Tag: Venu Swamy

  • ರಶ್ಮಿಕಾ ಬಳಿಕ ಸಕ್ಸಸ್‌ಗಾಗಿ ಜ್ಯೋತಿಷಿ ಮೊರೆ ಹೋದ ನಿಶ್ವಿಕಾ ನಾಯ್ಡು

    ರಶ್ಮಿಕಾ ಬಳಿಕ ಸಕ್ಸಸ್‌ಗಾಗಿ ಜ್ಯೋತಿಷಿ ಮೊರೆ ಹೋದ ನಿಶ್ವಿಕಾ ನಾಯ್ಡು

    ಡ್ಡೆಹುಲಿ, ಜಂಟಲ್‌ಮ್ಯಾನ್ ಸಿನಿಮಾ ಖ್ಯಾತಿಯ ನಿಶ್ವಿಕಾ ನಾಯ್ಡು (Nishvika Naidu) ಇದೀಗ ರಶ್ಮಿಕಾ ಮಂದಣ್ಣ (Rashmika Mandanna) ಹಾದಿಯಲ್ಲೇ ಹೆಜ್ಜೆ ಇಡುತ್ತಿದ್ದಾರೆ. ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಬಳಿ ಸಕ್ಸಸ್‌ಗಾಗಿ ರಶ್ಮಿಕಾ ನಂತರ ನಿಶ್ವಿಕಾ ಕೂಡ ಪೂಜೆ ಮಾಡಿಸಿದ್ದಾರೆ. ಇದರ ವಿಡಿಯೋವನ್ನು ಜ್ಯೋತಿಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ‘ಸೀತಾರಾಮಂ’ ಜೋಡಿ

    ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ನಿಶ್ವಿಕಾ ಈಗ ವೇಣು ಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆಯ ಕಾರ್ಯದ ಬಳಿಕ ನಟಿಯ ಕುರಿತು ಮಾತನಾಡಿರುವ ವೇಣು ಸ್ವಾಮಿ, ನಿಶ್ವಿಕಾ ಕನ್ನಡದ ನಟಿ, ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ಪ್ರಭುದೇವ ಅವರೊಂದಿಗೆ ಡ್ಯಾನ್ಸ್ ಮಾಡೋದು ಸುಮ್ಮನೆ ಅಲ್ಲ. ಪ್ರಭುದೇವ ಅವರಿಗೆ ಸಮವಾಗಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ನಿಶ್ವಿಕಾ ತೆಲುಗಿಗೆ ಎಂಟ್ರಿ ಕೊಡಲಿದ್ದಾರೆ. ನಿಶ್ವಿಕಾಗೆ ಶುಭವಾಗಲಿ ಎಂದಿದ್ದಾರೆ.

    ನಿಶ್ವಿಕಾ ಜಾತಕವನ್ನು ನಾನು ನೋಡಿದ್ದೀನಿ, ಅವರು ಒಳ್ಳೆಯ ಜಾತಕವನ್ನು ಹೊಂದಿದ್ದಾರೆ. ತೆಲುಗಿನಲ್ಲೂ (Tollywood) ಖ್ಯಾತಿ ಪಡೆದುಕೊಳ್ಳಬೇಕು. ಸ್ಟಾರ್ ಆಗಿ ಬೆಳೆಯುವಂತಹ ಜಾತಕವನ್ನು ಅವರು ಹೊಂದಿದ್ದಾರೆ. ಶೀಘ್ರವೇ ಅವರಿಗೆ ಯಶಸ್ಸು ಅಂತ ಪ್ರಾರ್ಥನೆ ಮಾಡ್ತೇನೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.


