Tag: veg recipe

  • ‌ಸವಿಯಲು ಸಕತ್‌ ಟೇಸ್ಟಿ ಆಗಿರುತ್ತೆ ಮೂಲಂಗಿ ಸೂಪ್‌ – ನೀವೂ ಟ್ರೈ ಮಾಡಿ

    ‌ಸವಿಯಲು ಸಕತ್‌ ಟೇಸ್ಟಿ ಆಗಿರುತ್ತೆ ಮೂಲಂಗಿ ಸೂಪ್‌ – ನೀವೂ ಟ್ರೈ ಮಾಡಿ

    ಸೂಪ್‌ ಪ್ರಿಯರು ಟೇಸ್ಟ್‌ಗೆ ಹಾಗೂ ಆರೋಗ್ಯಕ್ಕೆ ಮೂಲಂಗಿ ಸೂಪ್ ಬಹಳ ಉತ್ತಮ. ಇದು ದೇಹಕ್ಕೆ ಬೇಕಾದ ʻಸಿ; ವಿಟಮಿನ್‌ ಒದಗಿಸುತ್ತದೆ. ಅಲ್ಲದೇ ಲಿವರ್‌ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಲಂಗಿ ಸೂಪ್‌ ತಯಾರಿಸುವ ವಿಧಾನ ನೋಡೋಣ.

    ಬೇಕಾಗುವ ಪದಾರ್ಥಗಳು:
    * ಮೂಲಂಗಿ: 200 ಗ್ರಾಂ
    * ಸಾಸಿವೆ: 1 ಟೀಸ್ಪೂನ್
    * ಜೀರಿಗೆ: 1 ಟೀಸ್ಪೂನ್
    * ಇಂಗು
    * ಕೆಂಪು ಮೆಣಸಿನಕಾಯಿ: 2
    * ಬೇವಿನ ಎಲೆಗಳು
    * ಅಡುಗೆ ಎಣ್ಣೆ
    * ಅರಿಶಿನ ಪುಡಿ: 1 ಟೀಸ್ಪೂನ್
    * ರಸಂ ಪುಡಿ: 1 ಟೀಸ್ಪೂನ್
    * ಉಪ್ಪು: ರುಚಿಗೆ ತಕ್ಕಷ್ಟು
    * ನೀರು

    ತಯಾರಿಸುವ ವಿಧಾನ
    ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಇಂಗು, ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಬೇಕು. ನಂತರ ಸಾಸಿವೆ ಒಡೆದ ತಕ್ಷಣ, ಕತ್ತರಿಸಿದ ಮೂಲಂಗಿ ಸೇರಿಸಿ, 5-7 ನಿಮಿಷಗಳ ಕಾಲ ಮೂಲಂಗಿ ಮೃದುವಾಗುವವರೆಗೆ ಹುರಿಯಬೇಕು.

    ಅರಿಶಿನ ಪುಡಿ, ರಸಂ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಒಂದು ಲೀಟರ್ ನೀರು ಸೇರಿಸಿ, ಮುಚ್ಚಿ, 10-15 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಬೇಕು. ಮೂಲಂಗಿ ಸಂಪೂರ್ಣವಾಗಿ ಬೆಂದ ನಂತರ, ಸೂಪ್ ಸವಿಯಲು ಸಿದ್ಧ.

  • ಫಟಾಫಟ್‌ ಅಂತ ಮಾಡಿ ಕ್ಯಾಬೇಜ್‌ ಮೊಮೊಸ್‌

    ಫಟಾಫಟ್‌ ಅಂತ ಮಾಡಿ ಕ್ಯಾಬೇಜ್‌ ಮೊಮೊಸ್‌

    ಮೊಮೊಸ್‌ ಅಂದ್ರೆ ನಿಮ್ಗೆ ಇಷ್ಟನಾ? ಒಂದೇ ರೀತಿ ಮೊಮೊಸ್‌ ತಿಂದು ಬೇಜಾರಿದ್ರೆ, ಸ್ಪೆಷಲ್‌ ಆಗಿ ಕ್ಯಾಬೇಜ್‌ ಮೊಮೊಸ್‌ (Cabbage Momos) ಮಾಡೋದು ಹೇಗೆ ಅಂತಾ ನಾವಿಂದು ತಿಳಿಸಿಕೊಡ್ತೀವಿ. ಇದು ಆರೋಗ್ಯಕ್ಕೂ ಒಳ್ಳೆಯದ್ದು, ಜೊತೆ ಕ್ವಿಕ್‌ ಆಂಡ್‌ ಈಸಿಯಾಗಿ ಫಟಾಫಟ್‌ ಅಂತ ತಯಾರಿಸಿ ಮನೆಯವರೊಂದಿಗೆ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    ತುರಿದ ಕ್ಯಾರೆಟ್ – 1 ಕಪ್
    ತುರಿದ ಎಲೆಕೋಸು – 1 ಕಪ್
    ಹಸಿಮೆಣಸಿನಕಾಯಿ (ಸಣ್ಣಗೆ ಹೆಚ್ಚಿದ) – 1
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    ಸೋಯಾ ಸಾಸ್ – 1 ಚಮಚ
    ಕರಿಮೆಣಸಿನ ಪುಡಿ
    ಉಪ್ಪು – ರುಚಿಗೆ ತಕ್ಕಷ್ಟು

