Tag: Vegetable

  • ತರಕಾರಿ ಬೆಲೆಯೂ ತುಟ್ಟಿ – ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ಯಾವ ತರಕಾರಿಗೆ ಎಷ್ಟು ದರ?

    ತರಕಾರಿ ಬೆಲೆಯೂ ತುಟ್ಟಿ – ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ಯಾವ ತರಕಾರಿಗೆ ಎಷ್ಟು ದರ?

    ಬೆಂಗಳೂರು: ಆಗಸ್ಟ್‌ ತಿಂಗಳು ಆರಂಭವಾಗುತ್ತಿದ್ದಂತೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಾಲಿನ ಜೊತೆಗೆ ತರಕಾರಿ (Vegetables) ಬೆಲೆಯಲ್ಲೂ ಏರಿಕೆಯಾಗಿದೆ.

    ತರಕಾರಿ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದಾರೆ. ಒಂದೇ ವಾರದಲ್ಲಿ ತರಕಾರಿ ಬೆಲೆ ದುಪ್ಪಟ್ಟು ಆಗಿರುವುದು ತಲೆ ನೋವಾಗಿ ಪರಿಣಮಿಸಿದೆ. ಪರಿಣಾಮವಾಗಿ ಹೋಟೆಲ್‌ಗಳಲ್ಲೂ ತಿನಿಸು ದರ ಹೆಚ್ಚಳವಾಗಿದೆ. ಇದನ್ನೂ ಓದಿ: ಇಂದಿನಿಂದ ಎಕ್ಸ್‌ಪ್ರೆಸ್‌ ವೇನಲ್ಲಿ ಬೈಕ್, ಆಟೋ ಸಂಚಾರಕ್ಕೆ ನಿರ್ಬಂಧ – ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ

    ಯಾವ್ಯಾವ ತರಕಾರಿ ಬೆಲೆ ಎಷ್ಟಿದೆ? (kg)
    ಟೊಮೆಟೋ – 150 ರೂ.
    ಮೆಣಸಿನಕಾಯಿ – 50 ರೂ.
    ಕ್ಯಾರೆಟ್ – 50 ರೂ.
    ಶುಂಠಿ – 100 ರೂ.
    ಹುರಳಿಕಾಳು – 125 ರೂ.
    ಬದನೆಕಾಯಿ – 60 ರೂ.
    ಹುಕೋಸು – 50 ರೂ.
    ಸೌತೆಕಾಯಿ – 40 ರೂ.
    ಡಬ್ಬಲ್ ಬೀನ್ಸ್ – 240 ರೂ.
    ಬಟಾಣಿ – 198 ರೂ.
    ನುಗ್ಗೇಕಾಯಿ – 65 ರೂ.
    ನವಿಲಿಕೋಸು – 80 ರೂ.
    ಅವರೇಬೇಳೆ – 250 ರೂ.
    ಬೆಂಡೆಕಾಯಿ – 70 ರೂ.
    ಬೆಳ್ಳುಳ್ಳಿ – 150 ರೂ.
    ಸಬ್ಬಕ್ಕಿ/ನುಗ್ಗೆ ಸೊಪ್ಪು – 100 ರೂ.
    ಕೊತ್ತಂಬರಿ ಸೊಪ್ಪು – 90 ರೂ.
    ಕೆಂಪು ಎಲೆಕೋಸು – 100 ರೂ.
    ಹೆಸರು ಮೊಳಕೆ ಕಾಳು – 100 ರೂ.
    ಕರಿಬೇವು – 50 ರೂ.
    ಸುವರ್ಣಗಡ್ಡೆ – 75 ರೂ.
    ಹಾಗಲಕಾಯಿ – 60 ರೂ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತರಕಾರಿ, ಹಣ್ಣುಗಳ ಬೆಲೆ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ತರಕಾರಿ, ಹಣ್ಣುಗಳ ಬೆಲೆ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಬೆಂಗಳೂರು: ಗ್ಯಾರಂಟಿಗಳ ಖುಷಿ ಬೆನ್ನಲ್ಲೇ ಜನಸಾಮಾನ್ಯನಿಗೆ ದರ ಏರಿಕೆ (Price hike  ಶಾಕ್ ಸಿಕ್ಕಿದೆ. ಒಂದೆಡೆ ವಿದ್ಯುತ್ ಶಾಕ್, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಶಾಕ್. ತರಕಾರಿ ಅಂಗಡಿಗೆ ಹೋದ್ರೂ ಶಾಕ್, ದಿನಸಿ ಅಂಗಡಿಗೆ ಹೋದ್ರೂ ಶಾಕ್ ಮೇಲೆ ಶಾಕ್. ನಿತ್ಯ ಸೇವಿಸುವ ಆಹಾರ ಸಾಮಾಗ್ರಿಗಳುವಸ್ತುಗಳ ದರ ಗಗನಕ್ಕೇರುತ್ತಿದೆ. ತರಕಾರಿ, ಹಣ್ಣುಗಳು (Fruits) ಜೇಬು ಸುಡುತ್ತಿವೆ.

    ಮುಂಗಾರು ಕೈ ಕೊಟ್ಟ ಪರಿಣಾಮ ತರಕಾರಿ (Vegetable) ಬೆಲೆ ಏರಿಕೆ ಮತ್ತೊಂದು ಕಾರಣವಾಗಿದ್ದು, ಇರುವ ಅಲ್ಪಸ್ವಲ್ಪ ತರಕಾರಿಗೆ ಭಾರೀ ಬೇಡಿಕೆ ಬಂದಿದೆ. ಇದರಿಂದಾಗಿ ತರಕಾರಿ ಪ್ರಿಯರು, ಹೋಟೆಲ್‌ ಮಾಲೀಕರು ಹಾಗೂ ಗ್ರಾಹಕರಿಗೆ ಬೆಲೆ ಬಿಸಿ ತಟ್ಟಿದ್ದು, ಜೇಬಿಗೆ ಕತ್ತರಿ ಬೀಳುತ್ತಿದೆ. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್ – ಬಿಯರ್ ದರ ಏರಿಕೆ

    ತರಕಾರಿ ದರ ಎಷ್ಟು ಏರಿಕೆಯಾಗಿದೆ?
    ಟೊಮೊಟೋ 30 – 65 ರೂ.
    ಬೀನ್ಸ್ 60 – 110 ರೂ.
    ಕ್ಯಾರೆಟ್ 50 – 90 ರೂ.
    ನವಿಲುಕೋಸು 35 – 70 ರೂ.
    ಮೂಲಂಗಿ 25 – 49 ರೂ.
    ನುಗ್ಗೆಕಾಯಿ 80 – 100 ರೂ.
    ಬೀಟ್‍ರೂಟ್ 35 – 50 ರೂ.
    ಹಸಿಮೆಣಸಿನಕಾಯಿ 95 – 115 ರೂ.
    ಬೆಂಡೆಕಾಯಿ 30 – 54 ರೂ.
    ಬೆಳ್ಳುಳ್ಳಿ 145 – 170 ರೂ.
    ಶುಂಠಿ 120 – 200 ರೂ.
    ಕರಿಬೇವು 50- 80 ರೂ.
    ಕೊತ್ತಂಬರಿ 10 – 45 ರೂ. (ಕಟ್ಟು)

     

    ಹಣ್ಣುಗಳು ಹಳೆಯ ದರ – ಹೊಸ ದರ
    ಸೇಬು 180 – 288 ರೂ.
    ಮೂಸಂಬಿ 70 – 114 ರೂ.
    ದಾಳಿಂಬೆ 180 – 278 ರೂ.
    ಅನಾನಸ್ 40 – 60 ರೂ.
    ಸಪೋಟ 80 – 107 ರೂ.
    ಏಲಕ್ಕಿ ಬಾಳೆಹಣ್ಣು 60 – 74 ರೂ.

  • ಬ್ರಿಟನ್‌ನಲ್ಲಿ ಹಣ್ಣು-ತರಕಾರಿಗಳಿಗೆ ಹಾಹಾಕಾರ ಸಾಧ್ಯತೆ

    ಬ್ರಿಟನ್‌ನಲ್ಲಿ ಹಣ್ಣು-ತರಕಾರಿಗಳಿಗೆ ಹಾಹಾಕಾರ ಸಾಧ್ಯತೆ

    ಲಂಡನ್: ಬ್ರಿಟನ್‌ನಲ್ಲಿ (UK) ಹಣ್ಣು-ತರಕಾರಿಗಳಿಗೆ (Vegetable) ಹಾಹಾಕಾರ ಎದುರಾಗುವ ಸಾಧ್ಯತೆಗಳಿವೆ.

    ಬ್ರಿಟನ್‌ನ ಕೆಲ ಪ್ರಮುಖ ಸೂಪರ್ ಮಾರ್ಕೆಟ್‌ಗಳು ಹಣ್ಣು ಮತ್ತು ತರಕಾರಿ ಖರೀದಿ (Vegetable) ಮೇಲೆ ಬೆಲೆ ಮಿತಿಯನ್ನು ಹೇರಿವೆ. ಟೊಮ್ಯಾಟೋ, ಮೆಣಸಿನಕಾಯಿ, ಸೌತೆಕಾಯಿ, ಬ್ರಕೋಲಿ, ಹೂಕೋಸು ಮತ್ತಿತರ ತರಕಾರಿಗಳ ಪೂರೈಕೆ ಕಡಿಮೆ ಇದೆ. ಹೀಗಾಗಿ ಒಬ್ಬೊಬ್ಬ ಗ್ರಾಹಕನಿಗೆ ಮಿತಿಯಲ್ಲಿ ಮಾರಾಟ ಮಾಡುತ್ತಿವೆ. ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜು – ಟ್ವೀಟ್‌ ಮಾಡಿ ಮೋದಿ ಶುಭ ಹಾರೈಕೆ

