Tag: victory

  • ಆಂಧ್ರ ವಿಧಾನಸಭಾ ಚುನಾವಣೆ : ಗೆದ್ದ ನಟ ಪವನ್ ಕಲ್ಯಾಣ್

    ಆಂಧ್ರ ವಿಧಾನಸಭಾ ಚುನಾವಣೆ : ಗೆದ್ದ ನಟ ಪವನ್ ಕಲ್ಯಾಣ್

    ಮೇ 13ರಂದು ನಡೆದ ಆಂಧ್ರಪ್ರದೇಶದ (Andhra Pradesh) ಚುನಾವಣೆಯಲ್ಲಿ ಪವನ್ ಕಲ್ಯಾಣ್ (Pawan Kalyan) ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 1,32,725 ಮತಗಳನ್ನು ಪಡೆಯುವ ಮೂಲಕ ಪವನ್ ಕಲ್ಯಾಣ್ ಗೆಲುವು ಸಾಧಸಿದಿದ್ದಾರೆ. ಗೆಲುವನ್ನು ಪವನ್ ಗೆ ಅವರ ಪತ್ನಿ ಆರತಿ ಎತ್ತಿ ಸ್ವಾಗತಿಸಿದ್ದಾರೆ.

    ತೆಲುಗಿನ ಖ್ಯಾತ ನಟ, ಜನಸೇನಾ ಪಾರ್ಟಿ ಮುಖ್ಯಸ್ಥ ಪವನ್ ಕಲ್ಯಾಣ್ ಬೆಂಬಲಕ್ಕೆ ತೆಲುಗಿನ ಹೆಸರಾಂತ ನಟ ಅಲ್ಲು ಅರ್ಜುನ್ (Allu Arjun) ಬೆಂಬಲಕ್ಕೆ ನಿಂತಿದ್ದರು. ಪವನ್ ಕಲ್ಯಾಣ್ ಗೆಲುವಿಗೆ ಶ್ರಮಿಸುವುದಾಗಿ ಅವರು ಹೇಳಿಕೊಂಡಿದ್ದರು. ಪವನ್ ಅವರ ಸಮಾಜಸೇವೆಯನ್ನೂ ಅವರು ಶ್ಲ್ಯಾಘಿಸಿದ್ದರು. ನಟ ನಾನಿ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಪವನ್ ಕಲ್ಯಾಣ್ ಪರ ಮತಯಾಚನೆ ಮಾಡುವ ಮೂಲಕ ಚುನಾವಣಾ ಕಣವನ್ನು ರಂಗೇರಿಸಿದ್ದರು.

    ಆಂಧ್ರಪ್ರದೇಶದಲ್ಲಿ ಚುನಾವಣೆ ಕಾವು ಜೋರಾಗಿದೆ. ದಿನಕ್ಕೊಂದು ತಿರುವನ್ನೂ ಅದು ಪಡೆದುಕೊಳ್ಳುತ್ತಿತ್ತು. ಅದರಲ್ಲೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಲಿಗಾಗಿ ಸರ್ವ ಪಕ್ಷಗಳು ಒಂದಾಗಿದ್ದವು. ಮೈತ್ರಿ ಪಕ್ಷಗಳನ್ನು ಬಲ ಪಡಿಸೋಕೆ ಏನೆಲ್ಲ ಕಸರತ್ತುಗಳನ್ನು ಮಾಡಲಾಗಿತ್ತು. ಜಗನ್ ಮೋಹನ್ ರೆಡ್ಡಿ ಪಕ್ಷವನ್ನು ಸೋಲಿಸಲು ಒಂದು ಕಡೆ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ (Jana Sena) ಟೊಂಕ ಕಟ್ಟಿ ನಿಂತಿದ್ದರೆ, ಅದರ ಬೆಂಬಲಕ್ಕೆ ಹೆಸರಾಂತ ನಟ ಚಿರಂಜೀವಿ ಕೂಡ ಇರುವುದಾಗಿ ಘೋಷಣೆ ಮಾಡಿದ್ದರು.

  • ಮಾಜಿ ಸಿಎಂ ಕುಮಾರಸ್ವಾಮಿ ಕನಸು ಕಂಡಿದ್ದು 123 ಸೀಟು, ಮತದಾರ ನೀಡಿದ್ದು ಕೇವಲ 19

    ಮಾಜಿ ಸಿಎಂ ಕುಮಾರಸ್ವಾಮಿ ಕನಸು ಕಂಡಿದ್ದು 123 ಸೀಟು, ಮತದಾರ ನೀಡಿದ್ದು ಕೇವಲ 19

    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ (Assembly Elections 2023) ಈ ಬಾರಿ ಜೆಡಿಎಸ್ (JDS) 123 ಕ್ಷೇತ್ರದಲ್ಲಿ ಗೆಲುವು (Victory) ಸಾಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಅವರು ಪದೇ ಪದೇ ಹೇಳುತ್ತಿದ್ದರು. ಅಲ್ಲದೇ, ಈ ಬಾರಿ ನಮ್ಮ ಪಕ್ಷವೇ ನಿರ್ಣಾಯಕ ಎಂದೂ ಅವರು ಹೇಳಿಕೊಂಡಿದ್ದರು. ಆದರೆ, ಮತದಾರ ಹೇಳಿಕೊಳ್ಳುವಂತಹ ಗೆಲುವನ್ನು ಜೆಡಿಎಸ್ ಪಕ್ಷಕ್ಕೆ ನೀಡಲಿಲ್ಲ. ಕೇವಲ 19 ಸೀಟುಗಳನ್ನು ನೀಡುವ ಮೂಲಕ ಆಶೀರ್ವದಿಸಿದ್ದಾನೆ.

    ಜೆಡಿಎಸ್ ಗೆಲುವಿನ ಅಭ್ಯರ್ಥಿಗಳು

    1.ಚನ್ನಪಟ್ಟಣ- H.D.ಕುಮಾರಸ್ವಾಮಿ

    2.ಹೊಳೆನರಸೀಪುರ- H.Dರೇವಣ್ಣ

    3.ಹಾಸನ ಸಿಟಿ- ಸ್ವರೂಪ್

    4.ಚಾಮುಂಡೇಶ್ವರಿ- ಜಿಟಿ ದೇವೇಗೌಡ

    5.ಹುಣಸೂರು – ಹರೀಶ್ ಗೌಡ

    6.ಶ್ರವಣಬೆಳಗೊಳ- ಬಾಲಕೃಷ್ಣ

    7.ಗುರುಮಿಠ್ಕಲ್ – ಶರಣಗೌಡ ಕಂದಕೂರ್

    8.ದೇವದುರ್ಗ- ಕರೆಮ್ಮ ನಾಯಕ್

    9.ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು

    10.ತುರುವೇಕೆರೆ- MT ಕೃಷ್ಣಪ್ಪ

    11.ಮುಳಬಾಗಿಲು- ಸಂವೃದ್ದಿ ಮಂಜುನಾಥ್

    12.ಕೆ.ಆರ್.ಪೇಟೆ- HT ಮಂಜುನಾಥ್

    13.ಅರಕಲಗೂಡು- ಎ.ಮಂಜು

    14.ಶಿಡ್ಲಘಟ್ಟ- ರವಿಕುಮಾರ್

    15.ಶಿವಮೊಗ್ಗ ಗ್ರಾ. – ಶಾರದಾ ಪೂರ್ಯ ನಾಯಕ್

    16.ಹಗರಿ ಬೊಮ್ಮನಹಳ್ಳಿ – ನೇಮರಾಜನಾಯ್ಕ್

    17.ದೇವರ ಹಿಪ್ಪರಗಿ – ರಾಜುಗೌಡ ಪಾಟೀಲ್

    18. ಹನೂರು- MR ಮಂಜುನಾಥ್

    19. ಶ್ರೀನಿವಾಸಪುರ- ವೆಂಕಟಶಿವರೆಡ್ಡಿ

  • ಈ ಸಲ ಯಾವ ಪಾರ್ಟಿ ಬರಬಹುದು? : ಉತ್ತರ ಕೊಟ್ಟ ನಿರ್ದೇಶಕ ಯೋಗರಾಜ್ ಭಟ್

    ಈ ಸಲ ಯಾವ ಪಾರ್ಟಿ ಬರಬಹುದು? : ಉತ್ತರ ಕೊಟ್ಟ ನಿರ್ದೇಶಕ ಯೋಗರಾಜ್ ಭಟ್

    ನಿನ್ನೆಯಷ್ಟೇ ಕರ್ನಾಟಕ ವಿಧಾನಸಭೆ (Assembly) ಚುನಾವಣೆ (Election) ಮುಗಿದಿದೆ. ಎಕ್ಸಿಟ್ ಪೋಲ್ ಗಳು ತೆಲೆ ತಿರುಗುವಂತಹ ಲೆಕ್ಕಾಚಾರವನ್ನು ನೀಡಿವೆ. ಯಾವ ಪಾರ್ಟಿ ಗೆಲ್ಲಬಹುದು, ಯಾರು ಅಧಿಕಾರ ಚುಕ್ಕಾಣೆ ಹಿಡಿಯಬಹುದು, ಮುಖ್ಯ ಮಂತ್ರಿ ಯಾರಾಗಬಹುದು, ಸ್ಪಷ್ಟ ಬಹುಮತ ಬರತ್ತಾ? ಹೀಗೆ ಹತ್ತಾರು ಪ್ರಶ್ನೆಗಳು ಜನರ ನಿದ್ದೆಗೆಡಿಸಿವೆ. ಎಕ್ಸಿಟ್ ಪೋಲ್ ನಂತರ ಆಯಾ ಪಕ್ಷಗಳ ನಾಯಕರು ಒಂದೊಂದು ರೀತಿಯಲ್ಲಿ ಉತ್ತರ ನೀಡುತ್ತಿದ್ದಾರೆ. ಆದರೆ, ನಿರ್ದೇಶಕ ಯೋಗರಾಜ್ ಭಟ್ (Yograj Bhat) ಕೊಟ್ಟ ಉತ್ತರವೇ ಬೇರೆಯಾಗಿದೆ.

    ಮತದಾನ ಮುಗಿಯುತ್ತಿದ್ದಂತೆಯೇ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ವಿಡಿಯೋವೊಂದನ್ನು ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆ ಮತ್ತು ಆಕೆಯ ಪುತ್ರಿ ಯೋಗರಾಜ್ ಭಟ್ಟರಿಗೆ ಹತ್ತಾರು ಪ್ರಶ್ನೆಗಳನ್ನು ಮಾಡಿದ್ದಾರೆ. ಜೊತೆಗೆ ಈ ಸಲ ಯಾವ ಪಾರ್ಟಿ ಅಧಿಕಾರಕ್ಕೆ (Victory) ಬರಬಹುದು ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ. ಆ ಪ್ರಶ್ನೆಗೆ ಭಟ್ಟರು ನೀಡಿದ ಉತ್ತರವೇ ಮಜವಾಗಿದೆ. ಇದನ್ನೂ ಓದಿ: ಸಲಿಂಗ ವಿವಾಹ ಕಾನೂನು ಮಾನ್ಯತೆ ವಿಚಾರಣೆ – ಸಿಜೆಐ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಮನವಿ ತಿರಸ್ಕೃತ

    ಮಹಿಳೆಯೊಬ್ಬರು ಸರ್ ವೋಟ್ ಹಾಕಿದ್ರಾ? ಎಂಬ ಪ್ರಶ್ನೆಯೊಂದಿಗೆ ಶುರುವಾಗುವ ವಿಡಿಯೋ, ನಿಮ್ಮದು ಯಾವ ಪಕ್ಷ, ನೀವು ಯಾರ ಪರ? ಸಿನಿಮಾದ ಕೆಲವರು ಪ್ರಚಾರಕ್ಕೆ ಹೋದರು ನೀವು ಯಾಕೆ ಹೋಗಲಿಲ್ಲ ಹೀಗೆ ಹಲವು ಪ್ರಶ್ನೆಗಳನ್ನು ಭಟ್ಟರಿಗೆ ಕೇಳಲಾಗಿದೆ. ಕೊನೆಗೆ ಯಾವ ಪಾರ್ಟಿ ಬರಬಹುದು ಅಂತ ನಿಮಗೆ ಅನಿಸತ್ತೆ ಎಂದು ಕೇಳಲಾದ ಪ್ರಶ್ನೆಗೆ ಭಟ್ಟರು ಜಾಣೆಯಿಂದಲೇ ಉತ್ತರಿಸಿದ್ದಾರೆ. ಕ್ರಿಕೆಟ್, ಸಿನಿಮಾ, ಮಕ್ಕಳು ಅಂತ ಕಥೆ ಬೆರೆ ಹೇಳಿದ್ದಾರೆ.

