`ಭಜರಂಗಿ’, `ವಜ್ರಕಾಯ’, `ವೇದ’ (Vedha)ಸೂಪರ್ ಹಿಟ್ ಸಿನಿಮಾ ಖ್ಯಾತಿಯ ಎ.ಹರ್ಷ (A. Harsha) ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಾಲಿವುಡ್ (Tollywood) ಸ್ಟಾರ್ ನಟ ಗೋಪಿಚಂದ್ (Gopichand) 31ನೇ ಸಿನಿಮಾಗೆ ಸ್ಯಾಂಡಲ್‌ವುಡ್ ಸ್ಟಾರ್ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇಂದು ಗೋಪಿಚಂದ್ ಹಾಗೂ ಹರ್ಷ ಕಾಂಬಿನೇಶನ್ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದ್ದು, ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ವತಿಯಿಂದ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಎ.ಹರ್ಷ ಹೆಣೆದ ಔಟ್ ಅಂಡ್ ಔಟ್ ಆ್ಯಕ್ಷನ್ ಎಂಟರ್ಟೈನರ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಹೊಸ ಅವತಾರದಲ್ಲಿ ತೆರೆ ಮೇಲೆ ಗೋಪಿಚಂದ್ ಬರುತ್ತಿದ್ದಾರೆ. ಶಿವಣ್ಣ ನಟನೆಯ `ವೇದ’ ಸೂಪರ್ ಸಕ್ಸಸ್ ನಂತರ ಎ. ಹರ್ಷ ಅವರು ತೆಲುಗಿನ ನಟ ಗೋಪಿಚಂದ್ ಜೊತೆ ಕೈಜೋಡಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

ನಿರ್ಮಾಪಕ ಕೆ.ಕೆ.ರಾಧಾಮೋಹನ್ ಮಾತನಾಡಿ ಗೋಪಿಚಂದ್ ಹಾಗೂ ಎ.ಹರ್ಷ ಜೊತೆ ಸೇರಿ ಸಿನಿಮಾ ಮಾಡುತ್ತಿರೋದಕ್ಕೆ ತುಂಬಾ ಖುಷಿಯಾಗುತ್ತಿದೆ. ಇದು ನಮ್ಮ ನಿರ್ಮಾಣ ಸಂಸ್ಥೆಯ 14ನೇ ಸಿನಿಮಾ. ನಿರ್ದೇಶಕರು ಪವರ್ ಫುಲ್ ಸಬ್ಜೆಕ್ಟ್ ಇರುವ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗೋಪಿಚಂದ್ ಹೊಸ ಅವತಾರದಲ್ಲಿ ಬರಲಿದ್ದಾರೆ. ಇದೇ ತಿಂಗಳಿನಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಸ್ವಾಮಿ.ಜೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ನಿರ್ದೇಶನ ಈ ಚಿತ್ರಕ್ಕಿದ್ದು, ಸದ್ಯದಲ್ಲೇ ಸಿನಿಮಾದ ತಾರಾಬಳಗ ಹಾಗೂ ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.


ಶಿವಣ್ಣ ಕುಟುಂಬದವರಿಗೂ ಮತ್ತು ಬಾಲಯ್ಯ ಕುಟುಂಬಕ್ಕೂ ಸಾಕಷ್ಟು ವರ್ಷಗಳಿಂದ ಒಳ್ಳೆಯ ಒಡನಾಟವಿದೆ. ಸಿನಿಮಾಗೂ ಮೀರಿ ಆತ್ಮೀಯ ಒಡನಾಟವಿದೆ. ಹಾಗೆಯೇ ಸಿನಿಮಾ ಅಂತಾ ಬಂದಾಗ ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಸಾಥ್ ನೀಡುತ್ತಾರೆ. ಈಗ ತೆಲುಗಿನಲ್ಲಿ ಅಬ್ಬರಿಸಲು `ವೇದ’ ಅಬ್ಬರಿಸಲು ʻವೇದʼ ಚಿತ್ರ ರೆಡಿಯಾಗಿದೆ. ಇದೇ ಫೆ.9ಕ್ಕೆ ಸಿನಿಮಾ ತೆಲುಗಿನಲ್ಲಿ ಅಬ್ಬರಿಸಲಿದೆ. ಹೀಗಿರುವಾಗ ಶಿವಣ್ಣ ಸಿನಿಮಾ ಪ್ರಚಾರ ಕಾರ್ಯಕ್ರಮ ಬಾಲಯ್ಯ ಅವರು ಭಾಗಿಯಾಗಿ ಶಿವಣ್ಣ ಮತ್ತು ಅವರ ಸಿನಿಮಾವನ್ನ ಹಾಡಿ ಹೊಗಳಿದ್ದಾರೆ.



ಕಿರುತೆರೆಯ ಸೂಪರ್ ಹಿಟ್ `ಮಗಳು ಜಾನಕಿ’ ಸೀರಿಯಲ್‌ನಿಂದ ಬಣ್ಣದ ಲೋಕಕ್ಕೆ ಪರಿಚಿತರಾದ ನಟಿ, `ನೆನಪಿನ ಹುಡುಗಿಯೇ’ ಅಂತಾ ಹೀರೋ ರಿಷಬ್ ಶೆಟ್ಟಿಗೆ ಹೀರೋಯಿನ್ ಆಗಿ ಗಮನ ಸೆಳೆದರು. ಈಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ವೇದಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. `ವೇದ’ ಚಿತ್ರದ ಜೊತೆಗೆ ತೆಲುಗಿನ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಚಿಕ್ಕಮಗಳೂರಿನ ಪ್ರತಿಭೆ ಗಾನವಿ ಇದೀಗ `ವೇದ’ ಚಿತ್ರದ ಜೊತೆ ಟಾಲಿವುಡ್‌ನಲ್ಲೂ ಡೆಬ್ಯೂ ಮಾಡ್ತಿದ್ದಾರೆ. ಸ್ಟಾರ್ ನಟ ಜಗಪತಿ ಬಾಬು ಸಿನಿಮಾದಲ್ಲಿ ಆಶಿಶ್ ಗಾಂಧಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಗಾನವಿ ಜತೆಗೆ ಮಮತಾ ಮೋಹನ್ ದಾಸ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗಿನ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರದ ಕುರಿತು ಅಪ್‌ಡೇಟ್ ಸಿಗಲಿದೆ. ಇದನ್ನೂ ಓದಿ:
`ವೇದ’ ಚಿತ್ರದ ಪೋಸ್ಟರ್‌ನಲ್ಲಿ ಶಿವಣ್ಣ ಲುಕ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. `ವೇದ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಿಲೀಸ್ ಮುಂಚೆ ಸಾಕಷ್ಟು ವಿಚಾರಗಳಿಂದ ವೇದ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗುತ್ತಿದೆ.ಚಿತ್ರ ರಿಲೀಸ್ ಆದಮೇಲೆ ಶಿವರಾಜ್‌ಕುಮಾರ್ ಮತ್ತು ಗಾನವಿ ಜೋಡಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಬಹುದು ಅಂತಾ ಕಾದು ನೋಡಬೇಕಿದೆ.