Tag: ‌VEGETABLE SALAD

  • ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಹಕಾರಿ ಈ ವೆಜಿಟೇಬಲ್ ಸಲಾಡ್..

    ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಹಕಾರಿ ಈ ವೆಜಿಟೇಬಲ್ ಸಲಾಡ್..

    ತೂಕ ಕಳೆದುಕೊಂಡು ಸುಂದರವಾಗಿ ಕಾಣಬೇಕು ಎನ್ನುವುದು ಬಹುತೇಕರ ಕನಸಾಗಿರುತ್ತದೆ. ಆದರೆ ಕೆಲಸದ ಒತ್ತಡದಿಂದ ತೂಕ ಇಳಿಸಿಕೊಳ್ಳುವ ಸಲುವಾಗಿ ವ್ಯಾಯಾಮ ಮಾಡಲು ಅನೇಕರಿಗೆ ಸಮಯ ದೊರೆಯುವುದಿಲ್ಲ. ಕೆಲವರು ಡಯೆಟ್ ಎಂದು ಊಟ-ತಿಂಡಿ ಬಿಡುತ್ತಾರೆ. ಇದರಿಂದ ದೇಹದಲ್ಲಿ ಪೌಷ್ಠಿಕಾಂಶ ಕಡಿಮೆಯಾಗಿ ಅನಾರೋಗ್ಯ ಉಂಟಾಗಬಹುದು. ಇದಕ್ಕೆ ಪರಿಹಾರವಾಗಿ ನಮ್ಮ ಊಟದಲ್ಲಿ ವೆಜಿಟೇಬಲ್ ಸಲಾಡ್‌ನಂತಹ ಆರೋಗ್ಯಕರ ಆಹಾರವನ್ನು ಸೇವಿಸುವುದು ಉತ್ತಮ. ಹಾಗಿದ್ದರೆ ಅತ್ಯಂತ ಕಡಿಮೆ ಸಮಯದಲ್ಲಿ ಇದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಡೈರಿ ಫ್ರೀ – ಮೂರೇ ಪದಾರ್ಥ ಬಳಸಿ ಮಾಡಿ ಸಖತ್ ಟೇಸ್ಟಿ ಐಸ್‌ಕ್ರೀಮ್ ವೆಜಿಟೇಬಲ್‌ 

    ಬೇಕಾಗುವ ಸಾಮಾಗ್ರಿಗಳು:
    ಹೆಚ್ಚಿದ ಈರುಳ್ಳಿ- ಅರ್ಧ
    ಹೆಚ್ಚಿದ ಕ್ಯಾರೆಟ್- 1
    ಹೆಚ್ಚಿದ ದೊಣ್ಣೆ ಮೆಣಸು- ಅರ್ಧ ಕಪ್
    ಬೀಜ ತೆಗೆದು ಹೆಚ್ಚಿದ ಟೊಮೆಟೊ- 1
    ಹೆಚ್ಚಿದ ಸೌತೆಕಾಯಿ- ಒಂದು ಕಪ್
    ಹೆಚ್ಚಿದ ಕೋಸುಗೆಡ್ಡೆ- ಅರ್ಧ ಕಪ್
    ಉಪ್ಪು- ರುಚಿಗೆ ತಕ್ಕಷ್ಟು
    ನಿಂಬೆಹಣ್ಣಿನ ರಸ- ಒಂದು ಚಮಚ
    ಆಲಿವ್ ಆಯಿಲ್- ಅಗತ್ಯಕ್ಕೆ ತಕ್ಕಷ್ಟು
    ಹೆಚ್ಚಿದ ಕೊತ್ತಂಬರಿ ಸೊಪ್ಪು- ಸ್ವಲ್ಪ
    ಕರಿಮೆಣಸಿನ ಪುಡಿ- ಸ್ವಲ್ಪ

    ಮಾಡುವ ವಿಧಾನ:

    • ಮೊದಲಿಗೆ ಒಂದು ಬೌಲಿಗೆ ಎಲ್ಲಾ ತರಕಾರಿಗಳನ್ನು ಸಣ್ಣದಾಗಿ ಹೆಚ್ಚಿಕೊಂಡು ಹಾಕಿಕೊಳ್ಳಬೇಕು.
    • ಬಳಿಕ ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    • ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಾಕಿಕೊಳ್ಳಬೇಕು.
    • ಈಗ ಇದಕ್ಕೆ ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    • ನಂತರ ಇದಕ್ಕೆ ಸ್ವಲ್ಪ ಆಲಿವ್ ಆಯಿಲ್ ಸೇರಿಸಿಕೊಂಡು ಮತ್ತೊಮ್ಮೆ ಚನ್ನಾಗಿ ತಿರುವಿಕೊಳ್ಳಿ. ಈಗ ವೆಜಿಟೇಬಲ್ ಸಲಾಡ್ ಸವಿಯಲು ಸಿದ್ಧ.

    ಈ ರೀತಿಯಾದ ಸಲಾಡ್‌ಗಳನ್ನು ಸೇವಿಸುವುದರಿಂದ ತೂಕವನ್ನು ಇಳಿಸಿಕೊಳ್ಳುವುದು ಮಾತ್ರವಲ್ಲದೇ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇದನ್ನೂ ಓದಿ: ರೋಜ್ ಟೀ ಮಾಡಿ ಸವಿದು, ರಿಫ್ರೆಶ್ ಆಗಿ