Tag: Veer Savarkar Photo

  • ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್

    ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್

    ಶಿವಮೊಗ್ಗ: ವೀರ ಸಾವರ್ಕರ್ ಭಾವಚಿತ್ರ ಇಡುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಕಿತ್ತಾಟದಿಂದ ಯುವಕನೋರ್ವನಿಗೆ ದುಷ್ಕರ್ಮಿಗಳು ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

    ಇಂದು ಮೆಗ್ಗನ್ ಆಸ್ಪತ್ರೆಗೆ ಭೇಟಿ ನೀಡಿ ಐಸಿಯುನಲ್ಲಿರುವ ಪ್ರೇಮ್ ಸಿಂಗ್ ಅವರನ್ನು ವಿಚಾರಿಸಿ ನಂತರ ಘಟನೆ ಬಗ್ಗೆ ಮಾಹಿತಿ ಪಡೆದರು. ನಂತರ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲ್ಲೆಗೊಳಗಾದ ಪ್ರೇಮ್‍ಸಿಂಗ್, ಹಾಗೂ ಗುಂಡೇಟು ತಿಂದ ಮಹಮ್ಮದ್ ಜಭೀಯಿಂದ ಮಾಹಿತಿ ಪಡೆದಿದ್ದೇನೆ. ಪ್ರೇಮ್ ಸಿಂಗ್ ಅಣ್ಣ ಆತನ ಜೊತೆ ಇದ್ದು ನೋಡಿಕೊಳ್ಳುತ್ತಿದ್ದಾರೆ. ರಾಜಸ್ಥಾನದಲ್ಲಿರುವ ಅವರ ತಂದೆ, ತಾಯಿಗೆ ಮಾಹಿತಿ ನೀಡಲಾಗಿದೆ. ಅವರು ಶಿವಮೊಗ್ಗಕ್ಕೆ ಬರಲಿದ್ದಾರೆ. ಇಬ್ಬರ ಆರೋಗ್ಯವೂ ಸ್ಥಿರವಾಗಿದ್ದು, ಇಲ್ಲೇ ಚಿಕಿತ್ಸೆ ಮುಂದುವರೆಯಲಿದೆ. ಆರೋಪಿ ಮೊಹಮ್ಮದ್ ಜಭೀಯಿಂದಲೂ ಮಾಹಿತಿ ಪಡೆದಿದ್ದೇನೆ. ಎಎ ಸರ್ಕಲ್‍ನಲ್ಲಿ ಫ್ಲೆಕ್ಸ್ ತೆರವು ವೇಳೆ ನಡೆದ ಗಲಭೆಯಲ್ಲಿ ಜಭೀ ಪಾಲ್ಗೊಂಡಿದ್ದರು. ಇದೀಗ ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಉಳಿದವರವನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ

    ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸೋಮವಾರ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಒಂದು ಗುಂಪು ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಇಡಲು ಹೊರಟಿತ್ತು. ಈ ವೇಳೆ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಈ ವೇಳೆ ಸಾವರ್ಕರ್ ಫೋಟೊವನ್ನು ಬೀಳಿಸುವುರ ಜೊತೆಗೆ ಅಲ್ಲೇ ಪಕ್ಕದಲ್ಲಿದ್ದ ರಾಷ್ಟ್ರಧ್ವಜವನ್ನು ನೆಲಕ್ಕೆ ಬೀಳಿಸುವುದರ ಮೂಲಕ ರಾಷ್ಟ್ರಧ್ವಜಕ್ಕೂ ಅವಮಾನ ಮಾಡಿದ್ದರು. ಇದನ್ನೂ ಓದಿ: ಧ್ವಜಾರೋಹಣವಾದ ಕೆಲವೇ ಗಂಟೆಗಳಲ್ಲಿ ಟಿಆರ್‌ಎಸ್ ಮುಖಂಡನ ಬರ್ಬರ ಹತ್ಯೆ

    ಇದೇ ವಿಚಾರವಾಗಿ ಪ್ರೇಮ್ ಸಿಂಗ್ (26) ಚಾಕು ಇರಿದ ಘಟನೆ ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ ನಡೆದಿದೆ. ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಮನೆ ಮುಂದೆ ನಿಂತಿದ್ದ ಪ್ರೇಮ್ ಸಿಂಗ್ ಮೇಲೆ ದಾಳಿ ನಡೆಸಿ ಚಾಕು ಇರಿದಿದ್ದರು. ಚಾಕು ಇರಿತಕ್ಕೊಳಗಾದ ಯುವಕ ಪ್ರೇಮ್ ಸಿಂಗ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ಸಂಘರ್ಷ ಮಧ್ಯೆ ಸಾವರ್ಕರ್ ಫೋಟೋ ವಿವಾದ – ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಹಿಜಬ್ ಸಂಘರ್ಷ ಮಧ್ಯೆ ಸಾವರ್ಕರ್ ಫೋಟೋ ವಿವಾದ – ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಆರಂಭವಾಗಿದ್ದ ಹಿಜಬ್ ವಿವಾದ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಈ ನಡುವೆ ಹಂಪನಕಟ್ಟೆಯಲ್ಲಿರುವ ಡಿಗ್ರಿ ಕಾಲೇಜಿನಲ್ಲಿ ವೀರ ಸಾವರ್ಕರ್ ಹೆಸರಿನಲ್ಲಿ ಮತ್ತೊಂದು ವಿವಾದ ಆರಂಭವಾಗಿದೆ.

    ಮಂಗಳೂರು ವಿಶ್ವವಿದ್ಯಾಲಯ ಘಟಕ ಕಾಲೇಜಿನ ತರಗತಿಯೊಂದರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿರುವ ಘಟನೆ ಬೆಳಕಿಗೆ ಬಂದಿತ್ತು. ಇದನ್ನು ಕಾಲೇಜಿನ ಇತರೆ ಮುಸ್ಲಿಂ ವಿದ್ಯಾರ್ಥಿಗಳು ಪ್ರಾಂಶುಪಾಲೆಯ ಗಮನಕ್ಕೆ ತಂದಾಗ ಅದನ್ನು ತೆರವುಗೊಳಿಸಲಾಗಿತ್ತು. ಗುರುವಾರ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳು ಈ ವಿಚಾರವಾಗಿ ಜಗಳ ತೆಗೆದು ಸಾವರ್ಕರ್ ಫೋಟೋ ಹಾಕಿದ್ದನ್ನು ಕಾಲೇಜಿನ ಆಡಳಿತ ಮಂಡಳಿಗೆ ಹೇಳಿದ್ದಾರೆ ಅಂತ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಾಜ್ಯಸಭೆಯಲ್ಲಿ 3 ಸ್ಥಾನ ಗೆದ್ದ ಬಿಜೆಪಿ – ಕಾಂಗ್ರೆಸ್ ಗುದ್ದು, ಭಿನ್ನರಿಂದ ದಳಪತಿಗೆ ಶಾಕ್

    ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಸಿಗಬೇಕು. ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಇದಕ್ಕೆಲ್ಲ ಕುಮ್ಮಕ್ಕು ನೀಡಿದ ಪ್ರಾಂಶುಪಾಲರನ್ನು ಅಮಾನತ್ತು ಮಾಡಬೇಕು ಅಂತ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಸೋತು ಗೆದ್ದ ಸಿದ್ದರಾಮಯ್ಯ – ಬಿಜೆಪಿ 3, ಕಾಂಗ್ರೆಸ್‍ಗೆ 1 ಸ್ಥಾನ

    POLICE JEEP

    ಸದ್ಯ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸದಿದ್ದರೆ ಮಂಗಳೂರು ವಿಶ್ವವಿದ್ಯಾನಿಲಯ ಚಲೋ ಹಮ್ಮಿಕೊಳ್ಳುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ. ಸದ್ಯ ಇದು ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದುನೋಡಬೇಕಿದೆ.