Tag: vehicle

  • ತುಮಕೂರು ದಸರಾ – ಇಂದಿನಿಂದ ಮೂರು ದಿನ ವಾಹನ ಸಂಚಾರ ಬದಲಾವಣೆ

    ತುಮಕೂರು ದಸರಾ – ಇಂದಿನಿಂದ ಮೂರು ದಿನ ವಾಹನ ಸಂಚಾರ ಬದಲಾವಣೆ

    ತುಮಕೂರು: ತುಮಕೂರು ದಸರಾ (Tumkur Dasara) ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ಪ್ರವೇಶ ಮಾಡುವ ವಾಹನಗಳ (Vehicles) ಮಾರ್ಗ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಸೆ.30, ಅ.1 ಹಾಗೂ ಅ.2ರಂದು ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ವಾಹನಗಳ ಮಾರ್ಗ ಬದಲಾವಣೆ ಮಾಡಿ ಪ್ರಕಟಣೆ ಹೊರಡಿಸಿದೆ. ನಗರ ಪ್ರವೇಶ ಮಾಡದೇ ರಿಂಗ್ ರಸ್ತೆ ಮೂಲಕ ವಾಹನ ಚಲಾಯಿಸುವುದು ಹಾಗೂ ಅಂತರಸನಹಳ್ಳಿ, ಶಿರಾ ಗೇಟ್ ಮೂಲಕ ಬಸ್ ನಿಲ್ದಾಣಕ್ಕೆ ಹೋಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ರೇಪಿಸ್ಟ್ ಉಮೇಶ್ ರೆಡ್ಡಿಗೆ VIP ಸೌಲಭ್ಯ ಕೊಡ್ತಿದ್ದಾರೆ, ಆದ್ರೆ ದರ್ಶನ್‌ಗೆ ಏನೂ ಇಲ್ಲ: ವಕೀಲರ ವಾದ ಏನು?

    ಅದರ ಜೊತೆಗೆ ಸಂಜೆ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಜೂನಿಯರ್ ಕಾಲೇಜು ಮೈದಾನಕ್ಕೆ ತರದೇ ನಿಗದಿ ಪಡಿಸಿದ ಸ್ಥಳದಲ್ಲೇ ಬಿಟ್ಟು ಬರುವಂತೆ ಸೂಚಿಸಲಾಗಿದೆ. ಇಂದು ರಾತ್ರಿ ಮೋಹಕತಾರೆ ರಮ್ಯಾ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಕಾರ್ಯಕ್ರಮ ನೀಡಲಿದ್ದಾರೆ. ಅದೇ ರೀತಿ ನಾಳೆ ಗಾಯಕಿ ಅನನ್ಯ ಭಟ್ ಮತ್ತು ಅರ್ಜುನ್ ಜನ್ಯರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: RSSಗೆ 100 ವರ್ಷ – ನಾಳೆ ಪೋಸ್ಟ್ ಸ್ಟ್ಯಾಂಪ್, ನಾಣ್ಯ ಬಿಡುಗಡೆ ಮಾಡಲಿದ್ದಾರೆ ಪ್ರಧಾನಿ ಮೋದಿ

  • ಡೀಸೆಲ್‌ ಬೆಲೆ ಹೆಚ್ಚಳ – ಪ್ರತಿ ವಿದ್ಯಾರ್ಥಿಗೆ 500-600 ರೂ. ಹೆಚ್ಚುವರಿ ಹೊರೆ

    ಡೀಸೆಲ್‌ ಬೆಲೆ ಹೆಚ್ಚಳ – ಪ್ರತಿ ವಿದ್ಯಾರ್ಥಿಗೆ 500-600 ರೂ. ಹೆಚ್ಚುವರಿ ಹೊರೆ

    – ಶುಲ್ಕ ಏರಿಸಲು ಖಾಸಗಿ ಶಾಲಾ ವಾಹನ ಸಂಘದಿಂದ ನಿರ್ಧಾರ

    ಬೆಂಗಳೂರು: ಡೀಸೆಲ್‌ (Diesel) ಬೆಲೆ ಹೆಚ್ಚಳದ (Price Hike) ಹೊರೆಯನ್ನು ಪೋಷಕರ ಹೆಗಲಿಗೆ ಹಾಕಲು ಖಾಸಗಿ ಶಾಲಾ ವಾಹನ ಸಂಘ (Private School Vehicle Association) ನಿರ್ಧಾರ ಕೈಗೊಂಡಿದೆ.

    ಪ್ರತಿ ಲೀಟರ್‌ ಡೀಸೆಲ್‌ ದರ 2 ರೂ. ಏರಿಕೆಯಾದ ಹಿನ್ನೆಲೆಯಲ್ಲಿ ಶಾಲಾ ವಾಹನದ ಶುಲ್ಕವನ್ನು ಹೆಚ್ಚಿಸಲು ಸಂಘ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!

    ಸದ್ಯ ತಿಂಗಳಿಗೆ 2,000 ರೂ – 3,000 ರೂ. ಶುಲ್ಕವಿದೆ. ದರ ಏರಿಕೆಯಿಂದ 2,500 ರೂ- 3,500 ರೂ.ಗೆ ಏರಿಕೆಯಾಗಲಿದೆ. ಇದೇ ಶೈಕ್ಷಣಿಕ ವರ್ಷದಿಂದ ನೂತನ ದರ ಜಾರಿಯಾಗಲಿದೆ.

    ಸದ್ಯ ಬೆಂಗಳೂರಲ್ಲೇ 7 ಸಾವಿರಕ್ಕೂ ಅಧಿಕ ಶಾಲಾ ವಾಹನಗಳು ಇವೆ. ಸಾವಿರಾರು ವಿದ್ಯಾರ್ಥಿಗಳು ಖಾಸಗಿ ವಾಹನದಲ್ಲೇ ನಿತ್ಯ ಶಾಲೆಗೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!

    ಮಾರ್ಚ್‌ 31 ವರೆಗೆ ಡೀಸೆಲ್‌ ಮಾರಾಟ ತೆರಿಗೆ ದರ 18.44% ಇತ್ತು. ರಾಜ್ಯ ಸರ್ಕಾರ ಏಪ್ರಿಲ್‌ 1 ರಿಂದ ಮಾರಾಟ ತೆರಿಗೆ ದರವನ್ನು 21.17% ಕ್ಕೆ ಹೆಚ್ಚಳ ಮಾಡಿತ್ತು. ಈ ಮೂಲಕ ಪ್ರತಿ ಲೀಟರ್‌ ಡೀಸೆಲ್‌ ದರವು 2 ರೂಪಾಯಿ ಏರಿಕೆಯಾಗಿದೆ.

  • ಮಲಗಿದ್ದವನ ಮೇಲೆ ಮೀನು ತುಂಬಿದ ವಾಹನ ಹರಿದು ಕಾರ್ಮಿಕ ಸಾವು

    ಮಲಗಿದ್ದವನ ಮೇಲೆ ಮೀನು ತುಂಬಿದ ವಾಹನ ಹರಿದು ಕಾರ್ಮಿಕ ಸಾವು

    ಕಾರವಾರ: ಮೀನು ತುಂಬಿಕೊಂಡಿದ್ದ ಬುಲೆರೋ ವಾಹನ ಕಾರ್ಮಿಕನ ಮೇಲೆ ಹಾದು ಹೋಗಿ ಸ್ಥಳದಲ್ಲೇ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ (Karwar) ಬೈತಕೋಲ್‌ನಲ್ಲಿ (Baithkol) ನಡೆದಿದೆ.

