Tag: victims

  • 13ರ ಬಾಲಕಿ ಮೇಲೆ 16 ಮಂದಿಯಿಂದ ಸಾಮೂಹಿಕ ಅತ್ಯಾಚಾರ – ನೋವಿನ ಕಥೆ ಬಿಚ್ಚಿಟ್ಟ ತಂದೆ!

    ರಾಜಸ್ಥಾನ: 13 ವರ್ಷ ಬಾಲಕಿ ಮೇಲೆ 16 ಜನರು ಸಾಮೂಹಿಕ ಅತ್ಯಾಚಾರ ಮಾಡಿರುವುದು ನಾಚಿಕೆಗೇಡಿನ ಘಟನೆ ಭರತ್‍ಪುರದ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

    ಸಂತ್ರಸ್ತೆಯ ತಂದೆ, ಪೊಲೀಸ್ ಠಾಣೆಯಲ್ಲಿ ತನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು 16 ಜನರ ವಿರುದ್ಧ ದೂರು ನೀಡಿದ್ದು, ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವು ಭರತ್‍ಪುರದ ಖೋಹ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ:  ಸಂಸ್ಕೃತದಲ್ಲಿ ಸಾಹಿತ್ಯ ಸಂತೆ ಎಂದರೆ ಸಾಹಿತ್ಯವನ್ನು ಹಂಚುವುದು: ಹಿರಿಯ ಸಾಹಿತಿ ಪಾಟೀಲ್

    ನಡೆದಿದ್ದೇನು?
    ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ಸಂತ್ರಸ್ತ ಅಪ್ರಾಪ್ತ ಬಾಲಕಿ ಫೆ.11ರಂದು ಮಧ್ಯಾಹ್ನ ಮೇಕೆ ಮೇಯಿಸಲು ಮತ್ತು ಕಟ್ಟಿಗೆ ತೆಗೆದುಕೊಳ್ಳಲು ಕಾಡಿಗೆ ಹೋಗಿದ್ದಳು. ಆ ವೇಳೆ ಗ್ರಾಮದ ಐವರು ಬಂದು ಸಂತ್ರಸ್ತೆಯನ್ನು ಅಪಹರಿಸಿದ್ದಾರೆ. ಬಳಿಕ ಬಾಲಕಿ ಮೇಲೆ 16 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಫೆಬ್ರವರಿ 12 ರಂದು ಸಂತ್ರಸ್ತೆ ಅವನ ಹಿಡಿತದಿಂದ ಬಿಡುಗಡೆಗೊಂಡಿದ್ದು, ತನ್ನ ಮನೆಗೆ ಬಂದಿದ್ದಾಳೆ. ನಂತರ ಅವಳು ತನ್ನ ತಂದೆಗೆ ಸಂಪೂರ್ಣ ಕಥೆಯನ್ನು ಹೇಳಿಕೊಂಡಿದ್ದಾಳೆ.

    POLICE JEEP

    ಘಟನೆಯ ನಂತರ ಇಡೀ ಪ್ರದೇಶದ ಜನರು ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ 13 ವರ್ಷದ ಮಗಳನ್ನು ಕೆಲವರು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಂದೆ ದೂರು ದಾಖಲಿಸಿದ್ದಾರೆ ಎಂದು ಏರಿಯಾ ಸಿಒ ಆಶಿಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿ..!

    11 rape incidents reported in Pakistan every day, official statistics reveal

    ಸಂತ್ರಸ್ತೆ 16 ಜನರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ, ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸಲು ಪೊಲೀಸರು ತೀವ್ರ ತನಿಖೆಯನ್ನು ಮಾಡುತ್ತಿದ್ದಾರೆ. ಪ್ರಸ್ತುತ ಐವರು ಆರೋಪಿಗಳೇ ಸ್ವಯಃ ಪ್ರೇರಣೆಯಿಂದ ಪೊಲೀಸ್ ಠಾಣೆಗೆ ಶರಣಾಗಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಸೆಲೆಬ್ರಿಟಿ ಯೂಟ್ಯೂಬರ್ ಶ್ರೀಕಾಂತ್ ವೆಟ್ಟಿಯಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    ಸೆಲೆಬ್ರಿಟಿ ಯೂಟ್ಯೂಬರ್ ಶ್ರೀಕಾಂತ್ ವೆಟ್ಟಿಯಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    ತಿರುವನಂತಪುರಂ: ವಿವಾಹದ ಭರವಸೆ ನೀಡಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕೇರಳದ ಸೆಲೆಬ್ರಿಟಿ ಯೂಟ್ಯೂಬರ್ ಶ್ರೀಕಾಂತ್ ವೆಟ್ಟಿಯಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

