Tag: vicky jain

  • ಅಂದು ಬೆಡ್ ರೂಮ್, ಇಂದು ಆಸ್ಪತ್ರೆ ಬೆಡ್ ಮೇಲೆ ಸ್ಟಾರ್ ದಂಪತಿ

    ಅಂದು ಬೆಡ್ ರೂಮ್, ಇಂದು ಆಸ್ಪತ್ರೆ ಬೆಡ್ ಮೇಲೆ ಸ್ಟಾರ್ ದಂಪತಿ

    ಬಿಗ್ ಬಾಸ್ ಮಾಜಿ ಸ್ಪರ್ಧಿ, ಸ್ಟಾರ್ ಕಪಲ್ ಎಂದೇ ಖ್ಯಾತರಾಗಿರುವ ಅಂಕಿತಾ ಲೋಖಂಡೆ (Ankita Lokhande) ಮತ್ತು ಪತಿ ವಿಕ್ಕಿ ಜೈನ್ (Vicky Jain) ಆಸ್ಪತ್ರೆಯ (Hospital) ಬೆಡ್ (Bed) ಮೇಲೆ ಮಲಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಂಕಿತಾ ಕೈಗೆ ಏಟಾಗಿದ್ದು, ಅದಕ್ಕೆ ಅವರು ಚಿಕಿತ್ಸೆ ಪಡೆದಿದ್ದಾರೆ. ಆದರೆ, ವಿಕ್ಕಿ ಅವರನ್ನು ಯಾಕೆ ಬೆಡ್ ಮೇಲೆ ಕರೆಯಿಸಿಕೊಂಡಿದ್ದಾರೆ ಎಂದು ಅವರ ಅಭಿಮಾನಿಗಳು ಪ್ರಶ್ನೆ ಕೇಳಿದ್ಧಾರೆ.

    ಈ ಹಿಂದೆ ಇದೇ ಜೋಡಿ ತಮ್ಮ ಅಭಿಮಾನಿಗಳಿಗಾಗಿ ಬೆಡ್ ರೂಮ್ ಫೋಟೋ ಶೇರ್ ಮಾಡಿಕೊಂಡಿದ್ದರು. ಮದುವೆಯಾಗಿ 6 ವರ್ಷ ಪೂರೈಸಿದ ಖುಷಿಯಲ್ಲಿಅಂಕಿತಾ ದಂಪತಿ ಬೆಡ್‌ರೂಮ್ ನಲ್ಲಿ ಇರುವ ಫೋಟೋ ವೊಂದನ್ನು ಹಂಚಿಕೊಂಡಿದ್ದರು.

    ಆಗ ಅಂಕಿತಾ ಮತ್ತು ವಿಕ್ಕಿ ಜೈನ್ (Vicky Jain) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟು 6 ವರ್ಷ ಪೂರೈಸಿತ್ತು. ತಮ್ಮ ಮದುವೆಯ ದಿನವನ್ನು ಕೇಕ್ ಕತ್ತರಿಸಿ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದರು. ಇಬ್ಬರೂ ವೈಟ್ ಡ್ರೆಸ್‌ನಲ್ಲಿ ಮಿಂಚಿದ್ದರು. ಮೊದಲ ರಾತ್ರಿಗೆ ಬೆಡ್ ಸಿಂಗಾರ ಮಾಡುವ ಹಾಗೆಯೇ ಆಗಲೂ ಮಾಡಿದ್ದರು. ಇಬ್ಬರೂ ಖುಷಿಯಿಂದ ಕುಳಿರುವ ಫೋಟೋವನ್ನು ಹಂಚಿಕೊಂಡಿದ್ದರು.

    ಆಗ ಫೋಟೋ ನೋಡ್ತಿದ್ದಂತೆ, ಇದು ಫಸ್ಟ್ ನೈಟ್ ಫೋಟೋನಾ ಎಂದು ಹಲವರು ಕಾಮೆಂಟ್ ಮಾಡಿದ್ದರು. ಇನ್ನೂ ಕೆಲವರು, ನನಗೆ ಕನ್ಫೂಸ್ ಆಗುತ್ತಿದೆ. ನೀವು ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಆಡುತ್ತಿದ್ದೀರಿ. ಈಗ ಹೇಗೆ ಖುಷಿಯಾಗಿದ್ದೀರಾ ಎಂದು ಕಾಲೆಳೆದಿದ್ದರು.

     

    ಈ ವರ್ಷದ ಬಿಗ್ ಬಾಸ್ ಸೀಸನ್ 17ರಲ್ಲಿ ವಿಕ್ಕಿ ಜೈನ್ ಅವರು ಅಂಕಿತಾ ಲೋಖಂಡೆ ಜೊತೆ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದರು. ಮನೆ ಜಗಳ ಬಿಗ್ ಬಾಸ್ ಮನೆಯಲ್ಲೂ ತಾರಕಕ್ಕೇರಿತ್ತು. ಇಬ್ಬರ ಜಗಳ ದೊಡ್ಮನೆಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈಗ ಮುನಿಸು ಮರೆತು ಇಬ್ಬರೂ ಒಂದಾಗಿದ್ದಾರೆ. ಬಿಗ್ ಬಾಸ್ ಶೋ ಮುಗಿದ ಮೇಲೆ ಅಂಕಿತಾ ಬಾಲಿವುಡ್ ಸಿನಿಮಾಗಳಿಗೆ ಭಾರೀ ಆರ‍್ಸ್ ಸಿಗುತ್ತಿದೆ. ವಿಕ್ಕಿ ಜೈನ್‌ಗೆ ರಿಯಾಲಿಟಿ ಶೋಗಳಿಂದ ಅವಕಾಶ ಅರಸಿ ಬರುತ್ತಿದೆ.

  • ಬೆಡ್‌ರೂಮ್ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ಬೆಡಗಿ ಅಂಕಿತಾ ಲೋಖಂಡೆ

    ಬೆಡ್‌ರೂಮ್ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ಬೆಡಗಿ ಅಂಕಿತಾ ಲೋಖಂಡೆ

    ಬಾಲಿವುಡ್ ಬೆಡಗಿ ಅಂಕಿತಾ ಲೋಖಂಡೆ (Ankita Lokhande) ಇದೀಗ ಬಿಗ್ ಬಾಸ್ ಶೋ (Bigg Boss Hindi 17) ಮುಗಿದ ಮೇಲೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಜೋಡಿಯಾಗಿ ದೊಡ್ಮನೆಗೆ ಸ್ಪರ್ಧಿಯಾಗಿ ಹೋಗಿದ್ದ ಅಂಕಿತಾ ಮತ್ತು ವಿಕ್ಕಿ ಜೈನ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಸದ್ಯ ಮದುವೆಯಾಗಿ 6 ವರ್ಷ ಪೂರೈಸಿದ ಖುಷಿಯಲ್ಲಿರುವ ಅಂಕಿತಾ ದಂಪತಿ ಬೆಡ್‌ರೂಮ್ ಫೋಟೋ ಶೇರ್ ಮಾಡಿದ್ದಾರೆ.