    ಬಳಿಕ ನಿಮ್ಮ ಹಾರೈಕೆ ಇದ್ದರೆ ಖಂಡಿತ ಯಶಸ್ವಿ ಆಗ್ತೀನಿ ಅಂತ ನಂಬಿಕೆ ಇದೆ. ಧನ್ಯವಾದ ಎಂದು ಕಾಲಿಗೆ ನಮಸ್ಕಾರ ಮಾಡಿ ಆರ್ಶೀವಾದ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:ಬ್ರೇಕ್ ಬಳಿಕ ಮತ್ತೆ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ

    ಕೆಲ ವರ್ಷಗಳ ಹಿಂದೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೂಡ ವೇಣು ಸ್ವಾಮಿ ಬಳಿ ಪೂಜೆ ಮಾಡಿಸಿದರು. ಈಗ ಅವರು ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ ಕೂಡ ಪೂಜೆ ಮಾಡಿಸಿದರು. ಅವರು ತೆಲುಗಿನ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದ್ದಾರೆ. ಈಗ ಅದೇ ಹಾದಿಯಲ್ಲಿ ನಿಶ್ವಿಕಾ ಹೆಜ್ಜೆ ಇಟ್ಟಿದ್ದಾರೆ.

  • ಪ್ರಭಾಸ್ ಗೆ ಮದುವೆ ಯೋಗವಿಲ್ಲ : ವೇಣು ಸ್ವಾಮಿ ಭವಿಷ್ಯ

    ಪ್ರಭಾಸ್ ಗೆ ಮದುವೆ ಯೋಗವಿಲ್ಲ : ವೇಣು ಸ್ವಾಮಿ ಭವಿಷ್ಯ

    ಸೆಲೆಬ್ರಿಟಿಗಳಿಗೆ ಭವಿಷ್ಯ ನುಡಿಯುವ ಜ್ಯೋತಿಷಿ ವೇಣು ಸ್ವಾಮಿ (Venu Swamy) ಅವರು ಪ್ರಭಾಸ್ (Prabhas) ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರಿಗೆ ಮದುವೆ (Marriage) ಆಗುವ ಯೋಗವಿಲ್ಲ ಎಂದು ಹೇಳಿದ್ದಾರೆ. ವೇಣು ಸ್ವಾಮಿ ಅವರ ಈ ಹೇಳಿಕೆ ಪ್ರಭಾಸ್ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ.  ವೇಣು ಗೋಪಾಲ್ ಅವರ ಮಾತನ್ನು ಅನೇಕ ಸೆಲೆಬ್ರಿಟಿಗಳು ನಂಬುತ್ತಾರೆ. ಹಾಗಾಗಿ ಪ್ರಭಾಸ್ ಮದುವೆ ಆಗತ್ತಾ ಅಥವಾ ಇಲ್ಲವಾ ಎನ್ನುವ ಪ್ರಶ್ನೆ ಮೂಡಿದೆ.

    ಆದರೆ, ಈ ಹಿಂದೆ ಪ್ರಭಾಸ್ ಕುಟುಂಬ ಮದುವೆ ವಿಚಾರದಲ್ಲಿ ಬೇರೆಯದ್ದೇ ಮಾಹಿತಿ ನೀಡಿತ್ತು. ಪ್ರಭಾಸ್ ಕುಟುಂಬದ ವ್ಯಕ್ತಿಯೊಬ್ಬರು ಪ್ರಭಾಸ್ ಮದುವೆ ಸಿದ್ಧತೆ ನಡೆಯುತ್ತಿದೆ ಎಂಬ ವಿಚಾರವನ್ನು ಹೊರಹಾಕಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

    ಮಾಧ್ಯಮ ವರದಿ ಅನ್ವಯ ಪ್ರಭಾಸ್ ಯುಎಸ್ ನಲ್ಲಿ ವಾಸಿಸುತ್ತಿರುವ ಯುವತಿಯ ಕೈ ಹಿಡಿಯಲಿದ್ದಾರೆ. ಯುವತಿಯ ಕುಟುಂಬಸ್ಥರು ಪ್ರಭಾಸ್ ಕುಟುಂಬಕ್ಕೆ ಆತ್ಮೀಯರು ಎನ್ನಲಾಗಿದೆ. ಅಮೆರಿಕದಲ್ಲಿ ಉದ್ಯಮ ನಡೆಸುತ್ತಿರುವ ವ್ಯಕ್ತಿಯೊಬ್ಬರ ಪುತ್ರಿಯಾಗಿರುವ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಪ್ರಭಾಸ್ ಕುಟುಂಬಸ್ಥರು ಈಗಾಗಲೇ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಪ್ರಭಾಸ್ ಕುಟುಂಬಸ್ಥರು ಯಾವುದೇ ಅಧಿಕೃತ ಹೇಳಿಕೆಯನ್ನ ನೀಡಿಲ್ಲ.