    ಆಫ್ರಿಕಾ, ಯುರೋಪ್‌ನಲ್ಲಿ ಪ್ರತಿಕೂಲ ವಾತಾವರಣ, ರಷ್ಯಾ-ಉಕ್ರೇನ್ ಯುದ್ಧದ (Russia Ukraine War) ಕಾರಣ ಪೂರೈಕೆ ಕೊರತೆ ಎದುರಾಗಿದೆ. ಮುಂದಿನ ಒಂದು ತಿಂಗಳ ಕಾಲ ಇದೇ ಸ್ಥಿತಿ ಇರಲಿದೆ ಎಂದು ಬ್ರಿಟನ್ ಸರ್ಕಾರವೂ ಹೇಳಿದೆ. ಇದನ್ನೂ ಓದಿ: ಐಷಾರಾಮಿ ವಿಲ್ಲಾ ಖರೀದಿಸಿದ ಕೊಹ್ಲಿ, ಅನುಷ್ಕಾ – ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಇತ್ತೀಚೆಗೆ ಉಕ್ರೇನ್‌ಗೆ ಭಾರೀ ಶಸ್ತ್ರಾಸ್ತ್ರಗಳ ನೆರವು ಘೋಷಿಸಿದ್ದ ಪ್ರಧಾನಿ ರಿಷಿ ಸುನಾಕ್ (Rishi Sunak), ಇಂಗ್ಲೆಂಡ್ ಯಾವ ದೇಶಕ್ಕೆ ಬೇಕಾದರೂ ಸಹಾಯಹಸ್ತ ನೀಡಲಿದೆ ಎಂದು ಹೇಳಿದ್ದರು.

  • ಪತ್ನಿಯನ್ನು ಕೊಂದು ದೇಹದ ಮೇಲೆ ಉಪ್ಪು ಹಾಕಿ ಯಾರಿಗೂ ಅನುಮಾನ ಬರದಂತೆ ತರಕಾರಿ ಬೆಳೆದ!

    ಪತ್ನಿಯನ್ನು ಕೊಂದು ದೇಹದ ಮೇಲೆ ಉಪ್ಪು ಹಾಕಿ ಯಾರಿಗೂ ಅನುಮಾನ ಬರದಂತೆ ತರಕಾರಿ ಬೆಳೆದ!

    ಲಕ್ನೋ: ವ್ಯಕ್ತಿಯೊಬ್ಬ ಹೊಲವೊಂದರಲ್ಲಿ ಪತ್ನಿಯನ್ನು (Wife) ಕೊಂದು ಆಕೆಯ ಶವವನ್ನು ಹೂತಿಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಪ್ರದೇಶದಲ್ಲಿ ನಡೆದಿದೆ.

    ದಿನೇಶ್ ಬಂಧಿತ ಆರೋಪಿ. ದಿನೇಶ್ ತರಕಾರಿ ಬೆಳೆಗಾರನಾಗಿದ್ದ. ದಿನೇಶ್ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ದಿನೇಶ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಒಂದು ದಿನ ಮನೆಯಲ್ಲಿಟ್ಟು ಹೊಲದಲ್ಲಿ ಹೂತಿದ್ದಾನೆ.

    ಅಷ್ಟೇ ಅಲ್ಲದೇ ಶವ ಬೇಗನೇ ಕೊಳೆಯಲಿ ಎಂದು 30 ಕೆ.ಜಿ ಉಪ್ಪನ್ನು (Salt) ದೇಹದ ಮೇಲೆ ಹಾಕಿದ್ದ. ಅದಾದ ಬಳಿಕ ಕೊಲೆಯನ್ನು ಮುಚ್ಚಿ ಹಾಕಲು, ಶವವನ್ನು ಹೂತು ಹಾಕಿರುವುದು ಯಾರಿಗೂ ಅನುಮಾನ ಬರಬಾರದೆಂದು ಶವವನ್ನು ಹೂತು ಹಾಕಿದ್ದ ಸ್ಥಳದಲ್ಲಿ ತರಕಾರಿಗಳನ್ನು (Vegetable) ಬೆಳೆದಿದ್ದ.

    ಅದಾದ ಕೆಲ ದಿನಗಳ ನಂತರ ದಿನೇಶ್ ತನ್ನ ಪತ್ನಿ ಕಾಣೆ ಆಗಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದಾಗ ದಿನೇಶ್ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೇವರ ದರ್ಶನ ಪಡೆದುಕೊಂಡ ಮರಳುವಾಗ ಕಂಟೇನರ್, ಕ್ರೂಸರ್ ವಾಹನ ಅಪಘಾತ- ಮಹಿಳೆ ಸಾವು

    ಘಟನೆಗೆ ಸಂಬಂಧಿಸಿ ಪೊಲೀಸರು ದಿನೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಹಿಟ್ & ರನ್ ಕೇಸ್ – ಕಾರು ಡಿಕ್ಕಿ, ಮೇಲಿಂದ ಹಾರಿದ ಯುವತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚೆನ್ನೈನ ಬೀದಿಬದಿಯಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್ – ವೀಡಿಯೋ ವೈರಲ್

    ಚೆನ್ನೈನ ಬೀದಿಬದಿಯಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್ – ವೀಡಿಯೋ ವೈರಲ್

    ಚೆನ್ನೈ: ತಮಿಳುನಾಡಿನ (Tamil Nadu) ಚೆನ್ನೈನ (Chennai) ಮೈಲಾಪುರ (Mylapore) ಪ್ರದೇಶದಲ್ಲಿ ರಸ್ತೆಬದಿಯ ವ್ಯಾಪಾರಿಗಳಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಶನಿವಾರ ತರಕಾರಿಗಳನ್ನು ಖರೀದಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈ ವೀಡಿಯೋವನ್ನು ನಿರ್ಮಲಾ ಸೀತಾರಾಮನ್ ಅವರ ಕಚೇರಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ತಮಿಳುನಾಡಿನ ಚೆನ್ನೈನ ಮೈಲಾಪುರ ಪ್ರದೇಶದ ಬೀದಿಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸುತ್ತಾ ತರಕಾರಿಗಳನ್ನು ಖರೀದಿಸಿರುವುದನ್ನು ಕಾಣಬಹುದಾಗಿದೆ. ಮೊದಲಿಗೆ ಕೆಲವು ಗೆಣಸುಗಳನ್ನು ಆಯ್ದುಕೊಳ್ಳತ್ತಾರೆ, ಬಳಿಕ ಅದನು ಬಿಟ್ಟು ಹಾಗಲಕಾಯಿಯನ್ನು ಆಯ್ದು ತೂಕ ಮಾಡಿಸಿಕೊಂಡು ಖರೀದಿಸಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಲ್ಲಿ ನಡುವೆ ತರಕಾರಿ ಬೆಲೆಯಲ್ಲಿ ಕೂಡ ಗಗನಕ್ಕೇರಿದೆ. ಇದನ್ನೂ ಓದಿ: ಡಿಎಂಕೆ ಅಧ್ಯಕ್ಷರಾಗಿ 2ನೇ ಬಾರಿಗೆ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆ

    ಸದ್ಯ ವೀಡಿಯೋಗೆ ಟ್ವಿಟ್ಟರ್ ಬಳಕೆದಾರರೊಬ್ಬರು, ವ್ಯಾಪಾರಿಗಳು ಮತ್ತು ಗ್ರಾಹಕರು ಹಣದುಬ್ಬರದಿಂದ ಹೇಗೆ ಉಳಿತಾಯ ಮಾಡಬಹುದು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂದು ತಿಳಿದುಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು

    Live Tv
    [brid partner=56869869 player=32851 video=960834 autoplay=true]

  • ಟ್ರ್ಯಾಕ್ಟರ್ ಕಳ್ಳನೆಂದು ತಿಳಿದು ಬಡ ತರಕಾರಿ ವ್ಯಾಪಾರಿಯನ್ನು ಕೊಂದ್ರು

    ಟ್ರ್ಯಾಕ್ಟರ್ ಕಳ್ಳನೆಂದು ತಿಳಿದು ಬಡ ತರಕಾರಿ ವ್ಯಾಪಾರಿಯನ್ನು ಕೊಂದ್ರು

    ಜೈಪುರ: ತರಕಾರಿ ವ್ಯಾಪಾರಿಯೋರ್ವನನ್ನು ಕಳ್ಳನೆಂದು ತಿಳಿದ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ಗೋವಿಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ವಾರ್ ಜಿಲ್ಲೆಯ ರಾಂಬಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿರಂಜಿ ಸೈನಿ(45) ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯಾಗಿದ್ದನು. ಅವನನ್ನು ಅಲ್ಲಿನ ಗುಂಪೊಂದು ಕಳ್ಳ ಎಂದು ಭಾವಿಸಿದೆ.

    CRIME 2

    ಚಿರಂಜಿ ಹೋಗುತ್ತಿದ್ದಾಗ ಹತ್ತಕ್ಕೂ ಹೆಚ್ಚು ಜನರು ಆತನ ಮೇಲೆ ಹಲ್ಲೆ ನಡೆಸಿ, ಆತನನ್ನು ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಚಿರಂಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಘಟನೆಯೇನು?: ರಾಂಬಾಸ್ ಗ್ರಾಮದಲ್ಲಿ ಟ್ರ್ಯಾಕ್ಟರ್‌ನ್ನು ಕೆಲ ಕಳ್ಳರು ಕದ್ದೊಯ್ದಿದ್ದರು. ಈ ಹಿನ್ನೆಲೆಯಲ್ಲಿ ಸದರ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಟ್ರ್ಯಾಕ್ಟರ್ ಮಾಲೀಕರು ಆ ಕಳ್ಳರನ್ನು ಬೆನ್ನಟ್ಟಿದ್ದಾರೆ. ಆದರೆ ಆ ಕಳ್ಳರು ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.

    crime

    ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದ ತರಕಾರಿ ವ್ಯಾಪಾರಿ ಚಿರಂಜಿಯನ್ನು ಕಳ್ಳನೆಂದು ಟ್ರ್ಯಾಕ್ಟರ್ ಮಾಲೀಕ ತಪ್ಪಾಗಿ ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮಾಲೀಕ ಹಾಗೂ ಅವರ ಕಡೆಯವರು ಆ ತರಕಾರಿ ವ್ಯಾಪಾರಿಯನ್ನು ಮನ ಬಂದಂತೆ ಥಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ: ಬಿಜೆಪಿ ಕಿಡಿ