    ಮೃತ ಕಾರ್ಮಿಕನನ್ನು ಹಾವೇರಿ (Haveri) ಮೂಲದ ಹನುಮಂತ್ ವಡ್ಡರ್ (27) ಎಂದು ಗುರುತಿಸಲಾಗಿದ್ದು, ಮುಂದಿನ ತಿಂಗಳು ಕಾರ್ಮಿಕನ (Labour) ಮದುವೆ ಕೂಡ ನಿಶ್ಚಯವಾಗಿತ್ತು. ಕಾರವಾರದ ಬೈತಕೋಲ್‌ನಲ್ಲಿ ಮೀನುಗಾರಿಕಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಬುಧವಾರ ಕೊಪ್ಪಳದ ಐದು ಜನ ಸ್ನೇಹಿತರೊಂದಿಗೆ ಕೆಲಸ ಮುಗಿಸಿ ಬಂದರಿನಲ್ಲಿ ಮಲಗಿದ್ದ.ಇದನ್ನೂ ಓದಿ: ನಾನು ಬಳ್ಳಾರಿ ಹೋಗೋವಾಗ ಪಾದಯಾತ್ರೆ ಮಾಡಿ ಸಿಎಂ ಆದವರು ಮನ:ಶಾಂತಿ ಕಳೆದುಕೊಂಡಿದ್ದಾರೆ: ಜನಾರ್ದನ ರೆಡ್ಡಿ

    ಗುರುವಾರ ಮುಂಜಾನೆ ಮೀನು ತುಂಬಿಕೊಂಡಿದ್ದ ಬುಲೆರೋ ವಾಹನ ಹೊರಡುವ ಸಮಯದಲ್ಲಿ ಚಾಲಕ ಈ ಕಾರ್ಮಿಕನನ್ನು ಮಲಗಿರುವುದನ್ನು ನೋಡದೇ ವಾಹನ ಚಲಾಯಿಸಿದ್ದು, ಈತನ ತಲೆಯ ಮೇಲೆ ಹರಿದು ಸ್ಥಳದಲ್ಲೇ ಮೃತಟ್ಟಿದ್ದಾನೆ.

    ಸದ್ಯ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ರಾಯಚೂರಿನಲ್ಲಿ ಮಹಿಳಾ ಅರ್ಚಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ

  • ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

    ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

    ಶ್ರೀನಗರ: ಜಮ್ಮು-ಕಾಶ್ಮೀರದ (Jammu And Kashmir) ಅನಂತ್‌ನಾಗ್‌ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ (Car Accident) ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿರುವ ಘಟನೆ ನಡೆಸಿದೆ.

    ಟಾಟಾ ಸುಮೋ ಕಾರೊಂದು ಕಮರಿಗೆ ಉರುಳಿದ್ದು, ಐವರು ಮಕ್ಕಳು ಸೇರಿ 8 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಜಮ್ಮು-ಕಾಶ್ಮೀರದ ದಕ್ಸುಮ್‌ ಪ್ರದೇಶದಲ್ಲಿ ಕಾರು ನಿಯಂತ್ರಣ ತಪ್ಪಿ, ಕಮರಿಗೆ ಉರುಳಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ರಾಮನಗರ ಇತಿಹಾಸ ಅಳಿಸುವ ಕೆಲಸ: ನಿಖಿಲ್

    ದಕ್ಸುಮ್‌ ಪ್ರದೇಶದಿಂದ ಸುಮಾರು 20 ಕಿಮೀ ದೂರದಲ್ಲಿರುವ ಆರ್ಶುನ್‌ ಹಟ್‌ ಎಂಬ ಪ್ರದೇಶದಲ್ಲಿ ಕಾರು ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಕಾರು ಕಣಿವೆಗೆ ಉರುಳುತ್ತಲೇ ಅವರ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಇನ್ನೂ ಕಾರನ್ನು ಮೇಲಕ್ಕೆ ಎತ್ತಿಲ್ಲ. ಶವಗಳನ್ನು ಕೂಡ ಮೇಲೆ ಎತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಮೃತರ ಕುರಿತು ಕೂಡ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Paris Olympics 2024: ಭಾರತದ ಮನು ಭಾಕರ್‌ ಫೈನಲ್‌ಗೆ ಎಂಟ್ರಿ – 20 ವರ್ಷಗಳ ಬಳಿಕ ವಿಶೇಷ ಸಾಧನೆ!

    ಜಮ್ಮು-ಕಾಶ್ಮೀರವು ಕಣಿವೆ ಪ್ರದೇಶವಾದ ಕಾರಣ ವಾಹನಗಳು ಹೆಚ್ಚಾಗಿ ಕಣಿವೆಗೆ ಉರುಳುತ್ತವೆ. ರಾಜೌರಿ ಜಿಲ್ಲೆಯಲ್ಲಿ ಕಳೆದ ಜೂನ್‌ನಲ್ಲಿ ಸೇನೆಯ ವಾಹನವೊಂದು ಕಂದಕಕ್ಕೆ ಉರಳಿ ಒಬ್ಬ ಯೋಧ ಮೃತಪಟ್ಟಿದ್ದರು ಹಾಗೆಯೇ, ನಾಲ್ವರು ಸೈನಿಕರು ಗಾಯಗೊಂಡಿದ್ದರು. ಗಾಯಗೊಂಡಿರುವ ಯೋಧರನ್ನು ಸೇನೆಯ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ನೀಡಲಾಗಿತ್ತು. ಇದನ್ನೂ ಓದಿ: ನಾಯಿ ಸ್ವಲ್ಪ ಟಚ್‌ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ, ಅಂತಹದ್ದರಲ್ಲಿ ಮಾಂಸ ತರೋಕಾಗುತ್ತಾ? – ಅಬ್ದುಲ್‌ ರಜಾಕ್‌

  • ಬೆಂಗಳೂರಿಗರೇ ಎಚ್ಚರ – ಕುಡಿದು ವಾಹನ ಚಾಲನೆ ಮಾಡಿದ್ರೆ ಜಪ್ತಿಯಾಗುತ್ತೆ ವಾಹನ

    ಬೆಂಗಳೂರಿಗರೇ ಎಚ್ಚರ – ಕುಡಿದು ವಾಹನ ಚಾಲನೆ ಮಾಡಿದ್ರೆ ಜಪ್ತಿಯಾಗುತ್ತೆ ವಾಹನ

    ಬೆಂಗಳೂರು: ಕ್ರಿಸ್ಮಸ್‌ (Christmas), ಹೊಸ ವರ್ಷ (New Year) ಎಂದು ಹೇಳಿ ಮದ್ಯ ಪಾರ್ಟಿ ಮಾಡಿ ವಾಹನ ಚಾಲನೆ ಮಾಡಿದ್ರೆ ನಿಮ್ಮ ಗಾಡಿ ಜಪ್ತಿಯಾಗಲಿದೆ.

    ಬೆಂಗಳೂರು ಪೊಲೀಸರು (Bengaluru Police) ಅಲರ್ಟ್ ಆಗಿದ್ದು ನಗರದಾದ್ಯಂತ ಟ್ರಾಫಿಕ್ ಪೊಲೀಸರಿಂದ (Traffic Police) ಡ್ರಂಕ್ ಆಂಡ್‌ ಡ್ರೈವ್‌ ಟೆಸ್ಟ್‌ ಆರಂಭವಾಗಿದೆ. ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಅವರ ಸೂಚನೆ ಮೇರೆಗೆ ಈಗಿನಿಂದಲೇ ಕುಡಿದು ವಾಹನ ಚಲಾಯಿಸದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಕುಡಿದು ವಾಹನ ಚಲಾಯಿಸಿದರೆ ದಂಡದ ಜೊತೆ ವಾಹನವನ್ನು ಸೀಜ್‌ ಮಾಡಲಾಗುತ್ತದೆ.  ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

