ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ (Kiccha Sudeep) ನಟನೆಯ ‘ವೀರ ಮದಕರಿ’ (Veera Madakari) ಸಿನಿಮಾದಲ್ಲಿ ನಟಿಸಿದ್ದ ಬಾಲ ನಟಿ ಜೆರುಶಾ (Jerusha Christopher) ಈಗ ಚಿತ್ರರಂಗದಲ್ಲಿ ಹೀರೋಯಿನ್ (Heroine) ಆಗಿ ಮಿಂಚ್ತಿದ್ದಾರೆ. ಪವನ್ ಕಲ್ಯಾಣ್ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ಜೆರುಶಾ ನಟಿಸಿದ್ದಾರೆ.
ಸುದೀಪ್-ರಾಗಿಣಿ ನಟನೆಯ ‘ವೀರ ಮದಕರಿ’ ಸಿನಿಮಾದಲ್ಲಿ ಕಿಚ್ಚನ ಮಗಳಾಗಿ ಮುದ್ದಾಗಿ ಜೆರುಶಾ ನಟಿಸಿದ್ದರು. ಇದೀಗ 14 ವರ್ಷಗಳ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದೆ ಎಂದು ಜೆರುಶಾ ರಿವೀಲ್ ಮಾಡಿದ್ದಾರೆ. 50ಕ್ಕೂ ಆ್ಯಡ್ ಶೂಟ್‌ಗಳಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ಎದುರು ಅಬ್ಬರಿಸಲಿದ್ದಾರೆ ವಿಜಯ್ ಸೇತುಪತಿ
ಜೆರುಶಾ ಈ ಚೆಲುವೆ ಮೂಲತಃ ಬೆಂಗಳೂರಿನವರೇ. ಇತ್ತೀಚಿನ ಫಹಾದ್ ಫಾಸಿಲ್ ನಟನೆಯ ‘ಧೂಮಂ’ ಸಿನಿಮಾದಲ್ಲಿ ಜೆರುಶಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ತಮ್ಮ ಐಡೆಂಟಿಟಿಯನ್ನು ಯುವನಟಿ ರಿವೀಲ್ ಮಾಡಿದ್ದಾರೆ.
ಇದೀಗ ಜೆರುಶಾ ಸಖತ್ ಬೋಲ್ಡ್ & ಬ್ಯೂಟಿಫುಲ್ ಆಗಿದ್ದಾರೆ. ಮಾಲಿವುಡ್ ರಂಗದಲ್ಲಿ ನಾಯಕಿಯಾಗಿ ಗಮನ ಸೆಳೆಯುತ್ತಿದ್ದಾರೆ. ಸುದೀಪ್‌ಗೆ ನಾಯಕಿಯಾಗುವ ಮಟ್ಟಿಗೆ ಜೆರುಶಾ ಬೆಳೆದು ನಿಂತಿದ್ದಾರೆ. ಜೆರುಶಾ ಲುಕ್ ನೋಡಿ ಕಿಚ್ಚನ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಬಾಗಲಕೋಟೆ: ಕಳೆದ ಕೆಲವು ದಿನಗಳಿಂದ ರಾಜಕೀಯ ಅಖಾಡಕ್ಕಿಳಿದಿರುವ ನಟ ಕಿಚ್ಚ ಸುದೀಪ್ (Kiccha Sudeep) ಸ್ಟಾರ್ ಪ್ರಚಾರಕರಾಗಿ ಬಿಜೆಪಿ ಅಭ್ಯರ್ಥಿಗಳ (BJP Candidates) ಪರ ಪ್ರಚಾರ ನಡೆಸುತ್ತಿದ್ದಾರೆ.
