Tag: veera simha reddy

  • ಸೌಂದರ್ಯ ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮೊರೆ ಹೋಗಿದ್ರಾ ಹನಿ ರೋಸ್?‌ ನಟಿ ಸ್ಪಷ್ಟನೆ

    ಸೌಂದರ್ಯ ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮೊರೆ ಹೋಗಿದ್ರಾ ಹನಿ ರೋಸ್?‌ ನಟಿ ಸ್ಪಷ್ಟನೆ

    ತೆಲುಗು- ಮಲಯಾಳಂ (Malyalam) ಸಿನಿಮಾರಂಗದಲ್ಲಿ ಆಕ್ಟೀವ್ ಆಗಿರುವ ಹನಿ ರೋಸ್ (Honey Rose) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ತಮ್ಮ ಮುಖಕ್ಕೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಟೀಕೆ ಎದುರಾಗಿದೆ. ಅದಕ್ಕೆ ಸ್ವತಃ ನಟಿ ಹನಿ ಉತ್ತರ ನೀಡಿದ್ದಾರೆ.

    ಮಾನಸ್ಟರ್, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ (Veera Simha Reddy) ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ (Balayya) ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ. ನೋಡಲು ಫಿಟ್ ಮತ್ತು ಮುದ್ದಾಗಿರೋ ಹನಿ ರೋಸ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದಕ್ಕೆ ಅವರು ಇಷ್ಟು ಮುದ್ದಾಗಿ ಕಾಣ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡಿತ್ತು. ಅದಕ್ಕೆಲ್ಲಾ ನಟಿ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ಫೇಸ್ ಸರ್ಜರಿ ಟೀಕೆ ಉತ್ತರ ನೀಡಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಕೀರ್ತಿ ಪಾತ್ರಕ್ಕೆ ಗುಡ್ ಬೈ ಹೇಳಿದ ತನ್ವಿ ರಾವ್

    ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ಹನಿ, ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಗಮನ ಸೆಳೆಯುತ್ತಿರುತ್ತಾರೆ. ಅವರ ಬೋಲ್ಡ್ ಫೋಟೋಗಾಗಿಯೇ ಕಾಯುವ ಫ್ಯಾನ್ಸ್ ಇದ್ದಾರೆ. ಹನಿ ರೋಸ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದೇ ಅವರ ಸೀಕ್ರೆಟ್ ಎಂದು ಅನೇಕರು ಆರೋಪಿಸಿದ್ರು. ಈಗ ನಟಿ ತಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನಗೆ ದೇವರು ಈ ಅಂದ ಕೊಟ್ಟಿದ್ದು ಬಿಟ್ರೆ ಬೇರೇನೂ ಇಲ್ಲ ಎಂದಿದ್ದಾರೆ. ನಾನು ಯಾವುದೇ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸದ್ಯ ‘ರಾಚೆಲ್’ (Rachel) ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಿನ್ನವಾಗಿರುವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಟಿ ಫಸ್ಟ್ ಲುಕ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಕನ್ನಡ, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ರಾಚೆಲ್ ಸಿನಿಮಾ ಮೂಡಿ ಬರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೌಂದರ್ಯವಿದ್ದರೂ ಅವಕಾಶವಿಲ್ಲ ಎಂದ ಹನಿ ರೋಸ್ ಫ್ಯಾನ್ಸ್

    ಸೌಂದರ್ಯವಿದ್ದರೂ ಅವಕಾಶವಿಲ್ಲ ಎಂದ ಹನಿ ರೋಸ್ ಫ್ಯಾನ್ಸ್

    ನ್ನ ಬ್ಯೂಟಿಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಹನಿ ರೋಸ್ (Honey Rose) ಗೆ ಅವಕಾಶಗಳೇ ಇಲ್ಲವಂತೆ. ಸಖತ್ ಬೋಲ್ಡ್ ಆಗಿರುವಂತಹ ಪಾತ್ರಗಳನ್ನು ಮಾಡಿದರೂ ಅವರಿಗೆ ಅವಕಾಶ ಯಾಕೆ ಹುಡುಕಿಕೊಂಡು ಬರುತ್ತಿಲ್ಲ ಎನ್ನುವುದು ಅವರ ಅಭಿಮಾನಿಗಳ ಚಿಂತೆಯಾಗಿದೆ.

    ಸದಾ ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಾಕುತ್ತಾ, ಅಭಿಮಾನಿಗಳ ಕಾಮೆಂಟ್ ಗಳನ್ನು ಎಂಜಾಯ್ ಮಾಡುವ  ಹನಿ ರೋಸ್, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.  ಬಾಲಕೃಷ್ಣ (Balakrishna) ಜೊತೆ ನಟಿಸಿದ್ದ ವೀರ ಸಿಂಹ ರೆಡ್ಡಿ ಚಿತ್ರ ಭಾರೀ ಗೆಲುವು ಕಂಡಿದೆ. ಆದರೂ, ಹನಿಗೆ ಅವಕಾಶವಿಲ್ಲವಂತೆ.

    ಸೌಂದರ್ಯದ ಜೊತೆಗೆ ಪ್ರತಿಭೆಯೂ ಇದೆ. ಆದರೂ, ಸಿನಿಮಾ ರಂಗ ನಿಮ್ಮನ್ನು ಗುರುತಿಸುತ್ತಿಲ್ಲವಲ್ಲ ಯಾಕೆ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದಾನೆ. ನಿಮ್ಮನ್ನು ಕೇವಲ ಐಟಂ ಸಾಂಗ್ ಗೆ ಮಾತ್ರ ಸೀಮಿತ ಮಾಡಿದ್ದಾರಾ ಎನ್ನುವ ಪ್ರಶ್ನೆಯನ್ನೂ ಹಾಕಿದ್ದಾರೆ. ಇದನ್ನೂ ಓದಿ: ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

    ಹನಿ ರೋಸ್ ಅವಕಾಶಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳೇ ನಟಿಗೆ ಎದುರಾಗಿವೆ. ನಿರ್ದೇಶಕರ ಜೊತೆ ಕಿರಿಕ್ ಏನಾದರೂ ಮಾಡಿಕೊಂಡಿದ್ದೀರಾ? ಅದಕ್ಕಾಗಿ ಅವಕಾಶಗಳು ನಿಮ್ಮಿಂದ ದೂರವಾಗುತ್ತಿದ್ದಾವಾ ಎನ್ನುವ ಅನುಮಾನವನ್ನೂ ಕೆಲವರು ವ್ಯಕ್ತ ಪಡಿಸಿದ್ದಾರೆ.

    ಸೌಂದರ್ಯದ ಗಣಿಯೇ ಆಗಿರುವ ಹನಿಗೆ ತೂಕ ಇಳಿಸಿಕೊಳ್ಳುವಂತೆ ಕೆಲವರು ಸಲಹೆ ನೀಡಿದ್ದಾರೆ. ತೂಕ ಇಳಿಸಿಕೊಂಡರೆ ನಿರ್ದೇಶಕರು ನಿಮ್ಮನ್ನು ಕರೆಯಬಹುದು ಅನಿಸತ್ತೆ. ಅದೊಂದು ಸಲ ಟ್ರೈ ಮಾಡಿ ಎಂದು ಕೆಲವರು ಬಿಟ್ಟಿ ಸಲಹೆ ನೀಡಿದ್ದಾರೆ.

  • ಬಾಲಯ್ಯ ಮುಂದೆ ಅಬ್ಬರಿಸಲು ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಬಾಲಯ್ಯ ಮುಂದೆ ಅಬ್ಬರಿಸಲು ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಸ್ಯಾಂಡಲ್‌ವುಡ್ (Sandalwood) `ಕರಿಯ’ ದುನಿಯಾ ವಿಜಯ್ 49ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸ್ಪೆಷಲ್ ಡೇ ವೇಳೆ ದುನಿಯಾ ವಿಜಯ್ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿವೊಂದು ಹೊರಬಿದ್ದಿದೆ. ಸೂಪರ್ ಸ್ಟಾರ್ ಬಾಲಯ್ಯ (Balayya) ಮುಂದೆ ಅಬ್ಬರಿಸಲು ದುನಿಯಾ ವಿಜಯ್ (Duniya Vijay) ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ.