    ಡಿಪ್‌ಗೆ ಬೇಕಾಗುವ ಸಾಮಗ್ರಿಗಳು:
    ಟೊಮ್ಯಾಟೊ – 2
    ಒಣ ಕೆಂಪು ಮೆಣಸಿನಕಾಯಿ – 2 ಬೆಳ್ಳುಳ್ಳಿ
    ಎಸಳು – 3-4
    ಉಪ್ಪು – ರುಚಿಗೆ ತಕ್ಕಷ್ಟು

    ತಯಾರಿಸುವ ವಿಧಾನ:
    ಎಲೆಕೋಸಿನಿಂದ ಒಂದೊಂದೇ ಎಲೆಗಳನ್ನು ಬೇರ್ಪಡಿಸಿಟುಕೊಳ್ಳಬೇಕು. ಕುದಿಯುವ ನೀರಿನಲ್ಲಿ 1-2 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಬೇಕು. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಬೇಕು. ನಂತರ ತುರಿದ ಕ್ಯಾರೆಟ್, ಎಲೆಕೋಸನ್ನು ಸೇರಿಸಿ 2-3 ನಿಮಿಷ ಹುರಿಯಬೇಕು. ಬಳಿಕ ಇದಕ್ಕೆ ಸೋಯಾ ಸಾಸ್, ಕರಿಮೆಣಸು ಮತ್ತು ಉಪ್ಪು ಸೇರಿಸಿ ಮಿಶ್ರ ಮಾಡಿ.

    ಈಗ ಎಲೆಕೋಸಿನ ಎಲೆಗಳ ಮಧ್ಯದಲ್ಲಿ 1-2 ಚಮಚ ಈ ಸ್ಟಪ್ ಅನ್ನು ಇರಿಸಿ. ಅದನ್ನು ಮಡಚಿ ಮೊಮೊ ಆಕಾರ ನೀಡಿ. ಸಿದ್ಧಪಡಿಸಿದ ಮೊಮೊಗಳನ್ನು ಸ್ವೀಮರ್‌ನಲ್ಲಿ ಇರಿಸಿ ಮತ್ತು 10 ರಿಂದ 12 ನಿಮಿಷ ಆವಿಯಲ್ಲಿ ಬೇಯಿಸಬೇಕು.

    ಡಿಪ್‌ ತಯಾರಿಸುವ ವಿಧಾನ:
    ಟೊಮ್ಯಾಟೊ, ಕೆಂಪು ಒಣ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಹುರಿದು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಎಣ್ಣೆ ಮತ್ತು ಉಪ್ಪು ಸೇರಿಸಿ ಮಿಕ್ಸ್‌ ಮಾಡಬೇಕು. ಈಗ ಕ್ಯಾಬೇಜ್‌ ಮೊಮೊಸ್‌ ಅನ್ನು ಡಿಪ್‌ನೊಂದಿಗೆ ಸವಿಯಲು ಸಿದ್ಧ.

