Tag: Vida

  • ಅಕ್ಷಯ್ ಕುಮಾರ್ ಸಿನಿಮಾ ವಿರುದ್ಧ ಸಿಡಿದೆದ್ದ ಉಜ್ಜಯಿನಿ ಅರ್ಚಕರು

    ಅಕ್ಷಯ್ ಕುಮಾರ್ ಸಿನಿಮಾ ವಿರುದ್ಧ ಸಿಡಿದೆದ್ದ ಉಜ್ಜಯಿನಿ ಅರ್ಚಕರು

    ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ‘ಓ ಮೈ ಗಾಡ್’ ಸಿನಿಮಾಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಿದೆ. ಈವರೆಗೂ ಸೆನ್ಸಾರ್ ಮಂಡಳಿಯಿಂದ ನಾನಾ ರೀತಿಯ ತೊಂದರೆಗಳನ್ನು ಅನುಭವಿಸಿದ್ದ ಚಿತ್ರತಂಡ, ಇದೀಗ ಉಜ್ಜಯಿನಿಯ ಮಹಾಕಾಳೇಶ್ವರ (Ujjain Mahakaleshwar) ದೇವಾಲಯದ ಅರ್ಚಕರ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ವಯಸ್ಕರ ಚಿತ್ರದ ಪ್ರಮಾಣ ಪತ್ರ ನೀಡಿರುವುದರಿಂದ ಅರ್ಚಕರು ಸಿಡಿದೆದ್ದಿದ್ದಾರೆ.

    ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಶಿವನ (Shiva) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಶಿವತಾಂಡವ ನೃತ್ಯ ಕೂಡ ಮಾಡುತ್ತಾರಂತೆ. ಆ ದೃಶ್ಯಗಳನ್ನು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಆ ದೃಶ್ಯಗಳನ್ನು ಚಿತ್ರದಿಂದ ಕೈ ಬಿಡಬೇಕು ಎಂದು ಅರ್ಚಕರು (Priests) ಆಗ್ರಹ ಮಾಡಿದ್ದಾರೆ. ಒಂದು ವೇಳೆ ದೃಶ್ಯಗಳನ್ನು ಡಿಲೀಟ್ ಮಾಡದೇ ಇದ್ದರೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಓ ಮೈ ಗಾಡ್ ವಯಸ್ಕರ ಸಿನಿಮಾ

    ಬಾಲಿವುಡ್ (Bollywood) ಹೆಸರಾಂತ ನಟ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಡ್ 2’ (Oh My God 2)  ಸಿನಿಮಾ ವಿವಾದಿತ ಅಂಶಗಳು ಇರುವ ಕಾರಣದಿಂದಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ (ಸಿ.ಬಿ.ಎಫ್.ಸಿ) ಸೆನ್ಸಾರ್ ಪತ್ರವನ್ನು (Censor) ಕೊಡಲು ನಿರಾಕರಿಸಿತ್ತು (Denial). ಜೊತೆಗೆ ಈ ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಡಲಾಗಿತ್ತು. ಪರಿಶೀಲನಾ ಸಮಿತಿಯು ಕೊನೆಗೂ ಚಿತ್ರಕ್ಕೆ ಪ್ರಮಾಣ ಪತ್ರ ದಯಪಾಲಿಸಿದೆ.

    ಸಿಬಿಎಫ್ಸಿ ಸಿನಿಮಾದ ಒಟ್ಟು 20 ಕಡೆ ದೃಶ್ಯಗಳನ್ನು ಕತ್ತರಿಸಲು ತಿಳಿಸಲಾಗಿತ್ತು. ಕೆಲವು ಕಡೆ ಮಾತುಗಳನ್ನು ಮ್ಯೂಟ್ ಮಾಡಲು ಹೇಳಲಾಗಿತ್ತು. ಇಷ್ಟೆಲ್ಲ ಮಾಡಿದರೂ ಚಿತ್ರಕ್ಕೆ ವಯಸ್ಕರು ನೋಡಬಹುದಾದ ಸಿನಿಮಾ ಎಂದು ‘ಎ’ ಸರ್ಟಿಫಿಕೇಟ್ ನೀಡಲಾಗಿತ್ತು. ಇದೀಗ ಒಂದಷ್ಟು ಬದಲಾವಣೆಯನ್ನು ಮಾಡಿಕೊಳ್ಳಲು ಹೇಳುವ ಮೂಲಕ ಪರಿಶೀಲನಾ ಸಮಿತಿಯೂ ‘ಎ’ ಪ್ರಮಾಣ ಪತ್ರ ನೀಡಿದೆ. ಹಾಗಾಗಿ 18 ವರ್ಷ ತುಂಬಿದವರು ಮಾತ್ರ ಈ ಸಿನಿಮಾ ನೋಡಬಹುದಾಗಿದೆ.

     

    ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸೆನ್ಸಾರ್ ಪತ್ರವನ್ನು ನೀಡಲು ನಿರಾಕರಿಸಿತ್ತು. ಲೈಂಗಿಕ ಶಿಕ್ಷಣದ ಕುರಿತಾಗಿ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಇಂತಹ ವಿಷಯವನ್ನು ಶಿವನ ಮೂಲಕ ಹೇಳಲು ಹೊರಟಿರುವುದು ಸೆನ್ಸಾರ್ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿ ಕೇರಳ ಸ್ಟೋರಿ ನಂತರ ವಿವಾದಕ್ಕೆ ಗುರಿಯಾಯ್ತು ತಮಿಳಿನ ಚಿತ್ರ

    ದಿ ಕೇರಳ ಸ್ಟೋರಿ ನಂತರ ವಿವಾದಕ್ಕೆ ಗುರಿಯಾಯ್ತು ತಮಿಳಿನ ಚಿತ್ರ

    ವಿವಾದದ ನಡುವೆಯೂ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ, (The Kerala Story) ಹಲವು ಚಿತ್ರಗಳಿಗೆ ಸ್ಫೂರ್ತಿಯಾಗುತ್ತಿದೆ. ತಮಿಳಿನಲ್ಲೂ (Tamil) ಇಂಥದ್ದೇ ಮಾದರಿಯ ಚಿತ್ರವೊಂದು ರೆಡಿಯಾಗಿದ್ದು, ಈ ಚಿತ್ರ ಕೂಡ ವಿವಾದಕ್ಕೆ ಕಾರಣವಾಗಿದೆ. ಆ ಚಿತ್ರವನ್ನು ತಡೆಯಬೇಕು ಎಂದು ಮುಸ್ಲಿಂ ಸಮುದಾಯ ಆಗ್ರಹಿಸಿದೆ.

    ಕೆಲವು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿರುವ ತಮಿಳಿನ ಫರ್ಹಾನಾ (Farhana) ಸಿನಿಮಾ ಕೂಡ ಮುಸ್ಲಿಂ ವಿರೋಧ ಧೋರಣೆಯನ್ನು ತೋರುತ್ತಿದೆ. ಹಾಗಾಗಿ ಮೂಲಭೂತವಾದಿಗಳು ಚಿತ್ರವನ್ನು ವಿರೋಧಿಸುತ್ತಿದ್ದಾರೆ. ಹಾಗಂತ ಇದು ಉಗ್ರರ ಕುರಿತಾದ ಸಿನಿಮಾವಲ್ಲ, ಮುಸ್ಲಿಂ ಮಹಿಳೆಯ ಮತ್ತೊಂದು ಮುಖವನ್ನು ಇದು ಅನಾವರಣ ಮಾಡಿದೆ. ಇದನ್ನೂ ಓದಿ:ಲವ್ಲಿ ಸ್ಟಾರ್ ಪ್ರೇಮ್- ಜ್ಯೋತಿ ದಾಂಪತ್ಯಕ್ಕೆ 25ರ ಸಂಭ್ರಮ

