Tag: Veerashiva

  • ಶಾಮನೂರಿಗೆ ಡಿಸಿಎಂ, 5 ಶಾಸಕರಿಗೆ ಮಂತ್ರಿ ಸ್ಥಾನ ನೀಡಿ- ವೀರಶೈವ ಲಿಂಗಾಯತರಿಂದ ಬೇಡಿಕೆ

    ಶಾಮನೂರಿಗೆ ಡಿಸಿಎಂ, 5 ಶಾಸಕರಿಗೆ ಮಂತ್ರಿ ಸ್ಥಾನ ನೀಡಿ- ವೀರಶೈವ ಲಿಂಗಾಯತರಿಂದ ಬೇಡಿಕೆ

    ಬೆಂಗಳೂರು: ಲಿಂಗಾಯತರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಬೇಕು ಎನ್ನುವ ಕೂಗು  ಜೋರಾಗಿದ್ದು, ಲಿಂಗಾಯತ ಸಮಾಜದ ಪ್ರಮುಖದ ಸ್ವಾಮೀಜಿಗಳೇ ಈಗ ಅಖಾಡಕ್ಕೆ ಇಳಿದಿದ್ದಾರೆ.

    ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂದು ಇಂದು ರಾಹುಲ್ ಮತ್ತು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ಲಿಂಗಾಯತ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಈಗಾಗಲೇ ನಮಗೆ ಸೋಲಾಗಿದ್ದು, ಸಚಿವರು ಸೋತಿದ್ದಾರೆ. ಈಗ ಆಗಿರುವ ನಷ್ಟವನ್ನು ಸರಿಪಡಿಸಲು ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂಬ ಆಗ್ರಹವನ್ನು ಮುಂದಿಟ್ಟಿದ್ದಾರೆ.

    ಒಂದು ವೇಳೆ ಉಪಮುಖ್ಯಮಂತ್ರಿ ಪಟ್ಟವನ್ನು ನೀಡದೇ ಇದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ಏಟು ಬೀಳುವ ಸಾಧ್ಯತೆಯಿದೆ. ಹೀಗಾಗಿ ಮುಂದೆ ಈ ಸಮಸ್ಯೆ ಆಗದೇ ಇರಲು ಉಪಮುಖ್ಯಮಂತ್ರಿ ಪಟ್ಟವನ್ನು ನೀಡುವಂತೆ ಲಿಂಗಾಯತರು ಬೇಡಿಕೆ ಇಟ್ಟಿದ್ದಾರೆ.

    ಲಿಂಗಾಯತ ಧರ್ಮ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರಿಗೆ ಯಾವುದೇ ಮಂತ್ರಿ ಸ್ಥಾನವನ್ನು ನೀಡಬಾರದು ಎಂದು ಕೆಲ ಮುಖಂಡರು ಹೇಳಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

    ಈ ನಡುವೆ ಎಚ್‍ಡಿ ಕುಮಾರಸ್ವಾಮಿಯವರಿಗೆ ಅಖಿಲ ಭಾರತ ವೀರ ಶೈವ ಮಹಾಸಭಾ ಪತ್ರ ಬರೆದಿದ್ದು ಶಾಮನೂರು ಶಿವಶಂಕರಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು 5 ಶಾಸಕರಿಗೆ ಸಚಿವ ಸ್ಥಾನವನ್ನು ನೀಡುವಂತೆ ಪತ್ರ ಬರೆದಿದ್ದಾರೆ. ಚುನಾವಣೆಯಲ್ಲಿ 16 ಮಂದಿ ಕಾಂಗ್ರೆಸ್, 4 ಮಂದಿ ಜೆಡಿಎಸ್ ನಿಂದ ವೀರಶೈವ ಲಿಂಗಾಯಿತ ಶಾಸಕರು ಆಯ್ಕೆ ಆಗಿದ್ದಾರೆ. ವಿವಿಧ ಸಮುದಾಯದಿಂದ ಆಯ್ಕೆಯಾದವರ ಸಂಖ್ಯೆಯನ್ನು ಗಮನಿಸಿದರೆ ವೀರಶೈವ ಲಿಂಗಾಯತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ. ಹೀಗಾಗಿ ಮುಂದೆಯೂ ಸಮಾಜದ ಬೆಂಬಲ ಸಿಗಲು ನಮ್ಮ ಸಮಾಜದ ಶಾಸಕರಿಗೆ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಬೇಕೆಂದು ಪತ್ರದ ಮೂಲಕ ಬೇಡಿಕೆಯನ್ನಿಟ್ಟಿದ್ದಾರೆ.