    ಕೊಲ್ಲಂ ಜಿಲ್ಲೆಯ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕೊಚ್ಚಿ ಸೆಂಟ್ರಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಚ್ಚಿಯ ಹೋಟೆಲ್ ಮತ್ತು ಅಪಾರ್ಟ್‍ಮೆಂಟ್‍ನಲ್ಲಿ ತನ್ನ ಮೇಲೆ ಎರಡು ಬಾರಿ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಾನೆ. ಶ್ರೀಕಾಂತ್ ಒಬ್ಬ ಚಲನಚಿತ್ರಗಳ ಸ್ಪೂಫ್ ವೀಡಿಯೊಗಳಿಗಾಗಿ ಪ್ರಸಿದ್ಧ ಯುಟ್ಯೂಬರ್ ಆಗಿದ್ದಾನೆ. ಮಹಿಳಾ ಸಬಲೀಕರಣ ಮತ್ತು ರಾಜಕೀಯ ಸರಿಯಾದತೆಯಂತಹ ವಿಷಯಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬರ್ ನ ವೀಡಿಯೋಗಳಿಗೆ ನಾನು ಅಭಿಮಾನಿಯಾಗಿದ್ದೇನೆ ಎಂದರು. ಇದನ್ನೂ ಓದಿ: ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ ಮರು ದಿನವೇ ಶಾಲೆ ಪ್ರಾರಂಭ: ಬಿಸಿ ನಾಗೇಶ್

    8 ವರ್ಷದ ಬಾಲಕನ ತಾಯಿಯಾಗಿರುವ ಸಂತ್ರಸ್ತೆ, ಕೊಚ್ಚಿಯಲ್ಲಿ ವಾಸಿಸುತ್ತಿದ್ದಾಗ ಶ್ರೀಕಾಂತ್ ಜೊತೆಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಫೆಬ್ರವರಿ 2021 ರಲ್ಲಿ ಶ್ರೀಕಾಂತ್ ನನ್ನನ್ನು ತಮ್ಮ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿದ್ದರು. ಈ ವೇಳೆ ಎರ್ನಾಕುಲಂನ ಆಲುವಾದಲ್ಲಿನ ಫ್ಲಾಟ್‍ನಲ್ಲಿ ಮತ್ತು ಕೊಚ್ಚಿ ನಗರದ ಹೋಟೆಲ್ ಕೊಠಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿದ್ದಾರೆ. ಇದನ್ನೂ ಓದಿ: ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಸೊಸೆ, ಅಖಿಲೇಶ್ ಯಾದವ್ ನಾದಿನಿ ಬಿಜೆಪಿ ಸೇರ್ಪಡೆ

    ಸದ್ಯ ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ- ಸಂತ್ರಸ್ಥರ ಧರಣಿ ಸತ್ಯಾಗ್ರಹ

    ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ- ಸಂತ್ರಸ್ಥರ ಧರಣಿ ಸತ್ಯಾಗ್ರಹ

    ಚಿಕ್ಕೋಡಿ/ಬೆಳಗಾವಿ: ಪರಿಹಾರ ನೀಡುವಂತೆ ಆಗ್ರಹಿಸಿ ಕೃಷ್ಣಾ ನದಿ ತೀರದ ಪ್ರವಾಹ ಸಂತ್ರಸ್ಥರು ಪ್ರತಿಭಟನೆ ನಡೆಸಿದರು.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಕೃಷ್ಣಾ ತೀರದ ಜುಗುಳ, ಮಂಗಾವತಿ, ಶಹಾಪುರ, ಮಳವಾಡ ಗ್ರಾಮಗಳ ಸಂತ್ರಸ್ಥರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಪ್ರವಾಹ ಬಂದು ಹೋಗಿ ಮೂರು ತಿಂಗಳು ಕಳೆದರೂ ಸರ್ಕಾರ ಸಂತ್ರಸ್ಥರಿಗೆ ಪರಿಹಾರ ನೀಡಿಲ್ಲ. ಪ್ರವಾಹ ಬಂದಾಗ ಮನೆಗಳನ್ನು ಕಳೆದುಕೊಂಡಿದ್ದೇವೆ. ಇದುವರೆಗೆ ಸರ್ಕಾರದ ಪರಿಹಾರ ಬಂದಿಲ್ಲ. ಬೆಳೆ ಹಾನಿ ಪರಿಹಾರ ಸೇರಿದಂತೆ ಸರ್ಕಾರ ಘೋಷಿಸಿರುವ ಯಾವುದೇ ಪರಿಹಾರ ಸಂತ್ರಸ್ಥರಿಗೆ ತಲುಪಿಲ್ಲ. ಅಲ್ಲದೆ ಮನೆ ಮಂಜೂರು ಮಾಡುವಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಸಮಯದಲ್ಲಿ ವೈದ್ಯರ ಸೇವೆಗೆ ಸಿಗದ ಪ್ರೋತ್ಸಾಹ ಧನ- ಕ್ರಿಮ್ಸ್ ವೈದ್ಯರ ಪ್ರತಿಭಟನೆ

    ಲಾಗಿನ್ ಶುರು ಇದ್ದರೂ ಮನೆಗಳ ಮಂಜುರಾತಿಗೆ ತಾಲೂಕು ಆಡಳಿತ ಮುಂದಾಗಿಲ್ಲ. ತಕ್ಷಣವೇ ಸರ್ಕಾರ ಸಂತ್ರಸ್ಥರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • ಅಧಿವೇಶನದ ಬಳಿಕ ಬಾಕಿ ಉಳಿದ ಬೆಳಗಾವಿಯ ನೆರೆ ಸಂತ್ರಸ್ತರಿಗೆ ಪರಿಹಾರ- ಸಿಎಂ ಭರವಸೆ

    ಅಧಿವೇಶನದ ಬಳಿಕ ಬಾಕಿ ಉಳಿದ ಬೆಳಗಾವಿಯ ನೆರೆ ಸಂತ್ರಸ್ತರಿಗೆ ಪರಿಹಾರ- ಸಿಎಂ ಭರವಸೆ

    ಬೆಳಗಾವಿ: ಪ್ರವಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಅಧಿವೇಶನ ಮುಗಿದ ಬಳಿಕ ಬಾಕಿ ಉಳಿದಿರುವ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

    ಈ ಕುರಿತು ಮಾತನಾಡಿದ ಅವರು, ನೆರೆ ಪರಿಹಾರಕ್ಕಾಗಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಎದುರು ಸಂತ್ರಸ್ತರು ಧರಣಿ ನಡೆಸುತ್ತಿರುವ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಅಧಿವೇಶನ ಮುಗಿದ ಬಳಿಕ ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಯಾದ ಮನೆಗಳ ಪರಿಹಾರದ ಬಗ್ಗೆ ಹಣಕಾಸು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು. ಇದನ್ನೂ ಓದಿ: ನಮಗೆ ಮನೆ ಕಟ್ಟಿಸಿ ಕೊಡಿ- ಘಟಪ್ರಭಾ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಂದ ಪ್ರತಿಭಟನೆ

    ಸಂತ್ರಸ್ತರೆಲ್ಲರಿಗೂ ಪರಿಹಾರ ನೀಡುವ ಕಾರ್ಯ ಮಾಡಲಾಗುವುದು. ಪ್ರವಾಹದಲ್ಲಿ ಬಿದ್ದ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂಬ ಬಗ್ಗೆ ಇರುವ ಗೊಂದಲ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

  • ನಮಗೆ ಮನೆ ಕಟ್ಟಿಸಿ ಕೊಡಿ- ಘಟಪ್ರಭಾ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಂದ ಪ್ರತಿಭಟನೆ

    ನಮಗೆ ಮನೆ ಕಟ್ಟಿಸಿ ಕೊಡಿ- ಘಟಪ್ರಭಾ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಂದ ಪ್ರತಿಭಟನೆ

    ಬೆಳಗಾವಿ: ಗೋಕಾಕ್ ತಾಲೂಕಿನ ಅರಭಾವಿ ಕ್ಷೇತ್ರದಲ್ಲಿ 2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈವರೆಗೆ ಸರ್ಕಾರ ಮನೆ ಕಟ್ಟಿ ಕೊಟ್ಟಿಲ್ಲ. ಇದರಿಂದ ಆಕ್ರೋಶಗೊಂಡಿರುವ ಸಂತ್ರಸ್ತರು ಬುತ್ತಿ ಕಟ್ಟಿಕೊಂಡು ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ನಮಗೆ ಮನೆ ಕಟ್ಟಿಸಿಕೊಡುವ ಆದೇಶ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

    ಅರಭಾವಿ ಕ್ಷೇತ್ರದ ಅಡಿಬಟ್ಟಿ, ಚಿಗಡೊಳ್ಳಿ, ಮೇಳವಂಕಿ, ಹಡಗಿನಾಳ, ಉದಗಟ್ಟಿ, ತಿಗಡಿ, ಮಸಗುಪ್ಪಿ, ಕಲಾರಕೊಪ್ಪ, ಅಳ್ಳಿಮಟ್ಟಿ, ಸುಣಧೋಳಿ, ಢವಳೇಶ್ವರ, ಮುನ್ಯಾಳ, ಕಮಲದಿನ್ನಿ, ರಂಗಾಪುರ ಸೇರಿದಂತೆ ಘಟಪ್ರಭಾ ನದಿ ದಂಡೆಯ ಹಲವು ಹಳ್ಳಿಗಳ 200ಕ್ಕೂ ಹೆಚ್ಚು ಸಂತ್ರಸ್ತರು ಬುಧವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ, ಡಿಸಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು. ಮನೆ ಕಟ್ಟಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ 500ಕ್ಕೂ ಹೆಚ್ಚು ಸೈಕಲ್‍ಗಳಲ್ಲಿ ರಸ್ತೆಗಿಳಿದ ಜೆಡಿಎಸ್ ಕಾರ್ಯಕರ್ತರು

