Tag: Veda Film

  • Vedaa: ವಿಲನ್ ಬಳಿಕ ಹೀರೋ ಆದ ಜಾನ್ ಅಬ್ರಹಾಂ

    Vedaa: ವಿಲನ್ ಬಳಿಕ ಹೀರೋ ಆದ ಜಾನ್ ಅಬ್ರಹಾಂ

    ಬಾಲಿವುಡ್ ನಟ ಜಾನ್ ಅಬ್ರಹಾಂ (John Abraham) ಈಗ ಆ್ಯಕ್ಷನ್ ಅವತಾರ ತಾಳಿದ್ದಾರೆ. ವಿಲನ್ ಬದಲು ಹೀರೋ ಆಗಿ ಜಾನ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಪಠಾಣ್ ವಿಲನ್ ಈಗ ‘ವೇದಾ’ಳ (Vedaa) ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಚುಂಬನ ಎಫೆಕ್ಟ್: ‘ಫೈಟರ್’ ಸಿನಿಮಾ ವಿರುದ್ಧ ಸಿಡಿದೆದ್ದ ವಾಯುಸೇನಾ ಅಧಿಕಾರಿ

    2019ರಲ್ಲಿ ಜಾನ್ ಅಬ್ರಹಾಂ- ನಿಖಿಲ್ ಅಡ್ವಾಣಿ ಕಾಂಬೋದಲ್ಲಿ ‘ಬಾಟ್ಲಾ ಹೌಸ್’ ಸಿನಿಮಾ ಗೆದ್ದಿತ್ತು. ಇದೀಗ ಮತ್ತೆ ‘ವೇದಾ’ ಎಂಬ ಸಿನಿಮಾ ಮೂಲಕ ಜಾನ್ ಅಬ್ರಾಹಂ ಹೀರೋ ಆಗಿ ನಟಿಸಿದ್ದು, ನಿಖಿಲ್ ಅಡ್ವಾಣಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ರಿವೀಲ್ ಆಗಿದ್ದು, ಜಾನ್ ಅಬ್ರಾಹಂ ರಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Nikkhil Advani (@nikkhiladvani)

    ಅವಳಿಗೆ ಒಬ್ಬ ರಕ್ಷಕನ ಅಗತ್ಯವಿತ್ತು. ಆಕೆಗೆ ಆಯುಧ ಸಿಕ್ಕಿತು, ಎಂದು ‘ವೇದಾ’ ಚಿತ್ರದ ಪೋಸ್ಟರ್ ಜೊತೆಗೆ ಕ್ಯಾಪ್ಷನ್ ಹಂಚಿಕೊಂಡಿದೆ ಚಿತ್ರತಂಡ. ಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಬಾಟ್ಲಾ ಹೌಸ್’ ನೈಜ ಘಟನೆ ಆಧರಿಸಿ ಸಿದ್ಧವಾದ ಸಿನಿಮಾವಾಗಿತ್ತು. ವೇದಾ ಇದು ಕೇವಲ ಸಿನಿಮಾ ಅಲ್ಲ. ನೈಜ ಘಟನೆ ಆಧರಿಸಿದ ನಮ್ಮ ಸಮಾಜದ ಪ್ರತಿಬಿಂಬ. ಅಬ್ರಾಹಂ, ಶಾರ್ವರಿ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾನ್ ಕಾಶ್ಮೀರದಲ್ಲಿ ‘ವೇದಾ’ ಚಿತ್ರೀಕರಣದ ಸ್ಕೆಡ್ಯೂಲ್ ಮುಗಿಸಿದ್ದರು.

    ಇದೇ ಜುಲೈ 12ಕ್ಕೆ ‘ವೇದಾ’ (Vedaa) ಸಿನಿಮಾ ರಿಲೀಸ್ ಆಗುತ್ತಿದೆ. ವಿಲನ್ ಆಗಿ ನಟಿಸಿ ಗೆದ್ದಿರೋ ಜಾನ್ ಅಬ್ರಹಾಂ ಹೀರೋ ಆಗಿ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಈಗ ಮತ್ತೆ ‘ವೇದಾ’ ಮೂಲಕ ಹೀರೋ ಆಗಿ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಜಾನ್ ಅಬ್ರಹಾಂಗೆ ಬಿಗ್ ಬ್ರೇಕ್ ಸಿಗುತ್ತಾ ಕಾಯಬೇಕಿದೆ.