    ಅಂಕಿತಾ ಮತ್ತು ವಿಕ್ಕಿ ಜೈನ್ (Vicky Jain) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟು 6 ವರ್ಷ ಪೂರೈಸಿದೆ. ತಮ್ಮ ಮದುವೆಯ ದಿನವನ್ನು ಕೇಕ್ ಕತ್ತರಿಸಿ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಇಬ್ಬರೂ ವೈಟ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಮೊದಲ ರಾತ್ರಿಗೆ ಬೆಡ್ ಸಿಂಗಾರ ಮಾಡುವ ಹಾಗೆಯೇ ಈಗಲೂ ಮಾಡಿದ್ದಾರೆ. ಇಬ್ಬರೂ ಖುಷಿಯಿಂದ ಕುಳಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳು ಲಾಭಕ್ಕಾಗಿ ಮದುವೆಯಾಗ್ತಾರೆ- ನೋರಾ ಫತೇಹಿ ಸ್ಫೋಟಕ ಹೇಳಿಕೆ

    ಈ ಫೋಟೋ ನೋಡ್ತಿದ್ದಂತೆ, ಇದು ಫಸ್ಟ್ ನೈಟ್ ಫೋಟೋನಾ ಎಂದಿದ್ದಾರೆ. ಇನ್ನೂ ಕೆಲವರು, ನನಗೆ ಕನ್ಫೂಸ್ ಆಗುತ್ತಿದೆ. ನೀವು ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಆಡುತ್ತಿದ್ದೀರಿ. ಈಗ ಹೇಗೆ ಖುಷಿಯಾಗಿದ್ದೀರಾ ಎಂದು ಕಾಲೆಳೆದಿದ್ದಾರೆ.

    ಈ ವರ್ಷದ ಬಿಗ್ ಬಾಸ್ ಸೀಸನ್ 17ರಲ್ಲಿ ವಿಕ್ಕಿ ಜೈನ್ ಅವರು ಅಂಕಿತಾ ಲೋಖಂಡೆ ಜೊತೆ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದರು. ಮನೆ ಜಗಳ ಬಿಗ್ ಬಾಸ್ ಮನೆಯಲ್ಲೂ ತಾರಕಕ್ಕೇರಿತ್ತು. ಇಬ್ಬರ ಜಗಳ ದೊಡ್ಮನೆಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈಗ ಮುನಿಸು ಮರೆತು ಇಬ್ಬರೂ ಒಂದಾಗಿದ್ದಾರೆ. ಬಿಗ್ ಬಾಸ್ ಶೋ ಮುಗಿದ ಮೇಲೆ ಅಂಕಿತಾ ಬಾಲಿವುಡ್ ಸಿನಿಮಾಗಳಿಗೆ ಭಾರೀ ಆರ‍್ಸ್ ಸಿಗುತ್ತಿದೆ. ವಿಕ್ಕಿ ಜೈನ್‌ಗೆ ರಿಯಾಲಿಟಿ ಶೋಗಳಿಂದ ಅವಕಾಶ ಅರಸಿ ಬರುತ್ತಿದೆ.

    ವಿಕ್ಕಿ ಜೈನ್ ಈ ಬಾರಿ ಬಿಗ್ ಬಾಸ್ ಒಟಿಟಿ 3 ಸೀಸನ್‌ಗೂ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಒಂದು ವೇಳೆ ವಿಕ್ಕಿ ಜೈನ್ ಬಂದಿದ್ದೆ ಆಗಿದಲ್ಲಿ ಮನರಂಜನೆ ಗ್ಯಾರಂಟಿ.

    ಡಿಜಿಟಲ್ ವರ್ಷನ್ ಬಿಗ್ ಬಾಸ್ ಒಟಿಟಿಗೆ ಸಕಲ ತಯಾರಿ ನಡೆಯುತ್ತಿದೆ. ಮೇ 15ರಂದು ಒಟಿಟಿಯಲ್ಲಿ ಬಿಗ್ ಬಾಸ್ (Bigg Boss) ಕಾರ್ಯಕ್ರಮ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಒಟಿಟಿ ನಿರೂಪಣೆಗೆ ಈ ಬಾರಿಯೂ ಸಲ್ಮಾನ್ ಖಾನ್ (Salman Khan) ಸಾಥ್ ನೀಡುತ್ತಿದ್ದಾರೆ.

    ಅಂದಹಾಗೆ, ಈ ಬಾರಿ ಒಟಿಟಿ ಸೀಸನ್‌ಗೆ ಸೋಷಿಯಲ್ ಮೀಡಿಯಾ ಸ್ಟಾರ್ ಜಾಸ್ಮಿನ್ ಕೌರ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದು ಹೇಳುವ ಮೂಲಕ ರಾತ್ರೋ ರಾತ್ರಿ ಫೇಮಸ್ ಆದವರು ಜಾಸ್ಮಿನ್ ಕೌರ್. ಅವರು ಬಟ್ಟೆಯ ಗುಣಮಟ್ಟವನ್ನು ವಿವರಿಸುವ ರೀತಿಯಿಂದ ಗಮನ ಸೆಳೆದಿದ್ದಾರೆ.

    ಜಾಸ್ಮಿನ್ ಕೌರ್ ಸೇರಿದಂತೆ ಅನೇಕ ರೀಲ್ಸ್ ಸ್ಟಾರ್‌ಗಳ ಹೆಸರು ಸದ್ದು ಮಾಡುತ್ತಿದೆ. ಆದರೆ ಬಿಗ್ ಬಾಸ್ ಒಟಿಟಿ ತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಜಾಸ್ಮಿನ್ ಒಟಿಟಿಗೆ ಶೋ ಬರುತ್ತಾರಾ? ಕಾದುನೋಡಬೇಕಿದೆ.

