Tag: venugopal

  • ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ಯುವಬ್ರಿಗೇಡ್ ಕಾರ್ಯಕರ್ತನ ಪತ್ನಿ ಆರೋಪ

    ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ಯುವಬ್ರಿಗೇಡ್ ಕಾರ್ಯಕರ್ತನ ಪತ್ನಿ ಆರೋಪ

    ಮೈಸೂರು: ನನ್ನ ಗಂಡ ಹತ್ತು ಜನ ಬಂದರೂ ಹೆದರಲ್ಲ. ನನ್ನ ಗಂಡನ ಹತ್ಯೆ ವೈಯಕ್ತಿಕ ಕಾರಣಕ್ಕೆ ನಡೆದಿಲ್ಲ. ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ ಎಂದು ಯುವ ಬ್ರಿಗೇಡ್ (Yuva Brigade) ಕಾರ್ಯಕರ್ತ ದಿವಂಗತ ವೇಣುಗೋಪಾಲ್ (L.Venugopal) ಪತ್ನಿ ಪೂರ್ಣಿಮಾ ಆರೋಪಿಸಿದ್ದಾರೆ.

    ಮೈಸೂರಿನ (Mysuru) ಟಿ.ನರಸೀಪುರದಲ್ಲಿ (T.Narasipura) ಜುಲೈ 8ರಂದು ನಡೆದ ಹನುಮ ಜಯಂತಿ (Hanuma Jayanthi) ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದ್ದು, ಜಗಳದಲ್ಲಿ ಯುವಬ್ರಿಗೇಡ್ ಸಕ್ರಿಯ ಕಾರ್ಯಕರ್ತನಾಗಿದ್ದ ವೇಣುಗೋಪಾಲ್ ನಾಯಕ್ ಅವರನ್ನು ದುಷ್ಕರ್ಮಿಗಳು ಬಾಟಲಿಯಿಂದ ಇರಿದು ಹತ್ಯೆಗೈದಿದ್ದರು. ಇದನ್ನೂ ಓದಿ: ಕೇಂದ್ರ ಕೊಡುವ ಅಕ್ಕಿಯಲ್ಲೂ ಕಡಿತ; ಅನ್ನಭಾಗ್ಯವಲ್ಲ ಇದು ಕನ್ನ ಭಾಗ್ಯ – ಬೊಮ್ಮಾಯಿ

    ಈ ಕುರಿತು ಮಾತನಾಡಿದ ವೇಣುಗೋಪಾಲ್ ಪತ್ನಿ, ನಾನು, ವೇಣುಗೋಪಾಲ್ ಪ್ರೀತಿಸಿ ಮದುವೆ ಆಗಿದ್ದೆವು. ನಾವು ಮೂರು ವರ್ಷಗಳಿಂದ ಹನುಮ ಜಯಂತಿ ಆಚರಣೆ ಮಾಡುತ್ತಿದ್ದೇವೆ. ನನ್ನ ಗಂಡನ ಬಳಿ ಹಣ ಇಲ್ಲ, ಅಧಿಕಾರ ಇಲ್ಲ. ಆದರೂ ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಿದ್ದೆವು. ಅದನ್ನು ಸಹಿಸದೆ ಕೊಲೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು

    ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ಇಲ್ಲವಾದರೇ ನಾನು ನನ್ನ ಮಗಳು, ಗಂಡ ಸತ್ತಂತೆಯೇ ಸಾಯುತ್ತೇವೆ. ಇಂದು ನನ್ನ ಗಂಡನನ್ನು ಸಾಯಿಸಿದ್ದಾರೆ. ಮುಂದಿನ ವರ್ಷ ನಾನು ಹನುಮ ಜಯಂತಿ ಮಾಡುತ್ತೇನೆ. ಆಗ ನನ್ನನ್ನು ಸಾಯಿಸುತ್ತಾರೆ. ಅದರ ಮುಂದಿನ ವರ್ಷ ನನ್ನ ಮಗಳು ಹನುಮ ಜಯಂತಿ ಮಾಡಿದರೆ ಆಗ ಅವಳನ್ನೂ ಸಾಯಿಸುತ್ತಾರೆ. ಅಲ್ಲಿಗೆ ಹಿಂದೂ ಧರ್ಮವೂ ಸಾಯುತ್ತದೆ. ನನ್ನ ಗಂಡನ ಏಳಿಗೆ ಸಹಿಸದೆ ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ದೇಶವ್ಯಾಪಿ ಮುಂಗಾರು ಕುಂಠಿತ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಾಥಮಿಕ ಮಾಹಿತಿ ಇಲ್ಲದೇ ಸೂಲಿಬೆಲೆ ಸುಳ್ಳು ಹೇಳ್ತಿದ್ದಾರೆ: ಬೋಸ್ ಕಿಡಿ

    ಪ್ರಾಥಮಿಕ ಮಾಹಿತಿ ಇಲ್ಲದೇ ಸೂಲಿಬೆಲೆ ಸುಳ್ಳು ಹೇಳ್ತಿದ್ದಾರೆ: ಬೋಸ್ ಕಿಡಿ

    ಮೈಸೂರು: ಯುವ ಬ್ರಿಗೇಡ್ (Yuva Brigade) ಸಂಚಾಲಕ ವೇಣುಗೋಪಾಲ್ (Venugopal Murder Case) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆಯವರು ಪ್ರಾಥಮಿಕ ಮಾಹಿತಿ ಇಲ್ಲದೇ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮಹದೇವಪ್ಪ ಪುತ್ರ ಸುನೀಲ್ ಬೋಸ್ (Sunil Bose) ತೀಕ್ಷ್ಣ ತಿರುಗೇಟು ನೀಡಿದ್ದಾರೆ.

