Tag: victoria

  • ನರ್ಸ್ ಗಳಿಗೆ ನಿಂದನೆ ವೇಳೆ ಸಚಿವರ ಹೆಸರು ದುರ್ಬಳಕೆ- ಡಿಕೆಶಿ ಪ್ರತಿಕ್ರಿಯಿಸಿದ್ದು ಹೀಗೆ

    ನರ್ಸ್ ಗಳಿಗೆ ನಿಂದನೆ ವೇಳೆ ಸಚಿವರ ಹೆಸರು ದುರ್ಬಳಕೆ- ಡಿಕೆಶಿ ಪ್ರತಿಕ್ರಿಯಿಸಿದ್ದು ಹೀಗೆ

    ಬೆಂಗಳೂರು: ನರ್ಸ್ ಗಳಿಗೆ ನಿಂದಿಸಿದ್ದ ವೇಳೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮ್ ಸೆಂಟರ್ ವೈದ್ಯಾಧಿಕಾರಿ ಬಾಲಾಜಿ ಪೈ, ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೆಸರನ್ನ ಯಾರೂ ದುರುಪಯೋಗ ಮಾಡಿಕೊಳ್ಳಲು ಬಿಡಲ್ಲ. ಇಲಾಖೆಯಲ್ಲಿ ಏನು ನಡೀತಿದೆ ನನಗೆ ಗೊತ್ತಿದೆ ಆ್ಯಕ್ಷನ್ ತೆಗೆದುಕೊಳ್ಳೋಣ ಅಂತ ಹೇಳಿದ್ರು.

    ಇದೇ ವೇಳೆ ಮೈತ್ರಿ ಸರ್ಕಾರಕ್ಕೆ ಭವಿಷ್ಯವಿಲ್ಲ ಎಂಬ ಕೆ.ಎನ್ ರಾಜಣ್ಣ ಹೇಳಿಕೆ ಸಂಬಂಧ ಮಾತನಾಡಿದ ಸಚಿವರು, ಯಾರು ಮೈತ್ರಿ ಸರ್ಕಾರದ ಬಗ್ಗೆ ಅಪಸ್ವರ ಎತ್ತಿ ಮಾತನಾಡಬಾರದು ಅಂತ ಈಗಾಗಲೇ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ಪಕ್ಷವನ್ನ ಹೇಗೆ ಉಳಿಸಿಕೊಳ್ಳಬೇಕು ಅದನ್ನ ಮಾಡ್ತೇವೆ. ನಮ್ಮ ನಾಯಕರು ಕೆಲವು ಮಿತಿಗಳನ್ನ ಹಾಕಿದ್ದಾರೆ. ಆ ಮಿತಿಯೊಳಗೆ ಎಲ್ಲರೂ ಕೆಲಸ ಮಾಡಿದ್ರೆ ಪಕ್ಷ ಉಳಿಸಿಕೊಳ್ಳಬಹುದು ಅಂದ್ರು.

    ವಿಶೇಷಾಧಿಕಾರಿ ವಿರುದ್ಧದ ಆರೋಪವೇನು?:
    ರೆಕಾರ್ಡ್ ನಿರ್ವಹಿಸುವ ವಿಚಾರದಲ್ಲಿ ಜಗಳವಾಗಿದೆ. ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಡೀನ್ ಗೆ ರೆಕಾರ್ಡ್ ಕೊಡುವುದು ಆಕೆಯ ಜವಾಬ್ದಾರಿಯಾಗಿತ್ತು. ಹಾಗೆಯೇ ಆಕೆ ಅದನ್ನು ಡೀನ್ ಗೆ ಕೊಟ್ಟಿದ್ದಾರೆ. ಆದ್ರೆ ಬಾಲಾಜಿ ಅವರ ಗಮನಕ್ಕೆ ತಾರದೇ ಕೊಟ್ಟಿದ್ದಕ್ಕೆ ಪೈ ನರ್ಸ್ ಅನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎನ್ನಲಾಗಿತ್ತು.

    ಏನಮ್ಮ ಅವರು ಕೇಳಿದ್ದನ್ನೆಲ್ಲಾ ಕೋಡೋಕೆ ನಿಮಗೆ ನಾಚಿಕೆ ಆಗಲ್ವಾ. ನಾಳೆ ಸಚಿವ ಡಿಕೆ ಶಿವಕುಮಾರ್ ಬಂದು ಬಾಲಾಜಿ ಎರಡು ಸ್ಟಾಫ್ ನರ್ಸ್‍ಗಳನ್ನು ರೇಪ್ ಮಾಡು ಅಂತಾರೆ. ಆಗ ನೀವು ರೇಪ್ ಮಾಡಿಸಿಕೊಳ್ಳಲು ರೆಡಿ ಇರ್ತೀರಾ? ಯಾಕಂದ್ರೆ ಮಂತ್ರಿಗಳಲ್ವಾ ಅವರು. ಹೀಗಾಗಿ ಅವರು ಹೇಳಿದಾಗ ನೀವು ರೆಪ್ಯೂಸ್ ಮಾಡಂಗಿಲ್ಲ ಅಂತ ಪೈ ನಿಂದಿಸಿದ್ದಾರೆ ಅಂತ ನರ್ಸ್ ಗಳು ಆರೋಪಿಸಿದ್ದರು. ಅಲ್ಲದೇ ಬಾಲಾಜಿ ಪೈ ವಿರುದ್ಧ ಟ್ರಾಮಾ ಸೆಂಟರ್‍ನ ಸ್ಟಾಫ್ ನರ್ಸ್, ಬಿಎಂಸಿ ಡೀನ್‍ಗೆ ದೂರು ನೀಡಿದ್ದರು. 20ಕ್ಕೂ ಹೆಚ್ಚು ಸ್ಟಾಫ್ ನರ್ಸ್‍ಗಳು ನೀಡಿದ ಲಿಖಿತ ದೂರಿನ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

    ಬಾಲಾಜಿಯಿಂದ ಸ್ಪಷ್ಟನೆ:
    ವೈದ್ಯರೊಬ್ಬರು ಬಂದು ರೆಕಾರ್ಡ್ ಕೇಳಿದ್ದಾರೆ ಅಂತ ನನ್ನ ಬಳಿ ದೂರು ಕೊಟ್ಟರು. ಈ ವೇಳೆ ನಾನು ಲಿಖಿತ ದೂರು ನೀಡಿ ಅಂತ ಹೇಳಿದ್ದೆ. ಆದ್ರೆ ಅವರು ನನ್ನ ಜೊತೆ ಉಲ್ಟಾ ಮಾತಾಡಿದ್ರು. ಆದ್ರೆ ಸಚಿವರ ಹೆಸರನ್ನು ಪ್ರಸ್ತಾಪವೇ ಮಾಡಿಲ್ಲ. ಅಷ್ಟೊಂದು ತಿಳಿಯದ ದಡ್ಡ ನಾನಲ್ಲ. ಇದೀಗ ಈ ವಿಚಾರ ನನಗೆ ಇರುಸು ಮುರುಸು ತಂದಿದೆ ಅಂತ ಹೇಳಿದ್ದರು.

    ಘಟನೆ ಬಗ್ಗೆ ಅವರನ್ನೇ ತನಿಖೆ ನಡೆಸಲಿ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾನು ಅವರಿಗೆ ಬೈದಿಲ್ಲ. ಬದಲಾಗಿ ನಾನೇ ನಿಮಗೆ ಬೆಂಬಲ ಕೊಡುತ್ತೇನೆ. ಈ ಬಗ್ಗೆ ನೀವು ಚಿಂತೆ ಮಾಡಬೇಡಿ. ಏನಾದ್ರೂ ನಾನಿದ್ದೇನೆ ಅಂತ ಹೇಳಿದ್ದೆ. ಆದ್ರೆ ನರ್ಸ್ ಯಾಕೆ ನನ್ನ ವಿರುದ್ಧ ಡೀನ್ ಗೆ ದೂರು ನೀಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಈ ಬಗ್ಗೆ ನನಗೇನೂ ಗೊತ್ತಿಲ್ಲ ಅಂದ್ರು.

  • ಪ್ರಥಮ ಚಿಕಿತ್ಸೆ ನೀಡದೇ ಬೆಂಗ್ಳೂರು ಆಸ್ಪತ್ರೆಗೆ 2ರ ಬಾಲಕನನ್ನು ಕಳುಹಿಸಿದ್ರು ಕೋಲಾರ ವೈದ್ಯರು!

    ಪ್ರಥಮ ಚಿಕಿತ್ಸೆ ನೀಡದೇ ಬೆಂಗ್ಳೂರು ಆಸ್ಪತ್ರೆಗೆ 2ರ ಬಾಲಕನನ್ನು ಕಳುಹಿಸಿದ್ರು ಕೋಲಾರ ವೈದ್ಯರು!

    ಕೋಲಾರ: ಬಿಸಿ ನೀರು ಬಿದ್ದು 2 ವರ್ಷದ ಬಾಲಕನೊಬ್ಬ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರೋ ಘಟನೆಯೊಂದು ಕೋಲಾರದ ಕೆಜಿಎಫ್ ನಗರದ ಡಿ ಬ್ಲಾಕ್ ನಡೆದಿದೆ.

    ಪವಿತ್ರ ಎಂಬವರ 2 ವರ್ಷದ ಮಗ ವಸಂತ್ ರಾಜ್ ಬೆಳಗ್ಗೆ ಮನೆಯಲ್ಲಿ ಆಟವಾಡುವ ವೇಳೆ ಮೈ ಮೇಲೆ ಬಿಸಿ ನೀರು ಬಿದ್ದ ಪರಿಣಾಮ ಬಾಲಕನ ಅರ್ಧದಷ್ಟು ದೇಹ ಸುಟ್ಟಿದೆ.

