Tag: Vegetable Price Hike

  • ಸೈಕ್ಲೋನ್ ಎಫೆಕ್ಟ್; ತರಕಾರಿ ಬೆಲೆ ಗಗನಕ್ಕೆ – ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

    ಸೈಕ್ಲೋನ್ ಎಫೆಕ್ಟ್; ತರಕಾರಿ ಬೆಲೆ ಗಗನಕ್ಕೆ – ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

    – ಬೆಳ್ಳುಳಿಗೆ 600 ರೂ., ನುಗ್ಗೆಕಾಯಿ ಕೆಜಿಗೆ 500 ರೂ.!

    ಬೆಂಗಳೂರು: ಫೆಂಗಲ್ ಚಂಡಮಾರುತದಿಂದಾಗಿ ವಿಪರೀತ ಮಳೆಯಾದ ಪರಿಣಾಮ ತರಕಾರಿಗಳ ಬೆಲೆ ಗಗನಕ್ಕೇರಿದೆ.

    ಕರ್ನಾಟಕ ಸೇರಿದಂತೆ ತಮಿಳುನಾಡು, ಚೆನ್ನೈನಲ್ಲಿ ಭಾರೀ ಮಳೆಯಾದ ಹಿನ್ನೆಲೆ ಬೆಳೆ ಹಾನಿಯಾಗುವುದರ ಜೊತೆಗೆ ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮ ತರಕಾರಿ ಬೆಲೆ ಹೆಚ್ಚಾಗಿದೆ.ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವಣ್ಣ ದಂಪತಿ

    ಬೆಳ್ಳುಳ್ಳಿ ಕೆ.ಜಿಗೆ 600 ರೂ. ಗಡಿ ದಾಟಿದ್ದು, ನುಗ್ಗೆಕಾಯಿ ಕೆ.ಜಿಗೆ 500ರೂ. ತಲುಪಿದೆ. ಒಂದು ಪೀಸ್ ನುಗ್ಗೆಕಾಯಿ 60ರೂ. ಆಗಿದೆ. ಈರುಳ್ಳಿ ಸೆಂಚುರಿಯಾದರೆ, ಟೊಮೆಟೋ ಅರ್ಧ ಸೆಂಚುರಿ ಬಾರಿಸಿದೆ. ಒಟ್ಟಾರೆ ತರಕಾರಿ ದರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.

    ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಗಳಲ್ಲಿ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗದ ಕಾರಣ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ.

    ಬೆಂಗಳೂರಿನಲ್ಲಿ ತರಕಾರಿ ಬೆಲೆ ಎಷ್ಟಿದೆ?
    ಟೊಮೆಟೊ – ಕೆ.ಜಿಗೆ 60-70ರೂ.
    ಬೆಳ್ಳುಳ್ಳಿ – ಕೆ.ಜಿಗೆ 550-600ರೂ.
    ಈರುಳ್ಳಿ – ಕೆ.ಜಿಗೆ 70-80.ರೂ.
    ನುಗ್ಗೆಕಾಯಿ – ಕೆ.ಜಿಗೆ 500ರೂ.
    ಬಟಾಣಿ- ಕೆ.ಜಿಗೆ 180-200 ರೂ.
    ಮೆಣಸಿನಕಾಯಿ – ಕೆ.ಜಿಗೆ 40-50 ರೂ.
    ಆಲೂಗಡ್ಡೆ- ಕೆ.ಜಿಗೆ 35-40 ರೂ.
    ಬೀನ್ಸ್- ಕೆ.ಜಿಗೆ 60 ರೂ.
    ಕ್ಯಾರೆಟ್- ಕೆ.ಜಿಗೆ 60-80ರೂ.
    ಗ್ರೀನ್ ಕ್ಯಾಪ್ಸಿಕಂ – ಕೆ.ಜಿಗೆ 50ರೂ.
    ಯೆಲ್ಲೋ, ರೆಡ್ ಕ್ಯಾಪ್ಸಿಕಂ – ಕೆ.ಜಿಗೆ 150-180ರೂ.
    ಬಿಟ್ ರೋಟ್- ಕೆ.ಜಿಗೆ 60ರೂ.ಇದನ್ನೂ ಓದಿ:ಕಡ್ಲೆಪುರಿಗಿಂತಲೂ ಕಡೆಯಾಯ್ತು ಮೈಸೂರಿನ ಸೈಟ್‌ಗಳು – ಕೇವಲ 3 ಸಾವಿರಕ್ಕೆ 60*40 ಸೈಟ್ ಬರೆದುಕೊಟ್ಟ ಮುಡಾ