     

    ಬಾಹುಬಲಿ ಬಳಿಕ ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆಯಾಗುತ್ತಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ಈ ವರದಿಗಳನ್ನು ಇಬ್ಬರು ನಿರಾಕರಿಸಿ ನಾವು ಕೇವಲ ಸ್ನೇಹಿತರಷ್ಟೇ ಎಂದಿದ್ದರು. ಕಳೆದ ವರ್ಷ ಪ್ರಭಾಸ್ ಮದುವೆ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರ ದೊಡ್ಡಪ್ಪ ಕೃಷ್ಣಂ ರಾಜು, ಇದು ನಮ್ಮ ಕುಟುಂಬದ ವಿಚಾರವಾಗಿದ್ದು, ಇದನ್ನು ಬಹಿರಂಗವಾಗಿ ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಆದರೆ ಈ ವರ್ಷ ಪ್ರಭಾಸ್ ಮದುವೆ ನಡೆಯಲಿದೆ ಎಂದಿದ್ದರು.

  • ಬಾಲಯ್ಯ ಪುತ್ರ ಸದ್ಯಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಡಲ್ಲ- ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ

    ಬಾಲಯ್ಯ ಪುತ್ರ ಸದ್ಯಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಡಲ್ಲ- ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ

    ತೆಲುಗಿನ ಸೂಪರ್ ಸ್ಟಾರ್ ಬಾಲಯ್ಯ(Balayya) ಪುತ್ರ (Son) ಅದ್ಯಾವಾಗ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಸೆಲೆಬ್ರಿಟಿ ಜ್ಯೋತಿಷಿ ಈಗ ಶಾಕಿಂಗ್ ಸುದ್ದಿಯೊಂದನ್ನ ಬಿಚ್ಚಿಟ್ಟಿದ್ದಾರೆ. ಬಾಲಯ್ಯ ಪುತ್ರ ಈಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಡಲ್ಲ ಅಂತಾ ಭವಿಷ್ಯ ನುಡಿದಿದ್ದಾರೆ. ಜ್ಯೋತಿಷಿ ವೇಣು ಸ್ವಾಮಿ (Venu Swamy) ಮಾತು ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಇದನ್ನೂ ಓದಿ:ಸ್ಪಂದನಾ ನಿಧನ : ವಿಜಯ ರಾಘವೇಂದ್ರ ನಟನೆ ‘ಕದ್ದಚಿತ್ರ’ ರಿಲೀಸ್ ಮುಂದಕ್ಕೆ

    ಬಾಲಯ್ಯ ಪುತ್ರ ಮೋಕ್ಷಜ್ಞ ತೇಜ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಆದರೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ, ಬಾಲಯ್ಯ ಅಭಿಮಾನಿಗಳನ್ನು ಮತ್ತಷ್ಟು ನಿರಾಸೆಗೊಳಿಸಿದೆ. ಮೋಕ್ಷಜ್ಞ ತೇಜ (Mokshagna Tej) ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಇನ್ನೂ ಎರಡು ಮೂರು ವರ್ಷ ಬೇಕಾಗಬಹುದು. ತೆಲುಗು ಸಿನಿಮಾಗೆ ಎಂಟ್ರಿ ಕೊಡುವುದಕ್ಕೆ ಇನ್ನೂ ಸಮಯವಿದೆ ಎಂದು ಹೇಳುವ ಮೂಲಕ ಬಾಲಯ್ಯನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ.