    POLICE JEEP

    ಇದೇ ಸಂದರ್ಭಕ್ಕೆ ಅಲ್ಲಿಗೆ ಪೊಲೀಸರು ಬಂದಿದ್ದು, ಆತ ಕಳ್ಳನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಇದನ್ನೂ ಓದಿ: 17ರ ವಿದ್ಯಾರ್ಥಿನಿ ಮೇಲೆ 6 ಮಂದಿಯಿಂದ ಅತ್ಯಾಚಾರ

    ಘಟನೆ ಸಂಬಂಧಿಸಿ ಮೃತನ ಪುತ್ರ ಯೋಗೇಶ್ ಸೈನಿ ಗೋವಿಂದಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನ್ನ ತಂದೆಯ ಸಾವಿಗೆ ಟ್ರ್ಯಾಕ್ಟರ್ ಮಾಲೀಕನೇ ಕಾರಣ ಎಂದು ಆರೋಪಿಸಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ದೇವಸ್ಥಾನದ ಶೈಲಿಯಲ್ಲಿ ಮಾಡಿ ‘ತರಕಾರಿ ಸಾಂಬಾರ್’ ಮಾಡುವ ವಿಧಾನ

    ದೇವಸ್ಥಾನದ ಶೈಲಿಯಲ್ಲಿ ಮಾಡಿ ‘ತರಕಾರಿ ಸಾಂಬಾರ್’ ಮಾಡುವ ವಿಧಾನ

    ನೆಯಲ್ಲಿ ವಾರಕ್ಕೆ ಒಮ್ಮೆಯಾದರೂ ‘ತರಕಾರಿ ಸಾಂಬಾರ್’ ಮಾಡುತ್ತಿರುತ್ತೇವೆ. ಆದರೆ ನಾವು ದೇವಸ್ಥಾನಕ್ಕೆ ಹೋದಾಗ ಸಿಗುವ ಪ್ರಸಾದದ ಟೇಸ್ಟ್ ಬರುವುದು ಕಷ್ಟ. ಅದಕ್ಕೆ ಕೆಲವೊಮ್ಮೆ ನಾವು ‘ತರಕಾರಿ ಸಾಂಬಾರ್’ ಊಟ ಮಾಡಬೇಕಾದ್ರೆ ದೇವಸ್ಥಾನದ ಟೇಸ್ಟ್ ಬರುವುದಿಲ್ಲ ಎಂದು ಹೇಳುತ್ತಿರುತ್ತೇವೆ. ಅದಕ್ಕೆ ಇಂದು ನಿಮಗೆ ಸಿಂಪಲ್ ಆಗಿ ಹೇಗೆ ದೇವಸ್ಥಾನದ ಮಾದರಿಯಲ್ಲಿ ಸಾಂಬಾರ್ ಮಾಡಬಹುದು ಎಂದು ಹೇಳಿಕೊಡುತ್ತೇವೆ. ಇದೇ ರೀತಿ ಫಾಲೋ ಮಾಡಿ.

    ಬೇಕಾಗಿರುವ ಪದಾರ್ಥಗಳು:
    ಮಸಾಲೆಗೆ:
    * ಎಣ್ಣೆ – 2 ಟೀಸ್ಪೂನ್
    * ದಾನಿಯಾ ಬೀಜ – 1 ಟೇಬಲ್ಸ್ಪೂನ್
    * ಜೀರಿಗೆ – ಅರ್ಧ ಟೇಬಲ್ಸ್ಪೂನ್
    * ಕಡ್ಲೆ ಬೇಳೆ – 1 ಟೇಬಲ್ಸ್ಪೂನ್
    * ಉದ್ದಿನ ಬೇಳೆ – 1 ಟೇಬಲ್ಸ್ಪೂನ್
    * ಮೆಂತ್ಯ – 1 ಟೇಬಲ್ಸ್ಪೂನ್
    * ಕರಿಬೇವಿನ ಎಲೆ – 5 ರಿಂದ 10
    * ಒಣಗಿದ ಕೆಂಪು ಮೆಣಸಿನಕಾಯಿ – 4
    * ತುರಿದ ತೆಂಗಿನಕಾಯಿ – 1 ಕಪ್
    * ನೀರು – ಅರ್ಧ ಕಪ್


    ಸಾಂಬಾರಿಗೆ:
    * ಎಣ್ಣೆ – 2 ಟೇಬಲ್ಸ್ಪೂನ್
    * ಕಟ್ ಮಾಡಿದ ಸೋರೆಕಾಯಿ – 1 ಕಪ್
    * ಸಿಹಿ ಕುಂಬಳಕಾಯಿ ಹೋಳು – ಅರ್ಧ ಕಪ್
    * ಬೀನ್ಸ್ – 5
    * ಕಟ್ ಮಾಡಿದ ಟೊಮೆಟೊ – 1 ಕಪ್
    * ನುಗ್ಗೆ ಕಾಯಿ – 1
    * ಬದನೆಕಾಯಿ – 2
    * ನೀರು – 5 ಕಪ್
    * ಅರಿಶಿನ – ಅರ್ಧ ಟೀಸ್ಪೂನ್
    * ಬೆಲ್ಲ – ಅರ್ಧ ಟೀಸ್ಪೂನ್
    * ಹುಣಸೆಹಣ್ಣಿನ ಸಾರ – ಅರ್ಧ ಕಪ್
    * ಉಪ್ಪು – 1 ಟೀಸ್ಪೂನ್
    * ತೊಗರಿ ಬೇಳೆ – 1 ಕಪ್
    ಒಗ್ಗರಣೆಗಾಗಿ:
    * ಎಣ್ಣೆ – 3 ಟೀಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಒಣಗಿದ ಕೆಂಪು ಮೆಣಸಿನಕಾಯಿ – 2
    * ಕರಿಬೇವಿನ ಎಲೆಗಳು – 5 ರಿಂದ 8

    ಮಾಡುವ ವಿಧಾನ:
    ಸಾಂಬಾರ್ ಮಸಾಲ ತಯಾರಿಕೆ:
    * ಮೊದಲನೆಯದಾಗಿ, ಗ್ಯಾಸ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ದಾನಿಯಾ ಬೀಜ, ಜೀರಿಗೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಮೇಥಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಮಸಾಲೆಗಳು ಗೋಲ್ಡನ್ ಬ್ರೌನ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಈಗ ಕರಿಬೇವಿನ ಎಲೆಗಳು, ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ. ಮಸಾಲೆಗಳು ಪರಿಮಳ ಆಗುವವರೆಗೆ ಹುರಿಯಿರಿ. ಸಂಪೂರ್ಣವಾಗಿ ತಣ್ಣಗಾದ ಮೇಲೆ ಮಿಕ್ಸರ್‍ಗೆ ಹಾಕಿ ತೆಂಗಿನಕಾಯಿ ಹಾಕಿ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಪಕ್ಕಕ್ಕೆ ಇರಿಸಿ. ಇಲ್ಲಿಗೆ ಸಾಂಬಾರ್ ಮಸಾಲ ರೆಡಿಯಾಗುತ್ತೆ.


    * ನಂತರ ದೊಡ್ಡ ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಸೋರೆಕಾಯಿ, ಸಿಹಿ ಕುಂಬಳಕಾಯಿ, ಬೀನ್ಸ್, ಟೊಮೆಟೊ, ನುಗ್ಗೆಕಾಯಿ ಮತ್ತು 2 ಬದನೆಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ತರಕಾರಿಗಳು ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಈಗ ನೀರು, ಕರಿಬೇವಿನ ಎಲೆಗಳು, ಅರಿಶಿನ ಮತ್ತು ಬೆಲ್ಲ ಸೇರಿಸಿ 10 ನಿಮಿಷ ಫ್ರೈ ಮಾಡಿ. ತರಕಾರಿಗಳನ್ನು ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.
    * ಅದಕ್ಕೆ ಹುಣಸೆಹಣ್ಣು ರಸ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ. 2 ನಿಮಿಷ ಅಥವಾ ಹುಣಸೆಹಣ್ಣಿನ ಹಸಿ ವಾಸನೆ ಹೋಗುವವರೆಗೆ ಕುದಿಸಿ. 1 ಕಪ್ ಬೇಯಿಸಿದ ತೊಗರೆ ಬೇಳೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 2 ನಿಮಿಷಗಳ ಕಾಲ ಅಥವಾ ಎಲ್ಲವನ್ನೂ ಚೆನ್ನಾಗಿ ಕುದಿಸಿ.
    * ಈಗ ತಯಾರಾದ ಮಸಾಲೆ ಪೇಸ್‍ನ್ನು ಸೇರಿಸಿ ಚೆನ್ನಾಗಿ ಬೆರೆಸಿ. 4-5 ನಿಮಿಷ ಅಥವಾ ತೆಂಗಿನಕಾಯಿ ಹಸಿ ಪರಿಮಳ ಹೋಗುವವರೆಗೆ ಕುದಿಸಿ.
    * ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳು ಸೇರಿಸಿ ಒಗ್ಗರಣೆ ತಯಾರಿಸಿ

    – ಅಂತಿಮವಾಗಿ, ಬಿಸಿ ಅನ್ನದೊಂದಿಗೆ ಈ ದೇವಾಲಯದ ಶೈಲಿಯ ಸಾಂಬಾರ್ ಅನ್ನು ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • ರೆಸ್ಟೋರೆಂಟ್ ಶೈಲಿಯಲ್ಲಿ ಮಾಡಿ ‘ವೆಜ್ ನೂಡಲ್ಸ್’

    ರೆಸ್ಟೋರೆಂಟ್ ಶೈಲಿಯಲ್ಲಿ ಮಾಡಿ ‘ವೆಜ್ ನೂಡಲ್ಸ್’

    ಚೈನೀಸ್ ಫುಡ್‍ನಲ್ಲಿ ಹೆಚ್ಚು ಜನಪ್ರಿಯವಾದ ಅಡುಗೆ ಎಂದರೆ ನೂಡಲ್ಸ್. ಇದನ್ನು ಚಿಕ್ಕವರಿಂದ ದೊಡ್ಡವರ ತನಕ ನೂಡಲ್ಸ್ ಎಂದರೆ ತುಂಬಾ ಇಷ್ಟ. ಇಂದು ನಾವು ಹೇಳಿಕೊಡುವ ರೆಸಿಪಿಯನ್ನು ನೀವು ಮನೆಯಲ್ಲಿ ಟ್ರೈ ಮಾಡಿ. ಇದು ತುಂಬಾ ರುಚಿಯಾಗಿರುತ್ತೆ. ಮಕ್ಕಳು ಸಹ ಇಷ್ಟಪಟ್ಟು ತಿನ್ನುತ್ತಾರೆ.