    ಕನ್ನಡ ಚಿತ್ರರಂಗದ `ಸಲಗ’ (Salaga) ದುನಿಯಾ ವಿಜಯ್‌ಗೆ ಯಾವುದೇ ಪಾತ್ರ ಕೊಟ್ಟರು ಅಚ್ಚುಕಟ್ಟಾಗಿ ನಿಭಾಯಿಸುವ ಪ್ರತಿಭಾನ್ವಿತ ನಟ, ಆಕ್ಟಿಂಗ್‌ಗೂ ಸೈ ಮತ್ತು ನಿರ್ದೇಶನಕ್ಕೂ ಜೈ ಎನಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ನಡುವೆ ದುನಿಯಾ ವಿಜಯ್ ಬಗ್ಗೆ ಅಚ್ಚರಿಯ ವಿಚಾರವೊಂದು ಸದ್ದು ಮಾಡ್ತಿದೆ.

    ಇತ್ತೀಚೆಗಷ್ಟೇ ತೆಲುಗಿನ `ವೀರಸಿಂಹ ರೆಡ್ಡಿ’ (Veera Simha Reddy) ಸಿನಿಮಾದಲ್ಲಿ ಬಾಲಯ್ಯ ಮುಂದೆ ಖಡಕ್ ಆಗಿ ಅಬ್ಬರಿಸಿದ್ದಾರೆ. ಸಿನಿಮಾಗೆ ಪ್ರಶಂಸೆಯ ಸುರಿಮಳೆಯೇ ಹರಿದು ಬರುತ್ತಿದೆ. ಪಕ್ಕದ ರಾಜ್ಯದ ಜೊತೆ ಕರ್ನಾಟಕದಲ್ಲೂ ಈ ಸಿನಿಮಾ ಸದ್ದು ಮಾಡ್ತಿದೆ. ಟಿಕೆಟ್ ಸೋಲ್ಡ್ ಔಟ್ ಆಗುತ್ತಿದೆ. ಇದನ್ನೂ ಓದಿ:`ಕಾಂತಾರ’ ಸಕ್ಸಸ್: ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ

    ಇನ್ನೂ ಸೂಪರ್ ಸ್ಟಾರ್ ಬಾಲಯ್ಯ ಮುಂದೆ ವಿಲನ್ ಆಗಿ ನಟಿಸಲು 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕನ್ನಡದಲ್ಲಿ ದೊಡ್ಡ ಹೀರೋ, ತೆಲುಗಿನಲ್ಲಿ ವಿಲನ್: ಬಾಲಯ್ಯ ಗುಣಗಾನ

    ಕನ್ನಡದಲ್ಲಿ ದೊಡ್ಡ ಹೀರೋ, ತೆಲುಗಿನಲ್ಲಿ ವಿಲನ್: ಬಾಲಯ್ಯ ಗುಣಗಾನ

    ನ್ನಡದ ಹೆಸರಾಂತ ನಟ ದುನಿಯಾ ವಿಜಯ್ (Duniya Vijay), ಇದೇ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ಬಂಪರ್ ಲಾಟರಿಯನ್ನೇ ಹೊಡೆದಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಹಾಗೂ ಅತೀ ನಿರೀಕ್ಷೆ ಹುಟ್ಟಿಸಿರುವ ಬಾಲಯ್ಯ (Balayya) ನಟನೆಯ ‘ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರದಲ್ಲಿ ಅವರು ವಿಲನ್ ಆಗಿ ನಟಿಸಿದ್ದು ಮೊನ್ನೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಅವರನ್ನು ಹಾಡಿ ಹೊಗಳಿದ್ದಾರೆ ಬಾಲಯ್ಯ.

    ತೆಲುಗು ಚಿತ್ರೋದ್ಯಮಕ್ಕೆ ದುನಿಯಾ ವಿಜಯ್ ಅವರನ್ನು ಪರಿಚಯಿಸಿದ ರೀತಿಗೆ ಸ್ವತಃ ವಿಜಯ್ ಅವರೇ ಭಾವುಕರಾಗಿದ್ದಾರೆ. ಟ್ರೈಲರ್ ರಿಲೀಸ್ ಮಾಡಿ ಮಾತನಾಡಿದ ಬಾಲಯ್ಯ, ‘ಇವರು ದುನಿಯಾ ವಿಜಯ್. ಕನ್ನಡ ಸಿನಿಮಾ ರಂಗದ ದೊಡ್ಡ ಹೀರೋ. ನಮ್ಮ ಮೇಲಿನ ಪ್ರೀತಿ, ವಿಶ್ವಾಸಕ್ಕೆ ವಿಲನ್ ಪಾತ್ರವಿದ್ದರೂ, ಮಾಡಿದ್ದಾರೆ. ದೊಡ್ಡ ನಟರು ಹೀಗೆ ಪಾತ್ರಗಳನ್ನು ಒಪ್ಪಿಕೊಳ್ಳುವುದು ನನಗಂತೂ ಅವರ ಮೇಲಿ ಮತ್ತಷ್ಟು ಅಭಿಮಾನ ಹೆಚ್ಚಿಸಿದೆ’ ಎಂದಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಟ್‌ ಆದಮೇಲೆ ಅವಳ ಬೆಲೆ ರೂಪೇಶ್‌ ಶೆಟ್ಟಿಗೆ ಗೊತ್ತಾಯ್ತು: ದೀಪಿಕಾ ದಾಸ್

    ಕಾರ್ಯಕ್ರಮದ ವೇದಿಕೆ ಹತ್ತುವ ಮುನ್ನವೂ ವಿಜಯ್ ಹತ್ತಿರಕ್ಕೆ ಬಂದ ಬಾಲಯ್ಯ, ಎರಡ್ಮೂರು ಬಾರಿ ತಬ್ಬಿಕೊಂಡು ಗೌರವ ಸೂಚಿಸಿದರು. ಅತೀ ಆತ್ಮೀಯವಾಗಿಯೇ ವಿಜಯ್ ಜೊತೆ ಮಾತನಾಡಿದರು. ಅಂದಹಾಗೆ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ವಿಜಯ್ ವಿಭಿನ್ನ ಪಾತ್ರ ಮಾಡಿದ್ದಾರಂತೆ. ಸಿನಿಮಾ ಪೂರ್ತಿ ಇರಲಿದ್ದಾರಂತೆ. ಚಿತ್ರದಲ್ಲಿ ಅದೊಂದು ಮಹತ್ವದ ಪಾತ್ರ ಎಂದು ಸ್ವತಃ ಬಾಲಯ್ಯ ಅವರೇ ಮಾತನಾಡಿದ್ದಾರೆ.

    ಅಂದಹಾಗೆ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರದ್ದು ಪ್ರತಾಪ್ ರೆಡ್ಡಿ ಹೆಸರಿನ ಪಾತ್ರ. ಗೋಪಿಚಂದ್ ಮಲಿನೇನಿ (Gopichand Malineni) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ, ವರಲಕ್ಷ್ಮಿ ಶರತ್ ಕುಮಾರ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ. ಇಂಥದ್ದೊಂದು ಪಾತ್ರವನ್ನು ತಮಗೆ ಕೊಟ್ಟಿದ್ದಕ್ಕೆ ದುನಿಯಾ ವಿಜಯ್, ತಂಡಕ್ಕೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಯ್ಯನ ಸಿನಿಮಾ ಪ್ರೀರಿಲೀಸ್ ಇವೆಂಟ್‌ಗೆ ಬ್ರೇಕ್ ಹಾಕಿದ ಸರ್ಕಾರ

    ಬಾಲಯ್ಯನ ಸಿನಿಮಾ ಪ್ರೀರಿಲೀಸ್ ಇವೆಂಟ್‌ಗೆ ಬ್ರೇಕ್ ಹಾಕಿದ ಸರ್ಕಾರ

    `ಅಖಂಡ’ (Akanda) ಸಿನಿಮಾದ ಸಕ್ಸಸ್ ನಂತರ `ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರದ ಮೂಲಕ ಬಾಲಯ್ಯ ಸದ್ದು ಮಾಡ್ತಿದ್ದಾರೆ. ಈ ಸಿನಿಮಾ ರಿಲೀಸ್ ಬೆನ್ನಲ್ಲೇ ಬಾಲಯ್ಯ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಈ ಚಿತ್ರದ ಪ್ರೀರಿಲೀಸ್‌ ಕಾರ್ಯಕ್ರಮಕ್ಕೆ ಸರ್ಕಾರ ಬ್ರೇಕ್‌ ಹಾಕಿದೆ.

    ಆಂಧ್ರ ಪ್ರದೇಶದಲ್ಲಿ ಸಿನಿಮಾ ಮತ್ತು ರಾಜಕೀಯ ಎರಡು ಒಟ್ಟಿಗೆ ಬೆರೆತು ಹೋಗಿದೆ. ಈಗ ರಾಜಕೀಯದವರು ಸಿನಿಮಾದವರ ವಿರುದ್ಧ ರಾಜಕೀಯ ಮಾಡ್ತಿದ್ದಾರೆ. ಸಿಎಂ ಜಗನ್ (Chief Minister Jagan) ಸರ್ಕಾರಕ್ಕೆ ಸಿನಿಮಾ ರಂಗದವರ ಮೇಲೆ ಅದೇನೋ ಸಿಟ್ಟಿದ್ದಂತಿದೆ. ಈ ಹಿಂದೆ ಪವನ್ ಕಲ್ಯಾಣ್ (Pawan Kalyan) ಅವರ ಸಿನಿಮಾಗಳ ವಿರುದ್ಧ ಸಮರ ನಡೆಸಿದ ಜಗನ್, ಈಗ ನಂದಮೂರಿ ಬಾಲಕೃಷ್ಣ ಚಿತ್ರದ ವಿರುದ್ಧ ತಮ್ಮ ರಾಜಕೀಯ ವರಸೆಗಳನ್ನು ಪ್ರಯೋಗಿಸುತ್ತಿದ್ದಾರೆ. ಟಿಡಿಪಿ ಪಕ್ಷದ ಶಾಸಕರೂ ಆಗಿರುವ ಬಾಲಯ್ಯ ಅವರ ಹೊಸ ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ರೆಡಿಯಾಗಿದೆ. `ಅಖಂಡ’ ಸೂಪರ್ ಸಕ್ಸಸ್ ನಂತರ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಂಧ್ರದಲ್ಲಿ ಜಗನ್ ಸರ್ಕಾರ ಅನುಮತಿ ನಿರಾಕರಿಸಿದೆ.

    ನಂದಮೂರಿ ಬಾಲಕೃಷ್ಣ ನಟನೆಯ `ವೀರ ಸಿಂಹ ರೆಡ್ಡಿ’  (Veera Simha Reddy) ಸಿನಿಮಾವು ಜನವರಿ 12ರಂದು ತೆರೆಗೆ ಬರಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಆಂಧ್ರದ ಒಂಗೋಲು ಪಟ್ಟಣದ ಎಬಿಎಂ ಗ್ರೌಂಡ್‌ನಲ್ಲಿ ಆಯೋಜಿಸಲು ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ (Mytri Movie Makers) ಸಿದ್ಧರಾಗಿದ್ದರು. ಕಳೆದ ಎರಡು ದಿನಗಳಿಂದ ಪ್ರೀರಿಲೀಸ್‌ಗಾಗಿ ಸಿದ್ಧತೆಯೂ ಭರದಿಂದ ಸಾಗಿತ್ತು. ಮೈದಾನವನ್ನು ಸಜ್ಜು ಮಾಡಲಾಗುತ್ತಿತ್ತು. ಭಾರಿ ಸಂಖ್ಯೆಯಲ್ಲಿ ಪಾಸುಗಳನ್ನು ಪ್ರಿಂಟ್ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ. ಇದನ್ನೂ ಓದಿ:ರೆಸಾರ್ಟ್‌ನಲ್ಲಿ ರೂಪೇಶ್- ಸಾನ್ಯ ಸಂಬಂಧ ಸ್ಟ್ರಾಂಗ್ ಆಯ್ತು: ರಾಕೇಶ್ ಅಡಿಗ