    ಮಲ್ಲೇಶ್ವರದಲ್ಲಿ ಕಳೆದ ರಾತ್ರಿ ಹೈಡ್ರಾಮಾ ನಡೆದಿದೆ. ಮಲ್ಲೇಶ್ವರಂ ಸಂಚಾರ ಪೊಲೀಸರು ದೇವಯ್ಯ ಪಾರ್ಕ್ ಬಳಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಾವು ಕುಡಿದೇ ಇಲ್ಲ ಎಂದು ಕೆಲವರು ನಾಟಕ ಮಾಡಿದ್ದಾರೆ. ಆದರೆ ಆಲ್ಕೋ ಮೀಟರ್ ತಪಾಸಣೆ ಬಳಿಕ ಮೌನಕ್ಕೆ ಶರಣಾಗಿದ್ದಾರೆ.

    ಕುಡಿದು ಚಾಲನೆ ಮಾಡಿದರೆ ರಶೀದಿಯನ್ನು ಚಾಲಕನ ಕೈಗೆ ನೀಡಿ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ನಂತರ ಕೋರ್ಟ್ ನಲ್ಲಿ‌ ದಂಡ ಪಾವತಿಸಿ ಬಂದರೆ ಮಾತ್ರ ವಾಹನ ರಿಲೀಸ್‌ ಮಾಡಲಾಗುತ್ತದೆ.

     

  • ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ರಾತ್ರಿ ವೇಳೆ ವಾಹನ ನಿಲ್ಲಿಸಿದ್ರೆ ಬರ್ತಾರೆ ದರೋಡೆಕೋರರು

    ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ರಾತ್ರಿ ವೇಳೆ ವಾಹನ ನಿಲ್ಲಿಸಿದ್ರೆ ಬರ್ತಾರೆ ದರೋಡೆಕೋರರು

    ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru Mysuru Exprpessway) ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲ್ಲೇ ಇದೆ. ಇದೀಗ ಈ ಹೆದ್ದಾರಿಯಲ್ಲಿ ದರೋಡೆ ಗ್ಯಾಂಗ್ ಒಂದು ಆಕ್ಟಿವ್ ಆಗಿದ್ದು, ರಾತ್ರಿ ವೇಳೆ ವಿಶ್ರಾಂತಿಗೆ ಎಂದು ವಾಹನ ನಿಲ್ಲಿಸಿದವರಿಂದ ಹಣ, ಚಿನ್ನಾಭರಣವನ್ನು ಕಸಿದುಕೊಂಡು ಪರಾರಿಯಾಗುತ್ತಿದೆ. ಕಳೆದ ಶನಿವಾರ ರಾತ್ರಿ ವೇಳೆ ಈ ಹೆದ್ದಾರಿಯಲ್ಲಿ 2 ಗಂಟೆಯ ಅಂತರದಲ್ಲಿ 2 ದರೋಡೆ ನಡೆದಿವೆ.

    ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಈ 2 ಘಟನೆಗಳು ಜರುಗಿವೆ. ಅಂದು ರಾತ್ರಿ 1 ಗಂಟೆ ವೇಳೆ ನಗುವನಹಳ್ಳಿ ಬಳಿ ಉಡುಪಿ ಮೂಲದ ಶಿವಪ್ರಸಾದ್ ಸುಮಾ ದಂಪತಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಪ್ರವಾಸಕ್ಕಾಗಿ ಈ ದಂಪತಿ ಮಕ್ಕಳೊಂದಿಗೆ ಮೈಸೂರಿಗೆ ತೆರಳಿದ್ದರು.