ಮಂಗಳವಾರ ಬಾಗಲಕೋಟೆ (Bagalkot) ಜಿಲ್ಲೆಯ ಜಮಖಂಡಿ ನಗರ ಹಾಗೂ ಬೀಳಗಿ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದರು. ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಗುಡಗುಂಟಿ ಪರ, ರೋಡ್ ಶೋ ಆರಂಭಿಸಿದ ಕಿಚ್ಚ ಸುದೀಪ್, ನಗರದ ಕಟ್ಟೆ ಕೆರೆಯಿಂದ, ದೇಸಾಯಿ ಸರ್ಖ್ ವರೆಗೆ ರೋಡ್ ಶೋ ನಡೆಸಿದರು. ಬೀಳಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಪರವಾಗಿಯೂ ಪ್ರಚಾರ ನಡೆಸಿದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ ಹರಿಪ್ರಸಾದ್
ಕಿಚ್ಚ ಸುದೀಪ್ ಹೋದಲೆಲ್ಲಾ ರಸ್ತೆಯುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದಿದ್ದರು. ಬೀಳಗಿ ಕ್ಷೇತ್ರದ ಅಂಬೇಡ್ಕರ್ ವೃತ್ತದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಭಿಮಾನಿಗಳ ಒತ್ತಾಯದ ಮೇರೆಗೆ `ಸಾವು ಅಂದ್ರೆ ಭಯಪಡೋದಕ್ಕೆ ಗಲ್‌ಗಲ್ಲಿ ತಿರ್ಗೋ ಕಂತ್ರಿ, ಕಜ್ಜಿ ಗೂಂಡಾ ರೌಡಿ ಅನ್ಕೊಂಡ್ರೆನೋ ನನ್ನನ್ನ, ಮದಕರಿ…. ವೀರ ಮದಕರಿ…’ ಚಿತ್ರದ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ ಹರಿಪ್ರಸಾದ್
ಇದೇ ವೇಳೆ ಮಾತನಾಡಿ, ನೀವು ಮದಕರಿ ಡೈಲಾಗ್ ಕೇಳ್ತೀರಾ ಸರ್, ಆದ್ರೆ ನಾನು ಜಾತಿಯತೆ ಮಾಡ್ತೀನಿ ಅಂತಾರೆ, ಆದ್ರೆ ನಾವು ಸಿನೆಮಾರಂಗದವ್ರು. ಆದ್ರೆ ಮೂರು ಬಾರಿ ಗೆದ್ದಿರುವ ನಿರಾಣಿಯವರ ಮೇಲೆ ಜನರ ಪ್ರೀತಿ ಸಾಕಷ್ಟಿದೆ. 75 ಸಾವಿರ ಜನರಿಗೆ ನಿರಾಣಿಯವರು ಉದ್ಯೋಗ ನೀಡಿದ್ದಾರೆ. ಈ ಬಾರಿಯೂ ಬಹುಮತದಿಂದ ನಿರಾಣಿಯವರನ್ನ ಗೆಲ್ಲಿಸಿ ಅಂತಾ ಮನವಿ ಮಾಡಿದರು.
ಸ್ಯಾಂಡಲ್‌ವುಡ್‌ನ (Sandalwood) ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಸಿನಿಮಾಗಳ ಜೊತೆ ಆಗಾಗ ಫೋಟೋಶೂಟ್‌ನಿಂದ (Photoshoot) ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಮತ್ತೆ ಹೊಸ ಲುಕ್‌ನಲ್ಲಿ ನಟಿ ಕಂಗೊಳಿಸಿದ್ದಾರೆ.
ಸ್ಯಾಂಡಲ್ವುಡ್ (Sandalwood) ಬ್ಯೂಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸಿನಿಮಾಗಿಂತ ಫೋಟೋಶೂಟ್‌ನಲ್ಲಿ ನಟಿ ಮಿಂಚ್ತಿದ್ದಾರೆ.
ತುಪ್ಪದ ಬೆಡಗಿ ರಾಗಿಣಿ ಕನ್ನಡ, ಹಿಂದಿ, ಸೌತ್ ಸಿನಿಮಾಗಳು ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಆಲ್ಬಂ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿ ಅಭಿಮಾನಿಗಳ ಗಮನ ಸೆಳೆದಿದ್ದರು. ಇದೀಗ ರಾಗಿಣಿ ಬದಲಾಗಿದ್ದಾರೆ. ವರ್ಕೌಟ್ ಮತ್ತು ಬ್ಯೂಟಿಗೆ ನಟಿ ಆದ್ಯತೆ ಕೊಡುತ್ತಾರೆ.
ಸದ್ಯ ಹಳದಿ ಬಣ್ಣದ ಸೀರೆಯುಟ್ಟು ರಾಗಿಣಿ ಮಿಂಚಿದ್ದಾರೆ. ಸದಾ ಮಾಡರ್ನ್ ಲುಕ್‌ನಲ್ಲಿ ಹಾಟ್ ಹಾಟ್ ಆಗಿ ಪೋಸ್ ನೀಡುತ್ತಿದ್ದ ನಟಿ ಈಗ ಸಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಈ ಹೊಸ ಫೋಟೋಶೂಟ್ ನೆಟ್ಟಿಗರ ಗಮನ ಸೆಳೆದಿದೆ. ಶಿವರಾತ್ರಿ ಹಬ್ಬದ ವೇಳೆ ತೆಗೆದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಕೊಂಚ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಇನ್ನೇನು ಗೌರಿ ಗಣೇಶ ಹಬ್ಬ ಮುಗಿಯುತ್ತಲೇ ಆ ಚಿತ್ರದ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ. ರಾಬರ್ಟ್ ಜೊತೆಗೇ ಮತ್ತೊಂದಷ್ಟು ಚಿತ್ರಗಳೂ ಕೂಡಾ ದರ್ಶನ್ ಅವರ ಲಿಸ್ಟಿನಲ್ಲಿ ಸಾಲುಗಟ್ಟಿ ನಿಂತಿವೆ. ಹಾಗಿದ್ದರೂ ಕೂಡಾ ದರ್ಶನ್ ಮತ್ತೊಂದು ಚಿತ್ರವನ್ನೀಗ ಒಪ್ಪಿಕೊಂಡಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ.
ವರ್ಷಗಳ ಹಿಂದೆ ದರ್ಶನ್ ಅಭಿನಯ ತಾರಕ್ ಚಿತ್ರ ತೆರೆ ಕಂಡಿತ್ತು. ಆ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಮಿಲನ ಪ್ರಕಾಶ್. ಆ ಕಾಲಕ್ಕೆ ದರ್ಶನ್ ಪಕ್ಕಾ ಮಾಸ್ ಚಿತ್ರಗಳತ್ತಲೇ ಹೆಚ್ಚಾಗಿ ಒತ್ತು ನೀಡಿದ್ದರು. ಅಂಥಾ ಹೊತ್ತಿನಲ್ಲಿಯೇ ದರ್ಶನ್ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದ ಫ್ಯಾಮಿಲಿ ಸಬ್ಜೆಕ್ಟಿನ ಕಥೆಯೊಂದಿಗೆ ಪ್ರಕಾಶ್ ಮೋಡಿ ಮಾಡಿದ್ದರು. ಈ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಸೂಪರ್ ಹಿಟ್ ಆಗಿತ್ತು. ಅದರಲ್ಲಿನ ದರ್ಶನ್ ನಟನೆಯಂತೂ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿತ್ತು. ಹೀಗೆ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಕಾಶ್ ದರ್ಶನ್ ಅವರ ಮತ್ತೊಂದು ಚಿತ್ರ ನಿರ್ದೇಶನ ಮಾಡೋದು ಗ್ಯಾರೆಂಟಿ ಎನ್ನಲಾಗುತ್ತಿದೆ.
ಇದಕ್ಕೆ ದರ್ಶನ್ ಕಡೆಯಿಂದಲೇ ಒಪ್ಪಿಗೆ ಸಿಕ್ಕಿದೆಯಂತೆ. ಪ್ರಕಾಶ್ ಕೂಡಾ ಸಮರ್ಥ ತಂಡದೊಂದಿಗೆ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ತಯಾರಾಗಿದ್ದಾರೆ. ಸದ್ಯದಲ್ಲಿಯೇ ಟೈಟಲ್ ಲಾಂಚ್ ಮಾಡಿ, ಈ ಚಿತ್ರವನ್ನು ಅಧಿಕೃತಗೊಳಿಸಿ ನಂತರ ಉಳಿದ ಕೆಲಸ ಮಾಡೋ ನಿರ್ಧಾರ ಅವರದ್ದು. ಹಾಗಂತ ಈ ಚಿತ್ರ ಈ ಕೂಡಲೇ ಶುರುವಾಗುತ್ತೆ ಅಂತೇನಲ್ಲ. ದರ್ಶನ್ ಈಗ ರಾಬರ್ಟ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾದ ನಂತರ ಒಡೆಯ ಮತ್ತು ವೀರ ಮದಕರಿ ನಾಯಕ ಚಿತ್ರಗಳು ಅವರಿಗಾಗಿ ಕಾದಿವೆ. ಇದಾದ ನಂತರ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರ ಶುರುವಾಗಲಿದೆಯಂತೆ.
ಬೆಂಗಳೂರು: ಮದರಕರಿ ನಾಯಕನ ಕುರಿತ ಚಿತ್ರದಿಂದಾಗಿ ಸ್ಯಾಂಡಲ್‍ವುಡ್ ನಲ್ಲಿ ಜಾತಿಗಳ ಆರಂಭಗೊಂಡಿದ್ದು, ಈ ವಿವಾದಕ್ಕೆ ನಟ ಜಗ್ಗೇಶ್ ಟ್ವೀಟ್ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಟ ಜಗ್ಗೇಶ್ ಅವರು “ಶಾರದೆಯ ಕಲಾದೇಗುಲ ಚಿತ್ರರಂಗ ಜಾತಿ ರಹಿತ ಪುಣ್ಯಧಾಮ. ಕಲೆಗೆ ಜಾತಿಯಿಲ್ಲ. ವಿಶ್ವದಲ್ಲೇ ಜಾತಿ ಇಲ್ಲದೇ ಒಂದೆತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆಯ ಮಡಿಲು. ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ. ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆ ಬೇಡ. ವಿನಾಶಕಾಲಕ್ಕೆ ವಿಪರೀತಬುದ್ಧಿ. ಎಚ್ಚರವಾಗಿರಿ ಕಲಾಬಂಧುಗಳೇ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ಜಾತಿ ಜಗಳ – ವೀರ ಮದಕರಿ ಸಿನಿಮಾಗೆ ಮತ್ತೊಂದು ಸಂಕಷ್ಟ!
ವೀರ ಮದಕರಿ ಸಿನಿಮಾ ಸೆಟ್ಟೇರುವುದಕ್ಕೆ ಮೊದಲೇ ಈಗ ಜಾತಿ ವಿಚಾರದಲ್ಲಿ ಸಂಘರ್ಷ ಆರಂಭವಾಗಿದೆ. ಮದಕರಿ ನಾಯಕನ ಪಾತ್ರವನ್ನು ಸುದೀಪ್ ಮಾಡಬೇಕು ಅಂತ ವಾಲ್ಮೀಕಿ ಸಮುದಾಯ ಧ್ವನಿ ಎತ್ತಿತ್ತೋ ದರ್ಶನ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಸಿನಿಮಾಗೆ ಜಾತಿ ಸ್ಪರ್ಶ ಮಾಡುವುದು ಅದೆಷ್ಟು ಸರಿ? ಕಲೆಗೆ ಅದ್ಯಾವ ಜಾತಿ ಇದೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಘರ್ಷಕ್ಕೆ ಇಳಿದಿದ್ದಾರೆ.
ವೀರ ಮದಕರಿ ಸಿನಿಮಾ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಮುನಿರತ್ನ, ನಟ ದರ್ಶನ್ ಮತ್ತು ಸುದೀಪ್ ಸ್ಯಾಂಡಲ್ ವುಡ್‍ನ ದೊಡ್ಡ ನಟರು. ಚಿತ್ರರಂಗದ ನಟನರ ನಡುವೆ ಜಾತಿ ತರುವುದು ಬೇಡ. ಸುದೀಪ್ ಹಾಗೂ ದರ್ಶನ್ ನಡುವೆ ಮದಕರಿ ಚಿತ್ರ ವಿವಾದ ತಂದಿದೆ. ಕಲೆಗೆ ಜಾತಿ ಇಲ್ಲ, ಜಾತಿಯನ್ನು ಬಿಂಬಿಸುವುದು ತಪ್ಪು. ಸಿನಿಮಾಗೆ ಜಾತಿಯನ್ನು ತರಬಾರದು. ಕಲೆಯನ್ನು ಕಲೆಯಾಗಿ ನೋಡಬೇಕು. ರಾಜಕೀಯದಲ್ಲಿ ಜಾತಿ ಬಂದು ಹಾಳಾಗಿದೆ ಈಗ ಸಿನಿಮಾಕ್ಕೆ ಜಾತಿ ತರುವುದು ಬೇಡ. ರಾಜ್ ಕುಮಾರ್ ಅವರ ಕಾಲದಲ್ಲಿ ಅನೇಕ ಸಿನಿಮಾಗಳು ಬಂದಿತ್ತು. ಆಗ ಜಾತಿ ಇರಲಿಲ್ಲ ಈಗ ಜಾತಿಯ ನಂಟನ್ನು ತರಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಶಾರದೆಯ ಕಲಾದೇಗುಲ ಚಿತ್ರರಂಗ ಜಾತಿ ರಹಿತ ಪುಣ್ಯಧಾಮ! ಕಲೆಗೆ ಜಾತಿಯಿಲ್ಲ!ವಿಶ್ವದಲ್ಲೆ ಜಾತಿಇಲ್ಲದೆ ಒಂದೆತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆಮಡಿಲು!ಇಂಥಪವಿತ್ರ ಜಾಗದಲ್ಲಿ ಜಾತಿ ವಿಷಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ!ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆಬೇಡ! ವಿನಾಶಕಾಲಕ್ಕೆ ವಿಪರೀತಬುದ್ಧಿ! ಎಚ್ಚರವಾಗಿರಿ ಕಲಾಬಂಧುಗಳೆ..!! pic.twitter.com/cYjlEvsksD
ಬೆಂಗಳೂರು: ವೀರ ಮದಕರಿ ಸಿನಿಮಾ ಸೆಟ್ಟೇರುವುದಕ್ಕೆ ಮೊದಲೇ ಈಗ ಜಾತಿ ವಿಚಾರದಲ್ಲಿ ಸಂಘರ್ಷ ಆರಂಭವಾಗಿದೆ. ಇಷ್ಟು ದಿನ ಅಭಿಮಾನಿಗಳ ನಡುವೆ ಸಣ್ಣದಾಗಿ ಹೊತ್ತಿಕೊಂಡಿದ್ದ ಬೆಂಕಿಗೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಮಾತು ತುಪ್ಪ ಸುರಿದಂತಾಗಿದೆ.
