Tag: Veda

  • ಹೈಸ್ಕೂಲ್ ದತ್ತು ಪಡೆದ ಗೀತಾ ಶಿವರಾಜ್ ಕುಮಾರ್

    ಹೈಸ್ಕೂಲ್ ದತ್ತು ಪಡೆದ ಗೀತಾ ಶಿವರಾಜ್ ಕುಮಾರ್

    ಪಾರ್ವತಮ್ಮ ರಾಜ್ ಕುಮಾರ್ ನಂತರ ಮೈಸೂರಿನ ಶಕ್ತಿಧಾಮ ನೋಡಿಕೊಳ್ಳುತ್ತಿರುವ ಗೀತಾ ಶಿವರಾಜ್ ಕುಮಾರ್ (Geetha Shivaraj Kumar) ಇದೀಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಾರಿ ಅವರು ಹೈಸ್ಕೂಲ್ (High School) ಶಾಲೆಯೊಂದನ್ನು ದತ್ತು ತಗೆದುಕೊಂಡಿದ್ದು, ಆ ಶಾಲೆಯ ಮಕ್ಕಳ ಕನಸಿಗೆ ರಂಗು ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ.

    ವೇದ (Veda) ಸಿನಿಮಾದ ಪ್ರಚಾರದ ವೇಳೆ ಸಂಡೂರು (Sandur) ತಾಲ್ಲೂಕಿನ ಇಂಗಳಗಿ ಸಮೀಪದ ಅನ್ನಪೂರ್ಣೇಶ್ವರಿ ವಿದ್ಯಾಪೀಠವು ನಡೆಸುತ್ತಿದ್ದ ಉಚಿತ ವಸತಿಯುತ ಪ್ರೌಢಶಾಲೆಯ ವಿಚಾರವನ್ನು ಶಿವಣ್ಣ ದಂಪತಿಗೆ ತಿಳಿಸಲಾಗಿತ್ತು. ಜೋಗದ ದಿಗಂಬರ ರಾಜಭಾರತಿ ಸ್ವಾಮೀಜಿ 2012ರಲ್ಲಿ ಶುರು ಮಾಡಿದ್ದ ಈ ಶಾಲೆಯು ಅನುದಾನವಿಲ್ಲದೇ ಸೊರಗಿತ್ತು. ಈ ವಿಚಾರವು ತಿಳಿಯುತ್ತಿದ್ದಂತೆಯೇ ಶಾಲೆ ದತ್ತು ಪಡೆಯುವುದಾಗಿ ಗೀತಾ ಶಿವರಾಜ್ ಕುಮಾರ್ ಘೋಷಿಸಿದ್ದರು. ಇದನ್ನೂ ಓದಿ:ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ‌’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್

    ತಾವು ಮಾತು ಕೊಟ್ಟಂತೆ ನಿನ್ನೆ ಶಾಲೆಗೆ ಭೇಟಿ ನೀಡಿರುವ ಗೀತಾ ಶಿವರಾಜ್ ಕುಮಾರ್, ಮೂಲ ಸೌಕರ್ಯ ಸೇರಿದಂತೆ ಅಗತ್ಯವಿರುವ  ಸೌಕರ್ಯವನ್ನು ನೀಡುವುದಾಗಿ ತಿಳಿಸಿದರು. ಕೂಡಲೇ ಟ್ರಸ್ಟ್ ರಚಿಸಿ, ಪದಾಧಿಕಾರಿಗಳ ನೇಮಕ ಮಾಡಿ ಶಾಲೆಯನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

  • ಒಟಿಟಿಯಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ವೇದ’ ಹೊಸ ರೆಕಾರ್ಡ್

    ಒಟಿಟಿಯಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ವೇದ’ ಹೊಸ ರೆಕಾರ್ಡ್

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (ShivrajKumar) ಅಭಿನಯದ 125ನೇ ಸಿನಿಮಾ ‘ವೇದ’ (Veda) ಚಿತ್ರಮಂದಿರದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದ್ದು ಗೊತ್ತೇ ಇದೆ. ಚಿತ್ರಮಂದಿರದಲ್ಲಿ ಸೂಪರ್ ಸಕ್ಸಸ್ ಕಂಡ ಸಿನಿಮಾ ಫೆಬ್ರವರಿ 10ರಂದು ZEE5ನಲ್ಲಿ ಬಿಡುಗಡೆಗೊಂಡು ಇಲ್ಲಿಯೂ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಕೆಲವೇ ದಿನದಲ್ಲಿ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಕಂಡು ರೆಕಾರ್ಡ್ (Record) ಕ್ರಿಯೇಟ್ ಮಾಡಿದೆ. ಇದೇ ಖುಷಿಯಲ್ಲಿ ZEE5 ಸಂತೋಷ್ ಚಿತ್ರಮಂದಿರದಲ್ಲಿ ಸಂಭ್ರಮ ಆಚರಿಸಿದೆ.