    ಸಿನಿಮಾ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯ ಅಭಿಮಾನಿಗಳು ಜಮಾಯಿಸುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಲಿದೆ ಎಂಬ ಕಾರಣ ನೀಡಿ, ಕಾರ್ಯಕ್ರಮಕ್ಕೆ ತಡೆ ನೀಡಲಾಗಿದೆ. ಇವೆಂಟ್ ಮಾಡಲು ಅಧಿಕಾರಿಗಳು ಬೇರೇ ಜಾಗವನ್ನು ಸೂಚಿಸಿದ್ದಾರೆ. ಈ ಎಲ್ಲಾ ಅಡೆತಡೆ ಮೀರಿ ಬಾಲಯ್ಯ ಸಿನಿಮಾ ಕಾರ್ಯಕ್ರಮ ನಡೆಯುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ಟಸಿಂಹ ನಂದಮುರಿ ಬಾಲಕೃಷ್ಣ ಅಭಿನಯದ ಮಾಸ್ ಆಕ್ಷನ್ ಸಿನಿಮಾ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ಇಂದು ಬಿಡುಗಡೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಗೋಪಿಚಂದ್ ಮಲಿನೇನಿ ನಿರ್ದೇಶಿಸಿರುವ ಸಿನಿಮಾವಿದು. ಚಿತ್ರದಲ್ಲಿ ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಮಾಸ್ ಮಹರಾಜ ನಂದಮುರಿ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಬಾಲಯ್ಯ ಅಭಿಮಾನಿಗಳು ಈ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ಬಾಲಯ್ಯ ಮಾಸ್ ಅಭಿಮಾನಿಗಳ ಮನತಣಿಸಲು ಚಿತ್ರತಂಡ ‘ಜೈ ಬಾಲಯ್ಯ’ ಮಾಸ್ ಸಾಂಗ್ ಇಂದು ಬಿಡುಗಡೆ ಮಾಡಿದೆ.

    ಹೈದ್ರಾಬಾದ್ ನಲ್ಲಿ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಹಾಡಿನ ಮೂಲಕ ಸಿನಿರಸಿಕರ ಮನಗೆಲ್ಲಲು ಹೊರಟಿದೆ. ಚಿತ್ರದ ಮಾಸ್ ನಂಬರ್ ಸಾಂಗ್ ‘ಜೈ ಬಾಲಯ್ಯ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡಿದೆ. ರಾಮ್ ಜೋಗಯ್ಯ ಶಾಸ್ತ್ರಿ ಸಾಹಿತ್ಯಕ್ಕೆ ಕರಿಮುಲ್ಲ ದನಿಯಾಗಿದ್ದು, ತಮನ್ ಎಸ್ ಮಾಸ್ ಮ್ಯೂಸಿಕ್ ಕಿಕ್ ನೀಡಿದೆ. ಬಾಲಯ್ಯ ಅಭಿಮಾನಿಗಳು ಹಾಡು ಕೇಳಿ ಥ್ರಿಲ್ ಆಗಿದ್ದು, ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಆರು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಕೊಂಡಿದೆ. ಇದನ್ನೂ ಓದಿ: ಮತ್ತೆ ಕನ್ನಡಕ್ಕೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ: ʻಕೆಡಿ’ಯಲ್ಲಿ ಲೇಡಿ ಪವರ್

    2023ರ ಸಂಕ್ರಾಂತಿ ಹಬ್ಬಕ್ಕೆ ‘ವೀರ ಸಿಂಹ ರೆಡ್ಡಿ’ ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಶೃತಿ ಹಾಸನ್ ನಾಯಕಿಯಾಗಿ ನಟಿಸಿದ್ದು, ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್, ವರಲಕ್ಷ್ಮೀ ಶರತ್ ಕುಮಾರ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅದ್ದೂರಿ ಬ್ಯಾನರ್ ನಡಿ ಚಿತ್ರವನ್ನು ನವೀನ್ ಯಾರ್ನೇನಿ ಹಾಗೂ ವೈ.ರವಿ ಶಂಕರ್ ನಿರ್ಮಾಣ ಮಾಡಿದ್ದಾರೆ. ಸಾಯಿ ಮದೇವ್ ಸಂಭಾಷಣೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನವಿನ್ ನೂಲಿ ಸಂಕಲನ, ರಿಶಿ ಪುಂಜಾಬಿ ಕ್ಯಾಮೆರಾ ವರ್ಕ್, ರಾಮ್- ಲಕ್ಷ್ಮಣ್ ಹಾಗೂ ವೆಂಕಟ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪನ ವಯಸ್ಸಿನ ನಟನಿಗೆ ಮತ್ತೆ ನಾಯಕಿಯಾದ ಸೋನಾಕ್ಷಿ ಸಿನ್ಹಾ