ಮದಕರಿ ನಾಯಕನ ಪಾತ್ರವನ್ನು ಸುದೀಪ್ ಮಾಡಬೇಕು ಅಂತ ವಾಲ್ಮೀಕಿ ಸಮುದಾಯ ಧ್ವನಿ ಎತ್ತಿತ್ತೋ ದರ್ಶನ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಸಿನಿಮಾಗೆ ಜಾತಿ ಸ್ಪರ್ಶ ಮಾಡುವುದು ಅದೆಷ್ಟು ಸರಿ? ಕಲೆಗೆ ಅದ್ಯಾವ ಜಾತಿ ಇದೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಘರ್ಷಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದರ್ಶನ್, ಸುದೀಪ್- ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಾಲ್ಮೀಕಿ ಮಠದ ಪ್ರಸನ್ನಾಂದ ಸ್ವಾಮೀಜಿ, ಬೇರೆಯವರು ಸಿನಿಮಾ ಮಾಡುವುದರ ಬದಲು ನಮ್ಮ ಸಮುದಾಯದವರಾದ ಸುದೀಪ್ ಅವರೇ ಈ ಸಿನಿಮಾ ಮಾಡಬೇಕು. ಈ ಸಿನಿಮಾ ಸುದೀಪ್ ಅವರೇ ಮಾಡಬೇಕೆಂದು 7-8 ವರ್ಷದಿಂದ ನಾವು ಅವರನ್ನು ಒತ್ತಾಯಿಸುತ್ತಿದ್ದೇನೆ. ಹೀಗಿರುವಾಗ ರಾಕ್‍ಲೈನ್ ವೆಂಕಟೇಶ್ ಸಿನಿಮಾ ಮಾಡುತ್ತಿರುವುದಕ್ಕೆ ನನ್ನ ಅಸಮಾಧಾನವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದಚ್ಚು, ಕಿಚ್ಚ- ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದೇನು?
ವೀರ ಮದಕರಿ ಸಿನಿಮಾ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಮುನಿರತ್ನ, ನಟ ದರ್ಶನ್ ಮತ್ತು ಸುದೀಪ್ ಸ್ಯಾಂಡಲ್ ವುಡ್‍ನ ದೊಡ್ಡ ನಟರು. ಚಿತ್ರರಂಗದ ನಟರ ನಡುವೆ ಜಾತಿ ತರುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
ಸುದೀಪ್ ಹಾಗೂ ದರ್ಶನ್ ನಡುವೆ ಮದಕರಿ ಚಿತ್ರ ವಿವಾದ ತಂದಿದೆ. ಕಲೆಗೆ ಜಾತಿ ಇಲ್ಲ, ಜಾತಿಯನ್ನು ಬಿಂಬಿಸುವುದು ತಪ್ಪು. ಸಿನಿಮಾಗೆ ಜಾತಿಯನ್ನು ತರಬಾರದು. ಕಲೆಯನ್ನು ಕಲೆಯಾಗಿ ನೋಡಬೇಕು. ರಾಜಕೀಯದಲ್ಲಿ ಜಾತಿ ಬಂದು ಹಾಳಾಗಿದೆ ಈಗ ಸಿನಿಮಾಕ್ಕೆ ಜಾತಿ ತರುವುದು ಬೇಡ. ರಾಜ್ ಕುಮಾರ್ ಅವರ ಕಾಲದಲ್ಲಿ ಅನೇಕ ಸಿನಿಮಾಗಳು ಬಂದಿತ್ತು. ಆಗ ಜಾತಿ ಇರಲಿಲ್ಲ ಈಗ ಜಾತಿಯ ನಂಟನ್ನು ಸ್ವಾಮೀಜಿ ತರಬಾರದು ಎಂದರು. ಇದನ್ನೂ ಓದಿ: 100 ಕೋಟಿ ರೂ. ವೆಚ್ಚದಲ್ಲಿ ಪತಿಗಾಗಿ ಪ್ರಿಯಾ ಸುದೀಪ್ ಚಿತ್ರ ನಿರ್ಮಾಣ!
