Tag: vegitable

  • ಶತಕದಂಚಿನಲ್ಲಿ ಟೊಮೆಟೊ  ದರ – ವರ್ಷದಲ್ಲಿ 2ನೇ ಬಾರಿಗೆ 100 ರೂ. ಸನಿಹಕ್ಕೆ ‘ಕೆಂಪಣ್ಣ’

    ಶತಕದಂಚಿನಲ್ಲಿ ಟೊಮೆಟೊ  ದರ – ವರ್ಷದಲ್ಲಿ 2ನೇ ಬಾರಿಗೆ 100 ರೂ. ಸನಿಹಕ್ಕೆ ‘ಕೆಂಪಣ್ಣ’

    ಬೆಂಗಳೂರು: ಕಳೆದ ಕೆಲ ದಿನಗಳಿಂದ ದಿನಬೆಳಗಾದರೆ ಒಂದಲ್ಲ ಒಂದು ವಸ್ತುಗಳ ದರ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಅಗತ್ಯ ತರಕಾರಿಗಳಾದ ಈರುಳ್ಳಿ, ಬೆಳ್ಳುಳ್ಳಿ ದರ ಗಗನ ಸಖಿಯಾಗಿದ್ದು, ಈ ಸಾಲಿಗೆ ಟೊಮೆಟೊ (Tomato) ಕೂಡ ಸೇರ್ಪಡೆಯಾಗಿದೆ.

    ಕಳೆದ ಕೆಲ ದಿನಗಳಿಂದ ಈರುಳ್ಳಿ, ಬೆಳ್ಳುಳ್ಳಿ ದರ ಕೇಳಿದ್ರೆನೆ ಜನ ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗಾಗಲೇ ಬೆಳ್ಳುಳ್ಳಿ ಕೆಜಿಗೆ 400 ರೂ. ದಾಟಿದ್ರೆ ಈರುಳ್ಳಿ 100 ರೂ. ಸನಿಹಕ್ಕೆ ಬಂದಿದೆ. ಈ ನಡುವೆ ಟೊಮೆಟೊ ಕೂಡ ಇದೇ ಸಾಲಿಗೆ ಸೇರಿದ್ದು. ಟೊಮೆಟೊ ದರ 100 ರೂ. ದರ ಏರಿಕೆಯಾಗಿದೆ. ಇದನ್ನೂ ಓದಿ: ಇಸ್ರೇಲ್‌ ಯುದ್ಧಕ್ಕೆ ಬೆಚ್ಚಿದ ಜನ – 2.20 ಲಕ್ಷ ಮಂದಿ ಲೆಬನಾನ್‌ನಿಂದ ಸಿರಿಯಾಕ್ಕೆ ಪಲಾಯನ

    ಕಳೆದ ನಾಲ್ಕೈದು ತಿಂಗಳ ಹಿಂದಷ್ಟೇ ಮಳೆ ಅಭಾವ ಮತ್ತು ರೋಗದ ಕಾರಣ ಭಾರೀ ಪ್ರಮಾಣದಲ್ಲಿ ಟೊಮೆಟೊ ಇಳುವರಿ ಕಡಿಮೆಯಾಗಿತ್ತು. ಪರಿಣಾಮ ಟೊಮೆಟೊ ದರ 100 ರೂ. ದಾಟಿತ್ತು. ಆ ಬಳಿಕ ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣ ಆಗಿ ದಿಢೀರ್ ದರ ಏರಿಕೆಯಾಗಿದ್ದು, ಟೊಮೆಟೊ ಕೊಳ್ಳೋಕು ಹಿಂದೂಮುಂದು ನೋಡುವ ಸ್ಥಿತಿ ನಿರ್ಮಾಣ ಆಗಿದೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಾದ ಕಾರಣ ಇತರೆ ಜಿಲ್ಲೆಗಳಿಂದ ಬೆಂಗಳೂರಿಗೆ (Bengaluru) ಸರಬರಾಜು ಆಗುತ್ತಿದ್ದ ಟೊಮೆಟೊದಲ್ಲಿ ಭಾರೀ ಇಳಿಕೆ ಕಂಡಿದೆ. ಬೆಂಗಳೂರಿನ ಕೆಲ ಭಾಗಗಳಿಂದ ಮಾತ್ರ ಟೊಮೆಟೊ ಬರುತ್ತಿದ್ದು, ಸಂಪೂರ್ಣ ಪೂರೈಕೆ ಆಗುತ್ತಿಲ್ಲ. ಹೀಗಾಗಿ ದರ ಏರಿಕೆ ಆಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಈಗಲೂ ಸಮಯವಿದೆ ಹಿಂದೆ ಸರಿದುಬಿಡಿ – ಲೆಬನಾನ್‌ಗೆ ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

    ಟೊಮೆಟೊ ದರ ಏರಿಕೆಯಾಗಲು ಕಾರಣಗಳೇನು?
    – ಅತಿವೃಷ್ಟಿಯಿಂದ ಅನೇಕ ಕಡೆ ಬೆಳೆ ನಾಶದಿಂದ ಸರಬರಾಜು ಇಳಿಕೆ
    – ಪೂರೈಕೆಗಿಂತ ಎರಡು ಪಟ್ಟು ಬೇಡಿಕೆ ಇರುವುದು
    – ಕೋಲಾರ ಜಿಲ್ಲೆಯಿಂದಲೇ ಹೆಚ್ಚು ಪೂರೈಕೆ ಆಗುತ್ತಿದ್ದು, ಪೂರೈಕೆ ಇಳಿಕೆಯಾಗಿರೋದು.
    – ಇಳುವರಿ ಕುಸಿತದ ಪರಿಣಾಮ ನೆಲಕಚ್ಚಿದ ಟೊಮೆಟೊ ಬೆಳೆ
    – ರೋಗ ಬಾಧೆ, ಕಳಪೆ ಸಸಿಗಳಿಂದಾಗಿ ಹಲವೆಡೆ ಟೊಮೆಟೊ ಇಳುವರಿಯಲ್ಲಿ ಕುಸಿತ
    – ಸಾಲು, ಸಾಲು ಹಬ್ಬಗಳ ಹಿನ್ನೆಲೆ ಹೊರ ರಾಜ್ಯಗಳಿಂದಲೂ ಟೊಮೆಟೊಗೆ ಭಾರೀ ಬೇಡಿಕೆ
    – ಹೀಗಾಗಿ ಹೊರ ರಾಜ್ಯಗಳ ಬೇಡಿಕೆಯಿಂದ ಅಲ್ಲಿಗೂ ಪೂರೈಕೆಯಾಗುತ್ತಿರೋ ಕಾರಣ ಟೊಮೆಟೊ ದುಬಾರಿ
    – ತಮಿಳುನಾಡು, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಿಂದ ನಮ್ಮ ರಾಜ್ಯದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿ ಅಲ್ಲಿಗೂ ಪೂರೈಕೆಯಾಗಿ ದರ ಏರಿಕೆಯಾಗಿದೆ. ಇದನ್ನೂ ಓದಿ: ಜಾತಿಗಣತಿ ಅನುಷ್ಠಾನಕ್ಕೆ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರೋಧ

    ಹೊರ ರಾಜ್ಯಗಳು ಕೂಡ ಹೆಚ್ಚಾಗಿ ರಾಜ್ಯದ ಟೊಮೆಟೊ ಮೇಲೆ ಅವಲಂಬನೆ ಕಾರಣ ಅನೇಕ ಗಡಿ ಜಿಲ್ಲೆಗಳು ಹೊರ ರಾಜ್ಯಗಳಿಗೆ ಹೆಚ್ಚಾಗಿ ಪೂರೈಕೆ ಮಾಡುತ್ತಿವೆ. ಇದು ಕೂಡ ದರ ಏರಿಕೆಗೆ ಕಾರಣ ಆಗುತ್ತಿದೆ. ಸದ್ಯ ಇದೇ ಪರಿಸ್ಥಿತಿ ಇನ್ನೂ ಒಂದೆರೆಡು ವಾರ ಮುಂದುವರಿಯುವ ಸಾಧ್ಯತೆ ಇದೆ. ಹೊಸ ಬೆಳೆ ಬಂದು ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗಬೇಕಿದೆ. ಮಳೆ ಕಡಿಮೆಯಾದರೆ ಮುಂದಿನ ಒಂದೆರೆಡು ವಾರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂತಿದ್ದಾರೆ. ಇದನ್ನೂ ಓದಿ: ಮೂವರಲ್ಲಿ ಒಬ್ಬರಿಗೆ ಸಿಎಂ ಚಾನ್ಸ್‌ – ಡಿನ್ನರ್ ಮೀಟಿಂಗ್‌ನಲ್ಲಿ ತ್ರಿಮೂರ್ತಿಗಳು ಚರ್ಚಿಸಿದ್ದೇನು?

    ಹಬ್ಬದ ನಡುವೆಯೇ ದರ ಏರಿಕೆ ಜನರನ್ನ ಹೈರಾಣಾಗಿಸುತ್ತಿದೆ ಅನ್ನೋ ಬೇಸರ ಒಂದು ಕಡೆಯಾದರೆ, ಮತ್ತೊಂದೆಡೆ ಈಗಾಗಲಾದರು ಬೆಳೆದ ಬೆಳೆಗೆ ರೈತ ಸ್ವಲ್ಪ ಲಾಭ ಕಾಣುವ ಸಮಯ ಬಂತಲ್ಲ ಅನ್ನೋದೇ ನೆಮ್ಮದಿ ವಿಚಾರ. ಇದನ್ನೂ ಓದಿ: ನಾವು ದಿನನಿತ್ಯ ತಿನ್ನೋ ಅನ್ನ ಎಷ್ಟು ಸೇಫ್? – ಕೃಷಿ ವಿವಿಯಿಂದ ಸ್ಫೋಟಕ ಮಾಹಿತಿ ಬಹಿರಂಗ!