    ಸಂತೋಷ್ ಚಿತ್ರಮಂದಿರದಲ್ಲಿ ‘ವೇದ’ ಚಿತ್ರದ ಶಿವಣ್ಣ ಕಟೌಟ್ ನಿಲ್ಲಿಸಿ ZEE5 ಸಂಭ್ರಮ ಆಚರಣೆ ಮಾಡಿದೆ. ಈ ಸಂಭ್ರಮಾಚರಣೆಯಲ್ಲಿ ದೊಡ್ಮನೆ ಅಭಿಮಾನಿಗಳು ಭಾಗಿಯಾಗಿ ಸಂತಸ ಪಟ್ಟಿದ್ದಾರೆ. ಒಟಿಟಿಯಲ್ಲಿ ಅತಿ ಕಡಿಮೆ ಅವಧಿಯಲ್ಲಿ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಕಂಡಿದ್ದು ZEE5 ನಲ್ಲಿ ದಾಖಲೆ ಬರೆದಿದೆ. ಈ ಮೂಲಕ ಚಿತ್ರಮಂದಿರದ ಜೊತೆಗೆ ZEE5 ಒಟಿಟಿಯಲ್ಲೂ ಸಿನಿಮಾ ಹೊಸ ದಾಖಲೆ ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

    ‘ವೇದ’ ಸಿನಿಮಾ ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಡಿಸೆಂಬರ್ 23ರಂದು ಬಿಡುಗಡೆಗೊಂಡಿತ್ತು. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾವಾಗಿರುವ ಈ ಚಿತ್ರ ಶಿವಣ್ಣ ಅಭಿನಯದ 125ನೇ ಸಿನಿಮಾ ಅನ್ನೋದು ಚಿತ್ರದ ವಿಶೇಷ.

    ಚಿತ್ರದಲ್ಲಿ ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೋಡಿ ಮಾಡಿದ್ದು, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

  • ಒಟಿಟಿಯಲ್ಲೂ ಕಮಾಲ್ ಮಾಡಿದ ‘ವೇದ’ ಸಿನಿಮಾ

    ಒಟಿಟಿಯಲ್ಲೂ ಕಮಾಲ್ ಮಾಡಿದ ‘ವೇದ’ ಸಿನಿಮಾ

    ಶಿವರಾಜ್ ಕುಮಾರ್ (Shivraj Kumar) ಅಭಿನಯದ ಸೂಪರ್ ಹಿಟ್ ಸಿನಿಮಾ ‘ವೇದ’ (Veda) ಫೆಬ್ರವರಿ 10ರಂದು ZEE5 ಒಟಿಟಿಗೆ ಎಂಟ್ರಿ ಕೊಟ್ಟಿತ್ತು. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್ ನ ವಿಶೇಷ ಸಿನಿಮಾಗಳಲ್ಲೊಂದಾದ ಈ ಚಿತ್ರ ಪ್ರೇಕ್ಷಕರ ಮನಗೆದ್ದು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. ಶಿವಣ್ಣ ಸಿನಿ ಕೆರಿಯರ್ ನ 125ನೇ ಸಿನಿಮಾ ಹಾಗೂ ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಚಿತ್ರವಾಗಿರುವ ‘ವೇದ’ ಒಟಿಟಿಯಲ್ಲೂ ದಾಖಲೆ ಬರೆದಿದೆ.

