Tag: venkataramanappa

  • ವಿವಿ ಸಾಗರಕ್ಕೆ ನೀರು ಹರಿಸಲು ಆಗದಿದ್ದರೆ ರಾಜೀನಾಮೆ: ವೆಂಕಟರಮಣಪ್ಪ

    ವಿವಿ ಸಾಗರಕ್ಕೆ ನೀರು ಹರಿಸಲು ಆಗದಿದ್ದರೆ ರಾಜೀನಾಮೆ: ವೆಂಕಟರಮಣಪ್ಪ

    ಚಿತ್ರದುರ್ಗ: ಆಗಸ್ಟ್ 10 ರೊಳಗಾಗಿ ವಾಣಿ ವಿಲಾಸ(ವಿವಿ) ಸಾಗರಕ್ಕೆ ನೀರು ಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಸಚಿವ ವೆಂಕಟರಮಣಪ್ಪ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.

    ಜಿಲ್ಲೆ ಹಿರಿಯೂರು ನಗರದಲ್ಲಿ ನಡೆದ ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಮುಗಿಸುವಂತೆ ಆಗ್ರಹಿಸಿ ಕೈಗೊಂಡಿದ್ದ ಸತ್ಯಾಗ್ರಹದಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. ಹಿರಿಯೂರಿನ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಮನವೊಲಿಸಿದ ಸಚಿವರು, ನೀರು ಹರಿಸದಿದ್ದರೆ ರಾಜಿನಾಮೆ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ.

    ಜುಲೈ 30ರ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ. ಆನಂತರ ವಾಣಿ ವಿಲಾಸ ಸಾಗರಕ್ಕೆ ನೀರು ಬರುತ್ತದೆ. ಒಂದು ವೇಳೆ ಆಗಸ್ಟ್ 10ರ ಒಳಗಾಗಿ ನೀರು ಬರದಿದ್ದರೆ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಮಾತು ತಪ್ಪುವುದಿಲ್ಲ. ಈ ವಿಷಯದಲ್ಲಿ ಸುಳ್ಳು ಹೇಳುವುದಿಲ್ಲ. ನಾನು ಕೂಡಾ ರೈತನ ಮಗ ಎಂದು ವೆಂಕಟರಮಣಪ್ಪ ರೈತರಿಗೆ ಭರವಸೆ ನೀಡಿದರು.

  • ಬಿಎಸ್‍ವೈ ಡಾಕ್ಟರ್ ಅಲ್ಲ, ಕಾಂಗ್ರೆಸ್‌ನಲ್ಲಿ ಯಾರೂ ಪೇಷಂಟ್‍ಗಳಿಲ್ಲ: ಸಚಿವ ವೆಂಕಟರಮಣಪ್ಪ

    ಬಿಎಸ್‍ವೈ ಡಾಕ್ಟರ್ ಅಲ್ಲ, ಕಾಂಗ್ರೆಸ್‌ನಲ್ಲಿ ಯಾರೂ ಪೇಷಂಟ್‍ಗಳಿಲ್ಲ: ಸಚಿವ ವೆಂಕಟರಮಣಪ್ಪ

    ಚಿತ್ರದುರ್ಗ: ಮಾಜಿ ಸಿಎಂ ಯಡಿಯೂರಪ್ಪ ಡಾಕ್ಟರ್ ಅಲ್ಲ, ಕಾಂಗ್ರೆಸ್‌ನಲ್ಲಿ ಯಾರೂ ಪೇಷಂಟ್‍ಗಳಿಲ್ಲ. ಹೀಗಾಗಿ ಆಪರೇಷನ್ ಕಮಲ ನಡೆಯೋದಿಲ್ಲ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಡಿದ್ದಾರೆ.

    ಜಿಲ್ಲಾಪಂಚಾಯತ್ ಕಛೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ನಡೆಯಲ್ಲ. ನಮ್ಮ ಶಾಸಕರೆಲ್ಲ ದೇವಸ್ಥಾನಗಳಿಗೆ ಪ್ರವಾಸ ಹೋಗಿದ್ದರು ಅಷ್ಟೇ. ಬಿಜೆಪಿಯಿಂದ ಆಪರೇಷನ್ ಕಮಲ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

    ಬಳಿಕ ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ನಡೆದ ಲಂಚ ಪ್ರಕರಣದ ಬಗ್ಗೆ ಮಾತನಾಡಿದ ಅವರು ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕಚೇರಿಯ ಒಳಗೆ ಈ ಘಟನೆ ಆಗಿದ್ದರೆ, ನಾನು ಅದಕ್ಕೆ ಉತ್ತರಿಸುತ್ತಿದ್ದೆ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾಪಂಚಾಯತ್ ಸದಸ್ಯ ಯೋಗೀಶ್ ಬಾಬು ಹೆಸರು ಕೂಡ ಕೇಳಿ ಬಂದಿದೆ. ಒಂದು ವೇಳೆ ಆ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಾನೇ ಒತ್ತಾಯಿಸುತ್ತೇನೆ ಎಂದರು.

    ಅಲ್ಲದೇ ರೆಸಾರ್ಟ್ ರಾಜಕೀಯದ ಬಗ್ಗೆ ಸಹ ಪ್ರತಿಕ್ರಿಯಿಸಿದ ಸಚಿವರು, ರೆಸಾರ್ಟ್ ನಲ್ಲಿ ಕಿತ್ತಾಡಿರುವ ಶಾಸಕ ಗಣೇಶ್ ನನ್ನು ಪಕ್ಷದಿಂದ ಈಗಾಗಲೇ ಅಮಾನತುಗೊಳಿಸಲಾಗಿದೆ. ಅದು ಅವರ ವೈಯಕ್ತಿಕ ದ್ವೇಷದಿಂದ ಗಲಾಟೆ ನಡೆದಿದೆ. ಹೀಗಾಗಿ ಈ ಗಲಾಟೆ ಕುರಿತು ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿಯ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಟ್ರೆ ಬೇರೆ ಖಾತೆ ಕೊಡಿ ಇಲ್ದೆ ಹೋದ್ರೆ ರಾಜೀನಾಮೆ ತಗೊಳ್ಳಿ- ಸಿಎಂ ಎದುರು ಸಚಿವ ಅಳಲು

    ಕೊಟ್ರೆ ಬೇರೆ ಖಾತೆ ಕೊಡಿ ಇಲ್ದೆ ಹೋದ್ರೆ ರಾಜೀನಾಮೆ ತಗೊಳ್ಳಿ- ಸಿಎಂ ಎದುರು ಸಚಿವ ಅಳಲು

    ಬೆಂಗಳೂರು: ಐಎಎಸ್ ಅಧಿಕಾರಿಯ ವರ್ತನೆಗೆ ಬೇಸತ್ತ ಸಚಿವರೊಬ್ಬರು ಕೊಟ್ರೆ ಬೇರೆ ಖಾತೆ ಕೊಡಿ ಇಲ್ಲದೇ ಹೋದ್ರೆ ರಾಜೀನಾಮೆ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ.

    ಐಎಎಸ್ ಅಧಿಕಾರಿ ಆದಿತ್ಯ ಬಿಸ್ವಾಸ್ ಅವರ ಆಡಳಿತಕ್ಕೆ ಬೇಸತ್ತು ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಇದೀಗ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಆದಿತ್ಯ ಬಿಸ್ವಾಸ್ ನನ್ನ ಮಾತಿಗೆ ಬೆಲೆ ಕೊಡಲ್ಲ. ನನ್ನ ವಿರುದ್ಧ ಕೆಲಸ ಮಾಡುತ್ತಾರೆ. ನನ್ನ ಇಲಾಖೆಯಲ್ಲಿ ಏನು ನಡೆಯುತ್ತಿದೆ ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ನನ್ನ ಮಾತಿಗೆ ಬೆಲೆ ಇಲ್ಲದ ಮೇಲೆ ಈ ಖಾತೆ ಇದ್ದರೆಷ್ಟು ಬಿಟ್ಟರೆಷ್ಟು. ಹೀಗಾಗಿ ನನ್ನ ಖಾತೆ ಬದಲಾವಣೆ ಮಾಡಿ, ಇಲ್ಲವೇ ರಾಜೀನಾಮೆ ತೆಗೆದುಕೊಳ್ಳಿ ಅಂತ ಕಾರ್ಮಿಕ ಸಚಿವರು ಸಿಎಂ ಕುಮಾರಸ್ವಾಮಿ ಮುಂದೆ ತನ್ನ ಅಳಲು ತೋಡಿಕೊಂಡಿಕೊಂಡಿದ್ದಾರೆ ಎನ್ನಲಾಗಿದೆ.

    ನನ್ನ ಖಾತೆಯೇ ನನಗೆ ಮರೆತು ಹೋಗಿದೆ. ಎಲ್ಲಾ ಟೆಂಡರ್ ಗಳನ್ನು ಅವರೇ ಕರೆಯುತ್ತಾರೆ. ಗುತ್ತಿಗೆ ಆಧಾರದ ಮೇಲೆ ಅವರೆ ಉದ್ಯೋಗ ನೇಮಕಾತಿ ಮಾಡಿಕೊಳ್ಳುತ್ತಾರೆ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಷ್ಟೆಲ್ಲ ಇದ್ದ ಮೇಲೆ ನನಗೆ ಸಚಿವ ಸ್ಥಾನ ಯಾಕೆ ಅಂತ ಪ್ರಶ್ನಿಸಿದ ಸಚಿವರು, ಕೇವಲ ಸಹಿ ಹಾಕಿಕೊಂಡು ಕೂರಲು ಸಾಧ್ಯವಿಲ್ಲ. ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಖಾತೆ ಬದಲಾವಣೆ ಮಾಡಿ ಅಂತ ವೆಂಕಟರಮಣಪ್ಪ ಬಿಗಿ ಪಟ್ಟು ಹಿಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv