Tag: vedavyas kamath

  • ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣ ಕೂಗಿಗೆ ಧ್ವನಿಗೂಡಿಸಿದ ಶಾಸಕ ಕಾಮತ್

    ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣ ಕೂಗಿಗೆ ಧ್ವನಿಗೂಡಿಸಿದ ಶಾಸಕ ಕಾಮತ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಮರುನಾಮಕರಣ ಮಾಡುವ ಬಗ್ಗೆ ಹೋರಾಟಗಳು ತೀವ್ರಗೊಂಡಿದ್ದು, ಸರ್ವ ಧರ್ಮ-ಪಕ್ಷ-ಸಂಘಟನೆಗಳು ಒಗ್ಗೂಡಿರುವ ‘ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿ’ ಸಂಚಾಲಕನಾಗಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

    ಪೋರ್ಚುಗೀಸರು ಬ್ರಿಟಿಷರ ಕಾಲದಲ್ಲಿ ತುಳುನಾಡು ಹೋಗಿ ಸೌತ್ ಕೆನರಾ ಆಯ್ತು, ಸ್ವತಂತ್ರ ಭಾರತದಲ್ಲಿ ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಸೌತ್ ಕೆನರಾ ದಕ್ಷಿಣ ಕನ್ನಡವಾಗಿ ಬದಲಾಯಿತು. ಹಾಗಾಗಿ, ಈ ನೆಲಕ್ಕೂ ದಕ್ಷಿಣ ಕನ್ನಡ ಹೆಸರಿಗೂ ಯಾವುದೇ ಸಂಬಂಧವಿಲ್ಲ ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಜಿಲ್ಲೆಗೆ ಮರುನಾಮಕರಣದ ಬಗ್ಗೆ ಹೋರಾಟಗಳು ನಿನ್ನೆ ಮೊನ್ನೆ ಆರಂಭವಾಗಿದ್ದಲ್ಲ. ಸುಮಾರು ನೂರು ವರ್ಷಗಳ ಹಿಂದಿನಿಂದಲೂ ಆಗ್ರಹವಿದೆ. ಜಿಲ್ಲೆಯ ಹೆಸರು ಬದಲಾವಣೆಯಾದಲ್ಲಿ ತುಳು ಭಾಷೆಯ ಹೋರಾಟಕ್ಕೂ ಇನ್ನಷ್ಟು ಪುಷ್ಠಿ ಸಿಗಲಿದೆ. ಈಗಾಗಲೇ ನಮ್ಮ ಜಿಲ್ಲೆಗೆ ಆರ್ಥಿಕವಾಗಿ ಬಹಳಷ್ಟು ಅನ್ಯಾಯವಾಗುತ್ತಿದ್ದರೂ ಸಹಿಸಿಕೊಂಡಿದ್ದೇವೆ. ಆದರೆ ಇಲ್ಲಿನ ಸಂಸ್ಕೃತಿಯ ಮೇಲೆ ಅನ್ಯಾಯವಾಗುವುದನ್ನು ಸ್ವಾಭಿಮಾನಿಗಳಾದ ತುಳುವರು ಸಹಿಸುವುದಿಲ್ಲ ಎಂದರು.

    ಉತ್ತರ ಪ್ರದೇಶ, ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸ್ಥಳೀಯ ಹೆಸರುಗಳ ಮರುನಾಮಕರಣಕ್ಕೆ ಯಾವೆಲ್ಲಾ ಕ್ರಮಕೈಗೊಳ್ಳಲಾಗಿದೆಯೋ ಅದೇ ರೀತಿಯಲ್ಲೇ ಕಾನೂನು ಬದ್ಧವಾಗಿ ಈ ಪ್ರಕ್ರಿಯೆಗಳು ನಡೆಯಲಿ. ಅದಕ್ಕೆ ಅಗತ್ಯವಿರುವ ಯಾವುದೇ ಕಾರ್ಯಕ್ಕೂ ಶಾಸಕನಾಗಿ, ಸಮಿತಿಯ ಸಂಚಾಲಕನಾಗಿ ನಾನು ಬದ್ಧನಾಗಿದ್ದೇನೆ. ಇದೇ ಸಂದರ್ಭದಲ್ಲಿ ತುಳುನಾಡಿನ ಪ್ರತಿಯೊಂದು ಮನೆಯ, ಪ್ರತಿಯೊಬ್ಬ ತುಳುವನೂ ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ವಿನಂತಿಸುತ್ತಾ, ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಸಮಸ್ತ ತುಳುವರ ಅಭಿಪ್ರಾಯಕ್ಕೆ ಬೆಲೆ ನೀಡಬೇಕು ಎಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದರು.

  • ವೇದವ್ಯಾಸ್ ಕಾಮತ್ ವಿರುದ್ಧ ಎಫ್‌ಐಆರ್‌ಗೆ ಬಿಜೆಪಿ ಖಂಡನೆ – ಸರ್ಕಾರಕ್ಕೆ ತೀವ್ರ ತರಾಟೆ

    ವೇದವ್ಯಾಸ್ ಕಾಮತ್ ವಿರುದ್ಧ ಎಫ್‌ಐಆರ್‌ಗೆ ಬಿಜೆಪಿ ಖಂಡನೆ – ಸರ್ಕಾರಕ್ಕೆ ತೀವ್ರ ತರಾಟೆ

    ಬೆಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ (Kankanady Police Station) ಎಫ್‌ಐಆರ್ ದಾಖಲಾಗಿರುವುದನ್ನು ಖಂಡಿಸಿ ವಿಧಾನಸಭೆಯಲ್ಲಿಂದು ಬಿಜೆಪಿ ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಅರವಿಂದ್ ಬೆಲ್ಲದ್ (Aravind Bellad), ಶಾಸಕರ ತಪ್ಪಿಲ್ಲದಿದ್ರೂ ಏಕಾಏಕಿ ಎಫ್‌ಐಆರ್ ಹಾಕಲಾಗಿದೆ. ಸಾಕ್ಷಿ ಇಲ್ಲದೇ ಕಾಂಗ್ರೆಸ್ ಕಾರ್ಯಕರ್ತ ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್ ಹಾಕಲಾಗಿದೆ. ಇದರ ಹಿಂದಿನ ಉದ್ದೇಶ ತಿಳಿಸಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಹಾಲುಣಿಸಲು ಸೂಕ್ತ ಸೌಕರ್ಯ ಕಲ್ಪಿಸಿ – ಸರ್ಕಾರಗಳಿಗೆ ಸುಪ್ರೀಂ ಸೂಚನೆ

    ಶಾಸಕ ಸುನೀಲ್ ಕುಮಾರ್ ಮಾತನಾಡಿ, ದಿಢೀರ್ ಎಫ್‌ಐಆರ್ ಹಾಕಿದರೆ ಶಾಸಕರು ಹೇಗೆ ಕೆಲಸ ಮಾಡೋದು ಅಂತ ಆಕ್ರೋಶ ಹೊರಹಾಕಿದರು. ಇದು ಗೂಂಡಾ ರಾಜ್ಯ. ಸಾಕ್ಷಿ ಇಲ್ಲದೇ ಎಫ್‌ಐಆರ್ ಹಾಕಿದ್ದು ಸರಿಯಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು. ಇದನ್ನೂ ಓದಿ: ಹಾವೇರಿ| ಕೆರೆಗೆ ಹಾರಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

    ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ನಾನು ಯಾರ ಹಲ್ಲೆಗೂ ಕುಮ್ಮಕ್ಕು ಕೊಟ್ಟಿಲ್ಲ. ನಾನೂ ಹಲ್ಲೆ ಮಾಡಿಲ್ಲ. ಇದಕ್ಕೇನಾದರೂ ವಿಡಿಯೋ, ಸಿಸಿಟಿವಿ ಸಾಕ್ಷಿ ಇದೆಯಾ? ನಾನು ಕೈ ಮಾಡಿರೋದು ಸಾಬೀತಾರೆ ಸದನ ಬಿಟ್ಟು ಹೋಗುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಆಯ್ಕೆ ಪ್ರಶ್ನಿಸಿ ಅರ್ಜಿ – ಮಾ.25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ

    ಬಳಿಕ ಮಾತಾಡಿದ ಗೃಹ ಸಚಿವ ಜಿ.ಪರಮೇಶ್ವರ್, ನಾಳೆ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಉತ್ತರ ಕೊಡುತ್ತೇನೆ. ಸುಮ್ಮನೇ ಎಫ್‌ಐಆರ್ ಹಾಕಲ್ಲ. ಕಾರಣ ಇಲ್ಲದೇ ಎಫ್‌ಐಆರ್ ಹಾಕಿದರೆ ಅದು ಪೊಲೀಸರ ತಪ್ಪು ಎಂದರು. ಇದನ್ನೂ ಓದಿ: ಸ್ವ ಇಚ್ಛೆಯಿಂದ ಗ್ಯಾರಂಟಿ ಬಿಟ್ಟುಕೊಡುವ ಜನರಿಗಾಗಿ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ: ಹೆಚ್.ಎಂ.ರೇವಣ್ಣ

  • ಐವನ್ ಒಬ್ಬ ಮೆಂಟಲ್ ಗಿರಾಕಿ, ಅವನ ಹುಡುಗರೇ ಕಲ್ಲು ತೂರಿರಬಹುದು: ಭರತ್ ಶೆಟ್ಟಿ ಆಕ್ರೋಶ

    ಐವನ್ ಒಬ್ಬ ಮೆಂಟಲ್ ಗಿರಾಕಿ, ಅವನ ಹುಡುಗರೇ ಕಲ್ಲು ತೂರಿರಬಹುದು: ಭರತ್ ಶೆಟ್ಟಿ ಆಕ್ರೋಶ

    ಮಂಗಳೂರು: ಐವನ್ ಡಿಸೋಜ (MLC Ivan D’Souza) ಒಬ್ಬ ಮೆಂಟಲ್ ಗಿರಾಕಿ. ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ (Dr Y Bharath Shetty) ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ (Congress) ನಾಯಕರು ಆಡಿದ ಕೆಟ್ಟ ಮಾತು ಮತ್ತು ಮುಡಾ(MUDA Scam) , ವಾಲ್ಮೀಖಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆಗೆ ಆಗ್ರಹಿಸಿ ನಡೆದ ಬಿಜೆಪಿ (BJP) ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಐವನ್ ನನ್ನನ್ನು ಏನು ಮಾಡುತ್ತಾನೋ ಗೊತ್ತಿಲ್ಲ. ಹೆಲ್ಮೆಟ್ ಹಾಕಿದ ಇಬ್ಬರು ಐವನ್ ಮನೆ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ. ಇದನ್ನೂ ಇವನ ಹುಡುಗರಿಂದಲೇ ಮಾಡಿಸಿರಬಹುದು. ಇದಕ್ಕೂ ಆ ಇಬ್ಬರು ನಾನು ಹಾಗೂ ವೇದವ್ಯಾಸ್ ಕಾಮತ್(D Vedavyas Kamath) ಎಂದು ಕೇಸ್ ಹಾಕುತ್ತಾರೋ ಗೊತ್ತಿಲ್ಲ. ನಮ್ಮ ಮೇಲೆ ಸಾಕಷ್ಟು ಕೇಸ್ ಹಾಕಿದ್ದಾರೆ. ಇನ್ನೂ ರೌಡಿ ಶೀಟರ್ ಆಗಬಹುದೇನೋ ಗೊತ್ತಿಲ್ಲ ಎಂದರು. ಇದನ್ನೂ ಓದಿ: Mangaluru| ಕೈ ನಾಯಕ ಐವನ್ ಡಿಸೋಜ ಮನೆ ಮೇಲೆ ಕಲ್ಲು ತೂರಾಟ

    ಐವನ್ ರಾಜ್ಯಪಾಲರ ಮನೆಗೆ ನುಗ್ಗಿ ಹೊಡೆಯುತ್ತೇವೆ, ಓಡಿಸುತ್ತೇವೆ ಎಂದು ಹೇಳಿದರು. ಅವರ ಮೇಲೆ ಕೇಸ್ ಹಾಕಲು ಪೊಲೀಸರು ಹಿಂದೆ ಮುಂದೆ ನೋಡುತ್ತಾರೆ. ಸರ್ಕಾರ ಇದೆ ಎಂಬ ಕಾರಣಕ್ಕೆ ಪೋಲೀಸರು ನಿಮ್ಮ ಆತ್ಮ ಸಾಕ್ಷಿಯಾಗಿ ಸರಿಯಾಗಿ ಕೆಲಸ ಮಾಡಿ. ಐವನ್ ಸ್ವಲ್ಪ ಮೆಂಟಲ್ ಆಗಿ ಬಾಯಿ ಬಂದಾಗೆ ಒದರುತ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಡಾ ಕೇಸ್‌ ಚುರುಕು ಬೆನ್ನಲ್ಲೇ ಬಿಎಸ್‌ವೈ ಬಂಧನ ತೆರವಿಗೆ ಹೈಕೋರ್ಟ್‌ಗೆ ಸಿಐಡಿ ಅರ್ಜಿ

    ನಮಗೆ ಕಲ್ಲು ಹೊಡೆಯೋದಕ್ಕೆ ಟಯರ್ ಹಚ್ಚೋದಕ್ಕೆ 5 ನಿಮಿಷ ಸಾಕು. ನಮ್ಮ ಯುವ ಮೋರ್ಚಾ ಕಾರ್ಯಕರ್ತರು ತಯಾರಿದ್ದಾರೆ. ನಮಗೂ 10 ಟಯರ್‌ಗಳನ್ನು ಇಲ್ಲಿ ಸುಡಲು ಬರುತ್ತದೆ. ಆ ರೀತಿಯ ಅರಾಜಾಕತೆಯ ಪರಿಸ್ಥಿತಿ ತರುವ ಅವಶ್ಯಕತೆ ನಮಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: 10 ರೂ. ಆಸೆ ತೋರಿಸಿ 10ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಕಾಮುಕ ಅರೆಸ್ಟ್

    ಪ್ರತಿಭಟನಾ ಸಭೆಯಲ್ಲಿ ಪೊಲೀಸರ ಕುರಿತು ಮಾತನಾಡಿ, ಈಗ ಕಾಂಗ್ರೆಸ್ ಸರ್ಕಾರವಿದೆ ಎಂಬ ಕಾರಣಕ್ಕೆ ಕೇಸ್ ಹಾಕುತ್ತಿದ್ದೀರಿ. ನಾಳೆ ನಮ್ಮ ಸರಕಾರ ಬಂದಾಗ ನಿಮಗೆ ಏನು ಮಾಡಬೇಕು ಎಂದು ನಮಗೆ ಗೊತ್ತಿದೆ. ನೆನಪಿರಲಿ ಸರಕಾರ ಬದಲಾಗುತ್ತೆ. ಅಧಿಕಾರಿಗಳು ನೀವೇ ಇರುತ್ತೀರಿ. ನೀವು ಯಾರು ಅನ್ಯಾಯ ಮಾಡಬೇಡಿ. ಸಿಎಎ ಗಲಾಟೆಯಾದಾಗ ನಿಮ್ಮ ಪರ ನಿಂತಿದ್ದು ಬಿಜೆಪಿ ಹಾಗೂ ಸಂಘಟನೆಯ ಕಾರ್ಯಕರ್ತರು ಎಂದು ಎಚ್ಚರಿಸಿದರು.

  • ದೂರು ಕೊಟ್ಟು ಶಿಕ್ಷಕಿ ತಪ್ಪು ಮುಚ್ಚಿ ಹಾಕಲು ಸಾಧ್ಯವಿಲ್ಲ: ಸಿ.ಟಿ.ರವಿ

    ದೂರು ಕೊಟ್ಟು ಶಿಕ್ಷಕಿ ತಪ್ಪು ಮುಚ್ಚಿ ಹಾಕಲು ಸಾಧ್ಯವಿಲ್ಲ: ಸಿ.ಟಿ.ರವಿ

    ನವದೆಹಲಿ: ಶಾಸಕ ವೇದವ್ಯಾಸ ಕಾಮತ್ (Vedavyas Kamath) ಹಾಗೂ ಭರತ್ ಶೆಟ್ಟಿ (Bharath Shetty) ವಿರುದ್ಧ ಎಫ್‌ಐಆರ್ (FIR) ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸಿ.ಟಿ.ರವಿ (CT Ravi) ಪ್ರತಿಕ್ರಿಯಿಸಿದ್ದಾರೆ. ಯಾರು ಯಾರ ಮೇಲೆ ದೂರು ನೀಡಿದರೂ ಎಫ್‌ಐಆರ್ ಹಾಕುವುದು ನಿಯಮ. ತನಿಖೆ ನಡೆದ ಮೇಲೆ ಯಾರ ತಪ್ಪು ಗೊತ್ತಾಗಲಿದೆ. ದೂರು ಕೊಟ್ಟು ಶಿಕ್ಷಕಿ ತಮ್ಮ ತಪ್ಪು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.

    ಈ ಕುರಿತು ನವದೆಹಲಿಯಲ್ಲಿ (New Delhi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ದಾಖಲಿಸಲು ಶಿಕ್ಷಕಿ ಸ್ವತಂತ್ರರು. ಆದರೆ ಶಿಕ್ಷಕಿ ಹಿಂದೂ ಧರ್ಮದ ವಿರುದ್ಧ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ. ನಿರಂತರವಾಗಿ ಇದು ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇಂತಹ ಆರೋಪಗಳು ಬಂದಾಗ ಜನಪ್ರತಿನಿಧಿಗಳು ಅಲ್ಲಿಗೆ ಹೋಗಬೇಕಾಗುತ್ತದೆ. ಶಿಕ್ಷಕಿ ದೂರು ನೀಡಿದ ತಕ್ಷಣ ತಾನು ಮಾಡಿದ ತಪ್ಪು ಮುಚ್ಚಿಹಾಕಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯಲಿ, ಸತ್ಯಾಸತ್ಯತೆ ಹೊರಬರಲಿ ಎಂದರು. ಇದನ್ನೂ ಓದಿ: ವಸತಿ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ಸರ್ಕಾರ ಬ್ರೇಕ್

    ಇನ್ನು ರಾಜ್ಯಸಭೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಒಂದು ಸ್ಥಾನ ಗೆದ್ದ ಬಳಿಕ 39 ಮತಗಳು ಉಳಿಯಲಿದೆ. ಎರಡನೇ ಅಭ್ಯರ್ಥಿಗೆ ಆರು ಮತಗಳ ಕೊರತೆ ಇದೆ. ಹಲವು ಕಾರಣಕ್ಕೆ ಹಲವು ಪಕ್ಷದ ನಾಯಕರು ಸ್ನೇಹಿತರಾಗುತ್ತಾರೆ. ಹಾಗಾಗಿ ಆರು ಮತ ಪಡೆಯುವ ವಿಶ್ವಾಸ ಇರಬಹುದು. ಆ ಮತಗಳು ಬಂದ್ರೆ ಗೆಲುವು ಕಷ್ಟ ಅಲ್ಲ. ಈ ಹಿಂದೆ 10-12 ಮತಗಳು ಕೊರತೆ ಇದ್ದಾಗಲೂ ಗೆದ್ದು ಬಂದ ಉದಾಹರಣೆ ಇದೆ. ಈಗ ಆರು ಮತಗಳು ಮಾತ್ರ ಕೊರತೆ ಇದೆ. ಕುಪೇಂದ್ರ ರೆಡ್ಡಿ ಅವರಿಗೆ ಕಾಂಗ್ರೆಸ್‌ನಲ್ಲಿ ಬಹಳ ಜನ ಸ್ನೇಹಿತರು ಇದ್ದಾರೆ. ಅವರು ಸಹಾಯ ಮಾಡಿದರೆ ಗೆಲ್ಲಬಹುದು ಎಂದು ಹೇಳಿದರು. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ ಸೋನಿಯಾ ಗಾಂಧಿ

    ಲೋಕಸಭೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 1995ರ ಬಳಿಕ ನಾನು ಪಕ್ಷದಲ್ಲಿ ಏನೂ ಕೇಳಿ ಪಡೆದುಕೊಂಡಿಲ್ಲ. ಪಕ್ಷದ ತೀರ್ಮಾನ ಕಾರ್ಯಕರ್ತನಾಗಿ ಪಾಲಿಸುತ್ತೇನೆ. ಬಿಜೆಪಿ (BJP) ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಆದ ತಯಾರಿ ಮಾಡಿಕೊಳ್ಳುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಎಂ ಸಿದ್ದರಾಮಯ್ಯ

  • ಹೊಸದು ಬೇಡ, ಬೊಮ್ಮಾಯಿ ಮಂಜೂರುಗೊಳಿಸಿದ ಯೋಜನೆಯ ಅನುದಾನ ನೀಡಲಿ: ವೇದವ್ಯಾಸ ಕಾಮತ್

    ಹೊಸದು ಬೇಡ, ಬೊಮ್ಮಾಯಿ ಮಂಜೂರುಗೊಳಿಸಿದ ಯೋಜನೆಯ ಅನುದಾನ ನೀಡಲಿ: ವೇದವ್ಯಾಸ ಕಾಮತ್

    ಮಂಗಳೂರು: ಹೊಸ ಅನುದಾನ ನೀಡೋದು ಬೇಡ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಜೂರುಗೊಳಿಸಿದ ಯೋಜನೆಯ ಅನುದಾನ ನೀಡಲಿ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದಾವ್ಯಾಸ್ ಕಾಮತ್ ಆಗ್ರಹಿಸಿದರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಗೆ ಒಂದು ರೂಪಾಯಿ ಕೊಟ್ಟಿದ್ದು ತೋರಿಸಲಿ. ಅನುದಾನ ಸ್ಥಗಿತದಿಂದ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಬಿಜೆಪಿ ಶಾಸಕರಿದ್ದಾರೆ ಎಂದು ಅನುದಾನ ನೀಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಮದು ಆಕ್ರೋಶ ಹೊರಹಾಕಿದ್ದಾರೆ.

    ವಿಪಕ್ಷ ನಾಯಕ ಆಯ್ಕೆ ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಸರಕಾರದ ವಿರುದ್ಧದ ನಮ್ಮ ಹೋರಾಟಕ್ಕೆ ಯಾವುದೇ ತೊಡಕಾಗಿಲ್ಲ ಎಂದರು. ಇದನ್ನೂ ಓದಿ: ‘ಮೈ ಲಾರ್ಡ್’ ಹೇಳೋದು ಬಿಟ್ರೆ ನನ್ನ ಸಂಬಳದಲ್ಲಿ ಅರ್ಧ ಕೊಡ್ತೀನಿ: ಸುಪ್ರೀಂ ಜಡ್ಜ್

    ಇದೇ ವೇಳೆ ಮರಳು ಅನುದಾನ ಸ್ಥಗಿತ ವಿಚಾರ ವಿರುದ್ಧ ಕಿಡಿಕಾರಿರುವ ಕಾಮತ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಬಿಗಡಾಯಿಸಿದೆ. ನೇತ್ರಾವತಿ ಹಾಗೂ ಫಲ್ಗುಣಿ ನದಿಯ ಮರಳು ದಿಬ್ಬಗಳನ್ನ ಗುರುತಿಸಿ ವರದಿಯನ್ನ ಕರಾವಳಿ ನಿರ್ವಹಣಾ ಸಮಿತಿಗೆ ಕಳುಹಿಸಲಾಗಿದೆ. ಬಿಲ್ಡಿಂಗ್ ಕಂಟ್ರಾಕ್ಟರ್ಸ್ ಬಳಿ ಕೇಳಿದ್ರೆ ಮರಳಿಲ್ಲ ಎನ್ನುತ್ತಾರೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡುತ್ತೆ ಎಂದು ಭರವಸೆ ನೀಡಿತ್ತು ಎಂದರು.

    ಕೂಲಿ ಕಾರ್ಮಿಕರಿಂದ ಹಿಡಿದು ಕಟ್ಟಡ ಕಾಮಗಾರಿ ವ್ಯಾಪಾರಸ್ಥರಿಗೂ ತೊಂದರೆಯಾಗಿದೆ. ವಲಸೆ ಕಾರ್ಮಿಕರು ತಮ್ಮ ಜಿಲ್ಲೆಗೆ ವಾಪಾಸ್ ಆಗುತ್ತಿದ್ದಾರೆ. ಈಗಾಗಲೇ ಒಂದಕ್ಕೆ ದುಪ್ಪಟ್ಟು ಕೊಟ್ಟು ಬ್ಲ್ಯಾಕ್ ಮಾರ್ಕೆಟ್ ನಿಂದ ಮರಳು ಪಡೆಯಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಮಂಗಳೂರಿನ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ 23 ಡಯಾಲಿಸಿಸ್ ಯಂತ್ರಗಳಿದೆ. ಅದರಲ್ಲಿ 9 ಯಂತ್ರ ಔಟ್ ಆಫ್ ಆರ್ಡರ್ ಆಗಿದೆ ಎಂದು ಹೇಳಿದರು.

    ಆರೋಗ್ಯ ಮಂತ್ರಿಗಳು ಉಸ್ತುವಾರಿಯಾಗಿರುವ ಜಿಲ್ಲೆಯಲ್ಲಿ ಈ ರೀತಿಯ ಪರಿಸ್ಥಿತಿಯಿದೆ. ಜನರ ಸಂಪೂರ್ಣ ಅರೋಗ್ಯ ಕೆಟ್ಟು ಹೋದ ಮೇಲೇ ಹೊಸ ಯಂತ್ರ ತೆಗೆದುಕೊಳ್ತಾರಾ..?. ಉಸ್ತುವಾರಿ ಸಚಿವರು ಬೇರೇ ಬೇರೇ ಪಾರ್ಟಿಯ ಕೆಲಸಕ್ಕೆ ಹೋಗುವುದನ್ನ ಬಿಟ್ಟು ಇತ್ತ ಗಮನ ಹರಿಸಲಿ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತುಳುವನ್ನು 2ನೇ ಅಧಿಕೃತ ಭಾಷೆಯನ್ನಾಗಿ ಮಾಡಿ – ಮುಲ್ಪ ಪಾತೆರೊಡ್ಚಿ, ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ತುಳುವನ್ನು 2ನೇ ಅಧಿಕೃತ ಭಾಷೆಯನ್ನಾಗಿ ಮಾಡಿ – ಮುಲ್ಪ ಪಾತೆರೊಡ್ಚಿ, ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು ತುಳು ಭಾಷೆ (Tulu Language) ಗಮನಸೆಳೆದಿದೆ. ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಮನವಿ ಮಾಡಿದ್ದಾರೆ.

    ತುಳು ಭಾಷೆಯಲ್ಲೇ ಮಾತನಾಡಿ ಅಶೋಕ್ ಕುಮಾರ್ ರೈ ಗಮನಸೆಳೆದಿದ್ದು, ಈ ವೇಳೆ ಸ್ಪೀಕರ್ ಯುಟಿ ಖಾದರ್ (UT Khader) ತುಳು ಭಾಷೆಯಲ್ಲೇ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ತುಳುವಿನಲ್ಲಿ ಮಾತನಾಡಲು ಮುಂದಾದಾಗ ಕನ್ನಡದಲ್ಲಿ ಮಾತನಾಡಿ ಎಂದು ಸ್ಪೀಕರ್ ಖಾದರ್ ಸೂಚನೆ ನೀಡಿದ್ರು.

    ಬಳಿಕ ಕನ್ನಡ ಹಾಗೂ ತುಳುವಿನಲ್ಲಿ ವೇದವ್ಯಾಸ್ ಕಾಮತ್ ಮಾತನಾಡಿದ್ದಾರೆ. ತುಳುವಿನಲ್ಲಿ ಮಾತನಾಡುವುದಕ್ಕೆ ವಿರೋಧ ಇಲ್ಲ. ಆದರೆ ಬರೆದುಕೊಳ್ಳುವವರಿಗೆ ಸಮಸ್ಯೆ ಆಗುತ್ತದೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಧ್ವನಿಯೆತ್ತಿದ್ದಾರೆ. ನೀವು ತುಳುವಿನಲ್ಲಿ ಮಾತನಾಡಿದರೆ ನಾನು ಅರ್ಥ ಆಗದೇ ಉತ್ತರ ಕೊಡುವುದು ಹೇಗೆ ಎಂದು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಹಿಂದೂ ಸಮಾಜ ಉಳಿಸುತ್ತಿರುವವರು ಮೇಲ್ಜಾತಿ ಹುಡುಗರಲ್ಲ: ಯತ್ನಾಳ್‌

    ಈ ವೇಳೆ ಸ್ಪೀಕರ್ ಮಾತನಾಡಿ, ತುಳು ಮಾತನಾಡಿದಾಗ ಎಲ್ಲರೂ ಖುಷಿ ಖುಷಿಯಿಂದ ಇದ್ದರು. ತುಳು ಮಾತನಾಡುವವರು ಎಲ್ಲರನ್ನೂ ಖುಷಿಯಾಗಿರಿಸುತ್ತಾರೆ. ನೀವು ಕೂಡಾ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಂದು ಸಲಹೆ ನೀಡಿದರು.

    ಆಗ ಶಿವರಾಜ್ ತಂಗಡಗಿ ಮಾತನಾಡಿ ವರದಿಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುವುದಾಗಿ ಉತ್ತರಿಸಿದರು. ನೀವು ಕಾನೂನು ಇಲಾಖೆ, ಎಲ್ಲಾ ಇಲಾಖೆಗಳ ವರದಿಗಳನ್ನು ತರಿಸಿಕೊಂಡು ತುಳು ಭಾಷೆಯನ್ನು 2ನೇ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಿ ಎಂದು ಸಚಿವರಿಗೆ ಸ್ಪೀಕರ್ ಖಾದರ್ ಸೂಚಿಸಿದರು. ಇದನ್ನೂ ಓದಿ: ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಆರೋಪ – ಬ್ರಿಜ್ ಭೂಷಣ್ ಸಿಂಗ್‌ಗೆ ಮಧ್ಯಂತರ ಜಾಮೀನು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತಾಂತರ ನಿಷೇಧ ಕಾಯಿದೆ ಹಿಂಪಡೆದರೆ ಹೋರಾಟ: ವೇದವ್ಯಾಸ ಕಾಮತ್ ಎಚ್ಚರಿಕೆ

    ಮತಾಂತರ ನಿಷೇಧ ಕಾಯಿದೆ ಹಿಂಪಡೆದರೆ ಹೋರಾಟ: ವೇದವ್ಯಾಸ ಕಾಮತ್ ಎಚ್ಚರಿಕೆ

    ಮಂಗಳೂರು: ಬಿಜೆಪಿ ಸರ್ಕಾರ (BJP Government) ದ ಅವಧಿಯಲ್ಲಿ ಜಾರಿಗೆ ಬಂದಿದ್ದ ಮತಾಂತರ ನಿಷೇಧ ಕಾಯಿದೆ (Anti-conversion Law) ಯನ್ನು ವಾಪಸ್ ಪಡೆಯುವ ಕಾಂಗ್ರೆಸ್ ಸರ್ಕಾರ (Central Government) ದ ನಿರ್ಧಾರವನ್ನು ಸ್ಪಷ್ಟವಾಗಿ ವಿರೋಧಿಸುವುದಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ (Vedavyas Kamath)ಹೇಳಿದ್ದಾರೆ.

    ಮತಾಂತರ ಎಂಬದು ಒಂದು ಸಾಮಾಜಿಕ ಪಿಡುಗು. ಇದು ಸಮಾಜದ ಅವನತಿಗೆ ಕಾರಣವಾಗಬಲ್ಲದು ಎನ್ನುವ ಸದುದ್ದೇಶದಿಂದ ನಮ್ಮ ಸರ್ಕಾರದ ಅವಧಿಯಲ್ಲಿ ಬಲವಂತದ ಮತಾಂತರ ನಿಷೇಧಿಸುವ ಕಾಯಿದೆ ಜಾರಿಗೊಳಿಸಲಾಗಿತ್ತು. ಆದರೆ ಈಗ ಆಮಿಷಗಳನ್ನೊಡ್ಡಿ, ಬೆದರಿಸಿ ಮತಾಂತರ ಮಾಡುವವರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ರದ್ದುಪಡಿಸುವ ನಿರ್ಧಾರ ಮೂಲಕ ಕಾಂಗ್ರೆಸ್ (Congress) ಸಮಾಜಕ್ಕೆ ಏನು ಸಂದೇಶ ನೀಡಲು ಹೊರಟಿದೆ?. ಮುಕ್ತವಾಗಿ ಮತಾಂತರಗೊಳಿಸಲು ಸಮಾಜ ವಿದ್ರೋಹಿಗಳಿಗೆ ಕಾಂಗ್ರೆಸ್ ಆಹ್ವಾನ ನೀಡುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

    ಬಲವಂತದಿಂದ ಮತಾಂತರ ಮಾಡುವವರಿಗೆ ಕಾನೂನಿನಡಿಯಲ್ಲಿ ಶಿಕ್ಷೆಗೊಳಪಡಿಸುವ ಕಾಯಿದೆಯನ್ನು ರದ್ದುಪಡಿಸುವ ಮೂಲಕ ರಾಜ್ಯದಲ್ಲಿ ಮತಾಂತರಿಗಳ ಅಟ್ಟಹಾಸಕ್ಕೆ ರತ್ನ ಕಂಬಳಿ ಹಾಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ನಿರಂತರವಾಗಿ ಹಿಂದೂ ಸಮಾಜವನ್ನು ಒಡೆಯುವ ಕೃತ್ಯವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಶಾಸಕ ಕಾಮತ್ ಆರೋಪಿಸಿದ್ದಾರೆ.

