Tag: viajayapura

  • ಅಪ್ರಾಪ್ತೆಯನ್ನ ಅಪಹರಿಸಿ ಅತ್ಯಾಚಾರವೆಸಗಿದ ಆರೋಪ – ವ್ಯಕ್ತಿ ಅರೆಸ್ಟ್

    ಅಪ್ರಾಪ್ತೆಯನ್ನ ಅಪಹರಿಸಿ ಅತ್ಯಾಚಾರವೆಸಗಿದ ಆರೋಪ – ವ್ಯಕ್ತಿ ಅರೆಸ್ಟ್

    ವಿಜಯಪುರ: ಅಪ್ರಾಪ್ತೆಯನ್ನ ಅಪಹರಿಸಿ ಅತ್ಯಾಚಾರವೆಸಗಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

    ಶಿವಯ್ಯ ಜಂಬಯ್ಯ ರುದ್ರಸ್ವಾಮಿಮಠ (32) ಬಂಧಿತ ವ್ಯಕ್ತಿ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಅಪ್ರಾಪ್ತೆ ಬಹಿರ್ದೆಸೆಗೆ ಹೋದಾಗ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪಿಸಲಾಗಿದೆ.

    ಮಂಗಳವಾರ ಬೆಳಗ್ಗೆ ಅಪ್ರಾಪ್ತೆ ಬಹಿರ್ದೆಸೆಗೆ ಹೋದಾಗ ತನ್ನ ಸಹಚರರೊಂದಿಗೆ ಅಪಹರಿಸಿದ್ದ. ಬಳಿಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆಯ ಮೈಮೇಲಿದ್ದ ಚಿನ್ನದ ಒಡವೆಗಳನ್ನು ದೋಚಿದ್ದರು. ಇತ್ತ ಸಂಜೆಯಾದರೂ ಮಗಳು ಮನೆಗೆ ಬರಲಿಲ್ಲವಲ್ಲ ಎಂದು ಪಾಲಕರು ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಸಂಜೆ ಆಕೆ ಮನೆಗೆ ಬಂದು ವಿಷಯ ತಿಳಿಸಿದಾಗಲೇ ಅತ್ಯಾಚಾರ ವಿಚಾರ ಬಯಲಾಗಿದೆ.

    ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜಧಾನಿಯಲ್ಲಿ ಶೂಟೌಟ್- ಬೈಕ್ ಸವಾರನ ಮೇಲೆ ಕಾರು ಚಾಲಕನಿಂದ ಗುಂಡಿನ ದಾಳಿ

  • ಪ್ರೀತಿಸಿ ಮದ್ವೆಯಾದವಳು ನೆರೆ ಮನೆಯವನೊಂದಿಗೆ ಎಸ್ಕೇಪ್- ವೀಡಿಯೋ ಮಾಡಿ ಪತಿ ಆತ್ಮಹತ್ಯೆ

    ಪ್ರೀತಿಸಿ ಮದ್ವೆಯಾದವಳು ನೆರೆ ಮನೆಯವನೊಂದಿಗೆ ಎಸ್ಕೇಪ್- ವೀಡಿಯೋ ಮಾಡಿ ಪತಿ ಆತ್ಮಹತ್ಯೆ

    ವಿಜಯಪುರ: ಪ್ರೀತಿಸಿ ಮದುವೆಯಾದವಳು ಪಕ್ಕದ ಮನೆಯವನ ಜೊತೆಗೆ ಎಸ್ಕೇಪ್ ಆದ ಘಟನೆ ವಿಜಯಪುರದ  ಜಿ. ತಾಳಿಕೋಟೆ ತಾ. ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಇದರಿಂದ ಮನನೊಂದು ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಫೇಸ್ ಬುಕ್‍ನಲ್ಲಿ ವೀಡಿಯೋ ಹರಿಬಿಟ್ಟು ನೇಣಿಗೆ ಶರಣಾಗಿದ್ದಾನೆ.

    ವೆಂಕಟೇಶ ದ್ವಾರನಹಳ್ಳಿ (25) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಎರಡು ವರ್ಷಗಳ ಹಿಂದೆ ವೆಂಕಟೇಶ್ ಪ್ರೀತಿಸಿ ಮದುವೆಯಾಗಿದ್ದ. ಈತನ ಪಕ್ಕದ ಮನೆಯ ಸಹೋದರ ಸಂಬಂಧಿ ಶ್ರೀಶೈಲ್ ಎಂಬವನ ಜೊತೆಗೆ ಸದ್ಯ ಪತ್ನಿ ಎಸ್ಕೇಪ್ ಆಗಿದ್ದಾಳೆ. ತಾಳಿಕೋಟೆ ಪೊಲೀಸ್ ಠಾಣೆಗೆ ಇದರ ಬಗ್ಗೆ ವೆಂಕಟೇಶ್ ದೂರು ಕೂಡ ನೀಡಿದ್ದ. ಆದರೆ ವೆಂಕಟೇಶ್ ಜೊತೆಗೆ ಇರೊಲ್ಲ,  ಪ್ರಿಯಕರ ಶ್ರೀಶೈಲ್ ಜೊತೆಗೆ ಇರುವುದಾಗಿ ಪತ್ನಿ ಹೇಳಿದ್ದಳು. ಕಾರಣ ಆಕೆಯ ಹಕ್ಕುಗಳ ಬಗ್ಗೆ ಗಂಡ ವೆಂಕಟೇಶ್ ಗೆ ಪೊಲೀಸರು ಮನವರಿಕೆ ಮಾಡಿದ್ದರು. ಇದರಿಂದ ಮನನೊಂದು ವೆಂಕಟೇಶ್ ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‍ನಲ್ಲಿ ಪತ್ನಿ ಕೊಲೆಗೆ ಸ್ಕೆಚ್- ವಿಫಲವಾದ ನಂತ್ರ ಚಾಕುವಿಂದ ಇರಿದು ಕೊಂದ!

    ಆತ್ಮಹತ್ಯೆಗೂ ಮುನ್ನ ‘ತನ್ನ ಸಾವಿಗೆ ಶ್ರೀಶೈಲ್ ಹೊಣೆ’ ಎಂದು ಹೇಳಿ ಫೇಸ್ ಬುಕ್ ಲೈವ್ ಮಾಡಿ ನೇಣಿಗೆ ಶರಣಾಗಿದ್ದಾನೆ. ಫೇಸ್ ಬುಕ್ ನಲ್ಲಿ ಈ ವೀಡಿಯೋ ಕಂಡು ಜಮೀನಿನಲ್ಲಿ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದ ವೆಂಕಟೇಶ್ ಪ್ರಾಣ ಉಳಿಸಲು, ಸ್ಥಳೀಯರು ಯತ್ನಿಸಿದ್ದಾರೆ. ಆದರೆ ತಾಳಿಕೋಟೆ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆಯೆ ವೆಂಕಟೇಶ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ತಂದೆಯನ್ನೇ ಹತ್ಯೆಗೈದ ಬಾಲಕಿ

    ಈ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.