    ಯಾವ ಪಾರ್ಟಿ ಬರಬಹುದು ಎನ್ನುವ ಪ್ರಶ್ನೆಗೆ ಭಟ್ಟರ ಉತ್ತರ ಹೀಗಿದೆ, ‘ಜಮಾನಾ ಫಾಸ್ಟ್ ಆಗಿದೆ. ಮನುಷ್ಯ ಸ್ಪೀಡ್ ಮಾಡ್ತಾ ಇದಾನೆ. ಮುಂಚೆ 5 ದಿನದ ಟೆಸ್ಟ್ ಕ್ರಿಕೆಟ್ ಇತ್ತು. ಆಮೇಲೆ ಒಂದು ದಿನ ಆಡೋದು ಕಷ್ಟ ಆಯ್ತು. ಈಗ 20 ಓವರ್ ಗೆ ಬಂದಿದೆ. ಮುಂದೆ ಕೇವಲ ಹೈಲೈಟ್ಸ್ ನೋಡೋದು ಬರಬಹುದು. ಮಕ್ಕಳು ಏಳು ತಿಂಗಳಿಗೆ ಹುಟ್ತಿದಾರೆ. ಜನನ ಕೂಡ ಫಾಸ್ಟ್. 3 ಗಂಟೆ ಸಿನಿಮಾದಿಂದ 20 ಸೆಕೆಂಡ್ ರೀಲ್ಸ್ ಗೆ ಬಂದಿದೆ. ಇನ್ನು ಐದು ವರ್ಷಕ್ಕೊಂದು ಎಲೆಕ್ಷನ್. ನಾಲ್ಕೈದು ಜನ ಕುರ್ಚಿ ಮೇಲೆ ಕೂತು ಏಳ್ತಾರೆ. ವರ್ಷಕ್ಕೆ ಒಬ್ಬರು ಕೂರ್ತಾರೆ ಅಂದರೆ ವರ್ಷಕ್ಕೆ ಒಂದು ಎಲೆಕ್ಷನ್ ಲೆಕ್ಕವೇ ಆಯ್ತು. ಕಾಲನೇ ಫಾಸ್ಟ್ ಆಗಿದೆ. ಹೀಗಾಗಿ, ಕಾಲನ ಪ್ರಶ್ನೆ ಮಾಡಬಾರದು’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

  • ಬೆಳಗಾವಿಯಲ್ಲಿ ಬಿಜೆಪಿಯಿಂದ ಇತಿಹಾಸ ಸೃಷ್ಟಿ

    ಬೆಳಗಾವಿಯಲ್ಲಿ ಬಿಜೆಪಿಯಿಂದ ಇತಿಹಾಸ ಸೃಷ್ಟಿ

    ಬೆಳಗಾವಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಮೊದಲ ಬಾರಿಗೆ ಭರ್ಜರಿ ಗೆಲುವು ಸಾಧಿಸಿದೆ.

    ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 36 ವಾರ್ಡ್ ಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ಮೊದಲ ಬಾರಿಗೆ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ. ಈ ಮೂಲಕ ಎಂಇಎಸ್ ಪುಂಡಾಟಕ್ಕೆ ಸಂಪೂರ್ಣ ಕಡಿವಾಣ ಬಿದ್ದಂತಾಗಿದೆ. ಇದನ್ನೂ ಓದಿ: ವ್ಯಾಕ್ಸಿನ್ ಪಡೆದ ನಂತರ ಮಗನ ಸಾವು – ಪೋಷಕರ ಆರೋಪ

    ಬಿಜೆಪಿ 35, ಕಾಂಗ್ರೆಸ್ 10, ಎಂಇಎಸ್ 2, ಪಕ್ಷೇತರ 10 ಹಾಗೂ ಎಐಎಂಐಎಂ 1 ವಾರ್ಡ್ ನಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಮಗನ ಪ್ರಾಣ ಉಳಿಸಿಕೊಳ್ಳಲು ವೈದ್ಯರ ಕಾಲು ಹಿಡಿದ ತಾಯಿ

    ಬಿಜೆಪಿ ವಿಜಯೋತ್ಸವದ ವೇಳೆ ನೂಕು ನುಗ್ಗಲು ಹೆಚ್ಚಾಗಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಪರಿಣಾಮ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೈಕ್ ಗಳು ಜಖಂಗೊಂಡಿವೆ.

  • ಮೋದಿ, ಯಡಿಯೂರಪ್ಪನವರ ಶಿಸ್ತು ಬದ್ಧ ಆಡಳಿತಕ್ಕೆ ಜನರ ಸ್ಪಂದನೆ: ಎಸ್‍ಎಂ ಕೃಷ್ಣ

    ಮೋದಿ, ಯಡಿಯೂರಪ್ಪನವರ ಶಿಸ್ತು ಬದ್ಧ ಆಡಳಿತಕ್ಕೆ ಜನರ ಸ್ಪಂದನೆ: ಎಸ್‍ಎಂ ಕೃಷ್ಣ

    ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ಬಿಜೆಪಿ ಪಕ್ಷದ ಹಿರಿಯ ಮುಖಂಡ ಎಸ್.ಎಂ ಕೃಷ್ಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

    ಉಪಚುನಾವಣೆ ವಿಚಾರವಾಗಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎಸ್‍ಎಂ ಕೃಷ್ಣ, ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಗೆಲುವು ಸಾಧಿಸಿರುವ ರಾಜೇಶ್‍ಗೌಡ ಮತ್ತು ಮುನಿರತ್ನ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪನವರ ಶಿಸ್ತು ಬದ್ಧ ಆಡಳಿತಕ್ಕೆ ಜನರ ಸ್ಪಂದನೆ ನೀಡಿದ್ದಾರೆ ಎಂದಿದ್ದಾರೆ.

    ಇಂದು ಶಿರಾ ಮತ್ತು ಆರ್‍ಆರ್ ನಗರದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಆರ್.ಆರ್. ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 57,936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಿರಾ ಕ್ಷೇತ್ರದಲ್ಲೂ ಕೂಡ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಗೆದ್ದು ಬೀಗಿ ಇತಿಹಾಸ ಸೃಷ್ಟಿಸಿದ್ದಾರೆ.

  • ಈ ದಿನ ಕಾಂಗ್ರೆಸ್ ಆಡಳಿತದಲ್ಲಿ ಕೊಲೆಯಾದ ಕುಟ್ಟಪ್ಪರಿಗೆ ಗೆಲುವು ಅರ್ಪಣೆ – ಸಿಟಿ ರವಿ

    ಈ ದಿನ ಕಾಂಗ್ರೆಸ್ ಆಡಳಿತದಲ್ಲಿ ಕೊಲೆಯಾದ ಕುಟ್ಟಪ್ಪರಿಗೆ ಗೆಲುವು ಅರ್ಪಣೆ – ಸಿಟಿ ರವಿ

    ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತರಿಗೆ ಉಪಚುನಾವಣೆಯ ಗೆಲುವನ್ನು ಅರ್ಪಣೆ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಟ್ವೀಟ್ ಮಾಡಿದ್ದಾರೆ.

    ಶಿರಾ ಮತ್ತು ಆರ್‍ಆರ್ ನಗರ ಉಪಚುನಾವಣೆಯ ಫಲಿತಾಂಶದಲ್ಲಿ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಪಕ್ಷ ಜಯಭೇರಿ ಭಾರಿಸಿದೆ. ಈ ಗೆಲುವನ್ನು ಸಿಟಿ ರವಿಯವರು ಐದು ವರ್ಷದ ಹಿಂದೆ ಕೊಲೆಯಾದ ವಿಶ್ವ ಹಿಂದೂ ಪರಿಷತ್‍ನ (ವಿಪಿಹೆಚ್) ನಾಯಕ ಕುಟ್ಟಪ್ಪ ಮತ್ತು ಹಲವು ಹಿಂದೂ ಕಾರ್ಯಕರ್ತರಿಗೆ ಅರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಿಟಿ ರವಿಯವರು, ಐದು ವರ್ಷದ ಹಿಂದೆ ಇದೇ ದಿನದಲ್ಲಿ ಕಾಂಗ್ರೆಸ್ ಪ್ರಾಯೋಜಿತ ಟಿಪ್ಪು ಜಯಂತಿಯ ಆಚರಣೆ ವೇಳೆ ಇಸ್ಲಾಮಿಕ್ ಮೂಲವಾದಿಗಳಿಂದ ವಿಪಿಹೆಚ್ ನಾಯಕ ಕುಟ್ಟಪ್ಪ ಕೊಲ್ಲಲ್ಪಟ್ಟಿದ್ದರು. ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪಚುನಾವಣೆಯ ಗೆಲುವನ್ನು ನಾವು ಕುಟ್ಟಪ್ಪ ಮತ್ತು ಕಾಂಗ್ರೆಸ್ ಆಡಳಿತದ ವೇಳೆ ಕೊಲೆಯಾದ ಹಲವಾರು ಹಿಂದೂ ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಶಿರಾ ಮತ್ತು ಆರ್‍ಆರ್ ನಗರದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಆರ್.ಆರ್. ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 57,936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಿರಾ ಕ್ಷೇತ್ರದಲ್ಲೂ ಕೂಡ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಗೆದ್ದು ಬೀಗಿ ಇತಿಹಾಸ ಸೃಷ್ಟಿಸಿದ್ದಾರೆ.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಗೆ ರಾಜ್ಯಾದ್ಯಂತ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿತ್ತು. ಇದರ ನಡುವೆಯೇ ಸಿದ್ದರಾಮಯ್ಯನವರು ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಈ ವೇಳೆ 2015ರ ನವೆಂಬರ್ 10ರಂದು ಮಡಿಕೇರಿಯಲ್ಲಿ ಟಿಪ್ಪು ಜಯಂತಿಯಂದು ನಡೆದ ಘರ್ಷಣೆಯ ವೇಳೆ ಕುಟ್ಟಪ್ಪ ಮೃತಪಟ್ಟಿದ್ದರು.