  • Bigg Boss OTT 3: ದೊಡ್ಮನೆಗೆ ವಿಕ್ಕಿ ಜೈನ್

    Bigg Boss OTT 3: ದೊಡ್ಮನೆಗೆ ವಿಕ್ಕಿ ಜೈನ್

    ‘ಬಿಗ್ ಬಾಸ್’ ಹಿಂದಿ ಸೀಸನ್ 17 (Bigg Boss Hindi 17)  ಮುಗಿಯುತ್ತಿದ್ದಂತೆ ಬಿಗ್ ಬಾಸ್ ಒಟಿಟಿಗೆ ವೇದಿಕೆ ಸಜ್ಜಾಗಿದೆ. ಈಗಾಗಲೇ ಜಾಸ್ಮಿನ್ ಕೌರ್ ಸೇರಿದಂತೆ ಅನೇಕ ಸೋಷಿಯಲ್ ಮೀಡಿಯಾ ಸ್ಟಾರ್‌ಗಳ ಹೆಸರು ಚಾಲ್ತಿಯಲ್ಲಿದೆ. ಇದರ ನಡುವೆ ನಟಿ ಅಂಕಿತಾ ಲೋಖಂಡೆ (Ankita Lokhande) ಪತಿ ವಿಕ್ಕಿ ಜೈನ್ ಬಿಗ್ ಬಾಸ್ ಒಟಿಟಿ 3 (Bigg Boss Ott 3) ಎಂಟ್ರಿ ಕೊಡಲಿದ್ದಾರೆ.

    ಈ ವರ್ಷದ ಬಿಗ್ ಬಾಸ್ ಸೀಸನ್ 17ರಲ್ಲಿ ವಿಕ್ಕಿ ಜೈನ್ (Vicky Jain) ಅವರು ಅಂಕಿತಾ ಲೋಖಂಡೆ ಜೊತೆ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದರು. ಮನೆ ಜಗಳ ಬಿಗ್ ಬಾಸ್ ಮನೆಯಲ್ಲೂ ತಾರಕಕ್ಕೇರಿತ್ತು. ಇಬ್ಬರ ಜಗಳ ದೊಡ್ಮನೆಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈಗ ಮುನಿಸು ಮರೆತು ಇಬ್ಬರೂ ಒಂದಾಗಿದ್ದಾರೆ.

    ವಿಕ್ಕಿ ಜೈನ್ ಈ ಬಾರಿ ಬಿಗ್ ಬಾಸ್ ಒಟಿಟಿ 3 ಸೀಸನ್‌ಗೂ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಒಂದು ವೇಳೆ ವಿಕ್ಕಿ ಜೈನ್ ಬಂದಿದ್ದೆ ಆಗಿದಲ್ಲಿ ಮನರಂಜನೆ ಗ್ಯಾರಂಟಿ. ಈ ಬಗ್ಗೆ ವಿಕ್ಕಿ ಕಡೆಯಿಂದಾಗಲಿ ಅಥವಾ ವಾಹಿನಿ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

    ಡಿಜಿಟಲ್ ವರ್ಷನ್ ಬಿಗ್ ಬಾಸ್ ಒಟಿಟಿಗೆ ಸಕಲ ತಯಾರಿ ನಡೆಯುತ್ತಿದೆ. ಮೇ 15ರಂದು ಒಟಿಟಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಒಟಿಟಿ ನಿರೂಪಣೆಗೆ ಈ ಬಾರಿಯೂ ಸಲ್ಮಾನ್ ಖಾನ್ ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಮೇಲೆ ಮೊಟ್ಟೆ ಎಸೆತ

    ಅಂದಹಾಗೆ, ಈ ಬಾರಿ ಒಟಿಟಿ ಸೀಸನ್‌ಗೆ ಸೋಷಿಯಲ್ ಮೀಡಿಯಾ ಸ್ಟಾರ್ ಜಾಸ್ಮಿನ್ ಕೌರ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದು ಹೇಳುವ ಮೂಲಕ ರಾತ್ರೋ ರಾತ್ರಿ ಫೇಮಸ್ ಆದವರು ಜಾಸ್ಮಿನ್ ಕೌರ್. ಅವರು ಬಟ್ಟೆಯ ಗುಣಮಟ್ಟವನ್ನು ವಿವರಿಸುವ ರೀತಿಯಿಂದ ಗಮನ ಸೆಳೆದಿದ್ದಾರೆ.

    ಜಾಸ್ಮಿನ್ ಕೌರ್ ಸೇರಿದಂತೆ ಅನೇಕ ರೀಲ್ಸ್ ಸ್ಟಾರ್‌ಗಳ ಹೆಸರು ಸದ್ದು ಮಾಡುತ್ತಿದೆ. ಆದರೆ ಬಿಗ್ ಬಾಸ್ ಒಟಿಟಿ ತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಜಾಸ್ಮಿನ್ ಒಟಿಟಿಗೆ ಶೋ ಬರುತ್ತಾರಾ? ಕಾದುನೋಡಬೇಕಿದೆ.

  • Bigg Boss: ಮುನಿಸು ಮರೆತು ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ಅಂಕಿತಾ ದಂಪತಿ

    Bigg Boss: ಮುನಿಸು ಮರೆತು ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ಅಂಕಿತಾ ದಂಪತಿ

    ‘ಬಿಗ್ ಬಾಸ್ ಹಿಂದಿ ಸೀಸನ್ 17’ರ ಅಂಕಿತಾ- ವಿಕ್ಕಿ ಜೈನ್ ಜೋಡಿ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಕಿತ್ತಾಡಿಕೊಂಡು ಹೈಲೆಟ್ ಆಗಿದ್ದರು. ಇದೀಗ ಮುನಿಸು ಮರೆತು ಅಂಕಿತಾ- ವಿಕ್ಕಿ ಜೈನ್ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ್ದಾರೆ. ಈ ಜೋಡಿಯ ರೊಮ್ಯಾಂಟಿಕ್‌ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅಮೃತಧಾರೆ ಸೀರಿಯಲ್‌ಗೆ ‘ಕಾಂತಾರ’ ನಟಿ ಎಂಟ್ರಿ

    ವ್ಯಾಲೆಂಟೈನ್‌ ವೀಕ್‌ನಲ್ಲಿ ಅಂಕಿತಾ ಲೋಖಂಡೆ (Ankita Lokhande) ಮತ್ತು ವಿಕ್ಕಿ ಜೈನ್ (Vicky Jain) ಕಲರ್‌ಫುಲ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಹೇಗಿದೆ ಅಂದರೆ ಬಿಗ್ ಬಾಸ್ ಮನೆಯಲ್ಲಿ ಕಿತ್ತಾಡಿಕೊಂಡಿದ್ದ ಜೋಡಿ ಇವರೇನಾ ಎಂದು ಡೌಂಟ್ ಬರುವಷ್ಟು ಲವ್ಲಿ ಆಗಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

