Tag: veeram film

  • ಮಹಾಶಿವರಾತ್ರಿ ದಿನಕ್ಕೆ ಅನನ್ಯ ಭಟ್ ಹಾಡಿರುವ ಶಿವ ಶಿವ ಹಾಡು ರಿಲೀಸ್

    ಮಹಾಶಿವರಾತ್ರಿ ದಿನಕ್ಕೆ ಅನನ್ಯ ಭಟ್ ಹಾಡಿರುವ ಶಿವ ಶಿವ ಹಾಡು ರಿಲೀಸ್

    ಮತ್ತೊಂದು ಶಿವನ ಹಾಡಿಗೆ ಗಾಯಕಿ ಅನನ್ಯ ಭಟ್ ದನಿಯಾಗಿದ್ದಾರೆ. ಈಗಾಗಲೇ ‘ಸೋಜಿಗಾದ ಸೂಜಿ ಮಲ್ಲಿಗೆ’ ಹಾಡು ಕೋಟ್ಯಂತರ ಅಭಿಮಾನಿಗಳನ್ನು ತಲುಪಿದೆ. ಅದರಲ್ಲೂ ಜಗ್ಗಿ ವಾಸುದೇವ ಅವರ ಶಿವರಾತ್ರಿ ಕಾರ್ಯಕ್ರಮದಲ್ಲಿ ಈ ಭಕ್ತಿಗೀತೆಯನ್ನು ಹಾಡಿದ ನಂತರ ಅದು ಕರ್ನಾಟಕದಾಚೆಯೂ ಜನಪ್ರಿಯವಾಗಿತ್ತು. ಈಗ ಮತ್ತೊಂದು ಶಿವರಾತ್ರಿ ಬಂದಿದೆ. ಈ ಶಿವರಾತ್ರಿಗಾಗಿ ಅವರ ಕಂಠಸಿರಿಯಲ್ಲಿ ಮೂಡಿ ಬಂದ ‘ಶಿವ ಶಿವ’ ಹಾಡು ಫೆ.28ರಂದು ರಿಲೀಸ್ ಆಗುತ್ತಿದೆ. ಇದನ್ನೂ ಓದಿ : ನಟ ಚೇತನ್ ಬಂಧನ ಅಕ್ರಮ: ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ

    ಅಂದಹಾಗೆ ಈ ಗೀತೆಯು ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಚಿತ್ರದಲ್ಲಿದ್ದು, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಮೂಡಿ ಬಂದಿದೆ. ಅನೂಪ್ ಸೀಳೀನ್ ಇದರ ಸಂಗೀತ ನಿರ್ದೇಶಕರು. ಇದನ್ನೂ ಓದಿ : ಕೆಜಿಎಫ್ 2 ನಿರ್ಮಾಪಕರಿಗೇ ಚಮಕ್ ಕೊಟ್ಟ ಫ್ಯಾನ್ಸ್ : ಮೋದಿ ಪತ್ರದ ಅಸಲಿಯತ್ತೇನು?

    “ಚಿತ್ರಕಥೆಗೂ ಮತ್ತು ಹಾಡಿಗೂ ಸಂಬಂಧವಿದೆ. ನಾಯಕನ ಸಹೋದರಿ ಶಿವನ ಭಕ್ತೆ. ಆಕೆ ಎದುರಿಸುವ ಕಷ್ಟಕ್ಕೆ ಶಿವ ಸ್ಪಂದಿಸಲಿಲ್ಲ ಎನ್ನುವ ನೋವಿಗಾಗಿ ಹಾಡಿದ ಗೀತೆ ಇದಾಗಿದೆ’ ಅಂತಾರೆ ಶಶಿಧರ್ ಕೆ.ಎಂ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಹತ್ತು ಹಲವು ವಿಶೇಷತೆಗಳನ್ನು ಹೊತ್ತು ಬರುತ್ತಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ಡಾ.ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ನಟಿಸಿದ್ದಾರೆ. ಸಿನಿಮಾದ ಟೈಟಲ್ ಹೇಳುವಂತೆ ವೀರನಾಗಿಯೇ ಪ್ರಜ್ವಲ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ಜತೆಯಾಗಿ ರಚಿತಾ ರಾಮ್ ನಟಿಸಿದ್ದು, ಹಿರಿಯ ನಟಿ ಶ್ರುತಿ ಸೇರಿದಂತೆ ಹೆಸರಾಂತ ತಾರಾ ಬಳಗವೇ ಸಿನಿಮಾದಲ್ಲಿದೆ. ಕುಮಾರ್ ರಾಜ್ ಈ ಸಿನಿಮಾದ ನಿರ್ದೇಶಕರು.