    ಬೇಕಾಗಿರುವ ಪದಾರ್ಥಗಳು:
    * ನೂಡಲ್ಸ್ – 2 ಕಪ್
    * ಕಟ್ ಮಾಡಿದ ಶುಂಠಿ, ಬೆಳ್ಳುಳ್ಳಿ – 6
    * ಕಟ್ ಮಾಡಿದ ಬೀನ್ಸ್ – 1/4 ಕಪ್
    * ಸಣ್ಣದಾಗಿ ಕಟ್ ಮಾಡಿದ ಈರುಳ್ಳಿ – 1/4 ಕಪ್
    * ಕಾಟ್ ಮಾಡಿದ ಕ್ಯಾಪ್ಸಿಕಂ – 1/2 ಕಪ್
    * ಕಟ್ ಮಾಡಿದ ಎಲೆಕೋಸು – 1/2 ಕಪ್
    * ಕಟ್ ಮಾಡಿದ ಕ್ಯಾರೆಟ್ – 1/4 ಕಪ್

    * ಕಪ್ಪು ಮೆಣಸು ಪುಡಿ – 1/4 ಟೀಚಮಚ
    * ಸೋಯಾ ಸಾಸ್ – 2 ಟೀಸ್ಪೂನ್
    * ಚಿಲ್ಲಿ ಸಾಸ್ – 1 ಟೀಚಮಚ
    * ಟೊಮೆಟೊ ಕೆಚಪ್ – 1 ಚಮಚ
    * ಚಮಚ ಎಣ್ಣೆ – 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಕಡಿಮೆ ಉರಿಯಲ್ಲಿ ನೂಡಲ್ಸ್ ಬೇಯಿಸಿಕೊಳ್ಳಿ. ಹೆಚ್ಚು ಕುದಿಸಬೇಡಿ.
    * ತರಕಾರಿಗಳನ್ನು ಸಾಧ್ಯವಾದಷ್ಟು ತೆಳ್ಳಗೆ ಕಟ್ ಮಾಡಿಕೊಳ್ಳಿ, ಏಕೆಂದರೆ ಅವು ಬೇಯಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
    * ಒಂದು ಕಾಲಿ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಎಲೆಕೋಸು ಮತ್ತು ಕ್ಯಾರೆಟ್ ಸೇರಿಸಿ ಫ್ರೈ ಮಾಡಿ.

    * ನಂತರ ತರಕಾರಿಗೆ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ಕರಿಮೆಣಸಿನ ಪುಡಿ ಮತ್ತು ಉಪ್ಪುನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಒಂದು ನಿಮಿಷ ಬೇಯಿಸಿ.
    * ಕೊನೆಗೆ ಫ್ರೈಗೆ ನೂಡಲ್ಸ್ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ

    – ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿ. ಇದನ್ನು ಬಿಸಿ ಇರುವಾಗಲೇ ಟೊಮೆಟೊ ಕೆಚಪ್ ಜೊತೆ ಬಡಿಸಿ.

  • ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ತರಕಾರಿ ಇಟ್ಟು ಪ್ರತಿಭಟನೆ

    ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ತರಕಾರಿ ಇಟ್ಟು ಪ್ರತಿಭಟನೆ

    ಬೆಳಗಾವಿ: ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ತರಕಾರಿ ಇಟ್ಟು ಭಾರತೀಯ ಕೃಷಿಕ ಸಮಾಜದ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ತರಕಾರಿ ಮಾರಾಟ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದರು.

    BASAVARJ BOMMAI (1)

    ಎಂಎಸ್‍ಪಿ ಕಾನೂನಾತ್ಮಕವಾಗಿ ಖಾತರಿ ಪಡಿಸಲು ತಜ್ಞರ ಸಮಿತಿ ರಚಿಸುವ ವಾಗ್ದಾನವನ್ನು ಮಾಡಿದ ಕೇಂದ್ರ ಸರ್ಕಾರವು ಮರೆತಿದೆ. ಈ ನಿಟ್ಟಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ರೈತ ವಿಶ್ವಾಸ ದ್ರೋಹ ಸಪ್ತಾಹ ಆಚರಿಸಲಾಗುತ್ತಿದೆ. ಇದನ್ನೂ ಓದಿ: ಇಬ್ಬರು, ಮೂವರು ಸಚಿವರನ್ನು ಬಿಟ್ಟು ಎಲ್ರೂ 40% ಕಮಿಷನ್ ಪಡೆಯುತ್ತಿದ್ದಾರೆ: ಎಂ.ಬಿ ಪಾಟೀಲ್