    ವೇಣುಗೋಪಾಲ್ ಹತ್ಯೆಯ ಹಿಂದೆ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಕೈವಾಡ ಇದೆ ಎಂಬ ಚಕ್ರವರ್ತಿ (Chakravarti Sulibele) ಆರೋಪಕ್ಕೆ ಪ್ರತಿಕ್ರಿಯಿಸಿದ ಬೋಸ್, ಚಕ್ರವರ್ತಿ ಸೂಲಿಬೆಲೆಗೆ ತಲೆ ಸರಿ ಇಲ್ಲ. ಅವರಿಗೆ ಮೊದಲು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯತೆ ಇದೆ. ಸುಳ್ಳಿನಿಂದಲೇ ಜೀವನ ಕಟ್ಟಿಕೊಂಡಿರುವ ವ್ಯಕ್ತಿ ಅವರು. ಈ ಕೊಲೆ ಪ್ರಕರಣದಲ್ಲಿಯೂ ಸುಳ್ಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕೊಲೆ ವಿಚಾರದಲ್ಲಿ ಸೂಲಿಬೆಲೆಗೆ ಪ್ರಾಥಮಿಕ ಮಾಹಿತಿ ಇಲ್ಲ. ಸತ್ತಿರುವ ಯುವಕ ನಾಯಕ ಸಮುದಾಯದ ವ್ಯಕ್ತಿ. ಆದರೆ ಸೂಲಿಬೆಲೆ ಅವರನ್ನ ದಲಿತ ಸಮುದಾಯ ಎಂದು ಸುಳ್ಳು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ವೈಯಕ್ತಿಕ ವಿಚಾರಕ್ಕೆ ಮಾಡುವ ಕೊಲೆಗೆ ಒಬ್ಬ ವ್ಯಕ್ತಿ ಅಥವಾ ಪಕ್ಷ ಹೇಗೆ ಹೊಣೆಗಾರರಾಗುತ್ತಾರೆ. ವೈಯಕ್ತಿಕ ಗಲಭೆಗಳು, ಕೃತ್ಯಗಳಿಗೆ ನಾವು ಹೊಣೆಗಾರರಾಗಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತನೊಬ್ಬ ಈ ರೀತಿ ಘಟನೆಯಲ್ಲಿ ಭಾಗಿಯಾದ್ರೆ ಅದರ ಹೊಣೆಯನ್ನ ಬಿಜೆಪಿ ಹೊರುತ್ತಾ..?. ಇಂತಹ ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಪಕ್ಷದ ಅನೇಕ ಕಾರ್ಯಕರ್ತರು ನಮ್ಮ ಜೊತೆ ಫೋಟೋ ತೆಗೆಸಿಕೊಂಡಿರುತ್ತಾರೆ. ನಾನು ಈ ಭಾಗದ ಮುಖಂಡ. ಅವರು ಮಾಡುವ ವೈಯಕ್ತಿಕ ತಪ್ಪಿಗೆ ನಾವು ಹೇಗೆ ಪ್ರೇರಣೆಯಾಗುತ್ತೇವೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವೇಣುಗೋಪಾಲ್‌ ಹತ್ಯೆಯ ಹಿಂದೆ ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಕೈವಾಡ: ಸೂಲಿಬೆಲೆ

    ಪ್ರಕರಣದ 4ನೇ ಆರೋಪಿ ಬಿಜೆಪಿ (BJP) ಪಾಲಿಕೆ ಸದಸ್ಯೆಯ ತಮ್ಮ. ಇದನ್ನು ನೋಡಿ ಬಿಜೆಪಿಯವರೇ ಹೇಳಿಕೊಟ್ಟಿದ್ದಾರೆ ಎಂದು ನಾನು ಪ್ರಶ್ನಿಸಿದರೆ ಅದು ಹೇಗಿರುತ್ತದೆ ಹೇಳಿ. ನೀನು ಕೊಲೆ ಮಾಡು, ನಾವು ರಾಜಕಾರಣ ಮಾಡುತ್ತೇವೆ ಎಂದು ಆತನಿಗೆ ಹೇಳಿಕೊಟ್ಟಿದ್ರಾ ಎಂದು ನಾನು ಪ್ರಶ್ನಿಸುತ್ತೇನೆ. ಈ ಪ್ರಶ್ನೆಗೆ ಅವರು ಉತ್ತರಿಸಲು ಸಾಧ್ಯನಾ..?. ಸಾವಿನಲ್ಲಿ ರಾಜಕಾರಣ ಯಾರೂ ಮಾಡಬಾರದು. ಬಿಜೆಪಿಯವರು ಶವದ ಮೇಲೆ ರಾಜಕಾರಣ ಮಾಡಲು ಹೊರಟಿದ್ದಾರೆ. ಬಿಜೆಪಿಗೆ ಸದಾ ಕಾಲ ಇಂತ ಕೊಲೆ ಗಲಭೆಗಳ ಬಗ್ಗೆ ಆಸಕ್ತಿ ಜಾಸ್ತಿ ಎಂದು ಗರಂ ಆದರು.

    ನಾನು ಈ ಕೊಲೆಯನ್ನ ನಾನು ಖಂಡಿಸುತ್ತೇನೆ. ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಮ್ಮ ತಂದೆ ಮಹದೇವಪ್ಪ ಕೂಡ ಸೂಚನೆ ನೀಡಿದ್ದಾರೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೇಣುಗೋಪಾಲ್‌ ಹತ್ಯೆಯ ಹಿಂದೆ ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಕೈವಾಡ: ಸೂಲಿಬೆಲೆ

    ವೇಣುಗೋಪಾಲ್‌ ಹತ್ಯೆಯ ಹಿಂದೆ ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಕೈವಾಡ: ಸೂಲಿಬೆಲೆ

    ಬೆಂಗಳೂರು: ಟಿ ನರಸೀಪುರದಲ್ಲಿ ವೇಣುಗೋಪಾಲ್‌ (Venugopal) ಹತ್ಯೆಯ ಹಿಂದೆ ಸಚಿವ ಮಹದೇವಪ್ಪ (Mahadevappa) ಅವರ ಪುತ್ರ ಸುನಿಲ್‌ ಬೋಸ್‌ ಕೈವಾಡವಿದೆ ಎಂದು ಯುವ ಬ್ರಿಗೇಡ್‌ (Yuva Brigade) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ನೇರವಾಗಿ ಆರೋಪ ಮಾಡಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ವೇಣುಗೋಪಾಲ್ ಹತ್ಯೆ ಹಿಂದೆ ಕಾಂಗ್ರೆಸ್ ಸರ್ಕಾರದ (Congress Government) ಕೈವಾಡ ಇದೆ. ಮಹದೇವಪ್ಪ ಮಗ ಸುನೀಲ್‍ಬೋಸ್ ತನ್ನ ಸಹಚರರಿಂದ ಈ ಕೆಲಸ ಮಾಡಿಸಿದ್ದಾರೆ ಎಂದು ವೇಣುಗೋಪಾಲ್ ಮನೆಯವರು, ಸ್ನೇಹಿತರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

     

    ವೇಣುಗೋಪಾಲ್‌ ಮೃತದೇಹವನ್ನು ನೋಡಲು ತೆರಳಿದ ಮೊದಲ ದಿನವೇ ಟಿ ನರಸಿಪುರದ ಸ್ನೇಹಿತರು ಈ ಕೃತ್ಯವನ್ನು ಸುನಿಲ್‌ ಬೋಸ್‌ ಕಡೆಯವರು ಮಾಡಿದ್ದಾರೆ ಎಂದು ಹೇಳಿದ್ದರು. ಆದರೆ ಅಧಿಕೃತ ದಾಖಲೆಗಳು ಇಲ್ಲದೇ ಹೇಳುವುದು ಸರಿಯಲ್ಲ ಎಂದು ನಾನು ಹೇಳಲಿಲ್ಲ. ಆದರೆ ಈಗ ಸುನಿಲ್‌ ಬೋಸ್‌ ಜೊತೆಗೆ ಆರೋಪಿಗಳ ಇರುವ ಸಂಬಂಧ, ಫೋಟೋಗಳು ಎಲ್ಲವನ್ನು ನೋಡಿದಾಗ ಇದು ದೃಢವಾಗುತ್ತದೆ. ಹತ್ಯೆ ಮಾಡಿದ ಆರೋಪಿಗಳು ಕಾಂಗ್ರೆಸ್‌ ಪಕ್ಷ ಕಾರ್ಯಕರ್ತರು ಎಂದು ಹೇಳಿದರು.

    ದಲಿತ ವರ್ಗಕ್ಕೆ ಸೇರಿದ್ದ ವೇಣುಗೋಪಾಲ್‌ ಆರಂಭದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಯುವ ಬ್ರಿಗೇಡ್‌ ಸಂಪರ್ಕಕ್ಕೆ ಬಂದ ಬಳಿಕ ತಂಡವನ್ನು ಕಟ್ಟಿ ಕೆರೆ ಸ್ವಚ್ಛಗೊಳಿಸಿ ಬಾಳೆ ಮಂಡಿ ಹಾಕುವ ಮಟ್ಟಕ್ಕೆ ಬೆಳೆದಿದ್ದರು. ಅಷ್ಟೇ ಅಲ್ಲದೇ ತಾಲೂಕಿನ ಯುವ ಬಿಗ್ರೇಡ್‌ ಸಂಚಾಲಕರಾಗಿದ್ದರು. ವೇಣುಗೋಪಾಲ್‌ ಬೆಳವಣಿಗೆಯನ್ನು ಸಹಿಸದೇ ಅವರನ್ನು ಸುನಿಲ್‌ ಬೋಸ್‌ ಕಡೆಯವರು ಹತ್ಯೆ ಮಾಡಿದ್ದಾರೆ ಎಂದು ದೂರಿದರು.

    ಕಳೆದ ವರ್ಷ ಹನುಮಾನ್‌ ಜಯಂತಿ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದ್ದರೂ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದರು. ಈ ಬಾರಿಯೂ ಕಾರ್ಯಕ್ರಮಕ್ಕೆ ಅಡ್ಡಿ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಪುನಿತ್‌ ಫೋಟೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ವೇಣುಗೋಪಾಲ್‌ ಪುನೀತ್‌ ಅವರ ಅಭಿಮಾನಿಯಾಗಿದ್ದರು. ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿದರೆ ಸತ್ಯಾಂಶ ಹೊರ ಬರಬಹದು ಎಂದರು.

    ಇದೇ ವೇಳೆ ನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ಸಹೋದರ 4ನೇ ಆರೋಪಿ ಆಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಕೃತ್ಯ ಯಾರೇ ಮಾಡಿದರೂ ಅದು ತಪ್ಪು. ಬಿಜೆಪಿ ಪಕ್ಷದ ಸದಸ್ಯನಾಗಿದ್ದರೆ ಆತನನ್ನು ವಜಾ ಮಾಡಲಿ, ಅದೇ ರೀತಿಯಾಗಿ ಸಂಪುಟದಿಂದ ಮಹದೇವಪ್ಪ ಅವರನ್ನು ಕೈಬಿಡಲಿ. ಈ ಮೂಲಕ ಎಲ್ಲಾ ಕಾಂಗ್ರೆಸ್‌ ನಾಯಕರಿಗೆ ಸಿದ್ದರಾಮಯ್ಯ ಒಂದು ಸಂದೇಶ ಕಳುಹಿಸಲಿ. ಒಂದು ವೇಳೆ ಈಗಲೇ ಕ್ರಮ ಕೈಗೊಳ್ಳದೇ ಇದ್ದರೆ ಮುಂದೆ ಮತ್ತಷ್ಟು ಯುವ ಜನರ ಹತ್ಯೆಯಾಗಬಹುದು. ಮತದಾನಕ್ಕೆ ಹಾಕಿದ ಶಾಯಿ ಇನ್ನೂ ಅಳಿಸಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು 60 ದಿನ ಆಗಿಲ್ಲ. ಇನ್ನು 60 ತಿಂಗಳಲ್ಲಿ ಎಷ್ಟು ಮಂದಿ ಬಲಿಯಾಗಬೇಕು ಎಂದು ಸೂಲಿಬೆಲೆ ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೇಣುಗೋಪಾಲ್‌ ಫುಲ್‌ ಕ್ಲಾಸ್‌ – ಪಾದಯಾತ್ರೆ ಮುಗಿಯುವ ಮೊದಲೇ ಕಾಲ್ಕಿತ್ತ ಜಮೀರ್‌

    ವೇಣುಗೋಪಾಲ್‌ ಫುಲ್‌ ಕ್ಲಾಸ್‌ – ಪಾದಯಾತ್ರೆ ಮುಗಿಯುವ ಮೊದಲೇ ಕಾಲ್ಕಿತ್ತ ಜಮೀರ್‌

    ಮಂಡ್ಯ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌(KC Venugopal) ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಂತೆ ಭಾರತ್‌ ಜೋಡೋ ಪಾದಯಾತ್ರೆ ಮುಗಿಯುವ ಮೊದಲೇ ಸ್ಥಳದಿಂದ ಚಾಮರಾಜನಗರ ಶಾಸಕ ಜಮೀರ್ ಅಹ್ಮದ್‌ ಕಾಲ್ಕಿತ್ತಿದ್ದಾರೆ.

    ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಜಮೀರ್‌ ಅಹ್ಮದ್‌ ಇಂದಿನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಜಮೀರ್‌ ಅಹ್ಮದ್‌ಗೆ ಇಂದು ಕೆಪಿಸಿಸಿ 5 ಸಾವಿರ ಮಂದಿಯನ್ನು ಕರೆ ತರುವ ಟಾರ್ಗೆಟ್‌ ನೀಡಿತ್ತು.

     

    ಕೆಪಿಸಿಸಿ ಸೂಚನೆ ನೀಡಿದ್ದರೂ 4-5 ಕಾರಿನಲ್ಲಿ ಜಮೀರ್‌ ಬೆಂಬಲಿಗರ ಜೊತೆ ಆಗಮಿಸಿದ್ದರು. ಕಡಿಮೆ ಸಂಖ್ಯೆಯ ಬೆಂಬಲಿಗರ ಜೊತೆ ಆಗಮಿಸಿದ್ದನ್ನು ವೇಣುಗೋಪಾಲ್‌ಗೆ ರಾಜ್ಯದ ಕಾಂಗ್ರೆಸ್‌ ನಾಯಕರು ತಿಳಿಸಿದ್ದಾರೆ. ಇದನ್ನೂ ಓದಿ: ಹೇ.. ಇದು ಬೆಂಗಳೂರು ಅಲ್ಲ – ನಲಪಾಡ್‌ಗೆ ಮಂಡ್ಯ ಕಾರ್ಯಕರ್ತನಿಂದ ತರಾಟೆ

    ವಿಚಾರ ಗೊತ್ತಾಗಿ ವೇಣುಗೋಪಾಲ್‌ ಜಮೀರ್‌ ಬಳಿ, ಎಷ್ಟು ಜನರನ್ನು ಕರೆ ತಂದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಕಡಿಮೆ ಜನ ಬಂದಿದ್ದಕ್ಕೆ ಜಮೀರ್‌ ಸಮಜಾಯಿಷಿ ಕೊಡಲು ಮುಂದಾದಾಗ ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವೇಣುಗೋಪಾಲ್‌ ಬಯ್ಯುತ್ತಿದ್ದಂತೆ ಪಾದಯಾತ್ರೆ ಮುಗಿಯುವ ಮೊದಲೇ ಸ್ಥಳದಿಂದ ಜಮೀರ್‌ ಕಾಲ್ಕಿತ್ತಿದ್ದಾರೆ.

    ಪ್ರತಿದಿನ ಶಾಸಕರಿರುವ ಕ್ಷೇತ್ರಗಳಿಗೆ 5 ಸಾವಿರ ಜನರನ್ನು ಕರೆ ತರುವಂತೆ ಕೆಪಿಸಿಸಿ ಟಾರ್ಗೆಟ್‌ ನೀಡಿದೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮುಂದೂಡಲಾಗಿದ್ದ ಜನೋತ್ಸವ ಕಾರ್ಯಕ್ರಮ ಇದೇ 8 ರಂದು ನಡೆಯಲಿದೆ: ವೇಣುಗೋಪಾಲ್

    ಮುಂದೂಡಲಾಗಿದ್ದ ಜನೋತ್ಸವ ಕಾರ್ಯಕ್ರಮ ಇದೇ 8 ರಂದು ನಡೆಯಲಿದೆ: ವೇಣುಗೋಪಾಲ್

    ಕೋಲಾರ: ಬಿಜೆಪಿ ಪಕ್ಷದ ಕಾರ್ಯಕರ್ತನ ಕೊಲೆಯಿಂದ ಮುಂದೂಡಲಾಗಿದ್ದ ಜನೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ. ವೇಣುಗೋಪಾಲ್ ತಿಳಿಸಿದರು.

    ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ 2 ವರ್ಷ, ಬಸವರಾಜ ಬೊಮ್ಮಾಯಿ ನೇತೃತ್ವದ 1 ವರ್ಷದ ಸಾಧನೆಯನ್ನು ಕಾರ್ಯಕರ್ತರಿಗೆ ತಿಳಿಸುವುದು ಈ ಜನೋತ್ಸವದ ಉದ್ದೇಶವಾಗಿದೆ. ರಾಜ್ಯದಲ್ಲಿ ಹಲವಾರು ಸಂಕಷ್ಟದ ಸವಾಲುಗಳ ಮಧ್ಯೆಯೂ ಉತ್ತಮ ಆಡಳಿತ ನೀಡಿದ್ದಾರೆ. ಅದಕ್ಕಾಗಿ ಕಾರ್ಯಕರ್ತರಿಗೆ ಸರ್ಕಾರಗಳ ಯೋಜನೆಗಳ ಕುರಿತು ತಿಳಿಸಲು ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಸಿಇಟಿ ರ್‍ಯಾಂಕ್ ರದ್ದು- ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಕೊರೊನಾವನ್ನು ಎದುರಿಸಲಾಯಿತು. ಅದರಂತೆ ವಿಶೇಷ ಪ್ಯಾಕೇಜ್ ಘೋಷಣೆ, ಆರೋಗ್ಯ ವ್ಯವಸ್ಥೆಯನ್ನು ಪ್ರಬಲವಾಗಿ ಮಾಡಿದ್ದು, ಸಾಮಾನ್ಯ ಜನತೆಗೆ ಮೂಲಸೌಕರ್ಯಗಳನ್ನು ಒದಗಿಸಲಾಯಿತು. ರೈತರು ಸೇರಿದಂತೆ ಕಾರ್ಮಿಕರು ಮಹಿಳೆಯರಿಗೆ ಸೌಲಭ್ಯಗಳನ್ನು ಒದಗಿಸಲಾದೆ. ಅತ್ಯುತ್ತಮ ಆರೋಗ್ಯ ಸೇವೆಯಿಂದ ಇಲಾಖೆ ಪ್ರಶಂಸೆಗೆ ಒಳಪಟ್ಟಿತ್ತು. ಕೋವಿಡ್ ಸಂದರ್ಭದಲ್ಲಿ 10 ಲಕ್ಷ ಲಸಿಕಾ ಕಾರ್ಯವನ್ನೂ ಯಶಸ್ವಿಯಾಗಿ ನೀಡಲಾಗಿದೆ. ಬಿಪಿಎಲ್ ಕಾರ್ಡುದಾರರಿಗೆ 2 ವರ್ಷಗಳ ಕಾಲ ಅಕ್ಕಿ, ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ ಕೇಸ್‍ಗೆ ಟ್ವಿಸ್ಟ್ – ಲಂಚ ಪಡೆದ ಬಿಜೆಪಿ ಶಾಸಕರ ಆಡಿಯೋ ವೈರಲ್

    ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು 4 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸುಮಾರು ಎರಡೂವರೆ ಲಕ್ಷ ಮಂದಿ ಸೇರಿದಂತೆ ಜಿಲ್ಲೆಯಾದ್ಯಂತ 60 ಸಾವಿರ ಮಂದಿಗೆ 1,200ಕ್ಕೂ ಅಧಿಕ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ನಳೀನ್ ಕುಮಾರ್ ಕಟೀಲ್ ಸೇರಿದಂತೆ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಯಲ್ಲಿ ಖಾತೆ ಕಚ್ಚಾಟ – ಇತ್ತ ಕಾಂಗ್ರೆಸ್‍ನಲ್ಲೂ ಅಸಮಾಧಾನ ಸ್ಫೋಟ

    ಬಿಜೆಪಿಯಲ್ಲಿ ಖಾತೆ ಕಚ್ಚಾಟ – ಇತ್ತ ಕಾಂಗ್ರೆಸ್‍ನಲ್ಲೂ ಅಸಮಾಧಾನ ಸ್ಫೋಟ

    ಬೆಂಗಳೂರು: ಬಿಜೆಪಿ ಮನೆಯಲ್ಲಿ ಖಾತೆ ಕಚ್ಚಾಟ ನಡೆಯುತ್ತಿದ್ದರೆ ಇತ್ತ ಕಾಂಗ್ರೆಸ್ ಮನೆಯಲ್ಲಿ ಕಾರ್ಯಾಧ್ಯಕ್ಷ ವಿಚಾರವಾಗಿ ಅಸಮಾಧಾನ ಸ್ಫೋಟವಾಗಿದೆ.

    ಕೆಪಿಸಿಸಿಗೆ ರಾಮಲಿಂಗಾರೆಡ್ಡಿ ಹಾಗೂ ಧ್ರುವನಾರಾಯಣ್‍ ಅವರನ್ನು ಹೆಚ್ಚುವರಿ ಕಾರ್ಯಾಧ್ಯಕ್ಷರನ್ನು ನೇಮಿಸಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೆ ಕರೆ ಮಾಡಿದ ಡಿಕೆಶಿ, ಈಗಾಗಲೇ ಮೂವರು ಕಾರ್ಯಾಧ್ಯಕ್ಷರ ನೇಮಕವಾಗಿದೆ. ಇನ್ನು ಹೆಚ್ಚುವರಿ ಇಬ್ಬರ ನೇಮಕ ಅಗತ್ಯವಿತ್ತಾ ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ.

    ನೇಮಕದ ಹಿಂದೆ ರಾಜ್ಯ ಕಾಂಗ್ರೆಸ್‍ನ ಮಾಜಿ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್  ಕೈವಾಡವಿದೆ. ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.

  • ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಬದಲಾವಣೆ ಪರ್ವ- ಹೆಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್‍ಗೆ ಚಾನ್ಸ್- ಖರ್ಗೆ, ಮೊಯ್ಲಿಗೆ ಹಿನ್ನೆಡೆ

    ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಬದಲಾವಣೆ ಪರ್ವ- ಹೆಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್‍ಗೆ ಚಾನ್ಸ್- ಖರ್ಗೆ, ಮೊಯ್ಲಿಗೆ ಹಿನ್ನೆಡೆ

    ನವದೆಹಲಿ: ಅಧ್ಯಕ್ಷರ ಬದಲಾವಣೆಗೆ ಶುರುವಾದ ಲೆಟರ್ ಫೈಟ್ ಬಳಿಕ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಎಐಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯವಾಗದ ಹಿನ್ನೆಲೆ ಅದರ ಬದಲು ಹಲವು ಸಂಘಟನತ್ಮಾಕ ತಂಡಗಳನ್ನು ಪುನರ್ ರಚಿಸಿ ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

    ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಕಾಂಗ್ರೆಸ್ ಕೇಂದ್ರ ಚುನಾವಣೆ ಸಮಿತಿ, ಹಲವು ರಾಜ್ಯ ಉಸ್ತುವಾರಿಗಳನ್ನು ಬದಲಾವಣೆ ಮಾಡಲಾಗಿದೆ. ಇದರ ಜೊತೆಗೆ ಸೋನಿಯಗಾಂಧಿ ಅವರಿಗೆ ಸಂಘಟನತ್ಮಾಕ ವಿಚಾರಗಳಲ್ಲಿ ಸಲಹೆಗಾಗಿ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಹೊಸ ಪಟ್ಟಿಗಳಲ್ಲಿ ಸಿಡಬ್ಲ್ಯೂಸಿಯಲ್ಲಿ ಹೊರತುಪಡಿಸಿ ಬಾಕಿ ಟೀಂಗಳಲ್ಲಿ ಹಿರಿಯ ನಾಯಕರಿಗೆ ಕೋಕ್ ಕೊಟ್ಟಿದ್ದು ಯುವ ನಾಯಕರಿಗೆ ಆದ್ಯತೆ ಕೊಡಲಾಗಿದೆ. ಈ ಮೂಲಕ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗಿದೆ.

    ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಬಹುತೇಕ ಎಲ್ಲ ಹಿರಿಯ ನಾಯಕರನ್ನು ಸದಸ್ಯರಾಗಿ ಮಾಡಲಾಗಿದೆ. ಪ್ರಮುಖವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಭೀ ಅಜಾದ್ ಸೇರಿದಂತೆ ಹಲವು ನಾಯಕರಿದ್ದಾರೆ. ಎಐಸಿಸಿ ಅಧ್ಯಕ್ಷರ ಸಹಾಯಕ್ಕೆ ರಚಿಸಿದ ವಿಶೇಷ ಸಮಿತಿಯಲ್ಲಿ ಎ.ಕೆ ಆ?ಯಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಕೆ.ಸಿ ವೇಣುಗೋಪಾಲ್, ಮುಕುಲ್ ವಾಸ್ನಿಕ್, ರಣದೀಪ್ ಸಿಂಗ್ ಸುರ್ಲೆವಾಲ್ ಗೆ ಅವಕಾಶ ನೀಡಲಾಗಿದೆ.

    ಹಲವು ರಾಜ್ಯಗಳ ಉಸ್ತುವಾರಿಗಳ ಬದಲಾವಣೆಯಾಗಿದ್ದು ಮುಕುಲ್ ವಾಸ್ನಿಕ್ ಮಧ್ಯಪ್ರದೇಶಕ್ಕೆ, ಪಂಜಾಬ್ ಗೆ ಹರೀಶ್ ರಾವತ್, ಆಂಧ್ರಪ್ರದೇಶಕ್ಕೆ ಒಮನ್ ಚಾಂಡಿ, ಉತ್ತರ ಪ್ರದೇಶಕ್ಕೆ ಪ್ರಿಯಾಂಕಾ ವಾದ್ರಾ, ಕೇರಳಕ್ಕೆ ತಾರೀಖ್ ಅನ್ವರ್, ಅಸ್ಸಾಂಗೆ ಜಿತೇಂದ್ರ ಸಿಂಗ್, ರಾಜಸ್ಥಾನಕ್ಕೆ ಅಜೇಯ್ ಮಾಕೇನ್ ನೇಮಿಸಲಾಗಿದೆ.

    ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ: ಹಲವು ರಾಜ್ಯಗಳ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನು ಹೈಕಮಾಂಡ್ ಬದಲಿಸಿದೆ. ಉಸ್ತುವಾರಿಯಾಗಿದ್ದ ಕೆ.ಸಿ ವೇಣುಗೋಪಾಲ್ ಎಐಸಿಸಿ ಸಂಘಟನಾ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ್ದ ಹಿನ್ನೆಲೆ ರಣದೀಪ್ ಸುರ್ಜೆವಾಲಾ ಅವರನ್ನು ನೂತನ ಉಸ್ತುವಾರಿಯಾಗಿ ನೇಮಕ ಮಾಡಿದೆ.

    ರಾಜ್ಯದ ಹಲವು ನಾಯಕರಿಗೆ ಸ್ಥಾನ ಮಾನ ನೀಡಿದ ಕೈ ಕಮಾಂಡ್

    * ಮಹಾರಾಷ್ಟ್ರದ ಉಸ್ತುವಾರಿಯಾಗಿ ಹೆಚ್.ಕೆ ಪಾಟೀಲ್
    * ತಮಿಳುನಾಡು,ಪುದುಚೇರಿ,ಗೋವಾ ಉಸ್ತುವಾರಿಯಾಗಿ ದಿನೇಶ ಗುಂಡೂರಾವ್ ನೇಮಕವಾಗಿದ್ದಾರೆ
    * ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಕೆ.ಹೆಚ್.ಮುನಿಯಪ್ಪ ಖಾಯಂ ಆಹ್ವಾನಿತರಾಗಿ ಮುಂದುವರಿದಿದ್ದು ದಿನೇಶ್ ಗುಂಡೂರಾವ್ ಮತ್ತು ಹೆಚ್.ಕೆ ಪಾಟೀಲ್ ಗೆ ಹೊಸದಾಗಿ ಅವಕಾಶ ನೀಡಿದೆ.
    * ಎಐಸಿಸಿ ಕೇಂದ್ರ ಚುನಾವಣೆ ಸಮಿತಿಯಲ್ಲಿ ಸದಸ್ಯರಾಗಿ ಕೃಷ್ಣ ಬೈರೇಗೌಡ ಅವರನ್ನು ಆಯ್ಕೆ ಮಾಡಿದೆ.

    ಮಲ್ಲಿಕಾರ್ಜುನ್ ಖರ್ಗೆ, ವೀರಪ್ಪ ಮೊಯ್ಲಿಗೆ ಹಿನ್ನೆಡೆ?
    ಹೊಸ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಿಎಂ, ಕೇಂದ್ರ ಸಚಿವ ವೀರಪ್ಪ ಮೊಯ್ಲಿಗೆ ಹಿನ್ನಡೆಯಾಗಿದೆ. ಈ ಬಾರಿ ಮೊಯ್ಲಿಗೆ ಹೈಕಮಾಂಡ್ ಎಲ್ಲೂ ಸ್ಥಾನ ಮಾನ ನೀಡಿಲ್ಲ, ಕಳೆದ ಬಾರಿ ಅವರನ್ನು ಕೇಂದ್ರ ಚುನಾವಣಾ ಸಮಿತಿಯಲ್ಲಿ ಸದಸ್ಯರಾಗಿ ಮಾಡಿತ್ತು ಇನ್ನು ಮಲ್ಲಿಕಾರ್ಜುನ ಖರ್ಗೆ ಅವರಿಂದ ಮಹಾರಾಷ್ಟ್ರ ರಾಜ್ಯದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಕಿತ್ತುಕೊಳ್ಳಲಾಗಿದೆ. ಆದ್ರೆ ಅವರನ್ನು ರಾಜ್ಯಸಭೆ ಸಭಾ ನಾಯಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದರು ಇದೊಂದು ತಾತ್ಕಾಲಿಕ ಹಿನ್ನಡೆ ಎನ್ನಬಹುದಾಗಿದೆ.

