Tag: venuru

  • KSRP ಬಸ್ಸಿಗೆ ಸವರಿ ಬೈಕಿಗೆ ಗುದ್ದಿ ಲಾರಿ ಪಲ್ಟಿ- ತಂದೆ ಬಲಿ, ಪುತ್ರಿಯರಿಗೆ ಗಂಭೀರ ಗಾಯ!

    KSRP ಬಸ್ಸಿಗೆ ಸವರಿ ಬೈಕಿಗೆ ಗುದ್ದಿ ಲಾರಿ ಪಲ್ಟಿ- ತಂದೆ ಬಲಿ, ಪುತ್ರಿಯರಿಗೆ ಗಂಭೀರ ಗಾಯ!

    ಮಂಗಳೂರು: ಕೋಳಿ ಸಾಗಾಟದ ಲಾರಿ ಗುದ್ದಿ ಬೈಕ್ ಸವಾರರೊಬ್ಬರು ದಾರುಣವಾಗಿ ಬಲಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.

    ಮೃತ ದುರ್ದೈವಿ ಬೈಕ್ ಸವಾರನನ್ನು ಕರಿಮಣೇಲು ನಿವಾಸಿ ಉದಯ್ ಜೈನ್(40) ಎಂದು ಗುರುತಿಸಲಾಗಿದೆ. ಈ ಘಟನೆ ಬೆಳಗ್ಗಿನ ಜಾವ 7.30 ಕ್ಕೆ ಘಟನೆ ನಡೆದಿದ್ದು, ಇದೀಗ ಘಟನೆಯ ಸಿಸಿಟಿವಿ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಇಂದು ಬೆಳಗ್ಗೆ ಕೋಳಿ ಸಾಗಾಟದ ಲಾರಿ ಬೆಳ್ತಂಗಡಿಯಿಂದ ವೇಣೂರು ಕಡೆ ಚಲಿಸುತ್ತಿದ್ದ ವೇಳೆ ವಿರುದ್ಧ ದಿಕ್ಕಿನಲ್ಲಿ ತೆರಳಿ ನೇರವಾಗಿ ಬೈಕ್ ಗೆ ಗುದ್ದಿದೆ. ಈ ವೇಳೆ ಬೈಕ್ ಸವಾರ ಮತ್ತು ಹಿಂಬದಿ ಸವಾರರು ಕೂಡ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಲಾರಿ ಅವರ ಮೇಲೆ ಹರಿದಿದೆ. ಘಟನೆಯಿಂದಾಗಿ ಬೈಕ್ ಸವಾರ ಉದಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಹಿಂಬದಿಯಲ್ಲಿ ಕುಳಿತಿದ್ದ ಉದಯ್ ಪುತ್ರಿಯರಿಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.

    ಕೋಳಿ ಸಾಗಾಟ ಮಾಡೋ ಲಾರಿ ಚಾಲಕನ ಅಜಾಗರೂಕತೆಯಿಂದಾಗಿ ಈ ಅವಘಡ ಸಂಭವಿಸಿದೆ. ಲಾರಿ ಬರುತ್ತಿದ್ದ ಇನ್ನೊಂದು ಬದಿಯಲ್ಲಿ ಅಂದರೆ ರಸ್ತೆ ಮಧ್ಯದಲ್ಲೇ ಕೆಎಸ್‍ಆರ್ ಪಿ ವಾಹನ ನಿಂತಿದ್ದು, ಹೀಗಾಗಿ ಚಾಲಕ ಬೈಕ್ ಸವಾರನ್ನು ಗಮನಿಸದೇ ಇರುವುದು ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದ ದೃಶ್ಯ ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಘಟನೆಯ ತೀವ್ರತೆಗೆ ಸಾಕ್ಷಿಯಾಗಿದೆ. ಘಟನೆ ನಡೆದ ಕೂಡಲೇ ಸಾರ್ವಜನಿಕರು ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸದ್ಯ ಈ ಸಂಬಂಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=Z5ikQOQ5fTw

  • ಎಚ್1ಎನ್1ಗೆ ಬೆಳ್ತಂಗಡಿಯ ಬಾಣಂತಿ ಬಲಿ- ಅನಾಥವಾಯ್ತು 25 ದಿನದ ಕಂದಮ್ಮ

    ಎಚ್1ಎನ್1ಗೆ ಬೆಳ್ತಂಗಡಿಯ ಬಾಣಂತಿ ಬಲಿ- ಅನಾಥವಾಯ್ತು 25 ದಿನದ ಕಂದಮ್ಮ

    ಮಂಗಳೂರು: ಮಾಹಾ ಮಾರಿ ಎಚ್1ಎನ್1 ಖಾಯಿಲೆಗೆ ಬಾಣಂತಿ ಮಹಿಳೆ ಬಲಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವೇಣೂರು ನಿವಾಸಿ 27 ವರ್ಷದ ಪುಷ್ಪಾವತಿ ಕಳೆದ ಒಂದು ತಿಂಗಳಿನಿಂದ ಎಚ್1ಎನ್1 ಖಾಯಿಲೆಗೆ ತುತ್ತಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

    8 ತಿಂಗಳ ಗರ್ಭಿಣಿಯಾಗಿದ್ದ ಪುಷ್ಪಾವತಿ ಹೊಟ್ಟೆಯಲ್ಲಿದ್ದ ಮಗುವನ್ನು ಸಿಸೇರಿಯನ್ ಮೂಲಕ ಹೊರ ತೆಗೆಯಲಾಗಿತ್ತು. ಆದ್ರೆ ತೀವ್ರ ಅನಾರೋಗ್ಯಕ್ಕೀಡಾಗಿ ಪುಷ್ಪಾವತಿ ಮೃತರಾಗಿದ್ದಾರೆ. ಹೀಗಾಗಿ 25 ದಿನದ ಪುಟ್ಟ ಕಂದಮ್ಮ ಅನಾಥವಾಗಿದೆ. ಸದ್ಯ ಮಗು ಆರೋಗ್ಯವಾಗಿದ್ದು ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಶುಶ್ರೂಷೆಯಲ್ಲಿದೆ.

    ವೇಣೂರು ಗ್ರಾಮ ಪಂಚಾಯತ್ ನಲ್ಲಿ ಡಾಟಾ ಎಡಿಟರ್ ಆಗಿದ್ದ ಪುಷ್ಪಾವತಿ ಗೆ ಎಚ್1ಎನ್1 ಉಲ್ಬಣವಾಗಿ, ಶ್ವಾಸಕೋಶದಲ್ಲಿ ಸಮಸ್ಯೆಯೂ ಕಂಡುಬಂದಿತ್ತು. ಕಡು ಬಡತನದ ನಡುವೆಯೂ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರೂ ಪುಷ್ಪಾವತಿ ಮೃತಪಟ್ಟಿದ್ದಾರೆ.