  • ಬರದಿಂದ ತರಕಾರಿ ದರ ಏರಿಕೆ – ಕ್ಯಾರೆಟ್ ಸೆಂಚುರಿ, ಬೀನ್ಸ್ ಡಬಲ್ ಸೆಂಚುರಿ

    ಬರದಿಂದ ತರಕಾರಿ ದರ ಏರಿಕೆ – ಕ್ಯಾರೆಟ್ ಸೆಂಚುರಿ, ಬೀನ್ಸ್ ಡಬಲ್ ಸೆಂಚುರಿ

    ಬೆಂಗಳೂರು: ರಾಜ್ಯದಲ್ಲಿ ಸರಿಯಾದ ಮಳೆಯಾಗದೇ (Rain) , ಜೊತೆಗೆ ಬಿಸಿಲ ಬೇಗೆಯ ಪರಿಣಾಮದಿಂದ ಕೆಲ ತರಕಾರಿಗಳ ದರ (Vegetable Price Hike) ಗಗನಕ್ಕೇರಿದೆ. ಕಳೆದೊಂದು ವಾರದಿಂದ ಬೀನ್ಸ್ ಕೆಜಿಗೆ 170 ರಿಂದ 200 ರೂ. ಗಡಿ ದಾಟಿದೆ. ಅತ್ತ ಕ್ಯಾರೆಟ್ ಕೂಡ ಸೆಂಚುರಿ ತುದಿಯಲ್ಲಿದ್ದು, ಕಳೆದೊಂದು ವಾರದಿಂದ ಮೆಣಸಿನಕಾಯಿ ದರ ಕೂಡ ಅದೇ ದಾರಿಯಲ್ಲಿದೆ.

    ನಗರಕ್ಕೆ (Bengaluru) ನೆರೆಯ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಹೆಚ್ಚು ಬಿನ್ಸ್ ಮತ್ತು ಮೆಣಸಿನಕಾಯಿ ಪೂರೈಕೆಯಾಗುತ್ತದೆ. ಈ ಭಾಗದಲ್ಲೆಲ್ಲ ತಾಪಮಾನ ಏರಿಕೆಯಾಗಿದ್ದು, ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇನ್ನೂ ಕ್ಯಾರೆಟ್ ತಮಿಳುನಾಡು ಭಾಗದಿಂದ ಹೆಚ್ಚು ಪೂರೈಕೆಯಾಗುತ್ತಿದ್ದು, ಅಲ್ಲಿಯೂ ಕೂಡ ಇದೇ ಪರಿಸ್ಥಿತಿ ಹಿನ್ನೆಲೆ ಬೆಲೆ ಗಗನಕ್ಕೇರಿದೆ. ಇದನ್ನೂ ಓದಿ: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡ ರಾಮಚಂದ್ರ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ

    ಕೇವಲ ತರಕಾರಿ ಮಾತ್ರವಲ್ಲದೇ ಹಣ್ಣುಗಳ ದರದಲ್ಲೂ ಕೂಡ ಏರಿಕೆ ಕಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೂನ್ ಅಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಜೂನ್‍ನಲ್ಲಿ ಈ ಬಾರಿ ಉತ್ತಮ ಮಳೆಯಾದರೆ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂಬುದು ವ್ಯಾಪಾರಿಗಳ ಮಾತು.

    ಕೆಲ ತಿಂಗಳಿನಿಂದ ಒಂದಲ್ಲ ಒಂದು ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗೆಟ್ಟಿರುವ ಜನ, ಅಗತ್ಯ ತರಕಾರಿಗಳ ಬೆಲೆ ಏರಿಕೆಯಿಂದ ಮತ್ತಷ್ಟು ಹೈರಾಣಾಗಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಜೆಡಿಯು ನಾಯಕನಿಗೆ ಗುಂಡಿಕ್ಕಿ ಹತ್ಯೆ

  • ಕೆಜಿ ಟೊಮೆಟೊಗೆ 200 ರೂ., ಮೆಣಸಿನಕಾಯಿಗೆ 170 ರೂ. – ತರಕಾರಿಗಳ ಬೆಲೆ ಭಾರೀ ದುಬಾರಿ!

    ಕೆಜಿ ಟೊಮೆಟೊಗೆ 200 ರೂ., ಮೆಣಸಿನಕಾಯಿಗೆ 170 ರೂ. – ತರಕಾರಿಗಳ ಬೆಲೆ ಭಾರೀ ದುಬಾರಿ!

    – ಮೆಣಸಿನಕಾಯಿ ಬೆಲೆಯೂ ಏರಿಕೆ, ಬಾಯಿ ಮಾತ್ರವಲ್ಲ ಜನರ ಜೇಬಿಗೂ ಖಾರ 

    ನವದೆಹಲಿ: ಬೆಲೆ ಏರಿಕೆಯಲ್ಲಿ ಟೊಮೆಟೊ (Tomato) ಬಳಿಕ ಈಗ ಮೆಣಸಿನಕಾಯಿ (Green Chilli) ಸರದಿ ಶುರುವಾಗಿದೆ. ಬಾಯಿಗೆ ಮಾತ್ರವಲ್ಲ, ಜನಸಾಮಾನ್ಯರ ಜೇಬಿಗೂ ಹಸಿರು ಮೆಣಸಿನಕಾಯಿ ಖಾರವಾಗಿದೆ.

    ಬೇಸಿಗೆಯ ಬಿಸಿಲು ಹಾಗೂ ಮುಂಗಾರು ಮಳೆ ತಡವಾಗಿದ್ದರಿಂದ ಮೆಣಸಿನಕಾಯಿ ಬೆಲೆಯಲ್ಲಿ (Chilli Price Hike) ಏರಿಕೆ ಕಂಡಿದೆ. ಕಳೆದ ತಿಂಗಳು 60 ರೂ.ಗಳ ಆಸುಪಾಸಿನಲ್ಲಿದ್ದ ಹಸಿರು ಮೆಣಸಿನಕಾಯಿ ಈಗ ಪ್ರತಿ ಕೆಜಿಗೆ 170 ರೂ.ಗಳಿಗೆ ಏರಿಕೆಯಾಗಿದೆ. ಇದರ ಜೊತೆಗೆ ಟೊಮೆಟೊ ಬೆಲೆ ಏರಿಕೆಯೂ ಮುಂದುವರಿದಿದೆ. ಇದನ್ನೂ ಓದಿ: ಬೆಲೆ ಏರಿಕೆ: ಬರ್ಗರ್‌ಗೆ ಟೊಮೆಟೊ ಬಳಸಲ್ಲ ಎಂದ ಮೆಕ್‌ಡೊನಾಲ್ಡ್ಸ್‌

    ಉತ್ತರಾಖಂಡ ರಾಜ್ಯದ ಗಂಗೋತ್ರಿ, ಯಮುನೋತ್ರಿಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 250 ರೂ. ಏರಿಕೆಯಾಗಿದೆ. ಉತ್ತರಕಾಶಿಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 200 ರೂ. ತಲುಪಿದ್ದು, ಕೋಲ್ಕತ್ತಾದಲ್ಲಿ 152 ರೂ., ದೆಹಲಿಯಲ್ಲಿ 120 ರೂ., ಚೆನ್ನೈನಲ್ಲಿ 117 ರೂ., ಮುಂಬೈನಲ್ಲಿ 108 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲೂ 100 ರಿಂದ 130 ರೂ.ವೆರೆಗೆ ಮಾರಾಟವಾಗುತ್ತಿದೆ. ಇದರೊಂದಿಗೆ ಶುಂಠಿ ಹಾಗೂ ಹೂಕೋಸಿನ ಬೆಲೆಯೂ ಹೆಚ್ಚಾಗಿದೆ. ಇದನ್ನೂ ಓದಿ: ರೈಲ್ವೇ ಬ್ರಿಡ್ಜ್ ನಟ್ ಕಳಚಿದ ಕಿಡಿಗೇಡಿಗಳು – ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]