Tag: Veerappa Moily

  • ನಾನು 1980 ರಲ್ಲೇ ಸಿಎಂ ಆಗಬೇಕಿತ್ತು, ಸಿಗದ್ದಕ್ಕೆ ನಾನು ಪಶ್ಚಾತ್ತಾಪ ಪಡಲಿಲ್ಲ: ಮೊಯ್ಲಿ

    ನಾನು 1980 ರಲ್ಲೇ ಸಿಎಂ ಆಗಬೇಕಿತ್ತು, ಸಿಗದ್ದಕ್ಕೆ ನಾನು ಪಶ್ಚಾತ್ತಾಪ ಪಡಲಿಲ್ಲ: ಮೊಯ್ಲಿ

    ಬಾಗಲಕೋಟೆ: ನಮಗೆ ಅರ್ಹತೆ ಇದ್ದರೆ, ಸರದಿ ಬಂದರೆ ಮುಖ್ಯಮಂತ್ರಿ (Chief Minister) ಆಗುತ್ತೇವೆ. ನಾನು 1980 ರಲ್ಲೇ ಸಿಎಂ ಆಗಬೇಕಿತ್ತು. ಆದರೆ ಸಮಯದಲ್ಲಿ ಸಿಎಂ ಸ್ಥಾನ ಸಿಗಲಿಲ್ಲ. ನಾನು ಸಿಎಂ ಆಗಲು 10 ವರ್ಷ ಕಾದಿದ್ದೆ ಎಂದು ವೀರಪ್ಪ ಮೊಯ್ಲಿ (Veerappa Moily) ಹೇಳಿದ್ದಾರೆ.

    ಪಕ್ಷವನ್ನು ಅಧಿಕಾರಕ್ಕೆ ತಂದರೂ ಸಿಎಂ ಅವಕಾಶ ಕೈತಪ್ಪಿತು ಎಂಬ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 1979 ರಿಂದ 1995 ರವರೆಗೆ ನಾನೇ ಪಕ್ಷದ ಸಂಘಟನೆ ಮಾಡಿದ್ದೆ. ಆದರೆ ಆಗ ನನ್ನ ಬದಲು ಆರ್ ಗುಂಡೂರಾವ್ ಸಿಎಂ ಆದರು, ನಂತರ ಬಂಗಾರಪ್ಪ ಸಿಎಂ ಆದರು. ಅದಕ್ಕಿಂತ ಮೊದಲು ವೀರೇಂದ್ರ ಪಾಟಿಲ್ ಸಿಎಂ ಆದರು. ಹಾಗಂತ ನನಗೆ ಸಿಗಲಿಲ್ಲ ಎಂದು ನಾನು ಪಶ್ಚಾತ್ತಾಪ ಪಡಲಿಲ್ಲ ಎಂದು ಹೇಳಿದರು.

    ನನ್ನಿಂದಲೇ ಪಕ್ಷದ ಅಧಿಕಾರಕ್ಕೆ ಬಂತು ಎಂದು ಹೇಳಲು ಆಗುವುದಿಲ್ಲ. ಎಷ್ಟು ವರ್ಷ ಸಿಎಂ ಆಗಿದ್ದೇವೆ ಎನ್ನುವುದು ಮುಖ್ಯವಲ್ಲ, ಏನು ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಕಷ್ಟ ಪಟ್ಟಿದ್ದು ನಾನು, ಕೃಷ್ಣ ಸಿಎಂ ಆದ್ರು – ಮುಖ್ಯಮಂತ್ರಿ ಸ್ಥಾನ ಸಿಗದಿದ್ದಕ್ಕೆ ಖರ್ಗೆ ಬಹಿರಂಗ ಬೇಸರ

     

    ರಾಜಕೀಯದಲ್ಲಿ ಅಧಿಕಾರಕ್ಕೆ ಹಂಬಲಿಸುವುದು, ಪೈಪೋಟಿ ಇರುವುದು ಸಾಮಾನ್ಯ. ಕೆಲವರಿಗೆ ಸಿಗುತ್ತದೆ ಕೆಲವರಿಗೆ ಸಿಗುವುದಿಲ್ಲ. ಸಾಯುವವರೆಗೂ ಕೆಲವರಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ಸಿಗುವುದಿಲ್ಲ. ಆದರೆ ಆಧಿಕಾರವನ್ನು ವಾಮಮಾರ್ಗದ ಮೂಲಕ ಸಾಧಿಸಬಾರದು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

    ಈಗ ಸಿಎಂ ಸಿದ್ದರಾಮಯ್ಯ ನಾನೇ ಐದು ವರ್ಷ ಆಡಳಿತ ಮಾಡುತ್ತೇನೆ ಎನ್ನುತ್ತಾರೆ. ಅವರಿಗೆ ಆ ಆಸೆ ಇದೆ, ಅದರೆ ಬಗ್ಗೆ ತಪ್ಪು ತಿಳಿದುಕೊಳ್ಳಲು ಆಗುವುದಿಲ್ಲ. ಡಿಸಿಎಂ ಆದವರು ಸಿಎಂ ಆಗಬೇಕು ಅಂತ ಆಸೆ ಪಡ್ತಾರೆ. ಆದರೆ ಕೆಲವೊಂದು ಸಾರಿ ಡೆಪ್ಯುಟಿ ಸಿಎಂ ಆದವರು ಡಿಸಿಎಂ ಆಗಿಯೇ ನಿವೃತ್ತಿಯಾಗಬಹುದು. ನನಗೆ ಸಿಗಲಿಲ್ಲ ಅಂತ ಪಶ್ಚಾತ್ತಾಪ ಪಡುವುದು ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಅರ್ಹತೆ ಇತ್ತು: ಆರ್.ವಿ.ದೇಶಪಾಂಡೆ

    ಗ್ಯಾರಂಟಿಯಿಂದ ಸರಕಾರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಂಚ ನಿಂತರೆ ಎಲ್ಲದಕ್ಕೂ ಹಣವಿದೆ. ಸಂಪನ್ಮೂಲ ಕ್ರೋಢಿಕರಣ, ವ್ಯಾಟ್ ಇರಬಹುದು, ಜಿಎಸ್‌ಟಿ ಇರಬಹುದು. ಅದೆಲ್ಲವನ್ನು ಸರಿಯಾಗಿ ವಸೂಲಿ ಮಾಡಿದರೆ ಎಲ್ಲದಕ್ಕೂ ಹಣ ಇದೆ. ಹಣವಿಲ್ಲ ಅಂತೇನಿಲ್ಲ ನಾನು ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸರಿಯಾಗಿ ಆಡಳಿತ ಮಾಡಿದರೆ ಎಲ್ಲದಕ್ಕೂ ಹಣ ಇದೆ. ಖರ್ಚು ಮಾಡುವವರಿಗೆ ಹಣವಿದೆ. ಖರ್ಚು ಮಾಡದವರಿಗೆ ಹಣವಿಲ್ಲ ಎಂದರು.