    ಈ ವೇಳೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಮಾತನಾಡಿ, 2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಅರಭಾವಿ ಕ್ಷೇತ್ರದ ಜನತೆಗೆ ಮನೆ ಪರಿಹಾರ ಕೊಟ್ಟಿಲ್ಲ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಮನೆಗಳಿಗೆ ಪರಿಹಾರ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಪ್ರತ್ಯಕ್ಷವಾಗಿ ಪ್ರವಾಹಕ್ಕೆ ಹಾನಿಯಾದ ಮನೆಗಳಿಗೆ ಭೇಟಿ ನೀಡಿ, ಸತ್ಯಾಸತ್ಯತೆ ಪರಿಶೀಲನೆ ನಡೆಸಬೇಕು. ಮನೆಗಳ ನಿರ್ಮಾಣದ ಆದೇಶ ಬರುವವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಬಿಟ್ಟು ಹೋಗುವುದಿಲ್ಲ. ಬುತ್ತಿ ಕಟ್ಟಿಕೊಂಡೇ ಬಂದಿದ್ದೇವೆ ಎಂದು ಹೇಳಿದರು.

  • ಪ್ರವಾಹ ಸಂತ್ರಸ್ತರಿಂದ ಶಾಸಕಿ ರೂಪಾಲಿ ನಾಯ್ಕ್‌ಗೆ ಘೆರಾವ್

    ಪ್ರವಾಹ ಸಂತ್ರಸ್ತರಿಂದ ಶಾಸಕಿ ರೂಪಾಲಿ ನಾಯ್ಕ್‌ಗೆ ಘೆರಾವ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲ್ಲಾಪುರದಲ್ಲಿ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡದಿರುವುದಕ್ಕೆ ಮಲ್ಲಾಪುರದ ಗಾಂಧಿ ನಗರ ಬಡಾವಣೆಯ ಪ್ರವಾಹ ಸಂತ್ರಸ್ತರು ಕಾರವಾರ-ಅಂಕೋಲ ಶಾಸಕಿ ರೂಪಾಲಿ ನಾಯ್ಕ್‌ಗೆ ಘೆರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

    ಕಾಳಜಿ ಕೇಂದ್ರದಲ್ಲಿ 80ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದು, ಬಹುತೇಕರು ಮನೆಯ ಯಾವ ವಸ್ತುವೂ ಇಲ್ಲದೇ ನಿರಾಶ್ರಿತರಾಗಿದ್ದಾರೆ. ಇವರಿಗೆ ಮೂಲಭೂತ ಅಗತ್ಯ ವಸ್ತುಗಳಾಗಲಿ, ಕುಡಿಯುವ ನೀರನ್ನೂ ವ್ಯವಸ್ಥೆ ಮಾಡಿಲ್ಲ. ಕಳೆದ ಎರಡು ವರ್ಷದಿಂದ ಈ ಭಾಗದ ಜನರು ಕದ್ರಾ ಜಲಾಶಯದಿಂದ ನೀರು ಬಿಟ್ಟಾಗಲೆಲ್ಲಾ ಮನೆ ಕಳೆದುಕೊಳ್ಳುತಿದ್ದು, ಈ ಹಿಂದೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಿದ್ದರು.

    ಇಂದು ಶಾಸಕಿ ರೂಪಾಲಿ ನಾಯ್ಕ್‌ ಸ್ಥಳಕ್ಕೆ ಆಮಿಸಿದ್ದು, ಈ ವೇಳೆ ಸಂತ್ರಸ್ತರು ತಮ್ಮ ಅಹವಾಲನ್ನು ಸಲ್ಲಿಸಿದ್ದಲ್ಲದೆ, ಕಾಳಜಿ ಕೇಂದ್ರದಲ್ಲಿನ ಅವ್ಯವಸ್ಥೆ ಹಾಗೂ ಕುಡಿಯುವ ನೀರು ಇರದ ಬಗ್ಗೆ ಪ್ರತಿಭಟನೆ ರೂಪದಲ್ಲಿ ಘೇರಾವ್ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ್‌, ನೀವು ಹೊರಗಿನಿಂದ ಬಂದವರು ನಿಮಗೆ ಪುನರ್ವಸತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂತ್ರಸ್ಥರು, ನಾವು ತಂದೆಯ ಕಾಲದಿಂದ ಇದೇ ಗ್ರಾಮದಲ್ಲಿ ಇದ್ದು, ಕಂದಾಯ ಕಟ್ಟುತಿದ್ದೇವೆ. ಮತದಾರರ ಪಟ್ಟಿಯಲ್ಲೂ ನಮ್ಮ ಹೆಸರಿದೆ. ಹೀಗಿರುವಾಗ ನಾವು ಹೊರಗಿನವರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಈ ವೇಳೆ ಪೊಲೀಸರ ಮಧ್ಯ ಪ್ರವೇಶ ದಿಂದ ಗಲಾಟೆ ತಿಳಿಗೊಂಡಿತು.

  • ಪ್ರವಾಹ ಪೀಡಿತರ ಗೋಳು ಕೇಳೋದು ಬಿಟ್ಟು ಭರ್ಜರಿ ರೋಡ್ ಶೋ ನಡೆಸಿದ ಸಿದ್ದರಾಮಯ್ಯ

    ಪ್ರವಾಹ ಪೀಡಿತರ ಗೋಳು ಕೇಳೋದು ಬಿಟ್ಟು ಭರ್ಜರಿ ರೋಡ್ ಶೋ ನಡೆಸಿದ ಸಿದ್ದರಾಮಯ್ಯ

    – ಕಾಟಾಚಾರದ ಭೇಟಿಗೆ ಯಾದಗಿರಿ ಜನತೆ ಅಸಮಾಧಾನ

    ಯಾದಗಿರಿ: ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ನಿರಾಶ್ರಿತರ ಗೋಳು ಕೇಳಬೇಕಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂತ್ರಸ್ತರ ಭೇಟಿ ನೆಪದಲ್ಲಿ ರೋಡ್ ಶೋ ನಡೆಸಿದ್ದಾರೆ.

    ಸೋಮವಾರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಸಂತ್ರಸ್ತರ ಸಮಸ್ಯೆ ಕೇಳುವ ಬದಲು ಪಕ್ಷದ ಕಾರ್ಯಕರ್ತರ ಭೇಟಿ ಮಾಡಿದ್ದಾರೆ. ಇದೇ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಸಹ ಮಾಡಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ರೋಜಾ ಗ್ರಾಮಕ್ಕೆ ಕಾಟಾಚಾರ ಭೇಟಿ ನೀಡಿದ ನಂತರ, ಹುರಸಗುಂಡಗಿಗೆ ಭೇಟಿ ನೀಡಿ ನಿರಾಶ್ರಿತರ ಗೋಳು ಕೇಳದೆ, ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಧ್ವಜಾರೋಹಣ ಮಾಡಿ ಸರ್ಕಲ್ ಉದ್ಘಾಟನೆ ಮಾಡಿದರು.

    ನಂತರ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡದೆ, ರಾಜ್ಯ ಹೆದ್ದಾರಿ ಮಧ್ಯದಲ್ಲಿಯೇ ವಾಹನ ನಿಲ್ಲಿಸಿ ಜನರತ್ತ ಕೈಬಿಸಿದರು. ಈ ವೇಳೆ ನಿರಾಶ್ರಿತರು ನಮಗೂ ಪರಿಹಾರ ಕಲ್ಪಿಸಬೇಕೆಂದು ನೋವು ತೊಡಿಕೊಳ್ಳಲು ಮುಂದಾದರು. ಈ ವೇಳೆ ಜನರ ಮಾತು ಕೇಳಿಸಿಕೊಳ್ಳದ ಸಿದ್ದರಾಮಯ್ಯ, ರೋಡ್ ಶೋ ನಡೆಸಿ ಸ್ಥಳದಿಂದ ಕಾಲ್ಕಿತ್ತರು. ನಂತರ ಯಾದಗಿರಿ ನಗರದಲ್ಲಿರುವ ಮಾಜಿ ಎಂಎಲ್ ಸಿ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರ ನಿವಾಸಕ್ಕೆ ಭೇಟಿ ನೀಡಿ, ದಸರಾ ಹಬ್ಬದ ಪ್ರಯುಕ್ತ ಹೋಳಿಗೆ ಊಟ ಸವಿದಿದ್ದಾರೆ.

  • ಹಿಟ್ಟಿನ ಬ್ಯಾಗ್‍ನಲ್ಲಿ ಹಣ: ಅಮೀರ್ ಖಾನ್ ಸ್ಪಷ್ಟನೆ

    ಹಿಟ್ಟಿನ ಬ್ಯಾಗ್‍ನಲ್ಲಿ ಹಣ: ಅಮೀರ್ ಖಾನ್ ಸ್ಪಷ್ಟನೆ

    ನವದೆಹಲಿ: ಹಿಟ್ಟಿನ ಬ್ಯಾಗ್‍ಗಳಲ್ಲಿ ಗರಿ ಗರಿ ನೋಟುಗಳು ಪತ್ತೆಯಾಗಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದವು. ಬಡವರಿಗಾಗಿ ಬಾಲಿವುಡ್ ನಟ ಅಮಿರ್ ಖಾನ್ ಈ ಹಣ ಇಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿ ದೇಶಾದ್ಯಂತ ಹರಿದಾಡಿತ್ತು. ಅಲ್ಲದೆ ಸಾಕಷ್ಟು ಚರ್ಚೆ ಸಹ ನಡೆದಿತ್ತು. ಇದೀಗ ಸ್ವತಃ ಅಮಿರ್ ಖಾನ್ ಅವರು ಟ್ವೀಟ್ ಮಾಡುವ ಮೂಲಕ ಎಲ್ಲ ವಿವಾದಕ್ಕೆ ತೆರೆ ಎಳೆದಿದ್ದಾರೆ.

