Tag: veerashaiva

  • ಲಿಂಗಾಯತವೇ ಪ್ರತ್ಯೇಕ ಧರ್ಮಕ್ಕೆ ಯೋಗ್ಯ.. ವೀರಶೈವ ಅಲ್ಲ: ಸಭೆಯ ಪಂಚ ನಿರ್ಣಯಗಳು ಇಲ್ಲಿದೆ

    ಲಿಂಗಾಯತವೇ ಪ್ರತ್ಯೇಕ ಧರ್ಮಕ್ಕೆ ಯೋಗ್ಯ.. ವೀರಶೈವ ಅಲ್ಲ: ಸಭೆಯ ಪಂಚ ನಿರ್ಣಯಗಳು ಇಲ್ಲಿದೆ

    ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೇ ಮಾನ್ಯತೆ ನೀಡಬೇಕು ಎಂದು ಗುರುವಾರ ನಡೆದ ಲಿಂಗಾಯತ ಮುಖಂಡರು ಮತ್ತು ಮಠಾಧೀಶರ ಮಹತ್ವದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

    ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವೀರಶೈವ ಮಹಾಸಭಾ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿರುವ ಲಿಂಗಾಯತ ಮಠಾಧೀಶರು ವೀರಶೈವ ಪದ ಬಳಕೆ ಸಲ್ಲದು ಅಂತಾ ವೀರಶೈವ ಮಹಾಸಭಾಗೆ ಎಚ್ಚರಿಕೆ ನೀಡಿದ್ದಾರೆ.

    ವೀರಶೈವ ಎಂಬುದು ಹಿಂದು ಧರ್ಮದಲ್ಲಿ ಶೈವ ಪಂಥದಲ್ಲೇ ಬರುತ್ತದೆ. ಲಿಂಗಾಯತ ಬೇರೆ ವೀರಶೈವ ಬೇರೆ. ಇವೆರಡು ಕೂಡಲು ಸಾಧ್ಯವಿಲ್ಲ. ಇದು ಎಣ್ಣೆ ನೀರು ಇದ್ದ ಹಾಗೇ ಅಂತಾ ತೋಂಟದಾರ್ಯ ಶ್ರೀಗಳು ಸಭೆಯಲ್ಲಿ ಪ್ರಸ್ತಾಪಿಸಿದರು.

    ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಿ ಎಂದು ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ಕಾನೂನಿನ ಮಾನ್ಯತೆ ಸಿಗಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಜಾಮ್ದಾರ ವಾದ ಮಂಡಿಸಿದರು.

    ವೀರಶೈವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಲಿಂಗಾಯತ ಅಂತಾನೇ ಪ್ರತ್ಯೇಕ ಧರ್ಮ ಮಾನ್ಯತೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಣಯಿಸಿತು.

    ಸಭೆಯಲ್ಲಿ ಸಚಿವ ಎಂ.ಬಿ ಪಾಟೀಲ್, ಶರಣು ಪ್ರಕಾಶ್ ಪಾಟೀಲ್, ವಿನಯ ಕುಲಕರ್ಣಿ, ಬಸವರಾಜ್ ರಾಯರೆಡ್ಡಿ, ಮಾಜಿ ಸಚಿವ ಬಸವರಾಜ್ ಹೊರಟ್ಟಿ, ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕ ಅಸೋಕ್ ಪಟ್ಟಣ್ ಸೇರಿದಂತೆ ಮುರುಘಾ ಮಠದ ಶ್ರೀಗಳು, ತೋಂಟದಾರ್ಯ ಶ್ರೀಗಳು ಹಾಗೂ ಇಳಕಲ್ ಮಾಹಂತೇಶ ಸ್ವಾಮೀಜಿ ಹಾಗೂ ಹಲವು ಮಠಾಧೀಶರು ಭಾಗವಹಿಸಿದರು.

    ಸಭೆ ಬಳಿಕ ಮಠಾಧೀಶರು ಹಾಗೂ ಮುಖಂಡರ ನಿಯೋಗ ಸಿಎಂ ನಿವಾಸಕ್ಕೆ ತೆರಳಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಲು ಪ್ರಸ್ತಾವನೆ ಸಲ್ಲಿಸಿತು. ಸಭೆಗೆ ವೀರಶೈವ ಮಹಾಸಭಾದ ಮುಖಂಡರು ಮಾತ್ರ ಯಾರು ಪಾಲ್ಗೊಂಡಿರಲಿಲ್ಲ.

    ಸಭೆಯ ನಿರ್ಣಯಗಳು ಹೀಗಿವೆ
    1. ಬಸವಣ್ಣ ಸ್ಥಾಪಿಸಿದ ಐತಿಹಾಸಿಕ ಸಿದ್ದಾಂತ, ವಚನಗಳನ್ನು ವೀರಶೈವರು ಬಳಸಬಾರದು.
    2. ಬಸವಾದಿ ತತ್ವಗಳನ್ನು ವಿರಕ್ತ ಮಠಗಳ ಮಠಾಧೀಶರು ಧರ್ಮಪ್ರಚಾರದ ಮೂಲಕ ಲೋಕಕ್ಕೆ ತಲುಪಿಸಬೇಕು,ಇಲ್ಲವೇ ಪೀಠ ತ್ಯಜಿಸಬೇಕು.
    3. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ.

    4. ಲಿಂಗಾಯತ ಧರ್ಮವನ್ನು ಬಸವಣ್ಣ ಸ್ಥಾಪಿಸಿದ್ದಾರೆ.ಅವರೇ ಧರ್ಮಸ್ಥಾಪಕರು. ವಚನಗಳೇ ಧರ್ಮಗ್ರಂಥ.
    5. 1941ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ಸಮಾವೇಶದಲ್ಲಿ ಅಖಿಲ ಭಾರತ ಲಿಂಗಾಯತ ಮಹಾಸಭಾ ಎಂದು ಹೆಸರು ಬದಲಿಸುವ ನಿರ್ಣಯ ಕೈಗೊಂಡುದ್ದು, ಅದು ಜಾರಿಗೆ ಆಗ್ರಹ.

  • ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ-ಇಂದು ಮಠಾಧೀಶರು, ಮುಖಂಡರ ಸಭೆ

    ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ-ಇಂದು ಮಠಾಧೀಶರು, ಮುಖಂಡರ ಸಭೆ

    ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಒಮ್ಮತ ಮೂಡಿಸುವ ಸಲುವಾಗಿ ಇವತ್ತು ಲಿಂಗಾಯತ ಸ್ವಾಮೀಜಿಗಳು ಹಾಗೂ ಮುಖಂಡರ ಸಭೆ ನಡೆಯಲಿದೆ. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ.

    ಮೊದಲು ವೀರಶೈವ ಮತ್ತು ಲಿಂಗಾಯತ ಎರಡು ಬೇರೆ ಬೇರೆಯೇ ಎಂಬ ಗೊಂದಲ ಬಗೆಹರಿಸಿ. ಬಳಿಕ ಪ್ರಸ್ತಾವನೆ ಸಲ್ಲಿಸಿದ್ರೆ ಪ್ರತ್ಯೇಕ ಧರ್ಮದ ಮಾನ್ಯತೆ ಸಂಬಂಧ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಅಂತಾ ಸಿಎಂ ಹೇಳಿದ್ದಾರೆ.

    ಸಭೆಯಲ್ಲಿ ಲಿಂಗಾಯತ ಹಾಗೂ ವೀರಶೈವ ಗೊಂದಲ ಪರಿಹಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯಲಿದೆ. ಈ ಮೂಲಕ ಕಾಂಗ್ರೆಸ್ ಪರ ವಾತಾವರಣ ಮೂಡಿಸಲು ಸಿಎಂ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಲಿಂಗಾಯತ ಸಮುದಾಯದ ಬೇಡಿಕೆ ಈಡೇರಿಕೆಗೆ ಸಿಎಂ ಆಸಕ್ತಿ ಹೊಂದಿದ್ದಾರೆ.

    ಪ್ರತ್ಯೇಕ ಧರ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಅನ್ನೋ ಸಂದೇಶ ರವಾನೆಯಾಗಬೇಕು. ಕಾಂಗ್ರೆಸ್ ಪರ ಪೂರಕ ವಾತಾವರಣ ನಿರ್ಮಾಣವಾಗ್ಬೇಕು ಎಂದು ಪ್ರಭಾವಿ ಲಿಂಗಾಯತ ಸಚಿವರು, ಮುಖಂಡರಿಗೆ ಸಿಎಂ ಸೂಚಿಸಿದ್ದಾರೆ. ಆದ್ರೆ ಬಿಜೆಪಿ ನಾಯಕರೂ ಪ್ರತ್ಯೇಕ ಧರ್ಮದ ಮಾನ್ಯತೆಯ ಕ್ರೆಡಿಟ್ ನಮಗೆ ಸಿಗಬೇಕು ಅಂತಾ ವಾದಿಸ್ತಿರೋ ಹಿನ್ನೆಲೆಯಲ್ಲಿ ಸಭೆಯಲ್ಲಿ ಗೊಂದಲ ಸೃಷ್ಟಿಯಾಗೋ ಸಾಧ್ಯತೆಗಳಿವೆ.

     

  • ಧರ್ಮದ ಹೆಸರಲ್ಲಿ ಬೆಂಕಿ ಹಚ್ಚಿ ಸಿದ್ದರಾಮಯ್ಯ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ: ಎಚ್.ವಿಶ್ವನಾಥ್

    ಧರ್ಮದ ಹೆಸರಲ್ಲಿ ಬೆಂಕಿ ಹಚ್ಚಿ ಸಿದ್ದರಾಮಯ್ಯ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ: ಎಚ್.ವಿಶ್ವನಾಥ್

    ರಾಯಚೂರು: ವೀರಶೈವ ಮತ್ತು ಲಿಂಗಾಯತ ಸಮಾಜದವರ ನಡುವೆ ಬೆಂಕಿ ಹಚ್ಚಿ ಅವರ ಜಗಳದಲ್ಲಿ ಸಿಎಂ ಸಿದ್ದರಾಮಯ್ಯ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಅಂತ ಮಾಜಿ ಸಂಸದ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ವಿಶ್ವನಾಥ್ ಇತ್ತೀಚಿನ ಶತಮಾನದಲ್ಲಿ ಯಾವ ಹೊಸ ಧರ್ಮಗಳು ಹುಟ್ಟಿರುವ ಉದಾಹರಣೆ ಇಲ್ಲ. ಸಂವಿಧಾನದಲ್ಲಿ ಹೊಸ ಧರ್ಮಕ್ಕೆ ಅವಕಾಶ ಇಲ್ಲ. ಚುನಾವಣೆ ಹತ್ತಿರ ಬಂದಿರುವುದರಿಂದ ಧರ್ಮದ ಹೆಸರಿನಲ್ಲಿ ಸಿದ್ದರಾಮಯ್ಯ ಬೆಂಕಿ ಹಚ್ಚಿದ್ದಾರೆ. ಸಮಾಜದವರು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು ಎಂದು ಅವರು ಹೇಳಿದರು.

    ಇನ್ನೂ ಅಹ್ಮದ್ ಪಟೇಲ್ ಒಬ್ಬ ದುರಹಂಕಾರಿ ಮನುಷ್ಯ. ಅವರನ್ನ ಗೆಲ್ಲಿಸಲು ಕರ್ನಾಟಕದಲ್ಲಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಣ್ಮರೆಯಾಗಿದ್ದ ಕೆಟ್ಟ ಸಂಸ್ಕೃತಿ ಮತ್ತೆ ಕಾಣಿಸಿಕೊಂಡಿದೆ ಅಂತ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

     

  • ವೀರಶೈವ, ಲಿಂಗಾಯತ ಧರ್ಮದ ಪರವಿರೋಧ ಮಾತನಾಡುವುದು ಶೋಭೆಯಲ್ಲ: ತನ್ವೀರ್ ಸೇಠ್

    ವೀರಶೈವ, ಲಿಂಗಾಯತ ಧರ್ಮದ ಪರವಿರೋಧ ಮಾತನಾಡುವುದು ಶೋಭೆಯಲ್ಲ: ತನ್ವೀರ್ ಸೇಠ್

    ರಾಯಚೂರು: ಲಿಂಗಾಯತ ಮತ್ತು ವೀರಶೈವ ಧರ್ಮದ ಬಗ್ಗೆ ಪರವಿರೋಧ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ ಅಂತ ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ತನ್ವೀರ್ ಸೇಠ್ ಧರ್ಮಗಳ ವಿಚಾರದಲ್ಲಿ ಸಂವಿಧಾನ ಸ್ಪಷ್ಟವಾಗಿದೆ. ಅದೇ ಸಂವಿಧಾನದಲ್ಲಿ ಇನ್ನೊಂದು ಧರ್ಮವನ್ನ ಗೌರವಿಸಬೇಕು ಅನ್ನೋದು ಇದೆ ಎಂದರು.

    ವೀರಶೈವ ಧರ್ಮಕ್ಕೆ ದೊಡ್ಡ ಇತಿಹಾಸವಿದೆ. ಬಸವಣ್ಣನವರ ತತ್ವ ಸಿದ್ದಾಂತ ನಾಡಿನ ಉದ್ದಕ್ಕೂ ಕೆಲಸ ಮಾಡಬೇಕಾದ್ರೆ ನಮ್ಮ ವರ್ತನೆ ಸಮಾಜದಲ್ಲಿ ಹೇಗಿರಬೇಕು ಅನ್ನೋದನ್ನ ಮೊದಲು ನೋಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರು ಯಾರ ಕಡೆ ಇದ್ದಾರೆ ಅನ್ನೋದನ್ನ ಹೇಳಲು ಆಗಲ್ಲ. ಧರ್ಮದ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಅಂತ ತನ್ವೀರ್ ಸೇಠ್ ತಿಳಿಸಿದರು.

    ಇನ್ನೂ ಗುಜರಾತ್ ಕಾಂಗ್ರೆಸ್ ಶಾಸಕರ ಪ್ರವಾಸದ ಬಗ್ಗೆ ಮಾತನಾಡಿ ಇವತ್ತಿನ ಚುನಾವಣಾ ವ್ಯವಸ್ಥೆ ನಮ್ಮ ಮತದಾರರನ್ನ ನಾವೇ ಕಾಪಾಡಲು ಸಾಧ್ಯವಿಲ್ಲದಷ್ಟು ಹಾಳಾಗಿದೆ. ಬಿಜೆಪಿಯ ಬೆದರಿಕೆ ರಾಜಕಾರಣ ಎಲ್ಲರಿಗೂ ಗೊತ್ತಿರುವುದೇ, ಜನರ ರಕ್ಷಣೆಗಿಂತ ಅಧಿಕಾರ ಪಡೆಯಲು ತಂತ್ರಗಾರಿಕೆ ನಡೆಯುತ್ತಿದೆ. ಚುನಾಯಿತ ಪ್ರತಿನಿಧಿಗಳು ಮಾರಾಟವಾಗುವುದನ್ನ ನೋಡುತ್ತಿದ್ದೇವೆ ಮತ ಚಲಾಯಿಸುವ ಹಕ್ಕು ನಮ್ಮದಾಗಿದ್ರೂ ಬೇರೆ ರೀತಿಯಲ್ಲಿ ಒತ್ತಡ ತರುತ್ತಿರುವುದರಿಂದ ಗುಜರಾತ್ ಶಾಸಕರು ನಮ್ಮ ರಾಜ್ಯಕ್ಕೆ ಪ್ರವಾಸಕ್ಕೆ ಬಂದಿದ್ದಾರೆ ಅವರು ಹೇಳಿದರು.

     

  • ಲಿಂಗಾಯತ-ಹಿಂದೂ ಧರ್ಮದ ಮಧ್ಯೆ ಸಾಕಷ್ಟು ಅಂತರವಿದೆ: ಎಸ್.ಆರ್.ಪಾಟೀಲ್

    ಲಿಂಗಾಯತ-ಹಿಂದೂ ಧರ್ಮದ ಮಧ್ಯೆ ಸಾಕಷ್ಟು ಅಂತರವಿದೆ: ಎಸ್.ಆರ್.ಪಾಟೀಲ್

    ಬಾಗಲಕೋಟೆ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕೆನ್ನುವವರಲ್ಲಿ ನಾನು ಮೊದಲಿಗ. ಲಿಂಗಾಯತ ಹಾಗೂ ಹಿಂದೂ ಧರ್ಮದ ಮಧ್ಯೆ ಸಾಕಷ್ಟು ಅಂತರವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಹೇಳಿದ್ದಾರೆ.

    ಲಿಂಗಾಯತ ಧರ್ಮವನ್ನ ವಿಶ್ವಗುರು ಬಸವಣ್ಣ ಸ್ಥಾಪನೆ ಮಾಡಿದ್ದಾರೆ. ಆದ್ರೆ ಹಿಂದೂ ಧರ್ಮವನ್ನ ಯಾರು ಸ್ಥಾಪನೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಲಿಂಗಾಯತ ಧರ್ಮದಲ್ಲಿ ಸಮಾನತೆ ಇದೆ. ಜಾತ್ಯಾತೀತ ನಿಲುವಿದೆ. ನಾವು ಸಮಾಜ ಕಟ್ಟುವವರು, ಒಡೆಯುವವರಲ್ಲ. ಒಡೆಯುವವರು ಬೇರೆಯೇ ಇದ್ದಾರೆಂದು ಪರೋಕ್ಷವಾಗಿ ಬಿಜೆಪಿ ನಾಯಕರ ಕಾಲೆಳೆದ್ರು.

    ಲಿಂಗಾಯತ ಧರ್ಮಕ್ಕೆ ಪೇಜಾವರ ಶ್ರೀಗಳ ವೀರೋಧಕ್ಕೆ ಪ್ರತಿಕ್ರಿಯಿಸಿ, ಪೇಜಾವರ ಶ್ರೀಗಳು ಇದ್ರಲ್ಲಿ ಮೂಗು ತೂರಿಸೋದು ಬೇಡ. ಈ ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಎರಡು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರದಲ್ಲಿ ಯುಪಿಎ ಸರ್ಕಾರ ಮುಂದುವರೆದಿದ್ರೆ ಈಗಾಗಲೇ ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುತ್ತಿತ್ತು ಅಂದ್ರು.

    ಸಿಎಂ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡೋದು ಒಳ್ಳೆಯದು. ಈ ಬಗ್ಗೆ ಪ್ರಕ್ರಿಯೆಗಳು ನಡೆದಿವೆ. ಈ ಹಿಂದೆ ಲಿಂಗಾಯತ ಧರ್ಮ ಪ್ರತ್ಯೇಕಕ್ಕಾಗಿ ಬಿಎಸ್‍ವೈ ಅವ್ರೇ ಸಹಿ ಹಾಕಿದ್ರು. ಸದ್ಯ ವಿರೋಧಿಸೋದು ಬೇಡ ಎಂದು ಸಲಹೆ ನೀಡಿದರು.

     

  • 2013ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಬೇಕೆಂದಿದ್ದ ಬಿಎಸ್‍ವೈ ಈಗ ಸೈಲೆಂಟ್!

    2013ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಬೇಕೆಂದಿದ್ದ ಬಿಎಸ್‍ವೈ ಈಗ ಸೈಲೆಂಟ್!

    ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆನ್ನುವ ವಿಚಾರದಲ್ಲಿ ಈಗ ತಟಸ್ಥರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಈ ಹಿಂದೆ ಪ್ರತ್ಯೇಕ ಧರ್ಮಕ್ಕಾಗಿ ಒತ್ತಾಯಿಸಿದ ಸ್ಫೋಟಕ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರಾಜ್ಯ ಕಾಂಗ್ರೆಸ್ ಸರ್ಕಾರ ಎಬ್ಬಿಸಿರುವ ‘ಪ್ರತ್ಯೇಕ ಧರ್ಮ’ದ ವಿವಾದ ಸಂಬಂಧ ಈಗ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಆದರೆ 2013ರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು ಪ್ರತ್ಯೇಕ ಧರ್ಮಕ್ಕೆ ಪ್ರಸ್ತಾವನೆ ಇಟ್ಟಿದ್ದ ಸ್ಫೋಟಕ ಮಾಹಿತಿ ಇದೀಗ ಲಭ್ಯವಾಗಿದೆ.

    ‘ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು’ ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾ ಸಭಾ ನಾಲ್ಕು ವರ್ಷಗಳ ಹಿಂದೆ ಸಲ್ಲಿಸಿದ್ದ ಪತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವರಾದ ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ, ಎಂ.ಬಿ ಪಾಟೀಲ, ವಿನಯ ಕುಲಕರ್ಣಿ, ಮುಖ್ಯ ಸಚೇತಕ ಅಶೋಕ ಪಟ್ಟಣ, ಸಂಸದ ಪ್ರಭಾಕರ ಕೋರೆ, ಮಾಜಿ ಸಚಿವರಾದ ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಲಿಂಗಾಯತ ಮುಖಂಡರು ಸಹಿ ಕೂಡ ಮಾಡಿದ್ದಾರೆ.

    ‘ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಸಲ್ಲಿಸಿದ ಮನವಿಗೆ ನಮ್ಮೆಲ್ಲರ ಒಪ್ಪಿಗೆ ಇದ್ದು, ಆದಷ್ಟು ಬೇಗ ಪ್ರತ್ಯೇಕ ಧರ್ಮ ಘೋಷಣೆ ಮಾಡಬೇಕು’ ಎಂದು ಮನವಿಯಲ್ಲಿ ನಾಯಕರು ತಿಳಿಸಿದ್ದಾರೆ. 2013ರ ಜುಲೈ 7ರಂದು ಕೇಂದ್ರ ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆಗೆ ಹಾಗೂ ಅದೇ ವರ್ಷ ಜುಲೈ 25ರಂದು ಅಂದಿನ ಪ್ರಧಾನಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ.

    ಪತ್ರದಲ್ಲೇನಿದೆ?:  

    ಅಖಿಲ ಭಾರತ ವೀರಶೈವ ಮಹಾಸಭಾ (ರಿ)

    ಗೆ,
    ಡಾ. ಮನಮೋಹನ್ ಸಿಂಗ್
    ಗೌರವಾನ್ವಿತ ಪ್ರಧಾನ ಮಂತ್ರಿಗಳು
    ಭಾರತ ಸರ್ಕಾರ
    ನವದೆಹಲಿ-110001

    ಮಾನ್ಯರೇ,

                                 ವಿಷಯ: ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವನ್ನಾಗಿ ಪರಿಗಣಿಸುವಂತೆ, ಹಾಗೂ ಜನಗಣತಿಯಲ್ಲಿ ಪ್ರತ್ಯೇಕ ಕೋಡ್, ಕಾಲಂ ನೀಡುವಂತೆ ಕೋರಿ ಸಲ್ಲಿಸಿದ ಮನವಿ

    ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಗೋವಾ ಸೇರಿದಂತೆ ದೇಶದ ಇತರೆ ಪ್ರದೇಶಗಳ ಜನಪ್ರತಿನಿಧಿಗಳಾದ ನಾವು ದಿನಾಂಕ 25-72013 ರಂದು ಬೆಂಗಳೂರಿನಲ್ಲಿ ಸಭೆ ಸೇರಿ, ಸುಮಾರು 4 ಕೋಟಿ ಜನಸಂಖ್ಯೆ ಹೊಂದಿರುವ ವೀರಶೈವ-ಲಿಂಗಾಯತ ಸಮುದಾಯವನ್ನ ಸ್ವತಂತ್ರ ಧರ್ಮವಾಗಿ ಪರಿಗಣಿಸುವಂತೆ ಮನವಿ ಸಲ್ಲಿಸಲು ತೀರ್ಮಾನಿಸಲಾಯ್ತು.

    ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು ಕೂಡ ಕೇಂದ್ರ ಗೃಹ ಸಚಿವರಿಗೆ ವೀರಶೈವ-ಲಿಂಗಾಯತ ಸಮುದಾಯವನ್ನ ಸ್ವತಂತ್ರ ಧರ್ಮವಾಗಿ ಪರಿಗಣಿಸುವಂತೆ ಮನವಿ ಪತ್ರವನ್ನ ಸಲ್ಲಿಸಿದ್ದು, ಜನಗಣತಿ ಸಂದರ್ಭದಲ್ಲಿ ಜೈನ, ಬೌದ್ಧ, ಸಿಖ್ ಧರ್ಮಗಳಿಗೆ ಇರುವ ಪ್ರತ್ಯೇಕ ಮಾನ್ಯತೆಯಂತೆ ವೀರಶೈವ ಲಿಂಗಾಯತ ಧರ್ಮಕ್ಕೂ ನೀಡಬೇಕೆಂದು ಕೇಳಿಕೊಂಡಿರುತ್ತಾರೆ.
    ನಾವು ವೀರಶೈವ ಲಿಂಗಾಯತ ಧರ್ಮದ ಅನುಯಾಯಿಗಳಾಗಿದ್ದು, ನಾವೆಲ್ಲರೂ ವೀರೆಶೈವ ಲಿಂಗಾಯತ ಧರ್ಮವನ್ನ ಸ್ವತಂತ್ರ ಧರ್ಮವನ್ನಾಗಿ ಪರಿಗಣಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಸಲ್ಲಿಸಿರುವ ಮನವಿ ಪತ್ರವನ್ನ ನಾವೆಲ್ಲಾ ಒಗ್ಗಟ್ಟಾಗಿ ಬೆಂಬಲಿಸುತ್ತೇವೆ. ಹಾಗೂ ಗೃಹ ಸಚಿವರಿಗೆ ಸಲ್ಲಿಸಿರುವ ಮನವಿಯನ್ನ ಪರಿಗಣಿಸಲು ಸಲಹೆ ನೀಡಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

    ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ಬಸವ ಸಮಿತಿ ಅಧ್ಯಕ್ಷರು, ಮಹಾರಾಷ್ಟ್ರ, ಕೇರಳ ರಾಜ್ಯಘಟಕದ ಅಧ್ಯಕ್ಷರು, ಕರ್ನಾಟಕ, ಆಂದ್ರ ಪ್ರದೇಶ, ತಮಿಳುನಾಡು ರಾಜ್ಯದ ಸಚಿವರು, ಶಾಸಕರು, ಪರಿಷತ್ ಸದಸ್ಯರು ನ್ಯಾಯಕ್ಕಾಗಿ ಈ ಮನವಿ ಸಲ್ಲಿಸುತ್ತಿದ್ದು, ಯಾವುದೇ ಕಾರಣಕ್ಕೂ ತಡ ಮಾಡದೇ ನಮ್ಮ ಮನವಿಯನ್ನ ಪುರಸ್ಕರಿಸಬೇಕೆಂದು ಕೇಳಿಕೊಳ್ಳುತ್ತೇವೆ.

    ವೀರಶೈವ ಲಿಂಗಾಯತ ಅನುಯಾಯಿಗಳ ಸಂಖ್ಯೆ ಸಿಖ್, ಜೈನ, ಬೌಧ ಧರ್ಮದ ಅನುಯಾಯಿಗಳಿಂದ ಹೆಚ್ಚಿದ್ದಾರೆ. ಇದೆಲ್ಲವನ್ನ ಪರಿಗಣನೆಗೆ ತೆಗೆದುಕೊಂಡು ನಮ್ಮ ಧರ್ಮಕ್ಕೆ ನ್ಯಾಯ ಒದಗಿಸಿ. ಜನಗಣತಿ ಸಮಯದಲ್ಲಿ ವೀರಶೈವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಕಾಲಂ/ಕೋಡ್ ನಂಬರ್ ನೀಡುವುದರ ಮೂಲ ವೀರಶೈವ ಲಿಂಗಾಯತರನ್ನ ಜನಸಂಖ್ಯೆಯನ್ನ ಕ್ರೋಢೀಕರಿಸಿ, ಭಾರತ ಸರ್ಕಾರ ಸ್ವತಂತ್ರ ಧರ್ಮವಾಗಿ ಘೋಷಿಸಿ ಎಂದು ಕೇಳಿಕೊಳ್ಳುತ್ತೇವೆ.

                                                  ವಂದನೆಗಳೊಂದಿಗೆ                                                     ಇಂತಿ ನಿಮ್ಮ ವಿಶ್ವಾಸಿ

     

  • ಮಾತೆ ಮಹಾದೇವಿಗೆ ಅನೈತಿಕ ಸಂಬಂಧ ಇತ್ತು: ಅಲ್ಲೋಲಕಲ್ಲೋಲ ಸೃಷ್ಟಿಸಿದ ರಂಭಾಪುರಿ ಶ್ರೀ

    ಮಾತೆ ಮಹಾದೇವಿಗೆ ಅನೈತಿಕ ಸಂಬಂಧ ಇತ್ತು: ಅಲ್ಲೋಲಕಲ್ಲೋಲ ಸೃಷ್ಟಿಸಿದ ರಂಭಾಪುರಿ ಶ್ರೀ

    ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿವಾದಕ ಈಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸುತ್ತಿರುವ ಮಾತೆ ಮಹಾದೇವಿ ವಿರುದ್ಧ ರಂಭಾಪುರಿ ಶ್ರೀಗಳು ಗಂಭೀರ ಆರೋಪ ಮಾಡಿದ್ದಾರೆ.

    ಮಾತೆ ಮಹಾದೇವಿ ಹಾಗೂ ಲಿಂಗಾನಂದರ ನಡುವಿನ ಸಂಬಂಧವನ್ನು ರಂಭಾಪುರಿ ಶ್ರೀಗಳು ಅನುಮಾನದ ದೃಷ್ಟಿಯಿಂದ ನೋಡಿದ್ದಾರೆ. ಅಲ್ಲದೆ, ಈ ಸಂಬಂಧ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

    ಮಾತೆ ಮಹಾದೇವಿ ಹಾಗೂ ಲಿಂಗಾನಂದ ನಡುವಿನ ಸಂಬಂಧ ಎಷ್ಟು ಅನೈತಿಕಯಿಂದ ಕೂಡಿದೆ ಎಂಬುದಕ್ಕೆ ಸ್ವತಃ ಲಿಂಗಾನಂದರೇ ಶಿಷ್ಯರೊಬ್ಬರಿಗೆ ಬರೆದ ರಹಸ್ಯ ಪತ್ರವನ್ನು ಅವರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ಮಾತೆ ಮಹಾದೇವಿ ಚಾರಿತ್ರ್ಯಧ ಬಗ್ಗೆ ಪ್ರಸ್ತಾಪಿಸಲಾಗಿದೆ. ಪಬ್ಲಿಕ್ ಟಿವಿಗೆ ಈ ಪತ್ರಗಳು ಸಿಕ್ಕಿದ್ದು ಅವುಗಳನ್ನು ಇಲ್ಲಿ ನೀಡಲಾಗಿದೆ.