟೋ ನೋಡಿದ ನಂತರ ವಿಡಿಯೋ ಕಾಲ್ ವೇಳೆ ಸ್ಕ್ರೀನ್‍ಶಾಟ್ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿಯಿತು.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ದಿನೇಶ್ ಯುವತಿ ಬಳಿ ಆಕೆಯ ತಂಗಿಯ ನಗ್ನ ಫೋಟೋಗಳನ್ನು ಕಳುಹಿಸಿದರೆ, ಮದುವೆಯಾಗುವುದಾಗಿ ಮಾತು ನೀಡಿದ್ದನು. ದಿನೇಶ್ ಮಾತನ್ನು ನಂಬಿದ ಯುವತಿ ತನ್ನ ತಂಗಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ್ದಾಳೆ ಎಂದು ಹೇಳಿದ್ದಾರೆ.

    ಸದ್ಯ ಸಂತ್ರಸ್ತ ಯುವತಿ ತನ್ನ ಸಹೋದರಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.

  • ಆಡಿಯೋ ವೈರಲ್ ಬೆನ್ನಲ್ಲೇ ಪೀಠತ್ಯಾಗಕ್ಕೆ ಮುಂದಾದ ಕಣ್ವಮಠದ ಸ್ವಾಮೀಜಿ

    ಆಡಿಯೋ ವೈರಲ್ ಬೆನ್ನಲ್ಲೇ ಪೀಠತ್ಯಾಗಕ್ಕೆ ಮುಂದಾದ ಕಣ್ವಮಠದ ಸ್ವಾಮೀಜಿ

    -ಕೆಲವರ ಷಡ್ಯಂತ್ರಕ್ಕೆ ಬಲಿಪಶು ಆಗಿದ್ದೇನೆ

    ಯಾದಗಿರಿ: ಜಿಲ್ಲೆಯ ಕಣ್ವಮಠ ಕಾಮಿಸ್ವಾಮಿಯ ಕಾಮಪುರಾಣ ಆಡಿಯೋ ಸ್ಥಳೀಯ ಮಟ್ಟದಲ್ಲಿ ಬಾರಿ ಸುದ್ದಿಯಲ್ಲಿದೆ. ಆದರೆ ಇದರಲ್ಲಿ ನಂದೇನು ತಪ್ಪಿಲ್ಲ, ಇದೆಲ್ಲಾ ಷಡ್ಯಂತ್ರ ಎಂದು ಕಣ್ವಮಠದ ವಿದ್ಯಾವಾರೀಧಿತೀರ್ಥ ಸ್ವಾಮೀಜಿ ಪೀಠತ್ಯಾಗ ಮಾಡಲು ಮುಂದಾಗಿದ್ದಾರೆ.

    ಸುರಪುರ ತಾಲೂಕಿನ ಹುಣಸಿಹೊಳಿ ಗ್ರಾಮದ ಪ್ರಸಿದ್ಧ ಕಣ್ವಮಠ, ಪೀಠಾಧಿಪತಿ ಶ್ರೀ 1008 ವಿದ್ಯಾವಾರೀಧಿತೀರ್ಥ ಸ್ವಾಮಿಯ ಅಕ್ರಮ ಸಂಬಂಧ ಬಟಾ ಬಯಲಾಗಿದೆ. ಸಾಕ್ಷಿಗಳು ಸ್ವಾಮಿಯ ವಿರುದ್ಧವೇ ಇದ್ದರೂ ಇದರಲ್ಲಿ ನಂದೇನು ತಪ್ಪಿಲ್ಲ ಎಂದು ಸ್ವಾಮೀಜಿ ಹೇಳುತ್ತಿದ್ದಾರೆ. ಸ್ವಾಮೀಜಿ ಮೈಸೂರು ಮೂಲದ ಮಹಿಳೆ ಜೊತೆ ಅಸಭ್ಯಕರವಾಗಿ ವಾಟ್ಸಪ್‍ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆ ಜೊತೆ ಸ್ವಾಮೀಜಿ ನಡೆಸಿರುವ ಚಾಟಿಂಗ್ ಫೋಟೋಗಳು, ವೀಡಿಯೋಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಗಳಿಂದ ಹೊರ ಬಂದಿವೆ. ಇದನ್ನೂ ಓದಿ:ಈಗ ಬರ್ತಿಯಾ, ನಾನು ಬೇಡ್ವಾ- ಕಾಮಿಸ್ವಾಮಿಯ ಆಡಿಯೋ ಔಟ್

    ಈ ಸ್ವಾಮೀಜಿಗೆ ಈಗಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು, ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಸ್ವಾಮಿ ಮೇಲಿದೆ. ಎಷ್ಟೇಲ್ಲಾ ಸಾಕ್ಷಿಗಳು ಸ್ವಾಮೀಜಿಯ ವಿರುದ್ಧವಿದ್ದರೂ ನಾನೇನು ಮಾಡಿಲ್ಲ, ನನ್ನ ಹೆಸರನ್ನು ಹಾಳು ಮಾಡಲು ಮಠವನ್ನು ಕಂಡರೆ ಆಗದವರು ಈ ರೀತಿ ಮಾಡುತ್ತಿದ್ದಾರೆ. ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ನನಗೆ ಗೊತ್ತಿರದ ಮಹಿಳೆಯರು ಈ ರೀತಿ ಮೆಸೆಜ್ ಮಾಡಿದ್ದಾರೆ. ಆದರೆ ನಾನು ಅವರ ಬಳಿ ಅಸಭ್ಯವಾಗಿ ವರ್ತಿಸಿಲ್ಲ. ಅವರೇ ನನಗೆ ಮೊದಲು ಫೋಟೋ, ವಿಡಿಯೋ ಕಾಲ್ ಮಾಡಿದ್ದು ಎಂದು ಹೇಳಿದರು. ಪೀಠದಲ್ಲಿ ಇದ್ದುಕೊಂಡು ಈ ಆರೋಪವನ್ನು ನಾನು ಎದುರಿಸುವುದು ಸರಿಯಲ್ಲ. ಆದ್ದರಿಂದ ಪೀಠತ್ಯಾಗ ಮಾಡಿ ಆರೋಪವನ್ನು ಎದುರಿಸಿ, ಹೋರಾಡುತ್ತೇನೆ. ನಾನು ಯಾವ ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

    ಅಲ್ಲದೆ ನನ್ನ ಮೊಬೈಲ್‍ಗೆ ಲಾಕ್ ಇಟ್ಟಿಲ್ಲ. ಆದ್ದರಿಂದ ನನ್ನ ಫೋನ್ ತೆಗೆದುಕೊಂಡು ಯಾರೋ ನನ್ನ ವಿರುದ್ಧ ಈ ರೀತಿ ಷಡ್ಯಂತ್ರ ನಡೆಸಿದ್ದಾರೆ. ನನ್ನ ಧ್ವನಿಯಲ್ಲಿ ಕಾಲ್ ಮಾಡಿದ್ದಾರೆ, ನನ್ನ ಹೆಸರಿನಲ್ಲಿ ಮಹಿಳೆಯರೊಂದಿಗೆ ಚಾಟ್ ಮಾಡಿದ್ದಾರೆ. ನಾನು ಚಾಚುರ್ಮಾಸದ ಕಾರ್ಯಕ್ರಮಗಳಲ್ಲಿ ಇದ್ದಾಗ ಹೆಚ್ಚಾಗಿ ಮೊಬೈಲ್ ಬಳಸುತ್ತಿರಲಿಲ್ಲ. ಬೇಕಾದ ವ್ಯಕ್ತಿಗಳಿಗೆ ಕರೆ ಮಾಡಲು ಬಳಸುತ್ತಿದ್ದೆ. ಆದರೆ ನಾನು ಯಾರಿಗೂ ಚಾಟ್, ವಿಡಿಯೋ ಕಾಲ್ ಮಾಡಿಲ್ಲ ಎಂದರು.