  • ಸುಮಲತಾಗೆ ಗೆಲುವು – ಬೀದಿ ಬದಿ ವ್ಯಾಪಾರಿಯಿಂದ ಮಂಡ್ಯ ಜನತೆಗೆ ವಿನೂತನ ಅಭಿನಂದನೆ

    ಸುಮಲತಾಗೆ ಗೆಲುವು – ಬೀದಿ ಬದಿ ವ್ಯಾಪಾರಿಯಿಂದ ಮಂಡ್ಯ ಜನತೆಗೆ ವಿನೂತನ ಅಭಿನಂದನೆ

    ಮೈಸೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರು ಮಂಡ್ಯದ ಜನರಿಗೆ ವಿನೂತನ ರೀತಿಯ ಅಭಿನಂದನೆ ಸಲ್ಲಿಸುತ್ತಿದ್ದಾರೆ.

    ಮಂಡ್ಯದ ಜನರಿಗೆ ಮೈಸೂರಿನಲ್ಲಿ ಉಚಿತ ಊಟ ತಿಂಡಿ ನೀಡಲಾಗುತ್ತಿದೆ. ಗ್ರಾಹಕ ಮಂಡ್ಯ ಲೋಕಸಭಾ ಕ್ಷೇತ್ರದವರು ಎಂದು ಹೇಳಿದರೆ ಅವರಿಗೆ ಉಚಿತವಾಗಿ ಊಟ ತಿಂಡಿ ನೀಡಿ ಎಂದು ತನ್ನ ನೌಕರರಿಗೆ ಫಾಸ್ಟ್ ಫುಡ್ ಮಾಲೀಕ ರಘು ಸೂಚಿಸಿದ್ದಾರೆ.

    ಸುಮಲತಾ ಅಂಬರೀಶ್ ಅವರು ಗೆಲುವು ಸಾಧಿಸಿದ್ದಕ್ಕಾಗಿ ಮಂಡ್ಯ ಜನರ ಸ್ವಾಭಿಮಾನ ಹೆಚ್ಚಾಗಿದೆ. ಗೆಲುವಿಗಿಂತ ಸ್ವಾಭಿಮಾನ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜನರ ಬಳಿ ಹಣ ಪಡೆಯದೇ ಉಚಿತವಾಗಿ ಕ್ಯಾಂಟಿನ್ ಆಹಾರ ನೀಡುತ್ತಿದ್ದೇನೆ ಎಂದು ಕ್ಯಾಂಟೀನ್ ಮಾಲೀಕ ರಘು ಹೇಳಿದ್ದಾರೆ.

    ಮಂಡ್ಯ ಉಚ್ಚಾಟಿತ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಆಹಾರ ಸೇವಿಸಲು ಹೋದಾಗ ಹಣ ಪಡೆಯಲಿಲ್ಲ. ರಘು ಅವರ ನಿರ್ಧಾರಕ್ಕೆ ಚಕಿತರಾದ ಸುಮಲತಾ ಆಪ್ತ ಸಚ್ಚಿದಾನಂದ ಅವರು ರಘು ಅವರಿಗೆ ಶುಭಕೋರಿದ್ದಾರೆ. ಶುಭಕೋರಿದ ನಂತರ ಸಚ್ಚಿದಾನಂದ ಮಂಡ್ಯ ಕಡೆಗೆ ಪ್ರಯಾಣ ಬೆಳೆಸಿದರು.

  • ಪತ್ನಿ ಜೊತೆ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ರು ವಿರಾಟ್!

    ಪತ್ನಿ ಜೊತೆ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ರು ವಿರಾಟ್!

