Tag: Vedaant

  • ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆದ ಮಾಧವನ್ ಪುತ್ರ

    ಭುವನೇಶ್ವರ: ಬಹುಭಾಷಾ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ವೇದಾಂತ್ 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

    ಭಾನುವಾರ ಭುವನೇಶ್ವರದಲ್ಲಿ ನಡೆದ 1,500 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ವೇದಾಂತ್ ಕೇವಲ 16:01.73 ನಿಮಿಷಗಳಲ್ಲಿ ಗುರಿ ತಲುಪಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಹಿಂದೆ ಈಜುಪಟು ಅದ್ವೈತ್ 2017ರಲ್ಲಿ 16:06.45 ನಿಮಿಷಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. ಇದೀಗ ವೇದಾಂತ್ ಅದ್ವೈತ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: ಕೊನೆಗೂ ಮರಳಿ ಬಂತು ಪುನೀತ್ ರಾಜ್‌ಕುಮಾರ್ ಖಾತೆಗೆ ಬ್ಲೂ ಟಿಕ್

    ಈ ಸಂಭ್ರಮದ ವಿಚಾರವನ್ನು ಮಾಧವನ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ದಾಖಲೆ ಬಗ್ಗೆ ತಿಳಿಸಿರುವ ಮಾಧವನ್, ಎಂದಿಗೂ ಆಗಲ್ಲ ಎಂದು ಯಾವತ್ತೂ ಹೇಳಬೇಡಿ. 1,500 ಮೀಟರ್ ಫ್ರೀಸ್ಟೈಲ್ ರಾಷ್ಟ್ರೀಯ ಜೂನಿಯರ್ ದಾಖಲೆ ಇದೀಗ ಮುರಿದಿದೆ ಎಂದು ಬರೆದಿದ್ದು, ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ

    ವೇದಾಂತ್ ಈ ಹಿಂದೆಯೂ ಹಲವಾರು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಬಾಚಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವೇದಾಂತ್, ಸ್ವತಃ ಹೆಸರು ಮಾಡಲು ಬಯಸುವುದಾಗಿ ತಿಳಿಸಿದ್ದರು. ನನಗೆ ನನ್ನ ತಂದೆಯ ನೆರಳಿನಲ್ಲಿ ಬದುಕಲು ಇಷ್ಟವಿಲ್ಲ. ನಾನಾಗಿಯೇ ಹೆಸರು ಮಾಡಲು ಬಯಸುತ್ತೇನೆ. ನಾನು ಕೇವಲ ಆರ್. ಮಾಧವನ್ ಅವರ ಮಗನಾಗಿರಲು ಬಯಸುವುದಿಲ್ಲ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಗನ ಒಲಿಂಪಿಕ್ಸ್ ತಯಾರಿಗೆ ದುಬೈಗೆ ಮಾಧವನ್ ಸ್ಥಳಾಂತರ

    ಮುಂಬೈ: ನಟ ಆರ್ ಮಾಧವನ್ ಪುತ್ರ ವೇದಾಂತ್ ಪ್ರಸ್ತುತ ದುಬೈನಲ್ಲಿ 2026ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ತಯಾರಿಯನ್ನು ನಡೆಸುತ್ತಿದ್ದು, ಮಗನಿಗೆ ತರಬೇತಿಯಲ್ಲಿ ಸಹಾಯ ಮಾಡಲು ಮಾಧವನ್ ಪತ್ನಿಯೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

    ವೇದಾಂತ್ ಈಗಾಗಲೇ ರಾಷ್ಟ್ರೀಯ ಈಜು ಚಾಂಪಿಯನ್ ಆಗಿದ್ದು, ಮಾಧವನ್ ಹಾಗೂ ಅವರ ಪತ್ನಿ ವಿಶ್ವ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ವೇದಾಂತ್ ಪಾಲ್ಗೊಳ್ಳಲು ಒಳ್ಳೆಯ ತರಬೇತಿ ಕೊಡಿಸುವ ಬಗ್ಗೆ ಯೋಜಿಸಿದ್ದರು. ದುಬೈನಲ್ಲಿ ಮಗನ ತರಬೇತಿಗೆ ಒಳ್ಳೆಯ ಸೌಲಭ್ಯ ಇರುವುದನ್ನು ಖಚಿತಪಡಿಸಿಕೊಂಡಿದ್ದು, ಅವನಿಗೆ ಸಾಥ್ ನೀಡಲು ದಂಪತಿ ದುಬೈ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್ ಈಗ ಉತ್ತರಾಖಂಡ್ ಬ್ರಾಂಡ್ ಅಂಬಾಸಿಡರ್

    ಕೋವಿಡ್-19 ಪರಿಣಾಮವಾಗಿ ಮುಂಬೈನ ದೊಡ್ಡ ಈಜುಕೊಳಗಳನ್ನು ಮುಚ್ಚಲಾಗಿದೆ. ಹೀಗಾಗಿ ವೇದಾಂತ್‌ಗೆ ದುಬೈನಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ನಾನು ಹಾಗೂ ಸರಿತಾ ಅವನಿಗೆ ತರಬೇತಿಯಲ್ಲಿ ಸಹಾಯ ಮಾಡಲು ದುಬೈ ಪ್ರಯಾಣ ಬೆಳೆಸಿದ್ದೇವೆ ಎಂದು ಮಾಧವನ್ ಹೇಳಿದ್ದಾರೆ.

    ಇದರೊಂದಿಗೆ ಜನಪ್ರಿಯ ನಟ ಮಾಧವನ್ ತನ್ನ ಮಗ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡುವುದಿಲ್ಲ ಎಂಬ ಖಚಿತ ಉತ್ತರ ನೀಡಿದ್ದಾರೆ. ಮಕ್ಕಳು ಏನನ್ನು ಮಾಡಲು ಬಯಸುತ್ತಾರೋ ಪೋಷಕರೂ ಅದನ್ನೇ ಮಾಡಲು ಅವರಿಗೆ ಪ್ರೋತ್ಸಾಹ ನೀಡಬೇಕು. ವೇದಾಂತ್ ಪ್ರಪಂಚದಾದ್ಯಂತ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುತ್ತಿರುವುದು ನಮಗೆ ಬಹಳ ಹೆಮ್ಮೆಯ ವಿಷಯ ಎಂದರು. ಇದನ್ನೂ ಓದಿ: ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ

    ಇದೇ ಸಂದರ್ಭದಲ್ಲಿ ಮಾಧವನ್ ಎಲ್ಲಾ ಸ್ಟಾರ್ ಪೋಷಕರಿಗೂ ಸಲಹೆಯನ್ನು ನೀಡಿದ್ದಾರೆ. ಮಕ್ಕಳನ್ನು ಸ್ವತಂತ್ರವಾಗಿ ಹಾರಾಡಲು ಬಿಡಬೇಕು. ವೇದಾಂತ್ ನಟನೆಯನ್ನು ಆಯ್ಕೆ ಮಾಡದೇ ಇರುವುದರ ಬಗ್ಗೆ ನನಗೆ ಯಾವುದೇ ಬೇಜಾರಿಲ್ಲ. ನನ್ನ ಸ್ವಂತ ವೃತ್ತಿಗಿಂತ ಅವನ ಆಯ್ಕೆಯ ವೃತ್ತಿ ಮುಖ್ಯ ಎಂದು ಹೇಳಿದರು.