  • ಸಂಡೇ ಸ್ಪೆಷಲ್‌ ಮನೆಯಲ್ಲೇ ಮಾಡಿ ಸವಿಯಿರಿ ಪನ್ನೀರ್‌ ಪರೋಟಾ

    ಸಂಡೇ ಸ್ಪೆಷಲ್‌ ಮನೆಯಲ್ಲೇ ಮಾಡಿ ಸವಿಯಿರಿ ಪನ್ನೀರ್‌ ಪರೋಟಾ

    ತ್ತರ ಭಾರತದ ಜನಪ್ರಿಯ ಖಾದ್ಯಗಳಲ್ಲಿ ಪನ್ನೀರ್ ಪರೋಟಾವು ಒಂದು. ಸಾಮಾನ್ಯವಾಗಿ ಪನ್ನೀರ್‌ ಕರ್ರಿ, ಪನ್ನೀರ್‌ ಮಸಾಲಾ, ಪಾಲ್ಲಕ್‌ ಪನ್ನೀರ್‌ ಸೇರಿದಂತೆ ಮನೆಯಲ್ಲಿ ಸುಲಭವಾಗಿ ಮಾಡುತ್ತಾರೆ. ಆದರೆ ಪನ್ನೀರ್‌ ಪರೋಟಾ ಮಾಡುವುದು ಕಡಿಮೆ. ಇದೀಗ ಸರಳ ಹಾಗೂ ಸುಲಭವಾಗಿ ಪನ್ನೀರ್‌ ಪರೋಟಾ ಮಾಡಬಹುದು. ಹೆಚ್ಚಿನ ಸಮಯವೂ ತೆಗೆದುಕೊಳ್ಳದೇ ಬೇಗನೇ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    ಗೋಧಿ ಹಿಟ್ಟು
    ಪನ್ನೀರ್‌
    ಈರುಳ್ಳಿ
    ಹಸಿಮೆಣಸಿನಕಾಯಿ
    ಶುಂಠಿ ಬೆಳ್ಳುಳ್ಳಿ ಪೇಸ್ಟ್
    ಕೊತ್ತಂಬರಿ ಸೊಪ್ಪು
    ಚಿಲ್ಲಿ ಪೌಡರ್
    ದನಿಯಾ ಪುಡಿ
    ಗರಂ ಮಸಾಲ
    ಅರಿಶಿನ ಪುಡಿ
    ಉಪ್ಪು
    ಎಣ್ಣೆ
    ತುಪ್ಪ

    ಮಾಡುವ ವಿಧಾನ
    ಸ್ಟಫಿಂಗ್ ತಯಾರಿಸಿ:
    ಒಂದು ಬಾಣಲೆಗೆ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಸಾಸಿವೆ ಕಾಳು, ಹೆಚ್ಚಿದ ಕರಿಬೇವು, ಹೆಚ್ಚಿದ ಹಸಿಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಅರಿಶಿನ, ಚಿಲ್ಲಿ ಪೌಡರ್, ದನಿಯಾ ಪುಡಿ, ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತುರಿದ ಪನ್ನೀರ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಬೇಯಿಸಿ. ಸ್ಟಫಿಂಗ್ ಅನ್ನು ತಣ್ಣಗಾಗಲು ಇಡಿ.

    ಪರೋಟಾ ತಯಾರಿಸಿ:
    ಕಲಸಿದ ಗೋಧಿ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ. ಮೊದಲು ಸ್ವಲ್ಪ ಅಗಲಕ್ಕೆ ಲಟ್ಟಿಸಿ. ಲಟ್ಟಿಸಿದ ಹಿಟ್ಟಿನ ಮಧ್ಯೆ ಪನ್ನೀರ್ ಸ್ಟಫಿಂಗ್ ತುಂಬಿಸಿ, ಚಪಾತಿ ಆಕಾರದಲ್ಲಿ ಲಟ್ಟಿಸಿ ಬೇಯಿಸಿಕೊಳ್ಳಿ. ಪರೋಟಾವನ್ನು ಹೆಂಚಿನ ಮೇಲೆ ಹಾಕಿ, ಎರಡೂ ಕಡೆ ತುಪ್ಪ ಹಾಕಿ ಬೇಯಿಸಿ.

    ಬಿಸಿಬಿಸಿ ಪನ್ನೀರ್ ಪರೋಟಾವನ್ನು ಮೊಸರು, ಉಪ್ಪಿನಕಾಯಿ ಅಥವಾ ಬೆಣ್ಣೆಯೊಂದಿಗೆ ಸವಿಯಿರಿ.

  • ಸಿಂಪಲ್ಲಾಗಿ ಮಾಡಿ ಆರೋಗ್ಯಕರ ಸೋಯಾ ಚಂಕ್ಸ್ ಫ್ರೈ

    ಸಿಂಪಲ್ಲಾಗಿ ಮಾಡಿ ಆರೋಗ್ಯಕರ ಸೋಯಾ ಚಂಕ್ಸ್ ಫ್ರೈ

    ಸೋಯಾ ಬೀನ್ ಹಾಗೂ ಸೋಯಾ ಹಾಲಿನಂತೆ ಸೋಯಾ ಚಂಕ್ಸ್ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದನ್ನ ಪಲಾವ್ ಅಥವಾ ಟೊಮೆಟೋ ಬಾತ್ ಮಾಡಿದಾಗ ಅದರಲ್ಲಿ ಬಳಸಿರುತ್ತೀರಿ. ಇದನ್ನು ಸೈಡ್ ಡಿಶ್‍ನಂತೆ ಅಥವಾ ಸಂಜೆಯ ತಿಂಡಿಗೆ ಸ್ನಾಕ್ಸ್‌ ಕೂಡ ಮಾಡಿಕೊಳ್ಳಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಂಪಲ್‌ ಆಗಿ ಸೋಯಾ ಚಂಕ್ಸ್‌ ಫ್ರೈ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಕೂಡ ನಿಮ್ಮ ಮನೆಯಲ್ಲಿ ಒಂದ್ಸಲ ಇದನ್ನ ಟ್ರೈ ಮಾಡಿ ನೋಡಿ, ಖಂಡಿತವಾಗಿಯೂ ಇಷ್ಟವಾಗುತ್ತೆ.