    ಆಡಿಯೋ ಹೊರಬಂದಿರುವ ಬಗ್ಗೆ ಮಾತನಾಡಿ, ನನ್ನ ಧ್ವನಿಯಲ್ಲಿ ಯಾರೋ ಮಾತನಾಡಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ನಾನು ಮಾತನಾಡಿರುವುದು ಅಲ್ಲ ಎಂದು ಆರೋಪ ತಳ್ಳಿಹಾಕಿದ್ದಾರೆ. ನಿಮಗೆ ಕೇವಲ ಒಂದೆರಡು ನಂಬರ್‍ಗಳ ಚಾಟ್ ಮಾತ್ರ ಸಿಕ್ಕಿದೆ. ಆದ್ರೆ ಮೊದಲು ಮೂರ್ನಾಲ್ಕು ನಂಬರ್‍ಗಳಿಂದ ಏನು ಚಾಟ್ ಮಾಡಿದ್ದರು, ಏನೆಲ್ಲಾ ಫೋಟೋ ವಿಡಿಯೋ ಕಳುಹಿಸಿದ್ದರು ಎಂದು ನಿಮಗೆ ಗೊತ್ತಿಲ್ಲ. ಸಂಚು ರೂಪಿಸಿದ್ದಾರೆ ಅದ್ಯಾವುದನ್ನು ನಿಮಗೆ ತಲುಪಿಸಿಲ್ಲ. ಇದೆಲ್ಲಾ ಒಂದು ಸಂಚು, ನನ್ನ ಹೆಸರು ಹಾಳು ಮಾಡಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

    ಕಳೆದ 4-5 ವರ್ಷಗಳಿಂದಲೂ ಈ ರೀತಿ ಸಂಚುಗಳು ನನ್ನ ವಿರುದ್ಧ ನಡೆಯುತ್ತಲೇ ಬಂದಿದೆ. ನಾನು ಈ ಪೀಠವನ್ನು ಆರೋಹಣ ಮಾಡುತ್ತಿದ್ದಾಗ ಗಲಾಟೆ ಮಾಡಿದ ವ್ಯಕ್ತಿಗಳೇ ಇದರ ರುವಾರಿಗಳಾಗಿದ್ದಾರೆ. ಅವರೇ ನನ್ನ ವಿರುದ್ಧ ಸಂಚು ಹೂಡಿದ್ದಾರೆ. ಮಠದ ಟ್ರಸ್ಟ್ ಮುಖಾಂತರ, ಭಕ್ತರ ಸಹಾಯ ಪಡೆದು ಇದರ ತನಿಖೆ ನಡೆಸುತ್ತೇವೆ ಎಂದರು.

  • ಪತ್ನಿ ಜೊತೆ ಜಗಳ – ವಾಟ್ಸಪ್ ವಿಡಿಯೋ ಕಾಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತಿ

    ಪತ್ನಿ ಜೊತೆ ಜಗಳ – ವಾಟ್ಸಪ್ ವಿಡಿಯೋ ಕಾಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತಿ

    ಭೋಪಾಲ್: ಜಗಳವಾಡಿ ಕೋಪಗೊಂಡ ಪತಿಯೊಬ್ಬ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಪತ್ನಿಯ ಮುಂದೆಯೇ ನೇಣಿಗೆ ಶರಣಾದ ಘಟನೆ ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಪತಿಯನ್ನು 35 ವರ್ಷದ ಜೆಹಂಗೀರಾಬಾದ್ ನಿವಾಸಿ ಉಮೇಶ್ ಎಂದು ತಿಳಿದು ಬಂದಿದ್ದು, ತನ್ನ ಪತ್ನಿ ಆರತಿ ಕೃಷ್ಣಾ ಜನ್ಮಾಷ್ಟಮಿಯನ್ನು ನಮ್ಮ ತವರು ಮನೆಯಲ್ಲಿ ಮಾಡುತ್ತೇನೆ ಎಂದು ಹೇಳಿದ್ದಾಳೆ. ಇದನ್ನು ಉಮೇಶ್ ಒಪ್ಪಿರಲಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ.

