Tag: Veerkaputra Srinivas

  • ಡಾ.ವಿಷ್ಣು ಹೆಸರಿನಲ್ಲಿ ಕ್ರಿಕೆಟ್ : ಜೂ 24, 25ಕ್ಕೆ ಯಜಮಾನ ಪ್ರೀಮಿಯರ್ ಲೀಗ್

    ಡಾ.ವಿಷ್ಣು ಹೆಸರಿನಲ್ಲಿ ಕ್ರಿಕೆಟ್ : ಜೂ 24, 25ಕ್ಕೆ ಯಜಮಾನ ಪ್ರೀಮಿಯರ್ ಲೀಗ್

    ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ (Cricket) ಪಂದ್ಯ ಶುರು ಮಾಡಿದ ಕೀರ್ತಿ ಡಾ.ವಿಷ್ಣುವರ್ಧನ್ (Vishnuvardhan) ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣು ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜೊತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದೂ ಇದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ (Yajamana Premier League) ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.

    ಈ ಬಾರಿಯ ಪಂದ್ಯಾವಳಿಯು ಇದೇ ಜೂನ್ 24 ಹಾಗೂ 25 ರಂದು ಬಿಐಸಿಸಿ ಇನ್ಫಿನಿಟಿ ಔಟ್ ಡೋರ್ ಗ್ರೌಂಡ್ ಮಾಗಡಿ ರಸ್ತೆ, ಬೆಂಗಳೂರಿನಲ್ಲಿ ನಡೆಯಲಿದೆ. ಈ ಮಾಹಿತಿಯನ್ನು ಮೊನ್ನೆಯಷ್ಟೇ ಕಿಚ್ಚ ಸುದೀಪ್ (Sudeep) ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಉದ್ದೇಶಗಳು ಸರಿಯಾಗಿದ್ದರೆ, ಅವು ನಮ್ಮ ನಂತರವೂ ಜೀವಂತವಾಗಿರುತ್ತವೆ ಎಂಬುದಕ್ಕೆ ಉದಾಹರಣೆ ಈ ಯಜಮಾನ ಪ್ರೀಮಿಯರ್ ಲೀಗ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ಡಾ.ವಿಷ್ಣು ಸೇನಾ ಸಮಿತಿಯು ಹಮ್ಮಿಕೊಂಡಿರುವ ಎರಡನೇ ಸೀಸನ್ ಇದಾಗಿದ್ದು, ವೀರಕಪುತ್ರ ಶ್ರೀನಿವಾಸ್ (Veerkaputra Srinivas) ನೇತೃತ್ವದಲ್ಲಿ ವಿಷ್ಣು ಸೇನಾನಿಗಳು ಪಂದ್ಯಗಳನ್ನು ಆಡಲಿದ್ದಾರೆ. ವಿಷ್ಣುವರ್ಧನ್ ಹೆಸರಿನಲ್ಲಿ ವೀರಕಪುತ್ರ ಶ್ರೀನಿವಾಸ್ ಅವರು ಹತ್ತಾರು ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಅದಕ್ಕೆ ಸೇರ್ಪಡೆ ಈ ಯಜಮಾನ ಕಪ್ ಆಗಿದೆ. ಜನಪರ ಕೆಲಸಗಳ ಜೊತೆಗೆ ಕ್ರೀಡಾ ಲೋಕಕ್ಕೂ ಉತ್ತೇಜನ ಕೊಡುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಆಯೋಜನೆಗೊಂಡಿದೆ.

    ಯಜಮಾನರ ಹೆಸರಿನಲ್ಲಿ ಕ್ರಿಕೆಟ್ ಆಡುವುದು ಎಲ್ಲರಿಗೂ ಸಂಭ್ರಮ ತರುವ ವಿಚಾರ. ಮೊದಲಿನಿಂದಲೂ ಯಜಮಾನರು ಕಲೆ, ಸಂಗೀತ, ಕ್ರಿಕೆಟ್ ಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಸ್ವತಃ ಅವರು ಕೂಡ ಕ್ರಿಕೆಟ್ ಆಡುತ್ತಿದ್ದರು. ಅವರ ನೆನಪಿನಲ್ಲಿ ನಾವೆಲ್ಲ ಕ್ರಿಕೆಟ್ ಆಡುತ್ತೇವೆ. ಇದಕ್ಕೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಜೊತೆಯಾಗುತ್ತಿದ್ದಾರೆ. ಪ್ರತಿ ವರ್ಷವೂ ಇದನ್ನು ಆಯೋಜನೆ ಮಾಡುತ್ತೇವೆ ಎನ್ನುವುದು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ಮಾತು.

  • ಡಾ.ವಿಷ್ಣು ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಸಜ್ಜು : 300 ವಾಹನ ಜಾಥಾ, 100 ಕಟೌಟ್, ಸಾವಿರ ದೀಪೋತ್ಸವ

    ಡಾ.ವಿಷ್ಣು ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಸಜ್ಜು : 300 ವಾಹನ ಜಾಥಾ, 100 ಕಟೌಟ್, ಸಾವಿರ ದೀಪೋತ್ಸವ

    ನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಜನವರಿ 29ರಂದು ಲೋಕಾರ್ಪಣೆ ಆಗುತ್ತಿದ್ದು, ಅಭಿಮಾನಿಗಳು ಸರ್ವರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸರಕಾರವು ಸ್ಮಾರಕ ಉದ್ಘಾಟನೆಯನ್ನು ಕೇವಲ ಸರಕಾರಿ ಕಾರ್ಯಕ್ರಮದಂತೆ ಹಮ್ಮಿಕೊಂಡಿದ್ದರೆ, ವಿಷ್ಣುಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಸಂಖ್ಯಾತ ಅಭಿಮಾನಿಗಳು ಜಾತ್ರೆಯ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಈಗಾಗಲೇ ಸರ್ವ ರೀತಿಯಲ್ಲೂ ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಗೆ ರೆಡಿಯಾಗಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ವಿಷ್ಣುವರ್ಧನ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ. ರಾಜ್ಯಾದ್ಯಂತ ಗೋಡೆಗಳ ಮೇಲೆ ವಿಷ್ಣುವರ್ಧನ್ ಸ್ಮಾರಕದ  ಪೋಸ್ಟರ್ ಅಂಟಿಸಲಾಗಿದೆ. ಇಷ್ಟೇ ಅಲ್ಲದೇ ಹತ್ತು ಹಲವು ಕಾರ್ಯಕ್ರಮಗಳನ್ನು ಜನವರಿ 29 ರ ಬೆಳಗ್ಗೆಯಿಂದ ವಿಷ್ಣುಸೇನಾ ಸಮಿತಿಯ ಸದಸ್ಯರು ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ತೀವ್ರ ಎದೆನೋವಿನಿಂದ ಬಾಲಿವುಡ್ ನಟ ಅನ್ನು ಕಪೂರ್ ಆಸ್ಪತ್ರೆಗೆ ದಾಖಲು

    ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆಗೆ ವಾಹನ ಜಾಥಾ, ಕುಂಭಮೇಳ, ದೀಪೋತ್ಸವ, ಜಾನಪದ ಮೇಳ, ಕಟೌಟ್ ಜಾತ್ರೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಜನವರಿ 29ರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಅಭಿಮಾನಿಗಳು ಒಟ್ಟಾಗಿ ಸೇರಲಿದ್ದು, ಅಲ್ಲಿಂದ 6.30ಕ್ಕೆ ವಾಹನ ಜಾಥಾ ನಡೆಯಲಿದೆ. ಬೆಂಗಳೂರು ಮೈಸೂರು ಮಧ್ಯೆ ಇರುವಂತಹ ಅಭಿಮಾನಿಗಳು ತಮ್ಮ ಊರಿನ ಹತ್ತಿರದ ಹೈವೆಗಳಲ್ಲಿ ಬಂದು ಜೊತೆಯಾಗಲಿದ್ದಾರೆ ಎಂದಿದ್ದಾರೆ.

    ಒಟ್ಟು ನೂರು ಕಟೌಟ್ ಗಳು ಸ್ಮಾರಕದ ಉದ್ಘಾಟನೆಗಾಗಿಯೇ ಸಿದ್ಧಗೊಂಡಿವೆ. ಅವುಗಳು ಬೆಂಗಳೂರಿನಿಂದ ಮೈಸೂರುವರೆಗೂ ಮತ್ತು ಸ್ಮಾರಕದ ಹತ್ತಿರವೂ ತಲೆಯೆತ್ತಿ ನಿಲ್ಲಲಿವೆ. ಈಗಾಗಲೇ ಹಲವು ಕಡೆ ದುಂಡನೆಯ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಜನವರಿ 29ರಂದು ವಾಹನ ಇಲ್ಲದವರಿಗಾಗಿಯೇ ಒಟ್ಟು ಹತ್ತು ಬಸ್ ಗಳನ್ನು ಆಯೋಜನೆ ಮಾಡಲಾಗಿದೆ. ಐದು ಬಸ್ ಗಳಲ್ಲಿ ಕುಂಭ ಹೊರುವ ಮತ್ತು ದೀಪೋತ್ಸವದಲ್ಲಿ ಭಾಗಿ ಆಗುವ ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ. ಇನ್ನೂ ಐದು ಬಸ್ ಗಳು ವಾಹನ ಇಲ್ಲದವರಿಗಾಗಿ ಕಾದಿರುತ್ತವೆ.

    ಎಲ್ಲರೂ ಮೈಸೂರಿನಲ್ಲಿ ಒಟ್ಟಾಗಿ ಅಲ್ಲಿಂದ ಮೂರು ಕೀಲೋ ಮೀಟರ್ ಜಾಥಾ ಹಮ್ಮಿಕೊಂಡು ಸ್ಮಾರಕ ತಲುಪಲಾಗುತ್ತದೆ. ಈ ಜಾಥಾದಲ್ಲಿ ವಿಷ್ಣುವರ್ಧನ್ ಅವರ ಗೀತೆಗಳು, ಜಾನಪದ ನೃತ್ಯ, ಜಾನಪದ ಕಲೆಗಳನ್ನು ಬಿಂಬಿಸುವಂತಹ ಯೋಜನೆ ಸಿದ್ಧವಾಗಿದೆ. ಕುಂಭಮೇಳದೊಂದಿಗೆ ಮಹಿಳೆಯರು ಕೂಡ ಜಾಥಾದಲ್ಲಿ ಹೆಜ್ಜೆ ಹಾಕಲಿದ್ದಾರೆ. ಜನವರಿ 29ರಂದು ಮೈಸೂರಿನಲ್ಲಿ ವಿಷ್ಣು ಜಾತ್ರೆಯೇ ನಡೆಯಲಿದೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಾ.ವಿಷ್ಣು ನಂತರ ಮರಳು ಶಿಲ್ಪದ ಗೌರವಕ್ಕೆ ಪಾತ್ರರಾದ ಕಿಚ್ಚ ಸುದೀಪ್

    ಡಾ.ವಿಷ್ಣು ನಂತರ ಮರಳು ಶಿಲ್ಪದ ಗೌರವಕ್ಕೆ ಪಾತ್ರರಾದ ಕಿಚ್ಚ ಸುದೀಪ್

    ಳೆದ ವರ್ಷ ಡಾ.ವಿಷ್ಣುವರ್ಧನ್ ಅವರ ಹುಟ್ಟು ಹಬ್ಬಕ್ಕೆ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ನೆಚ್ಚಿನ ನಟನ ಮರಳು ಶಿಲ್ಪ ಮಾಡಿಸಿ, ಗೌರವ ಸೂಚಿಸಿದ್ದರು. ಇದೀಗ  ಆ ಉಡುಗೊರೆಯನ್ನು ಕಿಚ್ಚ ಸುದೀಪ್ ಅವರಿಗೆ ಸಲ್ಲುವಂತೆ ಮಾಡಿದ್ದಾರೆ. ಸುದೀಪ್ ಅವರ ಜನ್ಮ ದಿನಕ್ಕೆ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚನ ಮರಳು ಶಿಲ್ಪ ರಾರಾಜಿಸುತ್ತಿದೆ.

    ಅಭಿನಯ ಚಕ್ರವರ್ತಿ ಸುದೀಪ್ ಅವರು ರಾಷ್ಟ್ರದಾದ್ಯಂತ ಖ್ಯಾತಿ ಜೊತೆಗೆ ಅಭಿಮಾನ ಸಮೂಹವನ್ನು ಹೊಂದಿರುವ ಕನ್ನಡದ ಮೇರುನಟ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಜನ್ಮದಿನ. ಈ ಜನ್ಮದಿನವನ್ನು ಸ್ಮರಣೀಯವಾಗಿಸಲು ಮತ್ತು ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.  ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ ಎಂದು ಶಿಲ್ಪಿ ತಿಳಿಸಿದ್ದಾರೆ. ಸುದೀಪ್ ಅವರ ಆಪ್ತರಾದ ವೀರಕಪುತ್ರ ಶ್ರೀನಿವಾಸ ಅವರು ಯಾವಫೋಟೋ ಬಳಸಬೇಕು ಮತ್ತು ಕನ್ನಡ ಬರವಣಿ ಹೇಗಿರಬೇಕು ಎಂಬ ಗೊಂದಲಕ್ಕೆ ಅಗತ್ಯವಿದ್ದ ಮಾಹಿತಿಯನ್ನು ನೀಡಿರುವುದನ್ನು ತಿಳಿಸಿದರು.

    ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ ಎರಡನೇ ಕಲಾವಿದರೆಂದರೆ ಅದು ಕಿಚ್ಚ ಸುದೀಪ್ ಅವರು ಮಾತ್ರ. ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು ಎಂಬುದು ಬಿಟ್ಟರೆ ಇದುವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ದಕ್ಕಿರಲಿಲ್ಲ. ಈಗ ಎರಡನೆಯವರಾಗಿ ಕಿಚ್ಚ ಸುದೀಪ್ ಅವರು ಅಂತಹ ಗೌರವವಕ್ಕೆ ಪಾತ್ರರಾಗಿದ್ದಾರೆ. ನಿನ್ನೆ ತಾನೇ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆಯ ಗೌರವವನ್ನು ಪಡೆದಿದ್ದಂತಹ ಸುದೀಪ್ ಅವರು ಈಗ ಮರಳು ಶಿಲ್ಪ ಗೌರವಕ್ಕೂ ಪಾತ್ರರಾಗಿರುವುದು ಅವರ ಅಭಿಮಾನಿಗಳನ್ನು ಖುಷಿಯಿಂದ ಕುಣಿಯುವಂತೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಅಂಚೆ ಇಲಾಖೆಯಿಂದ ಕಿಚ್ಚನಿಗೆ ಗೌರವ:  ಸುದೀಪ್ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆಗೆ ಸಿದ್ಧತೆ

    ಅಂಚೆ ಇಲಾಖೆಯಿಂದ ಕಿಚ್ಚನಿಗೆ ಗೌರವ: ಸುದೀಪ್ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆಗೆ ಸಿದ್ಧತೆ

    ಭಾರತೀಯ ಅಂಚೆ ಇಲಾಖೆಯು ನಮ್ಮ ಪ್ರೀತಿಯ ಕಿಚ್ಚ ಸುದೀಪ್ ಅವರ “ವಿಶೇಷ ಅಂಚೆ ಲಕೋಟೆ” ಯನ್ನು ಹೊರ ತರುತ್ತಿದೆ. ಈ ಹಿಂದೆ ಡಾ.ವಿಷ್ಣುವರ್ಧನ್ ಅವರ ಅಂಚೆ ಲಕೋಟೆ ತರಲು ಹರಸಾಹಸ ಪಟ್ಟಿದ್ದ ಡಾ.ವಿಷ್ಣು ಸೇನಾಸಮಿತಿಯ ವೀರಕಪುತ್ರ ಶ್ರೀನಿವಾಸ್ ಅವರೇ, ಈ ಅಂಚೆ ಲಕೋಟೆ ಹಿಂದಿರುವ ಶಕ್ತಿ ಎನ್ನಲಾಗುತ್ತಿದೆ.

    ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ   “ವಿಶೇಷ ಅಂಚೆ ಲಕೋಟೆಯನ್ನು ” ಬಿಡುಗಡೆ ಮಾಡುತ್ತದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಅದೇ ಪ್ರಕಾರ 25ವರ್ಷಗಳ ಸಿನಿ ಜರ್ನಿಯನ್ನು ಪೂರ್ಣಗೊಳಿಸಿರುವ ರಾಷ್ಟ್ರತಾರೆ ಸುದೀಪ್ ಅವರ ಸಾಧನೆಯನ್ನು ಸಹ ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ.  ಆ ನಿಮಿತ್ತ ಇಂದು ಅಂಚೆ ಇಲಾಖೆಯ ಅಧೀಕ್ಷರಾದ ಶ್ರೀ ಮಾದೇಶ್ ಅವರು ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿ ಅವರಿಂದ NOC ಯನ್ನು ಪಡೆದರು ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು. ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ.

    ಕಿಚ್ಚ ಸುದೀಪ್ ಅವರ ಸಾಧನೆಗಳನ್ನು ಗುರುತಿಸಿ “ವಿಶೇಷ ಅಂಚೆ ಲಕೋಟೆ” ಮೂಲಕ ಗೌರವ ಸಲ್ಲಿಸುತ್ತಿರುವ  ಭಾರತೀಯ ಅಂಚೆ ಇಲಾಖೆಯನ್ನು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮತ್ತು ಕನ್ನಡ ಮನಸುಗಳು ಸಾಮಾಜಿಕ ಜಾಲತಾಣದಲ್ಲಿ ಹೃದಯತುಂಬಿ ಶ್ಲಾಘಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]