    ಮತಾಂತರ ನಿಷೇಧ ಕಾಯಿದೆಯನ್ನು ವಾಪಸ್ ಪಡೆಯುವ ತನ್ನ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ಇಡೀ ಹಿಂದೂ ಸಮಾಜ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ವಾಪಸ್ – ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

  • 4 ವರ್ಷದಲ್ಲಿ 300ಕ್ಕೂ ಅಧಿಕ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ: ವೇದವ್ಯಾಸ್ ಕಾಮತ್

    4 ವರ್ಷದಲ್ಲಿ 300ಕ್ಕೂ ಅಧಿಕ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ: ವೇದವ್ಯಾಸ್ ಕಾಮತ್

    ಮಂಗಳೂರು:ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯಿಂದ ಮಂಗಳೂರು(Mangaluru) ನಗರ ದಕ್ಷಿಣ ವ್ಯಾಪ್ತಿಯಲ್ಲಿರುವ 108 ದೇವಸ್ಥಾನ, ದೈವಸ್ಥಾನ ಹಾಗೂ ಮಂದಿರಗಳ ಅಭಿವೃದ್ಧಿಗಾಗಿ 6 ಕೋಟಿಗೂ ಅಧಿಕ ಅನುದಾನ ಬಂದಿದ್ದು, ಶಾಸಕ ವೇದವ್ಯಾಸ್ ಕಾಮತ್(Vedavyas Kamath) ಅವರು ಕ್ಷೇತ್ರದ ಪ್ರಮುಖರಿಗೆ ಆದೇಶ ಪತ್ರವನ್ನು ವಿತರಿಸಿದರು.

    ಉರ್ವಸ್ಟೋರ್ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ‌ಶಾಸಕ‌ ವೇದವ್ಯಾಸ್ ಕಾಮತ್, ನಗರದ ದೇವಸ್ಥಾನ, ದೈವಸ್ಥಾನ ಹಾಗೂ ಮಂದಿರಗಳ ಅಭಿವೃದ್ಧಿಯ ನೆಲೆಯಲ್ಲಿ ಕಳೆದ 4 ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸದ್ಯ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ 108 ದೇವಸ್ಥಾನ, ದೈವಸ್ಥಾನ ಮತ್ತು ಮಂದಿರಗಳ ಅಭಿವೃದ್ಧಿಗೆ 6 ಕೋಟಿ ರೂಪಾಯಿಗೂ ಅಧಿಕ ಅನುದಾನ ಬಂದಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಆಡಳಿತ ಸಮಿತಿಯ ಪ್ರಮುಖರ ಸಭೆ ಕರೆದು ಆದೇಶ ಪತ್ರ ವಿತರಿಸಲಾಗಿದೆ ಎಂದು ಹೇಳಿದರು.

    ಅನುದಾನ ಪಡೆಯುವ ಸಂದರ್ಭದಲ್ಲಿ ಪೂರಕ ದಾಖಲೆಗಳ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಪಡೆದುಕೊಂಡು ಕ್ಷೇತ್ರದ ಅಭಿವೃದ್ಧಿಪಡಿಸಲು ಸಹಕಾರ ನೀಡಲು ಅಧಿಕಾರಿಗೆ ಸೂಚನೆ ನೀಡಲಾಗಿದೆ. ಕಳೆದ 4 ವರ್ಷಗಳಿಂದ ಮಂಗಳೂರು ನಗರದ ಸರಿಸುಮಾರು 300ಕ್ಕೂ ಅಧಿಕ ದೇವಸ್ಥಾನ, ದೈವಸ್ಥಾನ, ನಾಗಬನ, ಮಂದಿರಗಳ ಅಭಿವೃದ್ಧಿಗೆ ಗರಿಷ್ಠ ಪ್ರಮಾಣದ ಅನುದಾನ ಬಿಡುಗಡೆಗೊಳಿಸಿದ್ದೇನೆ. ಈ ಹಿಂದಿನ ಸರಕಾರ‌ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಕಡೆಗಣಿಸಿದ್ದು, ನಮ್ಮ ಸರಕಾರದಿಂದ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಮೂಲಕ ಐತಿಹಾಸಿಕ ಪ್ರಮಾಣದ ಅನುದಾನ ಬಿಡುಗಡೆಗೊಳಿಸಲಾಗಿದೆ. ಬೇರೆ ಸರಕಾರದ ಅವಧಿಯಲ್ಲಿ ಈ ಮಟ್ಟದ ಅನುದಾನಗಳೇಕೆ ಬಂದಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ಶುರುವಾಯಿತು ಚಾಮರಾಜಪೇಟೆ ಮೈದಾನ ಫೈಟ್ – ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಪಟ್ಟು

    ಮುಂದಿನ ದಿನಗಳಲ್ಲಿ ಮತ್ತಷ್ಟು ಹಿಂದೂ(Hindu) ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದ್ದು, 50 ರಿಂದ 60 ಕ್ಷೇತ್ರಗಳ ಅಭಿವೃದ್ಧಿಯ ಯೋಜನೆಯಿದೆ. ನಗರದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಇಲಾಖೆಯಿಂದ 20 ಕೋಟಿಗೂ ಅಧಿಕ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ.

    ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಪಡೆಯುವ ಕುರಿತು ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ತನ್ನ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಲು ಶಾಸಕ ಕಾಮತ್ ತಿಳಿಸಿದ್ದು, ಕ್ಷೇತ್ರದ ನೊಂದಾಣಿಯಾದ ದಾಖಲೆ, ಬ್ಯಾಂಕ್ ಖಾತೆಯ ವಿವರ, ಕಾಮಗಾರಿ ಕೈಗೊಳ್ಳಲಿರುವ‌ ಸ್ಥಳದ ಪಹಣಿ ಪತ್ರ, ಕಟ್ಟಡ ಪರವಾನಗಿ ಪತ್ರ, ಕಾಮಗಾರಿಯ ಅಂದಾಜು ಪಟ್ಟಿ, ಹಾಗೂ ಸ್ಟಾಂಪ್ ಪೇಪರ್ ಮೂಲಕ ಅನುದಾನ ದುರ್ಬಳಕೆಯಾಗದಂತೆ ಪ್ರಮಾಣಪತ್ರವನ್ನು ಅಫಿಡವಿತ್ ಸಲ್ಲಿಸಿದರೆ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ನಿಕಟಪೂರ್ವ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು,ಮಾಜಿ ಕಾರ್ಪೋರೇಟರ್ ವಿಜಯ್ ಕುಮಾರ್ ಶೆಟ್ಟಿ, ರಾಜ್ಯ ಮೀನುಗಾರಿಕಾ ನಿಗಮದ ನಿಕಟಪೂರ್ವ ಅಧ್ಯಕ್ಷರಾದ ‌ನಿತಿನ್ ಕುಮಾರ್, ಪಾಲಿಕೆಯ ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳು, ಕ್ಷೇತ್ರಗಳ ಆಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ದ.ಕ.ಜಿಲ್ಲಾ ಪತ್ರಕರ್ತರಿಗೆ ನಿವೇಶನ ನೀಡೋದು ನಮ್ಮ ಜವಾಬ್ದಾರಿ: ವೇದವ್ಯಾಸ್ ಕಾಮತ್

    ದ.ಕ.ಜಿಲ್ಲಾ ಪತ್ರಕರ್ತರಿಗೆ ನಿವೇಶನ ನೀಡೋದು ನಮ್ಮ ಜವಾಬ್ದಾರಿ: ವೇದವ್ಯಾಸ್ ಕಾಮತ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ಕ್ರೀಯಾಶೀಲರಾಗಿದ್ದು, ಬ್ರ್ಯಾಂಡ್ ಮಂಗಳೂರು, ಗ್ರಾಮ ವಾಸ್ತವ್ಯ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮ ಮೂಲಕ ರಾಜ್ಯಕ್ಕೆ ಮಾದರಿಯಾದವರು. ಈ ಜಿಲ್ಲೆಯ ಪತ್ರಕರ್ತರ ಬಹುಕಾಲದ ಬೇಡಿಕೆಯಾದ ನಿವೇಶನದ ಕನಸು ನನಸು ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

    ನಗರದ ಲೇಡಿಹಿಲ್ ಪತ್ರಿಕಾಭವನದಲ್ಲಿ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಹಕಾರ ಸಂಘಗಳ ಕೊಡುಗೆ ಅಪಾರವಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿರುವುದು ಹೆಮ್ಮೆಯ ವಿಷಯ. ಸಂಘವು ಅತೀ ಶೀಘ್ರವಾಗಿ ಬೆಳವಣಿಗೆ ಕಂಡು ಷೇರು, ಡೆಪಾಸಿಟ್ ಸಂಗ್ರಹಿಸಿ ಬ್ಯಾಂಕಿಂಗ್ ವ್ಯವಹಾರವನ್ನು ಆರಂಭಿಸಲಿ. ಜಿಲ್ಲಾಮಟ್ಟದಿಂದ ತಾಲೂಕು ಮಟ್ಟಕ್ಕೂ ವಿಸ್ತರಣೆಯಾಗಲಿ. ಈ ಮೂಲಕ ಪತ್ರಕರ್ತರಲ್ಲಿ ಶಕ್ತಿಯನ್ನು ತುಂಬುವ ಕೆಲಸವಾಗಲಿ. ಪತ್ರಕರ್ತರಿಗೆ ನಿವೇಶನ ಸೇರಿದಂತೆ ಬ್ಯಾಂಕಿಂಗ್ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನಡೆಯಲು ಶಾಸಕರಾಗಿ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು. ಇದನ್ನೂ ಓದಿ: ಅರ್ಚಕನ ಬರ್ಬರ ಹತ್ಯೆ- ದೇವಸ್ಥಾನದಲ್ಲಿ ಅರೆ ಸುಟ್ಟ ಶವ

    ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಪತ್ರಕರ್ತರು ಅತ್ತ ಬಿಪಿಎಲ್ ಅಲ್ಲ, ಇತ್ತ ಎಪಿಎಲ್ ಇಲ್ಲ ಎಂಬಂತೆ ಮಧ್ಯಮ ಕುಟುಂಬದಲ್ಲಿ ಬದುಕುವವರು. ಸಮಾಜಕ್ಕೆ ಸದಾ ಒಳಿತನ್ನು ಬಯಸುವ ಇಂತಹ ಪತ್ರಕರ್ತರಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯವಾಗಿದೆ. ಒಳ್ಳೆಯ ಉದ್ದೇಶದೊಂದಿಗೆ ಈ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಇದರ ಶ್ರೇಯೋಭಿವೃದ್ಧಿ ಮತ್ತು ನಿವೇಶನಕ್ಕೆ ಸಂಬಂಧಪಟ್ಟಂತೆ ನನ್ನಿಂದ ಸಂಪೂರ್ಣ ಸಹಕಾರ ನೀಡುತ್ತೇನೆ. ಸಹಕಾರ ಸಂಘಗಳು ಆರ್ಥಿಕ ಶಿಸನ್ನು ಬೆಳೆಸಿಕೊಂಡಲ್ಲಿ ಅತೀ ವೇಗವಾಗಿ ಬೆಳವಣಿಗೆ ಕಾಣಲು ಸಾಧ್ಯ ಎಂದರು. ಇದನ್ನೂ ಓದಿ: 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ: ಹೆಚ್.ಡಿ.ಕೆ

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು. ಪತ್ರಕರ್ತರ ಗಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷೃ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪಾಧ್ಯಕ್ಷೃ ಭಾಸ್ಕರ ರೆ ಕಟ್ಟ ವಂದಿಸಿದರು. ಸಹಕಾರಿ ಸಂಘದ ನಿರ್ದೇಶಕ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

  • ಕುದ್ಮುಲ್ ರಂಗರಾವ್ ಸ್ಮಾರಕ ಅಭಿವೃದ್ಧಿಗೆ 3 ಕೋಟಿ ಅನುದಾನ -ಶಾಸಕ ವೇದವ್ಯಾಸ್ ಕಾಮತ್

    ಕುದ್ಮುಲ್ ರಂಗರಾವ್ ಸ್ಮಾರಕ ಅಭಿವೃದ್ಧಿಗೆ 3 ಕೋಟಿ ಅನುದಾನ -ಶಾಸಕ ವೇದವ್ಯಾಸ್ ಕಾಮತ್

    ಮಂಗಳೂರು: ಕುದ್ಮುಲ್ ರಂಗರಾವ್ ಅವರ ಸ್ಮಾರಕವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು 3 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.

    ಕುದ್ಮುಲ್ ರಂಗರಾವ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಅತ್ತಾವರ ಬಾಬುಗುಡ್ಡೆಯಲ್ಲಿರುವ ಅವರ ಸ್ಮಾರಕದಲ್ಲಿ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕಾಮತ್, ಕುದ್ಮುಲ್ ರಂಗರಾವ್ ಅವರು ಹಿಂದುಳಿತದ ವರ್ಗದ ಜನರಿಗಾಗಿ ತನ್ನ ಬದುಕನ್ನು ಶ್ರೀಗಂಧದಂತೆ ಸವೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ತನ್ನ ಸರ್ವಸ್ವವನ್ನೂ ಧಾರೆಯೆರೆದವರು. ಮುಂದಿನ ಪೀಳಿಗೆ ಕುದ್ಮುಲ್ ರಂಗರಾಯರ ಕುರಿತು ತಿಳಿಸುವ ನಿಟ್ಟಿನಲ್ಲಿ ಸ್ಮಾರಕ ಅಭಿವೃದ್ಧಿಗೆ 3 ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಕಾಮತ್ ಹೇಳಿದರು. ಇದನ್ನೂ ಓದಿ:  ಲಸಿಕಾ ಕೇಂದ್ರದಲ್ಲಿ ಗಳ ಗಳನೇ ಅತ್ತ ವಿದ್ಯಾರ್ಥಿನಿ

    ಸ್ಮಾರಕ ಅಭಿವೃದ್ಧಿಗೆ ಸರಿ ಸುಮಾರು 40 ಸೆಂಟ್ಸ್ ಜಾಗ ಕಾಯ್ದಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್, ಮುಂಡಾಲ ಯುವ ವೇದಿಕೆ ಹಾಗೂ ಪರಿಶಿಷ್ಟ ಜಾತಿ ಪಂಗಡದ ಎಲ್ಲಾ ಮುಖಂಡರನ್ನೂ ಸೇರಿಸಿಕೊಂಡು ಸ್ಮಾರಕ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯಲ್ಲಿ ಗ್ರಂಥಾಲಯ ಹಾಗೂ ಕುದ್ಮುಲ್ ರಂಗರಾವ್ ಅವರ ಪುತ್ಥಳಿಯನ್ನು ಸ್ಥಾಪಿಸಲಾಗುವುದು. ಮುಂದಿನ ದಿನಗಳಲ್ಲಿ ಇದು ಪ್ರವಾಸೋದ್ಯಮ ಕೇಂದ್ರವಾಗಲಿದೆ ಎಂದು ಶಾಸಕ ಕಾಮತ್ ಹೇಳಿದರು. ಇದನ್ನೂ ಓದಿ: ಬಾಲಕಿಯ ಚಿಕಿತ್ಸೆಗಾಗಿ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡಿದ ಜೆರ್ಸಿಯನ್ನು ಹರಾಜಿಗಿಟ್ಟ ಆಟಗಾರ

    ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ, ಕುದ್ಮುಲ್ ರಂಗರಾವ್ ಅವರು ಹಿಂದುಳಿದ ವರ್ಗಗಳ ಜನರ ಅಭ್ಯುದಯದ ಬಗ್ಗೆ ಕನಸು ಕಂಡಿದ್ದರು. ಅದಕ್ಕಾಗಿಯೇ ಪರಿಶಿಷ್ಟ ಜಾತಿ ಪಂಗಡದ ಜನರಿಗಾಗಿ ಶಿಕ್ಷಣ ಸಂಸ್ಥೆ ಹಾಗೂ ಸ್ವಾವಲಂಭಿ ಬದುಕಿಗಾಗಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ತೆರೆದಿದ್ದರು. ಮುಂಬರುವ ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕುದ್ಮುಲ್ ರಂಗರಾವ್ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: 2 ವರ್ಷಗಳ ಹಿಂದೆ ಮಾರಿದ್ದ ಎತ್ತು, ವಧಾಲಯದಲ್ಲಿ ನೋಡಿದ ರೈತ

    ನಿವೃತ್ತ ಸಾರಿಗೆ ಅಧಿಕಾರಿ ಕುದ್ಮುಲ್ ರಂಗರಾವ್ ರಾಷ್ಟ್ರೀಯ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿಯ ಅಧ್ಯಕ್ಷರಾದ ಕೇಶವ ಧರಣಿ ಮಾತನಾಡಿ, ಕುದ್ಮುಲ್ ರಂಗರಾಯರು ನಮ್ಮ ಸಮುದಾಯದ ಪಾಲಿಗೆ ಆಶಾ ಕಿರಣದಂತೆ ಮೂಡಿ ಬಂದವರು. ನಮ್ಮ ಮಕ್ಕಳ ವಿಧ್ಯಾಭ್ಯಾಸ ಹಾಗೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಸಂತರು. ನಮ್ಮ ಸಮುದಾಯವು ಎಂದಿಗೂ ಅವರಿಗೆ ಚಿರಋಣಿಯಾಗಿರುತ್ತದೆ. ಶಾಸಕ ವೇದವ್ಯಾಸ್ ಕಾಮತ್ ಅವರು ಕುದ್ಮುಲ್ ರಂಗರಾವ್ ಹಾದಿಯಲ್ಲೇ ನಡೆಯುತಿದ್ದಾರೆ. ಅವರ ಅವಧಿಯಲ್ಲಿ ರಂಗರಾಯರ ಭವ್ಯ ಸ್ಮಾರಕ ನಿರ್ಮಾಣವಾಗಲಿ ಎಂದು ಹೇಳಿದರು. ಇದನ್ನೂ ಓದಿ:  ಮಂಜು, ದಿವ್ಯಾ ಸುರೇಶ್ ನಡುವೆ ಬಿರುಕು

    ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶೈಲೇಶ್ ಅತ್ತಾವರ, ಭರತ್ ಕುಮಾರ್, ಮನೋಜ್ ಕೋಡಿಕಲ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜಪ್ಪಿನಮೊಗರು, ಕಾರ್ಯದರ್ಶಿ ಲಲ್ಲೇಶ್ ಅತ್ತಾವರ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿನಯ್ ನೇತ್ರಾ, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಆಶಾ ಡಿಸಿಲ್ವ, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಜ್ವಲ್ ಚಿಲಿಂಬಿ, ನಾಗೇಶ್ ಕೊಡಕ್ಕಲ್, ಉಪಾಧ್ಯಕ್ಷರಾದ ದಯಾನಂದ ಸನ್ಯಾಸಿಗುಡ್ಡೆ, ದಿನೇಶ್ ನಂತೂರು, ಸಂದೀಪ್ ಬೋಳೂರು, ಕಾರ್ಯದರ್ಶಿ ಶ್ರೀಮತಿ ಗೀತಾ ಭವಾನಿ ಶಂಕರ್ ಸುಂಕದಕಟ್ಟೆ, ಸದಸ್ಯರಾದ ರವಿ ಕಾಪಿಕಾಡ್, ಗುರು ಪ್ರಸಾದೇ ಮೇಲಿನಮೊಗರು, ಶಕ್ತಿಕೇಂದ್ರ ಪ್ರಮುಖ ಪುಷ್ಪರಾಜ್ ಶೆಟ್ಟಿ, ಪ್ರಮೋದ್ ಕೊಟ್ಟಾರಿ, ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಬಿ.ಆರ್ ಹೃದಯನಾಥ್, ಉಪಾಧ್ಯಕ್ಷರಾದ ಶ್ಯಾಮ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಎಸ್.ಸಿ ಮೋರ್ಚಾ ಅಧ್ಯಕ್ಷರು ಹಾಗೂ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಘುವೀರ್ ಬಾಬುಗುಡ್ಡೆ ಸ್ವಾಗತಿಸಿ ಕಿರಣ್ ಕುಮಾರ್ ಕೊಡಿಯಾಲ್ ಬೈಲ್ ವಂದಿಸಿದರು.