    ಬೇಕಾಗುವ ಸಾಮಗ್ರಿಗಳು:
    ಸೋಯಾ ಚಂಕ್ಸ್ – 2 ಕಪ್
    ಈರುಳ್ಳಿ – 1
    ಕ್ಯಾಪ್ಸಿಕಮ್ – 1
    ಶುಂಠಿ – ಅರ್ಧ ಇಂಚು
    ಬೆಳ್ಳುಳ್ಳಿ – 4
    ಜೀರಿಗೆ – 1 ಚಮಚ
    ಟೊಮೆಟೋ – 2
    ಸೋಯಾ ಸಾಸ್ – 1/2 ಚಮಚ
    ಅರಿಶಿಣ – ಕಾಲು ಚಮಚ
    ಖಾರದಪುಡಿ – 1 ಚಮಚ
    ಧನಿಯಾ ಪುಡಿ – ಅರ್ಧ ಚಮಚ
    ಜೀರಿಗೆ ಪುಡಿ – ಅರ್ಧ ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – 2 ಚಮಚ

    ಮಾಡುವ ವಿಧಾನ: 
    * ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದಕ್ಕೆ ಸೋಯಾ ಚಂಕ್ಸ್ ಹಾಕಿ ಮುಚ್ಚಳ ಮುಚ್ಚಿ 8 ನಿಮಿಷ ಬೇಯಿಸಿ.
    * ಮತ್ತೊಂದು ಪಾತ್ರೆಯಲ್ಲಿ ತಣ್ಣೀರು ಹಾಕಿ ಅದಕ್ಕೆ ಬೆಂದ ಸೋಯಾ ಚಂಕ್ಸ್ ಹಾಕಿ ಆರಲು ಬಿಡಿ.
    * ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಒಂದು ಚಮಚ ಜೀರಿಗೆ ಹಾಕಿ ನಂತರ ಸಣ್ಣಗೆ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಹಾಗೂ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಈರುಳ್ಳಿ ಕಂದು ಬಣ್ಣಕ್ಕೆ ಬಂದ ನಂತರ ಕ್ಯಾಪ್ಸಿಕಮ್ ಹಾಕಿ ಫ್ರೈ ಮಾಡಿ.
    * ನಂತರ ಇದಕ್ಕೆ ಟೊಮೆಟೋ ಹಾಕಿ ಅದು ಬೇಯುವವರೆಗೂ ಚೆನ್ನಾಗಿ ಫ್ರೈ ಮಾಡಿ.
    * ಟೊಮೆಟೋ ಬೆಂದ ನಂತರ, ಅರಿಶಿಣ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಸೋಯಾ ಸಾಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
    * ನಂತರ ತಣ್ಣೀರಿನಲ್ಲಿರುವ ಸೋಯಾ ಚಂಕ್ಸ್ ತೆಗೆದು ಸಂಪೂರ್ಣವಾಗಿ ನೀರನ್ನು ಹಿಂಡಿ ಬಾಣಲೆಗೆ ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ.
    * ನೀರು ಸಂಪೂರ್ಣವಾಗಿ ಇಂಗಿದ ನಂತರ ಕೊತ್ತಂಬರಿ ಸೊಪ್ಪು ಉದುರಿಸಿ ಒಲೆಯಿಂದ ಕೆಳಗಿಳಿಸಿ ಸವಿಯಲು ಕೊಡಿ.

