Tag: Viacom18

  • 5,966 ಕೋಟಿ ರೂ.ಗೆ BCCI ಮಾಧ್ಯಮ ಹಕ್ಕು ಪಡೆದ Viacom18

    5,966 ಕೋಟಿ ರೂ.ಗೆ BCCI ಮಾಧ್ಯಮ ಹಕ್ಕು ಪಡೆದ Viacom18

    ಮುಂಬೈ: ಈಗಾಗಲೇ ಐಪಿಎಲ್ (IPL) ಡಿಜಿಟಲ್ ಮತ್ತು ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಟಿವಿ ಹಾಗೂ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಗೆದ್ದುಕೊಂಡಿರುವ ವಯಾಕಾಮ್‌-18 (Viacom18) ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿದೆ.

    5,966.4 ಕೋಟಿ ರೂ.ಗಳಿಗೆ 5 ವರ್ಷಗಳಿಗೆ ಅನ್ವಯವಾಗುವಂತೆ ಬಿಸಿಸಿಐ ಮಾಧ್ಯಮ ಹಕ್ಕನ್ನ (BCCI Media Rights) ವಯಾಕಾಮ್-18 ಪಡೆದುಕೊಂಡಿದೆ. ಜಿಯೋ ಸಿನಿಮಾ ಮೊಬೈಲ್‌ ಆ್ಯಪ್ ಮತ್ತು ಸ್ಫೋರ್ಟ್ಸ್‌-18 ಟಿವಿ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ವಯೋಕಾಮ್‌-18, ಬಿಸಿಸಿಐನ ಡಿಜಿಟಲ್ ಮತ್ತು ಟಿವಿ ಹಕ್ಕುಗಳನ್ನ ಗೆದ್ದುಕೊಂಡಿದೆ. ಈ ಮೂಲಕ 2018ರಲ್ಲಿ 6,138 ಕೋಟಿ ರೂ.ಗೆ ಮಾಧ್ಯಮ ಹಕ್ಕುಗಳನ್ನ ಉಳಿಸಿಕೊಂಡಿದ್ದ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌, ಬಿಸಿಸಿಐ ಜೊತೆಗಿನ ಒಪ್ಪಂದವನ್ನ ಕೊನೆಗೊಳಿಸಿದೆ. ಇದನ್ನೂ ಓದಿ: AsiaCup 2023: ಬಾಬರ್‌, ಇಫ್ತಿಕಾರ್‌ ಶತಕದ ಅಬ್ಬರ – 238 ರನ್‌ಗಳ ಭರ್ಜರಿ ಜಯ, ಪಾಕ್‌ ಶುಭಾರಂಭ

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಈ ಕುರಿತಾಗಿ ಗುರುವಾರ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮುಂದಿನ 5 ವರ್ಷಗಳವರೆಗಿನ ಮಾಧ್ಯಮ ಹಕ್ಕುಗಳನ್ನ ಗೆದ್ದಿದ್ದಕ್ಕಾಗಿ ವಯಾಕಾಮ್-18 ಸಂಸ್ಥೆಗೆ ಅಭಿನಂದನೆಗಳು. ಐಪಿಎಲ್ ಮತ್ತು ಡಬ್ಲ್ಯೂಪಿಎಲ್‌ ನಂತರ ಭಾರತ ಕ್ರಿಕೆಟ್ ತಂಡದ ಬೆಳವಣಿಗೆ ಮುಂದುವರಿಯುತ್ತದೆ. ಬಿಸಿಸಿಐ ಮಾಧ್ಯಮ ಹಕ್ಕುಗಳ ಪಾಲುದಾರಿಕೆಯನ್ನು ವಿಸ್ತರಿಸುತ್ತೇವೆ. ನಾವು ಜೊತೆಗೂಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಲ್ಪನೆಯನ್ನು ಸೆರೆಹಿಡಿದಿಟ್ಟುಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಶ್ಲಾಘಿಸಿದ್ದಾರೆ.

    ಪ್ರತಿ ಪಂದ್ಯಕ್ಕೆ ಬರೋಬ್ಬರಿ 67.8 ಕೋಟಿ ರೂ.
    ಸದ್ಯದ ಒಪ್ಪಂದದ ಪ್ರಕಾರ, ವಯಾಕಾಮ್-18 ಸಂಸ್ಥೆಯು ಪ್ರತಿ ಪಂದ್ಯಕ್ಕೆ ಬರೋಬ್ಬರಿ 67.8 ಕೋಟಿ ರೂ.ಗಳನ್ನ ಬಿಸಿಸಿಐಗೆ ನೀಡಬೇಕಾಗುತ್ತದೆ. ಈ ಒಪ್ಪಂದವು 2028ರ ಮಾರ್ಚ್ ತಿಂಗಳವರೆಗೆ ಇರಲಿದೆ. ಒಟ್ಟು 88 ಕ್ರಿಕೆಟ್ ಪಂದ್ಯಗಳನ್ನು ವಯಾಕಾಮ್-18 ಪ್ರಸಾರ ಮಾಡುತ್ತದೆ. ಈ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ವಿರುದ್ಧದ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಈ ಒಪ್ಪಂದವು ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತೀಯರು ಎಲ್ಲಿ ಬೇಕಾದ್ರೂ ಜಯಿಸ್ತಾರೆ ಅನ್ನೋದಕ್ಕೆ ನೀವು ಮಾದರಿ – ಪ್ರಜ್ಞಾನಂದ ಕುಟುಂಬ ಭೇಟಿ ಮಾಡಿದ ಮೋದಿ

    ಈ ವರ್ಷಾರಂಭದಲ್ಲಿ 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕನ್ನು ಪಡೆದುಕೊಂಡಿದ್ದ ವಯಾಕಾಮ್‌ ಇದೀಗ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಪಂದ್ಯಗಳ ಪ್ರಸಾರ ಹಕ್ಕುಗಳನ್ನು ತೆಕ್ಕೆಗೆ ತೆಗೆದುಕೊಂಡಿದ್ದು, ಪ್ರಬಲ ಹೆಜ್ಜೆಯನ್ನಿಟ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.

    951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.

    ಮುಂಬೈ: ಈ ಬಾರಿ ಸದ್ದು ಮಾಡುತ್ತಿರುವ ಮಹಿಳಾ ಐಪಿಎಲ್‍ನ (Women’s IPL) 2023 ರಿಂದ 2027ರ ವರೆಗಿನ ಪ್ರಸಾರ ಹಕ್ಕನ್ನು (Media Rights) ಬರೋಬ್ಬರಿ 951 ಕೋಟಿ ರೂ. ನೀಡಿ ವಯಾಕಾಮ್18 (Viacom18)  ಖರೀದಿಸಿದೆ.

    ಮಹಿಳಾ ಐಪಿಎಲ್ ನೇರ ಪ್ರಸಾರದ ಹಕ್ಕಿನ ಮಾರಾಟಕ್ಕೆ ಹರಾಜು ಪ್ರಕ್ರಿಯೆ ಕರೆಯಲಾಗಿತ್ತು. ಈ ಹರಾಜಿನಲ್ಲಿ ವಯಾಕಾಮ್18 ಬರೋಬ್ಬರಿ 951 ಕೋಟಿ ರೂ. ನೀಡಿ ಮುಂದಿನ 5 ವರ್ಷಗಳ ಪ್ರಸಾರ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಐಪಿಎಲ್‍ನ ಪ್ರತಿ ಪಂದ್ಯ 7.09 ಕೋಟಿ ರೂ.ಗೆ ಮಾರಾಟವಾಗಿದೆ. ಇದನ್ನೂ ಓದಿ: ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಹಿಳಾ ಐಪಿಎಲ್‍ನ ಪ್ರಸಾರ ಹಕ್ಕನ್ನು ವಯಾಕಾಮ್18 ಪಡೆದುಕೊಂಡಿದೆ. 951 ಕೋಟಿ ರೂ. ನೀಡಿ ಪ್ರಸಾರ ಹಕ್ಕನ್ನು ವಯಾಕಾಮ್18 ಪಡೆದುಕೊಂಡಿದ್ದು, ಪ್ರತಿ ಪಂದ್ಯ 7.09 ಕೋಟಿ ರೂ.ಗೆ ಮಾರಾಟವಾಗಿದೆ. ಇದು ಮಹಿಳಾ ಕ್ರಿಕೆಟ್‍ಗೆ ಸಿಕ್ಕ ಆರಂಭಿಕ ಗೆಲುವು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹಾಕಿ ವಿಶ್ವಕಪ್‌ – ಭಾರತ, ಇಂಗ್ಲೆಂಡ್‌ ಪಂದ್ಯ ಡ್ರಾನಲ್ಲಿ ಅಂತ್ಯ

    ಈಗಾಗಲೇ ಮಹಿಳಾ ಐಪಿಎಲ್‍ನ 5 ಫ್ರಾಂಚೈಸ್ ಬಗ್ಗೆ ಜ.25 ರಂದು ಬಿಸಿಸಿಐ ಮಾಹಿತಿ ಹಂಚಿಕೊಳ್ಳಲಿದೆ. ಮಾರ್ಚ್‍ನಲ್ಲಿ ಮಹಿಳಾ ಐಪಿಎಲ್ ಆರಂಭಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ಆಟಗಾರ್ತಿಯರ ಹರಾಜು ಪ್ರಕ್ರಿಯೆಗೆ ಕೂಡ ಸಿದ್ಧತೆ ನಡೆಯುತ್ತಿದೆ.