    ಹೋಟೆಲ್‌ಗಳಲ್ಲಿ ಕೊಠಡಿ ಸಿಗದ ಕಾರಣ ಎಕ್ಸ್‌ಪ್ರೆಸ್ ವೇನಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ದರೋಡೆಕೋರರು (Robbers) ದಂಪತಿಗೆ ಚಾಕು ತೋರಿಸಿ 30 ಗ್ರಾಂ ಚಿನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ಈ ಘಟನೆ ನಡೆದ 2 ಗಂಟೆ ಅವಧಿಯಲ್ಲಿ ಮತ್ತೊಂದು ದರೋಡೆ ಇದೇ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ನರ್ಸಿಂಗ್ ವಿದ್ಯಾರ್ಥಿನಿಗೆ ಹೃದಯಾಘಾತ

    ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೋಲಾರದ ಡಾ. ರಕ್ಷಿತ್ ರೆಡ್ಡಿ ಡಾ. ಮಾನಸ ದಂಪತಿ ಈ ವೇಳೆ ಗೌರಿಪುರ ಬಳಿ ಕಾರಿನ ಟೈರ್ ಪಂಕ್ಚರ್ ಆಗಿದೆ. ಈ ಸಂದರ್ಭದಲ್ಲಿ ಇವರು ಟೈರ್ ಬದಲಿಸುತ್ತಿದ್ದಾಗ ಚಾಕು ತೋರಿಸಿ 40 ಗ್ರಾಂ ಚಿನ್ನಾಭರಣ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ.

    ಘಟನಾ ಸ್ಥಳಕ್ಕೆ ಮಂಡ್ಯ ಎಸ್‌ಪಿ ಎನ್. ಯತೀಶ್ ಭೇಟಿ ನೀಡಿ ಚಿನ್ನಾಭರಣ ಕಳೆದುಕೊಂಡವರಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ದರೋಡೆಕೋರರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಮುಂದೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ರೀತಿ ಪ್ರಕರಣ ಜರುಗದ ರೀತಿ ಮಂಡ್ಯ ಪೊಲೀಸ್ ಇಲಾಖೆ ಕ್ರಮವಹಿಸಿದೆ. ಇದನ್ನೂ ಓದಿ: ಕಾಂಬೋಡಿಯಾ ಪ್ರವಾಸ ಮುಗಿಸಿ ಹೆಚ್‍ಡಿಕೆ ವಾಪಸ್- ವಿದೇಶದಲ್ಲೇ ಇರಿ ಎಂದ ಸಚಿವರಿಗೆ ಟಾಂಗ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ

    ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ

    ಶ್ರೀನಗರ: ಸೇನಾ ಟ್ರಕ್‌ಗೆ (Truck) ಬೆಂಕಿ ತಗುಲಿದ ಪರಿಣಾಮ ನಾಲ್ವರು ಯೋಧರು (Soldiers) ಸಜೀವದಹನವಾಗಿರುವ ಭೀಕರ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಪ್ರದೇಶದಲ್ಲಿ ನಡೆದಿದೆ.

    ಘಟನೆ ಗುರುವಾರ ಭಟ ಧುರಿಯನ್ ಪ್ರದೇಶದ ಬಳಿ ನಡೆದಿರುವುದಾಗಿ ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ ಸಿಡಿಲು ಬಡಿದ ಪರಿಣಾಮ ಯೋಧರನ್ನು ಸಾಗಿಸಲಾಗುತ್ತಿದ್ದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದರ್ಗಾದಲ್ಲಿ ಗಳಗಳನೆ ಅತ್ತ ರಮೇಶ್ ಕುಮಾರ್

    ಸ್ಥಳಕ್ಕೆ ಸೇನೆ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಲಂಡನ್‍ಗೆ ತೆರಳುತ್ತಿದ್ದ ಅಮೃತ್‌ಪಾಲ್ ಪತ್ನಿ ಪೊಲೀಸರ ವಶಕ್ಕೆ

  • ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

    ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

    ಲಕ್ನೋ: ಗ್ಯಾಂಗ್‍ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್‍ನನ್ನು (Atiq Ahmed) ಉತ್ತರ ಪ್ರದೇಶಕ್ಕೆ (Uttar Pradesh) ಸ್ಥಳಾಂತರಿಸುವಾಗ ಬೆಂಗಾವಲು ವಾಹನಕ್ಕೆ (Vehicle) ಹಸುವೊಂದು (Cow) ಡಿಕ್ಕಿ ಹೊಡೆದ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಶಿವಪುರಿಯಲ್ಲಿ ಬೆಂಗಾವಲು ಪಡೆ ಪ್ರಯೋಜ್‍ರಾಜ್‍ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದ ನಂತರ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.

    ಅತಿಕ್ ಅಹ್ಮದ್ ಅವರನ್ನು ಗುಜರಾತ್‍ನ ಸಬರಮತಿ ಜೈಲಿನಿಂದ ಹೊರಗೆ ಕರೆದೊಯ್ಯಲಾಯಿತು. ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳ ನಡುವೆ ಸೋಮವಾರ ಸಂಜೆಯೊಳಗೆ ಪ್ರಯಾಗ್‍ರಾಜ್ ತಲುಪಲಿದೆ.

    ಅತಿಕ್ ಅಹ್ಮದ್‍ನ ಜೈಲಿನಲ್ಲಿದ್ದಾಗ ರಿಯಲ್ ಎಸ್ಟೇಟ್ ಉದ್ಯಮಿ ಮೋಹಿತ್ ಜೈಸ್ವಾಲ್ ಅವರನ್ನು ಅಪಹರಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ʻಫುಟ್ಬಾಲ್ʼ ಚಿಹ್ನೆ ತೆಗೆದುಕೊಂಡ ಕಥೆ ವಿವರಿಸಿದ ಜನಾರ್ದನ ರೆಡ್ಡಿ

    ಇತ್ತೀಚೆಗೆ ಉಮೇಶ್ ಪಾಲ್ ಹತ್ಯೆ ಪ್ರಕರಣ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಈತನ ಹೆಸರಿದೆ. ಈ ವರ್ಷ ಫೆಬ್ರವರಿ 24 ರಂದು ಪ್ರಯಾಗ್‍ರಾಜ್‍ನಲ್ಲಿರುವ ಅವರ ನಿವಾಸದ ಹೊರಗೆ ಉಮೇಶ್ ಪಾಲ್‍ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದನ್ನೂ ಓದಿ: ಮಾಡಾಳ್‌ ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಜಾ: ಯಾವುದೇ ಕ್ಷಣದಲ್ಲಿ ಬಂಧನ

  • ಹಿಮದಿಂದ ಕೂಡಿದ್ದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದ ವಾಹನ – 3 ಯೋಧರು ಹುತಾತ್ಮ

    ಹಿಮದಿಂದ ಕೂಡಿದ್ದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದ ವಾಹನ – 3 ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಪ್ವಾರದ ಮಚ್ಚಲ್ ಸೆಕ್ಟರ್‌ನ ಮುಂಚೂಣಿ ಪ್ರದೇಶದಲ್ಲಿ ಕಾರ್ಯಾಚರಣೆ ವೇಳೆ ಸಂಭವಿಸಿದ ಅಪಘಾತದಲ್ಲಿ ಮೂವರು ಭಾರತೀಯ ಸೇನಾ ಸಿಬ್ಬಂದಿ (Army Personnel) ಹುತಾತ್ಮರಾಗಿದ್ದಾರೆ.

    ಒಬ್ಬರು ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಮತ್ತು ಇಬ್ಬರು ಇತರ ಶ್ರೇಣಿಯ (OR) ಅಧಿಕಾರಿಗಳು ಪ್ರಯಾಣಿಸುತ್ತಿದ್ದ ವಾಹನವು ಹಿಮದಿಂದ ತುಂಬಿದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದಿದೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಹುಡುಕಿಕೊಡುವಂತೆ ಯುವಕ ಕರೆ- ಡಿಟೇಲ್ಸ್ ಕಳುಹಿಸು ಅಂದ್ರು ಶಾಸಕ

    ದುರಂತದಲ್ಲಿ ಮೂವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಹುತಾತ್ಮ ಯೋಧರ ಪಾರ್ಥೀವ ಶರೀರಗಳನ್ನು ಪಡೆಯಲಾಗಿದೆ ಎಂದು ಸೇನೆಯ ಚಿನಾರ್‌ ಕಾರ್ಪ್ಸ್‌ ತಿಳಿಸಿದ್ದಾರೆ.

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 16 ಮಂದಿ ಭಾರತೀಯ ಸೈನಿಕರು ಮಡಿದಿದ್ದರು. ಟ್ರಕ್‌ ಸಿಕ್ಕಿಂನಲ್ಲಿ ಕಮರಿಗೆ ಬಿದ್ದು ಮೂವರು ಅಧಿಕಾರಿಗಳು ಸೇರಿ 16 ಸೈನಿಕರು ಹುತಾತ್ಮರಾಗಿದ್ದರು. ಇದನ್ನೂ ಓದಿ: 50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ – ಗೋ ಫಸ್ಟ್‌ಗೆ DGCA ನೋಟಿಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು

    2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಈ ವರ್ಷ ದಾಖಲೆಯ ಮಟ್ಟದಲ್ಲಿ ಡ್ರಿಂಕ್ ಅಂಡ್ ಡ್ರೈವ್ (Drink And Drive) ಕೇಸ್‍ಗಳು ದಾಖಲಾಗಿದೆ.

    ಹೌದು. 2022 ಅಂತ್ಯಗೊಂಡು, 2023 ಪ್ರಾರಂಭವಾಗಲು ಐದೇ ದಿನ ಬಾಕಿಯಿದೆ. ಈಗಾಗಲೇ 2023ರ ಆಚರಣೆಗೆ ಅದ್ಧೂರಿಯ ಸಿದ್ಧತೆಯು ಪ್ರಾರಂಭಗೊಂಡಿದ್ದು, ಎಲ್ಲಾ ಪಬ್‍ಗಳು ಬುಕ್ ಆಗಿದೆ. ಆದರೆ ಕೇವಲ ಸಿಲಿಕಾನ್ ಸಿಟಿಯೊಂದರಲ್ಲಿ ಈ ವರ್ಷದ ನವೆಂಬರ್‌ವರೆಗೆ 26,017 ಮಂದಿಯ ವಿರುದ್ಧ ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ದಾಖಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

    ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ವಾಹನ ಸವಾರರು 26 ಕೋಟಿ ರೂ. ಸಂದಾಯ ಮಾಡಿದ್ದಾರೆ. 2020 ಹಾಗೂ 2021ರಲ್ಲಿ ಕೋವಿಡ್ ಹಿನ್ನೆಲೆ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಅಷ್ಟಾಗಿ ನಡೆದಿರಲಿಲ್ಲ. ಆದರೆ ಈ ವರ್ಷ ಅಪಘಾತ ತಡೆಯುವ ಸಲುವಾಗಿ ಸಂಚಾರಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಿದ್ದಾರೆ. ಇದನ್ನೂ ಓದಿ: ಇಂಧನ ಟ್ಯಾಂಕರ್ ಭೀಕರ ಸ್ಫೋಟ – 10 ಸಾವು, 40 ಮಂದಿಗೆ ಗಾಯ

    2020ರಲ್ಲಿ 5,343 ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ದಾಖಲಾಗಿದ್ದವು. 2021ರಲ್ಲಿ 4,144 ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ದಾಖಲಾಗಿದ್ದವು. ಆದರೆ ಈ ಬಾರಿ ಸಾಕಷ್ಟು ಜನ ಕುಡಿದು ಗಾಡಿ ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕೈ ನಾಯಕ ಅಲ್ತಾಫ್‌ ಖಾನ್ ಮನೆ ಬಳಿ ಹೊಂಚು ಹಾಕಿದ್ದ ಮೂವರು ವಶಕ್ಕೆ

    Live Tv
    [brid partner=56869869 player=32851 video=960834 autoplay=true]