Tag: ventilator

  • ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!

    ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!

    ಲಕ್ನೋ: ಗುರುಗ್ರಾಮ್‌ನ (Gurugram) ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗಲೇ ಗಗನಸಖಿ (Air Hostess) ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಈ ಸಂಬಂಧ ಖುದ್ದು ಮಹಿಳೆ ದೂರು ನೀಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದೇ ತಿಂಗಳ ಏಪ್ರಿಲ್‌ 13ರಂದು 43 ವರ್ಷದ ಗಗನಸಖಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ತನ್ನ ಪತಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಆಕೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

    ಏನಿದು ಪ್ರಕರಣ?
    ಮಹಿಳೆ ದೂರು ನೀಡಿದ ಪ್ರಕಾರ, ಆಕೆ ಸಂಬಂಧಪಟ್ಟ ಕಂಪನಿಯ ಪರವಾಗಿ ತರಬೇತಿಗಾಗಿ ಗುರುಗ್ರಾಮ್‌ಗೆ ಬಂದಿದ್ದಳು, ಈ ವೇಳೆ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಳು. ಈ ಸಂದರ್ಭದಲ್ಲಿ ಆಕೆ ನೀರಿನಲ್ಲಿ ಮುಳುಗಿ ಆರೋಗ್ಯ ತೀರಾ ಹದಗೆಟ್ಟಿತ್ತು. ಬಳಿಕ ಆಕೆಯನ್ನ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿತ್ತು. ಇದೇ ತಿಂಗಳ ಏಪ್ರಿಲ್ 5 ರಂದು ಪತಿ ಆಕೆಯನ್ನ ಹೆಚ್ಚುವರಿ ಚಿಕಿತ್ಸೆಗಾಗಿ ಗುರುಗ್ರಾಮ್‌ನ ಬೇರೋಂದು ಆಸ್ಪತ್ರೆಗೆ ದಾಖಲಿಸಿದರು. ಆಕೆಯನ್ನು ಏಪ್ರಿಲ್ 13 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

    ಆದ್ರೆ ಏಪ್ರಿಲ್‌ 6ರಂದು ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಆಸ್ಪತ್ರೆಯ ಕೆಲವು ಸಿಬ್ಬಂದಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವೆಂಟಿಲೇಟರ್‌ನಲ್ಲಿದ್ದ ಕಾರಣ ನನಗೆ ಆಗ ಮಾತನಾಡಲೂ ಸಾಧ್ಯವಾಗಲಿಲ್ಲ, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದೆ. ದೌರ್ಜನ್ಯ ನಡೆಯುವಾಗ ನನ್ನ ಅಕ್ಕಪಕ್ಕ ಇಬ್ಬರು ನರ್ಸ್‌ಗಳೂ ಇದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

    ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಗುರುಗ್ರಾಮ್‌ನ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತಂಡವು ಆಸ್ಪತ್ರೆಗೆ ಧಾವಿಸಿ ಡ್ಯೂಟಿ ಚಾರ್ಟ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂಉದ ಗುರುಗ್ರಾಮ್ ಪೊಲೀಸ್ ಇನ್ಸ್‌ಪೆಕ್ಟರ್‌ ಸಂದೀಪ್ ಕುಮಾರ್ ತಿಳಿಸಿದ್ದಾರೆ.

  • ಕಿರಿಕಿರಿ ಎಂದು ರೋಗಿಗೆ ಹಾಕಿದ್ದ ವೆಂಟಿಲೇಟರ್‌ನ್ನೇ ಆಫ್ ಮಾಡಿದ ವೃದ್ಧೆ

    ಕಿರಿಕಿರಿ ಎಂದು ರೋಗಿಗೆ ಹಾಕಿದ್ದ ವೆಂಟಿಲೇಟರ್‌ನ್ನೇ ಆಫ್ ಮಾಡಿದ ವೃದ್ಧೆ

    ಬರ್ಲಿನ್: ವೃದ್ಧೆಯೊಬ್ಬಳು ಆಸ್ಪತ್ರೆಯಲ್ಲಿದ್ದ (Hospital) ವೆಂಟಿಲೇಟರ್ (Ventilator) ಶಬ್ದವು ಕಿರಿಕಿರಿಯಾಗುತ್ತಿದೆ ಎಂದು ಪಕ್ಕದಲ್ಲಿದ್ದ ರೋಗಿಯ ವೆಂಟಿಲೇಟರ್‍ನ್ನು ಆಫ್ ಮಾಡಿದ ಘಟನೆ ಜರ್ಮನಿಯಲ್ಲಿ ನಡೆದಿದೆ.

