Tag: Venkateswara Temple

  • ಬೆಂಗಳೂರು | ದರ್ಶನಕ್ಕೆ ಪಾಸ್‌ ಸಿಗದಿದ್ದಕ್ಕೆ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ ಭಕ್ತ!

    ಬೆಂಗಳೂರು | ದರ್ಶನಕ್ಕೆ ಪಾಸ್‌ ಸಿಗದಿದ್ದಕ್ಕೆ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ ಭಕ್ತ!

    – ವೈಕುಂಠ ದ್ವಾರ, ಲಕ್ಷಿ-ಶ್ರೀನಿವಾಸನ ತೂಗು-ಉಯ್ಯಾಲೆ…!

    ಬೆಂಗಳೂರು: ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದೆ. ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಅನ್ನೋ ನಂಬಿಕೆ ಲಕ್ಷಾಂತರ ಭಕ್ತಾದಿಗಳಲ್ಲಿ ಇದ್ದೇ ಇರುತ್ತೆ. ಆದ್ರೆ ವೆಂಕಟೇಶ್ವರನ ಪಾಸ್ ಸಿಗದೇ ಇದ್ದಿದ್ದಕ್ಕೆ ಬೆಂಗಳೂರಿನ ಭಕ್ತನೊಬ್ಬ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ್ದಾನೆ.

    ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ವೈಕುಂಠ ಏಕಾದಶಿಯಂದು ದೇವತೆಗಳು ಭೂ ಲೋಕಕ್ಕೆ ಬಂದು ಜಗದೊಡೆಯ ಶ್ರೀವಿಷ್ಣು ದೇವರನ್ನು ಪೂಜಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಈ ದಿನದಂದು ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ನಂಬಿಕೆ. ಅದರಂತೆ ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದನ್ನೂ ಓದಿ: Tirupati Stampede: ಗಾಯಗೊಂಡ ಗಾಯಾಳುಗಳಿಗೆ ವಿಶೇಷ ದರ್ಶನ, ಅಧಿಕಾರಿಗಳು ಅಮಾನತು

    ಇಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಅನ್ನೋ ನಂಬಿಕೆ ಲಕ್ಷಾಂತರ ಭಕ್ತಾದಿಗಳಲ್ಲಿ ಇರುತ್ತದೆ. ಆದ್ರೆ ಟಿಕೆಟ್ ಎಲ್ಲರಿಗೂ ಸಿಗಲ್ಲ. ಈ ಹಿನ್ನಲೆ, ಬೆಂಗಳೂರಿನ ತಿರುಪತಿ ತಿಮ್ಮಪ್ಪನ ಅಪ್ಪಟ್ಟ ಭಕ್ತನೊಬ್ಬ, ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಬೆಂಗಳೂರಿನ ತನ್ನ ಮನೆಯಲ್ಲೇ ವೆಂಕಟೇಶ್ವರ ಮೂರ್ತಿಯನ್ನು ನಿರ್ಮಿಸಿದ್ದಾರೆ. ಸುಮಾರು 8 ಅಡಿ ಎತ್ತರದಲ್ಲಿ ಬಾಲಾಜಿ ಮೂರ್ತಿಯನ್ನು ನಿರ್ಮಾಣ ಮಾಡಿದ್ದಾರೆ. ಹತ್ತಿ, ಬಟ್ಟೆ, ಪೇಯಿಂಟ್‌ ಮೂಲಕ ಬಾಲಾಜಿಯನ್ನು ಅಲಂಕರಿಸಲಾಗಿದೆ.

    ಜಯನಗರದ ಉಷಾ ಅಪಾರ್ಟ್ಮೆಂಟ್ ನಿವಾಸಿಯಾಗಿರೋ ದೀಪಕ್, ಕಳೆದ 9 ವರ್ಷದಿಂದ ಪ್ರತಿ ತಿಂಗಳು ತಿರುಪತಿ ಬೆಟ್ಟ ಹತ್ತಿಕೊಂಡು ದರ್ಶನ ಮಾಡುತ್ತಿದ್ದರು. ಆದ್ರೇ ಇಂದು ಬಾಲಾಜಿ ದರ್ಶನ ಸಿಗದ ಹಿನ್ನೆಲೆ ಮನೆಯಲ್ಲೇ ದೇಗುಲ ನಿರ್ಮಿಸಿದ್ದಾರೆ. ವೆಂಕಟೇಶ್ವರ ಮೂರ್ತಿ ಜೊತೆ ಲಕ್ಷ್ಮಿ, ವೆಂಕಟೇಶ್ವರ ತೂಗು ಉಯ್ಯಾಲೆ, ವೈಕುಂಠ ದ್ವಾರ ನಿರ್ಮಿಸಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸ್ಥಳೀಯ ಜನ ಬರುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ದೇವಸ್ಥಾನಗಳಲ್ಲಿ ಏಕಾದಶಿ ಸಂಭ್ರಮ – ರಾತ್ರಿ 11 ಗಂಟೆ ವರೆಗೆ ಇಸ್ಕಾನ್‌ನಲ್ಲಿ ದರ್ಶನಕ್ಕೆ ಅವಕಾಶ

  • ತಿರುಮಲಕ್ಕೆ ಭಾವಿ ಸೊಸೆಯೊಂದಿಗೆ ಮುಖೇಶ್ ಅಂಬಾನಿ ಭೇಟಿ – ದೇವಾಲಯಕ್ಕೆ 1.5 ಕೋಟಿ ದೇಣಿಗೆ

    ತಿರುಮಲಕ್ಕೆ ಭಾವಿ ಸೊಸೆಯೊಂದಿಗೆ ಮುಖೇಶ್ ಅಂಬಾನಿ ಭೇಟಿ – ದೇವಾಲಯಕ್ಕೆ 1.5 ಕೋಟಿ ದೇಣಿಗೆ

    ಹೈದರಾಬಾದ್: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಶುಕ್ರವಾರ ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

    ಈ ವೇಳೆ ಅಂಬಾನಿ ಅವರ ಜೊತೆಗೆ ಪುತ್ರ ಅನಂತ್ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ರಾಧಿಕಾ ಮರ್ಚೆಂಟ್ ಮತ್ತು ರಿಲಯನ್ಸ್ ರಿಟೇಲ್ ಲಿಮಿಟೆಡ್ ನಿರ್ದೇಶಕ ಮನೋಜ್ ಮೋದಿ ಉಪಸ್ಥಿತರಿದ್ದರು. ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ ದೇವಾಲಯದ ಜೊತೆಗೆ ದೇವಸ್ಥಾನಗಳನ್ನು ನಿರ್ವಹಿಸುತ್ತಿರುವ ಸ್ವತಂತ್ರ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಕ್ಕೆ 1.5 ಕೋಟಿ ರೂಪಾಯಿಯನ್ನು ನೀಡಿದರು. ಇದನ್ನೂ ಓದಿ: ಸಿದ್ದು, ಡಿಕೆಶಿ ಮಧ್ಯೆ ಮತ್ತೆ ಪವರ್ ವಾರ್ – ಅತ್ತ ಭಾರತ್ ಜೋಡೋ, ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಜೋಡೋ ಸ್ಥಿತಿ!

    ಮುಖೇಶ್ ಅಂಬಾನಿ ಅವರು ತಿರುಮಲಕ್ಕೆ ಭೇಟಿ ನೀಡಿರುವ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೀಡಿಯೋದಲ್ಲಿ ಮುಖೇಶ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ದೇವಾಲಯದ ಆವರಣದಲ್ಲಿ ಆನೆಗೆ ತಿಂಡಿ ನೀಡಿ ಅದರ ಆಶೀರ್ವಾದ ಪಡೆಯುತ್ತಿರುವುದನ್ನು ಕೂಡ ನೋಡಬಹುದಾಗಿದೆ. ಇದನ್ನೂ ಓದಿ: ಟ್ರಕ್ – ಬಸ್ ನಡುವೆ ಭೀಕರ ಅಪಘಾತ – 6 ಸಾವು, 20 ಮಂದಿಗೆ ಗಾಯ