ಜಾತಿಯನ್ನು ಬಿಟ್ಟು ದರ್ಶನ್ ಹಾಗೂ ಸುದೀಪ್ ಸಿನಿಮಾ ಮಾಡಬೇಕು. ಸಿನಿಮಾವನ್ನು ಚೆನ್ನಾಗಿ ಮಾಡಿ ಪ್ರೇಕ್ಷಕರ ಮನಗೆಲ್ಲಬೇಕು. ಪ್ರಸನ್ನಾನಂದ ಸ್ವಾಮೀಜಿಗಳು ಕಲೆಯನ್ನು ಗೌರವಿಸಬೇಕು. ದರ್ಶನ್ ಹಾಗೂ ಸುದೀಪ್ ಇಬ್ಬರೂ ಸಿನಿಮಾ ಮಾಡಲಿ. ಆದರೆ ಎಲ್ಲಿಯೂ ಕಥೆ ರಿಪೀಟಾಗದೆ ಇರುವ ಹಾಗೆ ನೋಡಿಕೊಳ್ಳಬೇಕು. ಅಂದಿನಿಂದ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಜಾತಿ ಬಿಂಬಿಸೊದು ದೊಡ್ಡ ತಪ್ಪು. ಕಲೆಯನ್ನು ಕಲೆಯಾಗಿ ನೋಡಿ. ಕಲೆಯಲ್ಲಿ ಜಾತಿಯನ್ನು ನೋಡಬೇಡಿ ಎಂದು ತಿಳಿಸಿದರು.
ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಒಂದೇ ಕತೆಯ ಸಿನಿಮಾ ಮಾಡುವ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ `ಗಂಡುಗಲಿ ಮದಕರಿ ನಾಯಕ’ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ದರ್ಶನ್ ಚಿತ್ರದ ನಾಯಕನಾಗಿ ನಟಿಸುವುದಾಗಿ ಹೇಳಿದ್ದರು. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಇತ್ತ ಕಿಚ್ಚ ಸುದೀಪ್ ಅಭಿನಯದ ಈ ಚಿತ್ರಕ್ಕೆ `ದುರ್ಗದ ಹುಲಿ’ ಅಥವಾ `ನಾಯಕ’ ಹೆಸರನ್ನು ಇಡಲು ಚರ್ಚೆ ನಡೆದಿದ್ದು, `ದುರ್ಗದ ಹುಲಿ’ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಯಿದೆ. ಕೆಲ ದಿನಗಳಿಂದ ಈ ಚಿತ್ರದ ಕೆಲಸ ಆರಂಭಗೊಂಡಿದ್ದು, ವಿಶೇಷವಾಗಿ ಸುದೀಪ್ ಅವರೇ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಚಿತ್ರಕ್ಕೆ ಪ್ರಿಯಾ ಸುದೀಪ್ ಅವರು 100 ಕೋಟಿ ಬಂಡವಾಳ ಹಾಕಲಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಕಿಚ್ಚ ಸುದೀಪ್ ವೀರ ಮದಕರಿ ನಾಯಕನಾಗಿ ಮಿಂಚಲಿರೋದರ ಸುತ್ತ ನಾನಾ ಸುದ್ದಿಗಳು ಹರಿದಾಡಲಾರಂಭಿಸಿವೆ. ಸುದೀಪ್ ಅವರು ವೀರ ಮದಕರಿ ಚಿತ್ರವಾದ ನಂತರ ಮತ್ತೋರ್ವ ಕ್ರಾಂತಿಕಾರಿ ವೀರನೊಬ್ಬನ ಪಾತ್ರಕ್ಕೆ ಜೀವ ತುಂಬಲಿದ್ದಾರೆಂಬ ಮತ್ತೊಂದು ಸುದ್ದಿಯೂ ಇದೀಗ ಹಬ್ಬಿಕೊಂಡಿದೆ.
ವೀರಮದಕರಿಯ ಪಾತ್ರವನ್ನು ಸುದೀಪ್ ಅವರೇ ಮಾಡಬೇಕೆಂದು ನಾಯಕ ಸಮುದಾಯದ ಸ್ವಾಮೀಜಿಗಳು ಪಟ್ಟು ಹಿಡಿದಿದ್ದರು. ಇದೀಗ ಈ ಸಮುದಾಯದ ಗುರುಗಳಾದ ಪ್ರಸನ್ನಾನಂದ ಸ್ವಾಮೀಜಿ ಮತ್ತೊಂದು ಆಸೆಯನ್ನೂ ಹೊರ ಹಾಕಿದ್ದಾರೆ. ಸುದೀಪ್ ಅವರೇ ಮತ್ತೋರ್ವ ಸ್ವಾತಂತ್ರ್ಯ ವೀರ ವೀರ ಸಿಂಧೂರ ಲಕ್ಷ್ಮಣನ ಪಾತ್ರನ್ನೂ ನಿರ್ವಹಿಸಲಿ ಎಂಬ ಇಂಗಿತ ಪ್ರಸನ್ನಾನಂದರದ್ದು.
ಆ ಕಾಲಕ್ಕೆ ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದ ವೀರ ಸಿಂಧೂರ ಲಕ್ಷ್ಮಣ ಕ್ರಾಂತಿ ಪಥದಲ್ಲಿಯೇ ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ್ದವನು. ಕ್ರಾಂತಿಕಾರಿಯಾದ ವೀರ ಸಿಂಧೂರ ಲಕ್ಷ್ಮಣ ಈ ಮೂಲಕವೇ ಇತಿಹಾಸದ ಪುಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾನೆ.
ಇದು ಸುದೀಪ್ ಅವರ ಖದರಿಗೆ ಹೇಳಿ ಮಾಡಿಸಿದಂತಿರೋ ಪಾತ್ರ ಎಂಬುದರಲ್ಲಿ ಅನುಮಾನಗಳಿಲ್ಲ. ಆದರೆ ಇದಕ್ಕೆ ಅವರು ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು: ಕಿಚ್ಚ ಸುದೀಪ್ ಅವರು ವೀರ ಮದಕರಿ ಚಿತ್ರದ ಬಗ್ಗೆ ಅಭಿಮಾನಿಗಳಿಗಾಗಿ ಪತ್ರ ಬರೆದ ಹಿನ್ನೆಲೆಯಲ್ಲಿ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು ಈ ಚಿತ್ರ ನನ್ನ 4 ವರ್ಷದ ಕನಸು. ನಾನು ರಾಜೇಂದ್ರ ಬಾಬು ಅವರ ಜೊತೆ ಸೇರಿ ನಾಲ್ಕು ವರ್ಷದಿಂದ ಮಾತನಾಡಿ ಅವರ ಅಭಿಪ್ರಾಯ ಪಡೆದಿದ್ದೇನೆ. ರಾಜೇಂದ್ರ ಬಾಬು ಅವರು ಹಿರಿಯ ನಿರ್ದೇಶಕರಾಗಿದ್ದರಿಂದ 4 ವರ್ಷದಿಂದ ನಾನು ಇತಿಹಾಸದ ಬಗ್ಗೆ ಎಲ್ಲ ಮಾಹಿತಿ ಪಡೆದಿದ್ದೇನೆ ಎಂದರು. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದರ್ಶನ್, ಸುದೀಪ್- ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ
ಚಿತ್ರದುರ್ಗದ ಇತಿಹಾಸದಲ್ಲಿ ಸುಮಾರು 10 ರಿಂದ 13 ಪಾಳೇಗಾರರು ಇದ್ದಾರೆ. 13 ಪಾಳೇಗಾರರಲ್ಲಿ ಯಾರು ಯಾವ ರೀತಿಯಲ್ಲಿ ಚಿತ್ರದುರ್ಗದ ಇತಿಹಾಸದಲ್ಲಿ ಹೆಸರು ಮಾಡಿದ್ದಾರೆ ಎನ್ನುವುದನ್ನು ನೋಡಿಕೊಂಡು ಸಿನಿಮಾ ಮಾಡಬೇಕು. ಒಂದು ಸಾಧಾರಣ ಸಿನಿಮಾ ಮಾಡಬೇಕಾದರೆ ನಮಗೆ 8 ತಿಂಗಳಿಂದ ಒಂದು ವರ್ಷ ಬೇಕಾಗುತ್ತಿದೆ. ಆದರೆ ಇಂತಹ ಐತಿಹಾಸಿಕ ಸಿನಿಮಾ ಮಾಡಬೇಕೆಂದರೆ ನಾಲ್ಕು ವರ್ಷ ಅವಧಿ ಬೇಕಾಗುತ್ತದೆ ಎಂದು ಹೇಳಿದರು.
