Tag: veerendra heggade

  • ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಡ್ಯಕ್ಕೆ  5 ಟನ್ ಆಕ್ಸಿಜನ್

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಡ್ಯಕ್ಕೆ 5 ಟನ್ ಆಕ್ಸಿಜನ್

    ಮಂಡ್ಯ: ಜಿಲ್ಲೆಯಲ್ಲಿ ಎದುರಾಗಿರುವ ಆಕ್ಸಿಜನ್ ಅಭಾವವನ್ನು ನೀಗಿಸಲು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರು ಐದು ಟನ್ ಆಕ್ಸಿಜನ್ ಟ್ಯಾಂಕರ್‌ಗಳನ್ನು ನೀಡಿದ್ದಾರೆ.

    ಮಂಡ್ಯ ಜಿಲ್ಲೆಯಲ್ಲಿ ಹಲವು ದಿನಗಳಿಂದ ಆಕ್ಸಿಜನ್ ಕೊರತೆ ಎದುರಾಗಿದ್ದು, ಕೊರೊನಾ ಸೋಂಕಿತರು ಪರದಾಡುವಂತಹ ಸ್ಥಿತಿ ಎದುರಾಗಿದೆ. ಇದನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರು ಐದು ಟನ್ ಆಕ್ಸಿಜನ್ ನೀಡುವ ಮೂಲಕ ಮಂಡ್ಯದ ಜನರ ನೆರವಿಗೆ ಧಾವಿಸಿದ್ದಾರೆ.

    ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ಯೋಜನಾ ನಿರ್ದೇಶಕರಾದ ನಾರಾಯಣ ಅವರು ಮಿಮ್ಸ್ ನಿರ್ದೇಶಕರಾದ ಹರೀಶ್ ಅವರಿಗೆ ಹಸ್ತಾಂತರ ಮಾಡಿದರು. ಈ ವೇಳೆ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂ ಗಾಳಿ ಅವರು ಹಾಜರಿದ್ದರು.

  • ”ಶ್ರುತಗಾನ ಸುಧಾ” ಜಿನ ಭಕ್ತಿಗೀತೆಗಳ ಸಂಕಲನ ಬಿಡುಗಡೆ

    ”ಶ್ರುತಗಾನ ಸುಧಾ” ಜಿನ ಭಕ್ತಿಗೀತೆಗಳ ಸಂಕಲನ ಬಿಡುಗಡೆ

    ಮಂಗಳೂರು: ಮೂವತ್ತಮೂರು ಮಂದಿ ಕವಿಗಳು ರಚಿಸಿದ 270 ಜಿನಭಕ್ತಿಗೀತೆಗಳ ಸಂಕಲನ “ಶ್ರುತಗಾನ ಸುಧಾ”ವನ್ನು ಬುಧವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

    ಕವನ ಸಂಕಲನದ ಸಂಪಾದಕರಾದ ಮೂಡಬಿದ್ರೆಯ ಪ್ರೊ. ಅಜಿತ್ ಪ್ರಸಾದ್, ಬೆಂಗಳೂರಿನ ಚಿತ್ತಾ ಜಿನೇಂದ್ರ, ಮಿತ್ರಸೇನ ಜೈನ್ ಅಳದಂಗಡಿ ಮತ್ತು ಧರ್ಮಸ್ಥಳದ ಡಾ. ಜಯಕೀರ್ತಿ ಜೈನ್ ಉಪಸ್ಥಿತರಿದ್ದರು.

  • ದಕ್ಷಿಣ ಕರ್ನಾಟಕ ಪ್ರವಾಸ – ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ಶ್ರುತಿ

    ದಕ್ಷಿಣ ಕರ್ನಾಟಕ ಪ್ರವಾಸ – ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ಶ್ರುತಿ

    ಬೆಂಗಳೂರು: ದಕ್ಷಿಣ ಕರ್ನಾಟಕದ ಪ್ರವಾಸದ ಸಮಯದಲ್ಲಿ ಪ್ರವಾಸಿಗರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡುವಂತೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ(ಕೆಎಸ್‍ಟಿಡಿಸಿ) ಅಧ್ಯಕ್ಷೆ ಶ್ರುತಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ ಸಲ್ಲಿಸಿದ್ದಾರೆ.

    ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಆಯೋಜಿಸುತ್ತಿರುವ ವ್ಯವಸ್ಥಿತ ಪ್ರವಾಸಗಳ ಪೈಕಿ, ದಕ್ಷಿಣ ಕರ್ನಾಟಕ ಪ್ರವಾಸದ ಸಮಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವು ಪ್ರಮುಖ ಕ್ಷೇತ್ರ ದರ್ಶನವಾಗಿದ್ದು, ಪ್ರವಾಸಿಗರಿಗೆ ಶ್ರೀ ಕ್ಷೇತ್ರ ದರ್ಶಿಸಲು ಶೀಘ್ರದರ್ಶನ ವ್ಯವಸ್ಥೆ ಕಲ್ಲಿಸಿಕೊಡುವಂತೆ ಕೋರಿ, ಕೆಎಸ್‍ಟಿಡಿಸಿ ಅಧ್ಯಕ್ಷೆ ಶ್ರುತಿ ಅವರು ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾರವರು ಉಪಸ್ಥಿತರಿದ್ದರು.

  • ಧರ್ಮಸ್ಥಳಕ್ಕೆ ಡಿಕೆಶಿ ಭೇಟಿ

    ಧರ್ಮಸ್ಥಳಕ್ಕೆ ಡಿಕೆಶಿ ಭೇಟಿ

    ಉಜಿರೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ರಾತ್ರಿ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.

    ಇದೇ ವೇಳೆ ಅವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ವೀರೇಂದ್ರ ಹೆಗ್ಗಡೆ ಅವರು ಡಿಕೆ ಶಿವಕುಮಾರ್ ಅವರನ್ನು ಕ್ಷೇತ್ರದ ಪರವಾಗಿ ಗೌರವಿಸಿದರು. ಧರ್ಮಸ್ಥಳದ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ತಂಗಿದ್ದ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

  • ಧರ್ಮಸ್ಥಳದಲ್ಲಿ ಭಜನಾ ಸಾಮ್ರಾಟ್ ಸ್ಪರ್ಧೆ

    ಧರ್ಮಸ್ಥಳದಲ್ಲಿ ಭಜನಾ ಸಾಮ್ರಾಟ್ ಸ್ಪರ್ಧೆ

    ಉಜಿರೆ: ಭಜನೆಗೆ ಭಗವಂತನೇ ಸಾಮ್ರಾಟ್. ಶ್ರದ್ಧಾ-ಭಕ್ತಿಯ ಭಜನೆಯಿಂದ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

    ಧರ್ಮಸ್ಥಳದಲ್ಲಿ ಶಂಕರ ಟಿ.ವಿ.ಯ ಆಶ್ರಯದಲ್ಲಿ ಶನಿವಾರ ಆಯೋಜಿಸಿದ ಭಜನಾ ಸಾಮ್ರಾಟ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಶಂಕರ ಟಿ.ವಿ.ಯವರು ಭಜನೆಯನ್ನು ವಿಶ್ವವ್ಯಾಪಿಯಾಗಿ ಪಸರಿಸಿ, ಮನೆ ಮಂದಿಯೆಲ್ಲ ಸೇರಿ ಭಜನೆಯ ಸೊಗಡನ್ನು ಆಸ್ವಾದಿಸುವಂತೆ ಮಾಡಿದ್ದಾರೆ ಎಂದು ಹೇಳಿ ಶುಭ ಹಾರೈಸಿದ್ದಾರೆ. ನಿರ್ದೇಶಕಿ ಮಮತಾ ರಾವ್ ಸ್ವಾಗತಿಸಿದರು. ಬಿ. ಜಯರಾಮ ನೆಲ್ಲಿತ್ತಾಯ ಧನ್ಯವಾದ ಸಲ್ಲಿಸಿದರು. ಶಂಕರ ಟಿ.ವಿ.ಯ ಅಧಿಕಾರಿ ಅರವಿಂದ ಮತ್ತು ನಿತ್ಯಾ ಉಪಸ್ಥಿತರಿದ್ದರು.

  • ಧರ್ಮಸ್ಥಳದ ಪೂಜ್ಯ ಖಾವಂದರಿಗೆ ಹುಟ್ಟುಹಬ್ಬದ ಸಂಭ್ರಮ- ಸಿಎಂ ವಿಶ್

    ಧರ್ಮಸ್ಥಳದ ಪೂಜ್ಯ ಖಾವಂದರಿಗೆ ಹುಟ್ಟುಹಬ್ಬದ ಸಂಭ್ರಮ- ಸಿಎಂ ವಿಶ್

    ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಇಂದು 72ನೇ ವರ್ಷದ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಗಣ್ಯರು ಪೂಜ್ಯ ಖಾವಂದರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಂತೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೂಡ ಧರ್ಮಾಧಿಕಾರಿಗೆ ಶುಭಾಶಯ ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ಶುಭಕಾಮನೆಗಳು. ಶ್ರೀ ಮಂಜುನಾಥ ಸ್ವಾಮಿಯು ತಮಗೆ ಉತ್ತಮ ಆರೋಗ್ಯವನ್ನು, ಶಿಕ್ಷಣ, ಸ್ತ್ರೀಶಕ್ತಿ, ಗ್ರಾಮೀಣಾಭಿವೃದ್ಧಿ ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ನಿಮ್ಮ ಸೇವಾಕೈಂಕರ್ಯ ಇನ್ನೂ ದೀರ್ಘಕಾಲ ಯಶಸ್ವಿಯಾಗಿ ಮುಂದುವರಿಯುವಂತೆ ಹರಸಲಿ ಎಂದು ಬರೆದುಕೊಂಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳವು ಭಕ್ತಿಗೆ ಹಾಗೂ ಅನ್ನಪ್ರಸಾದಕ್ಕೆ ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ. ಇನ್ನು ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿವುಳ್ಳವರು. ಅವರ ಆಲೋಚನೆಗಳು ಜನಪರ ಹಾಗೂ ಜನಹಿತವಾಗಿರುತ್ತದೆ. ನಾಡಿನ ಹಿರಿಮೆ ಗರಿಮೆಗೆ ಡಾ. ಹೆಗ್ಗಡೆಯವರ ಮುಂದಾಳತ್ವದಲ್ಲಿ ಧರ್ಮಸ್ಥಳ ಕ್ಷೇತ್ರವು ತನ್ನದೇ ಆದ ರೀತಿಯಲ್ಲಿ ಅವಿರತವಾಗಿ ಕಾಣಿಗೆ ನೀಡುತ್ತಲೇ ಬಂದಿದೆ.

  • ಮಕ್ಕಳು ಟ್ಯಾಬ್‍ಗಳನ್ನು ಉಪಯುಕ್ತವಾಗುವಂತೆ ಬಳಸಿ: ವೀರೇಂದ್ರ ಹೆಗ್ಗಡೆ

    ಮಕ್ಕಳು ಟ್ಯಾಬ್‍ಗಳನ್ನು ಉಪಯುಕ್ತವಾಗುವಂತೆ ಬಳಸಿ: ವೀರೇಂದ್ರ ಹೆಗ್ಗಡೆ

    ಬೆಂಗಳೂರು: ಮಕ್ಕಳು ವಿದ್ಯೆಗೆ ಸಹಕಾರಿಯಾಗುವಂತೆ ಟ್ಯಾಬ್ ಬಳಸಿಕೊಳ್ಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಿಳಿಸಿದರು.

    ‘ಜ್ಞಾನ ದೀವಿಗೆ’ ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳು ಇಂದು ಯಾವುದೇ ಕಾರಣದಿಂದ ಹಿಂದೆ ಬಿದ್ದಿಲ್ಲ. ಬೆಳ್ತಂಗಡಿ ತಾಲೂಕು ಹಾಗೂ ಇತರ ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮ ಎಂಬ ಬೇಧ ತೊರೆದು ಎಲ್ಲರೂ ಒಂದೇ ಭಾವದಲ್ಲಿರಬೇಕು ಎಂದರು.

    ಗ್ರಾಮೀಣ ಪ್ರದೇಶದ ಜನತೆಗೆ ಫೋನ್, ಲ್ಯಾಪ್‍ಟಾಪ್, ಟ್ಯಾಬ್ ಬಳಕೆ ತಿಳಿದಿಲ್ಲ. ಹೀಗಾಗಿ ನಿರ್ಲಕ್ಷಿಸುತ್ತಿದ್ದಾರೆ. ಅಲ್ಲದೆ ವಿದ್ಯೆಗೆ ಖರ್ಚು ಮಾಡುವ ಬದಲು ಇನ್ಯಾವುದಕ್ಕೋ ಖರ್ಚು ಮಾಡುತ್ತೇವೆ. ವಿದ್ಯೆಗೆ ಸಂಬಂಧಿಸಿದ ವಸ್ತುಗಳಿಗೆ ಖರ್ಚು ಮಾಡಲು ಹಣವಿಲ್ಲ ಎನ್ನುತ್ತೇವೆ. ಆದರೆ ಇದೀಗ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆಯ ಈ ಕೆಲಸದಿಂದ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಹೇಳಿದರು.  ಇದನ್ನೂ ಓದಿ: ನಾನು 100 ಟ್ಯಾಬ್ ನೀಡ್ತೀನಿ, ಸಾಧ್ಯವಾದ್ರೆ ನೀವೂ ಟ್ಯಾಬ್ ನೀಡಿ- ಶಿವಣ್ಣ ಮನವಿ

    ಯಾರು ಕೂಡ ಟ್ಯಾಬ್ ದುರುಪಯೋಗಪಡಿಸಿಕೊಳ್ಳದೆ, ಇದರ ಗಂಭೀರತೆಯನ್ನು ಅರಿತು ಮಕ್ಕಳ ಉಪಯೋಗಕ್ಕೆ ಮಾತ್ರ ಮೀಸಲಿಡಬೇಕು. ಇತರೆ ಮನರಂಜನೆಯನ್ನು ಬಿಟ್ಟು, ಟ್ಯಾಬ್ ನ್ನು ಸರಿಯಾಗಿ ಬಳಸಬೇಕು. ಲ್ಯಾಪ್‍ಟಾಪ್ ಹಾಗೂ ಟ್ಯಾಬ್‍ಗಳ ಬಳಕೆ ಬಗ್ಗೆ ಮಾಹಿತಿ ನೀಡಬೇಕು. ನಾವೂ ಸಹ ಸುಮಾರು 20 ಸಾವಿರ ಟ್ಯಾಬ್ ಹಾಗೂ 10 ಸಾವಿರ ಟ್ಯಾಪ್‍ಟಾಪ್ ಖರೀದಿಸಿದ್ದೇವೆ. ಸೋಮವಾರ ಮುಖ್ಯಮಂತ್ರಿಗಳು ರಾಜ್ಯದ ವಿವಿಧೆಡೆ ವಿತರಿಸಲಿದ್ದಾರೆ ಎಂದರು. ಇದನ್ನೂ ಓದಿ: ವಿವಿಧ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಣೆ

    ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಹೆಚ್ಚು ಮಾಹಿತಿ ಇದೆ. ಮೊಬೈಲ್‍ನಲ್ಲೇ ಎಲ್ಲ ಮಾಹಿತಿ ಸಿಗುತ್ತದೆ. ಹೀಗಾಗಿ ಮಕ್ಕಳಿಗೆ ಮೊಬೈಲ್ ಬಳಕೆ ಕುರಿತು ಅರಿವು ಮೂಡಿಸಬೇಕು. ಬದುಕಿಗೆ ಉಪಯುಕ್ತವಾದ ವಸ್ತು ಎಂದು ತಿಳಿದು ಇದನ್ನು ಬಳಸಬೇಕು.