  • ಶಿವಣ್ಣ ನಟನೆಯ ‘ವೇದ’ ಚಿತ್ರದಲ್ಲಿ ರಾಘು ಶಿವಮೊಗ್ಗ : ನಟನೆಯಲ್ಲೂ ಬ್ಯುಸಿಯಾದ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ

    ಶಿವಣ್ಣ ನಟನೆಯ ‘ವೇದ’ ಚಿತ್ರದಲ್ಲಿ ರಾಘು ಶಿವಮೊಗ್ಗ : ನಟನೆಯಲ್ಲೂ ಬ್ಯುಸಿಯಾದ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ

    ಚೌಕಬಾರ ಕಿರುಚಿತ್ರಕ್ಕಾಗಿ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ ಪಡೆದಿರುವ ನಿರ್ದೇಶಕ ರಾಘು ಶಿವಮೊಗ್ಗ ಈಗ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲಿ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು, ಅರಸಿ ಸೇರಿದಂತೆ ಅನೇಕ ಹಿಟ್ ಧಾರಾವಾಹಿಗಳಲ್ಲಿ ನಟಿಸಿದರು. ಮದರಂಗಿ, ಜನುಮದ ಜೋಡಿ ಧಾರಾವಾಹಿಗಳಿಗೆ ನಿರ್ದೇಶನ ಮಾಡಿದರು. ಅಲ್ಲಿಂದ ಸಿನಿಮಾ ರಂಗಕ್ಕೂ ಕಾಲಿಟ್ಟು ‘ಚೂರಿಕಟ್ಟೆ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು.  ಪ್ರವೀಣ್ ನಾಯಕನಟನಾಗಿ ನಟಿಸಿರುವ ಈ ಸಿನಿಮಾ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.  ಇದನ್ನೂ ಓದಿ : ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್

    ಅಲ್ಲಿಂದ ರಾಘು ಮತ್ತೆ ನಟನೆಯತ್ತ ಮುಖ ಮಾಡಿದರು. ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಸಿನಿಮಾದ ಬೆಂಜಮನ್ ಪಾತ್ರ  ರಾಘು ಶಿವಮೊಗ್ಗ ವೃತ್ತಿ ಬದುಕಿಗೆ ಮತ್ತೊಂದು ತಿರುವು ನೀಡಿತು. ಅಲ್ಲಿಂದ ಇದೀಗ ನಟನೆಯಲ್ಲೇ ಬ್ಯುಸಿಯಾಗಿದ್ದಾರೆ. ಲವ್ ಯೂ ರಚ್ಚು,  ರೂಮ್ ಬಾಯ್, ಸದ್ದು ವಿಚಾರಣೆ ನಡೆಯುತ್ತಿದೆ, ರಾಘವೇಂದ್ರ ಸ್ಟೋರ್ಸ್ ಸೇರಿದಂತೆ ಎಂಟು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದನ್ನೂ ಓದಿ : ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ

    ಸದ್ಯ ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರದಲ್ಲೂ ರಾಘು ಶಿವಮೊಗ್ಗ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ನಟನೆಯ ಜತೆ ಜತೆಗೆ ಪೆಂಟಗನ್ ಸಿನಿಮಾದ ಒಂದು ಕಥೆಗೆ ಇವರ ನಿರ್ದೇಶನವಿದೆ. ಇದನ್ನೂ ಓದಿ : ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್

    ಎ.ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೇದ ಚಿತ್ರಕ್ಕೆ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿ. ಶಿವರಾಜ್ ಕುಮಾರ್ ಹೀರೋ. ನೂರಾರು ಚಿತ್ರಗಳಲ್ಲಿ ನಟಿಸಿರುವ ಶಿವರಾಜ್ ಕುಮಾರ್ ಜತೆ ನಟಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆ ತಂದಿದೆ ಎಂದಿದ್ದಾರೆ ರಾಘು. ಇದನ್ನೂ ಓದಿ : ವಾರದೊಳಗೆ 100 ಕೋಟಿ ಕ್ಲಬ್ ಸೇರಲಿದೆ ಪುನೀತ್ ನಟನೆಯ ಜೇಮ್ಸ್: ಪಕ್ಕಾ ಲೆಕ್ಕಾಚಾರ

    ಸಿನಿಮಾಗಳ ನಟನೆಯ ಜತೆ ಜತೆಗೆ ತಮ್ಮ ನಿರ್ದೇಶನದ ತಯಾರಿ ಕೂಡ ನಡೆಸಿದ್ದಾರಂತೆ. ಒಟ್ಟು ಎರಡು ಕಥೆಗಳನ್ನು ಅವರು ರೆಡಿ ಮಾಡಿಕೊಂಡಿದ್ದು, ಕೈಯಲ್ಲಿರುವ ಸಿನಿಮಾಗಳ ಜತೆ ಜತೆಗೆ ನಿರ್ದೇಶನದ ಕೆಲಸಗಳನ್ನೂ ಮಾಡುತ್ತಾರಂತೆ.