    ಪತ್ನಿ ಆರತಿ ನಾನು ರಾಖಿ ಹಬ್ಬಕ್ಕೆ ನಮ್ಮ ತವರು ಮನೆಗೆ ಹೋಗಿಲ್ಲ. ಕೃಷ್ಣಾ ಜನ್ಮಾಷ್ಟಮಿಗೆ ಹೋಗಲೇ ಬೇಕು ಎಂದು ಹಠ ಹಿಡಿದಿದ್ದಾಳೆ. ಆರಂಭದಲ್ಲಿ ಈಕೆಯ ಮಾತಿಗೆ ಒಪ್ಪದ ಉಮೇಶ್ ಒಲ್ಲದ ಮನಸ್ಸಿನಿಂದಲೇ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಬೆರೇಶಿಯಾದಲ್ಲಿರುವ ತನ್ನ ಅತ್ತೆಯ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರ ನಡುವೆ ಜಗಳವಾಗಿದೆ. ನಂತರ ಉಮೇಶ್ ತನ್ನ ಏಳು ವರ್ಷದ ಮಗನನ್ನು ಕರೆದುಕೊಂಡು ವಾಪಸ್ ಮನೆಗೆ ಬಂದಿದ್ದಾನೆ.

    ಪತ್ನಿ ಜೊತೆ ಜಗಳವಾಡಿಕೊಂಡು ಮನೆಗೆ ವಾಪಸ್ ಬಂದ ಉಮೇಶ್ ಮಧ್ಯರಾತ್ರಿ ಪತ್ನಿ ಆರತಿಗೆ ವಿಡಿಯೋ ಕಾಲ್ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ. ನಂತರ ಪತ್ನಿ ಮಾತನಾಡಿದರೂ ಕೇಳಿಸಿಕೊಳ್ಳದ ಉಮೇಶ್ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ವಿಷಯ ತಿಳಿದ ತಕ್ಷಣ ಆರತಿ ಮನೆಯ ಪಕ್ಕದಲ್ಲೇ ವಾಸವಿದ್ದ ಉಮೇಶ್‍ನ ಸಹೋದರ ರಾಜುಗೆ ಕಾಲ್ ಮಾಡಿದ್ದಾಳೆ. ಆದರೆ ರಾಜು ಬಂದು ನೋಡುವುದರಲ್ಲಿ ಉಮೇಶ್ ನೇಣು ಹಾಕಿಕೊಂಡಿದ್ದನು. ಉಮೇಶ್ ರೋಶ್‍ಪುರದಲ್ಲಿ ಚಾಟ್ ಅಂಗಡಿ ಇಟ್ಟಿಕೊಂಡಿದ್ದು ನಷ್ಟ ಅನುಭವಿಸಿದ್ದನು. ಹಣದ ಸಮಸ್ಯೆ ವಿಚಾರವಾಗಿ ಗಂಡ ಹೆಂಡತಿಯ ನಡುವೆ ಯಾವಾಗಲು ಜಗಳ ನಡೆಯುತಿತ್ತು ಎಂದು ಪೊಲೀಸರು ಹೇಳಿದ್ದಾರೆ.

  • ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿದ ವ್ಯಕ್ತಿ

    ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿದ ವ್ಯಕ್ತಿ

    ಮುಂಬೈ: ವ್ಯಕ್ತಿಯೊಬ್ಬ ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿ ಅಶ್ಲೀಲವಾಗಿ ವರ್ತಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ರವಿಕಾಂತ್ ತಿವಾರಿ(36) ಬಂಧನಕ್ಕೊಳಗಾದ ಆರೋಪಿ. ರವಿಕಾಂತ್ ಮೊದಲು ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಬಟ್ಟೆ ಬಿಚ್ಚಿ ಅಶ್ಲೀಲವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದನ್ನು ನೋಡಿ ಮಹಿಳೆ ಗಾಬರಿಗೊಂಡು ತನ್ನ ಪತಿಗೆ ವಿಷಯವನ್ನು ತಿಳಿಸಿದ್ದಾರೆ.