    ‘ಅಖಂಡ’ (Akanda) ಸಿನಿಮಾ ವೇಳೆ ಬಾಲಯ್ಯರನ್ನು ವೇಣು ಸ್ವಾಮಿ ಭೇಟಿ ಮಾಡಿದ್ದರು. ಈ ವೇಳೆ ಮಗನ ಜಾತಕ ನೋಡಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಬಾಲಯ್ಯ ಪುತ್ರನಿಗೆ ಉತ್ತಮ ಭವಿಷ್ಯವಿದೆ. ಸಿನಿಮಾರಂಗದಲ್ಲಿ ಒಳ್ಳೆಯ ಯಶಸ್ಸು ಸಿಗುತ್ತೆ. ಆದರೆ, ರಾಜಕೀಯದಲ್ಲಿ ಅಲ್ಲ ಎಂದು ವೇಣು ಗೋಪಾಲ ಸ್ವಾಮಿ ಭವಿಷ್ಯ ನುಡಿದಿದ್ದಾರೆ.

    ಸಮಂತಾ (Samantha) ವೈವಾಹಿಕ ಜೀವನ ಏರುಪೇರು ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇತ್ತೀಚಿಗೆ ಶ್ರೀಲೀಲಾ ಬಗ್ಗೆ ಮಾತನಾಡಿದ್ದರು. ಸಿನಿಮಾರಂಗದಲ್ಲಿ ಶ್ರೀಲೀಲಾ (Sreeleela) ಭವಿಷ್ಯ ಇನ್ನೂ ಕೆಲವು ವರ್ಷಗಳು ಮಾತ್ರ ಎಂದು ಮಾತನಾಡಿದ್ದರು. ಈಗ ಬಾಲಯ್ಯ ಪುತ್ರನ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ಆಡಿರುವ ಮಾತು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ್ ದೇವರಕೊಂಡ ಜತೆ ಅಂತರ ಕಾಯ್ದುಕೊಂಡ ರಶ್ಮಿಕಾ: ಇದು ಜ್ಯೋತಿಷಿ ಮಾತಿನ ಎಫೆಕ್ಟ್?

    ವಿಜಯ್ ದೇವರಕೊಂಡ ಜತೆ ಅಂತರ ಕಾಯ್ದುಕೊಂಡ ರಶ್ಮಿಕಾ: ಇದು ಜ್ಯೋತಿಷಿ ಮಾತಿನ ಎಫೆಕ್ಟ್?