    ಕೆಂಪು ಬಣ್ಣದ ಸೀರೆಯಲ್ಲಿ ಅಂಕಿತಾ ಮಿಂಚಿದ್ರೆ, ವಿಕ್ಕಿ ಕಪ್ಪು ಬಣ್ಣದ ಉಡುಗೆಯಲ್ಲಿ ಹೈಲೆಟ್‌ ಆಗಿದ್ದಾರೆ. ಕ್ಯಾಮೆರಾಗೆ ಇಬ್ಬರು ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ. ಜೋಡಿಯ ಫೋಟೋ ನೋಡಿ ನೆಟ್ಟಿಗರು, ನೀವು ಬಿಗ್ ಬಾಸ್‌ನಲ್ಲಿ ಜಗಳ ಆಡಿದ್ದು ಡ್ರಾಮಾನಾ? ಎಂದು ಕಾಲೆಳೆದಿದ್ದಾರೆ.

    ಹಿಂದಿ ಬಿಗ್ ಬಾಸ್‌ನಲ್ಲಿ ಅಂಕಿತಾ ಮತ್ತು ವಿಕ್ಕಿ ಜೋಡಿ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಆಡಿದ್ದರು. ಇಬ್ಬರ ಜಗಳ ಅದೆಷ್ಟರ ಮಟ್ಟಿಗೆ ಹೋಗಿತ್ತು ಅಂದರೆ, ಪತಿಗೆ ಅಂಕಿತಾ ಚಪ್ಪಲಿ ತೋರಿಸುವ ಹಂತಕ್ಕೆ ಮುಟ್ಟಿತ್ತು. ಇದಾದ ಕೆಲವು ದಿನಗಳ ನಂತರ ಫ್ಯಾಮಿಲಿ ರೌಂಡ್‌ನಲ್ಲಿ ವಿಕ್ಕಿ ತಾಯಿ ಎಂಟ್ರಿ ಕೊಟ್ಟಿದ್ದರು. ಸೊಸೆ ಅಂಕಿತಾ ಯಾವುದಕ್ಕೂ ಅಡ್ಜಸ್ಟ್ ಆಗಲ್ಲ. ಮನೆಯಲ್ಲೂ ಕೂಡ ವಿಕ್ಕಿ ಪರ ವಹಿಸೋದಿಲ್ಲ ಎಂದೆಲ್ಲಾ ಕುಟುಕಿದ್ದರು.

    ದೊಡ್ಮನೆಯಲ್ಲಿದ್ದಾಗ ಇಬ್ಬರ ಜಗಳ ಡಿವೋರ್ಸ್ ಹಂತದವರೆಗೂ ಹೋಗಿತ್ತು. ಆದರೆ ಶೋ ಮುಗಿದ ಮೇಲೆ ಎಲ್ಲವೂ ಬದಲಾಗಿದೆ. ಮುನಿಸು ಮರೆತು ಈ ಜೋಡಿ ಒಂದಾಗಿದ್ದಾರೆ. ಡಿವೋರ್ಸ್ ಬಗ್ಗೆ ಅಂದು ಹಾಗೆಲ್ಲಾ ಮಾತನಾಡಬಾರದಿತ್ತು ಎಂದು ಅಂಕಿತಾ ಪ್ರತಿಕ್ರಿಯೆ ನೀಡಿದ್ದರು.

  • ಡಿವೋರ್ಸ್ ಬಗ್ಗೆ ಪ್ರಬುದ್ಧತೆಯಿಂದ ಮಾತನಾಡಬೇಕಿತ್ತು: ನಟಿ ಅಂಕಿತಾ ವಿಷಾದ

    ಡಿವೋರ್ಸ್ ಬಗ್ಗೆ ಪ್ರಬುದ್ಧತೆಯಿಂದ ಮಾತನಾಡಬೇಕಿತ್ತು: ನಟಿ ಅಂಕಿತಾ ವಿಷಾದ

    ಬಿಗ್ ಬಾಸ್ ಮನೆಗೆ ಪತಿಯ ಜೊತೆ ತೆರಳಿದ್ದ ನಟಿ ಅಂಕಿತಾ ಲೋಖಂಡೆ, ಪದೇ ಪದೇ ಡಿವೋರ್ಸ್ ಬಗ್ಗೆ ಮಾತನಾಡಿದ್ದರು. ಪತಿಯ ಜೊತೆಯಲ್ಲೇ ಕೂತು, ಬ್ರೇಕ್ ಅಪ್ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಮನೆಯಿಂದ ಆಚೆ ಬರುತ್ತಿದ್ದಂತೆಯೇ ಆ ಮಾತಿಗೆ ವಿಷಾದ ವ್ಯಕ್ತ ಪಡಿಸಿದ್ದಾರೆ. ನಾನು ಆ ರೀತಿಯಲ್ಲಿ ಮಾತನಾಡಬಾರದಿತ್ತು. ಪ್ರಬುದ್ಧತೆಯ ಕೊರತೆಯಿಂದಾಗಿ ನಾನು ಹಾಗೆ ಮಾತನಾಡಿದೆ. ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದಿದ್ದಾರೆ ನಟಿ ಅಂಕಿತಾ.

    ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸುದ್ದಿ ಆಗಿದ್ದರು ಅಂಕಿತಾ ಲೋಖಂಡೆ (Ankita Lokhande) ಹಾಗೂ ವಿಕ್ಕಿ ದಂಪತಿ. ತನ್ನ ಪತಿ ಬಿಗ್ ಬಾಸ್ ಸ್ಪರ್ಧಿ ಮನ್ನಾರಾ ಚೋಪ್ರಾ ಜೊತೆ ಕ್ಲೋಸ್ ಆಗುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಪತಿ ವಿಕ್ಕಿ ಮೇಲೆ ಕೋಪಗೊಂಡಿದ್ದರು. ಆತನನ್ನು ಮದುವೆ ಆಗಿದ್ದಕ್ಕೆ ಕಣ್ಣೀರು ಇಟ್ಟಿದ್ದರು. ಜೊತೆಗೆ ವಿಷಾದವನ್ನೂ ವ್ಯಕ್ತ ಪಡಿಸಿದ್ದರು. ಆಕೆ ನಿನ್ನ ಜೀವನದಲ್ಲಿ ಬಂದಳು. ನೀನು ಇಷ್ಟ ಪಡ್ತಿದ್ದೀಯಾ ಎಂದು ಮಾತನಾಡಿದ್ದರು.