    ‘ವೇದ’ ಸಿನಿಮಾ ನಿರ್ದೇಶಕ ಎ.ಹರ್ಷ (A. Harsha) ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಡಿಸೆಂಬರ್ 23ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದ ಈ ಚಿತ್ರ ಅಭೂತಪೂರ್ವ ರೆಸ್ಪಾನ್ಸ್ ಪಡೆದುಕೊಂಡಿತ್ತು. ದೊಡ್ಮನೆ ಅಭಿಮಾನಿ ಬಳಗ ಹಾಗೂ ಸಿನಿ ಪ್ರೇಕ್ಷಕರ ಮನಗೆದ್ದ ಚಿತ್ರ ಸೂಪರ್ ಸಕ್ಸಸ್ ಕಂಡಿತ್ತು. ಫೆಬ್ರವರಿ 10ರಂದು ಜನಪ್ರಿಯ ಒಟಿಟಿ ಪ್ಲಾಟ್ ಫಾರ್ಮ್ ZEE5ನಲ್ಲಿ ವೇದ ಸಿನಿಮಾ ಬಿಡುಗಡೆಗೊಂಡಿತ್ತು. ಬಿಡುಗಡೆಯಾದ ಒಂದು ವಾರದೊಳಗೆ ಸಿನಿಮಾ 100 ಮಿಲಿಯನ್ ಗೂ ಅಧಿಕ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ `ಜೋಶ್’ ನಟಿ ಪೂರ್ಣ

    ಗಾನವಿ ಲಕ್ಷ್ಮಣ್ (Ganavi Lakshmana), ಶ್ವೇತ ಚೆಂಗಪ್ಪ (Shweta Chengappa), ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೋಡಿ ಮಾಡಿದ್ದು, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

    ZEE5 ಅತ್ಯಂತ ವಿಶ್ವಾಸಾರ್ಹ ಒಟಿಟಿ ಪ್ಲಾಟ್ ಫಾರ್ಮ್ ಆಗಿದ್ದು, ಪ್ರೇಕ್ಷಕರ ಅಭಿರುಚಿಗೆ ತಕ್ಕಂತ ಸಿನಿಮಾಗಳನ್ನು ನೀಡುತ್ತಾ ಬರುತ್ತಿದೆ. ‘ವಿಕ್ರಾಂತ್ ರೋಣ’, ‘ಗಾಳಿಪಟ-2’, ‘ಗುರು ಶಿಷ್ಯರು’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳು ZEE 5ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ವೀಕ್ಷಣೆ ಕಂಡು ಹೊಸ ದಾಖಲೆ ಕೂಡ ಬರೆದಿದೆ. ಇದೀಗ ‘ವೇದ’ ಸಿನಿಮಾ ಕೂಡ ZEE5ನಲ್ಲಿ ಹೊಸ ದಾಖಲೆ ಬರೆದು ಎಲ್ಲರ ಗಮನ ಸೆಳೆದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾ ಫೆ.10ಕ್ಕೆ ಒಟಿಟಿಗೆ

    ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾ ಫೆ.10ಕ್ಕೆ ಒಟಿಟಿಗೆ

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್ ಆಗಿದೆ. ಶಿವಣ್ಣ ಕೆರಿಯರ್ ನ ವಿಶೇಷ ಸಿನಿಮಾಗಳಲ್ಲೊಂದಾಗಿದೆ ಈ ಚಿತ್ರ. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್ ನ 125ನೇ ಸಿನಿಮಾ ಒಂದು ಕಡೆಯಾದ್ರೆ ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಸಿನಿಮಾ. ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಹೀಗೆ ಸಾಕಷ್ಟು ವಿಶೇಷತೆಯೊಂದಿಗೆ ತೆರೆಕಂಡ ಈ ಚಿತ್ರ ದೊಡ್ಮನೆ ಅಭಿಮಾನಿಗಳ ಮನಗೆದ್ದಿತ್ತು.