  • ಸಿಎಂಗೆ ನಮ್ ವೋಟ್ ಎಂದಿದ್ದಕ್ಕೇ ವೀರಶೈವ ಮಹಾಸಭಾದಿಂದಲೇ ವಜಾ!

    ಸಿಎಂಗೆ ನಮ್ ವೋಟ್ ಎಂದಿದ್ದಕ್ಕೇ ವೀರಶೈವ ಮಹಾಸಭಾದಿಂದಲೇ ವಜಾ!

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಮ್ಮ ವೋಟ್ ಎಂದಿದ್ದ ಮೈಸೂರು ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜ್ ಅವರನ್ನು ಆಡಳಿತ ಮಂಡಳಿಯಿಂದಲೇ ವಜಾಗೊಳಿಸಲಾಗಿದೆ.

    ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜ್, ಸಂಘಟನಾ ಕಾರ್ಯದರ್ಶಿ ಟಿ.ಎಸ್. ಲೋಕೇಶ್, ಪದಾಧಿಕಾರಿಗಳಾದ ಸಿ.ಗುರುಸ್ವಾಮಿ, ಹಡಜನ ಚಂದ್ರಶೇಖರ್ ಅವರನ್ನು ಮಹಾಸಭಾದ ಕೇಂದ್ರ ಸಮಿತಿ ಸದಸ್ಯ ಪುಟ್ಟಬುದ್ದಿ ವಜಾಗೊಳಿಸಿದ್ದಾರೆ. ಮೈಸೂರಿನ ಗನ್‍ಹೌಸ್ ವೃತ್ತದ ಬಸವ ಪುತ್ಥಳಿಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಮಹಾಸಭೆ ತೆಗೆದುಕೊಂಡಿದೆ.

    ಕಾಂಗ್ರೆಸ್ ಬೆಂಬಲಿಸಿ ಎಂದು ಮಾತೇ ಮಹಾದೇವಿ ಹೇಳಿದ ಬಳಿಕ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತರು ಸಿದ್ದರಾಮಯ್ಯರನ್ನು ಬೆಂಬಲಿಸುತ್ತೇವೆ ಎಂದು ವೀರಶೈವ ಮಹಾ ಸಭಾದ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜ್ ಸಿಎಂ ಸಮ್ಮುಖದಲ್ಲಿ ಪ್ರಮಾಣ ಮಾಡಿದ್ದರು.

    ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವೀರಶೈವ ಸಂಘಟನೆಗಳು, ಬಸವ ಬಳಗಗಳ ಪರವಾಗಿ ಪ್ರಮಾಣ ಮಾಡುತ್ತಿದ್ದೇನೆ ಎಂದು ಹಿನಕಲ್ ಬಸವರಾಜ್ ಹೇಳಿದ್ದರು. ಮುಂದಿನ ಸಿಎಂ ಸಿದ್ದರಾಮಯ್ಯ ಆಗಬೇಕು. ಸಿದ್ದರಾಮಯ್ಯ ಸಿಎಂ ಆದರೆ ರಾಜ್ಯ ಸುಭಿಕ್ಷವಾಗಿರುತ್ತದೆ. ಸಿದ್ದರಾಮಯ್ಯ ವೀರಶೈವ ಲಿಂಗಾಯತರ ವಿರೋಧಿಯಲ್ಲ ಹಿನಕಲ್ ಬಸವರಾಜ್ ಹೇಳಿದ್ದರು.