    ಮುಸ್ಲಿಂ ಮಹಿಳೆಯೊಬ್ಬರು ಬಡತನದ ಕಾರಣದಿಂದಾಗಿ ಲೈಂಗಿಕತೆ ಕುರಿತಾಗಿ ಮಾತನಾಡುವ ಕಾಲ್ ಸೆಂಟರ್ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಆಕೆ ವೃತ್ತಿಗೆ ಸಂಬಂಧಿಸಿದ ಸಂಕಟಗಳು ಏನು, ಬ್ಲಾಕ್ ಮೇಲರ್ ಒಬ್ಬನ ಕಿರುಕುಳದಿಂದ ಆಕೆ ಹೇಗೆ ಪಾರಾಗುತ್ತಾಳೆ ಹೀಗೆ ಕಥೆಯನ್ನು ಒಳಗೊಂಡಿದೆ. ಈ ಕಥೆಗೆ ಇಂಡಿಯನ್ ನ್ಯಾಷನಲ್ ಲೀಗ್ ಮತ್ತು ಕೆಲ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿವೆ.

    ನಾವು ಯಾರ ಮನಸ್ಸಿಗೂ ನೋವನ್ನುಂಟು ಮಾಡಿಲ್ಲ. ಉತ್ತಮವಾದ ಸಂದೇಶವನ್ನು ಹೊಂದಿರುವ ಸಿನಿಮಾ ಇದಾಗಿದೆ. ಯಾರ ವಿರುದ್ಧವೂ ನಾವು ಕಥೆಯನ್ನು ಹೇಳಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದ್ದರೂ, ಮುಸ್ಲಿಂ ಸಂಘಟನೆಗಳು ಮಾತ್ರ ಕಿವಿಗೊಟ್ಟಿಲ್ಲ. ಅಂದಹಾಗೆ ಈ ಸಿನಿಮಾವನ್ನು ನೆಲ್ಸನ್ ವೆಂಕಟೇಷನ್ ನಿರ್ದೇಶನ ಮಾಡಿದ್ದರೆ, ಐಶ್ವರ್ಯ ರಾಜೇಶ್  (Aishwarya Rajesh) ಮುಖ್ಯಪಾತ್ರ ನಿರ್ವಹಿಸಿದ್ದಾರೆ.

  • ರಜನಿಕಾಂತ್ ಸೂಪರ್ ಸ್ಟಾರ್ ಅಲ್ಲ: ಕಿಡಿಕಾರಿದ ನಟ ಪೋಸಾನಿ ಕೃಷ್ಣ

    ರಜನಿಕಾಂತ್ ಸೂಪರ್ ಸ್ಟಾರ್ ಅಲ್ಲ: ಕಿಡಿಕಾರಿದ ನಟ ಪೋಸಾನಿ ಕೃಷ್ಣ

    ಳೆದ ವಾರದಿಂದ ತಮಿಳಿನ ಹೆಸರಾಂತ ನಟ ರಜನಿಕಾಂತ್ (Rajinikanth) ಮೇಲೆ ತೆಲುಗು ಚಿತ್ರರಂಗದ ಹಲವು ನಟ ನಟಿಯರು ಮುಗಿ ಬಿದ್ದಿದ್ದಾರೆ. ಮೊನ್ನೆಯಷ್ಟೇ ಖ್ಯಾತ ನಟಿ ರೋಜಾ (Roja) ರಜನಿಕಾಂತ್ ವಿರುದ್ಧ ಗುಡುಗಿದ್ದರು. ಇದೀಗ ಹಿರಿಯ ನಟ ಪೋಸಾನಿ ಕೃಷ್ಣ ಮುರುಳಿ (Posani Krishna Murali) ಕೂಡ ರಜನಿ ವಿರುದ್ಧ ಮಾತನಾಡಿದ್ದಾರೆ. ನಮಗೆ ಸೂಪರ್ ಸ್ಟಾರ್ ಅಂದರೆ ರಜನಿಕಾಂತ್ ಅಲ್ಲ, ಚಿರಂಜೀವಿ ನಮಗೆ ಸೂಪರ್ ಸ್ಟಾರ್ ಎಂದಿದ್ದಾರೆ.

