Tag: Veteran Actress

  • ಕೆಜಿಎಫ್-2ಗೆ ಮತ್ತೋರ್ವ ದಕ್ಷಿಣ ಭಾರತದ ಹಿರಿಯ ನಟಿ ಎಂಟ್ರಿ

    ಕೆಜಿಎಫ್-2ಗೆ ಮತ್ತೋರ್ವ ದಕ್ಷಿಣ ಭಾರತದ ಹಿರಿಯ ನಟಿ ಎಂಟ್ರಿ

    ಬೆಂಗಳೂರು: ಭಾರತ ಚಿತ್ರದಲ್ಲೇ ಟ್ರೆಂಡ್ ಹುಟ್ಟು ಹಾಕಿರುವ ಕೆಜಿಎಫ್-2 ಚಿತ್ರಕ್ಕೆ ಮತ್ತೋರ್ವ ದಕ್ಷಿಣ ಭಾರತದ ಹಿರಿಯ ನಟಿ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

    ಕೆಜಿಎಫ್-2 ಚಿತ್ರ ತನ್ನ ತಾರಾಗಣದ ಮೂಲಕ ಸಖತ್ ಸದ್ದು ಮಾಡುತ್ತಿರುವ ಚಿತ್ರ. ಇಡೀ ಭಾರತ ಚಿತ್ರರಸಿಕರೇ ರಾಕಿಭಾಯ್ ಬರುವಿಕೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ಬಂದಿದೆ. ಈ ವೇಳೆ ದಕ್ಷಿಣ ಭಾರತದ ಹಿರಿಯ ನಟಿ ಈಶ್ವರಿ ರಾವ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

    ಹೌದು ದಕ್ಷಿಣ ಭಾರತದಲ್ಲಿ ತೆಲುಗು, ತಮಿಳು, ಮಾಲಿಯಾಳಂ ಸೇರಿದಂತೆ ಕನ್ನಡದಲ್ಲೂ ನಟನೇ ಮಾಡಿರುವ ಈಶ್ವರಿ ರಾವ್, ಕೆಜಿಎಫ್-2 ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗಿದೆ. ಚಿತ್ರಕ್ಕೆ ತಿರುವು ಕೊಡುವ ಒಂದು ಪಾತ್ರದಲ್ಲಿ ಈಶ್ವರಿಯವರು ನಟಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ವಿಚಾರ ಈಶ್ವರಿಯವರು ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

    ದಕ್ಷಿಣ ಭಾರತದಲ್ಲೇ ಖ್ಯಾತ ನಟಿಯಾಗಿರುವ ಈಶ್ವರಿ ರಾವ್, ಪಂಚಭಾಷಾ ತಾರೆ ಕೆಲ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. 90ರ ದಶಕದಲ್ಲಿ ರಜನಿಕಾಂತ್, ಕಮಲ್ ಹಾಸನ್ ನಂತಹ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ಒಳ್ಳೆಯ ನಟಿ. ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ರಜಿನಿಕಾಂತ್ ಅವರ ‘ಕಾಲ’ ಸಿನಿಮಾದಲ್ಲೂ ಈಶ್ವರಿಯವರು ನಟಿಸಿದ್ದಾರೆ. ಜೊತೆಗೆ 1995ರಲ್ಲಿ ಎಸ್ ನಾರಾಯಣ್ ನಿರ್ದೇಶನ ‘ಮೇಘ ಮಾಲೆ’ ಎಂಬ ಕನ್ನಡ ಸಿನಿಮಾದಲ್ಲೂ ಈಶ್ವರಿಯವರು ಅಭಿನಯಿಸಿದ್ದಾರೆ.

    ಈಗಾಗಲೇ ಕೆಜಿಎಫ್-2 ಚಿತ್ರತಂಡದಲ್ಲಿ ಪ್ರತಿಭಾನ್ವಿತ ನಟ-ನಟಿಯರ ದಂಡೇ ಇದೆ. ಭಾರತ ಚಿತ್ರರಂಗದಲ್ಲೇ ಮೇರು ನಟ-ನಟಿಯರಾಗಿ ಗುರುತಿಸಿಕೊಂಡವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂತಯೇ ಚಿತ್ರದಲ್ಲಿ ಬರುವ ಅಧಿರಾನ ಪಾತ್ರದಲ್ಲಿ ಬಾಲಿವುಡ್‍ನ ಸಂಜಯ್ ದತ್, ಪ್ರಧಾನಿ ರಮೀಕಾ ಸೇನ್ ಪಾತ್ರದಲ್ಲಿ ಹಿರಿಯ ನಟಿ ರವೀನಾ ಟಂಡನ್, ರಾಕಿಂಗ್ ಸ್ಟಾರ್ ಯಶ್, ಕನ್ನಡದ ಹಿರಿಯ ನಟ ಅನಂತ್ ನಾಗ್ ಮತ್ತು ಅಚ್ಯುತ್ ರಾವ್ ಸೇರಿದಂತೆ ಹಲವು ಮಂದಿ ನಟನೆ ಮಾಡಿದ್ದಾರೆ.

    ಈಗಾಗಲೇ ಚಿತ್ರತಂಡ ಅಕ್ಟೋಬರ್ 23ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದೆ. ಅದರಂತೆ ಶೂಟಿಂಗ್ ಕೂಡ ಅಂತ್ಯಕ್ಕೆ ಬಂದಿದೆ. ಕೊರೊನಾ ಲಾಕ್‍ಡೌನ್ ನಿಂದ ಮುಂದಕ್ಕೆ ಹೋಗಿದ್ದ ಶೂಟಿಂಗ್ ಕೆಲಸ ಮತ್ತೆ ಆರಂಭವೂ ಆಗಿದೆ. ಈಗಾಗಲೇ ಚಿತ್ರದ ಪೋಸ್ಟರ್ ಗಳು ಸಖತ್ ಸದ್ದು ಮಾಡಿದೆ. ಯಶ್ ಅಭಿಮಾನಿಗಳು ಟ್ರೈಲರ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ರಿಲೀಸ್ ವೇಳೆಗೆ ಟ್ರೈಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

  • ಕನ್ನಡದ ಕಲಾವಿದೆಗೆ ಯಾಕೆ ತೊಂದರೆ ನೀಡ್ತೀರಿ: ಲೀಲಾವತಿ ಪರ ಬರೆದಿದ್ದ ಕರುಣಾನಿಧಿ

    ಕನ್ನಡದ ಕಲಾವಿದೆಗೆ ಯಾಕೆ ತೊಂದರೆ ನೀಡ್ತೀರಿ: ಲೀಲಾವತಿ ಪರ ಬರೆದಿದ್ದ ಕರುಣಾನಿಧಿ

    ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಕರುಣಾನಿಧಿ ಅವರು ಒಳ್ಳೆಯ ಸಾಹಿತಿ. ಮಾತ್ರವಲ್ಲದೆ ಸಕಲಕಲಾವಲ್ಲಭರಾಗಿದ್ದರು. ಎಲ್ಲಾ ಕಲೆಯಲ್ಲಿಯೂ ಅವರಿದ್ದರು. ಸಾಧ್ಯವಾಗಲ್ಲ ಅನ್ನೋ ವಿಷಯಗಳೇ ಅವರಿಗೆ ಇರಲಿಲ್ಲ ಅಂತ ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 60 ವರ್ಷ ತಮಿಳುನಾಡಿನಲ್ಲಿ ತೋಟ ಮಾಡಿಕೊಂಡಿದ್ದೆ. ನಾನು ಮಾತ್ರವಲ್ಲ ಎನ್ ಟಿ ರಾಮ್ ರಾವ್, ಚಿರಂಜಿವಿ ಹೀಗೆ ಎಲ್ಲ ಶ್ರೇಷ್ಠ ನಟರು ಅಲ್ಲೇ ಇದ್ದು ಬಂದವರು. ಇಲ್ಲಿ ನಮ್ಮ ಮೇಲೆ ಶೂಟೌಟ್ ಆಗಿದ್ದಾಗ ಅಲ್ಲಿನ ಪೇಪರ್ ನಲ್ಲಿ ಹಾಕಿದ್ದರು. ಪಾಪ ಕನ್ನಡದ ಕಲಾವಿದೆ ಲೀಲಾವತಿಗೆ ಅವರಿಗೆ ಯಾಕೆ ಅಲ್ಲಿ ತೊಂದರೆ ಮಾಡುತ್ತಿದ್ದಾರೆ ಅಂತ ಬರೆದಿದ್ದರಂತೆ. ಈ ಬಗ್ಗೆ ನಾನು ನೋಡಿಲ್ಲ. ಕೆಲ ಜನರು ಬಂದು ನನಗೆ ಹೇಳಿದ್ದರು ಎಂದು ತಿಳಿಸಿದರು.

    ಜನರನ್ನು ಆಕರ್ಷಣೆ ಮಾಡುವ ಶಕ್ತಿ ಕರುಣಾನಿಧಿ ಅವರಲ್ಲಿತ್ತು. ಥಳ್ಳುವ ಗಾಡಿಯೊಂದಿಗೆ ಬಂದಾದ್ರೂ ಅವರು ಜನಗಳ ಜೊತೆಯೇ ಇರುತ್ತಿದ್ದರು. ಎಷ್ಟೋ ಜನರು ಸತ್ತಾಗ ಅವರ ಜೊತೆಗೆ ನಾನು ಸತ್ತು ಸತ್ತು ಹೋಗುತ್ತಿದ್ದೆ. ಆದ್ರೆ ಕರುಣಾನಿಧಿ ಅವರನ್ನು ನೋಡಿದಾಗ ನಾನು ಬದುಕಬೇಕು ಅನ್ನೋ ಆಸೆ ಹುಟ್ಟಿದೆ.

    ಎಷ್ಟೇ ಕಷ್ಟ ಆದ್ರೂ ಚಕ್ರದ ಗಾಡಿಯಲ್ಲಿ ಬಂದು ಜನರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು. ಕೈ ಎತ್ತಕ್ಕೆ ಆಗದಿದ್ದರೂ ಕಷ್ಟು ಪಟ್ಟಾದ್ರೂ ಕೈ ಎತ್ತಿ ಜನರಿಗೆ ಧನ್ಯವಾದ ತಿಳಿಸುತ್ತಿದ್ದರು ಅಂತ ಕಣ್ಣೀರು ಸುರಿಸಿದ್ರು.

    https://www.youtube.com/watch?v=XBSxkFb20h4

  • ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ

    ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ

    ಮುಂಬೈ: ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ ಹಿರಿಯ ನಟಿ ರೀಟಾ ಬಾದುರಿ ನಿಧನರಾಗಿದ್ದಾರೆ.

    ರೀಟಾ ಅವರ ನಿಧನವಾಗಿರುವ ವಿಷಯವನ್ನು ಹಿರಿಯ ನಟ ಶಿಶಿರ್ ಶರ್ಮಾ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ಬಹಳ ದುಃಖದಿಂದ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ರೀಟಾ ಬಾದುರಿ ಅವರು ನಮ್ಮೊಂದಿಗೆ ಇಲ್ಲ. ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಅವರು ನಮಗೆಲ್ಲಾ ತಾಯಿಯಾಗಿದ್ದರು. ಅವರು ನಮಗೆ ತುಂಬಾ ನೆನಪಾಗುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.

    ಮೂಲಗಳ ಪ್ರಕಾರ ರೀಟಾ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೀಟಾ ಎರಡು ದಿನಕ್ಕೆ ಒಂದು ಬಾರಿ ಆಸ್ಪತ್ರೆಗೆ ಹೋಗುತ್ತಿದ್ದರು ಎನ್ನಲಾಗಿದೆ. ರೀಟಾ ಈ ನಡುವೆ ‘ನಿಮಕಿ ಮುಖಿಯಾ’ದಲ್ಲಿ ಇಮರತಿ ದೇವಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಸೆಟ್‍ನಲ್ಲಿ ಕೆಲಸವಿಲ್ಲದ ಸಮಯದಲ್ಲಿ ರೀಟಾ ವಿಶ್ರಾಂತಿ ಪಡೆಯುತ್ತಿದ್ದರು. ರೀಟಾ ಅವರಿಗೆ 62 ವರ್ಷಗಳಾಗಿದ್ದು, ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಶೂಟಿಂಗ್ ಶೆಡ್ಯೂಲ್ ನಿರ್ಧರಿಸಲಾಗುತ್ತಿತ್ತು ಎಂದು ವರದಿಯಾಗಿದೆ.