  • ಡಿಕೆಶಿ ಜೊತೆ ಸಿದ್ದರಾಮಯ್ಯ ಸಂಧಾನ-‘ಟಗರು’ ರಾಜಿ ಆಫರ್​ಗೆ ‘ಬಂಡೆ’ ಉತ್ತರ

    ಡಿಕೆಶಿ ಜೊತೆ ಸಿದ್ದರಾಮಯ್ಯ ಸಂಧಾನ-‘ಟಗರು’ ರಾಜಿ ಆಫರ್​ಗೆ ‘ಬಂಡೆ’ ಉತ್ತರ

    -ಮೂರು ವಿಷಯಗಳಲ್ಲಿ ಇಬ್ಬರ ಮಧ್ಯೆ ಮುನಿಸು

    ಬೆಂಗಳೂರು: ಕರ್ನಾಟಕ ಉಪಚುನಾವಣೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಸಂಧಾನಕ್ಕೆ ಮುಂದಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಚುನಾವಣಾ ಕಣದಿಂದ ಕಾಂಗ್ರೆಸ್ ಹಿರಿಯ ನಾಯಕರು ಅಂತರ ಕಾಯ್ದುಕೊಳ್ಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯನವರ ಮೇಲಿನ ಮುನಿಸನ್ನು ಹೊರ ಹಾಕಿದ್ದರು. ಉಪ ಚುನಾವಣೆ ಫಲಿತಾಂಶ ಕ್ರೆಡಿಟ್ ಸಿದ್ದರಾಮಯ್ಯನವರು ಬೇಕಾದರೆ ತೆಗೆದುಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆಪ್ತರಿಗೆ ಸಿದ್ದರಾಮಯ್ಯ ಮಣೆ ಹಾಕಿದ್ದಾರೆ ಎಂದು ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದರು ಎಂದು ತಿಳಿದು ಬಂದಿದೆ.

    ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ. ಏಕಾಂಗಿ ಆಗುವ ಭೀತಿಯಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮೂಲಕ ಸಂದೇಶವೊಂದನ್ನು ಡಿಕೆ ಶಿವಕುಮಾರ್ ಅವರಿಗೆ ರವಾನಿಸಿದ್ದಾರಂರೆ. ಪಕ್ಷದಲ್ಲಿಯ ಮನಸ್ತಾಪಗಳು ಏನೇ ಇರಲಿ. ಕುಳಿತು ಮಾತಾಡೋಣ ಎಂಬ ಸಿದ್ದರಾಮಯ್ಯನವರ ಸಂದೇಶಕ್ಕೆ ಸಮಯ ಬಂದಾಗ ನೋಡೋಣ, ಅವಸರ ಬೇಡ ಎಂದು ಡಿಕೆ ಶಿವಕುಮಾರ್ ಟಕ್ಕರ್ ನೀಡಿದ್ದಾರೆ ಎನ್ನಲಾಗಿದೆ.

    ಮೂರು ವಿಷಯ:
    ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಮಧ್ಯೆ ಮೂರು ವಿಷಯಗಳಿಗೆ ಮನಸ್ತಾಪ ಉಂಟಾಗಿದೆ ಎನ್ನಲಾಗಿದ್ದು, ಇದರ ಪರಿಣಾಮವೇ ಡಿಕೆಶಿ ಸಂಧಾನಕ್ಕೆ ಹಿಂದೇಟು ಹಾಕಿರುವ ಸಾಧ್ಯತೆಗಳಿವೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಿ ದಿನೇಶ್ ಗುಂಡೂರಾವ್ ಅವರಿಗೆ ನೀಡಲಾಯ್ತು. ನಂತರ ನಾನು ಜೈಲಲ್ಲಿದ್ದಾಗಲೇ ಏಕಪಕ್ಷೀಯವಾಗಿ ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಾಗಿದೆ. ಮೂರನೇಯದ್ದು ಆಪರೇಷನ್ ಕಮಲದ ವೇಳೆ ಬೇರೆ ಪಕ್ಷದ ಅಭ್ಯರ್ಥಿ ಸೆಳೆಯಲು ಯತ್ನಿಸಿದಾಗ ಸಿದ್ದರಾಮಯ್ಯ ಅಡ್ಡಿಪಡಿಸಿದರು ಎಂದು ಡಿಕೆ ಶಿವಕುಮಾರ್ ಮುನಿಸಿಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಮೈತ್ರಿ ಮುರಿದುಕೊಳ್ಳುವುದೇ ಉತ್ತಮ, ಸಿಎಂ, ಡಿಸಿಎಂ ಸರ್ಕಾರ ಉಳಿಸಲಿ- ಸಿದ್ದರಾಮಯ್ಯ

    ಮೈತ್ರಿ ಮುರಿದುಕೊಳ್ಳುವುದೇ ಉತ್ತಮ, ಸಿಎಂ, ಡಿಸಿಎಂ ಸರ್ಕಾರ ಉಳಿಸಲಿ- ಸಿದ್ದರಾಮಯ್ಯ

    ಬೆಂಗಳೂರು: ಮೈತ್ರಿ ಸರ್ಕಾರ 14 ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಉಳಿಸುವ ಪ್ರಯತ್ನಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಹೈಕಮಾಂಡ್ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರೊಂದಿಗೆ ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ.

    ಈ ಚರ್ಚೆ ವೇಳೆ ಸಿದ್ದರಾಮಯ್ಯ ಅವರು ಖಡಕ್ ಸಂದೇಶ ನೀಡಿದ್ದಾರೆ ಎನ್ನಲಾಗಿದ್ದು, ಮೈತ್ರಿ ಸರ್ಕಾರವನ್ನು ಮುಂದುವರಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆ ಆಗಲಿದೆ. ಸಿಎಂ ಹಾಗೂ ಡಿಸಿಎಂ ಅವರು ಬೇಕಾದರೆ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಲಿ ನನ್ನಿಂದ ಆಗಲ್ಲ ಎಂದು ಹೇಳಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ವೇಣುಗೌಪಾಲ್ ಅವರೊಂದಿಗೆ ಖಡಕ್ ಮಾಹಿತಿ ನೀಡಿರುವ ಸಿದ್ದರಾಮಯ್ಯ ಅವರು, ಪರಿಸ್ಥಿತಿ ಕೈಮೀರಿ ಹೋಗಿದ್ದು, ಮೈತ್ರಿ ಮುರಿದುಕೊಳ್ಳುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ಅವರು ಅಂದು ಕೂಡ ನೇರವಾಗಿ ರಾಹುಲ್ ಅವರ ಮುಂದೆಯೇ ಮೈತ್ರಿ ಅಂತ್ಯಗೊಳಿಸುತ್ತಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ ದೆಹಲಿಯ ಪ್ರಮುಖ ಕಾಂಗ್ರೆಸ್ ನಾಯಕರಿಗೂ ವರದಿಯನ್ನು ಸಿದ್ದರಾಮಯ್ಯ ಅವರು ನೀಡಿದ್ದರು. ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಭಾರೀ ಹೊಡೆತ ಬೀಳುತ್ತಿದೆ. ಮತ್ತೆ ಪಕ್ಷವನ್ನು ಸಂಘಟನೆ ಮಾಡುವುದು
    ಅಸಾಧ್ಯವಾಗಲಿದೆ. ಪಕ್ಷ ಒಡೆದು ಹೋಗುವ, ಬೇರೆ ಬೇರೆ ಸಮಸ್ಯೆಗಳು ಎದುರಾಗಲಿದೆ ಎಂದು ವರದಿಯಲ್ಲಿ ತಿಳಿಸಿದ್ದರು. ಆದರೆ ಅಂದು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಮಾತಿಗೆ ಮಣೆ ಹಾಕಿರಲಿಲ್ಲ.