    ಜರ್ಮನ್‍ನ (German) ನೈರುತ್ಯ ನಗರವಾದ ಮ್ಯಾನ್‍ಹೈಮ್‍ನಲ್ಲಿ ಈ ಘಟನೆ ನಡೆದಿದೆ. 72 ವರ್ಷದ ಜರ್ಮನ್ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಸಂದರ್ಭದಲ್ಲಿ ಆಕೆಯ ಪಕ್ಕದಲ್ಲಿದ್ದ ರೋಗಿಯನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆದರೆ ಆ ವೆಂಟಿಲೇಟರ್‌ನಿಂದ ತೀವ್ರ ಶಬ್ದ ಬರುತ್ತಿದೆ ಎಂದು 2 ಬಾರಿ ಆಫ್ ಮಾಡಿದ್ದಾಳೆ. ಇದನ್ನೂ ಓದಿ: ಗಡಿಪಾರು ನೋಟಿಸ್‌ಗೆ ಹೆದರಿ ಆತ್ಮಹತ್ಯೆಗೆ ಯತ್ನ – ಕ್ರಿಮಿನಲ್ ಆರೋಪಿ ಕೋಬ್ರಾ ಸುಹೇಲ್ ಸಾವು

    jail

    ಆದರೆ ಅಷ್ಟರಲ್ಲಿ ವೈದ್ಯರು ಗಮನಿಸಿದ್ದು, ವೆಂಟಿಲೇಟರ್‍ನಲ್ಲಿದ್ದ ರೋಗಿಯು ಸಾವಿನ ದವಡೆಯಿಂದ ಪಾರಾಗಿದ್ದಾನೆ. ಆದರೂ ಆತನಿಗೆ ತೀವ್ರ ನಿಗಾ ಘಟಕದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೊಲೆಗೆ ಯತ್ನ ಆರೋಪದ ಅಡಿ ಜರ್ಮನಿ ಪೊಲೀಸರು ವೃದ್ಧೆಯನ್ನು ಬಂಧಿಸಿದ್ದಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಈಗ ಆಕೆಯನ್ನು ಜೈಲಿಗೆ ಹಾಕಲಾಗಿದೆ. ಇದನ್ನೂ ಓದಿ: ದೆಹಲಿ ಗಲಭೆ ಕಲ್ಲು ತೂರಾಟ ಕೇಸ್‍ನಲ್ಲಿ ಉಮರ್ ಖಾಲಿದ್ ಖುಲಾಸೆ, ಬಿಡುಗಡೆ ಭಾಗ್ಯವಿಲ್ಲ

    Live Tv
    [brid partner=56869869 player=32851 video=960834 autoplay=true]

  • ವಿಮ್ಸ್‌ನಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆ – ಐಸಿಯುವಿನಲ್ಲಿದ್ದ 8ರ ಬಾಲಕ ಸಾವು

    ವಿಮ್ಸ್‌ನಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆ – ಐಸಿಯುವಿನಲ್ಲಿದ್ದ 8ರ ಬಾಲಕ ಸಾವು

    ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ(Vims Hospital) ಸಾವಿನ ಸರಣಿ ಮುಂದುವರಿದಿದ್ದು, ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

    ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ(ICU) ದಾಖಲಾಗಿದ್ದ 8 ವರ್ಷದ ಬಾಲಕನೋರ್ವ(Boy) ಕೂಡ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾನೆ. ನಿಖಿಲ್ (8) ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: 8 ವರ್ಷದ ಬಳಿಕ ಗೊತ್ತಾಯ್ತು ತನ್ನ ಪತಿ ಅವನಲ್ಲ ಅವಳು – ಗಂಡನ ಲಿಂಗ ಬದಲಾವಣೆ ತಿಳಿದು ಮಹಿಳೆ ಶಾಕ್

    ಸಿರುಗುಪ್ಪದ ಕೆ.ಮಹೇಶ್ ಹಾಗೂ ಈರಮ್ಮ ದಂಪತಿಯ ಪುತ್ರ ನಿಖಿಲ್ (Nikil) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ. ಸೆಪ್ಟೆಂಬರ್ 11 ರಂದು ನಿಖಿಲ್‍ನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಗ್ಯೂ ಜ್ವರಕ್ಕೆ (Dengue Fever) ಸಂಬಂಧಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಸರಣಿ ಸಾವುಗಳ ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಈ ವಿಚಾರ ಗುರುವಾರ ಸಂಜೆ ವೇಳೆಗೆ ಬಹಿರಂಗವಾಗಿದೆ. ಇದನ್ನೂ ಓದಿ: ಮೊಬೈಲ್ ಕದಿಯಲು ಹೋಗಿ ಕಳ್ಳನ ಫಜೀತಿ – 10 ಕಿ.ಮೀ ಕಿಟಕಿಯಲ್ಲಿ ಜೋತಾಡ್ಕೊಂಡು ಬಂದ