    IPL

    ಈ ಹಿಂದೆ 2023 ರಿಂದ 2027ರ ವರೆಗಿನ ಪುರುಷರ ಐಪಿಎಲ್‍ನ ಪ್ರಸಾರ ಹಕ್ಕು ಒಟ್ಟು 48,390 ಕೋಟಿ ರೂ.ಗೆ ಮಾರಾಟವಾಗಿತ್ತು. ಟಿವಿ ಪ್ರಸಾರ ಹಕ್ಕನ್ನು (ಪ್ಯಾಕೇಜ್ ಎ) 23,575 ಕೋಟಿ ರೂ. ನೀಡಿ ವಾಲ್ಟ್ ಡಿಸ್ನಿ (ಡಿಸ್ನಿಸ್ಟಾರ್) ಸಂಸ್ಥೆ ತನ್ನದಾಗಿಸಿಕೊಂಡಿತ್ತು. ರಿಲಾಯನ್ಸ್ ಇಂಡಸ್ಟ್ರೀಸ್ ಮಾಲೀಕತ್ವದ ವಯಾಕಾಮ್18 ಸಂಸ್ಥೆಯು ಡಿಜಿಟಲ್ ಹಕ್ಕನ್ನು (ಪ್ಯಾಕೇಜ್-ಬಿ) 20,500 ಕೋಟಿ ರೂ. ನೀಡಿ ಪಡೆದುಕೊಂಡಿತ್ತು. ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಪಂದ್ಯ 107.5 ಕೋಟಿ ಮೊತ್ತಕ್ಕೆ ಮಾರಾಟವಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಸ್ನಿ ಸ್ಟಾರ್, ವಯಾಕಾಮ್ ತೆಕ್ಕೆಗೆ IPL ಪ್ರಸಾರ ಹಕ್ಕು – ಪ್ರತಿ ಪಂದ್ಯಕ್ಕೆ 107.5 ಕೋಟಿ

    ಡಿಸ್ನಿ ಸ್ಟಾರ್, ವಯಾಕಾಮ್ ತೆಕ್ಕೆಗೆ IPL ಪ್ರಸಾರ ಹಕ್ಕು – ಪ್ರತಿ ಪಂದ್ಯಕ್ಕೆ 107.5 ಕೋಟಿ

    ಮುಂಬೈ: ಸತತ 3 ದಿನಗಳಿಂದ ರೋಚಕತೆಯಿಂದ ಕೂಡಿದ್ದ 2023-27ರ ಅವಧಿಯ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ.

    IPL2022 GT VS RR - GT STARTS

    ವಾಲ್ಟ್ ಡಿಸ್ನಿ (ಡಿಸ್ನಿಸ್ಟಾರ್) ಸಂಸ್ಥೆಯ ಐಪಿಎಲ್ ಟಿವಿ ಪ್ರಸಾರದ ಹಕ್ಕನ್ನು ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್‌ ಮಾಲೀಕತ್ವದ ವಯಾಕಾಮ್18 ಸಂಸ್ಥೆಯು ಡಿಜಿಟಲ್ ಪ್ರಸಾರ ಹಕ್ಕನ್ನು ಪಡೆದುಕೊಂಡಿದೆ. ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಪಂದ್ಯ 107.5 ಕೋಟಿ ಮೊತ್ತಕ್ಕೆ ಮಾರಾಟವಾಗಿದೆ. ಇದನ್ನೂ ಓದಿ: IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ

    IPL

    ‘ಟಿವಿ ಪ್ರಸಾರ ಹಕ್ಕು (ಪ್ಯಾಕೇಜ್ ಎ) 23,575 ಕೋಟಿ ರೂ.ಗೆ ಮತ್ತು ಡಿಜಿಟಲ್ ಹಕ್ಕು (ಪ್ಯಾಕೇಜ್-ಬಿ) 20,500 ಕೋಟಿ ರೂ.ಗೆ ಹರಾಜಾಗಿದೆ. ಅಂದರೆ ಪ್ರತಿ ಪಂದ್ಯ ಕ್ರಮವಾಗಿ 57.5 ಹಾಗೂ 50 ಕೋಟಿಗೆ ಬಿಕರಿಯಾಗಿದೆ. ಟಿವಿ ಹಾಗೂ ಡಿಜಿಟಲ್ ಹಕ್ಕುಗಳ ಒಟ್ಟು ಮೌಲ್ಯ 48,390 ಕೋಟಿ ಆಗಿದೆ ಬಿಸಿಸಿಐ ತಿಳಿಸಿದೆ.