Tag: Vicki Kaushal

  • ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಚೇಂಜ್ ಮಾಡಿದ ಕತ್ರಿನಾ

    ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಚೇಂಜ್ ಮಾಡಿದ ಕತ್ರಿನಾ

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಚೇಂಜ್ ಮಾಡಿದ್ದು, ಅಭಿಮಾನಿಗಳು ಅವರ ಡಿಪಿ ನೋಡಿ ಖುಷ್ ಆಗಿದ್ದಾರೆ.

    ಡಿಸೆಂಬರ್ 9 ರಂದು ವಿಕ್ಕಿ ಕೌಶಲ್ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟ ಕತ್ರಿನಾ ಕೈಫ್ ಇತ್ತೀಚೆಗೆ ತಮ್ಮ ಇನ್‍ಸ್ಟಾಗ್ರಾಮ್ ಪ್ರೊಫೈಲ್ ಚೇಂಜ್ ಮಾಡಿದ್ದು, ವಿಕ್ಕಿಯೊಂದಿಗಿನ ತನ್ನ ಕನಸಿನ ಮದುವೆಯ ಫೋಟೋವನ್ನು ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಸಂತೋಷವನ್ನು ವ್ಯಕ್ತಪಡಿಸಿದ್ದು, ಶುಭಾಶಯವನ್ನು ತಿಳಿಸುತ್ತಿದ್ದಾರೆ. ಇದನ್ನೂ ಓದಿ:  ಮೊದಲ ಪದಗಳನ್ನು ಕಲಿಯುತ್ತಿರುವ ರಾಯನ್ – ಫುಲ್ ಖುಷ್ ಆದ ಮೇಘನಾ

     

    View this post on Instagram

     

    A post shared by Katrina Kaif (@katrinakaif)

    ಈ ಹಿಂದೆ, ಕತ್ರಿನಾ ಹುಲ್ಲಿನ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್ ಕೊಟ್ಟ ಫೋಟೋವನ್ನು ಹಾಕಿದ್ದು, ಈಗ ತಮ್ಮ ಪತಿ ಜೊತೆಗಿನ ಫೋಟೋವನ್ನು ಹಾಕಿದ್ದಾರೆ.

     

    View this post on Instagram

     

    A post shared by Katrina Kaif (@katrinakaif)

    ಇದೇ ತಿಂಗಳ 9 ರಂದು ರಾಜಸ್ಥಾನದ ರಾಯಲ್ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾ ಹೋಟೆಲ್‍ನಲ್ಲಿ ಇಬ್ಬರ ವಿವಾಹ ನಡೆದಿತ್ತು. ಕ್ಕಿ-ಕತ್ರಿನಾ ವಿವಾಹ ಮಹೋತ್ಸವ ಡಿಸೆಂಬರ್ 7 ರಿಂದ 9 ರವರೆಗೆ 3 ದಿನಗಳ ಕಾಲ ನಡೆದಿತ್ತು. ಈ ಜೋಡಿ ಬಿ-ಟೌನ್ ಸ್ನೇಹಿತರಿಗಾಗಿ ಮುಂಬೈನಲ್ಲಿ ಅದ್ದೂರಿ ಆರತಕ್ಷತೆಯನ್ನು ಆಯೋಜಿಸಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬೋಲ್ಡ್ ದೃಶ್ಯಗಳೇ ಸಮಂತಾ ದಾಂಪತ್ಯಕ್ಕೆ ಮುಳುವಾಯ್ತು!

     

  • ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಮುಂಬೈ: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್ ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತು ಪುರುಷರ ಒಳ ಉಡುಪಿನ ಬಗ್ಗೆಯಾಗಿದ್ದು, ಅದರಲ್ಲಿ ರಶ್ಮಿಕಾ ಯೋಗ ಇನ್‍ಸ್ಟ್ರಾಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ವಿಕ್ಕಿ ಅವರು ಯೋಗ ಕಲಿಯುವ ವಿದ್ಯಾರ್ಥಿಯಾಗಿದ್ದು, ಅವರ ಒಳ ಉಡುಪನ್ನೆ ರಶ್ಮಿಕಾ ನೋಡುವ ಅದರತ್ತ ಆಕರ್ಷಕರಾಗುವ ರೀತಿ ವೀಡಿಯೋವನ್ನು ಚಿತ್ರೀಕರಿಸಲಾಗಿತ್ತು. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಈ ಜಾಹೀರಾತಿಗೆ ರಶ್ಮಿಕಾ ಅಭಿಮಾನಿಗಳಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೋಲ್ ಪೇಜ್ ಗಳು ಈ ಜಾಹೀರಾತಿನಲ್ಲಿ ರಶ್ಮಿಕಾ ಅಭಿನಯದ ಬಗ್ಗೆ ಫುಲ್ ಟ್ರೋಲ್ ಮಾಡುತ್ತಿದ್ದಾರೆ.

    ಸಖತ್ ಬ್ಯುಸಿಯಾಗಿರುವ ರಶ್ಮಿಕಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ಅದು ಅಲ್ಲದೇ ಇತ್ತೀಚೆಗೆ ಬಾಲಿವುಡ್ ಗೂ ಹಾರಿರುವ ಇವರು ‘ಮಿಷನ್ ಮಜ್ನು’ ಸಿನಿಮಾ ಮುಗಿಸಿ, ಬಾಲಿವುಡ್ ನ ಮತ್ತೊಂದು ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆಗೂ ನಟಿಸುತ್ತಿದ್ದಾರೆ. ಇದನ್ನೂ ಓದಿ: ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ರಶ್ಮಿಕಾ ಅಭಿಮಾನಿಗಳು ಮಾತ್ರ ಇವರ ನಟನೆಯ ‘ಪುಷ್ಪ’ ನೋಡಲು ಕಾಯುತ್ತಿದ್ದು, ಕೊರೊನಾ ಮತ್ತು ಚಿತ್ರಮಂದಿರಗಳ ಸಮಸ್ಯೆಯಿಂದ ಚಿತ್ರದ ರಿಲೀಸ್ ಡೇಟ್ ಮುಂದೆ ಹೋಗುತ್ತಿದೆ.