    ಹೌದು ಕೆಲ ದಿನಗಳ ಹಿಂದೆ ಸಾಕಷ್ಟು ಚರ್ಚೆಯಾಗಿದ್ದ ಗೋಧಿ ಹಿಟ್ಟಿನ ಬ್ಯಾಗ್‍ಗಳಲ್ಲಿ ಗರಿ ಗರಿ ನೋಟಿನ ಕಂತೆ ಇರುವ 15 ಸಾವಿರ ರೂ. ಪತ್ತೆಯಾಗಿತ್ತು. ಲಾಕ್‍ಡೌನ್‍ನಿಂದ ಬೆಂದು ಬಸವಳಿದ ಜನರಿಗೆ ಆಹಾರ ನೀಡಿದ್ದರೆ ಸಾಕಿತ್ತು ಸಮಾಧಾನ ಪಟ್ಟುಕೊಳ್ಳುತ್ತಾರೆ. ಆದರೆ ಯಾರೋ ಅನಾಮಿಕರು ಒಂದು ಕೆ.ಜಿ.ಗೋಧಿ ಹಿಟ್ಟಿನ ಚೀಲದಲ್ಲಿ 15 ಸಾವಿರ ರೂ. ಇಟ್ಟು ವಿತರಿಸಿದ್ದರು. ಪಡೆದವರಿಗೆ ಸಂತಸವಾದರೆ, ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಅಮಿರ್ ಖಾನ್ ಮಾಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಕಾರಣ ಅಮಿರ್ ಖಾನ್ ಅವರ ಸಹಾಯ ಮಾಡುವ ಗುಣ ಹಾಗೂ ಸಹಾಯ ಮಾಡಿದ್ದನ್ನು ಎಲ್ಲೂ ಹೇಳಿಕೊಳ್ಳದ ಸ್ವಭಾವ.

    ಈ ಎಲ್ಲ ಬೆಳವಣಿಗೆಗಳ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಹಲವರು ಇನ್ನೂ ಅಮಿರ್ ಖಾನ್ ಅವರೇ ನೀಡಿದ್ದಾರೆ ಎಂದು ನಂಬಿದ್ದಾರೆ. ಹಣ ನೀಡಿದ್ದಕ್ಕೆ ಹಲವರು ವಿಡಿಯೋ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದರು. ಆದರೆ ಈ ಕುರಿತು ಸ್ವತಃ ಅಮಿರ್ ಖಾನ್ ಅವರು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್‍ನಲ್ಲಿ ಸ್ಪಷ್ಟಪಡಿಸಿರುವ ಅವರು, ಗೋಧಿ ಹಿಟ್ಟಿನ ಚೀಲಗಳಲ್ಲಿ ಹಣ ಇಟ್ಟ ವ್ಯಕ್ತಿ ನಾನಲ್ಲ. ಇಂದು ಸಂಪೂರ್ಣ ಸುಳ್ಳು ಸುದ್ದಿ, ರಾಬಿನ್ ಹುಡ್ ತನ್ನ ಬಗ್ಗೆ ರಿವೀಲ್ ಮಾಡಲು ಬಯಸುವುದಿಲ್ಲ. ಸ್ಟೇ ಸೇಫ್, ಲವ್ ಎಂದು ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ.

    ದೆಹಲಿಯ ಕೆಲವು ಭಾಗಗಳಲ್ಲಿ ಹಣವಿದ್ದ ಒಂದು ಕೆ.ಜಿ.ಗೋಧಿ ಹಿಟ್ಟಿನ ಬ್ಯಾಗ್ ವಿತರಿಸಲಾಗಿತ್ತು. ಹೆಚ್ಚೇನು ಆಹಾರ ಪದಾರ್ಥ ನೀಡದೆ ಕೇವಲ ಒಂದು ಕೆ.ಜಿ.ಗೋಧಿ ಹಿಟ್ಟಿನ ಬ್ಯಾಗ್ ನೀಡಿದ್ದಕ್ಕೆ ಹಲವರು ಮೂಗು ಮುರಿದು ಇದನ್ನು ತೆಗೆದುಕೊಂಡು ಏನು ಮಾಡುವುದು ಎಂದು ತಿರಸ್ಕರಿಸಿದ್ದರು. ತುಂಬಾ ಅವಶ್ಯವಿದ್ದವರು ಈ ಬ್ಯಾಗ್‍ಗಳನ್ನು ತೆಗೆದುಕೊಂಡಿದ್ದರು. ತೆಗೆದು ನೋಡಿದಾಗ 500 ರೂ.ನೋಟುಗಳುಳ್ಳ ಒಟ್ಟು 15 ಸಾವರ ರೂ. ಪತ್ತೆಯಾಗಿತ್ತು. ನೇರವಾಗಿ ಅವಶ್ಯಕತೆ ಇರುವವರಿಗೆ, ಬಡವರಿಗೆ ತಲುಪಲು ಈ ರೀತಿ ಮಾಡಿದ್ದಾರೆ. ಇದನ್ನು ಅಮಿರ್ ಖಾನ್ ಅವರೇ ಮಾಡಿರಬೇಕು ಎಂದು ಹೇಳಲಾಗಿತ್ತು.

    ಅಮಿರ್ ಖಾನ್ ಅವರು ಈ ಕೆಲಸ ಮಾಡಿಲ್ಲ ಎನ್ನುವುದಾದರೆ, ಬ್ಯಾಗ್‍ನಲ್ಲಿ ಹಣ ಇಟ್ಟು ಹಂಚಿದವರಾರು ಎಂಬ ಪ್ರಶ್ನೆ ಇದೀಗ ಮೂಡಿದೆ. ಸದ್ಯ ಅಮಿರ್ ಖಾನ್ ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದೆ.

  • ಕೃಷ್ಣಾ ನದಿ ಪ್ರವಾಹದ ಸಂತ್ರಸ್ತರಿಗೆ ಅಧಿಕಾರಿಗಳಿಂದ ವಂಚನೆ

    ಕೃಷ್ಣಾ ನದಿ ಪ್ರವಾಹದ ಸಂತ್ರಸ್ತರಿಗೆ ಅಧಿಕಾರಿಗಳಿಂದ ವಂಚನೆ

    – ಕಂದಾಯ ಇಲಾಖೆ ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿ

    ರಾಯಚೂರು: ಕೃಷ್ಣಾ ನದಿ ಪ್ರವಾಹದಿಂದ ಜನ ನೆಮ್ಮದಿಯನ್ನು ಕಳೆದುಕೊಂಡು ಐದು ತಿಂಗಳಾದರೂ ನೆರೆಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ರಾಯಚೂರಿನಲ್ಲಿ ನೆರೆ ಸಂತ್ರಸ್ತರ ಹೆಸರಿನಲ್ಲಿ ಇನ್ಯಾರದೋ ಬ್ಯಾಂಕ್ ಖಾತೆಗಳಿಗೆ ಸಾವಿರಾರು ರೂಪಾಯಿ ಹಣ ಬಂದಿದೆ. ಅಧಿಕಾರಿಗಳ ವಂಚನೆಗೆ ಸಂತ್ರಸ್ತರು ಮಾತ್ರ ಮತ್ತೆ ಮತ್ತೆ ಸಂತ್ರಸ್ತರಾಗುತ್ತಿದ್ದಾರೆ.

    ದೇವದುರ್ಗದ ಬೊಮ್ಮನಾಳ, ರಾಯಚೂರಿನ ಎಚ್.ತಿಮ್ಮಾಪುರ ಗ್ರಾಮದ ನೂರಾರು ಜನ ಸಂತ್ರಸ್ತ ರೈತರಿಗೆ ಪರಿಹಾರ ವಿತರಣೆಯಲ್ಲಿ ವಂಚನೆಯಾಗಿದೆ. ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷರ ವಂಚನೆಯಿಂದ ಪಹಣಿ, ಆಧಾರ್ ಸಂಖ್ಯೆ ಸೇರಿದಂತೆ ಇತರೆ ದಾಖಲೆಗಳನ್ನೇ ಬದಲಿಸಿ ಬೇರೆಯವರ ಖಾತೆಗೆ ಹಣ ಜಮಾಮಾಡಿ ಡ್ರಾ ಮಾಡಿಕೊಳ್ಳಲಾಗಿದೆ. ನೆರೆಹಾವಳಿಗೆ ಸಂಬಂಧವೇ ಇಲ್ಲದ ಜಮೀನಿನ ರೈತರ ಖಾತೆಗೆ ಹಣ ಹಾಕಿ ಅಧಿಕಾರಿಗಳೇ ಡ್ರಾಮಾಡಿಕೊಂಡಿದ್ದಾರೆ. ಇದರಿಂದ ನಿಜವಾದ ಸಂತ್ರಸ್ತರಿಗೆ ವಂಚನೆಯಾಗಿದೆ. ಸರ್ಕಾರದ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಅಂತ ರೈತ ಮುಖಂಡ ವಾಸುದೇವ ಮೇಟಿ ಆರೋಪಿಸಿದ್ದಾರೆ.

    ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದ 150 ರೈತರಿಗೆ ಮೋಸವಾಗಿದೆ. ರಾಯಚೂರಿನ ಎಚ್.ತಿಮ್ಮಾಪುರ ಗ್ರಾಮದಲ್ಲೂ ಸಾಕಷ್ಟು ರೈತರಿಗೆ ವಂಚನೆಯಾಗಿದ್ದು, ಈಗ ಬೆಳಕಿಗೆ ಬರುತ್ತಿದೆ. ಜಿಲ್ಲೆಯಲ್ಲಿ ಒಟ್ಟು 5400 ಜನ ರೈತರು ನೆರೆ ಹಾವಳಿಯಿಂದ ಬೆಳೆ ಕಳೆದುಕೊಂಡಿದ್ದು 18 ಜನರಿಗೆ ಮಾತ್ರ ಜಿಲ್ಲಾಡಳಿತ ದಾಖಲೆ ಕೊರತೆಯಿಂದ ಹಣ ಜಮಾ ಮಾಡಿಲ್ಲ. ಆದರೆ ಅಧಿಕಾರಿಗಳ ಗೋಲ್ ಮಾಲ್ ನಿಂದ ಕಂಡಕಂಡವರ ಖಾತೆಗೆ ಹಣಹೋಗಿದ್ದು ದುರುಪಯೋಗ ಮಾಡಿಕೊಳ್ಳಲಾಗಿದೆ. ರೈತರಿಗಾದ ವಂಚನೆಯನ್ನು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಒಪ್ಪಿಕೊಂಡಿದ್ದು ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ಸಂತ್ರಸ್ತರ ಪರಿಹಾರದ ಹಣದ ಮೇಲೂ ಭ್ರಷ್ಟ ಅಧಿಕಾರಿಗಳು ಕಣ್ಣಾಕಿರುವುದು ದುರಂತ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ. ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರವನ್ನ ಕೂಡಲೇ ಒದಗಿಸಬೇಕಿದೆ.

  • ಪ್ರವಾಹ ಕಳೆದು 4 ತಿಂಗಳಾದ್ರೂ ನಿಂತಿಲ್ಲ ಸಂತ್ರಸ್ತರ ಕಣ್ಣೀರು

    ಪ್ರವಾಹ ಕಳೆದು 4 ತಿಂಗಳಾದ್ರೂ ನಿಂತಿಲ್ಲ ಸಂತ್ರಸ್ತರ ಕಣ್ಣೀರು

    ಬೆಳಗಾವಿ(ಚಿಕ್ಕೋಡಿ): ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬವನ್ನ ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಪ್ರವಾಹ ಸಂತ್ರಸ್ತರು ಕಣ್ಣೀರಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ಪರಿಹಾರ ನೀಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಆದರೆ ಇತ್ತ ಸಂತ್ರಸ್ತರು ಪರಿಹಾರಕ್ಕಾಗಿ ಅಲೆದಾಡಿ ಕಣ್ಣೀರು ಹಾಕುತ್ತಿದ್ದಾರೆ.

    ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದ ಪ್ರವಾಹಕ್ಕೆ ಸಿಲುಕಿ ಮನೆಗಳನ್ನ ಕಳೆದುಕೊಂಡಿರುವ ಸಂತ್ರಸ್ತರು ಕಣ್ಣೀರಲ್ಲಿ ಹಬ್ಬ ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆಯಿಲ್ಲ ಎಂದು ಸಿಎಂ ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಭಾಗದ ಸಂತ್ರಸ್ತರಿಗೆ ಯಾವುದೇ ಪರಿಹಾರ ಸಿಗದೇ ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ತಮ್ಮ ಚಪ್ಪಲಿ ಸವೆದುಕೊಳ್ಳುತ್ತಿದ್ದಾರೆ. ಸರ್ಕಾರದ ಅಧಿಕಾರಿಗಳು ಮಾತ್ರ ಟೆಕ್ನಿಕಲ್ ಪ್ರಾಬ್ಲಮ್ ಇದೆ ಎಂದು ಸಂತ್ರಸ್ತರನ್ನು ಮನೆಗೆ ಕಳುಹಿಸಿಕೊಡುತ್ತಿದ್ದಾರೆ. ಇದರಿಂದ ಬೇಸತ್ತಿರುವ ಸಂತ್ರಸ್ತರು ಸರ್ಕಾರದ ಖಜಾನೆ ಬಳಿ ಹಣ ಇದೆಯೋ? ಇಲ್ಲವೋ? ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ.

    ಸರ್ಕಾರದ ಬಳಿ ಹಣದ ಕೊರತೆ ಇರುವ ಕಾರಣ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಇದುವರೆಗೂ 10 ಸಾವಿರ ರೂ. ಬಿಟ್ಟು ಬೇರೆ ಪರಿಹಾರ ಸಿಕ್ಕಿಲ್ಲ. ತಮ್ಮ ಸ್ವಂತ ಖರ್ಚಿನಿಂದ ಕೆಲವರು ಸಾಲ ಮಾಡಿಕೊಂಡು ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಕೆಲವರಿಗೆ ಮಾತ್ರ ಪರಿಹಾರ ಸಿಕ್ಕಿದ್ದು, ಸಂಪೂರ್ಣವಾಗಿ ಮನೆ ಕಳೆದುಕೊಂಡ ಸಾಕಷ್ಟು ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ, ಕಲ್ಲೋಳ ಕಾಗವಾಡ ತಾಲೂಕಿನ ಜೂಗುಳ, ಮಂಗಾವತಿ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಅರ್ಧಕ್ಕೂ ಹೆಚ್ಚು ನಿಜವಾದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದ ಪ್ರವಾಹ ಕಳೆದು ನಾಲ್ಕು ತಿಂಗಳಾದರೂ ಸಂತ್ರಸ್ತರ ಕಣ್ಣೀರಿನ ಕಥೆ ಮುಗಿಯುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ಇನ್ನಾದರೂ ಎಚ್ಚೆತ್ತುಕೊಂಡು ಖಜಾನೆ ತುಂಬಿದ ಕಥೆ ಹೇಳುವುದನ್ನ ಬಿಟ್ಟು ನೆರವಿಗೆ ನಿಲ್ಲಬೇಕು ಎನ್ನುವುದೇ ಸಂತ್ರಸ್ತರ ಆಗ್ರಹವಾಗಿದೆ.