  • ಸ್ಪೆಷಲ್, ಕ್ರಿಸ್ಪಿ ಬೆಂಡೆಕಾಯಿ ಪಾಪ್‌ಕಾರ್ನ್ ಮನಯಲ್ಲೇ ತಯಾರಿಸಿ

    ಸ್ಪೆಷಲ್, ಕ್ರಿಸ್ಪಿ ಬೆಂಡೆಕಾಯಿ ಪಾಪ್‌ಕಾರ್ನ್ ಮನಯಲ್ಲೇ ತಯಾರಿಸಿ

    ತ್ತೀಚಿನ ದಿನಗಳಲ್ಲಿ ಜಂಕ್ ಫುಡ್, ಪಾಸ್ಟ್ ಪುಢ್ ಅಂತಾ ಹೊಟ್ಟೆ ಹಾಳು ಮಾಡಿಕೊಳ್ಳೋದೇ ಹೆಚ್ಚು. ಇಂತಹ ಸಮಯದಲ್ಲಿ ಮನೆಯಲ್ಲೇ ಆರೋಗ್ಯಕರವಾದ ಹಾಗೂ ಬಾಯಿ ಚಪ್ಪರಿಸುವಂತಹ ಸ್ಪೆಷಲ್ ಬೆಂಡೆಕಾಯಿ ಪಾಪ್‌ಕಾರ್ನ್ ತಯಾರಿಸಿ. ಬೆಂಡೆಕಾಯಿಯು ಆರೋಗ್ಯಕ್ಕೂ ಒಳ್ಳೆಯದ್ದು, ಆದ್ದರಿಂದ ಹೊಸ ರೀತಿಯಲ್ಲಿ ಬೆಂಡೆಕಾಯಿ ಪಾಪ್‌ಕಾರ್ನ್ ಮಾಡಿ, ಮಕ್ಕಳಿಗೆ ಸವಿಯಲು ನೀಡಿ.

    ಬೇಕಾಗುವ ಪದಾರ್ಥಗಳು:
    ಬೆಂಡೆಕಾಯಿ – 15ರಿಂದ 20
    ಅರಿಶಿಣದ ಪುಡಿ – ಅರ್ಧ ಚಮಚ
    ಮೆಣಸಿನ ಪುಡಿ – 2 ಚಮಚ
    ಗರಂ ಮಸಾಲೆ – ಅರ್ಧ ಚಮಚ
    ಕಾರ್ನ್ ಫ್ಲೋರ್ – 1 ಚಮಚ
    ಮೈದಾ ಹಿಟ್ಟು – 1 ಕಪ್
    ಬ್ರೆಡ್ ಕ್ರಂಬ್ಸ್- 1-2 ಕಪ್
    ಉಪ್ಪು
    ಎಣ್ಣೆ

    ಮಾಡುವ ವಿಧಾನ:
    * ಮೊದಲಿಗೆ ಬೆಂಡೆಕಾಯಿಯನ್ನು 1 ಇಂಚು ಉದ್ದಕ್ಕೆ ಕತ್ತರಿಸಿ. ನೀರು ಇಲ್ಲದಂತೆ ಚೆನ್ನಾಗಿ ಒರೆಸಿಕೊಳ್ಳಬೇಕು.
    * ಬಳಿಕ ಅರಿಶಿನ, 1 ಚಮಚ ಮೆಣಸಿನ ಪುಡಿ, ಗರಂ ಮಸಾಲಾ, ರುಚಿಕೆ ತಕ್ಕಷ್ಟು ಉಪ್ಪು ಹಾಗೂ 2 ಚಮಚ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ 15 ನಿಮಿಷ ಮಸಾಲೆ ಹಿಡಿಯಲು ಬಿಡಬೇಕು.
    * ಒಂದು ಪಾತ್ರೆ ತೆಗೆದುಕೊಂಡು 1 ಕಪ್ ಮೈದಾ, ಹಾಗೂ ಮುಕ್ಕಾಲು ಕಪ್ ಕಾರ್ನ್ ಫ್ಲೋರ್, 1 ಚಮಚ ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಹಾಕಿ ಉಂಡೆಗಳಿಲ್ಲದಂತೆ ಹಿಟ್ಟನ್ನು ಕಲಸಬೇಕು.
    * ಬಳಿಕ ಮಸಾಲೆ ಮಿಶ್ರಿತ ಬೆಂಡೆಕಾಯಿಗಳನ್ನು ಅದ್ದಿ ತೆಗೆದು, ಬ್ರೆಡ್ ಕ್ರಂಪ್ಸ್ನ ಮೇಲೆ ರೋಲ್ ಮಾಡಿಬೇಕು.
    * ಇನ್ನು ಈ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಬಿಡಬೇಕು. ಬೆಂಡೆಕಾಯಿಗಳು ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಬೆಂಡೆಕಾಯಿ ಪಾಪ್ ಕಾರ್ನ್ ಸವಿಯಲು ಸಿದ್ಧ.

