Tag: Vessel

  • ಬಿಸಿ ಬಿಸಿ ಗುಲಾಬ್ ಜಾಮೂನ್ ಪಾತ್ರೆಗೆ ಬಿದ್ದು ಮಗು ಸಾವು

    ಬಿಸಿ ಬಿಸಿ ಗುಲಾಬ್ ಜಾಮೂನ್ ಪಾತ್ರೆಗೆ ಬಿದ್ದು ಮಗು ಸಾವು

    ಮುಂಬೈ: ಗುಲಾಬ್ ಜಾಮೂನ್ ತಯಾರಿಸಿಟ್ಟಿದ್ದ ಪಾತ್ರೆಗೆ ಮಗು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಎರಡು ವರ್ಷದ ರಾಜವೀರ್ ನಿತಿನ್ ಮೇಘವಾಲೆ ಗುಲಾಬ್ ಜಾಮೂನು ಪಾತ್ರೆಯಲ್ಲಿ ಬಿದ್ದು ಮೃತಪಟ್ಟ ಮಗುವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಮನೆಯವರು ಮಹಾಪ್ರಸಾದವಾಗಿ ಗುಲಾಬ್ ಜಾಮೂನುಗಳನ್ನು ಸಿದ್ಧಪಡಿಸಿ, ದೊಡ್ಡದಾದ ಪಾತ್ರೆಯಲ್ಲಿ ಸಂಗ್ರಹಿಸಿದ್ದರು.

    ಇದರ ಅರಿವಿಲ್ಲದ ರಾಜವೀರ್ ಆಟವಾಡುತ್ತಾ ಹೋಗಿ ಬಿಸಿ ಜಾಮೂನು ಪಾತ್ರೆಯಲ್ಲಿ ಬಿದ್ದಿದ್ದಾನೆ. ತಕ್ಷಣಕ್ಕೆ ಮಗುವನ್ನು ಯಾರೂ ಗಮನಿಸಿರಲಿಲ್ಲ. ಮಗು ಕಿರುಚಾಡಿದ್ದನ್ನು ಕೇಳಿ, ಪೋಷಕರು ಮಗುವನ್ನು ಪಾತ್ರೆಯಿಂದ ಎತ್ತಿದ್ದಾರೆ. ಆದರೆ ಬಿಸಿ ಜಾಮೂನಿನಲ್ಲಿ ಬಿದ್ದಿದ್ದರಿಂದ ಮಗುವಿಗೆ ತೀವ್ರವಾದ ಸುಟ್ಟಗಾಯಗಳಾಗಿದ್ದವು. ಕೂಡಲೇ ಪೋಷಕರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾಜವೀರ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೋಷಕರೇ, ಮಕ್ಕಳಿಗೆ ಆಟವಾಡಲು ಪಾತ್ರೆಯನ್ನು ನೀಡೋ ಮುನ್ನ ಪ್ಲೀಸ್ ಈ ವಿಡಿಯೋ ನೋಡಿ…

    ಪೋಷಕರೇ, ಮಕ್ಕಳಿಗೆ ಆಟವಾಡಲು ಪಾತ್ರೆಯನ್ನು ನೀಡೋ ಮುನ್ನ ಪ್ಲೀಸ್ ಈ ವಿಡಿಯೋ ನೋಡಿ…

    ತಿರುವನಂತಪುರಂ: ಮಕ್ಕಳು ತಮ್ಮ ಪಾಡಿಗೆ ತಾವು ಆಟವಾಡುತ್ತಿರುತ್ತವೇ ಅಂತ ಮನೆಯಲ್ಲಿ ಇರುವ ಮಂದಿ ಗಮನಹರಿಸಿದೇ ಇರಬಾರದು. ಅಪ್ಪಿ ತಪ್ಪಿ ಮಕ್ಕಳ ಕಡೆ ಗಮನಕೊಡದಿದ್ರೆ ಆಪತ್ತಿಗೆ ಸಿಲುಕಿಕೊಳ್ತಾವೆ. ಇದಕ್ಕೆ ಸಾಕ್ಷಿ ಈ ವಿಡಿಯೋ.

    ಆಟವಾಡ್ತಿದ್ದ ಮಗು ಖಾಲಿ ಪಾತ್ರೆಯನ್ನು ತಗೆದುಕೊಂಡು ತಲೆ ಮೇಲೆ ಟೋಪಿ ಥರ ಹಾಕಿಕೊಂಡಿದೆ. ಆದ್ರೆ ಪಾತ್ರ ಮಾತ್ರ ವಾಪಸ್ ಬರಲೇ ಇಲ್ಲ. ಕೊನೆಗೆ ಮಗುವಿನ ಕಿರುಚಾಟ ನೋಡಿ ಪೋಷಕರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.

    ಮಗುವಿನ ಸ್ಥಿತಿಯನ್ನು ನೋಡಿದ ವೈದ್ಯರು ಅಗ್ನಿಶಾಮಕ ದಳದ ಹತ್ತಿರ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಪಾತ್ರೆಯನ್ನು ಕತ್ತರಿಸಿ ಮಗುವನ್ನ ರಕ್ಷಣೆ ಮಾಡಿದ್ದಾರೆ.

    ಕೇರಳದ ಮಲಪ್ಪುರಂನಲ್ಲಿ ಈ ಘಟನೆ ಬುಧವಾರ ನಡೆದಿದೆ. ಕೇರಳ ಫೈರ್ ಫೋರ್ಸ್ ನವರು ಈ ವಿಡಿಯೋವನ್ನು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 11 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

    https://youtu.be/T1FRHw3-hd8