    ರಜನಿ ವಿರುದ್ಧ ನಟ ನಟಿಯರು ತಿರುಗಿ ಬಿದ್ದಿರುವುದಕ್ಕೆ ಕಾರಣ ಚಂದ್ರಬಾಬು ನಾಯ್ಡು (Chandrababu Naidu) ಅವರನ್ನು ರಜನಿ ಬಾಯ್ತುಂಬಾ ಹೊಗಳಿದ್ದರು. ಮಾಜಿ ಸಿಎಂ ಎನ್.ಟಿ.ಆರ್ ಅವರ ನೂರನೇ ಜನ್ಮದಿನದ ಪ್ರಯುಕ್ತ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ರಜನಿಕಾಂತ್ ಹೊಗಳಿದ್ದರು. ನಾಯ್ಡು ಪರವಾಗಿ ಮಾತನಾಡಿದ್ದರು. ಅದು ರಾಜಕೀಯ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದನ್ನೂ ಓದಿ:ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ

    ಚಂದ್ರುಬಾಬು ನಾಯ್ಡು ಅವರನ್ನು ಹೊಗಳಿದ ಕಾರಣದಿಂದಾಗಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಜನಿಕಾಂತ್ ಮಾತಿಗೆ ನಾವು ಗೌರವ ಕೊಡುವುದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ರಜನಿಕಾಂತ್ ಆಂಧ್ರಕ್ಕೆ ಬಂದು ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಪೋಸಾನಿ ಕೃಷ್ಣ ಮುರಳಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸದಸ್ಯರೂ ಆಗಿರುವುದರಿಂದ ಈ ಮಾತು ಸಹಜವಾಗಿದೆ.

    ರಜನಿಕಾಂತ್ ಬಗ್ಗೆ ಎರಡ್ಮೂರು ದಿನಗಳ ಹಿಂದೆಯಷ್ಟೇ ರೋಜಾ ಕೂಡ ಹರಿಹಾಯ್ದಿದ್ದರು. ರಜನಿಕಾಂತ್ ನೇರವಾಗಿ ರಾಜಕಾರಣಕ್ಕೆ ಬರಲಿ ಎಂದಿದ್ದರು. ಚಂದ್ರಬಾಬು ನಾಯ್ಡು ಎಂತಹ ರಾಜಕಾರಣಿ ಎಂದು ಅರಿತುಕೊಂಡು ಮಾತನಾಡಲಿ ಎಂದು ಸಲಹೆ ನೀಡಿದ್ದರು.

  • ಮತ್ತೊಂದು ವಿವಾದಕ್ಕೆ ಕಾರಣವಾಯ್ತು ಗಾಯಕಿ ಮಂಗ್ಲಿ ಹಾಡು

    ಮತ್ತೊಂದು ವಿವಾದಕ್ಕೆ ಕಾರಣವಾಯ್ತು ಗಾಯಕಿ ಮಂಗ್ಲಿ ಹಾಡು

    ಒಂದಿಲ್ಲೊಂದು ಕಾರಣದಿಂದಾಗಿ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ವಿವಾದಕ್ಕೀಡಾಗುತ್ತಿದ್ದಾರೆ. ಹಾಡಿನಲ್ಲಿ ಅವರು ಹೆಸರು ಎಷ್ಟು ಜನಪ್ರಿಯನೋ, ವಿವಾದದ ಕಾರಣದಿಂದಾಗಿಯೂ ಅಷ್ಟೇ ಫೇಮಸ್. ಇದೀಗ ಮಂಗ್ಲಿ ಹಾಡಿರುವ ಗೀತೆಯೊಂದು ವಿವಾದಕ್ಕೀಡಾಗಿದ್ದು, ಹಲವರು ಹಲವು ರೀತಿಯಲ್ಲಿ ಪ್ರಶ್ನೆ ಮಾಡುವಂತಾಗಿದೆ. ಅದರಲ್ಲೂ ಈ ಹಾಡನ್ನು ಶೂಟ್ ಮಾಡಿದವರ ವಿರುದ್ಧ ದೂರು ನೀಡುವಂತೆ ಆಗ್ರಹಿಸಲಾಗುತ್ತಿದೆ.