    ಸಿಡ್ನಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ನಟಿ ಅನುಷ್ಕಾ ಶರ್ಮಾ ಅವರ ಜೊತೆಗೂಡಿ ಆಸೀಸ್ ವಿರುದ್ಧ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ದಾರೆ.

    ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಮುತ್ತಿಟ್ಟಿತ್ತು. 2-1ರ ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ 71 ವರ್ಷಗಳ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಗೆಲುವನ್ನು ಸಾಧಿಸಿದೆ. ಈ ಸರಣಿ ಗೆದ್ದಿರುವುದರಿಂದ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಫುಲ್ ಖುಷ್ ಆಗಿದ್ದಾರೆ.

    ಆಸ್ಟ್ರೇಲಿಯಾ ನೆಲದಲ್ಲೇ ಕಾಂಗರೂ ವಿರುದ್ಧ ಸರಣಿ ಗೆದ್ದ ಭಾರತದ ಕ್ರಿಕೆಟ್ ತಂಡದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಅಲ್ಲದೆ ಈ ಗೆಲುವನ್ನು ತನ್ನ ತಂಡದವರ ಜೊತೆ ಹಾಗೂ ಅಭಿಮಾನಿಗಳ ಜೊತೆ ಕುಣಿದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಜೊತೆ ಟೀಂ ಇಂಡಿಯಾ ಆಟಗಾರರಿಂದ ಭಾಂಗ್ರ ಡ್ಯಾನ್ಸ್..!

    ಈಗ ತಮ್ಮ ಪ್ರೀತಿಯ ಪತ್ನಿ ಜೊತೆ ತಮ್ಮ ಗೆಲುವನ್ನು ಸಂಭ್ರಮಿಸಿ ಖುಷಿಪಟ್ಟಿದ್ದಾರೆ. ವಿರಾಟ್ ಹಾಗೂ ಅನುಷ್ಕಾ ತಮ್ಮ ಸ್ನೇಹಿತರ ಜೊತೆಗೂಡಿ ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲೂ ಅನುಷ್ಕಾಗೆ ವಿರಾಟ್ ಕೇಕ್ ತಿನ್ನಿಸಿ ಗೆಲುವನ್ನು ಸಂಭ್ರಮಿಸಿದ್ದಾರೆ.

    ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟ್ ತಂಡ ಮಾಡಿರುವ ಸಾಧನೆಗೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಶುಭಾಶಯವನ್ನು ತಿಳಿಸಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ, ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದೆ. ತಂಡದ ಎಲ್ಲಾ ಆಟಗಾರರಿಗೆ, ಕೋಚ್ ಹಾಗೂ ಸಿಬ್ಬಂದಿಗೆ ಶುಭಾಶಯಗಳು. ಯಾವುದು ಮುಖ್ಯವೋ ಅದನ್ನು ಪರಿಗಣಿಸಿ ಬೇಡವಾದ ವಿಚಾರವನ್ನು ಬಿಟ್ಟುಬಿಡಿ. ಈ ಗೆಲುವಿನಿಂದ ನಾನು ತುಂಬಾ ಸಂತೋಷವಾಗಿದ್ದೇವೆ. ನನ್ನ `ಲವ್’ ಬಗ್ಗೆ ನನಗೆ ಹೆಮ್ಮೆಯಾಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/BsUnLapnceH/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಾಮಾಣಿಕ ನಾಯಕ ಸಿಎಂ ಆಗಲೆಂದು ನಾಲಿಗೆ ಕತ್ತರಿಸಿ ದೇವರ ಹುಂಡಿಗೆ ಹಾಕಿದ ಮತದಾರ