    ಬಿಗ್ ಬಾಸ್ (Bigg Boss) ಮನೆಯಲ್ಲಿ ವಿಕ್ಕಿ ಮತ್ತು ಅಂಕಿತಾ ನಡೆಯನ್ನೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡು ಈ ಜೋಡಿ ಮಲಗಿತ್ತು. ಅದು ರಾತ್ರಿ ವೇಳೆ ಸುಮ್ಮನೆ ಮಲಗಿಲ್ಲ, ಬ್ಲ್ಯಾಂಕೆಟ್ ಒಳಗೆ ಚಲಿಸಿದ್ದರು. ಬ್ಲ್ಯಾಂಕೆಟ್ ಅಸ್ತವ್ಯಸ್ತಗೊಂಡಿತ್ತು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.

    ಇದೇ ಜೋಡಿ ಬಿಗ್ ಬಾಸ್ ಮನೆಯಲ್ಲಿ  ಡಿವೋರ್ಸ್ (Divorce) ಕುರಿತಂತೆ ಮಾತನಾಡಿದ್ದರು. ಈ ನಡೆಯೂ ಅಚ್ಚರಿಗೆ ಕಾರಣವಾಗಿತ್ತು.  ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಿದ್ದರು. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಿದ್ದರು. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದರು. ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದರು.

     

    ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದರು. ಅಲ್ಲಿಯೂ ಕಿತ್ತಾಡಿಕೊಂಡಿದ್ದರು. ವಿಚ್ಛೇದನ ಪಡೆದುಕೊಳ್ಳೋಣ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು ಅಂಕಿತಾ. ಈಗ ಎಲ್ಲದಕ್ಕೂ ವಿಷಾದ ವ್ಯಕ್ತ ಪಡಿಸಿದ್ದಾರೆ. ಜೊತೆಯಾಗಿ ಬಾಳುವ ಪ್ರಾಮೀಸ್ ಮಾಡಿದ್ದಾರೆ.

  • ಬಿಗ್ ಬಾಸ್ ಮನೆಯಿಂದ ಪತಿ ಔಟ್: ಬಿಕ್ಕಿ ಬಿಕ್ಕಿ ಅತ್ತ ನಟಿ ಅಂಕಿತಾ

    ಬಿಗ್ ಬಾಸ್ ಮನೆಯಿಂದ ಪತಿ ಔಟ್: ಬಿಕ್ಕಿ ಬಿಕ್ಕಿ ಅತ್ತ ನಟಿ ಅಂಕಿತಾ

    ನಾನಾ ಕಾರಣಗಳಿಂದಾಗಿ ಹಿಂದಿ ಬಿಗ್ ಬಾಸ್ (Bigg Boss Hindi) ಸಾಕಷ್ಟು ಕುತೂಹಲ ಮೂಡಿಸಿತ್ತು. ಅಷ್ಟೇ ಅಲ್ಲದೇ ಸಾಕಷ್ಟು ಚರ್ಚೆಗಳನ್ನೂ ಅದು ಹುಟ್ಟು ಹಾಕಿತ್ತು. ಅದರಲ್ಲೂ ನಟ ವಿಕ್ಕಿ ಜೈನ್ (Vicky Jain), ತನ್ನ ಪತ್ನಿ ಹಾಗೂ ನಟಿ ಅಂಕಿತಾ ಲೋಖಂಡೆ ಜೊತೆ ಬಿಗ್ ಬಾಸ್ ಮನೆಗೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದರು. ಈಗ ಬಿಗ್ ಬಾಸ್ ವಿಕ್ಕಿಗೆ ಬಿಗ್ ಶಾಕ್ ನೀಡಿದ್ದಾರೆ.

    ಹೌದು, ಹಿಂದಿ ಬಾಲಿವುಡ್ ಕೂಡ ಫಿನಾಲೆ ಹಂತ ತಲುಪಿದೆ. ನೂರು ದಿನಗಳು ಕಳೆದಿವೆ. ಅಂಕಿತಾ ಮತ್ತು ವಿಕ್ಕಿ ಇಬ್ಬರೂ ಫಿನಾಲೆ ವೇದಿಕೆಯ ಮೇಲೆ ಇರಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಕೋರಿಕೆ ಆಗಿತ್ತು. ಆದರೆ, ಬಿಗ್ ಬಾಸ್ ಆ ಕೋರಿಯನ್ನು ಈಡೇರಿಸಿಲ್ಲ. ಮಿಡ್ ವೀಕ್ ಎಲಿಮಿನೇಷನ್ (Eliminate) ನಡೆಸಿ ವಿಕ್ಕಿಯನ್ನು ಹೊರಗೆ ಕಳುಹಿಸಲಾಗಿದೆ. ಪತಿ ಬಿಗ್ ಬಾಸ್ ಮನೆಯನ್ನು ಬಿಟ್ಟು ಹೋಗುವುದನ್ನು ನೋಡಿ ಅಂಕಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಮದುವೆ ಬಗ್ಗೆ ವಿಷಾದ

    ಅಂಕಿತಾ ಲೋಖಂಡೆ (Ankita Lokhande) ಹಾಗೂ ವಿಕ್ಕಿ ದಂಪತಿ ವಿಚಿತ್ರ ಮನಸ್ಥಿತಿಯ ಕಾರಣದಿಂದಾಗಿ ಹೆಚ್ಚು ಸುದ್ದಿ ಆದವರು. ಈ ಹಿಂದೆ ತನ್ನ ಪತಿ ಬಿಗ್ ಬಾಸ್ ಸ್ಪರ್ಧಿ ಮನ್ನಾರಾ ಚೋಪ್ರಾ ಜೊತೆ ಕ್ಲೋಸ್ ಆಗುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಪತಿ ವಿಕ್ಕಿ ಮೇಲೆ ಕೋಪಗೊಂಡಿದ್ದರು. ಆತನನ್ನು ಮದುವೆ ಆಗಿದ್ದಕ್ಕೆ ಕಣ್ಣೀರು ಇಟ್ಟಿದ್ದರು. ಜೊತೆಗೆ ವಿಷಾದವನ್ನೂ ವ್ಯಕ್ತ ಪಡಿಸಿದ್ದರು. ಆಕೆ ನಿನ್ನ ಜೀವನದಲ್ಲಿ ಬಂದಳು. ನೀನು ಇಷ್ಟ ಪಡ್ತಿದ್ದೀಯಾ ಎಂದು ಮಾತನಾಡಿ ಪತಿಗೆ ಶಾಕ್ ನೀಡಿದ್ದರು.