    ಘಟನೆ ನಡೆದ ತಕ್ಷಣವೇ ಪೋಷಕರು ಬಾಲಕನನ್ನು ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದ್ರೆ ಅಲ್ಲಿ ವೈದ್ಯರು ಬಾಲಕನಿಗೆ ಪ್ರಥಮ ಚಿಕಿತ್ಸೆ ಕೂಡ ನೀಡದೆ ಬೆಂಗಳೂರಿನ ವಿಕ್ಟೋರಿಯಾಗೆ ಕಳುಹಿಸಿದ್ದಾರೆ. ಕನಿಷ್ಟ ಮಾನವೀಯತೆ ಕೂಡ ಇಲ್ಲದಂತೆ ಕೋಲಾರ ಜಿಲ್ಲಾಸ್ಪತ್ರೆ ವೈದ್ಯರು ವಿಕ್ಟೋರಿಯಾಗೆ ಕಳುಹಿಸಿಕೊಟ್ಟಿದ್ದಾರೆ.

    ಸದ್ಯ ಖಾಸಗಿ ಆಂಬುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾಗೆ ಮಗು ಹಾಗೂ ಪೋಷಕರು ತೆರಳಿದ್ದಾರೆ. ವೈದ್ಯರ ಪ್ರಥಮ ಚಿಕಿತ್ಸೆ ನೀಡದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

     

  • ಜಾಂಡೀಸ್ ನಿಂದ ಯುವತಿ ಸಾವು- ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಪೋಷಕರ ಆಕ್ರೋಶ

    ಜಾಂಡೀಸ್ ನಿಂದ ಯುವತಿ ಸಾವು- ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಪೋಷಕರ ಆಕ್ರೋಶ

    ಬೆಂಗಳೂರು: ನಗರದ ಇತಿಹಾಸ ಪ್ರಸಿದ್ಧ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾದಲ್ಲಿ ರೋಗಿಗಳ ನರಕಯಾತನೆ ಮುಂದುವರಿದಿದೆ.

    ಜಾಂಡೀಸ್‍ನಿಂದ ಬಳಲುತ್ತಿದ್ದ 26 ವರ್ಷದ ಯುವತಿಗೆ ಆಪರೇಷನ್ ಮಾಡ್ಬೇಕು ಅಂತ ಮೂರ್ನಾಲ್ಕು ದಿನ ಚಿಕಿತ್ಸೆಯನ್ನ ವೈದ್ಯರು ಕೊಟ್ಟಿದ್ದಾರೆ. ಆದ್ರೆ, ಎರಡು ದಿನಗಳ ಹಿಂದೆ ಯುವತಿ ಸಾವನ್ನಪ್ಪಿದ್ದಾಳೆ. ಇದ್ರಿಂದ ಆಕ್ರೋಶಿತರಾದ ಯುವತಿಯ ಪೋಷಕರು ವಿಕ್ಟೋರಿಯಾ ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ.

    ಸರ್ಕಾರಿ ಆಸ್ಪತ್ರೆಯಾದ್ರೂ ಹೊರಗಿನಿಂದಲೇ ಔಷಧಿ ತರಬೇಕಿದೆ. ಸರಿಯಾಗಿ ಟ್ರೀಟ್‍ಮೆಂಟ್ ಕೊಡ್ತಿಲ್ಲ. ಎಮರ್ಜೆನ್ಸಿ ವಾರ್ಡಿನಲ್ಲಿರುವ ರೋಗಿಯನ್ನ ಡಿಸ್ಚಾರ್ಜ್ ಮಾಡಿ ಕರೆದುಕೊಂಡು ಹೋಗಿ. ಅವ್ರು ಸತ್ರೆ ನಮ್ಮನ್ನ ಕೇಳಬಾರದು ಅಂತ ಡಾಕ್ಟರ್ ಹೇಳ್ತಾರೆ ಅಂತ ದೂರಿದ್ರು.

    ಹೆಸರಿಗಷ್ಟೇ ಇದು ಸರ್ಕಾರಿ ಆಸ್ಪತ್ರೆ. ನಡೆಯೋದು ಬರೀ ದುಡ್ಡಿನ ದಂಧೆ. ದುಡ್ಡಿಲ್ಲ ಅಂದ್ರೇ ಡಾಕ್ಟರ್ ನಿಂದ ಕಾಂಪೌಂಡರ್ ವರೆಗೂ ತುಚ್ಛವಾಗಿ ಕಾಣ್ತಾರೆ. ಅಂತ ಕಲಬುರ್ಗಿಯಿಂದ ಬಂದಿರೋ ವ್ಯಕ್ತಿಯೊಬ್ಬರು ದೂರಿದ್ದಾರೆ.