    ದೊಡ್ಮನೆ ಅಭಿಮಾನಿಗಳಲ್ಲಿ, ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ವೇದ’ ಚಿತ್ರ ಕಳೆದ ವರ್ಷ ಡಿಸೆಂಬರ್ 23ರಂದು ತೆರೆಕಂಡಿತ್ತು. ಎ. ಹರ್ಷ ಹಾಗೂ ಶಿವಣ್ಣ ಹಿಟ್ ಕಾಂಬಿನೇಶನ್ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಚಿತ್ರಮಂದಿರದಲ್ಲಿ ದೊಡ್ಮನೆ ಅಭಿಮಾನಿ ಬಳಗ ಹಾಗೂ ಪ್ರೇಕ್ಷಕ ಪ್ರಭುಗಳ ಮನಗೆದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಸೂಪರ್ ಸಕ್ಸಸ್ ಕಂಡಿದ್ದು ಹಿಟ್ ಲಿಸ್ಟ್ ಸೇರಿದೆ. ಇದೀಗ ಒಟಿಟಿ ಪ್ರೇಕ್ಷಕರ ಮನಗೆಲ್ಲಲು ‘ವೇದ’ ಚಿತ್ರ ರೆಡಿಯಾಗಿದ್ದು ಫೆಬ್ರವರಿ 10ಕ್ಕೆ ಜೀ5ನಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: `ಆರ್‌ಆರ್‌ಆರ್’ ಸಕ್ಸಸ್ ನಂತರ ಮುಂದಿನ ಚಿತ್ರದ ಬಗ್ಗೆ ಜ್ಯೂ.ಎನ್‌ಟಿಆರ್ ಪ್ರತಿಕ್ರಿಯೆ

    ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ‌ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಅಮ್ಮನ ನೆನೆದು ಕಣ್ಣೀರಿಟ್ಟ ಶಿವರಾಜ್ ಕುಮಾರ್

    ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಅಮ್ಮನ ನೆನೆದು ಕಣ್ಣೀರಿಟ್ಟ ಶಿವರಾಜ್ ಕುಮಾರ್

    ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ರಿಲೀಸ್ ಆಗಿ  ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲದೇ, ಇದು ಅವರ 125ನೇ ಸಿನಿಮಾವಾಗಿದ್ದರಿಂದ ಚಿತ್ರದ ವಿಶೇಷತೆ ಕುರಿತು ಮಾತನಾಡಲು ಪಬ್ಲಿಕ್ ಟಿವಿ ಆಫೀಸಿಗೆ ಬಂದಿದ್ದರು ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್. ಪಬ್ಲಿಕ್ ಟಿವಿ ಮಖ್ಯಸ್ಥ ಹೆಚ್.ಆರ್. ರಂಗನಾಥ್ ಜೊತೆಗಿನ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಅವರು ಹಂಚಿಕೊಂಡಿದ್ದು, ತಾಯಿಯ ನೆನಪಿಸಿಕೊಂಡು ಕಣ್ಣೀರಿಟ್ಟರು.

    ನಿಮ್ಮ ಮೇಲೆ ನಿಮ್ಮ ತಾಯಿ ಎಷ್ಟು ಪ್ರಭಾವ ಬೀರಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಅಕ್ಷರಶಃ ಶಿವರಾಜ್ ಕುಮಾರ್ ಮಗುವಿನಂತೆ ಅತ್ತೆ ಬಿಟ್ಟರು. ಸಣ್ಣ ಸಣ್ಣ ಸಂಗತಿಗಳಿಗೂ ನನಗೆ ಅಮ್ಮ ನೆನಪಾಗುತ್ತಾರೆ. ಪುಟ್ಟ ನೋವಾದರೂ, ಅಲ್ಲಿ ಅಮ್ಮ ಇರಬೇಕಿತ್ತು ಅಂತ ಅನಿಸುತ್ತದೆ. ಎಂದಿಗೂ ಅವರನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎಂದು ತಾಯಿ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡರು ಶಿವರಾಜ್ ಕುಮಾರ್. ಇದನ್ನೂ ಓದಿ:BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್

    ಶಿವರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಅವರ ತಾಯಿಯ ಪಾತ್ರ ದೊಡ್ಡದು. ಶಿವರಾಜ್ ಕುಮಾರ್ ಸಿನಿಮಾ ರಂಗಕ್ಕೆ ಬರುವುದರಿಂದ ಹಿಡಿದು, ಅವರ ಸಿನಿಮಾಗಳ ಕಥೆಯನ್ನು ಕೇಳುವುದು, ನಿರ್ಮಾಣ ಮಾಡುವುದು, ವಿತರಿಸುವುದು ಹೀಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ ಪಾರ್ವತಮ್ಮ ರಾಜಕುಮಾರ್. ಜೊತೆಗೆ ತಾಯಿ ಪ್ರೀತಿಯನ್ನು ಹಿಡಿಹಿಡಿಯಾಗಿ ನೀಡಿದ್ದಾರೆ. ಈ ಎಲ್ಲವನ್ನೂ ನೆನಪಿಸಿಕೊಂಡು ಶಿವರಾಜ್ ಕುಮಾರ್ ಭಾವುಕರಾದರು.

    Live Tv
    [brid partner=56869869 player=32851 video=960834 autoplay=true]

  • ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

    ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

    ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’, ಅಪ್ಪು ನಟನೆಯ ಕೊನೆಯ ಸಿನಿಮಾವಾಗಲಾರದು. ಅವರನ್ನು ಮತ್ತೆ ಮತ್ತೆ ಸಿನಿಮಾದಲ್ಲಿ ತೋರಿಸುವ ತವಕ ಸ್ಯಾಂಡಲ್ ವುಡ್ ನಿರ್ದೇಶಕರದ್ದು. ಆದರೆ, ಆಯಾ ಸಿನಿಮಾದಲ್ಲಿ ಅಪ್ಪು ಹೇಗಿರುತ್ತಾರೆ ಎನ್ನುವುದೇ ಕುತೂಹಲ. ಇದನ್ನೂ ಓದಿ : ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?

    ಅನುಮಾನವೇ ಇಲ್ಲ, ಪುನೀತ್ ರಾಜ್ ಕುಮಾರ್ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ನಟಿಸಿರುವ ಕೊನೆಯ ಸಿನಿಮಾ ಜೇಮ್ಸ್. ಆದರೆ, ಅವರು ಮತ್ತೊಂದು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜತೆ ನಟಿಸಲಿದ್ದಾರೆ. ಅದು ಗ್ರಾಫಿಕ್ಸ್ ರೂಪದಲ್ಲ ಅಥವಾ ಮತ್ತ್ಯಾವ ರೂಪದಲ್ಲಿ ಇರುತ್ತಾರೆ ಎನ್ನುವುದೇ ಕುತೂಹಲಕಾರಿ ಸಂಗತಿ. ಇದನ್ನೂ ಓದಿ : ಸಂಭಾವನೆ ಹೆಚ್ಚಿಸ್ಕೊಂಡ್ರಂತೆ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಬೆಡಗಿ

    ಸದ್ಯ ಶಿವರಾಜ್ ಕುಮಾರ್ ತಮ್ಮದೇ ಬ್ಯಾನರ್ ನ ‘ವೇದ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಪ್ಪು ಇರಲಿದ್ದಾರೆ ಎಂದು ಸ್ವತಃ ಶಿವಣ್ಣನೇ ಹೇಳಿಕೊಂಡಿದ್ದಾರೆ. ಅದು ಹೇಗೆ ಎನ್ನುವುದನ್ನು ತೆರೆಯ ಮೇಲೆ ನೋಡಿ ಎಂದಿದ್ದಾರೆ. ಇದನ್ನೂ ಓದಿ : ಭಾರತ ಗುಪ್ತಚರ ಇಲಾಖೆ ಸೇರಿಕೊಂಡ ಸನ್ನಿ ಲಿಯೋನ್

    ಪುನೀತ್ ಮತ್ತು ಶಿವರಾಜ್ ಕುಮಾರ್ ಒಟ್ಟಾಗಿ ನಟಿಸಬೇಕು ಎನ್ನುವುದು ಸ್ವತಃ ಪುನೀತ್ ಆಸೆಯಾಗಿತ್ತು. ಅದರಲ್ಲೂ ಶಿವಣ್ಣನಿಗೆ ನಿರ್ದೇಶನ ಮಾಡಬೇಕು ಎಂದು ಪುನೀತ್ ಕನಸು ಕಂಡಿದ್ದರು. ಅಪ್ಪು ಅವರ ಒಂದು ಆಸೆ ಮಾತ್ರ ಈಡೇರಿದೆ. ಮತ್ತೊಂದು ಆಸೆ ಕನಸಾಗಿಯೇ ಉಳಿದಿದೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಸಿಂಡ್ರೆಲಾ ಹೊಸ ನ್ಯೂಸ್ ಕೊಡ್ತಾರಾ?

    ಜೇಮ್ಸ್ ಸಿನಿಮಾದಲ್ಲೂ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದಾರೆ. ನಂತರ ಶಿವಣ್ಣನ ಜತೆ ಅಪ್ಪು ವೇದದಲ್ಲೂ ಇರಲಿದ್ದಾರೆ ಎನ್ನುವುದೇ ಅಭಿಮಾನಿಗಳ ಪಾಲಿಗೆ ದೊಡ್ಡ ಸುದ್ದಿ.