    ಪ್ರತಿ ಶಿವರಾತ್ರಿಯಂದು ಮಂಗ್ಲಿ ಹಾಡಿರುವ ಶಿವನ ಗೀತೆಯೊಂದು ಬಿಡುಗಡೆ ಆಗುತ್ತದೆ. ಅದನ್ನು ಅವರು ಸಂಪ್ರದಾಯ ಎನ್ನುವಂತೆ ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಶಿವರಾತ್ರಿ ದಿನದಂದೂ, ಅವರು ಹಾಡಿರುವ ಗೀತೆಯೊಂದು ರಿಲೀಸ್ ಆಗಿದೆ. ಅದೇ ಇದೀಗ ವಿವಾದಕ್ಕೆ ಕಾರಣವಾಗಿದೆ.  ಈ ಹಾಡು ದಕ್ಷಿಣದ ಕೈಲಾಸ ಎಂದೇ ಖ್ಯಾತಿಯಾಗಿರುವ ಶ್ರೀ ಕಾಳಹಸ್ತೀಶ್ವರಾಲಯದಲ್ಲಿ ಚಿತ್ರೀಕರಣವಾಗಿದ್ದು, ಮಂಗ್ಲಿ ದೇವಸ್ಥಾನದೊಳಗೆ ಕುಣಿದಿದ್ದಾರೆ.

    ಶ್ರೀಕಾಳಹಸ್ತಿಯಲ್ಲಿ ಒಂದು ಸಂಪ್ರದಾಯವಿದೆ. ಪ್ರತಿ ದಿನ ಸಂಜೆ 6 ಗಂಟೆಗೆ ರಾಹುಕೇತು ಪೂಜೆ ಮುಗಿದ ನಂತರ ಮಂಟಪ ಮುಚ್ಚಲಾಗುತ್ತದೆ. ಆದರೆ, ಮಂಗ್ಲಿ ಹಾಡಿನ ಚಿತ್ರೀಕರಣಕ್ಕಾಗಿ ವಿಶೇಷ ಮಂಟಪವನ್ನು ತೆರೆಯಲಾಗಿದೆ ಎನ್ನಲಾಗುತ್ತಿದೆ. ಅಲ್ಲದೇ, ದೇಗುಲದಲ್ಲಿ ಛಾಯಾಗ್ರಹಣಕ್ಕೆ ನಿರ್ಬಂಧವಿದ್ದರೂ, ಶೂಟಿಂಗ್ ಗೆ ಅನುಮತಿ ಕೊಟ್ಟವರು ಯಾರು? ಎನ್ನುವ ಪ್ರಶ್ನೆ ಮೂಡಿದೆ.

    ಕಾಳಹಸ್ತಿ ಕಾಲಭೈರವ ದೇವಸ್ಥಾನದಲ್ಲಿ ಶೂಟ್ ಮಾಡಿರುವ ‘ಭಂ ಭಂ ಭೋಲೆ’ ಹಾಡು ರಿಲೀಸ್ ಆಗಿ ವೈರಲ್ ಕೂಡ ಆಗಿದೆ. ಸುದ್ದಲ ಅಶೋಕ್ ತೇಜ್ ಈ ಹಾಡನ್ನು ಬರೆದಿದ್ದು, ಕಾಲಭೈರವ ಸ್ವಾಮಿ ವಿಗ್ರಹದ ಮುಂದೆಯೇ ಮಂಗ್ಲಿ ನೃತ್ಯವನ್ನೂ ಮಾಡಿದ್ದಾರೆ. ಜೊತೆಗೆ ಮುಕ್ಕಂಟಿ ದೇವಸ್ಥಾನದಲ್ಲೂ ಸಹ ಮಂಗ್ಲಿ ಡಾನ್ಸ್ ಮಾಡಿದ್ದಾಳೆ. ಆ ಹಾಡೇ ವಿವಾದಕ್ಕೆ ಕಾರಣವಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಿಷಬ್‌ಗೆ ಕಾಲಿಗೆ ಬಿದ್ದು ಬನ್ನಿ- ‘ಮಠ’ ನಿರ್ದೇಶಕನಿಗೆ ರಿಷಿ ಕುಮಾರ ಸ್ವಾಮಿ ಕ್ಲಾಸ್