    ಬಿಗ್ ಬಾಸ್ (Bigg Boss) ಮನೆಯಲ್ಲಿ ವಿಕ್ಕಿ ಮತ್ತು ಅಂಕಿತಾ ನಡೆಯನ್ನೇ ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡು ಈ ಜೋಡಿ ಮಲಗಿತ್ತು. ಅದು ರಾತ್ರಿ ವೇಳೆ ಸುಮ್ಮನೆ ಮಲಗಿಲ್ಲ, ಬ್ಲ್ಯಾಂಕೆಟ್ ಒಳಗೆ ಚಲಿಸಿದ್ದರು. ಬ್ಲ್ಯಾಂಕೆಟ್ ಅಸ್ತವ್ಯಸ್ತಗೊಂಡಿತ್ತು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.

     

    ಇದೇ ಜೋಡಿ ಕೆಲವು ದಿನಗಳ ಹಿಂದೆ ಇದೇ ಬಿಗ್ ಬಾಸ್ ಮನೆಯಲ್ಲಿ  ಡಿವೋರ್ಸ್ (Divorce) ಕುರಿತಂತೆ ಮಾತನಾಡಿದ್ದರು. ಈ ನಡೆಯೂ ಅಚ್ಚರಿಗೆ ಕಾರಣವಾಗಿತ್ತು.  ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಾರೆ. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಾರೆ. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದರು. ಈಗ ಎಲಿಮಿನೇಷನ್ ಕಾರಣದಿಂದಾಗಿ ಗಂಡ ಹೆಂಡತಿ ದೂರವಾಗಿದ್ದಾರೆ. ಪತಿ ಮನೆಗೆ ಹೋಗಿದ್ದರೆ, ಅಂಕಿತಾ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ.

  • ಬಿಗ್ ಬಾಸ್ ಅಖಾಡಕ್ಕೆ ಕಂಗನಾ: ಮದುವೆ ಮುರಿಯಲ್ಲ ಎಂದ ನಟಿ

    ಬಿಗ್ ಬಾಸ್ ಅಖಾಡಕ್ಕೆ ಕಂಗನಾ: ಮದುವೆ ಮುರಿಯಲ್ಲ ಎಂದ ನಟಿ

    ಬಾಲಿವುಡ್ ಕ್ವೀನ್ ಕಂಗನಾ ರಣಾವತ್ (Kangana Ranaut) ಬಿಗ್ ಬಾಸ್ ಅಖಾಡಕ್ಕೆ ಇಳಿದಿದ್ದಾರೆ. ಹಿಂದಿ ಬಿಗ್ ಬಾಸ್ ಅನ್ನು ವೀಕ್ಷಿಸುತ್ತಿರುವ ಕಂಗನಾ, ಬಿಗ್ ಬಾಸ್ ಸ್ಪರ್ಧಿ ಅಂಕಿತಾ ಲೋಖಂಡೆ ಪರ ಬ್ಯಾಟಿಂಗ್ ಬೀಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಟಿ ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ (Vicky Jain) ದಂಪತಿ ಇದ್ದಾರೆ. ಟಾಸ್ಕ್ ವಿಚಾರವಾಗಿ ಗಂಡ ಹೆಂಡತಿ ಮಧ್ಯಯೇ ಸಾಕಷ್ಟು ಕಿತ್ತಾಟ ನಡೆದಿದೆ. ಡಿವೋರ್ಸ್ ವಿಚಾರವೂ ಪ್ರಸ್ತಾಪವಾಗಿದೆ. ಸಹಜವಾಗಿಯೇ ಅವರ ಕುಟುಂಬ ಆತಂಕದಲ್ಲಿದೆ.

    ಈ ಕುರಿತಾಗಿ ಅಂಕಿತಾ ಅತ್ತೆಗೆ ಧೈರ್ಯ ತುಂಬಿರುವ ಕಂಗನಾ, ಯಾವುದೇ ಕಾರಣಕ್ಕೂ ಇಬ್ಬರನ್ನೂ ದೂರವಾಗುವುದಕ್ಕೆ ಬಿಡೋದಿಲ್ಲ. ಬಿಗ್ ಬಾಸ್ ಅದೊಂದು ಗೇಮ್ ಅಷ್ಟೇ. ಮನೆ ಮುರಿಯುವಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಕಂಗನಾ ಹೇಳಿದ್ದಾರೆ. ಈ ಬಾರಿ ಬಿಗ್ ಬಾಸ್ ಟ್ರೋಫಿ ಅಂಕಿತಾಗೆ ಬರಬೇಕು ಎಂದು ಹಾರೈಸಿದ್ದಾರೆ.

    ಅಂಕಿತಾ ದಂಪತಿ ಹೈ ಡ್ರಾಮಾ

    ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮತ್ತೆ ಸುದ್ದಿ ಆಗುತ್ತಿದ್ದಾರೆ ಅಂಕಿತಾ ಲೋಖಂಡೆ (Ankita Lokhande) ಹಾಗೂ ವಿಕ್ಕಿ ದಂಪತಿ. ತನ್ನ ಪತಿ ಬಿಗ್ ಬಾಸ್ ಸ್ಪರ್ಧಿ ಮನ್ನಾರಾ ಚೋಪ್ರಾ ಜೊತೆ ಕ್ಲೋಸ್ ಆಗುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಪತಿ ವಿಕ್ಕಿ ಮೇಲೆ ಕೋಪಗೊಂಡಿದ್ದಾರೆ. ಆತನನ್ನು ಮದುವೆ ಆಗಿದ್ದಕ್ಕೆ ಕಣ್ಣೀರು ಇಟ್ಟಿದ್ದಾರೆ. ಜೊತೆಗೆ ವಿಷಾದವನ್ನೂ ವ್ಯಕ್ತ ಪಡಿಸಿದ್ದಾರೆ. ಆಕೆ ನಿನ್ನ ಜೀವನದಲ್ಲಿ ಬಂದಳು. ನೀನು ಇಷ್ಟ ಪಡ್ತಿದ್ದೀಯಾ ಎಂದು ಮಾತನಾಡಿದ್ದಾರೆ.

    ಬಿಗ್ ಬಾಸ್ (Bigg Boss) ಮನೆಯಲ್ಲಿ ವಿಕ್ಕಿ ಮತ್ತು ಅಂಕಿತಾ ನಡೆಯನ್ನೇ ಅರ್ಥ ಮಾಡಿಕೊಳ್ಳಲು ಆಗುತ್ತಿದೆ. ಮೊನ್ನೆಯಷ್ಟೇ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡು ಈ ಜೋಡಿ ಮಲಗಿತ್ತು. ಅದು ರಾತ್ರಿ ವೇಳೆ ಸುಮ್ಮನೆ ಮಲಗಿಲ್ಲ, ಬ್ಲ್ಯಾಂಕೆಟ್ ಒಳಗೆ ಚಲಿಸಿದ್ದರು. ಬ್ಲ್ಯಾಂಕೆಟ್ ಅಸ್ತವ್ಯಸ್ತಗೊಂಡಿತ್ತು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.

    ಇದೇ ಜೋಡಿ ಕೆಲವು ದಿನಗಳ ಹಿಂದೆ ಇದೇ ಬಿಗ್ ಬಾಸ್ ಮನೆಯಲ್ಲಿ  ಡಿವೋರ್ಸ್ (Divorce) ಕುರಿತಂತೆ ಮಾತನಾಡಿದ್ದರು. ಈ ನಡೆಯೂ ಅಚ್ಚರಿಗೆ ಕಾರಣವಾಗಿತ್ತು.  ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಾರೆ. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಾರೆ. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದರು.

     

    ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಈಗ ಅಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಮೊನ್ನೆಯ ಸಂಚಿಕೆಯಲ್ಲಿ ವಿಕ್ಕಿ ಜೈನ್ ವಿವಾಹಿತರ ಕಷ್ಟಗಳ ಬಗ್ಗೆ ಮಾತಾಡುತ್ತಾರೆ. ಅಷ್ಟೊಂದು ಕಷ್ಟವಾದರೆ, ವಿಚ್ಛೇದನ ಪಡೆದುಕೊಳ್ಳೋಣ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ ಅಂಕಿತಾ. ಈಗ ಮತ್ತೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

  • ಬಿಗ್ ಬಾಸ್ ಮನೆಯಲ್ಲಿ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡ ಕಂಟೆಸ್ಟೆಂಟ್: ವಿಡಿಯೋ ವೈರಲ್

    ಬಿಗ್ ಬಾಸ್ ಮನೆಯಲ್ಲಿ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡ ಕಂಟೆಸ್ಟೆಂಟ್: ವಿಡಿಯೋ ವೈರಲ್

    ಬಿಗ್ ಬಾಸ್ (Bigg Boss) ಮನೆಯಲ್ಲಿ ಏನೆಲ್ಲ ಆಗುತ್ತವೆ. ಆದರೆ, ಇದೇ ಮೊದಲ ಬಾರಿಗೆ ಜೋಡಿಯೊಂದು ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡು ಮಲಗಿದ್ದಾರೆ. ಅದು ರಾತ್ರಿ ವೇಳೆ ಸುಮ್ಮನೆ ಮಲಗಿಲ್ಲ, ಬ್ಲ್ಯಾಂಕೆಟ್ ಒಳಗೆ ಚಲಿಸಿದ್ದಾರೆ. ಬ್ಲ್ಯಾಂಕೆಟ್ ಅಸ್ತವ್ಯಸ್ತಗೊಂಡಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಗ್ ಬಾಸ್ ಕುರಿತಂತೆ ಹಲವು ರೀತಿಯ ಚರ್ಚೆಗೂ ಕಾರಣವಾಗಿದೆ.

    ಅಷ್ಟಕ್ಕೂ ಒಂದೇ ಬ್ಲ್ಯಾಂಕೆಟ್ ಅಡಿಯಲ್ಲಿ ಮಲಗಿದ್ದು ಬೇರೆ ಯಾರೂ ಅಲ್ಲ. ವಿಕ್ಕಿ ಜೈನ್ (Vicky Jain) ಮತ್ತು ಅಂಕಿತಾ ಲೋಖಂಡೆ (Ankita Lokhande) ದಂಪತಿ. ಬಿಗ್ ಬಾಸ್ ಮನೆಗೆ ಇವರು ಸ್ಪರ್ಧಿಗಳು. ಆದರೆ, ಗಂಡ ಹೆಂಡತಿ ರೀತಿಯಲ್ಲಿ ನಡೆದುಕೊಂಡಿದ್ದಕ್ಕೆ ನಾನಾ ರೀತಿಯ ಕಮೆಂಟ್ ಗಳು ಹರಿದಾಡುತ್ತಿವೆ. ಜೊತೆಗೆ ಅವರ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದಾರೆ.

    ಇದೇ ಜೋಡಿ ಕೆಲವು ದಿನಗಳ ಹಿಂದೆ ಇದೇ ಬಿಗ್ ಬಾಸ್ ಮನೆಯಲ್ಲಿ  ಡಿವೋರ್ಸ್ (Divorce) ಕುರಿತಂತೆ ಮಾತನಾಡಿದ್ದರು. ಈ ನಡೆಯೂ ಅಚ್ಚರಿಗೆ ಕಾರಣವಾಗಿತ್ತು.  ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಾರೆ. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಾರೆ. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದಾರೆ.

    ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಈಗ ಅಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಮೊನ್ನೆಯ ಸಂಚಿಕೆಯಲ್ಲಿ ವಿಕ್ಕಿ ಜೈನ್ ವಿವಾಹಿತರ ಕಷ್ಟಗಳ ಬಗ್ಗೆ ಮಾತಾಡುತ್ತಾರೆ. ಅಷ್ಟೊಂದು ಕಷ್ಟವಾದರೆ, ವಿಚ್ಛೇದನ ಪಡೆದುಕೊಳ್ಳೋಣ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ ಅಂಕಿತಾ. ಆದರೆ, ಇವತ್ತು ಒಂದೇ ಬ್ಲ್ಯಾಂಕೆಟ್ ಅಡಿಯಲ್ಲಿ ಮಲಗಿ ಮತ್ತೊಂದು ಶಾಕ್ ನೀಡಿದ್ದಾರೆ. ಅದಕ್ಕೆ ಹೇಳೋದು ಗಂಡ ಹೆಂಡತಿ ಜಗಳ ಉಂಡು ಮಲಗೋತನಕ ಅಂತ.