    ಮಹಿಳೆ ಹಾಗೂ ಅವರ ಪತಿ ಆರೋಪಿ ರವಿಕಾಂತ್ ವಿರುದ್ಧ ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಮಹಿಳೆ, ಆರೋಪಿ ಎರಡು ಬಾರಿ ನನಗೆ ಕರೆ ಮಾಡಿ ಈ ರೀತಿ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಮತ್ತು ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಆರೋಪಿ ರವಿಕಾಂತ್‍ನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ರವಿಕಾಂತ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಆರೋಪಿ ರವಿಕಾಂತ್ ಬಳಿ ಇದ್ದ ಎರಡು ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪೊಲೀಸರ ಈ ಮೊಬೈಲ್ ಪರಿಶೀಲಿಸಿದಾಗ ಅಶ್ಲೀಲ ವಿಡಿಯೋ ಇರುವುದು ಪತ್ತೆ ಆಗಿದೆ. ಆರೋಪಿ ರವಿಕಾಂತ್ ಮಹಿಳೆಗೆ ಕರೆ ಮಾಡುತ್ತಿರುವ ನಂಬರ್ ರಾಧಾ ಎಂಬ ಹೆಸರಿನಲ್ಲಿ ನೊಂದಾಯಿಸಲಾಗಿದೆ.

  • ಕ್ಷೇತ್ರದ ಜನತೆಗೆ ಎಚ್. ವಿಶ್ವನಾಥ್ ಸಂದೇಶ

    ಕ್ಷೇತ್ರದ ಜನತೆಗೆ ಎಚ್. ವಿಶ್ವನಾಥ್ ಸಂದೇಶ

    ಮುಂಬೈ: ಹುಣಸೂರು ಕ್ಷೇತ್ರದ ಮತದಾರರಿಗೆ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರು ವಿಡಿಯೋ ಕಾಲ್ ಮಾಡುವ ಮೂಲಕ ಸಂದೇಶ ಕಳುಹಿಸಿದ್ದಾರೆ.

    ವಿಡಿಯೋದಲ್ಲಿ ವಿಶ್ವನಾಥ್ ಅವರು, ನಾನು ನನ್ನನ್ನು ದುಡ್ಡಿಗಾಗಿ ಮಾರಿಕೊಂಡವಲ್ಲ. ಇದು ನನ್ನ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರವಾಗಿದೆ. ನೀವು ನನ್ನ ಮೇಲೆ ವಿಶ್ವಾಸವಿಟ್ಟು ಕೊಟ್ಟಂತಹ ಮತಗಳಿಗೆ ಅಪಚಾರ ಮಾಡುವನು ನಾನಲ್ಲ ಎಂದಿದ್ದಾರೆ.

    ನೀವು ಮತಕೊಟ್ಟು ಹರಿಸಿದ ನಿಮ್ಮ ಶಾಸಕ ಪದೇ ಪದೇ ಆದ ಅವಮಾನ, ತಾರತಮ್ಯಗಳನ್ನು ನುಂಗಲಾರದೆ ತನ್ನ ಆತ್ಮಗೌರವಕ್ಕಾಗಿ, ಕ್ಷೇತ್ರದ ಜನರ ಸ್ವಾಭಿಮಾನ ಮತ್ತು ಒಳಿತಿಗಾಗಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ನನ್ನ ಮೇಲಿನ ಅನರ್ಹತೆ ತೀರ್ಪು ಅನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುತ್ತೇನೆ. ಸದ್ಯದಲ್ಲೇ ಹುಣಸೂರಿಗೆ ಭೇಟಿ ನೀಡಿ ನಿಮ್ಮ ಮುಂದೆ ವಾಸ್ತವ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

    ಭಾನುವಾರ ಸ್ಪೀಕರ್ ರಮೇಶ್ ಕುಮಾರ್ ತುರ್ತು ಸುದ್ದಿಗೋಷ್ಠಿ ಕರೆದು 14 ಮಂದಿ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದಾರೆ. ಹೀಗಾಗಿ ಇದರಿಂದ ಅತೃಪ್ತ ಶಾಸಕರು ತಮ್ಮ ಅನರ್ಹತೆಯ ಬಗ್ಗೆ ಪ್ರಶ್ನಿಸಿ ಇಂದು ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಇತ್ತ ಅನರ್ಹ ಬೆನ್ನಲ್ಲಿಯೇ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಹಾಗೂ ಎಂಟಿಬಿ ನಾಗರಾಜ್ ಈ ಐವರು ಶಾಸಕರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಭಾನುವಾರ ಮಧ್ಯರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ಏರ್ ಪೋರ್ಟಿಗೆ ಆಗಮಿಸಿದ್ದಾರೆ.

  • ಮಹಿಳೆಗೆ ವಿಡಿಯೋ ಕಾಲ್ ಮಾಡಿ ಹಸ್ತಮೈಥುನ

    ಮಹಿಳೆಗೆ ವಿಡಿಯೋ ಕಾಲ್ ಮಾಡಿ ಹಸ್ತಮೈಥುನ

    ಮುಂಬೈ: ವ್ಯಕ್ತಿಯೊಬ್ಬ ಮಹಿಳಾ ಸ್ಕ್ರಿಪ್ಟ್ ಬರಹಗಾರರೊಬ್ಬರಿಗೆ ವಿಡಿಯೋ ಕಾಲ್ ಮಾಡಿ ಹಸ್ತಮೈಥುನ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ವಿಡಿಯೋ ಕಾಲ್ ಮಾಡಿದ್ದ ಆರೋಪಿಯ ಮುಖ ಸರಿಯಾಗಿ ಕಾಣಿಸುತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. ತಕ್ಷಣ ಮಹಿಳೆ ಮುಂಬೈ ಪೊಲೀಸರಿಗೆ ಟ್ವೀಟ್ ಮಾಡಿ ಈ ಘಟನೆಯ ಬಗ್ಗೆ ಮಾಹಿತಿ ನೀಡಿ ಆನ್‍ಲೈನ್‍ನಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ಎಫ್‍ಐಆರ್ ದಾಖಲಿಸಲು ಖಾರ್ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದಾರೆ. ಅದರಂತೆಯೇ ಈ ಸಂಬಂಧ ಶನಿವಾರ ಬೆಳಗ್ಗೆ ಖಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ನಾನು ಮನೆಯಲ್ಲಿದ್ದಾಗ ಸಂಜೆ 4.21ಕ್ಕೆ ಸ್ಕೈಪ್ ಕರೆ ಬಂದಿತ್ತು. ನಾನು ರಿಸೀವ್ ಮಾಡಿದೆ. ಆಗ ಆತ ನನಗೆ ತನ್ನ ಖಾಸಗಿ ಅಂಗ ತೋರಿಸಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದನು. ಆತನ ಮುಖ ನೋಡಲು ಪ್ರಯತ್ನಿಸಿದೆ. ಆದರೆ ಆ ವ್ಯಕ್ತಿಯ ಮುಖವನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಕೊನೆಗೆ ಈ ಬಗ್ಗೆ ದೂರು ನೀಡಲು ನಾನು ಸ್ಕ್ರೀನ್‍ಶಾಟ್‍ಗಳನ್ನು ತೆಗೆದುಕೊಂಡು ಕರೆಯ ಸಂಪರ್ಕ ಕಡಿತಗೊಳಿಸಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