    ಕ್ಷಿಣದ ಸಾಕಷ್ಟು ಸಿಲೆಬ್ರಿಟಿಗಳಿಗೆ ಭವಿಷ್ಯ ಹೇಳುವ ವೇಣು ಸ್ವಾಮಿ, ಈ ಹಿಂದೆ ರಶ್ಮಿಕಾ ಮಂದಣ್ಣ ಅವರ ಭವಿಷ್ಯ ನುಡಿದಿದ್ದರು ಅನ್ನುವ ವಿಷಯ ತೆಲುಗು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಈ ವೇಣು ಸ್ವಾಮಿ ಹತ್ತಿರ ರಶ್ಮಿಕಾ ಮತ್ತು ಅವರ ತಾಯಿ ಭವಿಷ್ಯ ಕೇಳಲು ಹೋಗುತ್ತಿದ್ದರು ಎಂಬ ವಿಷಯವನ್ನು ಸ್ವತಃ ಜ್ಯೋತಿಷಿ ವೇಣು ಸ್ವಾಮಿ ಅವರೇ ಬಹಿರಂಗ ಪಡಿಸಿದ್ದರು. ಇವರು ಹೇಳಿದ್ದ ಭವಿಷ್ಯ ರಶ್ಮಿಕಾ ಜೀವನದಲ್ಲಿ ನಿಜವಾಗಿದ್ದರಿಂದ ಪದೇ ಪದೇ ರಶ್ಮಿಕಾ ಕುಟುಂಬ ಇವರನ್ನು ಸಂಪರ್ಕಿಸುತ್ತಿತ್ತು ಎನ್ನುವುದು ಬಹಿರಂಗ.  ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ಹಾಗಾಗಿಯೇ ಕೆಲ ತಿಂಗಳ ಹಿಂದೆ, ವೇಣು ಸ್ವಾಮಿ ಬಳಿ ರಶ್ಮಿಕಾ ಅವರು ಭವಿಷ್ಯ ಕೇಳಲು ಹೋದಾಗ ಆತಂಕಕಾರಿ ಸಂಗತಿಯೊಂದನ್ನು ತಿಳಿಸಿದ್ದರಂತೆ. ತಾವು ಹೇಳಿದಂತೆ ಮಾಡದೇ ಹೋದರೆ, ಮುಂದಿನ ಭವಿಷ್ಯ ಕರಾಳವಾಗಿ ಇರಲಿದೆ ಎಂಬ ಎಚ್ಚರಿಕೆ ಕೂಡ ಕೊಟ್ಟಿದ್ದರಂತೆ. ಆದರೆ, ಆ ವೇಳೆಯಲ್ಲಿ ಜ್ಯೋತಿಷಿಯ ಮೇಲೆಯೇ ಗರಂ ಆಗಿದ್ದರಂತೆ ರಶ್ಮಿಕಾ. ಇದೀಗ ಜ್ಯೋತಿಷಿ ಹೇಳಿದ್ದು ನಿಜವಾಗುತ್ತಿದೆ ಅನಿಸಿದ್ದರಿಂದ ಜ್ಯೋತಿಷಿ ಹೇಳಿದಂತೆ ಕೇಳಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ಈ ಹಿಂದೆ ವೇಣು ಸ್ವಾಮಿ ಅವರು ರಶ್ಮಿಕಾ ಅವರಿಗೆ ‘ನಿನಗೆ ಲವ್ ಅಫೇರ್ ಆಗುವುದಿಲ್ಲ. ಹಾಗಾಗಿ ವಿಜಯ್ ದೇವರಕೊಂಡ ಜೊತೆಗೆ ಕಾಣಿಸಿಕೊಳ್ಳದೇ ಇರುವುದು ಒಳ್ಳೆಯದು ಎಂದು ಭಯಂಕರ ಜ್ಯೋತಿಷ್ಯ ಹೇಳಿದ್ದರಂತೆ. ನಿಮ್ಮ ಬಳಿ ಬರುವ ಅನೇಕರಿಂದ ಪ್ರೀತಿಯಲ್ಲಿ ಮೋಸ ಹೋಗುತ್ತೀರಿ. ಲವ್ ಅಫೇರ್ ನಿಮಗೆ ಸಮಸ್ಯೆಯಾಗಿ ಕಾಡಲಿದೆ ಎಂದಿದ್ದರಂತೆ. ಈ ಮಾತಿಗೆ ರಶ್ಮಿಕಾ ಗರಂ ಆಗಿ ವೇಣು ಸ್ವಾಮಿ ಅವರಿಂದಲೇ ದೂರವಾಗಿದ್ದರಂತೆ. ಈಗ ವೇಣು ಸ್ವಾಮಿ ಅವರ ಮಾತು ಕೇಳುವುದಕ್ಕಾಗಿಯೇ ವಿಜಯ್ ದೇವರಕೊಂಡ ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಅವರ ಹುಟ್ಟು ಹಬ್ಬವಿದ್ದು, ಅಂದು ರಶ್ಮಿಕಾ ಮಂದಣ್ಣ ವಿಶ್ ಮಾಡುವುದಾಗಲೇ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಳ್ಳುವುದಾಗಲಿ ಮಾಡಿಲ್ಲ. ವಾರಕ್ಕೆರಡು ಬಾರಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇತ್ತೀಚೆಗೆ ಒಂಟಿಯಾಗಿ ಓಡಾಡುತ್ತಿದೆ. ಹೀಗಾಗಿ ರಶ್ಮಿಕಾ ಅವರು ವಿಜಯ್ ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ ಎನ್ನುವುದು ತೆಲುಗು ಸಿನಿಮಾ ರಂಗದಲ್ಲಿ ಹರಡಿದ ಗಾಸಿಪ್.