Tag: vendor

  • ಕೇಳಿದಷ್ಟು ಹಣಕ್ಕೆ ಪ್ಲಾಸ್ಟಿಕ್ ಟೇಬಲ್ ಕೊಟ್ಟಿಲ್ಲವೆಂದು ವ್ಯಾಪಾರಿ ಮೇಲೆ ಹಲ್ಲೆ- ಮುಖ್ಯಪೇದೆ ಅಮಾನತು

    ಕೇಳಿದಷ್ಟು ಹಣಕ್ಕೆ ಪ್ಲಾಸ್ಟಿಕ್ ಟೇಬಲ್ ಕೊಟ್ಟಿಲ್ಲವೆಂದು ವ್ಯಾಪಾರಿ ಮೇಲೆ ಹಲ್ಲೆ- ಮುಖ್ಯಪೇದೆ ಅಮಾನತು

    ಹಾಸನ: ಕೇಳಿದಷ್ಟು ಹಣಕ್ಕೆ ಪ್ಲಾಸ್ಟಿಕ್ ಟೇಬಲ್ (Plastic Table) ಕೊಡಲಿಲ್ಲ ಎಂಬ ಕಾರಣಕ್ಕೆ ಅಮಾಯಕ ವ್ಯಾಪಾರಿ ಮೇಲೆ ಕಳ್ಳತನದ ಆರೋಪ ಮಾಡಿ ಲಾಠಿಯಿಂದ ಹಲ್ಲೆ ಮಾಡಿದ ಘಟನೆ ಹಾಸನಲ್ಲಿ ನಡೆದಿದೆ.

    ಹಲ್ಲೆ ಮಾಡಿದ ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆಯ ಹೆಡ್‍ಕಾನ್ಸ್ ಟೇಬಲ್ ಮಣಿಕುಮಾರ್ ನನ್ನು ಅಮಾನತು ಮಾಡಲಾಗಿದೆ.

    ಏನಿದು ಘಟನೆ..?: ಗದಗ ಮೂಲದ ವ್ಯಾಪಾರಿ ಅರ್ಜುನ್ ಪ್ಲಾಸ್ಟಿಕ್ ಟೇಬಲ್ ವ್ಯಾಪಾರ ಮಾಡಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ. ಈ ವೇಳೆ ರಸ್ತೆ ಬಳಿ ನಿಂತಿದ್ದ ಪೊಲೀಸ್ ಕಾನ್ಸ್ ಟೇಬಲ್ ಮಣಿಕುಮಾರ್, ಅರ್ಜುನ್‍ನನ್ನು ಕರೆದು ಒಂದು ಪ್ಲಾಸ್ಟಿಕ್ ಟೇಬಲ್‍ಗೆ ಎಷ್ಟು ಎಂದು ಕೇಳಿದ್ದಾರೆ. ಈ ವೇಳೆ ಅರ್ಜುನ್ 2,500 ರೂ. ಎಂದು ಹೇಳಿದ್ದಾನೆ. 1,800 ರೂ.ಗೆ ಪ್ಲಾಸ್ಟಿಕ್ ಟೇಬಲ್ ಕೊಡುವಂತೆ ಮಣಿಕುಮಾರ್ ಕೇಳಿದ್ದಾನೆ.

    ಅಷ್ಟು ಹಣಕ್ಕೆ ಬರಲ್ಲ ನೀವೇ ಒಂದು ರೇಟ್ ಹೇಳಿ ಪ್ಲಾಸ್ಟಿಕ್ ಟೇಬಲ್ ತೆಗೆದುಕೊಳ್ಳಿ ಎಂದು ಬಡ ವ್ಯಾಪಾರಿ ಅರ್ಜುನ್ ಹೇಳಿದ್ದಾನೆ. ಇದರಿಂದ ಕೋಪಗೊಂಡ ಮಣಿಕುಮಾರ್, ಯಸಳೂರಿನ ಕೆನರಾಬ್ಯಾಂಕ್‍ನ ಕಟ್ಟಡದ ಮೇಲೆ ಅರ್ಜುನ್‍ನನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಪ್ಲಾಸ್ಟಿಕ್ ಟೇಬಲ್ ಕಳ್ಳತನ ಮಾಡಿಕೊಂಡು ಬಂದಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಾಠಿಯಿಂದ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಸ್ವಂತ ಕಾರು ಇದ್ದವರಿಗೆ BPL Card ಡೌಟ್- ರಾಜ್ಯ ಸರ್ಕಾರ ಗಂಭೀರ ಚಿಂತನೆ

    ಘಟನೆ ಸಂಬಂಧ ಮಣಿಕುಮಾರ್ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ (Yalasoor Police Station) ಅರ್ಜುನ್ ದೂರು ನೀಡಿದ್ದಾನೆ. ಸದ್ಯ ಮಣಿಕುಮಾರ್‍ನನ್ನು ಅಮಾನತುಗೊಳಿಸಿ ಎಸ್‍ಪಿ ಹರಿರಾಂ ಶಂಕರ್ (Hariram Shankar) ಆದೇಶ ಹೊರಡಿಸಿದ್ದಾರೆ. ಯಸಳೂರಿನಲ್ಲಿ ಮಣಿಕುಮಾರ್ ಸಾರ್ವಜನಿಕರೊಂದಿಗೆ ಕೂಡ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾನಿಪುರಿ ಪ್ರಿಯರಿಗೆ ಶಾಕಿಂಗ್ ನ್ಯೂಸ್- ನೀರಿಗೆ ಮೂತ್ರ ಬೆರೆಸಿದ ವೀಡಿಯೋ ವೈರಲ್

    ಪಾನಿಪುರಿ ಪ್ರಿಯರಿಗೆ ಶಾಕಿಂಗ್ ನ್ಯೂಸ್- ನೀರಿಗೆ ಮೂತ್ರ ಬೆರೆಸಿದ ವೀಡಿಯೋ ವೈರಲ್

    ದಿಸ್ಪುರ್: ಪಾನಿಪುರಿ, ಗೋಲ್‍ಗಪ್ಪಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿಯನ್ನಂತೂ ಯುವಕ- ಯುವತಿಯರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದೀಗ ಇಂತಹ ಪಾನಿಪುರಿ, ಗೋಲ್‍ಗಪ್ಪಾ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ವರದಿಯಾಗಿದೆ.

    ಹೌದು. ರಸ್ತೆ ಬದಿ ಪಾನಿಪುರಿ ಮಾರಾಟ ಮಾಡುತ್ತಿರುವ ವ್ಯಕ್ತಿಯೊಬ್ಬ ಪಾನಿಗೆ ತನ್ನ ಮೂತ್ರ ಬೆರೆಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಇದನ್ನೂ ಓದಿ: ಕಾಬೂಲ್‍ನಿಂದ ಭಾರತಕ್ಕೆ ಮರಳ್ತಿದ್ದಂತೆ ತಮ್ಮನಿಗೆ ಕಿಸ್ ಕೊಟ್ಟ ಅಕ್ಕ- ಭಾವನಾತ್ಮಕ ವೀಡಿಯೋ ವೈರಲ್

    ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕೈ ಗಾಡಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದಾನೆ. ಈ ವ್ಯಕ್ತಿ ಮಗ್ ಗೆ ಮೂತ್ರ ಮಾಡಿ ಅದನ್ನು ಪಾನಿಗೆ ಮಿಕ್ಸ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ 20 ಸೆಕೆಂಡ್ ವೀಡಿಯೋ ನೋಡಿದ ನೆಟ್ಟಿಗರು ವ್ಯಾಪಾರಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ ಕೂಡಲೇ ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.  ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ: ಹೆಚ್.ಡಿ. ಕುಮಾರಸ್ವಾಮಿ

    ಒಟ್ಟಿನಲ್ಲಿ ಗೋಲ್‍ಗಪ್ಪಾ ನೀರಿಗೆ ವ್ಯಕ್ತಿ ಮೂತ್ರ ಬೆರೆಸುವುದು ಕ್ಲೀಯರ್ ಆಗಿ ಕಾಣುತ್ತಿದೆ. ಹೀಗಾಗಿ ನೆಟ್ಟಿಗರು ವ್ಯಾಪಾರಿಯ ನಡತೆಯನ್ನು ಖಂಡಿಸಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ವ್ಯಾಪಾರಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಆತನನ್ನು ಬಂಧಿಸಿರುವುದಾಗಿ ವರದಿಯಾಗಿದೆ.  ಇದನ್ನೂ ಓದಿ: ತಾನು ಸೆಲೆಕ್ಟ್ ಮಾಡಿದ ಹಾಡು ಹಾಕೋವರೆಗೂ ಮದುವೆ ಹಾಲ್‍ಗೆ ತೆರಳಲು ನಿರಾಕರಿಸಿದ ವಧು!

  • ಬಾಳೆಗೊನೆ ನೇತು ಹಾಕಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ ವ್ಯಾಪಾರಿ

    ಬಾಳೆಗೊನೆ ನೇತು ಹಾಕಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ ವ್ಯಾಪಾರಿ

    ಚೆನ್ನೈ: ಕೊರೊನಾ ಸಂಕಷ್ಟದಲ್ಲಿ ಊಟವಿಲ್ಲದೆ ಹಸಿವಿನಿಂದ ಇರುವವರಿಗಾಗಿ ತಮಿಳುನಾಡಿನ ತೂತುಕುಡಿ ಕೋವಿಲ್‍ಪಟ್ಟಿಯ ಹಣ್ಣಿನ ವ್ಯಾಪಾರಿಯೊಬ್ಬರು ಹಸಿದವರಿಗಾಗಿ ತನ್ನಿಂದಾದ ಅಳಿಲು ಸೇವೆ ಮಾಡಲು ಹಣ್ಣಿನ ಅಂಗಡಿಯ ಎದುರು ಪ್ರತಿದಿನ ಬಾಳೆಗೊನೆಯನ್ನು ನೇತು ಹಾಕುತ್ತಿದ್ದಾರೆ.

    ತಮ್ಮ ಹಣ್ಣಿನ ಅಂಗಡಿಯ ಎದುರು ಪ್ರತಿದಿನ ಬಾಳೆಗೊನೆಗಳನ್ನು ನೇತು ಹಾಕುವ ವ್ಯಾಪಾರಿ ಮುತ್ತುಪಾಂಡಿ ಅದರ ಜೊತೆಗೆ ಬೋರ್ಡ್ ಒಂದನ್ನೂ ಸಹ ನೇತು ಹಾಕುತ್ತಾರೆ. ನೀವು ಹಸಿದಿದ್ದೆ ಈ ಬಾಳೆಹಣ್ಣನ್ನು ಉಚಿತವಾಗಿ ತೆಗೆದುಕೊಳ್ಳಿ, ಆದರೆ ವೇಸ್ಟ್ ಮಾಡಬೇಡಿ ಎಂದು ಬರೆದಿಡುತ್ತಾರೆ.

     

    ಮುತ್ತುಪಾಂಡಿ ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ವಲಸಿಗರು, ವೃದ್ಧರು, ಫೂಟ್‍ಪಾತ್‍ಗಳಲ್ಲೇ ಬದುಕುವವರು ಈ ಬಾಳೆಹಣ್ಣನ್ನು ತಿಂದು ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.

  • 4 ವರ್ಷದ ಹೆಣ್ಣು ಮಗುವಿನ ಕಿಡ್ನಾಪ್‍ಗೆ ಯತ್ನ- ಸಿಸಿಟಿಯಲ್ಲಿ ದೃಶ್ಯ ಸೆರೆ

    4 ವರ್ಷದ ಹೆಣ್ಣು ಮಗುವಿನ ಕಿಡ್ನಾಪ್‍ಗೆ ಯತ್ನ- ಸಿಸಿಟಿಯಲ್ಲಿ ದೃಶ್ಯ ಸೆರೆ

    ಚಂಢೀಗಡ: ತಂದೆ-ತಾಯಿ ಜೊತೆ ಮಲಗಿದ್ದ ಪುಟ್ಟ ಕಂದಮ್ಮನನ್ನು ವ್ಯಕ್ತಿಯೊಬ್ಬ ಅಪಹರಣ ಮಾಡಲು ಯತ್ನಿಸಿದ ಘಟನೆ ಪಂಜಾಬಿನ ಲೂಧಿಯಾನದಲ್ಲಿ ನಡೆದಿದೆ.

    ವ್ಯಕ್ತಿ 4 ವರ್ಷದ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಲು ಯತ್ನಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ವಿಡಿಯೋದಲ್ಲೇನಿದೆ..?
    ಕಳೆದ ರಾತ್ರಿ ಸೈಕಲ್ ಏರಿ ಬಂದ ವ್ಯಾಪಾರಿಯೊಬ್ಬ ಮನೆಯ ಹೊರಗಡೆ ತಂದೆ-ತಾಯಿ ಜೊತೆ ಮಂಚದಲ್ಲಿ ಮಲಗಿದ್ದ ಪುಟ್ಟ ಕಂದಮ್ಮನನ್ನು ಮೆಲ್ಲನೆ ಎತ್ತಿಕೊಂಡು ಸೈಕಲ್ ನಲ್ಲಿ ಮಲಗಿಸುತ್ತಾನೆ. ಈ ವೇಳೆ ಮಗುವಿನ ತಾಯಿ ಎಚ್ಚರಗೊಂಡು ಮಗುವನ್ನು ಆತನಿಂದ ಎಳೆದುಕೊಳ್ಳುತ್ತಾರೆ. ಇಷಾಗುವಾಗ ಮಗುವಿನ ತಂದೆಯೂ ಎಚ್ಚರಗೊಳ್ಳುತ್ತಾರೆ. ತಂದೆ ಎಚ್ಚರಗೊಂಡಂತೆಯೇ ವ್ಯಾಪಾರಿ ಸ್ಥಳದಿಂದ ಸೈಕಲ್ ಮೂಲಕ ಪರಾರಿಯಾಗಲು ಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಮಗುವಿನ ತಂದೆ ಕಳ್ಳನನ್ನು ಬೆನ್ನಟ್ಟುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಗು ಕಳ್ಳತನ ಮಾಡಲು ಯತ್ನಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸೇರಿ ಆರೋಪಿ ವ್ಯಾಪಾರಿಯನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ.

    ಸುಮಾರು 40 ವರ್ಷ ವಯಸ್ಸಿನ ಆರೋಪಿ ಮೊದಲು ಕುಟುಂಬ ಮಲಗಿದೆಯೋ ಇಲ್ಲವೋ ಎಂದು ಬಂದು ಪರಿಶೀಲಿಸಿ ಹೋಗಿದ್ದಾನೆ. ಸ್ವಲ್ಪ ಹೊತ್ತಿನ ನಂತರ ತನ್ನ ಸೈಕಲ್ ಸಮೇತ ಬಂದು ಮಗುವನ್ನು ಅಪಹರಿಸುವ ಪ್ಲಾನ್ ಮಾಡಿದ್ದಾನೆ. ಆರೋಪಿ ಮಗುವನ್ನು ಎತ್ತಿಕೊಳ್ಳುತ್ತಿದ್ದಂತೆಯೇ ಅದರ ತಾಯಿ ಎಚ್ಚರಗೊಂಡು ಕಿರುಚಾಡಿದ ಪರಿಣಾಮ ಸ್ಥಳೀಯರು ಆರೋಪಿಯನ್ನು ಹಿಡಿದಿದ್ದಾರೆ ಎಂದು ಹಿರಿಯ ಪೊಲೀಸ್ ಆದಿಕಾರಿ ರಮನ್ ದೀಪ್ ಸಿಂಗ್ ಅವರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಆರೋಪಿ ಮಗುವನ್ನು ಯಾಕೆ ಕಿಡ್ನಾಪ್ ಮಾಡಲು ಯತ್ನಿಸಿದ್ದಾನೆ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೆ ಸಿಸಿಟಿವಿ ದೃಶ್ಯವನ್ನಾಧರಿಸಿ ಮಗು ಕಳ್ಳತನ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

  • ಚಾಕು ಇರಿದು ಉದ್ಯಮಿಯಿಂದ 25 ಲಕ್ಷ ದರೋಡೆ

    ಚಾಕು ಇರಿದು ಉದ್ಯಮಿಯಿಂದ 25 ಲಕ್ಷ ದರೋಡೆ

    ಚಿತ್ರದುರ್ಗ: ಉದ್ಯಮಿಗೆ ಚಾಕು ಇರಿದು 25 ಲಕ್ಷ ರೂಪಾಯಿ ದರೋಡೆ ಮಾಡಿರೋ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಜಯನಗರದಲ್ಲಿ ನಡೆದಿದೆ.

    ಹಿರಿಯೂರಿನ ಉದ್ಯಮಿ ವಲಿಸಾಬ್ ಎಂಬವರು ಇಂದು ಬೆಳಗ್ಗೆ ಹೊಸದುರ್ಗಕ್ಕೆ ಗುಟ್ಕಾ ವ್ಯಾಪಾರದ ಬಾಕಿ ವಸೂಲಿಗಾಗಿ ತೆರಳಿದ್ದು, ಹಣ ಸಂಗ್ರಹದ ಬಳಿಕ ಖಾಸಗಿ ಬಸ್ ಮೂಲಕ ಹಿರಿಯೂರಿಗೆ ವಾಪಾಸ್ ಆಗಿದ್ದರು. ಬಸ್ ನಿಲ್ದಾಣದಿಂದ ಮನೆಗೆ ಆಟೋದಲ್ಲಿ ತೆರಳುವಾಗ ಈ ಘಟನೆ ನಡೆದಿದೆ.

    ಹೊಸದುರ್ಗದಿಂದಲೇ ಇವರನ್ನು ಹಿಂಬಾಲಿಸಿರೋ ದರೋಡೆಕೋರರು, ಮನೆ ಸಮೀಪಿಸುತ್ತಿರುವುದನ್ನ ಅರಿತು ಏಕಾಏಕಿ ಚಾಕುವಿನಿಂದ ವಲಿಸಾಬ್ ಗೆ ಇರಿದು 25 ಲಕ್ಷ ಹಣವಿರೋ ಬ್ಯಾಗನ್ನು ಲಪಟಾಯಿಸಿಕೊಂಡು ಪಲ್ಸರ್ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ.

    ದರೋಡೆಕೋರರು ಪರಾರಿಯಾಗಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ಚಾಕು ಇರಿತಕ್ಕೊಳಗಾಗಿರೋ ಗಾಯಾಳು ವಲಿಸಾಬ್ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆಯುತ್ತಿದ್ದಾರೆ.

    ಈ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.