     

  • ವೀರಪ್ಪ ಮೊಯ್ಲಿ ಹೇಳಿಕೆಗಿಂತಲೂ ಹೈಕಮಾಂಡ್ ಹೇಳಿಕೆ ಮುಖ್ಯ : ಸಿಎಂ

    ವೀರಪ್ಪ ಮೊಯ್ಲಿ ಹೇಳಿಕೆಗಿಂತಲೂ ಹೈಕಮಾಂಡ್ ಹೇಳಿಕೆ ಮುಖ್ಯ : ಸಿಎಂ

    – ಗುತ್ತಿಗೆದಾರರಿಗೆ ಏಪ್ರಿಲ್‌ನಲ್ಲಿ ಹಣ ಬಿಡುಗಡೆ ಮಾಡ್ತೀನಿ

    ಬೆಂಗಳೂರು: ವೀರಪ್ಪ ಮೊಯ್ಲಿ (Veerappa Moily) ಅಥವಾ ಬೇರೆಯವರು ಸಿಎಂ ಬದಲಾವಣೆ ವಿಚಾರ ಹೇಳುವುದು ಮುಖ್ಯವಲ್ಲ. ಹೈಕಮಾಂಡ್ ಏನು ಹೇಳುತ್ತಾರೋ ಅದು ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.

    ಡಿಕೆಶಿ ಸಿಎಂ ಆಗೇ ಆಗ್ತಾರೆ ಎಂಬ ವೀರಪ್ಪ ಮೊಯ್ಲಿ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಬೇರೆ ಅವರು ಮಾತನಾಡಿದರೆ ನಾನೇನು ಮಾತನಾಡಲಿ. ನಾನು ಹೈಕಮಾಂಡ್ ನಿರ್ದೇಶನದಂತೆ ಹೋಗುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಖಚಿತ – ಬಿ.ವೈ.ವಿಜಯೇಂದ್ರ

    ಗುತ್ತಿಗೆದಾರರಿಗೆ ಏಪ್ರಿಲ್‌ನಲ್ಲಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದೇನೆ. 30 ಸಾವಿರ ಕೋಟಿ ರೂ. ಬಾಕಿ ಇದೆ. 15 ಸಾವಿರ ಕೋಟಿ ರೂ. ಕೊಡಬೇಕು ಎಂದು ಹೇಳಿದ್ದಾರೆ. ಆದರೆ ಅಷ್ಟೆಲ್ಲಾ ಕೊಡಲು ಆಗುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕೊಡುತ್ತೇವೆ ಎಂದರು.

    ಹೈಕಮಾಂಡ್ ದೂರು ನೀಡುತ್ತೇವೆ ಎಂಬ ಗುತ್ತಿಗೆದಾರರ ಸಂಘದವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಲಿ ಯಾರು ಬೇಡ ಅಂದರು. ನಾವು ಹಣಕಾಸು ಪರಿಸ್ಥಿತಿ ನೋಡಿಕೊಂಡು ಹಣ ಬಿಡುಗಡೆ ಮಾಡುತ್ತೇವೆ. ಹಣ ಬಾಕಿ ಉಳಿದಿದ್ದು ಯಾರಿಂದ? ಬಜೆಟ್‌ನಲ್ಲಿ ಹಣ ಇಡದೇ ಟೆಂಡರ್ ಕರೆದು ಕೆಲಸ ಶುರು ಮಾಡಿದರು. ಅದಕ್ಕೆ ನಾವು ಹೊಣೆನಾ? ಗುತ್ತಿಗೆದಾರರು ಯಾರಿಗಾದರೂ ದೂರು ಕೊಡಲಿ. ನಾವು ಹಣಕಾಸು ಪರಿಸ್ಥಿತಿ ನೋಡಿಕೊಂಡು ಹಣ ಬಿಡುಗಡೆ ಮಾಡುವುದು ಎಂದು ಖಡಕ್ ಉತ್ತರ ನೀಡಿದರು. ಇದನ್ನೂ ಓದಿ: ಓಲಾದ 1 ಸಾವಿರ ಉದ್ಯೋಗಿಗಳು ಮನೆಗೆ

    ಅಧಿಕಾರಿಗಳು ಕಮಿಷನ್ ಕೇಳುತ್ತಾರೆ ಎಂಬ ಆರೋಪ ಕುರಿತು ಮಾತನಾಡಿ, ಅಧಿಕಾರಿಗಳು ಕಮಿಷನ್ ಕೇಳಿದರೆ ಕೊಡುವುದು ಬೇಡ. ಯಾಕೆ ಕಮಿಷನ್ ಕೊಡುತ್ತೀರಾ. ಲಂಚ ತೆಗೆದುಕೊಳ್ಳುವುದು ಅಪರಾಧ. ಅದೇ ರೀತಿ ಲಂಚ ಕೊಡುವವನು ಅಪರಾಧಿನೇ. ಕಮಿಷನ್ ಯಾರು ಕೊಡಬಾರದು. ನಾನು ಇದೂವರೆಗೂ ಹಣ ಬಿಡುಗಡೆಗೆ ದುಡ್ಡು ಕೇಳಿಲ್ಲ ಎಂದು ಹೇಳಿದರು.

    ಬಜೆಟ್ ನಿರೀಕ್ಷೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮಾ. 7ರಂದು ಬಜೆಟ್ ಮಂಡನೆ ಮಾಡುತ್ತೇವೆ. ಬಜೆಟ್ ಮಂಡನೆ ಆದ ಮೇಲೆ ನೋಡಿ. ಬಜೆಟ್ ಮಂಡನೆ ಮಾಡೋವರೆಗೂ ಅದು ಸೀಕ್ರೆಟ್ ಡಾಕ್ಯುಮೆಂಟ್ ಆಗಿರುತ್ತದೆ. ಅದರಲ್ಲಿ ಏನಿದೆ ಅಂತ ಹೇಳಲು ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಿಕೆ ಸಾಹೇಬ್ರು ಹೇಳಿರೋದ್ರಲ್ಲಿ ತಪ್ಪೇನಿಲ್ಲ, ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶ – ಸಾಧು ಕೋಕಿಲ

  • ಸಿಎಂ ಆಗ್ತಾರೆ ಅಂದಾಗ ಡಿಕೆಶಿ ಮೊಗದಲ್ಲಿ ಹಾಲಿನ ಮಳೆಯೋ, ಜೇನಿನ ಹೊಳೆಯೋ ಅನ್ನೋ ಖುಷಿಯಿತ್ತು: ಅಶೋಕ್

    ಸಿಎಂ ಆಗ್ತಾರೆ ಅಂದಾಗ ಡಿಕೆಶಿ ಮೊಗದಲ್ಲಿ ಹಾಲಿನ ಮಳೆಯೋ, ಜೇನಿನ ಹೊಳೆಯೋ ಅನ್ನೋ ಖುಷಿಯಿತ್ತು: ಅಶೋಕ್

    – ಖುದ್ದು ಸಿದ್ದರಾಮಯ್ಯನವರೇ ಅಧಿಕಾರ ಬಿಡುವಂತೆ ಡಿಕೆಶಿ ಮಾಡ್ತಾರೆಂದ ವಿಪಕ್ಷ ನಾಯಕ

    ಬೆಂಗಳೂರು: ಡಿಕೆಶಿ ಸಿಎಂ ಆಗೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ ಎಂದು ವೀರಪ್ಪ ಮೊಯ್ಲಿ (Veerappa Moily)  ಹೇಳಿದಾಗ ಹಾಲಿನ ಮಳೆಯೋ, ಜೇನಿನ ಹೊಳೆಯೋ ಎನ್ನುವಂತ ಖುಷಿ ಡಿಕೆಶಿ ಮೊಗದಲ್ಲಿ ಇತ್ತು ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಲೇವಡಿ ಮಾಡಿದರು.

    ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ಕುರಿತು ಮಾಧ್ಯಮದರೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನೂ ಕೂಡಾ ಮೊಯ್ಲಿಯವರ ಅಬ್ಬರದ ಭಾಷಣ ನೋಡಿದೆ. ಡಿಕೆಶಿ ಸಿಎಂ ಆಗೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ ಅಂದಿದ್ದಾರೆ. ಆಗ ಡಿಕೆಶಿ ಮೊಗದಲ್ಲಿ ಹಾಲಿನ ಮಳೆಯೋ, ಜೇನಿನ ಹೊಳೆಯೋ ಎನ್ನುವಂತಹ ಖುಷಿ ಇತ್ತು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ – ಪಶುಸಂಗೋಪನೆ ಇಲಾಖೆಯಿಂದ ಕೋಳಿ ಸೇವನೆಗೆ ಮಾರ್ಗಸೂಚಿ ಪ್ರಕಟ

    ಇದು ಸಿದ್ದರಾಮಯ್ಯ ಅವರ ಲಾಸ್ಟ್ ಬಜೆಟ್ ಆಗಬಹುದು. ಲಾಸ್ಟ್ ಆದರೂ ಲೀಸ್ಟ್ ಅಲ್ಲ. ಅತೀ ಹೆಚ್ಚು ಸಾಲಮಾಡಿ ಡಿಕೆಶಿಗೆ ಬಿಟ್ಟು ಹೋಗಬಹುದು. ಸಿದ್ದರಾಮಯ್ಯ ಇರುತ್ತಾರೋ, ಹೋಗುತ್ತಾರೆ ಎನ್ನುವ ಎಪಿಸೋಡ್ ಕಳೆದ 2 ವರ್ಷಗಳಿಂದ ನಡೆಯುತ್ತಲೇ ಇದೆ ಎಂದು ಹೇಳಿದರು. ಇದನ್ನೂ ಓದಿ: ಗ್ಯಾರಂಟಿಗಳಿಂದ ಕಾಂಗ್ರೆಸ್ ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ: ಆರ್. ಅಶೋಕ್

    ಮೊಯ್ಲಿಯವರು ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಆಗಿದ್ದವರು. ಅವರಿಗೆ ಪವರ್ ಶೇರ್ ಒಪ್ಪಂದದ ಬಗ್ಗೆ ಗೊತ್ತಿದೆ. ಹಾಗಾಗಿ ಧೈರ್ಯವಾಗಿ ಮೊಯ್ಲಿ ಹಾಗೆ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ನಾನೇ ಸಿಎಂ ಅಂತಿದ್ದಾರೆ. ನಾವು ಮಾತನಾಡಿದರೆ ಜಾತಕ ಹೇಳುತ್ತಾರೆ ಅಂತಾರೆ. ಹಾಗಾದರೆ ಶನಿಬಲ, ಗುರುಬಲ ಯಾಕೆ ಕೇಳುತ್ತಾರೆ. ಕೋಡಿ ಮಠದ ಸ್ವಾಮೀಜಿ ಸಹ ಸಿದ್ದರಾಮಯ್ಯ ಸುಲಭಕ್ಕೆ ಅಧಿಕಾರ ಕೊಡಲ್ಲ ಅಂದಿದ್ದಾರೆ. ನಾನು, ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಾ ಅಂತ ಹೇಳಿದ್ದಕ್ಕೂ ಕೋಡಿಮಠದ ಸ್ವಾಮೀಜಿ ಹೇಳಿಕೆಗೂ, ಮೊಯ್ಲಿ ಹೇಳಿಕೆಗೂ ತಾಳೆ ಆಯ್ತಲ್ಲ. ಸಿಎಂ ಸ್ಥಾನ ಸಾಕಪ್ಪ ಅಂತ ಖುದ್ದು ಸಿದ್ದರಾಮಯ್ಯ ಅವರೇ ಅಧಿಕಾರ ಬಿಟ್ಟು ಹೋಗುವಂತೆ ಡಿಕೆಶಿ ಮಾಡುತ್ತಾರೆ ಎಂದರು. ಇದನ್ನೂ ಓದಿ: ಗ್ಯಾರಂಟಿ ಎಫೆಕ್ಟ್ – ರಸ್ತೆ ಗುಂಡಿ ಮುಚ್ಚೋಕು ಸರ್ಕಾರದ ಬಳಿ ದುಡ್ಡಿಲ್ಲ: ಹೆಚ್.ಟಿ ಮಂಜು

  • ಡಿಕೆಶಿ ಸಿಎಂ ಆಗೋದು ಸೆಟಲ್ಡ್ ಮ್ಯಾಟರ್, ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೊಯ್ಲಿ

    ಡಿಕೆಶಿ ಸಿಎಂ ಆಗೋದು ಸೆಟಲ್ಡ್ ಮ್ಯಾಟರ್, ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೊಯ್ಲಿ

    ಉಡುಪಿ: ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಡಿಕೆಶಿ ಮುಖ್ಯಮಂತ್ರಿ (Chief Minister) ಆಗುವುದು ಸೆಟಲ್ಡ್ ಮ್ಯಾಟರ್ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ಹೇಳಿದ್ದಾರೆ.

    ಕಾರ್ಕಳದಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ (Congress) ಕುಟುಂಬೋತ್ಸವ ಸಮಾವೇಶ ಉದ್ದೇಶಿಸಿ ಡಿಕೆಶಿ ಸಮ್ಮುಖದಲ್ಲೇ ಈ ಮಾತನ್ನು ನುಡಿದಿದ್ದಾರೆ.

    ಡಿಕೆ ಬೆಂಬಲಿಗರು ಮಾತನಾಡದೇ ಸುಮ್ಮನಿರಬೇಕು. ಡಿಕೆಶಿ ಮುಖ್ಯಮಂತ್ರಿಯಾಗುವುದು ಜನರ ಮನಸ್ಸಿನಲ್ಲಿ ತೀರ್ಮಾನವಾಗಿದೆ. ಇತಿಹಾಸ ತೀರ್ಮಾನ ಮಾಡಿದೆ. ಮ್ಯಾಟರ್ ಆಫ್ ಟೈಮ್ ಅಷ್ಟೇ ಎಂದು ತಿಳಿಸಿದರು.

     

    ಶಿವಕುಮಾರ್‌ಗೆ ಪ್ರಥಮ ಬಾರಿ ಎಂಎಲ್ಎ ಟಿಕೆಟ್ ಕೊಡಿಸಿದವನು ನಾನು. ಇಂದು ಯಶಸ್ವಿ ನಾಯಕರಾಗಿ ಕರ್ನಾಟಕದಲ್ಲಿ ಮೂಡಿ ಬಂದಿದ್ದಾರೆ. ಡಿಕೆಶಿ ಸದ್ಯದಲ್ಲೇ ಮುಖ್ಯಮಂತ್ರಿ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪರೀಕ್ಷೆಯಲ್ಲಿ ನಕಲು| ಪೋಷಕರ ಸಮ್ಮುಖದಲ್ಲಿ ಸಿಸಿಟಿವಿ ಪರೀಕ್ಷಿಸಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿನಿ

    ಕಾರ್ಕಳ ಗೊಮ್ಮಟೇಶ್ವರನ ಪುಣ್ಯಭೂಮಿ. ಅವರು ಗೊಮ್ಮಟೇಶ್ವರನ ತರ ಬೆಳೆಯಬೇಕು. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಕಷ್ಟದಲ್ಲಿರುವಾಗ ಸಂಚಲನ ಮೂಡಿಸಿದ್ದಾರೆ. ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೋರಾಟ ಮಾಡಿದ ಧೀಮಂತ ನಾಯಕ ಎಂದು ಹಾಡಿ ಹೊಗಳಿದರು.

    ಪಕ್ಷಕ್ಕೆ ಒಳ್ಳೆಯ ನಾಯಕತ್ವ ನೀಡಿ ಸಂಘಟನೆ ಮಾಡಿದ್ದಾರೆ. ವಿಭಿನ್ನ ಹೇಳಿಕೆಗಳು ಬರಬಹುದು ಹೋಗಬಹುದು. ನೀವು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರು ಕೂಡ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಟೀಕೆ ಮಾಡುವವರು ವೈಯಕ್ತಿಕ ತೃಪ್ತಿಗೆ ಟೀಕೆ ಮಾಡಬಹುದು. ಮುಖ್ಯಮಂತ್ರಿ ಹುದ್ದೆ ಯಾರು ಕೊಡುವ ವರ ಅಲ್ಲ. ಅದು ಅವರು ಸಂಪಾದನೆ ಮಾಡಿರುವ ಶಕ್ತಿ. ಸಂಪಾದನೆ ಮಾಡಿರುವ ಶಕ್ತಿಯೇ ಮುಖ್ಯಮಂತ್ರಿ ಪದವಿ ಎಂದರು.

    ಕಾರ್ಕಳದ ಪುಣ್ಯ ಭೂಮಿಯಲ್ಲಿ ಆಡಿದ ಈ ಮಾತು ನೂರಕ್ಕೆ ನೂರು ಸತ್ಯ. ಡಿಕೆಶಿ ಅವರೇ ನೀವು ಯಾವುದಕ್ಕೂ ಪ್ರತಿಕ್ರಿಯೆ ಕೊಡಬಾರದು. ಕೋಟಿ ಕೋಟಿ ಪ್ರಯತ್ನ ಮಾಡಿದರೂ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಸಾಧ್ಯವಿಲ್ಲ ಅನ್ನೋದು ಶತ:ಸಿದ್ಧ. ನೀವು ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪಿಲ್ಲ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ದೇವರ ಭೂಮಿ. ಬಿಜೆಪಿ ದೇವರ ಭೂಮಿಯನ್ನು ಋಣಭೂಮಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

     

  • ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    ಬೆಂಗಳೂರು: ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಮೂರ್ತಿ ಶಿಲ್ಪಿ ಅರುಣ್ ಯೋಗಿರಾಜ್, ಮಾಜಿ ಮುಖ್ಯಮಂತ್ರಿ ಹಾಗೂ ಸಾಹಿತಿ ವೀರಪ್ಪ ಮೊಯ್ಲಿ ಸೇರಿದಂತೆ 69 ಸಾಧಕರಿಗೆ ಶುಕ್ರವಾರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು ಈ ವೇಳೆ ಉಪಸ್ಥಿತರಿದ್ದರು.

    ಜನಪದ ಕ್ಷೇತ್ರ
    ಇಮಾಮಸಾಬ ಎಮ್ ವಲ್ಲೆಪನವರ, ಅಶ್ವ ರಾಮಣ್ಣ, ಕುಮಾರಯ್ಯ, ವೀರಭದ್ರಯ್ಯ, ನರಸಿಂಹಲು (ಅಂಧ ಕಲಾವಿದ), ಬಸವರಾಜ ಸಂಗಪ್ಪ ಹಾರಿವಾಳ, ಎಸ್‌ಜಿ ಲಕ್ಷ್ಮೀದೇವಮ್ಮ, ಪಿಚ್ಚಳ್ಳಿ ಶ್ರೀನಿವಾಸ, ಲೋಕಯ್ಯ ಶೇರ (ಭೂತಾರಾಧನೆ)

    ಚಲನಚಿತ್ರ-ಕಿರುತೆರೆ
    ಹೇಮಾ ಚೌದರಿ, ಎಂ.ಎಸ್. ನರಸಿಂಹಮೂರ್ತಿ.

    ಸಂಗೀತ
    ಪಿ.ರಾಜಗೋಪಾಲ, ಎ.ಎನ್ ಸದಾಶಿವಪ್ಪ.

    ನೃತ್ಯ
    ವಿದುಷಿ ಲಲಿತಾ ರಾವ್.

    ಆಡಳಿತ
    ಎಸ್.ವಿ.ರಂಗನಾಥ್

    ಶಿಲ್ಪಕಲೆ
    ಬಸವರಾಜ್ ಬಡಿಗೇರ
    ಅರುಣ್ ಯೋಗಿರಾಜ್ (ಅಯೋಧ್ಯೆ ರಾಮಲಲ್ಲಾ ವಿಗ್ರಹ ಕೆತ್ತನೆ ಮಾಡಿದ ಶಿಲ್ಪಿ)

    ಸಾಹಿತ್ಯ
    ಬಿ.ಟಿ.ಲಲಿತಾ ನಾಯಕ್, ಅಲ್ಲಮಪ್ರಭು ಬೆಟ್ಟದೂರು, ವೀರಪ್ಪ ಮೊಯ್ಲಿ, ಹನುಮಂತರಾವ್ ದೊಡ್ಡಮನಿ, ಡಾ.ಬಾಳಾಸಾಹೇಬ್ ಲೋಕಾಪುರ, ಬೈರಮಂಗಲರಾಮೇಗೌಡ, ಡಾ. ಪ್ರಶಾಂತ್ ಮಾಡ್ತಾ.

    ಕ್ರೀಡೆ
    ಜೂಡ್ ಫೆಲಿಕ್ಸ್ ಸೆಬಾಸ್ಟೀಯನ್ (ಹಾಕಿ), ಗೌತಮ್ ವರ್ಮ, ಆರ್.ಉಮಾದೇವಿ (ಬಿಲಿಯಡ್ಸ್)

    ವೈದ್ಯಕೀಯ
    ಡಾ. ಜಿ.ಬಿ.ಬಿಡಿನಹಾಳ, ಡಾ. ಮೈಸೂರು ಸತ್ಯನಾರಾಯಣ, ಡಾ. ಲಕ್ಷ್ಮಣ್ ಹನುಮಪ್ಪ ಬಿದರಿ

    ಸಮಾಜ ಸೇವೆ
    ವೀರಸಂಗಯ್ಯ, ಹೀರಾಚಂದ್ ವಾಗ್ಮಾರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್.

    ಸಂಕೀರ್ಣ
    ಹುಲಿಕಲ್ ನಟರಾಜ, ಡಾ. ಹೆಚ್.ಆರ್.ಸ್ವಾಮಿ, ಆ.ನ ಪ್ರಹ್ಲಾದ ರಾವ್, ಕೆ. ಅಜಿತ್ ಕುಮಾರ್ ರೈ, ಇರ್ಫಾನ್ ರಜಾಕ್ (ವಾಸ್ತುಶಿಲ್ಪ), ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ.

    ಹೊರದೇಶ- ಹೊರನಾಡು
    ಕನ್ಹಯ್ಯ ನಾಯ್ಡು (ತುಂಗಾಭದ್ರ ಡ್ಯಾಂಗೆ ಗೇಟ್ ಅಳವಡಿಕೆ), ಡಾ. ತುಂಬೆ ಮೊಹಿಯುದ್ದೀನ್, ಚಂದ್ರಶೇಖರ ನಾಯಕ್.

    ರಂಗಭೂಮಿ
    ಸರಸ್ವತಿ ಜುಲೈಕ ಬೇಗಂ, ಓಬಳೇಶ್ ಹೆಚ್.ಬಿ, ಭಾಗ್ಯಶ್ರೀ ರವಿ, ಡಿ.ರಾಮು, ಜನಾರ್ಧನ್ ಹೆಚ್. (ಜನ್ನಿ), ಹನುಮಾನದಾಸ ವ. ಪವಾರ (ಢಗಳ ಚಂದ).

    ಮಾಧ್ಯಮ
    ಎನ್.ಎಸ್. ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ.ಕಾರಟಗಿ, ರಾಮಕೃಷ್ಣ ಬಡಶೇಶಿ.

    ವಿಜ್ಞಾನ-ತಂತ್ರಜ್ಞಾನ
    ಟಿ.ವಿ.ರಾಮಚಂದ್ರ, ಸುಬ್ಬಯ್ಯ ಅರುಣನ್.

    ಸಹಕಾರ
    ವಿರೂಪಾಕ್ಷಪ್ಪ ನೇಕಾರ.

    ಯಕ್ಷಗಾನ
    ಕೇಶವ ಹೆಗಡೆ, ಸೀತಾರಾಮ ತೋಳ್ಪಾಡಿ.

    ಬಯಲಾಟ
    ಸಿದ್ದಪ್ಪ ಕರಿಯಪ್ಪ, ನಾರಾಯಣಪ್ಪ ಶಿಳ್ಳೇಕ್ಯಾತ.

    ಪರಿಸರ
    ಆಲ್ಮಿತ್ರಾ ಪಟೇಲ್.

    ಕೃಷಿ
    ಶಿವನಾಪುರ ರಮೇಶ್, ಪುಟ್ಟೀರಮ್ಮ.

    ಶಿಕ್ಷಣ
    ಡಾ. ವಿ.ಕಮಲಮ್ಮ, ಡಾ. ರಾಜೇಂದ್ರ ಶೆಟ್ಟಿ, ಡಾ. ಪದ್ಮಾಶೇಖರ್.

    ನ್ಯಾಯಾಂಗ
    ಬಾಲನ್

    ಚಿತ್ರಕಲೆ
    ಪ್ರಭು ಹರಸೂರು

    ಕರಕುಶಲ
    ಚಂದ್ರಶೇಖರ ಸಿರಿವಂತೆ

  • ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ, ಕರ್ನಾಟಕದ ಹೆಸರು ಕೆಡಿಸಿದ್ದಾರೆ: ಮೊಯ್ಲಿ

    ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ, ಕರ್ನಾಟಕದ ಹೆಸರು ಕೆಡಿಸಿದ್ದಾರೆ: ಮೊಯ್ಲಿ

    ಬೆಳಗಾವಿ: ದೇವೇಗೌಡರ (H.D.Deve Gowda) ಕುಟುಂಬದ ಸದಸ್ಯರು ಹಾಸನವಷ್ಟೇ ಅಲ್ಲ ಕರ್ನಾಟಕದ ಹೆಸರು ಕೆಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ (Veerappa Moily) ವಾಗ್ದಾಳಿ ನಡೆಸಿದರು.

    ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ದೇವಗೌಡರ ಮಗ, ಮೊಮ್ಮಗನಿಂದ ಒಂದಲ್ಲ 2 ಸಾವಿರ ಮಹಿಳೆಯರ ಮೇಲೆ ದೌರ್ಜನ್ಯವಾಗಿದೆ. ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ ಕರ್ನಾಟಕದ ಹೆಸರು ಕೆಡಿಸಿದ್ದಾರೆ. ರಾಜಕೀಯ ಕೆಡಸಿದ್ದಾರೆ, ದೇಶದ ಎದುರು ಕರ್ನಾಟಕ ತಲೆತಗ್ಗಿಸುವಂತೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಾರಿಶಕ್ತಿ, ಬೇಟಿ ಪಡಾವೋ, ಬೇಟಿ ಬಚಾವೋ ಅಂತಾರೆ. ಭಾರತ ಸರ್ಕಾರದ ಬಳಿಯೇ ನ್ಯಾಷನಲ್ ಕ್ರೈಂ ರೆಕಾರ್ಡ್ ಮಾಹಿತಿ ಇದೆ. ಯುಪಿಎ ಸಮಯದಲ್ಲಿ ಮೂರು ಲಕ್ಷ ಮಹಿಳೆಯರ ಮೇಲೆ ದೌರ್ಜನ್ಯ ಆಗ್ತಿತ್ತು. ಈಗ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ 22 ಲಕ್ಷ ದಾಟಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ: ಅಣ್ಣಾಮಲೈ

    ಬಿಜೆಪಿ ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಅಧಿಕವಾಗಿವೆ. ಪ್ರಜ್ವಲ್ ಸೆಕ್ಸ್ ಸ್ಕ್ಯಾಂಡಲ್‌ನ ಎಲ್ಲ ಸೂತ್ರದಾರರು ಪ್ರಧಾನಿ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಮಲಗಿದ್ದಾರೆಯೇ? ಇಂಥ ಕೃತ್ಯ ಎಸಗಿ, ಹಣದೋಚಿಕೊಂಡು ದೇಶದಿಂದ ಪರಾರಿ ಆಗ್ತಿದ್ದಾರೆ. ಕೇಂದ್ರದಲ್ಲಿ ಇಂಥ ಸರ್ಕಾರ ಇದ್ದರೆ ಏನು ಪ್ರಯೋಜನ ಎಂದು ಮೊಯ್ಲಿ ಆಕ್ರೋಶ ಹೊರಹಾಕಿದರು.

    ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವೂ ಆಗಲಿಲ್ಲ. ಮಹಾದಾಯಿ ಯೋಜನೆಯನ್ನು ಜಾರಿಗೆ ತರಲಿಲ್ಲ. ಕರ್ನಾಟಕದಲ್ಲಿ ನರೇಂದ್ರ ಮೋದಿಗೆ ಮತ ಕೇಳಲು ನೈತಿಕ ಹಕ್ಕೂ ಇಲ್ಲ, ಭೌತಿಕ ಹಕ್ಕೂ ಇಲ್ಲ. ಹೊಸ ಮುಖಗಳಿಗೆ ಈ ಸಲ ಕಾಂಗ್ರೆಸ್ ಅವಕಾಶ ಕೊಟ್ಟಿದೆ, ಅವರ ಗೆಲುವು ಆಗಬೇಕು. ಬೆಳಗಾವಿ ಬಿಜೆಪಿ ಟಿಕೆಟ್ ಆ ಪುಣ್ಯಾತ್ಮ ಜಗದೀಶ್ ಶೆಟ್ಟರ್‌ಗೆ ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ಜಗದೀಶ್ ಶೆಟ್ಟರ್ ವಿಶ್ವಾಸದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಹಂಚಿದ ಆರೋಪ- ನವೀನ್ ಗೌಡಗೆ SIT ನೋಟಿಸ್

    ಅನಾರೋಗ್ಯದ ಮಧ್ಯೆಯೂ ಸೋನಿಯಾ ಗಾಂಧಿ ಹುಬ್ಬಳ್ಳಿಗೆ ಬಂದು ಪ್ರಚಾರ ಮಾಡಿದ್ರು. ನಮ್ಮ ಜೊತೆಗೆ ಬಂದವರಿಗೆ ಗೌರವ ಕೊಡಬೇಕೆಂದು ಅಂದು ಸೋನಿಯಾ ಬಂದಿದ್ರು. ಹೀಗಿದ್ದರೂ ಈ ಪುಣ್ಯಾತ್ಮನಿಗೆ ಕೃತಜ್ಞತಾ ಭಾವ ಇಲ್ಲ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದು ಯಾರಿಗೂ ನೆನಪಿಲ್ಲ. ಏಕೆಂದರೆ ಅವರ ಕೊಡುಗೆ ಶೂನ್ಯ. ಹುಬ್ಬಳ್ಳಿಯಿಂದ ಕಣಕ್ಕಿಳಿದಿದ್ರೆ ಇನ್ನೂ ಹಲವು ಸಲ ಸೋಲಿಸುತ್ತಿದ್ದರು. ಅಲ್ಲಿ ಸಲ್ಲದವರು ಇಲ್ಲಿ ಸಲ್ಲುವುದು ಸಾಧ್ಯವೇ? ಪಾಪ ಮಹಿಳೆ, ಗಂಡನ ಕಳೆದುಕೊಂಡ ವಿಧವೆಯ ಟಿಕೆಟ್‌ನ್ನು ಶೆಟ್ಟರ್ ತಪ್ಪಿಸಿದರು. ವಿಧವೆ ಟಿಕೆಟ್ ತಪ್ಪಿಸಿ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸ್ಫರ್ಧಿಸುತ್ತಿದ್ದಾರೆ ಎಂದು ಟೀಕಿಸಿದರು.

    ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಿದ್ದು ನಾಚಿಕೆಗೇಡಿನ ಸಂಗತಿ. ದೇವಗೌಡರು ಈ ಪ್ರಕರಣದಲ್ಲಿ ಸುಮ್ಮನೆ ಇರಬೇಕು, ಅಂದಾಗ ಅವರೂ ಕೃತ್ಯ ಖಂಡಿಸಿದಂತೆ ಆಗ್ತದೆ. ರಮೇಶ್ ಜಾರಕಿಹೊಳಿ, ಪ್ರಜ್ವಲ್ ರೇವಣ್ಣ ಅನ್ಯಾಯ ಮಾಡಿದ್ದಾರೆ. ಈ ಇಬ್ಬರು ಏನು ಪುರುಷಾರ್ಥದ ಕೆಲಸ ಮಾಡಿದ್ದಾರಾ? ದೌರ್ಜನ್ಯ ಎಸಗಿದ್ದು ಸ್ಪಷ್ಟವಾಗಿದೆ. ದಾಖಲೆಗಳಿವೆ ನಾಚಿಕೆಗೇಡಿನ ಕೆಲಸ ಮಾಡಿದ್ದಾರೆ. ಈಗ ಡಿಕೆ ಶಿವಕುಮಾರ್ ವಿರುದ್ಧ ಬೆರಳು ತೋರುವ ಕೆಲಸ ಮಾಡಬಾರದು ಎಂದರು.

  • ಚುನಾವಣಾ ರಾಜಕಾರಣದಿಂದ ಹಿಂದೆ‌ ಸರಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ

    ಚುನಾವಣಾ ರಾಜಕಾರಣದಿಂದ ಹಿಂದೆ‌ ಸರಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapura) ಲೋಕಸಭಾ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.

    ಸೋಮವಾರ ಚಿಕ್ಕಬಳ್ಳಾಪುರ ನಗರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಅಭ್ಯರ್ಥಿ ರಕ್ಷಾರಾಮಯ್ಯ (Raksha Ramaiah) ಅವರಿಗೆ ಸಂಪೂರ್ಣ ಬೆಂಬಲ ಕೊಡುವುದಾಗಿ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ – ಪ್ರಚಾರದ ವೇಳೆ ಭದ್ರತಾ ವೈಫಲ್ಯ?

    ನಾನು ಲೋಕಸಭಾ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ ಹೈಕಮಾಂಡ್‌ ರಕ್ಷಾರಾಮಯ್ಯ ಅವರಿಗೆ ಟಿಕೆಟ್ ಕೊಟ್ಟಿದೆ. ಈಗ ನನ್ನ ಸಂಪೂರ್ಣ ಬೆಂಬಲ ರಕ್ಷಾರಾಮಯ್ಯ ಅವರಿಗೆ ನೀಡಲಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನಂಬಿ ಕಾಂಗ್ರೆಸ್ ಕೆಟ್ಟಿತ್ತು. ಆದರೆ ಈಗ ಜೆಡಿಎಸ್ ನಂಬಿ ಬಿಜೆಪಿ ಕೆಡಲಿದೆ. ಚಿಕ್ಕಬಳ್ಳಾಪುರದ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇದು ಅಭ್ಯರ್ಥಿಗೆ ಸಾಕಷ್ಟು ದೊಡ್ಡ ಶಕ್ತಿಯಾಗಿದೆ. ನಾನು ಸ್ಪರ್ಧಿಸುವಾಗ ಇಷ್ಟೊಂದು ಬೆಂಬಲ ಇರಲಿಲ್ಲ. ಆದರೆ ರಕ್ಷಾರಾಮಯ್ಯ ಅವರಿಗೆ ಆನೆ ಬಲ ಇದೆ. ನಿಮಗೆ ಸಾಕಷ್ಟು ಸೌಭಾಗ್ಯ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಬೇಕು. ಕಾಂಗ್ರೆಸ್ ಭದ್ರಕೋಟೆ ಇಲ್ಲಿ ಗೆದ್ದರೆ ಇಡೀ ಜ್ಯಾತ್ಯತೀತ ಗೆಲ್ಲಲಿದೆ. ಈಗ ಸ್ಥಳೀಯ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲು ಬೇರೆ ಬೇರೆ ಚಟುವಟಿಕೆ ನಡೆಸುತ್ತಾರೆ. ಆದರೆ ನಾವೆಲ್ಲಾ ಒಗ್ಗಟ್ಟಾಗಿ ಅಭ್ಯರ್ಥಿ ಗೆಲುವಿಗೆ ರಾತ್ರಿ ಹಗಲು ಶ್ರಮಿಸಬೇಕು ಎಂದು ಕರೆ ನೀಡಿದರು.

    ನನಗೆ ಲೋಕಸಭಾ ಅಭ್ಯರ್ಥಿ ಸ್ಥಾನದಿಂದ ಈಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಯಾಕೆಂದರೆ ಸಂಸದರ ಸ್ಥಾನ ಯಾರೂ ಬಿಡಲ್ಲ. ಆದರೆ ಹೈಕಮಾಂಡ್ ತೀರ್ಮಾನದಂತೆ ನೂರಕ್ಕೆ ನೂರರಷ್ಟು ಬೆಂಬಲ ಸೂಚಿಸಲಿದ್ದೇನೆ. ಮುಖ್ಯಮಂತ್ರಿ ಆದರೂ ನಿಷ್ಠಾವಂತನಾಗಿದ್ದರೆ ಅದು ನಾನು ಮಾತ್ರ. ಸಾಯುವವರೆಗೂ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. 10 ವರ್ಷದಿಂದ ನಡೆಯದಿರುವ ಕೆಲಸ ನೀವು ಐದು ವರ್ಷದಲ್ಲಿ ಮಾಡಬೇಕಿದೆ. 2 ವರ್ಷದಲ್ಲಿ ಎತ್ತಿನಹೊಳೆ ನೀರು ಬರಲು ಹೋರಾಡಬೇಕು.‌ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಲಸೆ ಹೋಗುತ್ತಾರೆ ಎಂದು ವರದಿಯಾಗಿತ್ತು. ಬಾಗೇಪಲ್ಲಿ ಬಳಿ ಫ್ಲೋರೈಡ್‌ ಇತ್ತು. ಇದನ್ನೆಲ್ಲ ಹೋಗಲಾಡಿಸಲು ನಾನು ಶ್ರಮವಹಿಸಿದ್ದೆ. ಅದೇ ರೀತಿ ನೀನು ಮಾಡಬೇಕು. ಇದು ನನ್ನ ಕನಸಿನ ಕೂಸು ಎಂದು ಅಭ್ಯರ್ಥಿ ರಕ್ಷಾರಾಮಯ್ಯ ಅವರಿಗೆ ಕೆಲವು ಸೂಚನೆಗಳನ್ನು ‌ಮೊಯ್ಲಿ ನೀಡಿದರು. ಇದನ್ನೂ ಓದಿ: ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮ್‌ ಪತ್ನಿ ಕಾಂಗ್ರೆಸ್‌ ಸೇರ್ಪಡೆ

    ಎಲ್‌.ಕೆ.ಅಡ್ವಾಣಿ ಪ್ರಧಾನಿಯಾಗಬೇಕಿತ್ತು, ಆದರೆ ಆಗಲಿಲ್ಲ. ಆ ಸಮಯದಲ್ಲಿ ಮೋದಿ ಒಬ್ಬ ಈವೆಂಟ್ ಮ್ಯಾನೇಜರ್ ಎಂದು ಹೇಳಿದ್ದರು. ಆದರೆ ಮೋದಿ ಇಂದಿಗೂ ಸಹಾ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಪುಲ್ವಾಮಾ ದಾಳಿ ನಡೆಸುತ್ತಾರೆ. ಇನ್ನೂ ಚುನಾವಣೆ ಒಳಗೆ ಮತ್ತೆ ಏನಾದ್ರು ಮಡ್ತಾರೆ ಕಾಯ್ತಾ ಇರೀ. ಸಾಕಷ್ಟು ರಾಷ್ಟ್ರೀಯ ಹೆದ್ದಾರಿಗಳು‌ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದೆ. ಆದರೆ ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. 2004 ರಲ್ಲಿ ಕಾರ್ಗಿಲ್ ಯುದ್ಧವಾಯ್ತು. ಆಗ ಶೈನಿಂಗ್ ಇಂಡಿಯಾ ಎಂದು ಬಿಜೆಪಿ ಹೇಳಿತ್ತು, ಆದರೆ ಸೋತಿತ್ತು. ಆದರೆ ಅದೇ ರೀತಿ ಈಗ ಬಿಜೆಪಿ ಸೋಲುತ್ತೆ. ಈಗ ಅಭಿವೃದ್ಧಿ ಇಲ್ಲ. ಉದ್ಯೋಗ ಸೃಷ್ಟಿ ಇಲ್ಲ. ಇದರಿಂದ ಕೆಲವೇ ದಿನಗಳಲ್ಲಿ ಯುವಜನತೆ ಎದ್ದು ನಿಲ್ಲುತ್ತಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    ಸ್ಥಳೀಯ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ ವೇಳೆ ಕಣ್ಣೀರು ಸುರಿಸಿದ್ದು ಇದೇ ವಿಚಾರಕ್ಕೆ ಎಂದು ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಅವರು ಮಾಡಿದ ಪಾಪ ಕಣ್ಣೀರಿನ ಮೂಲಕ ಬಂದಿದೆ. ಅದು ಸಾಕಾಗಲ್ಲ. ಅವರಿಗೆ ರಕ್ತ ಕಣ್ಣೀರು ಬರಬೇಕು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿದ್ದರಾಮಯ್ಯ ಬರೀ ಸೌಂಡ್ ಬಾಕ್ಸ್, ಅಬ್ಬರ ಮಾಡುತ್ತೆ ಅಷ್ಟೇ: ಅಶ್ವಥ್ ನಾರಾಯಣ್

  • ಹೆಚ್‍ಡಿಕೆ ಸಹವಾಸ ಮಾಡಿದವರು ಉದ್ಧಾರ ಆದ ಇತಿಹಾಸವಿಲ್ಲ: ವೀರಪ್ಪ ಮೊಯ್ಲಿ

    ಹೆಚ್‍ಡಿಕೆ ಸಹವಾಸ ಮಾಡಿದವರು ಉದ್ಧಾರ ಆದ ಇತಿಹಾಸವಿಲ್ಲ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಕುಮಾರಸ್ವಾಮಿಯವರ (H.D Kumaraswamy) ಸಹವಾಸ ಮಾಡಿದವರು ಯಾರೂ ಉದ್ಧಾರವಾದ ಇತಿಹಾಸ ಇಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕಥೆ ಇತಿಹಾಸ ಹೇಳುತ್ತಾ ಹೋದರೆ ಹಲವು ವರ್ಷಗಳೆ ಬೇಕು. ಅವರ ಸಹವಾಸದಿಂದ ಸುಖವಿಲ್ಲ. ಅವರನ್ನು ನಂಬಿದವರಿಗೆ ದೇವರೇ ಗತಿ. ನನಗೆ ಸಿಎಂ ಆಗಿ, ರಾಜಕೀಯದಲ್ಲಿ 50-55 ವರ್ಷದ ರಾಜಕೀಯ ಅನುಭವವಿದೆ. ನನ್ನ ರಾಜಕೀಯ ಇತಿಹಾಸದಲ್ಲಿ ಈ ಅನುಭವ ಇದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿ ಹೀಗೆಲ್ಲ ಆಡ್ತಿದೆ: ಹನುಮಧ್ವಜ ತೆರವು ವಿಚಾರಕ್ಕೆ ಬಿವೈವಿ ಕಿಡಿ

    ಕುಮಾರಸ್ವಾಮಿಯವರ ತಂದೆಯವರ ಜೊತೆ ನಾನು ಚೆನ್ನಾಗಿ ಇದ್ದ ಕಾಲವೂ ಇದೆ. ಅದೇ ಪ್ರಕಾರ ಕಷ್ಟ ನಷ್ಟ ಅನುಭವಿಸಿದ್ದು ಇದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕುಮಾರಸ್ವಾಮಿ ಜೊತೆ ಬಹಳ ಜನ ಸ್ನೇಹ ಮಾಡಿದ್ರು, ಯಾರೂ ಉದ್ಧಾರ ಆಗಿಲ್ಲ. ಅವರ ಜೊತೆ ಸ್ನೇಹ ಮಾಡಿದವರು ಗುಂಡಿಗೆ ಬೀಳುತ್ತಾರೆ. ಬಿಜೆಪಿ (BJP) ಉದ್ಧಾರ ಆಗುವುದಾದರೆ ಆಗಲಿ ಎಂದಿದ್ದಾರೆ. ಇದನ್ನೂ ಓದಿ: ರಾಹುಲ್ ಬಿಜೆಪಿಯ ಸ್ಟಾರ್ ಪ್ರಚಾರಕ: ಹಿಮಂತ್ ಬಿಸ್ವಾ ಶರ್ಮಾ

  • 11 ದಿನಗಳ ಕಾಲ ಮೋದಿ ಉಪವಾಸ ಮಾಡಿದ್ದೇ ಅನುಮಾನ: ವೀರಪ್ಪ ಮೊಯ್ಲಿ

    11 ದಿನಗಳ ಕಾಲ ಮೋದಿ ಉಪವಾಸ ಮಾಡಿದ್ದೇ ಅನುಮಾನ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಅಯೋಧ್ಯೆ (Ayodhya) ರಾಮಮಂದಿರ (Ram Mandir) ಲೋಕಾರ್ಪಣೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) 11 ದಿನಗಳ ಕಾಲ ಉಪವಾಸ (Fasting) ವ್ರತ ಮಾಡಿದ್ದೇ ಅನುಮಾನ ಎಂದು ಮಾಜಿ ಸಿಎಂ ವೀರಪ್ಪಮೊಯ್ಲಿ (Veerappa Moily) ಅನುಮಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಕಾಂಗ್ರೆಸ್ (Congress) ವತಿಯಿಂದ ಪ್ರತಿಭಟನೆ ನಡೆಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರೀ ಎಳನೀರು ಕುಡಿದು ಉಪವಾಸ ಮಾಡಿದ್ರೆ ಮನುಷ್ಯ ಒಂದೆರೆಡು ದಿನದಲ್ಲಿ ಕೆಳಗೆ ಬೀಳುತ್ತಾನೆ. 11 ದಿನಗಳ ಕಾಲ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿಯವರು ಬೀದಿ ಬೀದಿಯಲ್ಲಿ ರಾಮನನ್ನು ಆಟ ಆಡಿಸಿದ್ದಾರೆ: ಮಧು ಬಂಗಾರಪ್ಪ

    ನಾನು ಬೆಳಗ್ಗೆ ವಾಕಿಂಗ್ ಮಾಡಬೇಕಾದರೆ ವೈದ್ಯರ ಬಳಿ ಈ ಬಗ್ಗೆ ಚರ್ಚೆ ಮಾಡಿದೆ. ವೈದ್ಯರ ಅಭಿಪ್ರಾಯದ ಪ್ರಕಾರ ಮನುಷ್ಯ ಬದುಕೋದು ಅಸಾಧ್ಯ. ಹಾಗಾಗಿ ನರೇಂದ್ರ ಮೋದಿಯವರು ಉಪವಾಸ ವ್ರತ ಮಾಡಿರೋದು ಅನುಮಾನ. ಹಾಗೆ ಉಪವಾಸ ಮಾಡದೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ರೆ ಆ ಕ್ಷೇತ್ರಕ್ಕೆ ಎಷ್ಟು ಪಾವಿತ್ರತ್ಯತೆ ಬರಲಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನನಗೆ ರಾಮನ ಬಗ್ಗೆ ಭಕ್ತಿ ಇಲ್ಲ, ಅಯೋಧ್ಯೆಗೆ ಹೋಗಲ್ಲ: ಪ್ರಿಯಾಂಕ್ ಖರ್ಗೆ

  • ನಿಜವಾದ ಬ್ರಾಹ್ಮಣರು, ಸ್ವಾಮೀಜಿಗಳು ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು: ವೀರಪ್ಪ ಮೊಯ್ಲಿ

    ನಿಜವಾದ ಬ್ರಾಹ್ಮಣರು, ಸ್ವಾಮೀಜಿಗಳು ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ನಿಜವಾದ ಬ್ರಾಹ್ಮಣರು-ಸ್ವಾಮೀಜಿಗಳು ಆಗಿದ್ರೆ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು (Narendra Modi) ಗರ್ಭಗುಡಿಗೆ ಬಿಡಬಾರದಿತ್ತು ಅಂತ ಮಾಜಿ ಸಿಎಂ ವೀರಪ್ಪಮೊಯ್ಲಿ (Veerappa Moily) ಹೇಳಿದರು.

    ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ (Congress) ವತಿಯಿಂದ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ರಾಮಮಂದಿರ ಅಪೂರ್ಣ ಮಂದಿರ. ಕೇವಲ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಮಾಡಿದ್ರೆ ಸಾಲದು. ಅಲ್ಲಿ ರಾಮ ಲಕ್ಷಣ, ಸೀತಾ ಹಾಗೂ ಆಂಜನೇಯನ ವಿಗ್ರಹಗಳು ಇರಬೇಕು ಆಗಲೇ ರಾಮಮಂದಿರ ಪೂರ್ಣ ಆಗೋದು ಎಂದರು.

    ಗುಜರಾತ್‍ನ (Gujrat) ಹತ್ಯಾಕಾಂಡದ ವೇಳೆ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ರಾಜಧರ್ಮ, ಕಾನೂನು ಪರಿಪಾಲನೆ ಮಾಡಲಿಲ್ಲ. ಅಂತಹ ನರೇಂದ್ರ ಮೋದಿಯವರಿಂದ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿಸಿದ್ದು ಎಷ್ಟು ಸರಿ..? ಅವರಿಂದ ದೇವಾಲಯಕ್ಕೆ ಎಷ್ಟು ಪಾವಿತ್ರತ್ಯತೆ ಬರಲಿದೆ..? ನರೇಂದ್ರ ಮೋದಿ ಗರ್ಭಗುಡಿಗೆ ಪ್ರವೇಶ ಮಾಡಿದ್ದೇ ತಪ್ಪು, ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಸಹ ತಪ್ಪು, ನಿಜವಾದ ಸ್ವಾಮೀಜಿಗಳು, ಬ್ರಾಹ್ಮಣರು ಆಗಿದ್ರೆ ನರೇಂದ್ರ ಮೋದಿಯನ್ನ ಗರ್ಭಗುಡಿ ಒಳಗೆ ಬಿಡಬಾರದಿತ್ತು ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!