Tag: velluru

  • ಕೊನೆ ಕ್ಷಣದಲ್ಲಿ ಅಣ್ಣನ ಕೈಯಿಂದ ತಾಳಿ ಕಿತ್ಕೊಂಡು ವಧುವಿಗೆ ಕಟ್ಟಿದ ತಮ್ಮ!

    ಕೊನೆ ಕ್ಷಣದಲ್ಲಿ ಅಣ್ಣನ ಕೈಯಿಂದ ತಾಳಿ ಕಿತ್ಕೊಂಡು ವಧುವಿಗೆ ಕಟ್ಟಿದ ತಮ್ಮ!

    ವೆಲ್ಲೂರು:ನಿಶ್ಚಯವಾದ ಬಳಿಕ, ಮಂಟಪದಲ್ಲಿಯೇ ಮುರಿದ ಮದುವೆ, ವಧು- ವರರು ಮಂಟಪಕ್ಕೆ ಬರಲಾರದೆ ಮದುವೆ ನಿಂತು ಹೋದ ಅನೇಕ ಘಟನೆಗಳು ನಡೆದಿರುವುದನ್ನು ಕೇಳಿರ್ತೀರಿ. ಆದ್ರೆ ಮಂಟಪದಲ್ಲಿಯೇ ಅಣ್ಣನ ವಧುವಿಗೆ ತಮ್ಮ ತಾಳಿ ಕಟ್ಟಿದ ಅಚ್ಚರಿಯ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.

    ಹೌದು. ವೆಲ್ಲೂರು ಸಮೀಪದ ತಿರುಪತ್ತೂರಿನ ಸೆಲ್ಲಾರ್ ಪೇಟೆಯ ಇಲವಂಪಟ್ಟಿಯ ಮುರುಗನ್ ದೇವಾಲಯದಲ್ಲಿ ನಡೆಯುವ ಶುಭಕಾರ್ಯಕ್ಕೆ ಬಂಧು-ಬಾಂಧವರೆಲ್ಲಾ ಸೇರಿದ್ದರು. ವರ ಇನ್ನೇನು ಕೆಲವೇ ನಿಮಿಷಗಳಲ್ಲಿ ವಧುವಿಗೆ ತಾಳಿ ಕಟ್ಟಲು ತಯಾರಾಗಿದ್ದನು. ಅಂತೆಯೇ ವಧುವರರನ್ನು ಹಸೆಮಣೆ ಮೇಲೆ ಕೂರಿಸಿ ಪುರೋಹಿತರು ವೇದ ಮಂತ್ರ ಉಚ್ಚರಿಸುತ್ತಿದ್ದರು. ಬಳಿಕ ವರನ ಕೈಯಲ್ಲಿ ತಾಳಿ ಕೊಟ್ಟು ವಧುವಿನ ಕೊರಳಿಗೆ ಕಟ್ಟುವಂತೆ ಸೂಚಿಸಿದ್ರು. ಹೀಗಾಗಿ ಮದುಮಗ ತಾಳಿ ಕಟ್ಟಲು ವಧುವಿನ ಬಳಿ ಹೋಗುತ್ತಿದ್ದಂತೆಯೇ ಅಲ್ಲೇ ಇದ್ದ ಮದುಮಗನ ತಮ್ಮ ಅಣ್ಣನ ಸೈಡಿಗೆಳೆದು ತಾಳಿ ಕಸಿದುಕೊಂಡು ತಾನೇ ವಧುವಿಗೆ ತಾಳಿ ಕಟ್ಟಿದ್ದಾನೆ.

    ಅಣ್ಣ ಮದುವೆಯಾಗಬೇಕಿದ್ದ ಯುವತಿಗೆ ಹೀಗೆ ತಮ್ಮ ತಾಳಿ ಕಟ್ಟಿದ್ದರಿಂದ ಅಲ್ಲಿದ್ದವರೆಲ್ಲಾ ಒಂದು ಬಾರಿ ಅವಕ್ಕಾದ್ರು. ಆದ್ರೆ ಈ ಘಟನೆಯ ಅಸಲಿ ವಿಷಯವೇನೆಂದರೆ ವರನ ತಮ್ಮ ಹಾಗೂ ವಧು ಮೊದಲೇ ಪ್ರೀತಿಸಿದ್ದರು. ಆದ್ರೆ ಈ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಇತ್ತ ಅಣ್ಣ ಅದೇ ಯುವತಿ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದ. ತಾನು ಪ್ರೀತಿಸಿದ ಯುವತಿ ಅಣ್ಣನ ಮಡದಿಯಾಗುವುದನ್ನು ಸಹಿಸಲಾರದ ತಮ್ಮ ಅಣ್ಣನನ್ನು ತಳ್ಳಿ ತಾನೇ ತಾಳಿ ಕಟ್ಟಿದ್ದಾನೆ.

    ಈ ಮದುವೆಗೆ ಕೊನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಮದುವೆಯಾಗಲು ಬಂದಿದ್ದ ವರ ಮಾತ್ರ ಕಣ್ಣೀರುಡುತ್ತಾ ಮಂಟಪದಿಂದ ಹೊರನಡೆದಿದ್ದಾನೆ.