    ಅಪ್ಪನ ವಯಸ್ಸಿನ ನಟನಿಗೆ ಮತ್ತೆ ನಾಯಕಿಯಾದ ಸೋನಾಕ್ಷಿ ಸಿನ್ಹಾ

    ಬಾಲಿವುಡ್ (Bollywood) ಬ್ಯೂಟಿ ಸೋನಾಕ್ಷಿ ಸಿನ್ಹಾ (Sonakshi Sinha) ಇದೀಗ ಸೌತ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಈ ಹಿಂದೆ ತಲೈವಾ ಜೊತೆ `ಲಿಂಗ'(Linga) ಚಿತ್ರದಲ್ಲಿ ಸೋನಾಕ್ಷಿ ನಟಿಸಿದ್ದರು. ಅಪ್ಪನ ವಯಸ್ಸಿನ ನಟನ ಜೊತೆ ಕಾಣಿಸಿಕೊಂಡಿದ್ದೀರಾ ಎಂದು ನಟಿಯನ್ನ ಸಖತ್ ಟ್ರೋಲ್ ಮಾಡಲಾಗಿತ್ತು. ಇದೀಗ ಮತ್ತೆ ಅಪ್ಪನ ವಯಸ್ಸಿನ ನಟನ ಜೊತೆ ಸೋನಾಕ್ಷಿ ಕಾಣಿಸಿಕೊಂಡಿದ್ದಾರೆ.

    ಸೋನಾಕ್ಷಿ ಕಡೆಯದಾಗಿ ಡಬಲ್ ಎಕ್ಸ್ಎಲ್ ಚಿತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಅಪ್ಪನ ವಯಸ್ಸಿನ ಸ್ಟಾರ್ ನಟನಿಗೆ ಸೋನಾಕ್ಷಿ ನಾಯಕಿಯಾಗ್ತಿದ್ದಾರೆ. 2014ರಲ್ಲಿ ರಜನಿಕಾಂತ್ ನಟನೆಯ ʻಲಿಂಗʼ ಚಿತ್ರದಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡಿದ್ದರು. ಅಂದು ಅಪ್ಪನ ವಯಸ್ಸಿನ ನಟನಿಗೆ ನಾಯಕಿನಾ ಅಂತಾ ನಟಿಯನ್ನ ಸಖತ್ ಟ್ರೋಲ್ ಮಾಡಲಾಗಿತ್ತು.

    ಬಳಿಕ ತಮಗಿಂತ ಜಾಸ್ತಿ ವಯಸ್ಸಿನ ಅಂತರ ಇರುವ ನಟನ ಜೊತೆ ಸೋನಾಕ್ಷಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ತನಗಿಂತ ಜಾಸ್ತಿ ವಯಸ್ಸಿನ ಅಂತರವಿರುವ ತೆಲುಗಿನ ಸ್ಟಾರ್ ನಟ ಬಾಲಯ್ಯ ಚಿತ್ರಕ್ಕೆ ಓಕೆ ಅಂದಿದ್ದಾರೆ. `ವೀರ ಸಿಂಹ ರೆಡ್ಡಿ’ ಸಿನಿಮಾಗೆ ಈ ನಟಿ ನಾಯಕಿ. ಈ ಮುನ್ನ ಬಾಲಯ್ಯ ಚಿತ್ರದಲ್ಲಿ ನಟಿಸಲ್ಲ ಎಂದು ನಿರ್ದೇಶಕರಿಗೆ ಹೇಳಿದ್ದರಂತೆ ಈಗ ಮತ್ತೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬಾದಷಾ ಶಾರುಖ್ ಖಾನ್ ನಿವಾಸದ ಗೇಟ್‌ಗೆ ವಜ್ರದ ಅಲಂಕಾರ

    ಮುಂದಿನ ತಿಂಗಳಿಂದ ಚಿತ್ರೀಕರಣ ಶುರುವಾಗಲಿದೆ. ಚಿತ್ರದ ಮತ್ತಷ್ಟು ಮಾಹಿತಿಯನ್ನ ಚಿತ್ರತಂಡವೇ ತಿಳಿಸಲಿದೆ.

    Live Tv
    [brid partner=56869869 player=32851 video=960834 autoplay=true]