Tag: Venus

  • ಶುಕ್ರ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ವಿಜ್ಞಾನಿಗಳು ಹೇಳೋದೇನು?

    ಶುಕ್ರ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ವಿಜ್ಞಾನಿಗಳು ಹೇಳೋದೇನು?

    ಹಳ ಹಿಂದಿನಿಂದಲೂ ಶುಕ್ರ ಗ್ರಹವನ್ನು ಭೂಮಿಯಂತೆಯೇ ಇರುವ ಇನ್ನೊಂದು ಅವಳಿ ಗ್ರಹ ಎಂದು ವಿಜ್ಞಾನಿಗಳು ನಂಬಿದ್ದರು. ಜೊತೆಗೆ ಈ ಗ್ರಹ ಮಾನವ ವಾಸಕ್ಕೆ ಯೋಗ್ಯವಾಗಿದೆ ಎಂದು ಕೂಡ ವಿಶ್ವಾಸವನ್ನು ಹೊಂದಿದ್ದರು. ಈ ಕುರಿತು ವಿಜ್ಞಾನಿಗಳು ಹೇಳುವುದೇನು? ಮಾಹಿತಿ ಇಲ್ಲಿದೆ.

    ಶುಕ್ರ ಗ್ರಹವನ್ನು ಮೊದಲು ಭೂಮಿಯ ಅವಳಿ ಗ್ರಹವೆಂದು ನಂಬಿದ್ದರು. ಮೊದಲು ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಶುಕ್ರ ಗ್ರಹ ಮಾನವ ಜೀವನ ಸಾಗಿಸಲು ಬೆಂಬಲ ನೀಡುತ್ತದೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ನಂಬಿಕೆಗೆ ವಿರುದ್ಧವಾಗಿ ಪರಿಣಮಿಸಿದ್ದು, ಶುಕ್ರ ಗ್ರಹ ಜನರ ಜೀವನಕ್ಕೆ ಸೂಕ್ತವಾಗಿಲ್ಲ ಎನ್ನುವುದನ್ನು ಬಿಂಬಿಸಿದೆ. ಜೊತೆಗೆ ಶುಕ್ರ ಗ್ರಹದಲ್ಲಿ ಜ್ವಾಲಾಮುಖಿಗಳಿಂದ ಬಿಡುಗಡೆಯಾದ ಅನಿಲವನ್ನು ಆಧರಿಸಿ ಸಂಶೋಧನೆ ಮಾಡಿದಾಗ ಮಾನವನ ವಾಸ ಇಲ್ಲಿ ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

    ನೀರಿನ ಪ್ರಮಾಣ ಹೇಗಿದೆ?
    ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳುವಂತೆ, ಶುಕ್ರ ಗ್ರಹದ ಒಳಭಾಗವು ಅತ್ಯಂತ ಶುಷ್ಕವಾಗಿದ್ದು, ವರದಿಯಂತೆ ಇದು ಯಾವತ್ತೂ ನೀರನ್ನು ಹೊಂದಿರಲೇ ಇಲ್ಲ ಎಂದು ತಿಳಿಸಿದೆ. ವಾತಾವರಣದಲ್ಲಿರುವ ರಾಸಾಯನಿಕವನ್ನು ಸಂಯೋಜನೆಯ ಪರಿಶೀಲನೆ ನಡೆಸಿದಾಗ, ಅದು ಜ್ವಾಲಾಮುಖಿ ಸ್ಫೋಟದಿಂದ ಬಿಡುಗಡೆಯಾದ ಅನಿಲ ಎಂದು ತಿಳಿದುಬಂದಿದೆ.

    ಈ ಜ್ವಾಲಾಮುಖಿ ಅನಿಲಗಳು ಕೇವಲ 6% ನೀರಿನ ಆವಿಯನ್ನು ಹೊಂದಿರುತ್ತವೆ. ಇದು ಭೂಮಿಯಿಂದ ಹೊರಸೂಸಲ್ಪಡುವ ಅನಿಲಕ್ಕಿಂತ ತೀವ್ರವಾಗಿ ಭಿನ್ನವಾಗಿದ್ದು, ಅದು 60% ನೀರಿನ ಆವಿ ಹೊಂದಿರುತ್ತದೆ. ಇದು ಗ್ರಹದ ಕೆಳಪದರಿನಲ್ಲಿ ನೀರಿನ ಕೊರತೆಯನ್ನು ಸೂಚಿಸುತ್ತದೆ.