  • ಗಂಡ ಹೆಂಡತಿ ಬಿಗ್ ಬಾಸ್ ಮನೆಯಲ್ಲೇ ಡಿವೋರ್ಸ್

    ಗಂಡ ಹೆಂಡತಿ ಬಿಗ್ ಬಾಸ್ ಮನೆಯಲ್ಲೇ ಡಿವೋರ್ಸ್

    ಬಿಗ್ ಬಾಸ್ (Bigg Boss) ಮನೆಯಲ್ಲಿ ಏನೆಲ್ಲ ನಡೆಯುತ್ತವೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಗಂಡ ಹೆಂಡತಿ ಡಿವೋರ್ಸ್ (Divorce) ಬಗ್ಗೆ ಮಾತನಾಡಿದ ಘಟನೆ ನಡೆದಿದೆ. ಹಿಂದಿ ಬಿಗ್ ಬಾಸ್ ಮನೆಯಲ್ಲಿ ಕಿರುತೆರೆ ತಾರಾ ದಂಪತಿಯಾದ ವಿಕ್ಕಿ ಜೈನ್ ಮತ್ತು ಅಂಕಿತಾ ಲೋಖಂಡೆ  (Ankita Lokhande)ಇದ್ದಾರೆ. ಅವರೇ ಇದೀಗ ಡಿವೋರ್ಸ್ ಕುರಿತು ಮಾತನಾಡಿದ್ದಾರೆ.

    ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಾರೆ. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಾರೆ. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಇದೀಗ ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದಾರೆ.

     

    ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಈಗ ಅಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಮೊನ್ನೆಯ ಸಂಚಿಕೆಯಲ್ಲಿ ವಿಕ್ಕಿ ಜೈನ್ ವಿವಾಹಿತರ ಕಷ್ಟಗಳ ಬಗ್ಗೆ ಮಾತಾಡುತ್ತಾರೆ. ಅಷ್ಟೊಂದು ಕಷ್ಟವಾದರೆ, ವಿಚ್ಛೇದನ ಪಡೆದುಕೊಳ್ಳೋಣ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ ಅಂಕಿತಾ.

  • ಬಿಗ್ ಬಾಸ್ ಸ್ಪರ್ಧಿಯ ಪ್ರೆಗ್ನೆನ್ಸಿ ರಿಸಲ್ಟ್ ನೆಗೆಟಿವ್: ನಿರಾಸೆ ಎಂದ ಅಂಕಿತಾ

    ಬಿಗ್ ಬಾಸ್ ಸ್ಪರ್ಧಿಯ ಪ್ರೆಗ್ನೆನ್ಸಿ ರಿಸಲ್ಟ್ ನೆಗೆಟಿವ್: ನಿರಾಸೆ ಎಂದ ಅಂಕಿತಾ

    ಮಗೆ ಪಿರಿಯಡ್ಸ್ ಆಗಿಲ್ಲ, ಗರ್ಭಿಣಿಯೇ (Pregnant) ಎಂದು ತಿಳಿದುಕೊಳ್ಳುವುದಕ್ಕಾಗಿ ರಕ್ತ ಪರೀಕ್ಷೆ ಮಾಡಿಸಿದ್ದೇನೆ. ನಾನು ಪ್ರಗ್ನೆಂಟ್ ಆಗಿದ್ದೇನೆ ದಯವಿಟ್ಟು ಮನೆಯಿಂದ ನನ್ನ ಆಚೆ ಕಳುಹಿಸಿ ಎಂದು ಹಿಂದಿ ಬಿಗ್ ಬಾಸ್  (Bigg Boss) ಸ್ಪರ್ಧಿ, ನಟಿ ಅಂಕಿತಾ ಲೋಖಂಡೆ (Ankita Lokhande) ಹೇಳಿಕೊಂಡಿದ್ದರು. ಅಂಕಿತಾ ಹೇಳಿಕೆ ಭಾರೀ ಚರ್ಚೆ ಹುಟ್ಟು ಹಾಕಿತ್ತು.

    ಅಂಕಿತಾ ಲೋಖಂಡೆ ಕೋರಿಕೆಯಂತೆ ಬಿಗ್ ಬಾಸ್ ಟೀಮ್ ಪ್ರೆಗ್ನೆಸಿ ಟೆಸ್ಟ್ ಮಾಡಿಸಿತ್ತು. ಇದೀಗ ಟೆಸ್ಟ್ ರಿಸೆಲ್ಟ್ ಬಂದಿದ್ದು, ನೆಗೆಟಿವ್ ರಿಸೆಲ್ಟ್ ಬಂದಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಅಂಕಿತಾ ಇನ್ನಷ್ಟು ದಿನ ಅದೇ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ.

    ಸದ್ಯ ಪ್ರಸಾರವಾಗುತ್ತಿರುವ ಸೀಸನ್ ನಲ್ಲಿ ನಟಿ ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್  (Vicky Jain)ಇಬ್ಬರೂ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ. ಮನೆಗೆ ಹೋಗುವ ಮುನ್ನವೇ ಅಂಕಿತಾ ಗರ್ಭಿಣಿಯಾಗಿದ್ದು, ಆ ಕುರಿತು ಅವರಿಗೆ ಮಾಹಿತಿ ಇರಲಿಲ್ಲ ಎಂದು ಹೇಳಲಾಗಿತ್ತು. ಮತ್ತು ತಮ್ಮನ್ನು ಹೊರಗೆ ಕಳುಹಿಸುವಂತೆ ಅವರು ಕೇಳಿಕೊಂಡಿದ್ದರು.

    ಹಿಂದಿ ಬಿಗ್ ಬಾಸ್ ಶೋನಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ಬಾರಿ ಮದುವೆಯಾದ ಎರಡು ಜೋಡಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. ಅದರಲ್ಲಿ ಒಂದು ಜೋಡಿಯಿಂದ ಈ ಗುಡ್ ನ್ಯೂಸ್ ಸಿಕ್ಕಿದೆ ಎಂದು ಹೇಳಲಾಗಿತ್ತು. ಅಂಕಿತಾ ಲೋಖಂಡೆ ಅವರನ್ನು ಮನೆಯಿಂದ ಹೊರಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಕೂಡ ಹರಿದಾಡಿತ್ತು.

    ಬಾಲಿವುಡ್ ನಲ್ಲಿ ಹದಿನಾರು ಸೀಸನ್ ಮುಗಿಸಿರುವ ಬಿಗ್ ಬಾಸ್, ಸೆಪ್ಟೆಂಬರ್ 3 ರಿಂದ ತನ್ನ ಪ್ರಸಾರವನ್ನು ಶುರು ಮಾಡಿದೆ. ಸಲ್ಮಾನ್ ಖಾನ್ ಈ ಶೋ ಅನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಾ ಸಾಗಿದೆ ಹಿಂದಿಯ ಬಿಗ್ ಬಾಸ್.