Tag: veerakandiga film

  • ಅನ್ಯಧರ್ಮದ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸಿದ್ದಕ್ಕೆ ವಿಷಾದವಿದೆ: ‘ವೀರ ಕನ್ನಡಿಗ’ ನಟಿ

    ಅನ್ಯಧರ್ಮದ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸಿದ್ದಕ್ಕೆ ವಿಷಾದವಿದೆ: ‘ವೀರ ಕನ್ನಡಿಗ’ ನಟಿ

    ನ್ನಡದ ‘ವೀರ ಕನ್ನಡಿಗ’ ನಟಿ ಅನಿತಾ ಹಸನಂದಾನಿ (Anita hassanandani) ಅವರು ರೋಹಿತ್ ರೆಡ್ಡಿ ಜೊತೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಮದುವೆಗೂ ಮುನ್ನ ಪ್ರೀತಿಸಿದ ಅನ್ಯಧರ್ಮದ ಹುಡುಗನ ಜೊತೆಗಿನ ಬ್ರೇಕಪ್ (Breakup) ಬಗ್ಗೆ ಮಾತನಾಡಿದ್ದಾರೆ. ಅನ್ಯಧರ್ಮದ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸಿದ್ದಕ್ಕೆ ವಿಷಾದವಿದೆ ಎಂದು ನಟಿ ಹೇಳಿದ್ದಾರೆ. ಇದನ್ನೂ ಓದಿ:ತಿರುಪತಿ ಲಡ್ಡು ವಿವಾದ: ತಿಮ್ಮಪ್ಪನ ಕ್ಷಮೆ ಕೋರಿ 11 ದಿನಗಳ ಉಪವಾಸ ಕೈಗೊಂಡ ಪವನ್ ಕಲ್ಯಾಣ್

    ಅನಿತಾ ಈ ಹಿಂದಿನ ಪ್ರೇಮಕಥೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ನನ್ನ ಬದುಕಿನಲ್ಲಿ ಬಂದ ಕೆಲವು ಪ್ರಮುಖ ವ್ಯಕ್ತಿಗಳ ಪೈಕಿ ಎಜಾಜ್ ಖಾನ್ ಕೂಡ ಒಬ್ಬರು, ನಾನು ಅವರನ್ನು ಹುಚ್ಚಿಯಂತೆ ಪ್ರೀತಿ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ ನಮ್ಮ ಪ್ರೀತಿಗೆ ಧರ್ಮ ಅಡ್ಡಿ ಬಂತು, ನನ್ನ ತಾಯಿ ನಮ್ಮ ಸಂಬಂಧಕ್ಕೆ ವಿರುದ್ಧವಾಗಿದ್ದರು ಎಂದು ಹೇಳಿದ್ದಾರೆ. ಅವನು ಮುಸ್ಲಿಂ ಮತ್ತು ನಾನು ಹಿಂದೂ ನಮ್ಮ ನಡುವೆ ಪರಸ್ಪರ ಕಾಳಜಿ ಇತ್ತು ಆದರೂ ಸಂಬಂಧ ಉಳಿಯಲಿಲ್ಲ. ಅಂದು ಎಜಾಜ್ ಅವರಿಂದ ದೂರವಾಗುವುದು ತುಂಬಾ ಕಷ್ಟವಾಗಿತ್ತು. ಆ ನೋವಿನಿಂದ ಹೊರಬರಲು ನನಗೆ ಒಂದು ವರ್ಷವೇ ಬೇಕಾಯಿತು ಎಂದು ಹೇಳಿದ್ದಾರೆ.

    ಯಾರಾದರೂ ನಿಮ್ಮನ್ನು ಬದಲಾಯಿಸಲು ಪ್ರಯತ್ನ ಮಾಡಿದರೆ ಅದು ಪ್ರೀತಿ ಅಲ್ಲವೇ ಅಲ್ಲ ಎಂದಿದ್ದಾರೆ ಅನಿತಾ. ನಾನು ಅವನಿಗೋಸ್ಕರ ನನ್ನನ್ನು ತುಂಬಾ ಬದಲಿಸಿಕೊಂಡಿದ್ದೆ ಎಂದಿದ್ದಾರೆ. ಕೈತುಂಬಾ ಅವಕಾಶಗಳಿರುವ ಸಮಯದಲ್ಲಿ ಆ ವ್ಯಕ್ತಿಗೋಸ್ಕರ ನಾನು ಎಲ್ಲವನ್ನೂ ತ್ಯಾಗ ಮಾಡಿದೆ. ಈ ವಿಚಾರದಲ್ಲಿ ನನಗೆ ಈಗಲೂ ಬೇಸರವಿದೆ ಎಂದು ಕೂಡ ಹೇಳಿದ್ದಾರೆ. ಪ್ರೀತಿಸುವ ವ್ಯಕ್ತಿಗಾಗಿ ನಾವು ನಮ್ಮನ್ನು ಬದಲಿಸಿಕೊಳ್ಳಬಾರದು. ಬದಲಾಯಿಸಲು ಪ್ರಯತ್ನ ಮಾಡುವವರ ಜೊತೆ ನಾವು ಯಾವತ್ತೂ ಕೂಡ ಇರಬಾರದು ಎಂದಿದ್ದಾರೆ.

    ಅಂದಹಾಗೆ, ಜನಪ್ರಿಯ ಹಿಂದಿ ಸೀರಿಯಲ್ ‘ಕಾವ್ಯಾಂಜಲಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಅನಿತಾ ನಟಿಸಿದ್ದರು. ಇದೇ ಸೀರಿಯಲ್‌ನ ಸಹನಟ ಎಜಾಜ್ ಖಾನ್ ಜೊತೆ ಅನಿತಾಗೆ ಲವ್ ಆಗಿತ್ತು. ವೈಯಕ್ತಿಕ ಕಾರಣಗಳಿಂದ 2007ರಲ್ಲಿ ಇಬ್ಬರೂ ದೂರವಾದರು. ಬಳಿಕ 2013ರಲ್ಲಿ ರೋಹಿತ್ ರೆಡ್ಡಿ ಜೊತೆ ನಟಿ ಮದುವೆಯಾದರು. ಇದೀಗ ಇಬ್ಬರ ದಾಂಪತ್ಯಕ್ಕೆ ಗಂಡು ಮಗು ಸಾಕ್ಷಿಯಾಗಿದ್ದಾನೆ.

  • 8 ವರ್ಷಗಳ ಬಳಿಕ ಟಾಲಿವುಡ್‌ಗೆ ಕಮ್‌ಬ್ಯಾಕ್ ಆದ ‘ವೀರಕನ್ನಡಿಗ’ ನಟಿ

    8 ವರ್ಷಗಳ ಬಳಿಕ ಟಾಲಿವುಡ್‌ಗೆ ಕಮ್‌ಬ್ಯಾಕ್ ಆದ ‘ವೀರಕನ್ನಡಿಗ’ ನಟಿ

    ಬಾಲಿವುಡ್ ನಟಿ ಅನಿತಾ ಹಸ್ಸನಂದನಿ (Anita Hassanandani) ಇದೀಗ ಬರೋಬ್ಬರಿ 8 ವರ್ಷಗಳ ನಂತರ ತೆಲುಗಿಗೆ ಕಮ್‌ಬ್ಯಾಕ್ ಆಗುತ್ತಿದ್ದಾರೆ. ತೆಲುಗಿನ (Tollywood) ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಮತ್ತೆ ದಕ್ಷಿಣ ಭಾರತಕ್ಕೆ ‘ವೀರಕನ್ನಡಿಗ’ ನಟಿ ಅನಿತಾ ಲಗ್ಗೆ ಇಡುತ್ತಿದ್ದಾರೆ.

    ‘ಓ ಭಾಮಾ ಅಯ್ಯೋ ರಾಮ’ (Oh Bhama Ayyo Rama Film) ಚಿತ್ರದ ಮೂಲಕ ಅನಿತಾ ಟಾಲಿವುಡ್ ಅಂಗಳಕ್ಕೆ ರೀಎಂಟ್ರಿ ಕೊಡುತ್ತಿದ್ದಾರೆ. ತೆಲುಗು ನಟ ಸುಹಾಸ್ (Actor Suhas) ಮತ್ತು ಮಾಳವಿಕಾ ಮನೋಜ್ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಕಾರ್ಯಕ್ರಮವು ಹೈದರಾಬಾದ್ ಸರಳವಾಗಿ ಜರುಗಿದೆ.

    ಇನ್ನೂ ನಟಿ ಅನಿತಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಪಕ್ಕಾ ಲವ್ ಸ್ಟೋರಿಯಾಗಿದ್ದು, ಅನಿತಾ ಪಾತ್ರದಿಂದ ಚಿತ್ರದಲ್ಲಿ ಟ್ವಿಸ್ಟ್ ಸಿಗಲಿದೆಯಂತೆ. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಇರುವ ಪ್ರಾಮುಖ್ಯತೆ ನೋಡಿ ಇಷ್ಟವಾಗಿ ಸಿನಿಮಾಗೆ ಓಕೆ ಹೇಳಿದ್ರಂತೆ ಅನಿತಾ. ಇನ್ನೂ ಈ ಚಿತ್ರವನ್ನು ರಾಮ್ ಗೋಧಾಲ ನಿರ್ದೇಶನ ಮಾಡುತ್ತಿದ್ದಾರೆ. ಹರೀಶ್ ನಲ್ಲ ಮತ್ತು ಪ್ರದೀಪ್ ತಲ್ಲಪು ರೆಡ್ಡಿ ಚಿತ್ರವನ್ನು ನಿರ್ಮಾಣ ಹೊಣೆ ಹೊತ್ತಿದ್ದಾರೆ.

    ಕನ್ನಡದ ‘ವೀರಕನ್ನಡಿಗ’ (Veerakandiga) ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ (Puneethrajkumar) ಅನಿತಾ ನಾಯಕಿಯಾಗಿದ್ದರು. ಗಂಡುಗಲಿ ಕುಮಾರರಾಮ, ಹುಡುಗ ಹುಡುಗಿ ಸಿನಿಮಾದಲ್ಲಿ ಅನಿತಾ ನಟಿಸಿದ್ದಾರೆ.