    ಪ್ರಾಮಾಣಿಕ ನಾಯಕ ಸಿಎಂ ಆಗಲೆಂದು ನಾಲಿಗೆ ಕತ್ತರಿಸಿ ದೇವರ ಹುಂಡಿಗೆ ಹಾಕಿದ ಮತದಾರ

    ಹೈದರಾಬಾದ್: ಪ್ರಾಮಾಣಿಕ ನಾಯಕ ಮುಖ್ಯಮಂತ್ರಿಯಾಗಲಿ ಅಂತಾ ಮತದಾರನೊಬ್ಬ ತನ್ನ ನಾಲಿಗೆ ಕತ್ತರಿಸಿಕೊಂಡು, ದೇವರ ಹುಂಡಿಗೆ ಹಾಕಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಪಶ್ಚಿಮ ಗೋದಾವರಿ ಜಿಲ್ಲೆಯ ಮಹೇಶ್ (35) ಬುಧವಾರ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಮಹೇಶ್ ಹೈದ್ರಾಬಾದ್‍ನ ಶ್ರೀನಗರ ಕಾಲೊನಿಯ ವೆಂಕಟೇಶ್ವರ ದೇವಾಲಯದ ಹುಂಡಿಗೆ ನಾಲಿಗೆ ಹಾಕಿದ್ದಾರೆ. ಅವರನ್ನು ಸ್ಥಳೀಯ ಓಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ತೆಲಂಗಾಣ ವಿಧಾನಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಮತ ಎಣಿಕೆಯು ಡಿಸೆಂಬರ್ 11ರಂದು ನಡೆಯಲಿದೆ. ಈ ನಿಟ್ಟಿನಲ್ಲಿ ನಾಯಕರ ಗೆಲುವಿಗಾಗಿ ಅಭಿಮಾನಿಗಳು ಪೂಜೆ, ದಾನದ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

    ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ ಪ್ರಾಮಾಣಿಕ ರಾಜಕಾರಣಿಗಳು ಮುಖ್ಯಮಂತ್ರಿಗಳಾಗಬೇಕು ಎಂದು ಮಹೇಶ್ ಪತ್ರ ಬರೆದಿಟ್ಟಿದ್ದಾರೆ ಎಂದು ಬಂಜಾರ ಹಿಲ್ಸ್ ಇನ್ಸ್‍ಪೆಕ್ಟರ್ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

    ಮಹೇಶ್ ಅವರು ಕಳೆದ 2004 ಹಾಗೂ 2009ರ ಚುನಾವಣೆ ವೇಳೆ ಮಹೇಶ್ ನಾಲಿಗೆಯನ್ನು ಕತ್ತರಿಸಿಕೊಂಡಿದ್ದ ಎನ್ನಲಾಗಿದೆ. ಮಹೇಶ್ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ಗೆಲುವು ಸಾಧಿಸಲಿ ಎನ್ನುವ ಉದ್ದೇಶದಿಂದ ನಾಲಿಗೆ ಕತ್ತರಿಸಿಕೊಂಡಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೆಲುವನ್ನು ಸುಕ್ಮಾ ಯೋಧರಿಗೆ ಅರ್ಪಿಸಿದ ಬಿಜೆಪಿ- ಸಂಭ್ರಮಾಚರಣೆ ಬೇಡವೆಂದು ನಿರ್ಧಾರ

    ಗೆಲುವನ್ನು ಸುಕ್ಮಾ ಯೋಧರಿಗೆ ಅರ್ಪಿಸಿದ ಬಿಜೆಪಿ- ಸಂಭ್ರಮಾಚರಣೆ ಬೇಡವೆಂದು ನಿರ್ಧಾರ

    ನವದೆಹಲಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. ಹೀಗಾಗಿ ಬಿಜೆಪಿ ಗೆಲುವು ಬಹುತೇಕ ಖಚಿತವಾಗಿದ್ದು, ಆದ್ರೆ ಈ ಗೆಲುವನ್ನು ಆಚರಿಸದೇ ಇರಲು ಬಿಜೆಪಿ ನಿರ್ಧರಿಸಿದೆ.

    ಕಳೆದ ಸೋಮವಾರ ಸುಕ್ಮಾದಲ್ಲಿ ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು. ಈ ವೇಳೆ ಸುಮಾರು 25 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಬಿಜೆಪಿಗೆ ದೊರೆತ ಜಯವನ್ನು ಆಚರಿಸಲ್ಲ ಅಂತಾ ದೆಹಲಿಯ ಬಿಜೆಪಿ ಮುಖಂಡ ಮನೋಜ್ ತಿವಾರಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ದೆಹಲಿಯಲ್ಲಿ ಸಿಕ್ಕ ಈ ವಿಜಯವನ್ನು ಮಡಿದ ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ಸೈನಿಕರಿಗೆ ಅರ್ಪಿಸುವುದಾಗಿ ಅವರು ಹೇಳಿದ್ದಾರೆ.

    ಸದ್ಯ ಒಟ್ಟು 270 ಸ್ಥಾನಗಳಲ್ಲಿ ಬಿಜೆಪಿ 180ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮೂರನೇ ಬಾರಿ ಮೂರು ಪಾಲಿಕೆಯ ಗದ್ದುಗೆಯನ್ನು ಏರಲಿದೆ.