    ಸಚಿವರು ಸಹ ತುಂಬಾ ಪ್ರಾಕ್ಟಿಕಲ್ ಆಗಿ ಕಳೆದ ಆರು ತಿಂಗಳಿಂದ ವ್ಯವಸ್ಥೆ ಮಾಡಿದ್ದಾರೆ. ಒಳ್ಳೆಯ ರೀತಿಯಲ್ಲಿ ಎಲ್ಲ ಕೆಲಸಗಳು ನಡೆಯಲಿ. ತುಂಬಾ ಕಷ್ಟದ ಇಲಾಖೆ ಶಿಕ್ಷಣ ಇಲಾಖೆ. ಸಚಿವರು ತುಂಬಾ ಕ್ರಮ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ಷರತ್ತುಗಳೊಂದಿಗೆ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಅವಕಾಶ: ವೀರೇಂದ್ರ ಹೆಗ್ಗಡೆ

    ಷರತ್ತುಗಳೊಂದಿಗೆ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಅವಕಾಶ: ವೀರೇಂದ್ರ ಹೆಗ್ಗಡೆ

    ಮಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು. ಆದರೆ ಇದೀಗ ಸೋಮವಾರದಿಂದ ರಾಜ್ಯಾದ್ಯಂತ ದೇವಸ್ಥಾನದ ಬಾಗಿಲು ಓಪನ್ ಆಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಸಂಪೂರ್ಣ ತಯಾರಿ ನಡೆಸಲಾಗುತ್ತಿದೆ.

    ಈ ಬಗ್ಗೆ ಮಾಹಿತಿ ನೀಡಿರುವ  ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ಈಗ 800 ರಿಂದ ಸಾವಿರ ಮಂದಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಭಕ್ತರ ಆಧಾರ್ ಕಾರ್ಡ್ ಮಾಹಿತಿಯನ್ನು ದಾಖಲಿಸಿದ್ದೇವೆ. ಭಕ್ತರ ಟೆಂಪರೇಚರ್ ನೋಡಿ ಸ್ಯಾನಿಟೈಸರ್ ಹಾಕಿ ದರ್ಶನಕ್ಕೆ ಅವಕಾಶ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಅಲ್ಲದೆ ಸಿಬ್ಬಂದಿ ಫೇಸ್ ಶೀಲ್ಡ್, ಗ್ಲೌಸ್ ಹಾಕಿದ್ದಾರೆ. ಸೋಮವಾರದಿಂದ ಎಲ್ಲರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇವೆ. ಎಲ್ಲಾ ಹರಕೆ ಸೇವೆಗಳೂ ನಿರಂತರವಾಗಿ ನಡೆಯುತ್ತದೆ. ಅನ್ನಪೂರ್ಣ ಅನ್ನಛತ್ರದಲ್ಲಿ ನಿತ್ಯ ಅನ್ನದಾನ ಇರುತ್ತದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಕೂತು ಊಟ ಮಾಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದರು.

  • ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರು ಕೊಡುಗೆ

    ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರು ಕೊಡುಗೆ

    – ವೀರೇಂದ್ರ ಹೆಗ್ಗಡೆಯವರಿಗೆ ಕಾರು ಹಸ್ತಾಂತರಿಸಿದ ರಾಜಸ್ತಾನದ ನಂದಜೀ

    ಮಂಗಳೂರು: ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರನ್ನು ರಾಜಸ್ತಾನದ ಸ್ವಾಮೀಜಿಯೊಬ್ಬರು ಕೊಡುಗೆ ನೀಡಿದ್ದಾರೆ.