    ಆಪ್ತ ಶಾಸಕರೇ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಅಸಹಾಯಕರಾಗಿದ್ದಾರೆ. ಶಾಸಕರ ರಾಜೀನಾಮೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, ಶಾಸಕರ ಮನವೊಲಿಕೆಗೆ ಡಿಕೆ ಶಿವಕುಮಾರ್ ಅವರು ತೆರಳಿದ್ದಾರೆ. ಕಾದು ನೋಡೋಣ. ನಾನು ಶಾಸಕರಿಗೆ ಕರೆ ಮಾಡಿದ್ದೆ, ಆದರೆ ಶಾಸಕರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿಸಿದ್ದರು.

  • ಹೈಕಮಾಂಡ್‍ಗೆ ಸಿಎಂ ಕಂಪ್ಲೇಂಟ್ – ಈಗ ದೋಸ್ತಿಗಳ ನಡುವೆ ವಾರ್!

    ಹೈಕಮಾಂಡ್‍ಗೆ ಸಿಎಂ ಕಂಪ್ಲೇಂಟ್ – ಈಗ ದೋಸ್ತಿಗಳ ನಡುವೆ ವಾರ್!

    ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಜೊತೆ ಮಂಡ್ಯ ರೆಬಲ್ಸ್ ಡಿನ್ನರ್ ಸಭೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಕುಮಾರಸ್ವಾಮಿ ಇದೀಗ ಮಂಡ್ಯ ಕಾಂಗ್ರೆಸ್ ಬಂಡಾಯ ನಾಯಕರ ನಡೆಯ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಿದ್ದಾರೆ.

    ಬುಧವಾರವೇ ಸಿಎಂ ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ವೇಣುಗೋಪಾಲ್ ಅವರಿಗೆ ದೂರು ಕೊಟ್ಟಿದ್ದಾರೆ. ಜೊತೆ ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಮನಕ್ಕೆ ತರುವಂತೆ ಒತ್ತಾಯ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಫಲಿತಾಂಶಕ್ಕೂ ಮುನ್ನವೇ ರೆಬಲ್ಸ್ ವಿರುದ್ಧ ಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದು, ಒಂದು ವೇಳೆ ಕ್ರಮ ತೆಗೆದುಕೊಳ್ಳದೆ ಹೋದರೆ ಫಲಿತಾಂಶದ ಬಳಿಕ ಮೈತ್ರಿಗೆ ಕಂಟಕವಾಗುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ರೆಬಲ್‍ಗಳ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಸಿಎಂ ಕುಮಾರಸ್ವಾಮಿ ವೇಣುಗೋಪಾಲ್ ಅವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.

    ಹಾಗಾದರೆ ಕಾಂಗ್ರೆಸ್ ಹೈಕಮಾಂಡ್ ರೆಬಲ್ಸ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾ? ಕ್ರಮ ತೆಗೆದುಕೊಳ್ಳದೇ ಇದ್ದರೆ ಮೈತ್ರಿ ಸರ್ಕಾರಕ್ಕೆ ಕಂಟಕನಾ? ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಹೈಕಮಾಂಡ್ ಕ್ರಮದ ಮೇಲೆ ಮೈತ್ರಿ ಭವಿಷ್ಯ ನಿಂತಿದಿಯಾ ಎನ್ನುವ ಗೊಂದಲವೂ ಮೂಡಿದೆ.

    ದೋಸ್ತಿಗಳ ನಡುವೆ ವಾರ್!
    ಈಗ ರೆಬಲ್ಸ್ ವರ್ಸಸ್ ರೆಬಲ್ಸ್ ಪಾಲಿಟಿಲ್ಸ್ ಶುರುವಾಗಿದ್ದು, ಇತ್ತ ಮಂಡ್ಯ ರೆಬಲ್ಸ್ ವಿರುದ್ಧ ಕ್ರಮಕ್ಕೆ ಸಿಎಂ ಹೆಚ್‍ಡಿಕೆ ಒತ್ತಾಯ ಮಾಡಿದ್ದರೆ. ಅತ್ತ ಜಿ.ಟಿ.ದೇವೇಗೌಡ ಮತ್ತು ಸಾರಾ ಮಹೇಶ್ ವಿರುದ್ಧ ಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. ಯಾರು ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದೇ ಇಲ್ಲಿ ಗೊಂದಲವಾಗಿದೆ. ಒಂದು ವೇಳೆ ಜೆಡಿಎಸ್ ಸಚಿವರ ವಿರುದ್ಧ ಕ್ರಮವಾದರೆ ಸಿದ್ದರಾಮಯ್ಯ ಕೈ ಮೇಲಾದಂತೆ. ಮಂಡ್ಯ ರೆಬಲ್ಸ್ ತಲೆದಂಡವಾದರೆ ಸಿಎಂ ಕುಮಾರಸ್ವಾಮಿ ಕೈ ಮೇಲಾದಂತೆ. ಹೀಗಾಗಿ ಯಾರು ಕ್ರಮ ಕೈಗೊಳ್ಳುತ್ತಾರೆ ಎನ್ನುವುದೇ ಸದ್ಯದ ಕುತೂಹಲವಾಗಿದೆ.