  • ತರಕಾರಿ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾದ BBMP

    ತರಕಾರಿ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾದ BBMP

    ಬೆಂಗಳೂರು: ಮಾಸ್ಕ್ ದಂಡ, ಕಸದ ದಂಡ, ಪ್ಲಾಸ್ಟಿಕ್ ಬಳಕೆ ದಂಡ ಹಾಕಿದ್ದ ಬಿಬಿಎಂಪಿ, ಈಗ ತರಕಾರಿ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿದೆ.

    ಕೆ.ಆರ್ ಮಾರ್ಕೆಟ್ ರೀತಿಯ ಬೃಹತ್ ಮಾರ್ಕೆಟ್‍ಗೆ ತರಕಾರಿ ಮಾರಲು ತಂದವರು ವ್ಯಾಪಾರ ನಡೆಸಿದ ಬಳಿಕ ಉಳಿದ ತರಕಾರಿಗಳನ್ನು ಮಂಡಿಯಲ್ಲೇ ಬಿಟ್ಟು ಹೋಗ್ತಾರೆ. ಆ ರೀತಿ ತರಕಾರಿಗಳನ್ನು ಮಂಡಿಯಲ್ಲಿ ಬಿಟ್ಟು ಹೋದವರ ಮೇಲೆ ಇನ್ಮುಂದೆ ದಂಡ ಬೀಳಲಿದೆ. ಕೆ.ಆರ್ ಮಾರ್ಕೆಟ್ ಬಳಿ ಮಾರ್ಷಲ್‍ಗಳು ಮೈಕ್‍ನಲ್ಲಿ ಈ ರೀತಿ ಅನೌನ್ಸ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಗ್ರರ ಸುರಕ್ಷಿತ ಅಡಗುದಾಣವಾಗ್ತಿದ್ಯಾ ಬೆಂಗಳೂರು? – ಶಂಕಿತ ಲಷ್ಕರ್ ಉಗ್ರನ ವಶ

    ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ದಂಡ ಹಾಕುವುದಕ್ಕೆ ಬಿಬಿಎಂಪಿ ಮುಂದಾಗಿದೆ. ತರಕಾರಿ ಎಷ್ಟು ಬಿಟ್ಟು ಹೋಗಿದ್ದಾರೆ ಎಂಬ ತೂಕದ ಆಧಾರದ ಮೇಲೆ ದಂಡ ಹಾಕಲಾಗುತ್ತದೆ. ಅರ್ಧ ಟನ್, ಒಂದು ಟನ್‍ವರೆಗೂ ತರಕಾರಿ ಮಾರ್ಕೆಟ್‍ನಲ್ಲಿ ಬಿಟ್ಟು ಹೋದ್ರೆ 5 ಸಾವಿರದಿಂದ 10 ಸಾವಿರದವರೆಗೂ ದಂಡ ಹಾಕಲು ನಿರ್ಧರಿಸಲಾಗಿದೆ. ಆದರೆ, ವ್ಯಾಪಾರಿಗಳು ನಮಗೆ ಲಾಭ ಆಗೋದೇ ನೂರು ರೂಪಾಯಿ. ಇದನ್ನು ದಂಡವಾಗಿ ಕಟ್ಟಿದರೆ ನಮ್ಮ ಗತಿ ಏನು ಎಂದು ದಂಡ ಪ್ರಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಘೋಷಣೆಗೆ ಮುಂದಾಗುತ್ತಾರಾ ಡಿಕೆ ಬದ್ರರ್ಸ್‌?

    ವೇಸ್ಟ್ ತರಕಾರಿಯನ್ನು ಹೀಗೆ ಮಾಡಿ:
    ಬಿಬಿಎಂಪಿ ಕಸದ ಲಾರಿಗೆ ವೇಸ್ಟ್ ತರಕಾರಿ ಹಾಕಿ. ವ್ಯಾಪಾರದ ವೇಳೆ ಪಕ್ಕದಲ್ಲಿ ಚೀಲ ಇಟ್ಕೊಂಡು ಕಸವನ್ನು ಹಾಕಿ. ಕೊಳೆತ ಹಣ್ಣು, ತರಕಾರಿಗಳನ್ನು ಸಂಗ್ರಹಿಸಿ ಕಸದ ಲಾರಿಗೆ ಹಾಕಿ. ತರಕಾರಿ ಮೇಲೆ ಹೊದಿಕೆಗೆ ಹಾಕಿದ ಪೇಪರ್, ಹುಲ್ಲು, ಚೀಲವನ್ನು ಪ್ರತ್ಯೇಕವಾಗಿ ಲಾರಿಗೆ ಹಾಕಿ ಈ ಮೂಲಕ ಸ್ವಚ್ಛತೆಯನ್ನು ಕಾಪಾಡಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಿಂಪಲ್ಲಾಗಿ ಮಾಡಿ ವೆಜಿಟೇಬಲ್ ಸೂಪ್

    ಸಿಂಪಲ್ಲಾಗಿ ಮಾಡಿ ವೆಜಿಟೇಬಲ್ ಸೂಪ್

    ತ್ತೀಚಿನ ದಿನಗಳಲ್ಲಿ ಸಂಜೆಯಾಗುತ್ತಿದ್ದಂತೆ ಚಳಿಯಾಗುತ್ತಿದ್ದು, ಬಿಸಿ ಬಿಸಿ ಏನಾದರೂ ತಿನ್ನಬೇಕು ಅಥವಾ ಕುಡಿಯಬೇಕು ಎನಿಸುವುದು ಸಹಜ. ಹೀಗಾಗಿ ಮನೆಯಲ್ಲೇ ಮಾಡಿ ಸಿಂಪಲ್ಲಾಗಿ ವೆಜಿಟೇಬಲ್ ಸೂಪ್ ಮಾಡಿ ಕುಡಿಯಿರಿ.

    ಬೇಕಾಗುವ ಸಾಮಾಗ್ರಿಗಳು:
    ಬಟಾಣಿ – ಒಂದು ಹಿಡಿ
    ಎಲೆಕೋಸು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
    ಕ್ಯಾರೆಟ್ – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
    ಸ್ವೀಟ್ ಕಾರ್ನ್ – ಸ್ವಲ್ಪ
    ಬೆಳ್ಳುಳ್ಳಿ – 3-4 ಎಸಳು
    ಆಲೂಗಡ್ಡೆ – ಬೇಯಿಸಿದ್ದು 1
    ಪೆಪ್ಪರ್ ಪೌಡರ್ – 1 ಸ್ಪೂನ್
    ಬೀಟ್‍ರೂಟ್ – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
    ಕಾರ್ನ್ ಫ್ಲೋರ್ – 1 ಸ್ಪೂನ್
    ಕೊತ್ತಂಬರಿ – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
    ಉಪ್ಪು – ರುಚಿಗೆ ತಕ್ಕಷ್ಟು
    (ಮಿಂಟ್ ಫ್ಲೇವರ್ ಬೇಕಾದ್ರೆ ಪುದೀನ ಹಾಕಿ.. ಇಲ್ಲವಾದರೆ ಬೇಡ)

    ಮಾಡುವ ವಿಧಾನ
    * ಒಂದು ಅಗಲವಾದ ಪಾತ್ರೆಗೆ ಮುಕ್ಕಾಲು ಲೀಟರ್ ನಷ್ಟು ನೀರು ಹಾಕಿ. ಎಲ್ಲಾ ತರಕಾರಿ ಹಾಕಿ ಬೇಯಲು ಬಿಡಿ
    * ಒಂದು ಮಿಕ್ಸಿ ಜಾರಿಗೆ ಬೇಯಿಸಿದ ಆಲೂಗಡ್ಡೆ ನೀರು ಸೇರಿಸಿ ಪೇಸ್ಟ್ ರೀತಿ ಮಾಡಿಕೊಳ್ಳಿ
    * ಒಂದು ಸಣ್ಣ ಬಟ್ಟಲಿಗೆ ಕಾರ್ನ್‍ಫ್ಲೋರ್ ಹಾಕಿ ನೀರು ಸೇರಿಸಿ ಮಿಕ್ಸ್ ಮಾಡಿ
    * ಈಗ ಬೇಯುತ್ತಿರುವ ತರಕಾರಿಗೆ ಆಲೂಗಡ್ಡೆ ಪೇಸ್ಟ್, ಕಾರ್ನ್‍ಫ್ಲೋರ್ ಪೇಸ್ಟ್ ಸೇರಿಸಿ ಬೇಯಿಸಿ
    * ಸಣ್ಣ ಕುದಿ ಬಂದ ಮೇಲೆ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ
    * 2-3 ನಿಮಿಷ ಕುದಿ ಬಂದ ಮೇಲೆ ಕೆಳಗಿಳಿಸಿ ಸರ್ವ್ ಮಾಡಿ
    * ಸರ್ವ್ ಮಾಡುವಾಗ ಅದರ ಮೇಲೆ ಕೊತ್ತಂಬರಿ ಉದುರಿಸಿ ಕೊಡಿ