    ವಯಸ್ಸಾದ ಕಾಲದಲ್ಲಿ ಬರುವ ಕಾಯಿಲೆಗಳಿಂದ ಹೆದರಿ ಕೆಲಸ ಬಿಡಲು ಆಗುತ್ತಾ?. ನನಗೆ ಕೆಲಸ ಮಾಡಲು ಹಾಗೂ ನನ್ನನ್ನು ನಾನು ಬ್ಯುಸಿಯಾಗಿಡಲು ಇಷ್ಟಪಡುತ್ತೇನೆ. ನನಗೆ ಎಲ್ಲ ಸಮಯದಲ್ಲೂ ನನ್ನ ಕಾಯಿಲೆ ಬಗ್ಗೆ ಯೋಚಿಸುತ್ತಾ ಇರೋದಕ್ಕೆ ಇಷ್ಟವಿಲ್ಲ. ಹಾಗಾಗಿ ನಾನು ಯಾವಗಲೂ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ನನ್ನನ್ನು ಅರ್ಥ ಮಾಡಿಕೊಳ್ಳುವ ಹಾಗೂ ಸಪೋರ್ಟ್ ಮಾಡುವ ಶೂಟಿಂಗ್ ತಂಡ ಸಿಕ್ಕಿದ್ದು ಅದೃಷ್ಟ ಎಂದು ರೀಟಾ ಈ ಹಿಂದೆ ಹೇಳಿದ್ದರು.

    ರೀಟಾ ‘ಸಾರಾ ಬಾಯಿ ವಸ್‍ರ್ಸ್ ಸಾರಾ ಬಾಯಿ’, ‘ಅಮಾನತ್’, ‘ಏಕ್ ನಯೀ ಪೆಹೆಚಾನ್’ ಹಾಗೂ ‘ಬೈಬಲ್ ಕೀ ಕಹಾನೀಯಾ’ ಎಂಬ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  • ಸಚಿವ ಜಯಚಂದ್ರರನ್ನು ದಿಢೀರ್ ಭೇಟಿ ಮಾಡಿದ ಹಿರಿಯ ನಟಿ ಲೀಲಾವತಿ

    ಸಚಿವ ಜಯಚಂದ್ರರನ್ನು ದಿಢೀರ್ ಭೇಟಿ ಮಾಡಿದ ಹಿರಿಯ ನಟಿ ಲೀಲಾವತಿ

    ಬೆಂಗಳೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಹಿರಿಯ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಕುಮಾರ್ ಭೇಟಿ ಮಾಡಿದ್ದಾರೆ.

    ವಿಧಾನಸೌಧದ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿದ ತಾಯಿ-ಮಗ, ನೆಲಮಂಗಲ ತಾಲೂಕು ಸೋಲದೇವನಹಳ್ಳಿಯನ್ನು ಅರಣ್ಯ ಭೂಮಿ ಎಂದು ಪರಿಗಣಿಸಿ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಅದು ಕಂದಾಯ ಭೂಮಿ ಎಂದು ಕಾನೂನು ತಿದ್ದುಪಡಿ ಮಾಡಬೇಕಾಗಿದೆ. ಜತೆಗೆ ಬ್ಯಾರೇಜ್ ನಿರ್ಮಾಣಕ್ಕೂ ಸಚಿವರಲ್ಲಿ ಮನವಿ ಸಲ್ಲಿಸಿದರು.

    ಇದಕ್ಕೆ ಜನವರಿ 27 ರಂದು ಸ್ಥಳ ಪರಿಶೀಲನೆ ಮಾಡಿ ವಿವಾದ ಬಗೆ ಹರಿಸುವುದಾಗಿ ಸಚಿವ ಜಯಚಂದ್ರ ಭರವಸೆ ನೀಡಿದ್ದಾರೆ ಅಂತ ಭೇಟಿ ಬಳಿಕ ಸುದ್ದಿಗಾರರಿಗೆ ನಟಿ ಲೀಲಾವತಿ ತಿಳಿಸಿದರು.