    ಈ ಹಿಂದೆ ಗ್ರಹದಲ್ಲಿ ನೀರಿತ್ತಾ?
    ಒಂದು ಸಿದ್ಧಾಂತದ ಪ್ರಕಾರ, ಶತಕೋಟಿ ವರ್ಷಗಳ ಹಿಂದೆ ಗ್ರಹವು ಅದರ ಮೇಲ್ಮೈಯಲ್ಲಿ ನೀರಿನಿಂದ ಹಾಗೂ ಸಮಶೀತೋಷ್ಣ ಹವಾಮಾನದಿಂದ ಕೂಡಿತ್ತು ಎನ್ನಲಾಗಿತ್ತು. ಆದರೆ ಬಳಿಕ ಹಸಿರುಮನೆ ಪರಿಣಾಮಕ್ಕೆ ತುತ್ತಾಗಿ ಬಿಸಿ ಹವಾಮಾನಕ್ಕೆ ತಿರುಗಲಾರಂಭಿಸಿತು. ಇದು ಅಲ್ಲಿನ ನೀರಿನ ಪ್ರಮಾಣವನ್ನು ಕ್ರಮೇಣ ಕಡಿಮೆಯಾಗಿಸಿತು.

    ಈಗ ಶುಕ್ರ ಗ್ರಹದ ಸ್ಥಿತಿ ಹೇಗಿದೆ?
    ಶುಕ್ರ ಗ್ರಹದ ಹವಾಮಾನವು ವಿಪರೀತ ಉಷ್ಣತೆಯಿಂದ ಕೂಡಿದೆ. ಭೂಮಿಯ ತಾಪಮಾನಕ್ಕೆ ಹೋಲಿಸಿದರೆ ಅಲ್ಲಿನ ತಾಪಮಾನ 90 ಪಟ್ಟು ಹೆಚ್ಚಾಗಿದೆ. ಅಲ್ಲಿ 465 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಕೂಡಿರುತ್ತದೆ. ಮೊದಲಿನ ಸಂಶೋಧನೆಯ ಪ್ರಕಾರ ಶುಕ್ರ ಗ್ರಹದಲ್ಲಿನ ತಾಪಮಾನವು ದೀರ್ಘಕಾಲ ಹೀಗೆಯೇ ಇರುವುದಿಲ್ಲ ಎಂದು ನಂಬಿದ್ದರು ಆದರೆ ಕಾಲಾನಂತರದಲ್ಲಿ ಇದು ವಿಭಿನ್ನವಾಗಿ ಬದಲಾಗಲು ಪ್ರಾರಂಭವಾಯಿತು. ಇನ್ನೂ ಇದಕ್ಕೆ ವಿರುದ್ಧವಾಗಿ, ಸೂರ್ಯನಿಂದ ದೂರದಲ್ಲಿರುವ ಮಂಗಳ ಗ್ರಹವು ವಿಭಿನ್ನ ಕಥೆಯನ್ನು ಹೇಳುತ್ತದೆ. ಮಂಗಳ ಗ್ರಹವು ಶತಕೋಟಿ ವರ್ಷಗಳ ಹಿಂದೆ ಸಾಗರವನ್ನು ಹೊಂದಿರಬಹುದೆಂದು ಪುರಾವೆಗಳು ಸೂಚಿಸುತ್ತವೆ, ಜೊತೆಗೆ ಅದರ ಕೆಳಪದರದಲ್ಲಿ ನೀರು ಇರುವ ಸಾಧ್ಯತೆಯಿದೆ ಎಂದು ತಿಳಿಸುತ್ತದೆ.

    21ನೇ ಶತಮಾನದಲ್ಲಿ ವಿಜ್ಞಾನಿಗಳಿಗೆ ಶುಕ್ರದ ಪರಿಶೋಧನೆಯು ಪ್ರಮುಖ ಕೇಂದ್ರವಾಗಿದೆ. ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಶುಕ್ರನ ಭೌಗೋಳಿಕ ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು 2030ಕ್ಕೆ ಡಿಎವಿಐಎನ್‌ಸಿಐ ಮಿಷನ್ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಇನ್ನೂ ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಗ್ರಹವನ್ನು ಅಧ್ಯಯನ ಮಾಡಲು ಶುಕ್ರಯಾನ್ ಮಿಷನ್ ಎಂದೂ ಕರೆಯಲ್ಪಡುವ ಶುಕ್ರ ಆರ್ಬಿಟರ್ ಮಿಷನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