    ಈ ವಿಚಾರವಾಗಿ ಮೃತ ಬಾಲಕನ ತಾಯಿ ಈರಮ್ಮ (Hiramma) ಅವರು ಮಾತನಾಡಿದ್ದು, ನನ್ನ ಮಗನನ್ನು ಐಸಿಯುನಲ್ಲಿ ಅಡ್ಮಿಟ್ ಮಾಡಿದ್ದೇವು. ವೆಂಟಿಲೇಟರ್‍ನಿಂದಲೇ ನನ್ನ ಮಗ ಉಸಿರಾಡುತ್ತಿದ್ದ. ಆದರೆ ಬುಧವಾರ ಬೆಳಗ್ಗೆ ಕರೆಂಟ್ (Electricity Cut) ಹೋದಾಗ ಮಶೀನ್‍ಗಳೆಲ್ಲ ಬಂದ್ ಆದವು. ಈ ರೀತಿ ಯಾಕಾಗಿದೆ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆವು. ಅವರು ಕರೆಂಟ್ ಹೋಗಿದೆ ಎಂದರು. ಹೀಗೆ ಹೇಳಿದ ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ ಎಂದು ಆರೋಪಿಸಿದ್ದಾರೆ.

    ಈ ಮೂಲಕ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬುಧವಾರ ರಾತ್ರಿ ಐಸಿಯುನಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿದೆ. ಬೆಳಗ್ಗೆವರೆಗೂ ಕರೆಂಟ್ ಬಂದಿಲ್ಲ. ಇದರಿಂದ ಐಸಿಯುನಲ್ಲಿ ದಾಖಲಾಗಿದ್ದ ಬಳ್ಳಾರಿಯ(Bellari) ಚೆಟ್ಟೆಮ್ಮಾ, ಹುಸೇನ್, ಚಂದ್ರಮ್ಮ ಹಾಗೂ ಮನೋಜ್ ಸಾವಿಗೀಡಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಶ್ದಿ ಆರೋಗ್ಯದಲ್ಲಿ ಚೇತರಿಕೆ – ವೆಂಟಿಲೇಟರ್‌ನಿಂದ ಬಿಡುಗಡೆ

    ರಶ್ದಿ ಆರೋಗ್ಯದಲ್ಲಿ ಚೇತರಿಕೆ – ವೆಂಟಿಲೇಟರ್‌ನಿಂದ ಬಿಡುಗಡೆ

    ವಾಷಿಂಗ್ಟನ್: ಶುಕ್ರವಾರ ನ್ಯೂಯಾರ್ಕ್ನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಚಾಕು ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಲೇಖಕ ಸಲ್ಮಾನ್ ರಶ್ದಿ ಅವರನ್ನು ನಿನ್ನೆ ರಾತ್ರಿ ವೆಂಟಿಲೇಟರ್‌ನಿAದ ತೆಗೆಯಲಾಗಿದೆ. ರಶ್ದಿ ಅವರು ಇದೀಗ ಮಾತನಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಚಾಕು ಇರಿತಕ್ಕೊಳಗಾದ ರಶ್ದಿ ಅವರನ್ನು ವಾಯುವ್ಯ ಪೆನ್ಸಿಲ್ವೇನಿಯಾದ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿತ್ತು. ದಾಳಿಯಿಂದ ರಶ್ದಿಯ ತೋಳಿನ ನರಗಳು ಹಾಗೂ ಪಿತ್ತಜನಕಾಂಗ ಹಾನಿಗೊಂಡಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಂಧಿತ ಉಗ್ರರ ವಿಚಾರಣೆಯ ವೇಳೆ ಮಾಹಿತಿ ಬಹಿರಂಗ- ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

    ಸಲ್ಮಾನ್ ರಶ್ದಿ ಅವರನ್ನು ಚಾಕುವಿನಿಂದ ಇರಿದ ಆರೋಪಿ ಹದಿ ಮತರ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆತ ಪೂರ್ವಯೋಜಿತ ದಾಳಿ ನಡೆಸಿ, ರಶ್ದಿಗೆ 10 ಬಾರಿ ಚಾಕುವಿನಿಂದ ಇರಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಧ್ವಜಾರೋಹಣಕ್ಕೆ ಈದ್ಗಾ ಮೈದಾನದಲ್ಲಿ ಸಿದ್ಧತೆ- ಅಹಿತಕರ ಘಟನೆ ನಡೆಯದಂತೆ ಖಾಕಿ ಭದ್ರತೆ

    ಸದ್ಯ ಇದೀಗ ರಶ್ದಿ ಅವರು ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಅನ್ನು ತೆಗೆಯಲಾಗಿದೆ. ಈಗ ಅವರು ಮಾತನಾಡುತ್ತಿದ್ದಾರೆ. ಅವರು ಬೇಗನೆ ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದು ಷಟೌಕ್ವಾ ಸಂಸ್ಥೆಯ ಅಧ್ಯಕ್ಷ ಮೈಕೆಲ್ ಹಿಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ 1 ಸಾವಿರ ವೆಂಟಿಲೇಟರ್ ಕೊಳೆಯುತ್ತಿವೆ: ಶಾಸಕ ಡಾ.ಅಜಯ್ ಸಿಂಗ್

    ರಾಜ್ಯದಲ್ಲಿ 1 ಸಾವಿರ ವೆಂಟಿಲೇಟರ್ ಕೊಳೆಯುತ್ತಿವೆ: ಶಾಸಕ ಡಾ.ಅಜಯ್ ಸಿಂಗ್

    ಕಲಬುರಗಿ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಸೂಕ್ತ ಸಮಯದಲ್ಲಿ ವೆಂಟಿಲೇಟರ್ ಸಿಗದೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಒಂದು ಸಾವಿರ ವೆಂಟಿಲೇಟರ್ ಕೊಳೆಯುತ್ತಿವೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಈ ವೆಂಟಿಲೇಟರ್ ಖರೀದಿ ಮಾಡಲಾಗಿದೆ. ಆದರೆ ಸದ್ಯ ಅವುಗಳನ್ನು ಬಳಸಲು ಟೆಕ್ನಿಷಿಯನ್ ಇಲ್ಲದೆ ವೆಂಟಿಲೇಟರ್ ಬಳಕೆ ಆಗುತ್ತಿಲ್ಲ, ಕೂಡಲೇ ಇವುಗಳ ಬಳಕೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ 35,000 ಕೋಟಿ ಏನಾಯ್ತು? ಲೆಕ್ಕ ಪರಿಶೋಧನೆಗೆ ಸುಪ್ರೀಂಕೋರ್ಟ್ ಆದೇಶ

    ವ್ಯಾಕ್ಸಿನ್ ಹಾಕುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪಿಎಚ್ ಸಿ ಕೇಂದ್ರಗಳಲ್ಲಿ ವ್ಯಾಕ್ಸಿನ್ ಕೊರತೆಯಿದೆ. ಕೊರೊನಾ ವಿರುದ್ಧ ಹೋರಾಡಬೇಕು ಎಂದರೆ ವ್ಯಾಕ್ಸಿನೇಷನ್ ಆಗಬೇಕೆಂದು ತಜ್ಞರು ಹೇಳಿದ್ದಾರೆ. ಆದರೆ ವ್ಯಾಕ್ಸಿನೇಷನ್ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

    ಕೊರೊನಾ ಮೂರನೇ ಅಲೆ ಬಗ್ಗೆ ಪೋಷಕರಲ್ಲಿ ಗಾಬರಿ ಹೆಚ್ಚಾಗಿದೆ. ಮೂರನೇ ಅಲೆ ಬಂದೇ ಬರುತ್ತೆ ಇದನ್ನು ಯಾರೂ ತಡೆಯಲು ಆಗುವುದಿಲ್ಲ. ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ಮೂರನೇ ಅಲೆ ಬರುವ ಬಗ್ಗೆ ತಜ್ಞರು ಮಾಹಿತಿ ಕೊಟ್ಟಿದ್ದಾರೆ. ಸದ್ಯ ನಮ್ಮ ಬಳಿ ಉಳಿದಿರೋದು ಎರಡು ತಿಂಗಳು ಮಾತ್ರ. ಎರಡು ತಿಂಗಳಲ್ಲಿ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಚಿಕಿತ್ಸೆಗೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಳ್ಳಬೇಕು. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಹಾನಿ ಆಗಲಿದೆ. ಮೊದಲನೇ ಅಲೆಯಲ್ಲಿ ವೃದ್ಧರಿಗೆ, ಎರಡನೇ ಅಲೆಯಲ್ಲಿ ವಯಸ್ಕರಿಗೆ, ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳಿಗೆ ಹಾನಿ ಮಾಡುವ ಸಂಭವವಿದೆ ಎಂದರು.

    ರಾಜ್ಯದಲ್ಲಿ 4.5 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ರಾಜ್ಯದ 7 ಜಿಲ್ಲೆಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಪೌಷ್ಟಿಕ ಮಕ್ಕಳಿದ್ದಾರೆ. ಅಪೌಷ್ಟಿಕ ಮಕ್ಕಳ ಬಗ್ಗೆ ಸರ್ಕಾರ ಹೆಚ್ಚಿನ ನಿಗಾ ವಹಿಸಬೇಕು ಎಂದು ಅಜಯ್ ಸಿಂಗ್ ಒತ್ತಾಯಿಸಿದ್ದಾರೆ.

  • ದೇಶದ ಜನ ಕೊರೊನಾ ಸಂಕಷ್ಟ ಎದುರಿಸಲು ಬಿಜೆಪಿ ಕಾರಣ: ಡಾ.ಜಿ ಪರಮೇಶ್ವರ್

    ದೇಶದ ಜನ ಕೊರೊನಾ ಸಂಕಷ್ಟ ಎದುರಿಸಲು ಬಿಜೆಪಿ ಕಾರಣ: ಡಾ.ಜಿ ಪರಮೇಶ್ವರ್

    ತುಮಕೂರು: ಕೊರೊನಾ ಎರಡನೇ ಅಲೆ ಬರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಓ) ಎಚ್ಚರಿಕೆ ನೀಡಿತ್ತು. ಆದರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷಿಸಿದರ ಪರಿಣಾಮ ಇದೀಗ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಜನರ ಈ ಸ್ಥಿತಿಗೆ ಬಿಜೆಪಿ ಸರ್ಕಾರ ನೇರ ಹೊಣೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

    ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಜಿ ಪರಮೇಶ್ವರ್, ಕೊರೊನಾ ಮೊದಲನೇ ಅಲೆಯಲ್ಲಿ ಸ್ವಲ್ಪಮಟ್ಟಿಗೆ ಸಾವು ನೋವು ಆಯ್ತು. ಜನರು ಅದನ್ನು ಹೇಗೋ ತಡೆದುಕೊಂಡರು. ಆದರೆ ಎರಡನೇ ಅಲೆ ಗಂಭೀರವಾಗಿ ಅಪ್ಪಳಿಸುತ್ತದೆ ಎಂದು ಡಬ್ಲ್ಯೂಎಚ್‍ಓ ಎಚ್ಚರಿಕೆ ನೀಡಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ರಾಜ್ಯ ಹಾಗೂ ದೇಶದ ಜನ ಈಗ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:ಆಸ್ಪತ್ರೆಯಲ್ಲಿ ಕುಡುಕನ ರಂಪಾಟ- ಅಮಲಿನಲ್ಲಿ ಶರ್ಟ್ ಬಿಚ್ಚಿದ

    ಭಾರತ ಔಷಧ ತಯಾರಿಕೆಯಲ್ಲಿ ಉಳಿದ ದೇಶಕ್ಕಿಂತ ಅಗ್ರ ಸ್ಥಾನದಲ್ಲಿದೆ. ಹಾಗಾಗಿ ಎಲ್ಲಾ ಔಷಧಾ ತಾಯಾರಿಕಾ ಕಂಪನಿಗಳೂ ಚೆನ್ನಾಗಿ ಸಪೋರ್ಟ್ ಮಾಡಿದ್ದರಿಂದ ಫಾರ್ಮುಲಾ ಪಡೆದು ಕೋಟಿಗಟ್ಟಲೆ ಲಸಿಕೆಯನ್ನು ತಯಾರು ಮಾಡಿತ್ತು. ಆದರೆ ನಮ್ಮ ಪ್ರಧಾನಿ ಮೊದಲು ದೇಶದ ಪ್ರಜೆಗಳಿಗೆ ಲಸಿಕೆ ಕೊಡುವುದನ್ನು ಬಿಟ್ಟು ವಿದೇಶಕ್ಕೆ 6.63 ಕೋಟಿ ಲಸಿಕೆ ರವಾನೆ ಮಾಡಿದರು. ಈಗ ನಮ್ಮಲ್ಲಿ ವ್ಯಾಕ್ಸಿನ್ ಗಾಗಿ ಹಾಹಾಕಾರ ಶುರುವಾಗಿದೆ ಎಂದು ಕಿಡಿಕಾರಿದರು.

    ವಿದೇಶಕ್ಕೆ ಕಳುಹಿಸಿದ ವ್ಯಾಕ್ಸಿನ್ ನಮ್ಮ ದೇಶದ ಪ್ರಜೆಗಳಿಗೆ ಕೊಟ್ಟರೆ ಕೋವಿಡ್ ಚೈನ್ ಬ್ರೇಕ್ ಆಗುತಿತ್ತು. ಆದರೆ ಪ್ರಧಾನಿ ಲಸಿಕೆ ರಫ್ತು ಮಾಡಿದ್ದರಿಂದಾಗಿ ನಮ್ಮ ಪ್ರಜೆಗಳಿಗೆ ಫಸ್ಟ್ ಡೋಸ್ ಸಿಕ್ಕಲ್ಲ. ಸೆಕೆಂಡ್ ಡೋಸ್ ಕೂಡ ಸಿಗಲಿಲ್ಲ. ಇಲ್ಲಿಯವರೆಗೆ ದೇಶದ 21 ಕೋಟಿ ಜನರಿಗೆ ಮಾತ್ರ ವ್ಯಾಕ್ಸಿನೇಷನ್ ಕೊಡಲಾಗಿದೆ. ಈ ಮೂಲಕ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಕೇವಲ ಶೇ.3.2 ರಷ್ಟು ಮಾತ್ರ ಲಸಿಕೆ ನೀಡಲಾಗಿದೆ. ಹಾಗೆ ಕೇಂದ್ರ ರಾಜ್ಯಕ್ಕೆ ಸಾಕಷ್ಟು ವೆಂಟಿಲೇಟರ್ ಕೊಟ್ಟಿದೆ ಎಂದು ಹೇಳುತ್ತಿದೆ ಆದರೆ ಇಲ್ಲಿ ಮಾತ್ರ ವೆಂಟಿಲೇಟರ್ ಇಲ್ಲ ಎಂದು ಕೂಗು ಕೇಳಿಸುತ್ತಿದೆ. ಹಾಗಾದರೆ ಕೇಂದ್ರ, ರಾಜ್ಯಕ್ಕೆ ಕೊಟ್ಟಿರುವ ವೆಂಟಿಲೇಟರ್ ಏನಾಯ್ತು ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

  • ಕೆಟ್ಟಿರುವ ವೆಂಟಿಲೇಟರ್ ಗಳ ರಿಪೇರಿಗೆ ಮುಂದೆ ಬಂದ ಬಾಷ್: ಡಿಸಿಎಂ ಮಾತುಕತೆ

    ಕೆಟ್ಟಿರುವ ವೆಂಟಿಲೇಟರ್ ಗಳ ರಿಪೇರಿಗೆ ಮುಂದೆ ಬಂದ ಬಾಷ್: ಡಿಸಿಎಂ ಮಾತುಕತೆ

    ಬೆಂಗಳೂರು: ರಾಜ್ಯದ ಸಕಾರಿ ಆಸ್ಪತ್ರೆಗಳಲ್ಲಿ ಕೆಟ್ಟು ನಿಂತಿರುವ ವೆಂಟಿಲೇಟರ್ ಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡಲು ಬಾಷ್ ಕಂಪನಿ ಮುಂದೆ ಬಂದಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಶನಿವಾರದಂದು ಬಾಷ್ ಉಪಾಧ್ಯಕ್ಷ ರಮೇಶ್ ಸಾಲಿಗ್ರಾಮ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದ ಅವರು, ಆ ಕಂಪನಿಯೇ ಸ್ವ ಇಚ್ಛೆಯಿಂದ ಮುಂದೆ ಬಂದು ವೆಂಟಿಲೇಟರ್ ರಿಪೇರಿ ಮಾಡಿಕೊಡುವುದಾಗಿ ಹೇಳಿದೆ. ಈ ಕಾರಣಕ್ಕೆ ಬಾಷ್ ಕಂಪನಿಯನ್ನು ಶ್ಲಾಘಿಸುವುದಾಗಿ ಹೇಳಿದರು.

    ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಅನೇಕ ವೆಂಟಿಲೇಟರ್ ಗಳು ಕೆಟ್ಟಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಕೂಡ ಬಂದಿವೆ. ಹೀಗಾಗಿ ಸಿಎಸ್‍ಆರ್ ನೆರವಿನಿಂದ ವೆಂಟಿಲೇಟರ್ ರಿಪೇರಿ ಮಾಡಿಕೊಡಲಾಗುವುದು ಎಂದು ರಮೇಶ್ ಭರವಸೆ ನೀಡಿದರು.

    ಬಾಷ್ ನಿರ್ಧಾರ ಸ್ವಾಗತಾರ್ಹ. ವೆಂಟಿಲೇಟರ್ ಗಳು ಎಷ್ಟು, ಎಲ್ಲಿ ಕೆಟ್ಟಿವೆ ಎಂಬುದನ್ನು ಪತ್ತೆ ಮಾಡಿ ನಂತರ ಕಂಪನಿಗೆ ವಹಿಸಲಾಗವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

  • ಆರೋಗ್ಯ ಸಚಿವರ ತವರಲ್ಲಿ ನಿರುಪಯುಕ್ತವಾದ ವೆಂಟಿಲೇಟರ್​ಗಳು

    ಆರೋಗ್ಯ ಸಚಿವರ ತವರಲ್ಲಿ ನಿರುಪಯುಕ್ತವಾದ ವೆಂಟಿಲೇಟರ್​ಗಳು

    ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟ ಕಾಲದಲ್ಲಿ ಸೋಂಕಿತರ ಜೀವ ಉಳಿಸಲು ಬಳಕೆಯಾಗಬೇಕಾದ ವೆಂಟಿಲೇಟರ್ಸ್ ನಿರುಪಯುಕ್ತವಾಗಿರೋ ಘಟನೆ ಆರೋಗ್ಯ ಸಚಿವ ಕೆ. ಸುಧಾಕರ್ ತವರು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಗೌರಿಬಿದನೂರು ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ 5 ವೆಂಟಿಲೇಟರ್ಸ್ ಇದ್ದು ಕೇವಲ 1 ಮಾತ್ರ ಬಳಕೆ ಮಾಡಲಾಗುತ್ತಿದೆ. ಆಸ್ಪತ್ರೆಯ ಕೊಠಡಿಯಲ್ಲಿ ಉಳಿದ 4 ವೆಂಟಿಲೇಟರ್ಸ್ ಹಾಗೆ ಇಟ್ಟಿದ್ದು ಬಳಕೆ ಮಾಡದೆ ನಿರುಪಯುಕ್ತವಾಗಿವೆ. ಈ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ಬಹಳಷ್ಟು ಕಡೆ ವೆಂಟಿಲೇಟರ್ಸ್ ಇಲ್ಲ ಎಂದು ಪರದಾಡುತ್ತಿದ್ದಾರೆ. ಇತ್ತ ಈ ಆಸ್ಪತ್ರೆಯಲ್ಲಿ ವೆಂಟಿಲೇಟರ್ಸ್ ಇದ್ದರೂ ಬಳಕೆ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಆಸ್ಪತ್ರೆಯ ವೈದ್ಯಾಧಿಕಾರಿ ಶ್ರೀನಿವಾಸ್, ಕಳೆದ ಒಂದು ವರ್ಷದ ಹಿಂದೆ ವೆಂಟಿಲೇಟರ್ಸ್ ಬಂದಿವೆ. ಆದರೆ ಈಗ ಬಳಕೆ ಮಾಡಲು ಆಕ್ಸಿಜನ್ ಕೊರತೆ ಹಾಗೂ ಸಿಬ್ಬಂದಿ ಸಮಸ್ಯೆ ಇದೆ. ವೆಂಟಿಲೇಟರ್ ಬಳಸಿದ್ರೆ ಒಂದು ದಿನ 30-40 ಲೀಟರ್ ಆಕ್ಸಿಜನ್ ಬೇಕಾಗುತ್ತೆ. ಸಿಲಿಂಡರ್ ಗಳು ಖಾಲಿ ಆದರೆ ಇತರೆ ಸಾಮಾನ್ಯ ಆಕ್ಸಿಜನ್ ಪಡೆಯುವ ರೋಗಿಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ ಬಳಕೆ ಮಾಡುತ್ತಿಲ್ಲ. ವೆಂಟಿಲೇಟರ್ ಅಗತ್ಯ ಬಂದವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

  • ವೆಂಟಿಲೇಟರ್ ಸಿಗದೇ ಕೊರೊನಾ ಸೋಂಕಿತ ಸಾವು

    ವೆಂಟಿಲೇಟರ್ ಸಿಗದೇ ಕೊರೊನಾ ಸೋಂಕಿತ ಸಾವು

    ಶಿವಮೊಗ್ಗ: ವೆಂಟಿಲೇಟರ್ ಸಿಗದೇ ಕೊರೊನಾ ಸೋಂಕಿತ ವ್ಯಕ್ತಿಯೋರ್ವ ನರಳಿ ನರಳಿ ಪ್ರಾಣ ಬಿಟ್ಟ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

    ಶಿಕಾರಿಪುರದ ಆನಂದ್ (45) ಮೃತರಾಗಿದ್ದಾರೆ. ಆನಂದ್ ಕೊರೊನಾ ಸೋಂಕಿಗೆ ತುತ್ತಾಗಿ ಹೋಂ ಐಸೋಲೇಷನ್‍ಗೆ ಒಳಗಾಗಿದ್ದರು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಉಂಟಾದ ಪರಿಣಾಮ ಮೃತ ಆನಂದ್ ಕುಟುಂಬಸ್ಥರು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

    ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೋಂಕಿತ ವ್ಯಕ್ತಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಬೇಕಿತ್ತು. ಆದರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಖಾಲಿ ಇಲ್ಲದ ಕಾರಣ ಸಾಮಾನ್ಯ ಕೋವಿಡ್ ವಾರ್ಡ್‍ನಲ್ಲಿಯೇ ಸೋಂಕಿತನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ನಿನ್ನೆ ರಾತ್ರಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಈ ವೇಳೆ ಸುಮಾರು ಎರಡು ಗಂಟೆಗಳ ಕಾಲ ಸೋಂಕಿತ ಆನಂದ್ ನರಳಾಡಿದ್ದಾರೆ. ಆದರೆ ಈ ವೇಳೆ ವೈದ್ಯರು ಆಗಲಿ, ಆರೋಗ್ಯ ಸಿಬ್ಬಂದಿ ಆಗಲಿ ಆತನಿಗೆ ಅಗತ್ಯ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಹೀಗಾಗಿ ಸೋಂಕಿತ ವೆಂಟಿಲೇಟರ್ ಸಿಗದೇ ನರಳಾಡಿ ಪ್ರಾಣಬಿಟ್ಟಿದ್ದಾರೆ.

    ಮೆಗ್ಗಾನ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಸೋಂಕಿತ ಮೃತಪಟ್ಟಿದ್ದಾನೆ ಎಂದು ಆತನ ಕುಟುಂಬಸ್ಥರು ಇದೀಗ ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಸೋಂಕಿತ ಪ್ರಾಣಬಿಡುವ ಮುನ್ನ ನರಳಾಡುತ್ತಿರುವ ದೃಶ್ಯವನ್ನು ಕೋವಿಡ್ ವಾರ್ಡ್‍ನಲ್ಲಿದ್ದ ಇತರೆ ಸೋಂಕಿತರು ತಮ್ಮ ಮೊಬೈಲ್‍ನಲ್ಲಿ ಸರೆ ಹಿಡಿದಿದ್ದಾರೆ.

    ಒಟ್ಟಿನಲ್ಲಿ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸರಿಯಾದ ಚಿಕಿತ್ಸೆ ದೊರೆಯದೇ ಸೋಂಕಿತರು ಮೃತಪಡುತ್ತಿದ್ದಾರೆ ಎಂಬ ಅಂಶ ಈ ಘಟನೆಯಿಂದ ಬೆಳಕಿಗೆ ಬಂದಿದೆ.

  • ಬೆಳಗಾವಿಯಲ್ಲಿ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರ ಸಾವು – ಕುಟುಂಬಸ್ಥರ ಮುಂದೆಯೇ ಪ್ರಾಣ ಬಿಟ್ರು!

    ಬೆಳಗಾವಿಯಲ್ಲಿ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರ ಸಾವು – ಕುಟುಂಬಸ್ಥರ ಮುಂದೆಯೇ ಪ್ರಾಣ ಬಿಟ್ರು!

    ಬೆಳಗಾವಿ: ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರು ರೋಗಿಗಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎರಡು ಗಂಟೆಯಲ್ಲಿ ನಾಲ್ವರು ರೋಗಿಗಳು ಕುಟುಂಬಸ್ಥರ ಮುಂದೆಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ.

    ನಾಲ್ಕು ಗಂಟೆಗಳ ಹಿಂದೆ 56 ವರ್ಷ ವ್ಯಕ್ತಿಯನ್ನ ಬೆಳಗಾವಿಯ ಬಿಮ್ಸ್ ಗೆ ಕರೆತರಲಾಗಿತ್ತು. ಆಕ್ಸಿಜನ್ ಬೆಡ್ ನೀಡುವಂತೆ ರೋಗಿಯ ಸಂಬಂಧಿ ಆಸ್ಪತ್ರೆಯ ಸಿಬ್ಬಂದಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು. ಬೆಡ್ ಸಿಗುವ ವೇಳೆಗಾಗಲೇ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದರಿಂದ ಆಕ್ರೋಶಗೊಂಡ ಮಹಿಳೆ, ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ನಮಗೆ ಬೆಡ್ ಸಿಗಲಿಲ್ಲ. ಸರ್ಕಾರಕ್ಕೆ ಒಂದು ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಡಲು ಸಾಧ್ಯ ಆಗಲಿಲ್ಲ. ಮನುಷ್ಯರ ಜೀವ ಉಳಿಸುವ ಮಾನವೀಯತೆ ಸಹ ಇಲ್ಲಿಲ್ಲ ಎಂದು ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು.

    ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರೋರಿಗೆ ಬೆಡ್, ಆಕ್ಸಿಜನ್ ಸಿಗುತ್ತಿಲ್ಲ. ನನ್ನ ಮುಂದೆಯೇ ವೆಂಟಿಲೇಟರ್ ಇಲ್ಲದೇ ನಾಲ್ವರು ಸಾವನ್ನಪ್ಪಿದ್ದಾರೆ. ನಾವುಇ ಕರೆದುಕೊಂಡ ಬಂದ ರೋಗಿಯ ಪಲ್ಸ್ ರೇಟ್ ಕಡಿಮೆ ಆಗಿತ್ತು. ಆ ವೇಳೆಗೆ ಆಕ್ಸಿಜನ್ ಬಂದಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ರೋಗಿಗಳ ಸಂಬಂಧಿಕರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಲಾಗುತ್ತಿದೆ. ಹೊರಗಡೆ ಚಿಕ್ಕ ಚಿಕ್ಕ ಆಕ್ಸಿಜನ್ ಸಿಲಿಂಡರ್ ಗಳು ಟೋಕನ್ ವ್ಯವಸ್ಥೆಯಲ್ಲಿ ಸಿಗುತ್ತಿವೆ. ನಮಗೆ ಆಕ್ಸಿಜನ್ ಸಿಲಿಂಡರ್ ತರಲು ಹೇಳಿದ್ರೆ ಹೇಗೆ ಎಂದು ಯುವಕ ಪ್ರಶ್ನೆ ಮಾಡಿದ್ದಾನೆ.