    ಕೇಂದ್ರ ಸರ್ಕಾರ ಹಿಂಪಡೆದ ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆದಿದೆ. ಆದರೆ ಈವರೆಗೂ ರಾಜ್ಯ ಸರ್ಕಾರ ಈ ಕಾನೂನುಗಳನ್ನು ಹಿಂಪಡೆಯದೇ ಮೊಂಡುತನ ಪ್ರದರ್ಶಿಸುತ್ತಿದೆ. ಅಲ್ಲದೇ ನಗರದಲ್ಲಿ ಪ್ರಾರಂಭವಾದ ಖಾಸಗಿ ತರಕಾರಿ ಮಾರುಕಟ್ಟೆ ಸ್ಥಗಿತಗೊಳಿಸಿ ಸರ್ಕಾರಿ ಎಪಿಎಂಸಿ ಉಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಇದನ್ನೂ ಓದಿ: ಗೃಹ ಸಚಿವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ: ಆರ್.ಧ್ರುವನಾರಾಯಣ್

    ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ, ಜಿಲ್ಲಾಧ್ಯಕ್ಷೆ ಶಿವಲೀಲಾ ಮಿಸಾಲೆ, ರಮೇಶ್ ವರಲಿ, ಶಂಕರ್ ಡವಳಿ, ರವಿ ಪಾಟೀಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

  • ಸೂಪರ್ ಮಾರ್ಕೆಟ್‍ನಿಂದ ತಂದ ತರಕಾರಿ ಜೊತೆಗೆ ಸತ್ತ ಇಲಿನೂ ತಿಂದ

    ಸೂಪರ್ ಮಾರ್ಕೆಟ್‍ನಿಂದ ತಂದ ತರಕಾರಿ ಜೊತೆಗೆ ಸತ್ತ ಇಲಿನೂ ತಿಂದ

    ಮ್ಯಾಡ್ರಿಡ್: ವ್ಯಕ್ತಿಯೊರ್ವ ಆಕಸ್ಮಿಕವಾಗಿ ತರಕಾರಿ ಹಾಗೂ ಆಲೂಗಡ್ಡೆಯೊಂದಿಗೆ ತಿಳಿಯದೇ ಸತ್ತ ಇಲಿಯನ್ನು ಸೇವಿಸಿರುವ ಘಟನೆ ಸ್ಪೇನ್‍ನಲ್ಲಿ ನಡೆದಿದೆ.

    ಜುವಾನ್ ಜೋಸ್ ಅವರು ಸೂಪರ್ ಮಾರ್ಕೆಟ್‍ನಿಂದ ತರಕಾರಿ ಹಾಗೂ ಆಲೂಗಡ್ಡೆ ಪ್ಯಾಕೆಟ್ ಖರೀದಿಸಿ ಮನೆಗೆ ಬಂದು ಬೇಯಿಸಿ ನಂತರ ಅದನ್ನು ತಟ್ಟೆಗೆ ಬಡಿಸಿಕೊಂಡಿದ್ದಾರೆ. ಈ ವೇಳೆ ಯಾವುದೋ ಭಾರದಂತಿರುವ ವಸ್ತು ತಟ್ಟೆಯೊಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಚಮಚದ ಮೂಲಕ ತಿನ್ನಲು ಆರಂಭಿಸಿದಾಗ ಯಾವುದೋ ವಿಚಿತ್ರವಾಗಿರುವ ಕುರುಕುಲಾಗಿರುವ ಪದಾರ್ಥವನ್ನು ಅಗಿಯುತ್ತಿರುವಂತೆ ಫೀಲ್ ಆಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಸುಳ್ಳಿನ ದೆವ್ವ ಮೆಟ್ಟಿಕೊಂಡಿದೆ: ಸಿ.ಟಿ ರವಿ ವ್ಯಂಗ್ಯ

    ನಂತರ ತಟ್ಟೆಯನ್ನು ಗಮನಿಸಿದಾಗ ಸತ್ತ ಇಲಿಯ ತಲೆಯನ್ನು ನೋಡಿ ಶಾಕ್ ಆಗಿದ್ದಾರೆ. ತರಕಾರಿಯೊಂದಿಗೆ ಇಲಿಯ ತಲೆಯಲ್ಲಿ ಕಣ್ಣು ಮತ್ತು ಮೀಸೆ ಸಮೇತ ಹಾಕಿರುವುದನ್ನು ಕಂಡಿದ್ದಾರೆ. ನಂತರ ತಾವು ತಿಂದಿದ್ದು, ತರಕಾರಿ ಅಲ್ಲ ಬದಲಿಗೆ ಇಲಿ ಎಂದು ಖಚಿತಪಡಿಸಿಕೊಂಡ ಬಳಿಕ ಸೂಪರ್ ಮಾರ್ಕೆಟ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್ – ಪ್ರಜಾಪ್ರಭುತ್ವದ ಕೊಲೆ ಎಂದ ಜೆ.ಪಿ.ನಡ್ಡಾ

     

    ಕ್ರಿಸ್‍ಮಸ್ ಹಬ್ಬದಂದು ತರಕಾರಿಯನ್ನು ಜುವಾನ್ ಜೋಸ್ ಖರೀದಿಸಿದ್ದರು. ಸದ್ಯ ಈ ಘಟನೆ ಕುರಿತಂತೆ ಸೂಪರ್ ಮಾರ್ಕೆಟ್, ತಯಾರಕರು ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದು, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಹಕರಿಗೆ ತಿಳಿಸಿದೆ.