    ಈ ಸಂಶೋಧನೆಗಳ ಹೊರತಾಗಿಯೂ, ಶುಕ್ರ ಗ್ರಹವನ್ನು ಅಧ್ಯಯನ ಮಾಡುವುದರಿಂದ ಗ್ರಹಗಳ ಅಭಿವೃದ್ಧಿ ಮತ್ತು ಜೀವನಕ್ಕೆ ಅಗತ್ಯವಾದ ಪರಿಸ್ಥಿತಿಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಬಹುದು. ಇದಲ್ಲದೆ, ಶುಕ್ರ ಅಧ್ಯಯನದ ಫಲಿತಾಂಶಗಳು ನಮ್ಮ ಸೌರವ್ಯೂಹದ ಆಚೆಗಿನ ಗ್ರಹಗಳ ಸಂಶೋಧನೆಯ ಮೇಲೆ ಪ್ರಭಾವ ಬೀರುತ್ತವೆ.

  • ಶುಕ್ರ ಗ್ರಹ ಈಗ ಪಳಪಳ ಹೊಳೆಯುತ್ತಾನೆ ಕಣ್ತುಂಬಿಕೊಳ್ಳಿ

    ಶುಕ್ರ ಗ್ರಹ ಈಗ ಪಳಪಳ ಹೊಳೆಯುತ್ತಾನೆ ಕಣ್ತುಂಬಿಕೊಳ್ಳಿ

    ಉಡುಪಿ: ಬಾನಲ್ಲಿ ಬೆಳ್ಳಿ ಚುಕ್ಕಿಗಳ ನಡುವೆ ಶುಕ್ರ ಗ್ರಹ (Venus) ಈಗ ಅತ್ಯಂತ ಸುಂದರವಾಗಿ ಗೋಚರಿಸಲಿದೆ. ಸುಮಾರು 19 ತಿಂಗಳಿಗೊಮ್ಮೆ ಸಂಜೆಯ ಪಶ್ಚಿಮ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಸುಮಾರು 43 ಡಿಗ್ರಿ ಎತ್ತರದಲ್ಲಿ ಹೊಳೆಯುತ್ತಿದೆ.

    ಜುಲೈ ತಿಂಗಳ ಅಂತ್ಯದವರೆಗೂ ಶುಕ್ರ ಹೊಳೆಯುತ್ತಾ ಆಗಸ್ಟ್ ಪ್ರಾರಂಭದಲ್ಲಿ ಕಣ್ಮರೆಯಾಗುತ್ತದೆ. ಆಗಸ್ಟ್ 8 ರಿಂದ ಆಗಸ್ಟ್ 19 ರವರೆಗೆ ಸೂರ್ಯನಿಗೆ (Sun) ನೇರ ಬಂದು ಕಾಣದಾದಾಗ ಆ ವಿದ್ಯಾಮಾನವನ್ನು ಶುಕ್ರಾಸ್ತ ಎನ್ನಲಾಗುತ್ತದೆ. ನಂತರ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಶುಕ್ರನ ಗೋಚರವಾಗಲಿದೆ. ಮೇ 30 ರಿಂದ ಭೂಮಿಗೆ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ದಿಗಂತದೆಡೆಗೆ ಕೆಳಗಿಳಿಯುತ್ತಾ, ಪ್ರಭೆ ಹೆಚ್ಚಿಸಿಕೊಳ್ಳುತ್ತಾ ಜುಲೈ 7 ರಂದು ಅತಿ ಹೆಚ್ಚಿನ ಪ್ರಭೆಯಲ್ಲಿ ಕಂಗೊಳಿಸುತ್ತದೆ.