    ಈ ರೀತಿಯ ಘಟನೆ ಇದೇ ಮೊದಲನೆಯದು. ಆನ್‍ಲೈನ್‍ನಲ್ಲಿ ಹಸ್ತಮೈಥುನ ಮಾಡಿದ ವ್ಯಕ್ತಿಯ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಸಾಮಾನ್ಯವಾಗಿ ರಸ್ತೆಯಲ್ಲಿ ಇಂತಹ ಘಟನೆ ಸಂಭವಿಸುತ್ತವೆ. ಈ ಬಗ್ಗೆ ನಮಗೆ ದೂರುಗಳು ಬರುತ್ತವೆ. ಸದ್ಯಕ್ಕೆ ಆರೋಪಿಯ ನಂಬರ್ ಪತ್ತೆ ಮಾಡಲು ನಾವು ಸೈಬರ್ ಪೊಲೀಸರ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಅಪರಿಚಿತ ಆರೋಪಿಯ ಮೇಲೆ ಐಪಿಸಿ ಸೆಕ್ಷನ್ ಮತ್ತು ಮಾಹಿತಿ ತಂತ್ರಜ್ಞಾನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಕುರಿತು ಖಾರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಮಂಜುನಾಥ್ ಸಿಂಗೇ ಹೇಳಿದ್ದಾರೆ.

  • ವಿಡಿಯೋ ಕಾಲ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ

    ವಿಡಿಯೋ ಕಾಲ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ

    ಚಿತ್ರದುರ್ಗ: ಯುವಕನೊಬ್ಬ ವಿಡಿಯೋ ಕಾಲ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ.

    ಚಿತ್ರದುರ್ಗ ನಗರದ ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪಾವಗಡ ಮೂಲದ ಆರೋಪಿ ಹನುಮಂತಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಒಂದು ವಾರದ ಹಿಂದೆ ಯುವತಿ ಫೇಸ್‍ಬುಕ್ ಮೂಲಕ ನಂಬರ್ ತೆಗೆದುಕೊಂಡಿದ್ದು, ಮೆಸೇಜ್ ಮಾಡಲು ಶುರು ಮಾಡಿದ್ದಾನೆ. ಯುವತಿ ಮೆಸೇಜ್‍ಗೆ ಪ್ರತಿಕ್ರಿಯಿಸಲಿಲ್ಲ ಎಂದು ವಿಡಿಯೋ ಕರೆ ಮಾಡಲು ಶುರು ಮಾಡಿದ್ದಾನೆ.

    ವಿಡಿಯೋ ಕಾಲ್ ಮೂಲಕ ಅಸಭ್ಯವಾಗಿ ವರ್ತಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಕೊನೆಗೆ ಯುವತಿ ಪೋಷಕರಿಗೆ ಈ ಬಗ್ಗೆ ತಿಳಿಸಿದ್ದಾಳೆ. ತಕ್ಷಣ ಪೋಷಕರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿ ಪೋಷಕರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ, ಬಳಿಕ ವಾಪಸ್ ಕಳುಹಿಸಿದ್ದಾರೆ.

  • ಮಂಡ್ಯದ ಸೈನಿಕನ ಜೊತೆ ಸಾರಥಿ ವೀಡಿಯೋ ಕಾಲ್!

    ಮಂಡ್ಯದ ಸೈನಿಕನ ಜೊತೆ ಸಾರಥಿ ವೀಡಿಯೋ ಕಾಲ್!

    ಮಂಡ್ಯ: ಪ್ರಚಾರದ ಅಬ್ಬರ ನಡುವೆಯೇ ಯೋಧರೊಬ್ಬರ ಜೊತೆ ವಿಡಿಯೋ ಕಾಲ್ ಮೂಲಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತುಕತೆ ನಡೆಸಿದ್ದಾರೆ.

    ಶ್ರೀರಂಗಪಟ್ಟಣದ ಮೂಳೆಕೊಪ್ಪಲು ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಯೋಧ ತನ್ನ ನೆಚ್ಚಿನ ನಟನಿಗೆ ವಿಡಿಯೋ ಕಾಲ್ ಮಾಡಿ ಶುಭ ಹಾರೈಸಿದ್ದಾರೆ.

    ಮಧ್ಯಾಹ್ನದ ಊಟ ಮುಗಿಸಿ ಸೈನಿಕನ ಜೊತೆ ವೀಡಿಯೋ ಕಾಲ್ ಮೂಲಕ ಮಾತನಾಡಿದ ದರ್ಶನ್, ನಿಮ್ಮ ಮಾತಿನಿಂದ ನಮಗೆ ಮತ್ತಷ್ಟು ಧೈರ್ಯ ಸಿಕ್ಕಿದೆ ಎಂದು ಹೇಳಿದರು. ಅಭಿಮಾನಿ ಯೋಧ ಜಮ್ಮು ಗಡಿ ಸೇನಾ ಕ್ಯಾಂಪ್ ನಿಂದ ದರ್ಶನ್ ಅವರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಅಲ್ಲದೆ ಪೋಸ್ಟಲ್ ಬ್ಯಾಲಟ್ ಮೂಲಕ ಮತ ಹಾಕುವುದಾಗಿ ಹೇಳಿದ್ದಾರೆ. ಯೋಧನ ಮಾತಿಗೆ ದರ್ಶನ್ ಥ್ಯಾಂಕ್ಯೂ.. ಥ್ಯಾಂಕ್ಯೂ.. ಎಂದು ಹೇಳಿದ್ದಾರೆ.

  • ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಮಹಿಳೆ ನೇಣಿಗೆ ಶರಣು

    ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಮಹಿಳೆ ನೇಣಿಗೆ ಶರಣು

    ಜೈಪುರ: ದೆಹಲಿ ಮೂಲದ 28 ವರ್ಷದ ಮಹಿಳೆಯೊಬ್ಬರು ಹೋಟೆಲ್ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಮಿರ್ಜಾ ಖತೂನ್ ಆತ್ಮಹತ್ಯೆಗೆ ಶರಣಾದ ಮಹಿಳೆ. ಮಿರ್ಜಾ ಗುರುವಾರ ರಾತ್ರಿ ಜೈಪುರಕ್ಕೆ ಬಂದಿದ್ದು, ನಾಲ್ಕು ದಿನಗಳ ಕಾಲ ಮಿರ್ಜಾ ಹೋಟೆಲ್ ಬುಕ್ ಮಾಡಿದ್ದರು. ಆದರೆ ಎರಡು ದಿನದಿಂದ ಆಕೆ ರೂಮಿನಿಂದ ಹೊರಗೆ ಬಂದಿರಲಿಲ್ಲ. ರೂಮಿಗೆ ಊಟ ಮತ್ತು ಟೀ ಯನ್ನು ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ರೂಮಿನಲ್ಲಿಯೇ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮಿರ್ಜಾ ಮೂರು ವರ್ಷಗಳಿಂದ ರಣಧೀರ್ ವಿಶ್ವಕರ್ಮ ಎಂಬಾತನ ಜೊತೆ ಲಿವ್‍ಇನ್ ರಿಲೆಷನ್‍ಶಿಪ್‍ನಲ್ಲಿ ಇದ್ದರು. ಇವರಿಗೆ 4 ವರ್ಷದ ಮಗನೂ ಕೂಡ ಇದ್ದಾನೆ. ಆದರೆ ಕೆಲವು ತಿಂಗಳ ಹಿಂದೆ ಇಬ್ಬರ ಸಂಬಂಧವೂ ಮುರಿದು ಬಿದ್ದಿತ್ತು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

    ಮೃತ ಮಿರ್ಜಾ ರೂಮಿನಿಂದ ಹೊರಬಾರದೇ ಇದ್ದಾಗ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ನೋಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ರೂಮಿಗೆ ಬಾಗಿಲು ಹೊಡೆದು ಒಳ ಹೋಗಿದ್ದಾರೆ. ಆಗ ಮಿರ್ಜಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು 24 ಗಂಟೆಗಳ ಮುಂಚೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ತೀವ್ರ ಖಿನ್ನತೆಗೆ ಒಳಗಾಗಿದ್ದರಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಡಿಸಿಪಿ ಧರ್ಮೇಂದ್ರ ಸಾಗರ್ ಶಂಕಿಸಿದ್ದಾರೆ.

    ಮಿರ್ಜಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ತನ್ನ ಲವ್ವರ್ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಇಬ್ಬರು ಫೋನಿನಲ್ಲಿ ಸಂಭಾಷಣೆ ಮಾಡುವಾಗಲೇ ಮಿರ್ಜಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.