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖೇಶ್ ಅಂಬಾನಿ ಅವರು, ವೆಂಕಟೇಶ್ವರನ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಬಂದಿದ್ದೇನೆ. ಪ್ರತಿ ವರ್ಷ ದೇವಾಲಯ ಸುಧಾರಣೆ ಹೊಂದುತ್ತಿದೆ ಮತ್ತು ಉತ್ತಮವಾಗುತ್ತಿದೆ. ಇದು ಭಾರತೀಯರಾದ ನಮಗೆ ಹೆಮ್ಮೆ ಪಡುವಂತಹ ವಿಚಾರ. ನಿಮ್ಮೆಲ್ಲರ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಈ ಮುನ್ನ ಸೋಮವಾರ ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‍ಜಿ ದೇವಸ್ಥಾನಕ್ಕೂ ಮುಕೇಶ್ ಅಂಬಾನಿ ಅವರು ಭೇಟಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬೆಕ್ಕನ್ನ ಕಾಪಾಡಲು ಹೋಗಿ ಯುವಕನೂ ಬಾವಿಗೆ ಬಿದ್ದ!

    ಬೆಕ್ಕನ್ನ ಕಾಪಾಡಲು ಹೋಗಿ ಯುವಕನೂ ಬಾವಿಗೆ ಬಿದ್ದ!

    ಧಾರವಾಡ: ಬಾವಿಗೆ ಬಿದ್ದಿದ್ದ ಬೆಕ್ಕನ್ನು ಹಗ್ಗದ ಸಹಾಯದಿಂದ ರಕ್ಷಣೆ ಮಾಡಲು ಹೋಗಿ ಯುವಕನೂ ಬಾವಿಗೆ ಬಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದ ಸಾಧನಕೆರೆ ಬಡಾವಣೆಯ ವೆಂಕಟೇಶ್ವರ ದೇವಸ್ಥಾನದ ಬಾವಿಗೆ ಬೆಕ್ಕೊಂದು ಬಿದ್ದಿತ್ತು. ಈ ವೇಳೆ ಹಗ್ಗದ ಸಹಾಯದಿಂದ ಬಾವಿಗೆ ಬಿದ್ದಿದ್ದ ಬೆಕ್ಕನ್ನು ಯುವಕ ಸೋಮಶೇಖರ್ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಹಗ್ಗ ತುಂಡಾದ ಪರಿಣಾಮ ಸೋಮಶೇಖರ್ ಕೂಡ ಬಾವಿಗೆ ಬಿದ್ದಿದ್ದಾರೆ. ಇದನ್ನೂ ಓದಿ:  45 ಲಕ್ಷದ ಗಿಫ್ಟ್ ಆಸೆಗೆ ಬಿದ್ದು, 32 ಲಕ್ಷ ರೂ. ಕಳೆದುಕೊಂಡ ಯುವತಿ

    ಬಾವಿಯಲ್ಲಿ ಕೆಸರು ಇದ್ದ ಹಿನ್ನೆಲೆ ಸೋಮಶೇಖರ್ ಬಚಾವ್ ಆಗಿದ್ದಾರೆ. ಬಾವಿಗೆ ಬೀಳುತ್ತಿದ್ದಂತೆ ಸ್ಥಳದಲ್ಲೇ ಇದ್ದ ಸೋಮಶೇಖರ್ ನ ಗೆಳೆಯರು ಸಹಾಯಕ್ಕೆ ಬಂದು, ಅವರನ್ನು ರಕ್ಷಣೆ ಮಾಡಿದ್ದಾರೆ. ನಂತರ ಬೆಕ್ಕನ್ನೂ ಸಹ ಹೊರ ತೆಗೆದು ರಕ್ಷಣೆ ಮಾಡಿದ್ದಾರೆ.