    ಶುಕ್ರ ಈಗ ಭೂಮಿಯಿಂದ (Earth) ಸುಮಾರು 15 ಕೋಟಿ ಕಿ.ಮೀ ದೂರದಿಂದ ಆಗಸ್ಟ್ 8ರ ಹೊತ್ತಿಗೆ 4 ಕೋಟಿ ಕಿ.ಮೀ ಗೆ ಸಮೀಪಿಸುತ್ತದೆ. ಹೀಗೆ ಶುಕ್ರ ಗ್ರಹ ಕಾಣಲು ಪ್ರಮುಖ ಕಾರಣ ಬುಧ ಗ್ರಹದಂತೆ ಸೂರ್ಯ ಭೂಮಿಯ ದೂರಕ್ಕಿಂತ ಕಡಿಮೆ ದೂರದಲ್ಲಿ ಇರುವುದು. ಸೂರ್ಯನಿಂದ ಬುಧ ಸುಮಾರು 6 ಕೋಟಿ, ಶುಕ್ರ 11 ಕೋಟಿ ಕಿ.ಮೀ ದೂರ ಆದರೆ ಭೂಮಿ 15 ಕೋಟಿ ಕಿ.ಮೀ ದೂರವಿದೆ. ಹೀಗಾಗಿ ಸೌರವ್ಯೂಹದಲ್ಲಿ ಭೂಮಿಗಿಂತ ಒಳಗಿರುವ ಈ ಎರಡು ಗ್ರಹಗಳು ರಾತ್ರಿ ಇಡೀ ಕಾಣುವುದಿಲ್ಲ. ಕಾಣುವುದೇ ಪಶ್ಚಿಮ ಆಕಾಶದಲ್ಲಿ ಸಂಜೆ ಹಾಗೂ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಮಾತ್ರ. ಇದನ್ನೂ ಓದಿ: ಬ್ರಿಜ್‌ ಭೂಷಣ್‌ ತೆಗೆದು ಆ ಸ್ಥಾನಕ್ಕೆ ಮಹಿಳೆ ನೇಮಿಸಿ – ಅಮಿತ್‌ ಶಾಗೆ ಕುಸ್ತಿಪಟುಗಳ ಬೇಡಿಕೆ

    ಸಂಜೆ ಆಕಾಶದಲ್ಲಿ ಸೂರ್ಯಾಸ್ತದ ನಂತರ ಕೆಲ ಗಂಟೆ, ಹೆಚ್ಚೆಂದರೆ ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಹಾಗೂ ಬುಧ 27 ಡಿಗ್ರಿ ಎತ್ತರದಲ್ಲಿ ಮತ್ತೆ ಕೆಲ ಸಮಯ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಕಾಣಿಸುತ್ತದೆ. ಸೂರ್ಯನಿಂದ ಶುಕ್ರ ಸುಮಾರು 11 ಕೋಟಿ ಕಿ.ಮೀ ಒಂದೇ ದೂರದಲ್ಲಿದೆಯಾದರೂ ಭೂಮಿಯಿಂದ ಯಾವಾಗಲೂ ಒಂದೇ ದೂರದಲ್ಲಿ ಇರುವುದಿಲ್ಲ. 19 ತಿಂಗಳಿಗೊಮ್ಮೆ ಅತಿ ಸಮೀಪ ದೂರ 4 ಕೋಟಿ ಕಿ.ಮೀ (ಆಗಸ್ಟ್ 13 ಇನ್ಫೀರಿಯರ್ ಕಂಜಂಕ್ಷನ್) ನಂತರ ಜನವರಿ 2025 ರಲ್ಲಿ ಅತ್ಯಂತ ದೂರ 26 ಕೋಟಿ ಕಿ.ಮೀ (ಸುಪೀರಿಯರ್ ಕಂಜಂಕ್ಷನ್) ಇರುತ್ತದೆ ಎಂದು ಹಿರಿಯ ಭೌತಶಾಸ್ತ್ರ ಉಪನ್ಯಾಸಕ ಎಪಿ ಭಟ್ ಮಾಹಿತಿ ನೀಡಿದ್ದಾರೆ.

    ಗ್ರಹಗಳಲ್ಲಿ ಬರಿಗಣ್ಣಿಗೆ ಶುಕ್ರನೇ ಚೆಂದ. ಸುಮಾರು 95% ಇಂಗಾಲದ ಆಕ್ಸೈಡುಗಳ ವಾತಾವರಣ ಸ್ವಲ್ಪ ರಂಜಕದ ಡೈಆಕ್ಸೈಡುಗಳಿಂದ ಅತಿ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿ ಫಲಿಸುವುದರಿಂದ ಶುಕ್ರ ಪಳಪಳ ಹೊಳೆಯುತ್ತಾನೆ. ದೂರದರ್ಶಕದಲ್ಲೀಗ ಶುಕ್ರ ಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರ ಬಿದಿಗೆ ಚಂದ್ರನಿಗಿಂತ ಕ್ಷೀಣವಾಗುತ್ತಾನೆ ಎಂದು ಡಾ. ಎಪಿ ಭಟ್ ವಿವರಿಸಿದ್ದಾರೆ. ಇದನ್ನೂ ಓದಿ: ಗೋ ಹತ್ಯೆ ನಿಷೇಧ ಬಗ್ಗೆ ಸರ್ಕಾರದಿಂದ ಸಮೀಕ್ಷೆ: ಸತೀಶ್ ಜಾರಕಿಹೊಳಿ