    ರಿಷಬ್‌ಗೆ ಕಾಲಿಗೆ ಬಿದ್ದು ಬನ್ನಿ- ‘ಮಠ’ ನಿರ್ದೇಶಕನಿಗೆ ರಿಷಿ ಕುಮಾರ ಸ್ವಾಮಿ ಕ್ಲಾಸ್

    ನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ಮಠದ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿದೆ. ರವೀಂದ್ರ ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಮೊದಲ ಮಠ ಸಿನಿಮಾ ಮಾಡಿದ್ದ ಗುರುಪ್ರಸಾದ್, ತಬಲಾ ನಾಣಿ, ಮಂಡ್ಯ ರಮೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಠಗಳಿಗೆ ಮತ್ತು ಸ್ವಾಮೀಜಿಗಳಿಗೆ ಅವಮಾನಿಸಲಾಗಿದೆ ಎನ್ನುವ ಕಾರಣಕ್ಕಾಗಿ ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ಗರಂ ಆಗಿದ್ದಾರೆ.

    ಮಠ ಸಿನಿಮಾದ ಬಗ್ಗೆ ಮಾತನಾಡಿರುವ ರಿಷಿ ಕುಮಾರ್ ಸ್ವಾಮೀಜಿ, ನಿರ್ದೇಶಕನ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ‘ತಾಕತ್ತು ಇದ್ದರೆ ಹಿಂದೂ ಗುರುಗಳ ಬದಲು, ಮೌಲಿಗಳ ಬಗ್ಗೆ ಸಿನಿಮಾ ಮಾಡಿ. ಚರ್ಚೆ ಫಾದರ್ ಗಳ ಬಗ್ಗೆ ಚಿತ್ರ ಮಾಡಲಿ. ಇವರಿಗೆ ಹಿಂದೂ ಧರ್ಮಗುರುಗಳು ಟಾರ್ಗೆಟ್ ಯಾಕೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಮಠ ಸಿನಿಮಾದಲ್ಲಿ ಏನೆಲ್ಲ ಆವಾಂತರಗಳು ಆಗಿವೆ ನ್ನುವುದನ್ನು ಬಲ್ಲೆ ಎಂದದ್ದಾರೆ. ಇದನ್ನೂ ಓದಿ:ಗಡಿನಾಡ ಕನ್ನಡಿಗ ಎಂದ ರೂಪೇಶ್‌ ಶೆಟ್ಟಿಗೆ ಬೆದರಿಕೆ, ದೂರು ದಾಖಲಿಸಿದ ಕುಟುಂಬದವರು

    ‘ಮೌಲಿಗಳ ಬಗ್ಗೆ ಸಿನಿಮಾ ಮಾಡಲಿ ಚರ್ಚ್  ಫಾದರ್ ಗಳ ಬಗ್ಗೆ ಸಿನಿಮಾ ಮಾಡಲಿ. ಹಿಂದು ಸ್ವಾಮಿಗಳ ಬಗ್ಗೆ ಸಿನಿಮಾ ಮಾಡಿ ಕಾಸು ಮಾಡ್ಬೇಡಿ. ಈ ಸಿನಿಮಾ ರಿಲೀಸ್ ಆಗದಂತೆ ನೋಡಿ ಕೊಳ್ಳಿ ಅಂತ ಸ್ವಾಮಿಜಿಗಳಿಗೆ ರಿಷಿಕುಮಾರ್ ಮನವಿ ಮಾಡಿದ್ದಾರೆ. ಮಠ ಸಿನಿಮಾನ ಸ್ವಾಮಿಜಿಗಳಿಗೆ ತೋರಿಸಿ ಆಮೇಲೆ ರಿಲೀಸ್ ಮಾಡ್ಬೇಕು ಅಂತ ಸಲಹೆ ನೀಡಿದ್ದಾರೆ. ಹಿಂದು ಮಠ ಹಿಂದು ಸ್ವಾಮಿಜಿಗಳ ಬಗ್ಗೆ ತಾತ್ಸಾರ ಹೆಚ್ಚಾಗ್ತಿದೆ. ಲಾವಿದರ ಮೂಲಕ ಮಠಗಳ ಬಗ್ಗೆ ತಪ್ಪು ಹೇಳಿಕೆಗಳನ್ನ ಹೇಳಿಸ್ತಿದ್ದಾರೆ. ಕಾಂತಾರ ಸಿನಿಮಾ ನೋಡಿ ರಿಷಬ್ ಕಾಲಿಗೆ ಬಿದ್ದು ಬನ್ನಿ’ ಅಂತ ರಿಷಿಕುಮಾರ್ ಸ್ವಾಮೀಜಿ ಹೇಳಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Math, Kaliswami, Rishi Kumar, Vida, Guru Prasad
  • ‘ಕಾಂತಾರ’ ಜಾತಿ, ಧರ್ಮ, ಭಾಷೆ ಮೀರಿ ಬೆಸೆಯುತ್ತಿದೆ: ನಟ ಕಿಶೋರ್

    ‘ಕಾಂತಾರ’ ಜಾತಿ, ಧರ್ಮ, ಭಾಷೆ ಮೀರಿ ಬೆಸೆಯುತ್ತಿದೆ: ನಟ ಕಿಶೋರ್

    ಕಾಂತಾರ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಎಷ್ಟು ಸದ್ದು ಮಾಡುತ್ತಿದೆಯೋ, ವಿವಾದ ಕಾರಣದಿಂದಾಗಿಯೂ ಅಷ್ಟೇ ಸದ್ದು ಮಾಡುತ್ತಿದೆ. ದೈವಾರಾಧನೆ ಹಿಂದೂ ಸಂಸ್ಕೃತಿಯಲ್ಲ ಎಂದು ನಟ ಚೇತನ್ ಹೇಳಿಕೆ ನೀಡುತ್ತಿದ್ದಂತೆಯೇ ಹಿಂದೂಪರ ಹೋರಾಟಗಾರರು ನಟನ ಮೇಲೆ ಮುಗಿ ಬಿದ್ದಿದ್ದಾರೆ. ಚೇತನ್ ಮೇಲೆ ದೂರುಗಳನ್ನೂ ನೀಡಿದ್ದಾರೆ. ಧರ್ಮ ಮತ್ತು ಕಾಂತಾರ ದಂಗಲ್ ನಡೆದಿದೆ. ಈ ಕುರಿತು ಅದೇ ಸಿನಿಮಾದಲ್ಲಿ ನಟಿಸಿರುವ ಕಿಶೋರ್ ಪ್ರತಿಕ್ರಿಯಿಸಿದ್ದಾರೆ. ಫೇಸ್ ಬುಕ್ ನಲ್ಲಿ ಈ ಕುರಿತು ಅವರು ಬರೆದುಕೊಂಡಿದ್ದಾರೆ. ಅದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.

    ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಸಿ ಕಳಕಳಿಯ ಮನವಿ . ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ  ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ?? ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಎಲ್ಲ ಒಳ್ಳೆಯ ಸಿನಿಮಾಗಳಂತೆ “ಕಾಂತಾರ” ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿ ಹೋದೀತು.

    ಕೇವಲ ಓಟಿಗಾಗಿ ಪಟೇಲ್ ಗಾಂಧಿ ಬೋಸ್ ನೆಹ್ರೂ ಸಹಿತ ಕೋಟಿ ಕೋಟಿ ಸ್ವತಂತ್ರ್ಯ ಹೋರಾಟಗಾರರನ್ನೂ ಬಳಸುವ, ಬೈಯ್ಯುವ.. ರಾಷ್ಟ್ರ ಗೀತೆ, ಧ್ವಜ,ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನಒಂದು ಕ್ಷಣ ಯೋಚಿಸಿ. ನಮ್ಮ ಸಿನಿಮಾಗಳು ನಮ್ಮ ಹೆಮ್ಮೆ. ಅವುಗಳನ್ನು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ.

    Live Tv
    [brid partner=56869869 player=32851 video=960834 autoplay=true]