ಹೆಸರಾಂತ ಸಾಹಿತಿ ಬಿ.ಎಲ್ ವೇಣು ಅವರ ಜೊತೆ ಈ ಚಿತ್ರ ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳಲು 2 ವರ್ಷದಿಂದ ಸಂಪರ್ಕದಲ್ಲಿದ್ದೇನೆ. ಕಥೆಯ ಬಗ್ಗೆ ಎಲ್ಲ ಮಾಹಿತಿ ಪಡೆದ ನಂತರ ಚಿತ್ರದ ನಾಯಕ ಯಾರು ಆಗಬೇಕು ಎಂದು ನಾನು ಯೋಚಿಸಿರಲಿಲ್ಲ. ಮುನಿರತ್ನ ಅವರು ಕುರುಕ್ಷೇತ್ರ ಸಿನಿಮಾವನ್ನು ಮಾಡುವಾಗ ದರ್ಶನ್ ಅವರ ಗೆಟಪ್ ನೋಡಿ ಅವರಿಗೆ ಈ ಚಿತ್ರದ ಬಗ್ಗೆ ಕೇಳಿದೆ. ಆಗ ದರ್ಶನ್ ಅವರು ನಾನು ಈ ಸಿನಿಮಾ ಮಾಡುತ್ತೇನೆ. ನಿಮ್ಮಂತಹ ನಿರ್ಮಾಪಕರಿಗೆ ನಾನು ಸಿನಿಮಾ ಮಾಡದೇ ಇದ್ದರೆ ಇನ್ನು ಯಾರಿಗೆ ಸಿನಿಮಾ ಮಾಡಬೇಕೆಂದು ಹೇಳಿದರು. ನಾನು ಇದೂವರೆಗೂ ನನ್ನ ಚಿತ್ರವನ್ನು ಎಲ್ಲೂ ಪ್ರಚಾರ ಮಾಡಿರಲಿಲ್ಲ. ಹಾಗೆಯೇ ಈಗ ಕೂಡ ನಾನು ನನ್ನ ಚಿತ್ರವನ್ನು ಎಲ್ಲಿಯೂ ಪ್ರಚಾರ ಮಾಡಲಿಲ್ಲ. ಸುದೀಪ್ ಏನೇ ಮಾಡಿದರೂ ನನ್ನನ್ನು ಕರೆಯುತ್ತಾರೆ. ನಾವು ಆತ್ಮೀಯವಾಗಿ ಇದ್ದೇವೆ. ಆದರೆ ಈ ಚಿತ್ರದ ವಿಷಯವನ್ನು ಇಬ್ಬರು ಎಲ್ಲಿಯೂ ಪ್ರಸ್ತಾಪ ಮಾಡಿರಲಿಲ್ಲ. ಹಾಗಾಗಿ ಈ ವಿಷಯ ನಮಗೆ ಗೊತ್ತಿರಲಿಲ್ಲ ಎಂದು ತಿಳಿಸಿದರು.
ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ಈ ಪಾತ್ರದಲ್ಲಿ ನೋಡಬೇಕೆಂದು ಇಚ್ಚಿಸುತ್ತಾರೆ. ತಮ್ಮ ಅಭಿಮಾನಿಗಳ ಆಸೆಯನ್ನು ಆ ನಟರು ಪೂರೈಸಬೇಕು. ಒಂದೇ ನಾಯಕನ ಎರಡು ಸಿನಿಮಾ ಮಾಡಿದರೆ ಅದು ತಪ್ಪಾಗುತ್ತದೆ. 13 ಪಾಳೇಗಾರರಿದ್ದು ಬೇರೆ ಬೇರೆ ವೀರ ಮದಕರಿ ನಾಯಕನ ಪಾತ್ರವನ್ನು ಮಾಡಬಹುದು. ನಾನು ಕೊನೆಯ ಪಾಳೇಗಾರನ ಕತೆಯನ್ನು ಸಿನಿಮಾ ಮಾಡುತ್ತಿದ್ದೇನೆ ಎಂದು ರಾಕ್‍ಲೈನ್ ವೆಂಕಟೇಶ್ ಸ್ಪಷ್ಟನೆ ನೀಡಿದರು.
ಈ ಚಿತ್ರದಿಂದ ಯಾವುದೇ ಗೊಂದಲವಾಗುವುದಿಲ್ಲ. ಏಕೆಂದರೆ 13 ವೀರ ಮದಕರಿ ಇದ್ದಾರೆ. ಇಬ್ಬರು ಮದಕರಿ ನಾಯಕನ ಕತೆ ಬಂದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಎರಡು ಚಿತ್ರ ಚೆನ್ನಾಗಿ ಯಶಸ್ಸು ಕಾಣಲಿ. ನನ್ನ ಹಾಗೂ ಸುದೀಪ್ ಭಾಂದವ್ಯ ಚೆನ್ನಾಗಿದೆ. ಹಾಗಾಗಿ ನಾವಿಬ್ಬರು ನಮ್ಮ ಚಿತ್ರದ ಕತೆಗಳ ಬಗ್ಗೆ ಮಾತನಾಡಿ ಸಿನಿಮಾ ಮಾಡುತ್ತೇವೆ ಎಂದು ರಾಕ್‍ಲೈನ್ ವೆಂಕಟೇಶ್ ತಿಳಿಸಿದರು.