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿಂಟೇಜ್ ಕಾರ್ ಸಂಗ್ರಹದ ಅಭಿರುಚಿಯನ್ನು ನೋಡಿ ರಾಜಸ್ತಾನದ ವಿಶ್ವಗುರು ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜೀ ಪ್ರಶಂಸಿದ್ದರು. ಈಗ ಅವರು 1972ರ ಮೋಡೆಲ್‍ನ ಮರ್ಸಿಡಿಸ್ ಬೆನ್ಜ್ ಕಾರನ್ನು ವೀರೇಂದ್ರ ಹೆಗ್ಗಡೆ ಅವರಿಗೆ ಕೊಡುಗೆಯಾಗಿ ನೀಡಿದರು.

    280 ಎಸ್.ಮಾದರಿಯ ಈ ಅತ್ಯುತ್ತಮ ಕಾರುನ್ನು ಸ್ವತಃ ಸ್ವಾಮಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆ ಅವರ ನಿವಾಸಕ್ಕೆ ಬಂದು ಕಾರಿನ ಕೀ ಹಸ್ತಾಂತರಿದ್ದಾರೆ. ಈ ಮೂಲಕ ಕಾರನ್ನು ಕೊಡುಗೆಯಾಗಿ ನೀಡಿದರು. ಬಳಿಕ ವೀರೆಂದ್ರ ಹೆಗ್ಗಡೆಯವರು ಕಾರನ್ನು ಚಲಾಯಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಹೆಗ್ಗಡೆಯವರು ಸ್ವಾಮೀಜಿಯವರನ್ನು ಗೌರವಿಸಿದರು. ಈ ಸಂದರ್ಭ ಡಿ.ಹರ್ಷೇಂದ್ರ ಕುಮಾರ್ ಜೊತೆಗಿದ್ದರು.

    ಕೆಲವು ವರ್ಷಗಳ ಹಿಂದೆ ಜಾಗತಿಕ ಯೋಗ ಸಮ್ಮೇಳನ ಉದ್ಘಾಟಿಸಲು ಸ್ವಾಮೀಜಿ ಧರ್ಮಸ್ಥಳಕ್ಕೆ ಬಂದಾಗ ಇಲ್ಲಿನ ಕಾರ್ ಮ್ಯೂಸಿಯಂ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸ್ವಾಮೀಜಿ ಯುರೋಪ್ ಖಂಡದ ಆಸ್ಟ್ರೀಯಾ ದೇಶದಲ್ಲಿ ತಮ್ಮ ಆಶ್ರಮ ಪ್ರಾರಂಭಿಸಿ ಅಲ್ಲಿ ಯೋಗ ಪ್ರಚಾರ ಮತ್ತು ಧರ್ಮ ಪ್ರಭಾವನಾ ಕಾರ್ಯದಲ್ಲಿ ನಿರತರಾಗಿದ್ದಾರೆ.

  • ಯೋಗ, ಪ್ರಕೃತಿ ಚಿಕಿತ್ಸೆ ಅನಿವಾರ್ಯ: ಡಾ. ವೀರೇಂದ್ರ ಹೆಗ್ಗಡೆ

    ಯೋಗ, ಪ್ರಕೃತಿ ಚಿಕಿತ್ಸೆ ಅನಿವಾರ್ಯ: ಡಾ. ವೀರೇಂದ್ರ ಹೆಗ್ಗಡೆ

    ಉಡುಪಿ: ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಇಂದು ಅಗತ್ಯವಾಗಿದೆ. ನಿಸರ್ಗದ ಮಡಿಲಲ್ಲಿ ಆಸ್ಪತ್ರೆ ಇರುವುದರಿಂದ ಇಲ್ಲಿ ದೊರೆಯುವ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

    ಉಡುಪಿ ಜಿಲ್ಲೆಯ ಮೂಡುಗಿಳಿಯಾರಿನ ಯೋಗಬನದ ಪ್ರಕೃತಿ ಮಡಿಲಲ್ಲಿ ತಲೆ ಎತ್ತಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಉದ್ಘಾಟಿಸಿದರು. ಬಳಿಕ ಡಿವೈನ್ ಪಾರ್ಕ್ ಟ್ರಸ್ಟ್‍ನ ಅಂಗ ಸಂಸ್ಥೆಯಾದ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಉದ್ಘಾಟಿಸಿ ಡಾ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು. ವಾಸ್ತುಶಿಲ್ಪ ಹಾಗೂ ಪ್ರಾಚೀನ ಶೈಲಿಯಿಂದಾಗಿ ಆಸ್ಪತ್ರೆ ಪ್ರಕೃತಿಗೆ ಹತ್ತಿರವಾಗಿದೆ. ಪರಿಸರಸ್ನೇಹಿ ವಸ್ತುಗಳನ್ನು ಬಳಕೆ ಮಾಡಿಕೊಂಡಿರುವುದು ಇದರ ಹೆಮ್ಮೆ ಎಂದರು.

    ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಲ್ಲಿಯ ಪರಿಸರದಲ್ಲಿ ಚಿಕಿತ್ಸೆ ಸಿಗುವುದು ನಮ್ಮ ಪುಣ್ಯ. ಆಧುನಿಕತೆಯಿಂದಾಗಿ ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡುವವರು ಇಲ್ಲಿ ಬಂದು ನೆಮ್ಮದಿ ಹುಡುಕಬಹುದು ಎಂದರು.

    ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾದ ಎಚ್.ಆರ್.ನಾಗೇಂದ್ರ ಮಾತನಾಡಿ, ಯೋಗ, ಧ್ಯಾನ ಹಾಗೂ ಪ್ರಕೃತಿ ಚಿಕಿತ್ಸೆ ಸಿಗುವಂತಹ ಜಾಗದಲ್ಲಿ ವಿವೇಕಾನಂದರ ಪ್ರತಿಮೆ ಕಾಣಲು ಸಿಗಲಿದೆ. ಅವರು ನಡೆದ ಹಾದಿ ಇಲ್ಲಿ ನಮಗೆ ನೆನಪಾದರೆ ಅದಕ್ಕಿಂತ ಅರ್ಥಪೂರ್ಣವಾದ ಕೆಲಸ ಬೇರೆ ಇಲ್ಲ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈನ್‍ಪಾರ್ಕ್ ಟ್ರಸ್ಟ್ ನ ಆಡಳಿತ ನಿರ್ದೇಶಕ ಉಡುಪ ಮಾತನಾಡಿ, ಶಾಂತಿ, ನೆಮ್ಮದಿ ಅರಸುವವರಿಗೆ ಇದು ಪ್ರಶಸ್ತ ಜಾಗ. ಪ್ರಕೃತಿ ಚಿಕಿತ್ಸೆ ಇಂದು ವಿಶ್ವದಾದ್ಯಂತ ಪಸರಿಸಿದೆ. ಇದಕ್ಕೆ ಕಾರಣ ನಮ್ಮ ಪ್ರಕೃತಿಯಲ್ಲಿಯೇ ಇರುವ ಔಷಧಿ ಗುಣ. ನಾವು ಇದನ್ನು ಬೆಳೆಸಿ ಉಳಿಸಬೇಕಿದೆ ಎಂದರು.

    “ರುದ್ರಿ” ಸಿನಿಮಾದ ನಾಯಕಿ ಹಾಗೂ ನಟಿ ಪಾವನಾ ಗೌಡ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಘಟನೆಗಳು ನಿತ್ಯ ನಡೆಯುತ್ತವೆ. ನಮ್ಮ ಸಿನಿಮಾ “ರುದ್ರಿ” ಕೂಡ ಇಂತದ್ದೇ ಒಂದು ಕಥೆಯನ್ನು ಒಳಗೊಂಡಿದೆ. ಪ್ರಕೃತಿ ನಮ್ಮ ಎಲ್ಲಾ ಪ್ರಶ್ನೆಗಳು ಉತ್ತರ ನೀಡಬಲ್ಲದು. ಹಾಗೇ ಇಲ್ಲಿ ಸಿಗುವ ಚಿಕಿತ್ಸೆ ಕೂಡ ಇಂದು ತೀರಾ ಅನಿವಾರ್ಯವಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್ ಉಡುಪ ಹಾಗೂ ವಿವೇಕ್ ಉಡುಪ ಇದ್ದರು.