  • ಮನೆಯಲ್ಲೇ ರೆಸ್ಟೋರೆಂಟ್‌ ಶೈಲಿಯ ಕ್ಯಾರೆಟ್‌ ಸೂಪ್‌ ತಯಾರಿಸಿ

    ಮನೆಯಲ್ಲೇ ರೆಸ್ಟೋರೆಂಟ್‌ ಶೈಲಿಯ ಕ್ಯಾರೆಟ್‌ ಸೂಪ್‌ ತಯಾರಿಸಿ

    ಪ್ರತಿದಿನ ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದ್ದು. ಅದರಲ್ಲೂ ಕ್ಯಾರೆಟ್‌ ಸೂಪ್‌ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಹೌದು, ಕ್ಯಾರೆಟ್‌ ಸೂಪ್‌ನಲ್ಲಿ ಅಧಿಕ ಪ್ರೋಟಿನ್‌ ಅಂಶವಿದೆ. ಈ ಕ್ಯಾರೆಟ್ ಸೂಪ್‌(Carrot Soup) ಸವಿಯಲು ನೀವು ರೆಸ್ಟೋರೆಂಟ್‌ ಹೋಗಬೇಕು ಎಂದೇನಿಲ್ಲಾ. ರುಚಿ ರುಚಿಯಾದ, ಆರೋಗ್ಯಕರವಾದ ರೆಸ್ಟೋರೆಂಟ್‌ ಶೈಲಿಯ ಕ್ಯಾರೆಟ್‌ ಸೂಪ್‌ ಮಾಡೋದು ಹೇಗೆ ಅಂತಾ ನಾವು ಹೇಳಿಕೊಡುತ್ತೇವೆ.

    ಬೇಕಾಗಿರುವ ಸಾಮಾಗ್ರಿಗಳು:
    ಎಣ್ಣೆ – 2 ಟೇಬಲ್‌ ಸ್ಪೂನ್‌
    ಬೆಳ್ಳುಳ್ಳಿ – 2
    ಕ್ಯಾರೆಟ್ – 4
    ಆಲೂಗಡ್ಡೆ – ½
    ಶುಂಠಿ – ½
    ಈರುಳ್ಳಿ – ½
    ಉಪ್ಪು – ಸ್ವಲ್ಪ
    ಪುದೀನ ಸೊಪ್ಪು – ಸ್ವಲ್ಪ
    ಕರಿ ಮೆಣಸು – ½ ಟೀಸ್ಪೂನ್

    ಮಾಡುವ ವಿಧಾನ:
    * ಮೊದಲನೆಯದಾಗಿ, ಪ್ರೆಶರ್ ಕುಕ್ಕರ್‌ಗೆ 2 ಟೇಬಲ್‌ ಸ್ಪೂನ್‌ ಎಣ್ಣೆ ಹಾಕಿ, 2 ಬೆಳ್ಳುಳ್ಳಿ ಮತ್ತು 1 ಇಂಚು ಶುಂಠಿಯನ್ನು ಹಾಕಿ.
    * ಬಳಿಕ ½ ಈರುಳ್ಳಿ ಹಾಕಿ ಒಂದು ನಿಮಿಷ ಫ್ರೈ ಮಾಡಿ.
    * ಈಗ 4 ಕ್ಯಾರೆಟ್, ¼ ಆಲೂಗಡ್ಡೆ ಮತ್ತು 1 ಟೀಸ್ಪೂನ್ ಉಪ್ಪು ಹಾಕಿ.
    * 2 ಕಪ್ ನೀರು ಮತ್ತು 6 ಎಸಳು ಪುದೀನ ಎಲೆಗಳನ್ನು ಸೇರಿಸಿ.
    * ಕುಕ್ಕರ್‌ ಮುಚ್ಚಿ 4 ಸೀಟಿ ಹೊಡೆಸಿ, ಅಂದರೆ ಕ್ಯಾರೆಟ್ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.
    * ಬೆಂದ ನಂತರ ಕುಕ್ಕರ್‌ನಿಂದ ಪುದೀನ ಎಲೆಗಳನ್ನು ತೆಗೆದುಹಾಕಿ.
    * ತಣ್ಣಗಾದ ಬಳಿಕ ಬೇಯಿಸಿದ ತರಕಾರಿಗಳನ್ನು ಬ್ಲೆಂಡರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಬೇಯಿಸಿದ ತರಕಾರಿಯಲ್ಲಿ ಉಳಿದಿರುವ ನೀರನ್ನು ಹಾಗೂ ರುಬ್ಬಿಕೊಂಡ ಪೇಸ್ಟ್ ಅನ್ನು ಕಡಾಯಿಗೆ ವರ್ಗಾಯಿಸಿ.
    * 2 ನಿಮಿಷಗಳ ಸೂಪ್ ದಪ್ಪವಾಗುವವರೆಗೆ ಕುದಿಸಿ.
    * ಬಳಿಕ ಇದಕ್ಕೆ ಸ್ವಲ್ಪ ಕರಿ ಮೆಣಸಿನ ಪುಡಿ ಸೇರಿಸಿ.
    * ಈಗ ರುಚಿಯಾದ, ಆರೋಗ್ಯಕರವಾದ ಕ್ಯಾರೆಟ್ ಸೂಪ್ ಸವಿಯಲು ಸಿದ್ಧ.

  • ಸ್ವಾದಿಷ್ಟವಾದ ಕಡಾಯಿ ಪನ್ನೀರ್‌ ಹೀಗೆ ಮಾಡಿ..

    ಸ್ವಾದಿಷ್ಟವಾದ ಕಡಾಯಿ ಪನ್ನೀರ್‌ ಹೀಗೆ ಮಾಡಿ..

    ನಾನ್‌ ವೆಜ್‌ ತಿನ್ನದವರು ಹೆಚ್ಚಾಗಿ ವೆಜ್‌ನಲ್ಲಿ ಗೋಬಿ ಹಾಗೂ ಪನ್ನೀರ್‌ನ್ನು ಇಷ್ಟಪಡುತ್ತಾರೆ. ಹೆಚ್ಚಿನವರು ಪನ್ನೀರ್‌ನಲ್ಲಿ ಮಾಡಲಾಗುವ ವಿವಿಧ ಬಗೆಯ ತಿಂಡಿ ಹಾಗೂ ಖಾದ್ಯಗಳನ್ನು ತಿನ್ನ ಬಯಸುತ್ತಾರೆ. ಅದರಲ್ಲೂ ಕೆಲವರು ಹೊಟೇಲ್‌ಗಳಲ್ಲಿ ತಿನ್ನದೇ ಮನೆಯಲ್ಲಿ ಮಾಡಿಕೊಂಡು ತಿನ್ನಬೇಕು ಎಂದುಕೊಳ್ಳುತ್ತಾರೆ.

    ಹೌದು ಅದಕ್ಕೆ ಸುಲಭವಾಗಿ ಮನೆಯಲ್ಲಿ ಕಡಾಯಿ ಪನ್ನೀರ್‌ನ್ನು ಈ ರೀತಿಯಾಗಿ ಮಾಡಿ.

    ಬೇಕಾಗುವ ಪದಾರ್ಥಗಳು:
    ಧನಿಯಾ ಕಾಳು
    ಕರಿಮೆಣಸು
    ಚಕ್ಕೆ
    ಬಿರಿಯಾನಿ ಎಲೆ
    ಜೀರಿಗೆ
    ಕೆಂಪು ಮೆಣಸಿನಕಾಯಿ
    ಪನ್ನೀರ್‌
    ಈರುಳ್ಳಿ
    ದೊಡ್ಡ ಮೆಣಸಿಕಾಯಿ
    ಟೊಮ್ಯಾಟೊ
    ಬೆಳ್ಳುಳ್ಳಿ
    ಶುಂಠಿ

    ಮಾಡುವ ವಿಧಾನ:
    ಮೊದಲಿಗೆ ಮಸಾಲೆ ಪದಾರ್ಥಗಳನ್ನು ಹುರಿದು ಪುಡಿ ತಯಾರಿಸಿಕೊಳ್ಳಬೇಕು. ಕತ್ತರಿಸಿದ ಈರುಳ್ಳಿ, ದೊಡ್ಡ ಮೆಣಸಿನಕಾಯಿ ಹಾಗೂ ಪನ್ನೀರ್‌ನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು. ಬಳಿಕ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಟೊಮ್ಯಾಟೋ ಅನ್ನು ಚೆನ್ನಾಗಿ ರುಬ್ಬಿಟ್ಟುಕೊಳ್ಳಬೇಕು.

    ನಂತರ ಇನ್ನೊಂದು ಬಾಣಲಿಗೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದಕ್ಕೆ ರುಬ್ಬಿಟ್ಟುಕೊಂಡ ಶುಂಠಿ, ಬೆಳ್ಳುಳ್ಳಿ ಮಿಶ್ರಣವನ್ನು ಹಾಕಿಕೊಳ್ಳಬೇಕು. ನೀರು ಹಾಕಿ ಹಸಿ ವಾಸನೆ ಹೋಗುವ ತನಕ ಚೆನ್ನಾಗಿ ಹುರಿದುಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕೆಂಪು ಖಾರವನ್ನು ಹಾಕಿ ಕಲಸಿಕೊಳ್ಳಬೇಕು. ಅದಕ್ಕೆ ಕತ್ತರಿಸಿದ ಈರುಳ್ಳಿ, ದೊಡ್ಡ ಮೆಣಸಿನಕಾಯಿಯನ್ನು ಹಾಕಬೇಕು. ಕೊನೆಗೆ ಹುರಿದಿಟ್ಟ ಪನ್ನೀರ್‌ ಹಾಕಿಕೊಂಡು, ಬಳಿಕ ಅದಕ್ಕೆ ವೈಟ್‌ ಕ್ರೀಮ್‌ ಹಾಕಿದರೆ ಕಡಾಯಿ ಪನ್ನೀರ್‌ ಸವಿಯಲು ಸಿದ್ಧವಾಗುತ್ತದೆ.

  • ಸಖತ್ ಟೇಸ್ಟ್ ಆಗಿರುವ ಬಿಸಿ ಬಿಸಿಯಾದ ಕಿಚಡಿ ಮಾಡಿ

    ಸಖತ್ ಟೇಸ್ಟ್ ಆಗಿರುವ ಬಿಸಿ ಬಿಸಿಯಾದ ಕಿಚಡಿ ಮಾಡಿ

    ಬೆಳಗ್ಗೆ, ಸಂಜೆ ಯಾವ ಹೊತ್ತಿನಲ್ಲಿ ಬೇಕಾದರೂ ಸವಿಯಬಹುದಾದ ರೆಸಿಪಿ ಹುಡುಕುತ್ತಿದ್ದೀರಾ? ಪೌಷ್ಠಿಕಾಂಶದ ಆಹಾರ, ತಿನ್ನಲು ರುಚಿಕರವಾಗಿರುವ ಮತ್ತು ಮಕ್ಕಳಿಗೆ ತುಂಬಾನೇ ಇಷ್ಟವಾಗುವುದು ಕಿಚಡಿಯಾಗಿದೆ. ಈ ಅಡುಗೆಯನ್ನು ಮಾಡುವುದು ತುಂಬಾ ಸುಲಭ ಮತ್ತು ನಾಲಿಗೆಗೆ ರುಚಿ ನೀಡುವ ಅಡುಗೆಯಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಹೆಸರು ಬೇಳೆ- ಅರ್ಧ ಕಪ್
    * ತೋಗರಿ ಬೇಳೆ- ಅರ್ಧ ಕಪ್
    * ಅಕ್ಕಿ – 2 ಕಪ್
    * ಕಾಳು ಮೆಣಸು- ಸ್ವಲ್ಪ
    * ಈರುಳ್ಳಿ 2
    * ಟೊಮೆಟೋ- 2
    * ಒಣ ಮೆಣಸು- 3
    * ಬಾದಾಮಿ/ಪಿಸ್ತಾ ಪುಡಿ- 1 ಚಮಚ
    * ಜೀರಿಗೆ ಪುಡಿ- 1 ಚಮಚ
    * ದನಿಯಾ ಪುಡಿ- 1 ಚಮಚ
    * ಅರಿಶಿಣ ಪುಡಿ- 1 ಚಮಚ
    * ಲವಂಗ- 2
    * ತುಪ್ಪ- 3
    * ಕರಿಬೇವು-
    * ಪಲಾವ್ ಎಲೆ
    * ರುಚಿಗೆ ತಕ್ಕಷ್ಟು ಉಪ್ಪು

    Kichadi

    ಮಾಡುವ ವಿಧಾನ:
    * ಕುಕ್ಕರಿನಲ್ಲಿ ಹೆಸರು ಬೇಳೆ, ತೋಗರಿ ಬೇಳೆ, ಅಕ್ಕಿ, ಟೊಮೆಟೊ, ಈರುಳ್ಳಿ, ಕಾಳು ಮೆಣಸು, ರುಚಿಗೆ ತಕ್ಕ ಉಪ್ಪು, ಅರಿಶಿಣ ಹಾಕಿ 4 ಲೋಟ ನೀರು ಹಾಕಿ ಬೇಯಿಸಿಕೊಳ್ಳಬೇಕು.  ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟ್ರಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    Kichadi

    * ಈಗ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಸ್ವಲ್ಪ ಜೀರಿಗೆ, ಒಣ ಮೆಣಸು ಮುರಿದು ಹಾಕಿ, ನಂತರ ಪಲಾವ್ ಎಲೆ ಅಥವಾ ಸ್ವಲ್ಪ ಕರಿಬೇವು ಹಾಕಿ ಲವಂಗ ಸೇರಿಸಿ ಫ್ರೈ ಮಾಡಬೇಕು.

    * ನಂತರ ಬೇಯಿಸಿದ ಅಕ್ಕಿ- ಬೇಳೆ ಸೇರಿಸಿ, ಅದಕ್ಕೆ ಸ್ವಲ್ಪ ಖಾರ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಡ್ರೈಫ್ರೂಟ್ಸ್ ಪುಡಿ ಸೇರಿಸಿ ಕುದಿಸಿದರೆ ಆರೊಗ್ಯಕರವಾದ ಕಿಚಡಿ ಸಿದ್ಧವಾಗುತ್ತದೆ. ಇದನ್ನೂ ಓದಿ: ಆಫ್ರಿಕಾದಲ್ಲಿ ರೂಪಾಂತರ ಕೋವಿಡ್ ತಳಿ ಪತ್ತೆ – ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